ಚೆನ್ನೈ : ಅಂತೂ ಇಂತೂ ಸರ್ಕಸ್ ಮಾಡಿ ಕೊನೆಗೂ ಬಹುಮತಗಳಿಸುವಲ್ಲಿ ವಿಜಯ್ ವಿಜಯರಾಗಿದ್ದಾರೆ.
ಮುಂದಿನ ಸರ್ಕಾರ ರಚನೆಗೆ ಸಂಬಂಧಿಸಿದಂತೆ ಮುಂದುವರಿದ ಬಿಕ್ಕಟ್ಟನ್ನು ಪರಿಹರಿಸಲು ನಟ ವಿಜಯ್ ಮತ್ತು ತಮಿಳುನಾಡು ರಾಜ್ಯಪಾಲ ಆರ್.ವಿ. ಅರ್ಲೇಕರ್ ಅವರನ್ನು ಮೂರನೇ ಬಾರಿಗೆ ಸಂಜೆ 6 ಗಂಟೆಗೆ ಭೇಟಿಯಾಗಲಿದ್ದಾರೆ.
ಕಾಂಗ್ರೆಸ್ನಿಂದ ಐದು ಮತ್ತು ವಿದುತಲೈ ಚಿರುತೈಗಲ್ ಕಚ್ಚಿ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ವಾದಿ) ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದಿಂದ ತಲಾ ಎರಡು ಸ್ಥಾನಗಳನ್ನು ಹೊಂದಿವೆ. ಬಹುಮತದ 118 ಸ್ಥಾನಗಳನ್ನು ದಾಟುವ ಮೂಲಕ ವಿಜಯ್ ಅಂತಿಮವಾಗಿ ಹಕ್ಕು ಮಂಡಿಸಲು ಸಂಖ್ಯೆಗಳನ್ನು ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಟಿವಿಕೆಗೆ ಎಡಪಕ್ಷಗಳು ಬೆಂಬಲ ನೀಡಿದ್ದು, ಜೊತೆಗೆ ಉಪಮುಖ್ಯಮಂತ್ರಿ ಸ್ಥಾನಕ್ಕೂ ಆಗ್ರಹಿಸಿವೆ ಎನ್ನಲಾಗಿದೆ.
ಎರಡೂ ಬಾರಿಯೂ ಅರ್ಲೇಕರ್ ವಿಜಯ್ ಅವರ ಸರ್ಕಾರ ರಚಿಸುವ ಹಕ್ಕನ್ನು ತಿರಸ್ಕರಿಸಿದ್ದರು, ಟಿವಿಕೆ ನಾಯಕನಿಗೆ ಸದನದಲ್ಲಿ ಅಗತ್ಯ ಬೆಂಬಲದ ಪತ್ರದೊಂದಿಗೆ ಬರುವಂತೆ ಸೂಚಿಸಿದ್ದರು.

