ನೆರೆಮನೆಯ ಟಿವಿಯಲ್ಲಿ ರವಿಶಾಸ್ತ್ರಿ ಆರು ಸಿಕ್ಸರ್‌ ಹೊಡೆಯುವುದನ್ನು ನೋಡಿದ್ದೆ: ಸ್ಮೃತಿ ಇರಾನಿ ಸುಳ್ಳು ಬಯಲು

ಹೊಸದಿಲ್ಲಿ ಆ.18 : ಮಾಜಿ ಕೇಂದ್ರ ಸಚಿವೆ ಹಾಗೂ ಬಿಜೆಪಿ ನಾಯಕಿ ಸ್ಮೃತಿ ಇರಾನಿ ಅವರ ಹಳೆಯ ಕ್ರಿಕೆಟ್‌ ನೆನಪೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. 1985ರಲ್ಲಿ ರವಿಶಾಸ್ತ್ರಿ ಒಂದೇ ಓವರ್‌ನಲ್ಲಿ ಆರು ಸಿಕ್ಸರ್‌ ಬಾರಿಸಿದ ಐತಿಹಾಸಿಕ ಕ್ಷಣವನ್ನು ತಾವು ನೆರೆಮನೆಯವರ ಟಿವಿಯಲ್ಲಿ ವೀಕ್ಷಿಸಿದ್ದಾಗಿ ಸ್ಮೃತಿ ಇರಾನಿ ಹೇಳಿಕೊಂಡಿದ್ದರು. ಆದರೆ, ಆ ಪಂದ್ಯವೇ ಟಿವಿಯಲ್ಲಿ ಪ್ರಸಾರವಾಗಿರಲಿಲ್ಲ

ಆಜ್‌ತಕ್‌ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಸ್ಮೃತಿ ಇರಾನಿ, ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡು, ರವಿಶಾಸ್ತ್ರಿ ಆರು ಸಿಕ್ಸರ್‌ ಬಾರಿಸಿದಾಗ ತಾವು ನೆರೆಮನೆಯ ಮನೆಯ ಕಿಟಕಿ ಬಳಿ ನಿಂತು ಟಿವಿಯಲ್ಲಿ ಪಂದ್ಯ ವೀಕ್ಷಿಸುತ್ತಿದ್ದೆವು ಎಂದು ಹೇಳಿದ್ದರು.

“ರವಿಶಾಸ್ತ್ರಿ ಆರು ಸಿಕ್ಸರ್‌ ಬಾರಿಸಿದಾಗ ನಾವು ಅಲ್ಲಿ ನೋಡುತ್ತಿದ್ದೆವು. ‘ಅರೆ, ದೇಖೋ ಶಾಸ್ತ್ರಿ ನೆ ಛೆ ಚಕ್ಕೆ ಮಾರೆ’ ಎಂದು ಕೂಗುತ್ತಾ ಸಂಭ್ರಮಿಸಿದ್ದೆವು” ಎಂಬ ಅರ್ಥದಲ್ಲಿ ಅವರು ತಮ್ಮ ನೆನಪನ್ನು ಹಂಚಿಕೊಂಡಿದ್ದರು.

ಆದರೆ, ಈ ನೆನಪಿಗೆ ವಿರುದ್ಧವಾದ ಪ್ರಮುಖ ಅಂಶವೊಂದನ್ನು ರವಿಶಾಸ್ತ್ರಿ ಅವರೇ ಹೇಳಿಕೊಂಡಿರುವ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಇಂದಿಗೂ ನೋಡಬಹುದು.

1985ರ ಜನವರಿ 10ರಂದು ಮುಂಬೈ ಪರ ಬರೋಡಾ ವಿರುದ್ಧದ ರಣಜಿ ಪಂದ್ಯದಲ್ಲಿ ರವಿಶಾಸ್ತ್ರಿ, ಬೌಲರ್‌ ತಿಲಕ್‌ ರಾಜ್‌ ಅವರ ಒಂದೇ ಓವರ್‌ನ ಆರು ಎಸೆತಗಳನ್ನೂ ಸಿಕ್ಸರ್‌ಗೆ ಅಟ್ಟಿದ್ದರು. ಆ ಮೂಲಕ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಒಂದೇ ಓವರ್‌ನಲ್ಲಿ ಆರು ಸಿಕ್ಸರ್‌ ಬಾರಿಸಿದ ಗ್ಯಾರಿ ಸೋಬರ್ಸ್‌ ಅವರ ದಾಖಲೆಯನ್ನು ಸರಿಗಟ್ಟಿದ್ದರು.

ಆದರೆ, ಆ ಐತಿಹಾಸಿಕ ಸಾಧನೆ ನಡೆದ ಪಂದ್ಯಕ್ಕೆ ಟೆಲಿವಿಷನ್‌ ಪ್ರಸಾರವೇ ಇರಲಿಲ್ಲ ಎಂದು ರವಿಶಾಸ್ತ್ರಿ ಸ್ಪಷ್ಟಪಡಿಸಿದ್ದಾರೆ.

2025ರಲ್ಲಿ ವಾಂಖೆಡೆ ಕ್ರೀಡಾಂಗಣದ 50ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ತಮ್ಮ ಆರು ಸಿಕ್ಸರ್‌ಗಳ ನೆನಪನ್ನು ಹಂಚಿಕೊಂಡಿದ್ದ ರವಿಶಾಸ್ತ್ರಿ, “When I hit six sixes there was no television or commentary” ಎಂದು ಹೇಳಿದ್ದರು. ಅಂದರೆ, ತಾವು ಆರು ಸಿಕ್ಸರ್‌ ಬಾರಿಸಿದಾಗ ಅಲ್ಲಿ ಟಿವಿ ಪ್ರಸಾರವಾಗಲಿ, ಕಾಮೆಂಟರಿಯಾಗಲಿ ಇರಲಿಲ್ಲ ಎಂಬುದು ಅವರ ಹೇಳಿಕೆ.

ಇದೇ ಅಂಶ ಇದೀಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯ ಕೇಂದ್ರವಾಗಿದೆ. ಟಿವಿಯಲ್ಲಿ ಪಂದ್ಯ ಪ್ರಸಾರವೇ ಆಗಿರಲಿಲ್ಲ ಎಂದಾದರೆ, ಸ್ಮೃತಿ ಇರಾನಿ ನೆರೆಮನೆಯವರ ಟಿವಿಯಲ್ಲಿ ಆರು ಸಿಕ್ಸರ್‌ಗಳನ್ನು ನೇರವಾಗಿ ನೋಡಿದ್ದು ಹೇಗೆ? ಎಂಬ ಪ್ರಶ್ನೆಯನ್ನು ಹಲವರು ಎತ್ತಿದ್ದಾರೆ.

1985ರಲ್ಲಿ ದೇಶೀಯ ರಣಜಿ ಪಂದ್ಯಗಳ ನೇರ ಟಿವಿ ಪ್ರಸಾರ ಇಂದಿನ ಮಟ್ಟದಲ್ಲಿ ಇರಲಿಲ್ಲ ಎಂಬುದನ್ನೂ ಹಲವು ವರದಿಗಳು ಉಲ್ಲೇಖಿಸಿವೆ. ಇದೇ ಕಾರಣಕ್ಕೆ ಸ್ಮೃತಿ ಇರಾನಿ ಅವರ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ‘ಫ್ಯಾಕ್ಟ್‌ಚೆಕ್’ಗೆ ಒಳಗಾಗಿದೆ.

ವಿಶೇಷವೆಂದರೆ, 1985ರಲ್ಲಿ ನಡೆದ ರವಿಶಾಸ್ತ್ರಿ ಅವರ ಈ ಸಾಧನೆ ಕ್ರಿಕೆಟ್‌ ಇತಿಹಾಸದ ಅಪರೂಪದ ದಾಖಲೆ. ಆದರೆ ಆ ಕ್ಷಣವನ್ನು ಟಿವಿಯಲ್ಲಿ ನೋಡಿದ್ದೇನೆ ಎಂಬ ಸ್ಮೃತಿ ಇರಾನಿ ಅವರ ಬಾಲ್ಯದ ನೆನಪು ಇದೀಗ “ಪಂದ್ಯವೇ ಪ್ರಸಾರವಾಗಿರಲಿಲ್ಲ” ಎಂಬ ರವಿಶಾಸ್ತ್ರಿ ಅವರ ಹೇಳಿಕೆಯೊಂದಿಗೆ ಮುಖಾಮುಖಿಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯ ಹಾಗೂ ಚರ್ಚೆಗೆ ಕಾರಣವಾಗಿದೆ.

More articles

Latest article

Most read