ದಕ್ಷಿಣ ಭಾರತದ ರಾಜ್ಯಗಳು ಒಗ್ಗಟ್ಟಾಗಿರಬೇಕು: ಸಿಎಂ ಡಿ.ಕೆ ಶಿವಕುಮಾರ್

ಬೆಂಗಳೂರು : ಪ್ರಧಾನಿಗಳು ದೇಶವನ್ನು ಆರ್ಥಿಕ ಶಕ್ತಿಯನ್ನಾಗಿಸಬೇಕು ಅಂದರೆ, ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳು ಒಗ್ಗಟ್ಟಾಗಿದ್ದರೆ ಮಾತ್ರ ಸಾಧ್ಯ. ನಮ್ಮಲ್ಲಿರುವ ಸಾಮಥ್ರ್ಯ ಸಾಭೀತುಪಡಿಸಲು ಸಾಧ್ಯ ಎಂದು ಸಿಎಂ ಡಿ ಕೆ ಶಿವಕುಮಾರ್ ಹೇಳಿದರು.

ಇಂದು ವಿಧಾನಸಭೆಯ ಚರ್ಚೆಯ ಸಮಯದಲ್ಲಿ ಮಾತನಾಡಿದ ಅವರು ಪ್ರಧಾನಿಗಳು ಮೈಸೂರಿಗೆ ಬಂದಿದ್ದಾಗ. ಅವರ ಬಳಿ, ರಾಜ್ಯದ ಹಿತಕ್ಕಾಗಿ ಏನೇನು ಕೆಲಸ ಆಗಬೇಕು ಎನ್ನುವುದನ್ನು ಮನವಿ ರೂಪದಲ್ಲಿ ಸಲ್ಲಿಸಿದ್ದೇನೆ.. ಇತಿಹಾಸದಲ್ಲಿ ಏನೇನೆಲ್ಲಾ ಆಗಿದೆ ಎನ್ನುವುದನ್ನು ಅವರ ಗಮನಕ್ಕೆ ತಂದಿದ್ದೇನೆ. ನಮ್ಮಲ್ಲಿರುವ ಟ್ಯಾಲೆಂಟ್ ಪೂಲ್ ಬಗ್ಗೆ, ಅದರ ಶಕ್ತಿಯ ಬಗ್ಗೆ ಅವರ ಗಮನ ಸೆಳೆದಿದ್ದೇನೆ ಎಂದರು.

ಅಧಿಕಾರ ಯಾವತ್ತಿಗೂ ಶಾಶ್ವತ ಅಲ್ಲ ಅನ್ನೋ ಸತ್ಯ ನನಗೆ ತಿಳಿದಿದೆ. ನನ್ನ ಪಾಲಿಗೆ ದೊರೆತ ಸ್ಥಾನಕ್ಕೆ ಗೌರವ ಸಲ್ಲಿಸುತ್ತಾ ಬಂದಿದ್ದರಿಂದ ಇವತ್ತು ಈ ಸ್ಥಾನದಲ್ಲಿ ಕುಳಿತಿದ್ದೇನೆ. ನನ್ನ ಹೃದಯ ನಿಷ್ಕಲ್ಮಶವಾಗಿದೆ. ಮನಸ್ಸಿನಲ್ಲಿ ಯಾವುದೇ ದ್ವೇμÁಸೂಯೆಗಳು ಇಲ್ಲದೆ ಈ ನಾಡಿನ ಜನರ ಸೇವೆ ಮಾಡಬೇಕು ಅಂತ ಸಂಕಲ್ಪ ಮಾಡಿದ್ದೇನೆ ಎಂದರು.

ರಾಜಕೀಯದಲ್ಲಿ ಅಧಿಕಾರ ದುರಪಯೋಗ ಆಗಬಾರದು. ರಾಜ್ಯದ ಹಿತಾಸಕ್ತಿಗೆ ಎಲ್ಲರೂ ಬಹಳ ಮುಖ್ಯ. ವಿರೋಧ ಪಕ್ಷಗಳ ಟೀಕೆ, ಟಿಪ್ಪಣಿಗಳು, ನಮ್ಮವರ ಸಲಹೆಗಳು ಎಲ್ಲವೂ ಬೇಕು. ನಾವೆಲ್ಲ ಸೇರಿ ಈ ರಾಜ್ಯದ ಹಿತಾಸಕ್ತಿಯಾಗಿ ಕೆಲಸ ಮಾಡೋಣ. ಎಲ್ಲರ ಉದ್ದೇಶ ಒಂದೇ. ಜನಸೇವೆ ಎಂದರು.

More articles

Latest article

Most read