ದಿಮಾಗಿ ನಕ್ಸಲ್ ಎಂದರೆ ಮೋದಿಗೆ ಬೇಧಿ

ಯಾರೂ ಪ್ರಭುತ್ವವನ್ನು ಪ್ರಶ್ನಿಸಲೇ ಬಾರದು, ಹಾಗೆ ಪ್ರಶ್ನಿಸುವವರೆಲ್ಲಾ ಬೌದ್ದಿಕ ನಕ್ಸಲರು ಎನ್ನುವ ಮೋದಿಯವರ ಮಾತುಗಳೇ ಸಂವಿಧಾನ ವಿರೋಧಿಯಾಗಿದೆ. ಹೀಗೆ  ಠೀಕಿಸುವವರ ಹಕ್ಕನ್ನೇ ಕಿತ್ತುಕೊಳ್ಳುವ ಪ್ರಭುತ್ವವು ಜನರ ಅಭಿಪ್ರಾಯ ವ್ಯಕ್ತಪಡಿಸುವ ಸಂವಿಧಾನಬದ್ಧ ಹಕ್ಕನ್ನೇ ದಮನಿಸುವ ಮೂಲಕ ಸರ್ವಾಧಿಕಾರಿಯಾಗುವ ಎಲ್ಲಾ ಸೂಚನೆಗಳೂ ಕಂಡು ಬರುತ್ತಿವೆ – ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.

ಕೊನೆಗೂ ಒಂದು ವಿಷಯವನ್ನು ಪ್ರಧಾನಿಗಳು ಸ್ಪಷ್ಟಪಡಿಸಿದರು. ಯಾರು ಬುದ್ಧಿಯನ್ನು ಬಳಸಿ ಯೋಚಿಸುತ್ತಾರೋ, ಅನ್ಯಾಯ ಅಸಮಾನತೆಯನ್ನು ಪ್ರಶ್ನಿಸುತ್ತಾರೋ ಅಂತವರೆಲ್ಲಾ ದಿಮಾಗಿ ನಕ್ಸಲ್ ಅಂತ ಕೆಂಪುಕೋಟೆಯಲಿ ನಿಂತು ಹೇಳಿದರು. ಅದರರ್ಥ ವೈಚಾರಿಕತೆ ಇಲ್ಲದವರು, ಪ್ರಶ್ನಿಸದೇ ಇರುವ ಗುಲಾಮರೆಲ್ಲಾ ಅಂಧಭಕ್ತರು ಎಂಬುದನ್ನು ಮೋದಿಯವರು ಪರೋಕ್ಷವಾಗಿ ಒಪ್ಪಿಕೊಂಡಂತಾಯ್ತು.

ಈ ಗುಲಾಮಿ ಅಂಧಭಕ್ತರ ಪಡೆಯ ಅಧಿನಾಯಕನಿಗೆ ವೈಚಾರಿಕ ಪ್ರಜ್ಞೆ ಇರುವವರೆಲ್ಲಾ ದೇಶದ್ರೋಹಿಗಳು, ಪ್ರಶ್ನಿಸುವವರೆಲ್ಲಾ ಧರ್ಮದ್ರೋಹಿಗಳು ಎಂದು ಆರೋಪಿಸುವುದರಲ್ಲೇ ತನ್ನ ಅಸ್ತಿತ್ವ ಇದೆ ಎಂಬುದು ಗೊತ್ತಾಗಿದೆ. ಹೀಗಾಗಿಯೇ ಬುದ್ಧಿ ಇದ್ದವರ ಬಗ್ಗೆ ಅಸಹನೆ ಹೆಚ್ಚಾಗಿದೆ.

ಈಗ ಏನಾಯ್ತು ಅಂದರೆ.. ಆಗಸ್ಟ್ 15 ರ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಪ್ರಧಾನಿ ಮೋದಿಯವರು “ಶಸ್ತ್ರಸಜ್ಜಿತ ನಕ್ಸಲರು ಹೊರಟು ಹೋಗಿದ್ದರೂ ಈ ದಿಮಾಗಿ ನಕ್ಸಲರು ಇನ್ನೂ ಸುತ್ತಮುತ್ತಲೂ ಅಡಗಿಕೊಂಡಿದ್ದಾರೆ” ಎಂದು ಹೇಳಿ ವಿಚಾರವಂತರ ಕುರಿತು ತಮ್ಮ ದ್ವೇಷವನ್ನು ವ್ಯಕ್ತಪಡಿಸಿದರು.

ಯಾವಾಗ ಈ ಹೇಳಿಕೆ ವಿವಾದವನ್ನು ಹುಟ್ಟುಹಾಕಿತೋ, ವಿರೋಧ ಪಕ್ಷಗಳಿಂದ ವಿರೋಧ ಹೆಚ್ಚಾಯಿತೋ ಆಗ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು “ಪ್ರಧಾನಿಗಳು ದಿಮಾಗಿ ನಕ್ಸಲ್ ಎಂದಿರುವುದು ವಿರೋಧ ಪಕ್ಷದ ನಾಯಕರಿಗಲ್ಲ, ಮಾವೋವಾದಿಗಳನ್ನು ಬೆಂಬಲಿಸುವವರಿಗೆ ಹಾಗೂ ಸಂವಿಧಾನವನ್ನು ನಿರಾಕರಿಸುವವರಿಗೆ” ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಸಮರ್ಥಿಕೊಂಡರು. “ದಿಮಾಗಿ ನಕ್ಸಲ್ ಆಗಿರುವುದಕ್ಕೆ ಹೆಮ್ಮೆ ಪಡುತ್ತೇನೆ” ಎಂದು ಕಾಂಗ್ರೆಸ್ಸಿನ ನಾಯಕ ಪಿ.ಚಿದಂಬರಂ ರವರು ತಮ್ಮ ಎಕ್ಸ್ ಖಾತೆಯ ಮೂಲಕ ತಿರುಗೇಟು ನೀಡಿದರು.

ತಮ್ಮ ಜನವಿರೋಧಿತನವನ್ನು ವಿರೋಧಿಸಿ ಪ್ರತಿಭಟಿಸುವವರಿಗೆ ಆಗಾಗ ಹೊಸ ಪದಪುಂಜಗಳ ಮೂಲಕ ನಿಂದಿಸುವುದನ್ನೇ ಮೋದಿಯವರು ತಮ್ಮ ಕಾಯಕವನ್ನಾಗಿಸಿಕೊಂಡಿದ್ದಾರೆ. ಪ್ರಭುತ್ವವನ್ನು ಪ್ರಶ್ನಿಸುವವರನ್ನು ನಗರ ನಕ್ಸಲ್ ಎಂದೂ, ಸರಕಾರದ ನೀತಿಗಳನ್ನು ವಿರೋಧಿಸುವವರನ್ನು ಆಂಟಿ ನ್ಯಾಶನಲ್ ಎಂದೂ, ಪ್ರತಿಭಟಿಸಿದ ವಿದ್ಯಾರ್ಥಿಗಳನ್ನ ಹಾಗೂ ಅವರ ಸಮರ್ಥಕರನ್ನ “ತುಕಡೆ ತುಕಡೇ ಗ್ಯಾಂಗ್” ಎಂದೂ, ಕರಾಳ ಕಾನೂನು ವಿರೋಧಿಸಿ ಹೋರಾಟನಿರತ ರೈತರನ್ನು ಆಂದೋಲನಜೀವಿಗಳು, ಖಲಿಸ್ಥಾನಿಗಳು ಎಂದೂ ನಾಮಕರಣ ಮಾಡುತ್ತಾ ಬಂದಿರುವ ಮೋದಿಯವರು ಈಗ “ದಿಮಾಗಿ ನಕ್ಸಲ್” ಎನ್ನುವ ಮತ್ತೊಂದು ಹೊಸ ಪದವನ್ನು ಆನ್ವೇಷಿಸಿ ಪ್ರಯೋಗಿಸಿದ್ದಾರೆ.

ದಿಮಾಗಿ ನಕ್ಸಲ್ – ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಪ್ರಧಾನಿ ಮೋದಿ

ಅಂಧಭಕ್ತರನ್ನು ಹೊರತುಪಡಿಸಿ, ಸರಕಾರದ ಜನವಿರೋಧಿ ನೀತಿಗಳನ್ನು ಪ್ರಶ್ನಿಸುವ ಯುವಜನರು, ವಿದ್ಯಾರ್ಥಿಗಳು, ಲೇಖಕರು, ಪ್ರಜ್ಞಾವಂತರು, ಪ್ರಗತಿಪರರು, ಹೋರಾಟಗಾರರು, ವಿಮರ್ಶಕರು, ವಿಶ್ಲೇಷಕರುಗಳೆಲ್ಲಾ ಮೋದಿಯವರ ‘ದಿಮಾಗಿ ನಕ್ಸಲ್’ ಕ್ಯಾಟಗರಿಯಲ್ಲಿ ಬರುತ್ತಾರೆ.

ಅಭಿವ್ಯಕ್ತಿ ಸ್ವಾತಂತ್ರ್ಯ ಎನ್ನುವುದು ಪ್ರತಿಯೊಬ್ಬ ನಾಗರಿಕರಿಗೂ ಸಂವಿಧಾನ ಕೊಟ್ಟ ಹಕ್ಕಾಗಿದೆ. ದಾರಿ ತಪ್ಪಿದ ಪ್ರಭುತ್ವವನ್ನು ಪ್ರಶ್ನಿಸುವುದು ಪ್ರಜಾಪ್ರಭುತ್ವದ ಅಂತಸತ್ವವಾಗಿದೆ.

ಇಷ್ಟಕ್ಕೂ ಈ ನಕ್ಸಲರು ಅಂದರೆ ಯಾರು?

ಶಸ್ತ್ರಗಳ ಮೂಲಕ ಬಂಡವಾಳಶಾಹಿ, ಜಮೀನ್ದಾರಿ ವ್ಯವಸ್ಥೆಯ ವಿರುದ್ಧ ಸಂಘಟನಾತ್ಮಕವಾಗಿ ಹೋರಾಡುತ್ತಿದ್ದವರು ನಕ್ಸಲರು. ಈ ನಕ್ಸಲರು ಹಿಡಿದ ದಾರಿಯ ಬಗ್ಗೆ ತಕರಾರುಗಳು ಇರಬಹುದಾದರೂ, ಅವರ ಸಮಸಮಾಜ ನಿರ್ಮಾಣದ ಗುರಿ ಮತ್ತು  ತಾರತಮ್ಯರಹಿತ ದೇಶ ಕಟ್ಟುವ ಉದ್ದೇಶ ಪ್ರಶ್ನಾತೀತ. ಪ್ರಭುತ್ವದ ಹಿಂಸೆಗೆ ಪ್ರತಿಯಾಗಿ ಪ್ರತಿಹಿಂಸೆಯ ಹಾದಿ ಹಿಡಿದ ನಕ್ಸಲರ ದಾರಿಯನ್ನು ವಿರೋಧಿಸಬಹುದಾದರೂ ಅವರ ಸಾಮಾಜಿಕ ನ್ಯಾಯದ ಆಶಯಗಳನ್ನು  ವಿರೋಧಿಸಲಾಗದು.

ಬುದ್ಧ ಬಸವ ಗಾಂಧಿ ಅಂಬೇಡ್ಕರ್ ರಂತಹ ಮಹಾನ್ ಚೇತನಗಳೇ ತಮ್ಮದೇ ಆದ ರೀತಿಯಲ್ಲಿ ಅಸಮಾನತೆ ಹಾಗೂ ಅನ್ಯಾಯವನ್ನು ವಿರೋಧಿಸಿದ್ದಾರೆ. ಅದನ್ನೇ ನಕ್ಸಲರೂ ಮಾಡಿದ್ದಾರೆ. ಆದರೆ ಮತ್ತೆ ಸಾಮಾಜಿಕ ತಾರತಮ್ಯವನ್ನೇ ಜಾರಿಗೆ ತರಲು ಬಯಸುವ ಈ ಹಿಂದುತ್ವವಾದಿ ಸಂಘಿ ಮನಸ್ಥಿತಿಯವರು ನಕ್ಸಲ್ ಹೆಸರು ಹೇಳಿದರೆ ಹಾವು ತುಳಿದವರಂತೆ ಕೆರಳುತ್ತಾರೆ. ಬುಡಕ್ಕೆ ಬೆಂಕಿ ಬಿದ್ದಂತೆ ಆಡುತ್ತಾರೆ. ಯಾಕೆಂದರೆ ನಕ್ಸಲರು ವೈಚಾರಿಕತೆಯನ್ನು ಬಿತ್ತುತ್ತಾರೆ, ಮತಾಂಧತೆ ಧರ್ಮಾಂಧತೆಗಳನ್ನು ಪ್ರಶ್ನಿಸುತ್ತಾರೆ, ಅವೈಚಾರಿಕತೆಯ ವಿರುದ್ದ ಜನಜಾಗೃತಿ ಮಾಡುತ್ತಾರೆ.

ಅದರಿಂದಾಗಿಯೇ ನಕ್ಸಲರು ಎಂದರೆ ದೇಶದ್ರೋಹಿಗಳು ಎಂದು ಜನರನ್ನು ಅದರಲ್ಲೂ ಅಂಧಭಕ್ತರನ್ನು, ಸಂಘಿಗಳನ್ನು ಹಾಗೂ ಅವರ ಸಮರ್ಥಕರನ್ನು ನಂಬಿಸಲು ಈ ಹಿಂದುತ್ವವಾದಿಗಳು ಸತತವಾಗಿ ಪ್ರಯತ್ನಿಸುತ್ತಲೇ ಇರುತ್ತಾರೆ. ಅದರ ನೇತೃತ್ವವನ್ನು ಪ್ರಧಾನಿ ಮೋದಿಯಂತವರು ಮುನ್ನೆಡೆಸುತ್ತಿದ್ದಾರೆ. ಬೌದ್ಧಿಕ ನೆಲೆಯಲ್ಲಿ ಪ್ರಶ್ನಿಸುವವರನ್ನೆಲ್ಲಾ ನಕ್ಸಲ್ ಎಂದು ಆರೋಪಿಸುತ್ತಾರೆ. ನಕ್ಸಲ್ ಎಂದು ಆರೋಪಿಸುತ್ತಾ ವಿಚಾರವಂತರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಪ್ರಯತ್ನವನ್ನು ಈ ದಿಮಾಗಿ ಹಿಟ್ಲರ್ ಸಂತಾನಗಳು, ಈ ದಿಮಾಗಿ ಮುಸಲೋನಿ ಸಂತತಿಗಳು ಮಾಡುತ್ತಲೇ ಇರುತ್ತಾರೆ.

ಬಾಬಾಸಾಹೇಬರು ಸಂವಿಧಾನದ 19 (1) (ಎ) ಅಡಿಯಲ್ಲಿ ಪ್ರತಿಯೊಬ್ಬರಿಗೂ “Freedom of speech and Expression” ಅಂದರೆ ಮಾತಾಡುವ ಹಾಗೂ ಅದನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯವನ್ನು ಕೊಟ್ಟಿದ್ದಾರೆ.  ಭಾರತದ ನಾಗರೀಕರು ನಿರ್ಭೀತಿಯಿಂದ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಹಕ್ಕನ್ನು ಹೊಂದಿರುತ್ತಾರೆ. ಸರಕಾರದ ನೀತಿ ನಿರ್ಧಾರಗಳು ಜನವಿರೋಧಿಯಾಗಿದ್ದರೆ ಅದನ್ನು ಠೀಕಿಸುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ನಮ್ಮ ಸಂವಿಧಾನದ ಬುನಾದಿಯೇ ಸಂವಾದ ಮತ್ತು ಚರ್ಚೆಯಾಗಿದೆ.

ಯಾರೂ ಪ್ರಭುತ್ವವನ್ನು ಪ್ರಶ್ನಿಸಲೇ ಬಾರದು, ಹಾಗೆ ಪ್ರಶ್ನಿಸುವವರೆಲ್ಲಾ ಬೌದ್ದಿಕ ನಕ್ಸಲರು ಎನ್ನುವ ಮೋದಿಯವರ ಮಾತುಗಳೇ ಸಂವಿಧಾನ ವಿರೋಧಿಯಾಗಿದೆ. ಹೀಗೆ  ಠೀಕಿಸುವವರ ಹಕ್ಕನ್ನೇ ಕಿತ್ತುಕೊಳ್ಳುವ ಪ್ರಭುತ್ವವು ಜನರ ಅಭಿಪ್ರಾಯ ವ್ಯಕ್ತಪಡಿಸುವ ಸಂವಿಧಾನಬದ್ಧ ಹಕ್ಕನ್ನೇ ದಮನಿಸುವ ಮೂಲಕ ಸರ್ವಾಧಿಕಾರಿಯಾಗುವ ಎಲ್ಲಾ ಸೂಚನೆಗಳೂ ಕಂಡು ಬರುತ್ತಿವೆ.  ಅಂಧಭಕ್ತರೇ ಇರುವ ದೇಶವನ್ನು ಕಟ್ಟುವ ನಿಟ್ಟಿನಲ್ಲಿ ಮನುವಾದಿ ಶಕ್ತಿಗಳ ಪ್ರಯತ್ನ ಮುಂದುವರೆದಿದೆ.

ಹೌದು.. ನಾನು ಬೌದ್ಧಿಕ ನಕ್ಸಲ್, ನಾನು ವಿಚಾರವಾದಿ ನಕ್ಸಲ್, ನಾನು ಬುದ್ಧಿ ಇರುವ ನಕ್ಸಲ್, ನಾನು ಪ್ರಶ್ನಿಸುವ ನಕ್ಸಲ್ ಎಂದು ಹೆಮ್ಮೆಯಿಂದ ಹೇಳಬೇಕಾಗಿದೆ. “ಪ್ರಶ್ನಿಸದೇ ಏನನ್ನೂ ನಂಬಬೇಡ” ಎಂದು ಹೇಳಿದ ಬುದ್ದನ ಪ್ರಜ್ಞೆಯನ್ನು ಹೊಂದಿರುವ ಎಲ್ಲರೂ ಸರಕಾರದ ಜನವಿರೋಧಿತನವನ್ನು ಠೀಕಿಸಲೇಬೇಕಿದೆ. ಸಂವಿಧಾನದ ಆಶಯಗಳ ವಿರುದ್ಧ ಸರ್ವಾಧಿಕಾರಿ ವರ್ತನೆಯನ್ನು ಖಂಡಿಸಲೇಬೇಕಿದೆ. ಈ ದೇಶ ಪ್ರಜಾಪ್ರಭುತ್ವ ದೇಶವಾಗಿಯೇ ಮುಂದುವರೆಯಬೇಕಿದೆ.

ಶಶಿಕಾಂತ ಯಡಹಳ್ಳಿ

ಇವರು ಕನ್ನಡದ ಪ್ರಮುಖ ರಂಗಕರ್ಮಿಗಳು, ಪತ್ರಕರ್ತರು, ಅಂಕಣಕಾರರು. ಪ್ರಚಲಿತ ಸಾಮಾಜಿಕ ಹಾಗೂ ರಾಜಕೀಯ  ವಿದ್ಯಮಾನಗಳ ಬಗ್ಗೆ ತಮ್ಮ ವಿಚಾರಗಳನ್ನು ಪ್ರಖರವಾಗಿ ಮಂಡಿಸುತ್ತಾ ಬಂದಿದ್ದಾರೆ.

ಇದನ್ನೂ ಓದಿ- ಸಂಪಾದಕೀಯ | ಮೋದಿ ಹುಟ್ಟುಹಾಕಿದ ಹೊಸ ಪದ -ದಿಮಾಗೀ ನಕ್ಸಲರು: ಭಿನ್ನಮತವನ್ನು ಹತ್ತಿಕ್ಕುವ ಹೊಸ ಪರಿಭಾಷೆ

More articles

Latest article

Most read