ಸಂಶೋಧನೆಯ ಮೇರು ಪರ್ವತ ಎಸ್ ಎಸ್ ಹಿರೇಮಠರ ನೆನಪಿನಲ್ಲಿ

ಎಸ್.ಎಸ್.ಹಿರೇಮಠ ಅವರ ಸಮಗ್ರ ಸಾಹಿತ್ಯ ಸಂಪುಟಗಳನ್ನು ಕನ್ನಡ ಪುಸ್ತಕ ಪ್ರಾಧಿಕಾರವು ಹಿರೇಮಠರ ” ಕರ್ಮ ಭೂಮಿ” ಹೊಸಪೇಟೆಯಲ್ಲಿ  ಇಂದು ( 1-06-2024) ಬಿಡುಗಡೆ ಮಾಡುತ್ತಿದೆ. ಇನ್ನು ಮೇಲಾದರೂ, ಈಗ ಬಂದ ಸಂಪುಟಗಳನ್ನು ಓದಿಯಾದರೂ ಹಿರೇಮಠರ ಚಿಂತನೆಗಳನ್ನು ವಿಮರ್ಶೆಗೆ ಎತ್ತಿಕೊಳ್ಳುವ ” ನ್ಯಾಯ” ತೋರುವುದೆಂದು‌ ಆಶಿಸಿದ್ದೇನೆ. ವಿಮರ್ಶೆ ತಡವಾದರೂ ಆಗಲಿ, ಮೊದಲು ಖರೀದಿಸಿ ಓದಲಿ, ಅಷ್ಟು ಸಾಕು ಹಿರೇಮಠರಿಗೆ ಗೌರವ ಸಲ್ಲಿಸಿದಂತಾದೀತು – ಬಿ ಪೀರ್ ಬಾಶಾ

ನೋಡ್ರೀ… ಜಾತಿ ನಾಶವಾಗಬೇಕು ನಿಜ. ಆದ್ರೆ ಜಾತಿ ನಾಶವಾಗಬೇಕು ಅಂದ್ರೆ ಮೊದಲು ಧರ್ಮ ನಾಶವಾಗಬೇಕು”

ಇಂತಹ ಖಚಿತ ದೃಷ್ಟಿಕೋನವನ್ನು ಅಷ್ಟೇ ಖಚಿತ ನಿಷ್ಠುರ ಹೇಳಿಕೆಗಳ ಮೂಲಕ ಮಂಡಿಸಬಲ್ಲ ಕನ್ನಡದ ಅಪರೂಪದ ಮಹತ್ವದ ಸಂಶೋಧಕ ಎಸ್.ಎಸ್.ಹಿರೇಮಠ ಅವರು.

ಹೀಗೆ ಹೇಳುವಾಗ ಅವರಿಗೆ ಬುದ್ಧ ಧರ್ಮ ಉಳಿದೆಲ್ಲ ಧರ್ಮಗಳಿಗಿಂತ ಭಿನ್ನವಾದ ” ಧಮ್ಮ” ಎಂಬ ಸ್ಪಷ್ಟತೆ ಇತ್ತು. ಅವರ ಈ ಮೇಲಿನ ಮಾತು ಹಿಂದೂ, ಇಸ್ಲಾಂ, ಕ್ರಿಶ್ಚಿಯನ್, ಯೆಹೂದಿ ಇತ್ಯಾದಿ ಸಾಂಸ್ಥಿಕ ಧರ್ಮಗಳನ್ನು ಕುರಿತಾಗಿತ್ತು.

ಮೂಲತಃ ಕಮ್ಯೂನಿಸ್ಟರಾದ ಹಿರೇಮಠರು ಅಂತಿಮವಾಗಿ ಭಾರತೀಯ ಸಮಾಜದಲ್ಲಿ “ಜಾತಿಯನ್ನು ನಾಶಮಾಡದೇ ವರ್ಗವನ್ನು ನಾಶ ಮಾಡಲು ಸಾಧ್ಯವಿಲ್ಲ. ಭಾರತದಲ್ಲಿ ಬಹುತೇಕ ಕೆಳಜಾತಿಗಳೇ ಕೆಳವರ್ಗಗಳಾಗಿವೆ, ಮೇಲ್ಜಾತಿಗಳೇ ಮೇಲ್ವರ್ಗಗಳಾಗಿವೆ. ಈ ರಚನೆಯ ಸಂಕೀರ್ಣತೆಯನ್ನು ಕಮ್ಯೂನಿಸ್ಟರು ಅರ್ಥ ಮಾಡಿಕೊಳ್ಳದೇ ಹೋದರೆ ಭಾರತದಲ್ಲಿ ಕ್ರಾಂತಿ‌ ಸಾಧ್ಯವಿಲ್ಲ. ಜಾತಿ ಮತ್ತು ವರ್ಗ ಇವೆರಡರ ಒಳ ಹೆಣಿಗೆಯನ್ನು ಅರ್ಥಮಾಡಿಕೊಂಡು ಇವನ್ನು ಜೊತೆಯಾಗಿಯೇ ನಾಶ ಮಾಡಬೇಕೇ ಹೊರತು ವರ್ಗ ಮೊದಲು‌ ಜಾತಿ ಆಮೇಲೆ ಅಂದ್ರೆ ಆಗಲ್ಲ” ಎಂದು ಸ್ಪಷ್ಟವಾಗಿ ಹೇಳಬಲ್ಲವರಾಗಿದ್ದರು.

ಎಸ್‌ ಎಸ್‌ ಹಿರೇಮಠ

ಸಾಂಪ್ರದಾಯಿಕ ಜಂಗಮ ಕುಟುಂಬದಲ್ಲಿ ಹುಟ್ಟಿ ಬೆಳೆದು ಲಿಂಗ ಪೂಜೆಯನ್ನು ಆಚರಿಸಿ ಅರಿತು ನಿರಾಕರಿಸಿದ್ದ ಹಿರೇಮಠರು ಹರೆಯದ ಹೊತ್ತಿಗೆ ಉದಾರ ಮಾನವತಾವಾದಿಯಾಗಿದ್ದರು. ಬಳಿಕ ಗಾಂಧಿವಾದದಿಂದ ಪ್ರಭಾವಿತರಾಗಿ ಮನೆಗೆ ಚರಕ ತಂದುಕೊಂಡು ಸ್ವತಃ ನೂಲು ತಯಾರಿಸುತ್ತಿದ್ದರು. ಖಾದಿ ಬಟ್ಟೆ ತೊಡಲಾರಂಭಿಸಿದ ಹರೆಯದ ಯುವಕ ಖಾದಿ ಕೇಂದ್ರಗಳಲ್ಲಿ ಕೆಲಸಗಾರರ ಶೋಷಣೆಯಾಗುತ್ತಿದೆ, ಅಲ್ಲಿ ಉಳ್ಳವರು ಅಧಿಕಾರಕ್ಕಾಗಿ ಖಾದಿ ಪ್ರದರ್ಶಿಸುತ್ತಿದ್ದಾರೆ ಎಂದು ತಿಳಿಯುತ್ತಿದ್ದಂತೆಯೇ ” ಸಂಪೂರ್ಣ ಕ್ರಾಂತಿ”ಯ ಸೆಳೆತದಿಂದ ಜಯಪ್ರಕಾಶ್ ನಾರಾಯಣ ಅವರನ್ನು ಓದ ತೊಡಗಿದ್ದರು. ಜೆ.ಪಿ.ಸಮಾಜವಾದದಿಂದ ನಿಜವಾದ ಕ್ರಾಂತಿ ಸಾಧ್ಯವಿಲ್ಲ ಎಂದು ಮನವರಿಕೆಯಾಗಿ ಮಾರ್ಕ್ಸ್ ವಾದವನ್ನು ಓದಿ ಅರಿತು ವರ್ಗರಹಿತ ಸಮ ಸಮಾಜದ ನೈಜ ಕ್ರಾಂತಿಯ ಬದ್ಧತೆಯಿಂದ ವೃತ್ತಿಯ ಜೊತೆಗೆ ವರ್ಗ ಸಂಘಟನೆಯ ಜವಾಬ್ದಾರಿ ಹೊತ್ತು ದುಡಿಯಲಾರಂಭಿಸಿದ್ದರು. ಕಾಲೇಜು ಉಪನ್ಯಾಸಕರಾಗಿದ್ದ ಹಿರೇಮಠರು ಒಂದು ಹಂತದಲ್ಲಿ ನೌಕರಿಗೆ ರಾಜೀನಾಮೆ ನೀಡಿ ಸಂಡೂರಿನ ಗಣಿಗಳಲ್ಲಿ ಕಾರ್ಮಿಕನಾಗಿ ದುಡಿಯುವ “ಕಮ್ಯೂನಿಸ್ಟ್ ಬದ್ಧತೆ” ಅತಿ ತಲುಪಿದ್ದರು. ಸಧ್ಯ ಹಾಗಾಗಲಿಲ್ಲ. ಆದರೆ ಅದೆಷ್ಟು ತೀವ್ರವಾಗಿ ಚಳುವಳಿ ಸಂಘಟನೆಯಲ್ಲಿ ತೊಡಗಿಸಿಕೊಂಡರೆಂದರೆ ಇವರ ಮನೆ ಕಮ್ಯೂನಿಸ್ಟ್ ಕೇಂದ್ರವಾಗಿತ್ತು. ಪೊಲೀಸ್ ಕಣ್ಗಾವಲಿನಲ್ಲಿತ್ತು. ಇವರ ವಿದ್ಯಾರ್ಥಿ ಸಂಘಟಕರನ್ನು ಪೊಲೀಸರು ಸ್ಟೇಷನ್ನಿನಲ್ಲಿ ಕೂಡಿಹಾಕಿ ಥಳಿಸಿದರು, ಚಿತ್ರಹಿಂಸೆ ನೀಡಿದರು. ಹಿರೇಮಠರು ಸ್ವಯಂ ಥಳಿಸಿಕೊಂಡು ಪೊಲೀಸ್ ಹಿಂಸೆಗೆ ದೇಹವನ್ನು ಸಜ್ಜುಗೊಳಿಸಿಕೊಂಡಿದ್ದರು.

ಇಂತಹ ಒಬ್ಬ ಅಧ್ಯಾಪಕ ತಮ್ಮ ಶಿಕ್ಷಣ ಸಂಸ್ಥೆಗೆ ತಲೆ ನೋವಾಗಿದ್ದಕ್ಕೆ ವೀರಶೈವ ವಿದ್ಯಾವರ್ಧಕ ಸಂಘವು ಇವರನ್ನು ʼಕಾಲಾಪಾನಿʼ ಶಿಕ್ಷೆಗೆ ದೂಡುವಂತೆ ಹೊಸಪೇಟೆಯಿಂದ ಹೂವಿನಹಡಗಲಿಗೆ ವರ್ಗಾಯಿಸಿತು. ಅಲ್ಲಿಯೂ ಇದೇ ಕತೆ. ಇಲ್ಲಿ ಬಂದವರೇ ಅಸ್ಪೃಶ್ಯತೆ ವಿರೋಧಿಸಿ ತಾವೇ ಮುಂದೆ ನಿಂತು ದಲಿತರ ಪ್ರತಭಟನಾ ಮೆರವಣಿಗೆ ಸಂಘಟಿಸಿದರು. ಅಲ್ಲಿಯೂ ಜಾತಿ ಜನಗಳ ಆಕ್ರೋಶಕ್ಕೆ ಈಡಾಗಿ ಪೊಲೀಸ್ ಸ್ಟೇಷನ್ನಿನಲ್ಲಿಯೇ ಹಲ್ಲೆ ಗೀಡಾದರು. ಬಳಿಕ ಸಂಜೆಹೊತ್ತು ಕಾಲೇಜು ಮೈದಾನದಲ್ಲಿಯೂ ಹಲ್ಲೆಯಾಯಿತು. ಅಲ್ಲಿಂದಲೂ ವರ್ಗಾವಣೆಗೊಂಡು ಹರಪನಹಳ್ಳಿಗೆ ಬಂದರು.

ಹೊಸ ಊರಿಗೆ ಬರುತ್ತಲೇ ಮತ್ತೆ ಸಂಘಟನೆ. ಮತ್ತದೇ ಎಸ್.ಎಫ್.ಐ., ಸಮುದಾಯ, ಕರ್ನಾಟಕ ಪ್ರಾಂತ ರೈತ ಸಂಘ, ಕೃಷಿ ಕೂಲಿಕಾರರ ಸಂಘಟನೆ, ಜನವಾದಿ ಮಹಿಳಾ ಸಂಘಟನೆ…. ಎಲ್ಲದರ ಕೇಂದ್ರ ಬಿಂದು ಕಾಲೇಜು ಲೆಕ್ಚರರ್ ಎಸ್.ಎಸ್.ಹಿರೇಮಠ್.

ಕನ್ನಡ ವಿಶ್ವವಿದ್ಯಾಲಯ ಸ್ಥಾಪನೆಯೊಂದಿಗೆ ಹಿರೇಮಠರ ಬದುಕು ತಿರುವು ಪಡೆದುಕೊಂಡಿತು. ಅಷ್ಟು ಹೊತ್ತಿಗಾಗಲೇ ” ಕರ್ನಾಟಕ ದಲಿತ‌ ಸಂಸ್ಕೃತಿ ಪರಂಪರೆ”ಯ ಭಾಗವಾಗಿ “ಹಬ್ಬಗಳು” ಸಂಶೋಧನಾ ಕೃತಿಯನ್ನು ರಚಿಸಿದ್ದರು. ಕನ್ನಡ ವಿಶ್ವವಿದ್ಯಾಲಯಕ್ಕೆ  ಡೆಪ್ಯುಟೇಶನ್ ಮೇಲೆ ಬಂದವರೇ ಗ್ರಾಮ ದೇವತೆಗಳ ಅಧ್ಯಯನ ಯೋಜನೆಯಲ್ಲಿ ತೊಡಗಿಸಿಕೊಂಡರು. ಬಳಿಕ ” ಜಾತ್ರೆಗಳು ” ಕೃತಿ ಪ್ರಕಟವಾಯಿತು. ವಿಶ್ವವಿದ್ಯಾಲಯದಲ್ಲಿಯೂ ಬಂದವರೇ ಬರೀ ಓದು ಬರೆಹದಲ್ಲಿ ಕೂಡಲಿಲ್ಲ. ಕುಲಪತಿ ಚಂದ್ರಶೇಖರ ಕಂಬಾರರ ಭ್ರಷ್ಟಾಚಾರ ಸ್ವಜನ ಪಕ್ಷಪಾತಗಳನ್ನು ವಿರೋಧಿಸಿ ಹೋರಾಟ ರೂಪಿಸಿದರು. ಕಂಬಾರರು ಸುಮ್ಮನಿದ್ದಾರೆಯೇ! ಹಿರೇಮಠರನ್ನು ಹೊರ ದೂಡಿದರು.

ಮರಳಿ ಕಾಲೇಜಿಗೆ ಬಂದವರು‌ ಸಂಶೋಧನೆ ತೀವ್ರಗೊಳಿಸಿದರು. ಮಾರ್ಕ್ಸ್ ವಾದಿ – ದಲಿತ ಚಿಂತಕರಾಗಿ ಬದಲಾಗಿದ್ದರು. ಈ ದೇಶದಲ್ಲಿ ಸಂಸ್ಕೃತಿ ಕಟ್ಟಿದವರೇ ಹೊಲೆಯರು – ಮಾದಿಗರು. ನೆಲವನ್ನು ಹೊಲ ಮಾಡಿದವರೇ ಹೊಲೆಯರು. ಮಾದಿಗರು ತಾಯಿಯ ಮಕ್ಕಳು. ಕೃಷಿಯನ್ನು ಕಂಡು ಹಿಡಿದದ್ದೇ ತಾಯಿ. ತಾಯಿ ಸಂಸ್ಕೃತಿಯೇ ಮೂಲ ಸಂಸ್ಕೃತಿ…..ಇತ್ಯಾದಿ. ಈ ಬಗೆಯ ಸಂಶೋಧನೆಯ ಫಲಿತವೇ ಇವರ ಚಾರ್ವಾಕ, ಲೋಕಾಯತ, ಕಾಳಾಮುಖ, ಪಾಶುಪತ, ಶಾಕ್ತ ” ದರ್ಶನಗಳು”.

ಹಿರೇಮಠರಷ್ಟು ಆಳವಾಗಿ ದೇವಿಪ್ರಸಾದ್ ಚಟ್ಟೋಪಾಧ್ಯಾಯ, ಡಿ.ಡಿ.ಕೋಸಾಂಬಿ ಮೊದಲಾದವರ ಚಿಂತನೆಗಳನ್ನು ಕನ್ನಡದ ಅಧ್ಯಯನ ಕ್ರಮದಲ್ಲಿ ಅನ್ವಯಿಸಿ, ಅನುಸರಿಸಿದವರು ಮತ್ತೊಬ್ಬರು ಯಾರೋ? ಆ ಮಾತು ಬೇರೆ. ಆದರೆ, ಕನ್ನಡ ಸಂಸ್ಕೃತಿ ಚಿಂತನೆಯನ್ನು ಮಾರ್ಕ್ಸ್ ವಾದೀ ನೆಲೆಯಲ್ಲಿ ಆಳವಾಗಿ ಅರಿತು ಶೋಧನೆಯನ್ನು ಮಾಡಿದವರು ಎಸ್.ಎಸ್.ಹಿರೇಮಠರು. ಕಪಟರಾಳ ಕೃಷ್ರಾಯರು, ಶಂ.ಬಾ.ಜೋಶಿ, ಎಂ.ಎಂ.ಕಲ್ಬುರ್ಗಿ…. ಪರಂಪರೆಯನ್ನು ಹಾದು ಕನ್ನಡ ಸಂಶೋಧನಾ ಕ್ಷೇತ್ರವನ್ನು ನಿಜವಾದ ಅರ್ಥದಲ್ಲಿ ವಿಸ್ತರಿಸಿದ ಬಹು ದೊಡ್ಡ ಸಂಶೋಧಕ ಎಸ್.ಎಸ್.ಹಿರೇಮಠ.

ಇವರ ಸಮಗ್ರ ಸಾಹಿತ್ಯ ಸಂಪುಟಗಳನ್ನು ಕನ್ನಡ ಪುಸ್ತಕ ಪ್ರಾಧಿಕಾರವು ಹಿರೇಮಠರ ” ಕರ್ಮ ಭೂಮಿ” ಹೊಸಪೇಟೆಯಲ್ಲಿ ಬಿಡುಗಡೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಇಷ್ಟನ್ನು ಬರೆಯಬೇಕಾಯಿತು. ಇನ್ನು ಮೇಲಾದರೂ, ಈಗ ಬಂದ ಸಂಪುಟಗಳನ್ನು ಓದಿಯಾದರೂ ಹಿರೇಮಠರ ಚಿಂತನೆಗಳನ್ನು ವಿಮರ್ಶೆಗೆ ಎತ್ತಿಕೊಳ್ಳುವ ” ನ್ಯಾಯ” ತೋರುವುದೆಂದು‌ ಆಶಿಸಿದ್ದೇನೆ. ವಿಮರ್ಶೆ ತಡವಾದರೂ ಆಗಲಿ, ಮೊದಲು ಖರೀದಿಸಿ ಓದಲಿ, ಅಷ್ಟು ಸಾಕು ಹಿರೇಮಠರಿಗೆ ಗೌರವ ಸಲ್ಲಿಸಿದಂತಾದೀತು.

ಬಿ ಪೀರ್ ಭಾಷಾ

ಲೇಖಕ, ಕವಿ ಮತ್ತು ಪ್ರಗತಿಪರ ಚಿಂತಕರು.

ಇದನ್ನೂ ಓದಿ- “ಸಿದ್ಧಾ”ರ್ಥನ ವಿದಾಯ

More articles

Latest article

Most read