“ಸಿದ್ಧಾ”ರ್ಥನ ವಿದಾಯ

ನಿಷ್ಕಳಂಕ ಜನನಾಯಕ ಸಿದ್ದರಾಮಯ್ಯನವರು  ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಪತ್ರ ಕೊಟ್ಟು ಹೊರಟಿದ್ದನ್ನು ನೋಡಿದಾಗ ಅವರು ಸಂತನೇ ಆಗಿರಬೇಕು ಅನಿಸಿತು. ಕಪಿಲವಸ್ತುವಿನ ವೈಭವದ ಅರಮನೆ, ಅಂತಸ್ತು ತೊರೆದು ನಿರ್ಲಿಪ್ತವಾಗಿ, ಸ್ಥಿತಪ್ರಜ್ಞೆ ಹೊತ್ತು, ಹೊರಟ ಶಾಕ್ಯಕುಲದ, ‘ಸಿದ್ಧಾ’ರ್ಥ ಗೌತಮ ಕಣ್ಣಮುಂದೆ ಹಾದುಹೋದಂತಾಯಿತು-  ಎನ್.ರವಿಕುಮಾರ್‌, ಹಿರಿಯ ಪತ್ರಕರ್ತರು.

ಕರ್ನಾಟಕದ ರಾಜಕಾರಣ ಕೊನೆಗೂ ಘನತೆಯ ರಾಜಕಾರಣದ ಮಾದರಿಯೊಂದನ್ನು ಕಂಡುಕೊಂಡ ಸಂದರ್ಭದಿಂದ ಬೀಗುವಂತಾಗಿದೆ. ಇದು ಕನ್ನಡಿಗ ಹೆಮ್ಮೆ ಎಂದುಕೊಳ್ಳದೇ ಮತ್ತಿನ್ನೇನು ?!

ಅಧಿಕಾರ ಪಡೆಯಲು, ಅಧಿಕಾರ ಉಳಿಸಿಕೊಳ್ಳಲು  ರೆಸಾರ್ಟ್ ರಾಜಕಾರಣ, ಕುದುರೆ ವ್ಯಾಪಾರ, ನಿರ್ಲಜ್ಯ ಗುಂಪುಗಾರಿಕೆ, ಪರಸ್ಪರ ವ್ಯಕ್ತಿತ್ವಗಳನ್ನೆ ಹನನ ಮಾಡುವ ವಿಕೃತ ಧೋರಣೆ ಇವುಗಳನ್ನೆ ರಾಜಕಾರಣದ ಮಾನದಂಡ, ಮೌಲ್ಯಗಳು ಎಂದುಕೊಂಡು ಬರಲಾಗಿತ್ತು. ಆದರೆ ಇಂತಹ ಯಾವ ರೋಗಗಳನ್ನು ಮೈಗೂಡಿಸಿಕೊಳ್ಳದೆ ಪರಸ್ಪರ ಸ್ನೇಹಪರತೆ, ಸೌಹಾರ್ದತೆ, ಸಂವಾದದಿಂದ ಅಧಿಕಾರವನ್ನು ಬಿಟ್ಟುಕೊಡುವುದು ಮತ್ತು ಪಡೆಯುವ ನೈಜ ಪ್ರಜಾಪ್ರಭುತ್ವದ ಮಾದರಿಯೊಂದು ಸಾಧ್ಯವಿದೆ ಎನ್ನುವುದಕ್ಕೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟುಕೊಟ್ಟ ಸಂದರ್ಭ ಸಾಕ್ಷಿಯಾಯಿತು.

ಸಾರ್ವಜನಿಕ ಬದುಕಿನಲ್ಲಿ ನಮ್ಮ ನಡೆ ನುಡಿಗಳು ನಮ್ಮ ವ್ಯಕ್ತಿತ್ವವನ್ನು ನಿರ್ಧರಿಸುತ್ತವೆ. ಅಧಿಕಾರ, ಅಂತಸ್ತುಗಳನ್ನು ಮೀರಿದ ತತ್ತ್ವಬದ್ಧತೆಗಳು ಮಾತ್ರವೆ ಎಲ್ಲಾ ಕಾಲಕ್ಕೂ ಉಳಿಯಬಲ್ಲವು. ಇದನ್ನು ಸ್ಪಷ್ಟವಾಗಿ ಅರಿತಿದ್ದರಿಂದಲೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನವನ್ನು ತೃಣಮಾತ್ರ ಸಮಾನ ಎಂಬ ಭಾವನೆಯಿಂದ ಬಿಟ್ಟು ಹೊರನಡೆದಿದ್ದಾರೆ.

ವಿಪಕ್ಷಗಳ ಮಾತಿರಲಿ, ಸ್ವಪಕ್ಷೀಯರಲ್ಲೆ  ಸಿದ್ದರಾಮಯ್ಯ ಅವರು ಕೊಟ್ಟ ಮಾತಿನಂತೆ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟು ಕೊಡಲಾರರು ಎಂದು ಅವರನ್ನು ಅನುಮಾನದ ಗೂಟಕ್ಕೆ ಕಟ್ಟಿ ವಿಶ್ಲೇಷಿಸುತ್ತಿದ್ದರು. ರಾಜಕೀಯ ಪಂಡಿತರು ಕೂಡ ಯಾರಾದ್ರೂ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟು ಕೊಡುತ್ತಾರಾ? ಎಂದು  ವಾದಿಸುತ್ತಿದ್ದರು.  ಈ ಎಲ್ಲಾ ವಾದ, ವಿಶ್ಲೇಷಣೆಗಳು ವ್ಯಕ್ತಿಯ ಆಳದಲ್ಲಿರಬಹುದಾದ ಪ್ರಾಮಾಣಿಕತೆಯನ್ನು ಅಳೆಯಲಾರವು. ಘನತೆಯ ವ್ಯಕ್ತಿತ್ವವನ್ನು ಸ್ಪರ್ಶಿಸುವುದಿಲ್ಲ ಎಂಬಂತೆ ಸಿದ್ದರಾಮಯ್ಯ  ಆತ್ಮಸಾಕ್ಷಿ ಮತ್ತು ನೈತಿಕ ಪ್ರಜ್ಞೆಯ ಕರೆಗೆ ಓಗೊಟ್ಟಿದ್ದಾರೆ.

ಈ ರಾಜ್ಯವನ್ನು ಈ ಅವಧಿಯ ಮೂರುವರ್ಷಗಳ ಕಾಲ ಮುನ್ನಡೆಸಿದ ಸಿದ್ದರಾಮಯ್ಯ ಅವರು ಮೊನ್ನೆ (ಮೇ.28)  ರಾಜಭವನಕ್ಕೆ ತೆರಳಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಪತ್ರ ಸಲ್ಲಿಸಿ ಬಂದು ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿ ನಡೆಸಿದರು. ತಮ್ಮ 48 ವರ್ಷಗಳ ರಾಜಕೀಯ ಹಾದಿಯನ್ನು ಒಮ್ಮೆ ಹಿಂತಿರುಗಿ ನೋಡಿದರು. ತಮ್ಮ ಈ ಮೂರು ವರ್ಷಗಳ ಆಡಳಿತವನ್ನು ಕರಾರುವಾಕ್ಕಾಗಿ ವಿಮರ್ಶೆಗೊಡ್ಡಿದರು. ತಮ್ಮ ಆಡಳಿತದ ಬಗ್ಗೆ ಅವರು ಮಾತನಾಡುವಾಗ ಅವರಲ್ಲಿದ್ದ ಆತ್ಮವಿಶ್ವಾಸವೇ ಅವರ ದಕ್ಷತೆ, ಬದ್ಧತೆಯನ್ನು ತೋರುತ್ತಿತ್ತು. ತಾವು ಅಧಿಕಾರ ಪಡೆಯಲು ಸಹಕಾರ ನೀಡಿದವರಿಗೆಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸಿದ ಸಿದ್ದರಾಮಯ್ಯ ಅವರು ಕೊನೆಯಲ್ಲಿ  ‘ಇದುವರೆಗೂ ನನಗೆ ಸಹಾಯ ಮಾಡಿದ ನಿಮಗೂ (ಪತ್ರಕರ್ತರಿಗೆ) ಧನ್ಯವಾದಗಳು’ ಎಂದರು. ತಕ್ಷಣವೇ ಇದಕ್ಕೆ ಪ್ರತಿಯಾಗಿ ಎದುರಿಗಿದ್ದ ಪತ್ರಕರ್ತರ ಗುಂಪಿನಿಂದ ನಗು ಕೇಳಿ ಬಂತು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯನವರು ‘ಯಾಕೆ ನಗ್ತಿದೀರಿ, ನೀವು ನನಗೆ ಸಹಾಯ ಮಾಡಿಲ್ವ’? ಎಂದು ನವಿರಾದ ನಗುವಿನೊಂದಿಗೆ  ಮರುಪ್ರಶ್ನೆ ಎಸೆದರು. ಇದು  ಪತ್ರಕರ್ತರ ಆತ್ಮ ಸಾಕ್ಷಿಯನ್ನು ತಿವಿದಿರಲಿಕ್ಕೆ ಸಾಕು!.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಷ್ಟು ದಿನವೂ ಅವರನ್ನು ಮುಖ್ಯವಾಹಿನಿ ಮಾಧ್ಯಮಗಳು, ಪತ್ರಕರ್ತರ ವೇಷ ತೊಟ್ಟವರು ಮೂದಲಿಸುತ್ತಲೆ ಬಂದರು. ಬಡವರ, ಜನಸಾಮಾನ್ಯರ ಬದುಕಿಗೆ ಅಸರೆಯಾಗಿದ್ದ ಗ್ಯಾರಂಟಿ ಯೋಜನೆಗಳಿಂದ ರಾಜ್ಯ ದಿವಾಳಿಯಾಗಲಿದೆ ಎಂದು ಚೀರಿಕೊಳ್ಳುತ್ತಲೆ ಇದ್ದವು.  ಠೀಕೆಯ ಎಲ್ಲೆ ಮೀರಿದ ವಿಪಕ್ಷಗಳ ನಾಯಕರುಗಳು ಎಸೆದ ‘ಸಿದ್ರಾಮುಲ್ಲಾಖಾನ್’ ಎಂಬ ನಿಂದನೆಗಳನ್ನು  ಪತ್ರಿಕೆಗಳು ದೊಡ್ಡ ಹೆಡ್‍ಲೈನ್ ಆಗಿ ಅಚ್ಚಿಸಿದರೆ, ನ್ಯೂಸ್ ಚಾನಲ್‍ಗಳು ಬ್ರೇಕಿಂಗ್, ಶಾಕಿಂಗ್ ನ್ಯೂಸ್ ಎಂಬಂತೆ ಪ್ರಕಟಿಸಿ ಸಿದ್ದರಾಮಯ್ಯ ಅವರನ್ನು ಧರ್ಮದ ಪಕ್ಷಪಾತಿ ಎಂದು ಅಪಪ್ರಚಾರ ಮಾಡಿದವು.

ಗ್ಯಾರಂಟಿ ಯೋಜನೆಗಳ ಭಾರದಲ್ಲೂ ರಾಜ್ಯದ ಅರ್ಥಿಕ ಸ್ಥಿರತೆ ಕಾಪಾಡಿದ ಸಿದ್ದರಾಮಯ್ಯ ಅವರ ಅರ್ಥಶಾಸ್ತ್ರದ ನಿಪುಣತೆಯನ್ನು ಕೊಂಡಾಡಲು ಹಿಂಜರಿದವು. ಅನ್ನಭಾಗ್ಯವನ್ನು ಸೋಮಾರಿಗಳ ಸೃಷ್ಟಿ ಎಂದು ಕರೆದರೇ ವಿನಃ ಅನ್ನಭಾಗ್ಯದಿಂದ ಬಡವರ ಹಸಿವು ನೀಗಿದ ಬದುಕನ್ನು ಕಾಣಿಸಲೇ ಇಲ್ಲ. ಶಕ್ತಿಯೋಜನೆ, ಗೃಹಲಕ್ಷ್ಮೀ ಯೋಜನೆಗಳು ಮಹಿಳೆಯ ಬದುಕಿನಲ್ಲಿ ಉತ್ಪತ್ತಿ ಮಾಡಿದ ಆರ್ಥಿಕ ಬಲದ ಸ್ವಾವಲಂಬಿ ಜೀವನವನ್ನು ಗುರುತಿಸುವಲ್ಲಿ ಮುಖ್ಯವಾಹಿನಿ ಮಾಧ್ಯಮಗಳು ಹೊಣೆಗೇಡಿತನವನ್ನು ತೋರಿದ್ದವು.

ಈ ಅವಧಿಯಲ್ಲಿ ಮುಖ್ಯಮಂತ್ರಿಯಾದ ಮೂರು ತಿಂಗಳಲ್ಲೆ  “ಕುರ್ಚಿ ಕದನ” ಎಂಬ  ಸುದ್ದಿಗಳ ಪ್ಲಾಂಟ್ ಮಾಡುತ್ತಲೆ ಸಿದ್ದರಾಮಯ್ಯ ಅವರ ನೈತಿಕ ಬಲವನ್ನು ಕುಂದಿಸಲು ಮಡಿಲ ಮಾಧ್ಯಮಗಳು(ಗೋದಿ ಮೀಡಿಯಾ) ಹೆಣಗಾಡಿದವು. ಕೊನೆಯ ಕ್ಷಣದವರೆಗೂ ಸಿದ್ದರಾಮಯ್ಯ  ಅವರು ಅಧಿಕಾರ ಬಿಡುವುದನ್ನೆ ‘ಬಿಗ್ ಬ್ರೇಕಿಂಗ್ ನ್ಯೂಸ್’ ಆಗಿ ಕೊಡಲು ಕಾದು ಕುಳಿತಿದ್ದರು. 

ಇಷ್ಟಾದರೂ ಸಿದ್ದರಾಮಯ್ಯ ಎಲ್ಲವನ್ನೂ ಮರೆತಂತೆ ಪತ್ರಿಕಾಗೋಷ್ಠಿಯಲ್ಲಿ “ನನಗೆ ಸಹಾಯ” ಮಾಡಿದ ನಿಮಗೆಲ್ಲರಿಗೂ ಧನ್ಯವಾದಗಳು ಎಂದರು. ದ್ವೇಷ, ಸೇಡು ಮೀರಿದವರು ಮಾತ್ರ “ಜನನಾಯಕ” ರಾಗುತ್ತಾರೆ ಎಂಬುದಕ್ಕೆ ಸಿದ್ದರಾಮಯ್ಯ ಮೂರ್ತರೂಪವಾಗಿದ್ದರು. 

ಮನುಷ್ಯಕುಲದಲ್ಲಿ “ತ್ಯಾಗ”ಕ್ಕೆ ದೊಡ್ಡ ಮಹತ್ವವಿದೆ. ಅದು ಮನುಷ್ಯನ ಜೀವನವನ್ನೆ ಸಾರ್ಥಕತೆಯ ಬಿಂದುವಿಗೆ ತಂದು ಮುಟ್ಟಿಸಿ ಎಲ್ಲಾ ಕಾಲಕ್ಕೂ  ಅಜರಾಮರವಾಗಿಸುವ ಮಹೋನ್ನತ ಧಾರೆ.

ಅದರೆ,  ರಾಜಕಾರಣದಲ್ಲಿ ತ್ಯಾಗ ಎಂಬುದಕ್ಕೆ ಅರ್ಥವಿಲ್ಲ ಎಂಬಂತ ದಿನಮಾನಗಳಲ್ಲಿ ನಾವಿದ್ದೇವೆ. ಇಲ್ಲಿ ಎಲ್ಲವೂ ತಂತ್ರ, ಕುತಂತ್ರಗಳನ್ನು “ರಾಜಕಾರಣ” ಎಂಬ ಹೆಸರಲ್ಲಿ ದಕ್ಕಿಸಿಕೊಂಡು ಬಿಡುವ ಜಾಯಮಾನಗಳೇ ಹೆಚ್ಚು. ಹಾಗೆ ನೋಡಿದರೆ ಆಧುನಿಕ ಭಾರತೀಯ ರಾಜಕಾರಣದಲ್ಲಿ ಅಧಿಕಾರದಲ್ಲಿರುವ ನಿಷ್ಕಳಂಕಿತ ಜನನಾಯಕರೊಬ್ಬರು ಅಧಿಕಾರ ಸೌಧ, ಸಿಂಹಾಸನಗಳನ್ನು ಬಿಟ್ಟು ನಿರ್ಲಿಪ್ತವಾಗಿ  ಹೊರನಡೆದ ಮಾದರಿಗಳು ನಮಗೆ ಕಾಣಸಿಗುವುದಿಲ್ಲ.

ಬದಲಾಗಿ ಅಧಿಕಾರಕ್ಕಾಗಿ ಏನೆಲ್ಲಾ ಮಾಡುವುದು, ಹಾಗೆ ಮಾಡಿ ಪಡೆದ ಅಧಿಕಾರವನ್ನು ಉಳಿಸಿಕೊಳ್ಳಲು ನಡೆಸುವ ಸಂಚು ವಂಚನೆಗಳೇ ಹೆಚ್ಚು. ಇಲ್ಲಿ ಕೊಟ್ಟ ಮಾತು, ಜನಹಿತ, ನೈತಿಕ ಪ್ರಜ್ಞೆ,  ಘನತೆಯ ನಡೆ ಎಲ್ಲವೂ ಸ್ವಹಿತಾಸಕ್ತಿ , ದುರಾಸೆಗಳ ಸಮರ್ಥನೆಗಳಲ್ಲಿ ಕೊಚ್ಚಿ ಹೋಗಿಬಿಡುತ್ತವೆ.  

ಮುಖ್ಯಮಂತ್ರಿಯಂತಹ ದೊಡ್ಡ ಅಧಿಕಾರವನ್ನು ನಿರ್ಲಿಪ್ತವಾಗಿ ಬಿಟ್ಟು ಹೋಗುವುದಿದೆಯಲ್ಲ ಅದಕ್ಕೆ ಒಂದು ಎದೆಗಾರಿಕೆ ಬೇಕು. ಇಲ್ಲ ಅವರು ಸಂತರೇ ಅಗಿರಬೇಕು. ಆದಿಭಾರತದ ಚರಿತ್ರೆಯಲ್ಲಿ ಅಧಿಕಾರ, ಅರಮನೆಯನ್ನು ಬಿಟ್ಟು ನಿರ್ಮೋಹಕ ಸ್ಥಿತಿಯಲ್ಲಿ ಹೊರನಡೆದದ್ದು ಸಿದ್ಧಾರ್ಥ ಗೌತಮನಿಗೆ ಮಾತ್ರವೇ ಸಾಧ್ಯವಾದದ್ದನ್ನು ಕಾಣುತ್ತೇವೆ ಮತ್ತು ಆದರ್ಶವಾಗಿಯೂ ನಾವು ಪ್ರತಿಪಾದಿಸುತ್ತಲೆ ಬಂದಿದ್ದೇವೆ. ಅಂದು ಸಿದ್ದಾರ್ಥ ನಡೆದ ಹಾದಿಯನ್ನೆ ಈ ಹೊತ್ತಿನ ಭಾರತೀಯ ಸಮಕಾಲೀನ  ರಾಜಕಾರಣದಲ್ಲಿ ಇಂದು ಸಿದ್ದರಾಮಯ್ಯ ತುಳಿದಿದ್ದು ಮಾತ್ರ ಚರಿತ್ರೆಯ ಮರುಹುಟ್ಟು. ಬುದ್ಧರಿಗೆ ಸಾವಿಲ್ಲ ಎಂಬುದು ದಿಟವಾಯಿತು.

ಈ ನಾಡಿನ ಕುರಿಕಾಯುವ ಬಡ ಕುಟುಂಬದಿಂದ – ಮುಖ್ಯಮಂತ್ರಿ ಸ್ಥಾನದವರೆಗೂ ನಡೆದು ಬಂದ  ಸಿದ್ದರಾಮಯ್ಯನವರು ಅಧಿಕಾರ, ಅಂತಸ್ತು ಯಾವುದೂ ಸತ್ಯವಲ್ಲ, ಜನರ ಹೃದಯದಲ್ಲಿ ಹಸಿರಾಗಿರುವುದು ಮಾತ್ರವೆ ಸತ್ಯ ಎಂಬ  ಲೌಕಿಕ ಸತ್ಯಗಳನ್ನು ಅರಿತಿದ್ದರಿಂದಲೆ ನಿರ್ಲಿಪ್ತವಾಗಿ ಅಧಿಕಾರವನ್ನು ಬಿಟ್ಟು ನಡೆಯಲು ಸಾಧ್ಯವಾಯಿತು.

ನಿಷ್ಕಳಂಕ ಜನನಾಯಕ ಸಿದ್ದರಾಮಯ್ಯನವರು  ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಪತ್ರ ಕೊಟ್ಟು ಹೊರಟಿದ್ದನ್ನು ನೋಡಿದಾಗ ಅವರು ಸಂತನೇ ಆಗಿರಬೇಕು ಅನಿಸಿತು. ಕಪಿಲವಸ್ತುವಿನ ವೈಭವದ ಅರಮನೆ, ಅಂತಸ್ತು ತೊರೆದು ನಿರ್ಲಿಪ್ತವಾಗಿ, ಸ್ಥಿತಪ್ರಜ್ಞೆ ಹೊತ್ತು, ಹೊರಟ ಶಾಕ್ಯಕುಲದ, ‘ಸಿದ್ಧಾ’ರ್ಥ ಗೌತಮ ಕಣ್ಣಮುಂದೆ ಹಾದುಹೋದಂತಾಯಿತು. 

ಎನ್.ರವಿಕುಮಾರ್

ಹಿರಿಯ ಪತ್ರಕರ್ತರು

ಇದನ್ನೂ ಓದಿ- ಸಂಪಾದಕೀಯ | ಸಿದ್ಧರಾಮಯ್ಯ ಎಂಬ ರಾಜಕೀಯ ದಾರ್ಶನಿಕನನ್ನು ಇತಿಹಾಸ ನೆನಪಿಟ್ಟುಕೊಳ್ಳಲಿದೆ!

More articles

Latest article

Most read