ಏನಿತ್ತು ತಮಿಳುನಾಡಿನಲ್ಲಿ ಬಿಜೆಪಿಯ ಗೇಮ್‌ಪ್ಲ್ಯಾನ್‌?

ತಮಿಳುನಾಡಿನಲ್ಲಿ ನಿರ್ಮಾಣವಾಗಿರುವಂತಹ ಅತಂತ್ರ ವಿಧಾನಸಭೆ ಸಂದರ್ಭದಲ್ಲಿ 108 ಶಾಸಕ ಬಲದೊಂದಿಗೆ ಅತಿದೊಡ್ಡ ಪಕ್ಷವಾದ ಟಿವಿಕೆಯನ್ನು ಸರ್ಕಾರ ರಚನೆಗೆ ರಾಜ್ಯಪಾಲರು ಆಹ್ವಾನಿಸಬೇಕಿತ್ತು. ನಿಗದಿತ ಸಮಯದೊಳಗೆ ಸದನದಲ್ಲಿ ಟಿವಿಕೆ ಪಕ್ಷ ತನ್ನ ಬಹುಮತ ಸಾಬೀತುಪಡಿಸದೆ ಹೋದರೆ, ಆಗ ರಾಜ್ಯಪಾಲರು ಮಧ್ಯಪ್ರವೇಶಿಸಬಹುದು. ಆದಾಗ್ಯೂ ತಮಿಳುನಾಡಿನ ರಾಜ್ಯಪಾಲರು ಬಹುಮತ ಸಂಖ್ಯೆಯ ಶಾಸಕ ಬಲದೊಂದಿಗೆ ಬರುವಂತೆ ಟಿವಿಕೆಯ ಸರ್ಕಾರ ರಚನೆ ಮನವಿಯನ್ನು ತಿರಸ್ಕರಿಸಿ ಕಳಿಸಿದರು. ಇದು ನಿಯಮಬಾಹಿರ ಮಾಚಯ್ಯ ಎಂ ಹಿಪ್ಪರಿಗಿ, ರಾಜಕೀಯ ವಿಶ್ಲೇಷಕರು.

“ಈ ದೇಶದಲ್ಲಿ ಜನಾದೇಶ  ಏನೇ ಬಂದರೂ, ಸರ್ಕಾರ ರಚನೆಯನ್ನು ನಾವೇ ನಿಯಂತ್ರಿಸ್ತೀವಿ!”…. ಇಂತದ್ದೊಂದು ಸಂದೇಶವನ್ನು ಕಾಂಗ್ರೆಸ್‌ ಜೊತೆ ಕೈಜೋಡಿಸಿರುವ ವಿಜಯ್‌ಗೆ ರವಾನಿಸುವ ಮೂಲಕ, ಮುಂದೆ ತಮ್ಮಿಂದ ಎದುರಾಗಬಹುದಾದ ಕಂಟಕಗಳಿಗೆ ಸಣ್ಣ ಟ್ರೇಲರ್‍‌ ತೋರಿಸುವುದು ಬಿಜೆಪಿಯ ಉದ್ದೇಶ. ಅದಕ್ಕಾಗಿ ರಾಜ್ಯಪಾಲರನ್ನು ಬಳಸಿಕೊಂಡು ತಮಿಳುನಾಡಿನಲ್ಲಿ ಸರ್ಕಾರ ರಚನೆಗೆ ಅಡ್ಡಗಾಲು ಹಾಕಲಾಯ್ತು.

ರಾಜ್ಯಪಾಲರ ಅಧಿಕಾರ ವ್ಯಾಪ್ತಿಯನ್ನು ವಿವರಿಸುವ ಸಂವಿಧಾನದ 164 (1) ಅಧಿನಿಯಮವು, “ಮುಖ್ಯಮಂತ್ರಿಯು ರಾಜ್ಯಪಾಲರಿಂದ ಆಯ್ಕೆ ಮಾಡಲ್ಪಡಬೇಕು” ಎಂದು ಹೇಳುತ್ತದೆ. ಬಹುಮತ ಪಡೆದ ಪಕ್ಷವೊಂದು ಯಾರನ್ನು ತಮ್ಮ ಶಾಸನ ಸಭೆಯ ನಾಯಕನೆಂದು ಆಯ್ಕೆ ಮಾಡುತ್ತದೋ ಅವರನ್ನು ಸಿಎಂ ಆಗಿ ನೇಮಿಸಿ, ಅವರಿಗೆ ಪ್ರಮಾಣವಚನ ಬೋಧಿಸುವುದು ರಾಜ್ಯಪಾಲರ ಕರ್ತವ್ಯ. ಆದರೆ ಬಹುಮತ ಬರದೆ ಅತಂತ್ರ ವಿಧಾನಸಭೆ ನಿರ್ಮಾಣವಾದಾಗ?

ಇಂತಹ ಪರಿಸ್ಥಿತಿಯ ಸ್ಪಷ್ಟತೆಗಾಗಿ 1988ರಲ್ಲಿ ಸರ್ಕಾರಿಯಾ ಆಯೋಗವನ್ನು ನೇಮಿಸಲಾಯ್ತು. ಅದು “ಯಾವುದೇ ಒಂದು ಪಕ್ಷ ಬಹುಮತ ಪಡೆಯಲು ವಿಫಲವಾದರೆ, ಚುನಾವಣಾಪೂರ್ವ ಮೈತ್ರಿ ಮಾಡಿಕೊಂಡ ಅತಿದೊಡ್ಡ ಮೈತ್ರಿಕೂಟವನ್ನು ಅಥವಾ ಅತಿಹೆಚ್ಚು ಸ್ಥಾನಗಳಲ್ಲಿ ಗೆದ್ದ ದೊಡ್ಡ ಪಕ್ಷವನ್ನು ರಾಜ್ಯಪಾಲರು ಸರ್ಕಾರ ರಚನೆಗೆ ಆಹ್ವಾನಿಸಬೇಕು” ಎಂದು ಸ್ಪಷ್ಟವಾಗಿ ಉಲ್ಲೇಖಿಸುತ್ತದೆ. ಇನ್ನು 2010ರಲ್ಲಿ ವರದಿ ಸಲ್ಲಿಸಿದ ಪೂಂಛಿ ಆಯೋಗ ಕೂಡಾ ಸರ್ಕಾರಿಯಾ ಆಯೋಗದ ಉಲ್ಲೇಖವನ್ನು ಅನುಮೋದಿಸಿ, “Widest support” ಹೊಂದಿರುವ ಪಕ್ಷವನ್ನು ರಾಜ್ಯಪಾಲರು ಸರ್ಕಾರ ರಚನೆಗೆ ಆಹ್ವಾನಿಸಬೇಕು ಎಂದು ಹೇಳುತ್ತದೆ. ಆಯೋಗ Widest support ಎಂದು ಹೇಳುತ್ತದೆಯೇ ಹೊರತು, Absolute majority ಎಂದು ಹೇಳುವುದಿಲ್ಲ. ಹಾಗಾಗಿ ರಾಜ್ಯಪಾಲರು Absolute majority ಇಲ್ಲ ಎಂಬ ಕಾರಣಕ್ಕೆ ಸರ್ಕಾರ ರಚನೆಯ ಅವಕಾಶವನ್ನು ನಿರಾಕರಿಸುವಂತಿಲ್ಲ.

ಎಸ್‌ ಆರ್ ಬೊಮ್ಮಾಯಿ ವರ್ಸಸ್‌ ಯೂನಿಯನ್‌ ಆಫ್‌ ಇಂಡಿಯಾ ಪ್ರಕರಣದ 1994ರ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್‌ ಬಹಳ ಸ್ಪಷ್ಟವಾಗಿ “ಸರ್ಕಾರವೊಂದರ ಬಹುಮತ ಸಾಬೀತಾಗಬೇಕಾದದ್ದು, ಸದನದ ನೆಲದಲ್ಲಿಯೇ ಹೊರತು ರಾಜಭವನದ ಅಂಗಳದಲ್ಲಿ ಅಲ್ಲ” ಎಂದು ಹೇಳಿದೆ. ಅಂದರೆ ರಾಜ್ಯಪಾಲರು ತಮ್ಮ ಮುಂದೆ ಬಹುಮತ ಸಾಬೀತುಪಡಿಸುವಂತೆ ಕೇಳುವಂತಿಲ್ಲ.

ವಿಜಯ್ ಮತ್ತು ರಾಜ್ಯಪಾಲ ಅರ್ಲೇಕರ್

ಸಾರಾಂಶದಲ್ಲಿ ಹೇಳುವುದಾದರೆ, ತಮಿಳುನಾಡಿನಲ್ಲಿ ನಿರ್ಮಾಣವಾಗಿರುವಂತಹ ಅತಂತ್ರ ವಿಧಾನಸಭೆ ಸಂದರ್ಭದಲ್ಲಿ 108 ಶಾಸಕ ಬಲದೊಂದಿಗೆ ಅತಿದೊಡ್ಡ ಪಕ್ಷವಾದ ಟಿವಿಕೆಯನ್ನು ಸರ್ಕಾರ ರಚನೆಗೆ ರಾಜ್ಯಪಾಲರು ಆಹ್ವಾನಿಸಬೇಕಿತ್ತು. ನಿಗದಿತ ಸಮಯದೊಳಗೆ ಸದನದಲ್ಲಿ ಟಿವಿಕೆ ಪಕ್ಷ ತನ್ನ ಬಹುಮತ ಸಾಬೀತುಪಡಿಸದೆ ಹೋದರೆ, ಆಗ ರಾಜ್ಯಪಾಲರು ಮಧ್ಯಪ್ರವೇಶಿಸಬಹುದು

ಆದಾಗ್ಯೂ ತಮಿಳುನಾಡಿನ ರಾಜ್ಯಪಾಲರು ಬಹುಮತ ಸಂಖ್ಯೆಯ ಶಾಸಕ ಬಲದೊಂದಿಗೆ ಬರುವಂತೆ ಟಿವಿಕೆಯ ಸರ್ಕಾರ ರಚನೆ ಮನವಿಯನ್ನು ತಿರಸ್ಕರಿಸಿ ಕಳಿಸಿದರು. ಇದು ನಿಯಮಬಾಹಿರ.

ಯಾಕೆ ಹೀಗೆ ಮಾಡಲಾಯ್ತು?

ಹೇಗಾದರು ಮಾಡಿ ಚುನಾವಣೆಯಲ್ಲಿ ಗೆಲ್ಲಬೇಕು; ಒಂದುವೇಳೆ ಗೆಲ್ಲಲಾಗದಿದ್ದರೆ ಶತಾಯಗತಾಯ ಸರ್ಕಾರ ರಚನೆಯನ್ನು ತಾನು ಪ್ರಭಾವಿಸಬೇಕು; ಅಕಸ್ಮಾತ್‌ ಅದೂ ಆಗದಿದ್ದರೆ, ತನ್ನ ಹಂಗಿಲ್ಲದೆ ರಚನೆಯಾದ ಸರ್ಕಾರ ಸುಸೂತ್ರವಾಗಿ ಆಡಳಿತ ನಡೆಸದಂತೆ ಕೇಂದ್ರ ಸರ್ಕಾರದ ತನ್ನ ಅಧಿಕಾರ ದುರ್ಬಳಕೆ ಮಾಡಿಕೊಂಡು ಅನುದಾನ ಹಂಚಿಕೆ, ನೀತಿ ನಿರೂಪಣೆಗಳಲ್ಲಿ ಅಡ್ಡಗಾಲು ಹಾಕಬೇಕು…. ಇದು ಇತ್ತೀಚಿನ ದಿನಗಳಲ್ಲಿ ಬಿಜೆಪಿ ಅನುಸರಿಸುತ್ತಿರುವ ಕುತಂತ್ರ.

ಚುನಾವಣೆಯಲ್ಲಿ ಗೆಲ್ಲಲಾಗದ ಬಿಜೆಪಿ ತಮಿಳುನಾಡಿನಲ್ಲಿ ನಡೆಸಿದ್ದು ಎರಡನೇ ಸ್ಟ್ರಾಟಜಿ. ಸರ್ಕಾರ ರಚನೆಯನ್ನು ಪ್ರಭಾವಿಸೋದು. ವಿಜಯ್‌ ಕಾಂಗ್ರೆಸ್‌ ಜೊತೆ ಕೈಜೋಡಿಸಿದ್ದು ಬಿಜೆಪಿಯ ಕೆಂಗಣ್ಣಿಗೆ ಕಾರಣವಾಯ್ತು. ಹೇಗಾದರೂ ಮಾಡಿ ಆತ ತನ್ನ ಮಿತ್ರಪಕ್ಷವಾದ ಎಐಎಡಿಎಂಕೆ ಜೊತೆ ಮೈತ್ರಿ ಮಾಡಿಕೊಳ್ಳುವಂತೆ ಅನಿವಾರ್ಯತೆ ಸೃಷ್ಟಿಸಿದರೆ, ಪರೋಕ್ಷವಾಗಿ ತಮಿಳುನಾಡಿನ ಸರ್ಕಾರ ತನ್ನ ಅಧೀನಕ್ಕೆ ಒಳಪಡಲಿದೆ ಎಂಬುದು ಬಿಜೆಪಿ ಎಣಿಕೆಯಾಗಿತ್ತು. ಆ ಮೂಲಕ ಕಾಂಗ್ರೆಸ್‌ ಅನ್ನು ಅಧಿಕಾರದಿಂದ ಹೊರಗಿಟ್ಟಂತೆಯೂ ಆಗುತ್ತದೆ; ಅಕ್ಕಪಕ್ಕದ ಕರ್ನಾಟಕ ಮತ್ತು ಕೇರಳದಲ್ಲಿರುವ ಕಾಂಗ್ರೆಸ್‌ ಸರ್ಕಾರಗಳಿಗೆ ಗಡಿವಿವಾದ, ನೀರು ಹಂಚಿಕೆ, ಭಾಷಾ ವಿಚಾರಗಳನ್ನಿಟ್ಟುಕೊಂಡು ಕಾಟ ಕೊಡಲು ಬಿಜೆಪಿಗೆ ಒಂದು ರೀಜನಲ್‌ ಬೇಸ್‌ ಕೂಡಾ ಲಭಿಸಿದಂತಾಗುತ್ತೆ.

ಆದರೆ, ಬಿಜೆಪಿ ನನ್ನ ಸೈದ್ಧಾಂತಿಕ ಎದುರಾಳಿ ಎಂದು ಈಗಾಗಲೇ ಘೋಷಿಸಿದ್ದ ವಿಜಯ್‌ಗೆ ಬಿಜೆಪಿ ಜೊತೆ  ಅಥವಾ ಅದರ ಮಿತ್ರಪಕ್ಷವಾದ ಎಐಎಡಿಎಂಕೆ ಜೊತೆ ಮೈತ್ರಿ ಮಾಡಿಕೊಳ್ಳುವುದು ಇಷ್ಟವಿರಲಿಲ್ಲ. ಹಾಗಾಗಿಯೇ ಆತ ಕಾಂಗ್ರೆಸ್‌ಗೆ ಆಹ್ವಾನ ನೀಡಿದ್ದು. ಆತನ ಇಚ್ಛೆಗೆ ವಿರುದ್ಧವಾಗಿ, ಆತನನ್ನು ಎಐಎಡಿಎಂಕೆ ಮೈತ್ರಿಗೆ ಒಪ್ಪುವಂತೆ ಮಾಡಿಸಲು ರಾಜ್ಯಪಾಲರ ಮೂಲಕ ಈ ವಿಳಂಬದ ಆಟ ಆಡಿಸಲಾಯ್ತು.

ಅತ್ತ, ವಿಜಯ್‌ ಅವರ ಟಿವಿಕೆಗೆ ಬೆಂಬಲ ನೀಡುವ ವಿಚಾರದಲ್ಲಿ ಎಐಎಡಿಎಂಕೆ ಒಳಗೇ ಭಿನ್ನಮತ ಶುರುವಾಗಿತ್ತು. ಅದೇನಾದರೂ ಪಕ್ಷ ವಿಭಜನೆಯವರೆಗೆ ಹೋಗಿದ್ದರೆ, ತನ್ನ ಅತಿದೊಡ್ಡ ಮಿತ್ರಪಕ್ಷದ ಅವನತಿಯಿಂದ ಬಿಜೆಪಿಯ ಪ್ರಭಾವವೂ ತಮಿಳುನಾಡಿನಲ್ಲಿ ಕ್ಷೀಣಿಸುತ್ತಿತ್ತು. ಅದನ್ನು ತಪ್ಪಿಸಿ, ಟಿವಿಕೆಗೆ ತಾವು ಬೆಂಬಲ ನೀಡದೆಯೂ, ಸರ್ಕಾರ ರಚನೆಯಲ್ಲಿ ತಮಗೆ ಅವಕಾಶ ಸಿಗಲಿದೆ ಎಂಬ ಆಸೆಯನ್ನು ಎಐಎಡಿಎಂಕೆ ಶಾಸಕರಲ್ಲಿ ಹುಟ್ಟಿಸಿ, ಆ ಮೂಲಕ ಪಕ್ಷ ವಿಭಜನೆಯ ಆತಂಕವನ್ನು ತಪ್ಪಿಸುವುದು ಕೂಡಾ ಬಿಜೆಪಿ ವಿಳಂಬ ತಂತ್ರದ ಉದ್ದೇಶವಾಗಿತ್ತು.

ಪಶ್ಚಿಮ ಬಂಗಾಳದ ಸರ್ಕಾರ ರಚನೆಯಲ್ಲಿ ಬ್ಯುಸಿಯಾಗಿದ್ದ ಅಮಿತ್‌ ಶಾ, ಅಲ್ಲಿಂದ ಬಿಡುಗಡೆ ಹೊಂದಿ ತಮಿಳುನಾಡಿನತ್ತ ಫೋಕಸ್‌ ಆಗುವವರೆಗೆ ವಿಳಂಬ ಕಾರ್ಯ ಮುಂದುವರೆಸಲು ಸಾಧ್ಯವಾದರೆ, ಏನಾದರೂ ಆಟ ಆಡಬಹುದು ಎಂದು ರಾಜ್ಯಪಾಲರನ್ನು ಬಳಸಿಕೊಳ್ಳಲಾಯ್ತು. ನೆನಪಿರಲಿ, ಈಗಾಗಲೇ ವಿಜಯ್‌ ಮೇಲೆ ಅಕ್ರಮ ಆದಾಯ ಗಳಿಕೆ, ಸಂಭಾವನೆ ರೂಪದಲ್ಲಿ ಅಕ್ರಮ ನಗದು ಸ್ವೀಕರಣೆ ಆರೋಪ ಹೊರಿಸಿ ಪಿಎಂಎಲ್‌ಎ ಕಾಯ್ದೆಯಡಿ ಎಫ್‌ ಐ ಆರ್ ದಾಖಲಿಸಿ ವಿಚಾರಣೆ ನಡೆಸಬೇಕೆಂದು ಎಂ ರಾಜಕುಮಾರ್‍‌ ಎಂಬ ಖಾಸಗಿ ವ್ಯಕ್ತಿ ದೂರು ದಾಖಲಿಸಿದ್ದಾರೆ. ದೂರು ದಾಖಲೆಗಳ ನಿರ್ವಹಣೆ ಸಮರ್ಪಕವಾಗಿಲ್ಲ ಎಂದು ವಾದಿಸಿದ ಹೈಕೋರ್ಟ್ ರೆಜಿಸ್ಟ್ರಿಯು ಆ ದೂರಿಗೆ ವಿಚಾರಣೆ ಸಂಖ್ಯೆ ನೀಡಿರಲಿಲ್ಲ. ಏಪ್ರಿಲ್‌ 8ರಂದು ಮಧ್ಯಪ್ರವೇಶಿಸಿದ ಮದ್ರಾಸ್‌ ಹೈಕೋರ್ಟ್‌, ದೂರು ದಾಖಲೆಗಳ ನಿರ್ವಹಣೆಯ ಪರಿಶೀಲನೆ ಮಾಡುವುದು ನಿಮ್ಮ ಜವಾಬ್ದಾರಿಯಲ್ಲ, ಕೂಡಲೇ ಆ ದೂರನ್ನು ಪರಿಗಣಿಸಿ, ರೆಜಿಸ್ಟ್ರಿ ನಂಬರ್ ನೀಡಿ ನ್ಯಾಯಾಲಯದ ಮುಂದೆ ವಿಚಾರಣೆಗೆ ಸಲ್ಲಿಸಿ ಎಂದು ನಿರ್ದೇಶನ ನೀಡಿದೆ. ಅಂದರೆ, ವಿಜಯ್‌ ಸಿಎಂ ಗದ್ದುಗೆ ಏರುತ್ತಿದ್ದಂತೆಯೇ ಅವರನ್ನು ತನ್ನ ಇಡಿ, ಐಟಿ ತನಿಖಾ ವ್ಯಾಪ್ತಿಗೆ ತಂದುಕೊಳ್ಳಲು ಖಾಸಗಿ ದೂರಿನ ಮೂಲಕ ಎಲ್ಲವನ್ನೂ ಸಿದ್ದಮಾಡಿಕೊಳ್ಳಲಾಗಿದೆ. ಅದನ್ನೆಲ್ಲ ಮ್ಯಾನ್ಯುಪುಲೇಟ್‌ ಮಾಡಲು ಒಂದಷ್ಟು ಸಮಯಾವಕಾಶ ಬೇಕಿತ್ತು. ಆ ಸಮಯಕ್ಕಾಗಿಯೇ ವಿಳಂಬ ಕಸರತ್ತು ನಡೆಸಲಾಯ್ತು.

ಅಮಿತ್‌ ಶಾ

ಹೀಗೆ ಮಾಡಲು ಮುಂದಾದಾಗ, ಬಿಜೆಪಿ ರಾಜ್ಯಪಾಲರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂಬ ಆರೋಪ ತನ್ನ ವಿರುದ್ಧ ಭುಗಿಲೇಳಲಿದೆ ಎಂಬುದು ಬಿಜೆಪಿಗೆ ಗೊತ್ತಿತ್ತು. ಅದಕ್ಕೂ ಬಿಜೆಪಿ ಒಂದು ಪ್ಲ್ಯಾನ್‌ ಕಂಡುಕೊಂಡಿತು. ಆ ಚರ್ಚೆಯನ್ನು ಡೈಲ್ಯೂಟ್ ಮಾಡುವ ಸಲುವಾಗಿ ಪ್ರಾದೇಶಿಕ ಕಡು ಎದುರಾಳಿಗಳಾದ ಡಿಎಂಕೆ-ಎಐಎಡಿಎಂಕೆ ನಡುವೆ ಮೈತ್ರಿ ಏರ್ಪಟ್ಟು ಸರ್ಕಾರ ರಚನೆಯಾಗಲಿದೆ ಎಂಬ ರೋಚಕ ಸುದ್ದಿಯನ್ನು ಫ್ಲೋಟ್‌ ಮಾಡಲಾಯ್ತು. ಈಗಾಗಲೇ ಸ್ಟಾಲಿನ್‌ ಅವರು ಜನಾದೇಶಕ್ಕೆ ಬೆಲೆಕೊಟ್ಟು ವಿರೋಧ ಪಕ್ಷದಲ್ಲಿ ಕೂರಲು ಸಿದ್ದ ಎಂದು ಹೇಳಿದ್ದರೂ, ಡಿಎಂಕೆ ಪಕ್ಷದ ವಕ್ತಾರರಾದ ಟಿಕೆಎಸ್‌ ಇಳಂಗೋವನ್‌ ಅವರು “ಎಐಎಡಿಎಂಕೆ ಜೊತೆ ಮೈತ್ರಿ ಸಾಧ್ಯವೇ ಇಲ್ಲ” ಎಂದು ಕಡ್ಡಿ ತುಂಡು ಮಾಡಿದ್ದರು ಕೂಡಾ ಈ ಮೈತ್ರಿ ಸುದ್ದಿಗೆ ತಿದಿ ಊದಲಾಯ್ತು. ಬಿಜೆಪಿಯವರ ನಿಯಂತ್ರಣಕ್ಕೆ ಒಳಪಟ್ಟಿದ್ದಾರೆ ಎನ್ನಲಾಗುತ್ತಿರುವ ಸೂಪರ್‍‌ಸ್ಟಾರ್ ರಜನಿಕಾಂತ್‌ ಅವರು ಅಚ್ಚರಿಯ ಬೆಳವಣಿಗೆಯಲ್ಲಿ ಸ್ಟಾಲಿನ್‌ ಅವರ ಮನೆಗೆ ಹೋಗಿ, ಭೇಟಿ ಮಾಡಿಬಂದ ನಂತರ ಈ ಸುದ್ದಿ ಜೋರಾಗಿ ಹರಿದಾಡಿತು. ಅಂದರೆ ಇಂತಹ ಸುದ್ದಿಯನ್ನು ಫ್ಲೋಟ್‌ ಮಾಡುವುದಕ್ಕಾಗಿಯೇ ಆ ಭೇಟಿಯನ್ನು ಆಯೋಜಿಸಲಾಗಿತ್ತೆ?. ಒಟ್ಟಿನಲ್ಲಿ, ಅಸಹಜವೆನಿಸಬಹುದಾದ ಡಿಎಂಕೆ-ಎಐಎಡಿಎಂಕೆ ಮೈತ್ರಿಯ ಸುತ್ತ ರೋಚಕ ಚರ್ಚೆಗಳು ಗರಿಗೆದರಿದಷ್ಟೂ ರಾಜ್ಯಪಾಲರನ್ನು ಬಳಸಿಕೊಂಡು ಅಸಂವಿಧಾನಿಕವಾಗಿ ಸರ್ಕಾರ ರಚನೆಗೆ ಅಡ್ಡಗಾಲು ಹಾಕುತ್ತಿದ್ದ ತನ್ನ ಮೇಲಿನ ಆರೋಪದ ಚರ್ಚೆಯ ತೀಕ್ಷ್ಣತೆ ಕುಂದುತ್ತದೆ ಎಂಬುದು ಬಿಜೆಪಿಯ ಲೆಕ್ಕಾಚಾರ.

ಕೊನೆಗೂ ಕಾಂಗ್ರೆಸ್‌, ಎಡಪಕ್ಷಗಳು, ಕೆವಿಕೆ ಬೆಂಬಲದ ಮೂಲಕ ವಿಜಯ್‌ ಸರ್ಕಾರ ರಚನೆ ಮಾಡುವಲ್ಲಿ ಯಶಸ್ವಿಯಾಗಿರಬಹುದು. ಆದರೆ ನಮ್ಮ ಮೂಗಿನ ನೇರಕ್ಕೆ ನಡೆಯದಿದ್ದರೆ, ನಿಮಗೆ ಸುಲಭವಾಗಿ ಆಡಳಿತ ನಡೆಸಲು ಬಿಡಲಾರೆವು ಎಂಬ ಎಚ್ಚರಿಕೆಯನ್ನು ವಿಜಯ್‌ಗೆ ರವಾನಿಸುವಲ್ಲಿ ಬಿಜೆಪಿ ಅದಾಗಲೇ ಯಶಸ್ವಿಯಾಗಿದೆ. ಅಂದಹಾಗೆ, ರಾಜ್ಯಪಾಲರನ್ನು ಬಳಸಿಕೊಂಡು ಸರ್ಕಾರ ರಚನೆಗೆ ಅಡ್ಡಗಾಲು ಹಾಕುವಾಗ, ತಾನು ಯಶಸ್ವಿಯಾಗಿಬಿಡುತ್ತೇನೆ ಎಂಬ ಗ್ಯಾರಂಟಿ ಬಿಜೆಪಿಗೂ ಇದ್ದಂತಿರಲಿಲ್ಲ. ಆದಾಗ್ಯೂ ಅದು, ಒಂದು ಕಲ್ಲು ಎಸೆದು ನೋಡುವ ಪ್ರಯತ್ನಕ್ಕಿಳಿದಿತ್ತು. Don’t leave a stone unturned! ಎಷ್ಟೇ ಕ್ಷೀಣ ಸಾಧ್ಯತೆ ಇದ್ದರೂ, ರಾಜಕಾರಣ ಮಾಡುವ ವಿಚಾರದಲ್ಲಿ ಬಿಜೆಪಿಯ ಈ ಬದ್ಧತೆ (ಅನುಸರಿಸುವ ಮಾರ್ಗದ ವಿಚಾರದಲ್ಲಿ ಅಲ್ಲ) ಬೇರೆ ಪಕ್ಷಗಳಿಗೆ ಮಾದರಿಯಾಗಬಹುದೇನೊ. ಯಾವಾಗ ತನ್ನ ಯಾವ ಪ್ರಯತ್ನಗಳೂ ಕೈಗೂಡದೆ ವಿಜಯ್‌ ಬಹುಮತ ಹೊಂದುವಲ್ಲಿ ಯಶಸ್ವಿಯಾದರೋ ಆಗ, ಬಿಜೆಪಿ ತಮಿಳುನಾಡು ಘಟಕ ಅಧಿಕೃತ ಪತ್ರಿಕಾ ಪ್ರಕಟಣೆ ಹೊರಡಿಸಿ, ನನಗೆ ಜನಾದೇಶ ಸಿಕ್ಕಿಲ್ಲ ಹಾಗಾಗಿ ತಾನು ಸರ್ಕಾರ ರಚನೆಯ ಪ್ರಯತ್ನ ನಡೆಸಿಲ್ಲ ಎಂದು ಘೋಷಿಸಿತು. ಇದೊಂಥರ ಕುಂಬಳಕಾಯಿ ಕಳ್ಳ ಎಂದರೆ ಹೆಗಲುಮುಟ್ಟಿ ನೋಡಿಕೊಂಡಂತಿತ್ತು. ರಾಜ್ಯಪಾಲರನ್ನು ದುರ್ಬಳಕೆ ಮಾಡಿಕೊಂಡು, ಅಡ್ಡಗಾಲು ಹಾಕಿದ್ದರಿಂದ ಬಿಜೆಪಿ ವಿರುದ್ಧ ಭುಗಿಲೆದ್ದ ಜನಾಕ್ರೋಶವನ್ನು ತಣ್ಣಗಾಗಿಸಲು, ಕೊನೇ ಘಳಿಗೆಯಲ್ಲಿ ಈ ಪ್ರಕಟಣೆ ಹೊರಡಿಸಲಾಯ್ತು.

ಅಷ್ಟಕ್ಕೂ ಅಲ್ಲಿ ಬಿಜೆಪಿ ಆಟ ಇನ್ನೂ ಮುಗಿದಿಲ್ಲ. ಒಂದುಕಡೆ, ವಿಜಯ್‌ ಅವರನ್ನು ಇಡಿ-ಐಟಿ ಮೂಲಕ ಆಟ ಆಡಿಸಲು ವೇದಿಕೆ ಸಿದ್ಧ ಮಾಡಲಾಗುತ್ತಿದೆ. ಮತ್ತೊಂದೆಡೆ, ಕೇಂದ್ರದ ಮಲತಾಯಿ ಧೋರಣೆ ಮುಂದುವರೆಸಿ, ಆಡಳಿತಕ್ಕೆ ಅಡ್ಡಗಾಲು ಹಾಕಲಾಗುತ್ತದೆ. ಈ ನಡುವೆ, ಅಲ್ಪ ಬಲದ ಈ ಸರ್ಕಾರವನ್ನು ಅಸ್ಥಿರಗೊಳಿಸಲು ಎಐಎಡಿಎಂಕೆ ಮೂಲಕ ಆಪರೇಷನ್‌ ಆಟಕ್ಕೂ ಅದು ಮುಂದಾಗುವ ಅಪಾಯವನ್ನು ತಳ್ಳಿಹಾಕುವಂತಿಲ್ಲ. ಯಾಕೆಂದರೆ ವಿಜಯ್‌ ಪಕ್ಷದಿಂದ ಗೆದ್ದವರಲ್ಲಿ ಬಹುತೇಕರು ಹೊಸಮುಖಗಳು, ಅನನುಭವಿಗಳು. ಬಿಜೆಪಿಯ ಕರಾಳತಂತ್ರದ ಮುಂದೆ ಘಟಾನುಘಟಿ ರಾಜಕಾರಣಿಗಳೇ ಶರಣಾಗಿ ಪಕ್ಷಾಂತರ ಮಾಡಿರುವಾಗ, ಎಂಥಾ ಅನಿರೀಕ್ಷಿತ ಬೆಳವಣಿಗೆಗಳನ್ನೂ ತಳ್ಳಿಹಾಕಲಾಗದು. ಬಿಜೆಪಿ ನೇರವಾಗಿ ಕಣಕ್ಕಿಳಿಯುವ ಬದಲು, ಅಧಿಕಾರದ ಹಪಾಹಪಿಯಲ್ಲಿರುವ ಎಐಎಡಿಎಂಕೆಯನ್ನು ದಾಳವಾಗಿ ಬಳಸಿಕೊಳ್ಳುವ ಸಾಧ್ಯತೆ ಹೆಚ್ಚು.

ಒಂದಂತೂ ಸತ್ಯ, ತಮಿಳುನಾಡು ರಾಜಕಾರಣ ಮುಂದಿನ ಐದು ವರ್ಷಗಳಲ್ಲಿ ರೋಚಕಗೊಳ್ಳುತ್ತ ಸಾಗಲಿದೆ.

ಮಾಚಯ್ಯ ಎಂ ಹಿಪ್ಪರಿಗಿ

ರಾಜಕೀಯ ವಿಶ್ಲೇಷಕರು

ಇದನ್ನೂ ಓದಿ- ಸಾವರ್ಕರ್ ಕ್ಷಮಾಭಿಕ್ಷೆಗೆ ಮೊಮ್ಮಗನ ಸಾಕ್ಷಿ

More articles

Latest article

Most read