ತಮಿಳುನಾಡು ಮುಖ್ಯಮಂತ್ರಿಯಾಗಿ ವಿಜಯ್‌ ನಾಳೆ ಪ್ರಮಾಣ ವಚನ ಸ್ವೀಕಾರ

ಚೆನ್ನೈ :  ತಮಿಳುನಾಡಿನಲ್ಲಿ ಸ್ಥಿರ ಸರ್ಕಾರ ರಚಿಸಲು ಅಗತ್ಯವಿರುವ 118 ಬಹುಮತ ಸಂಖ್ಯೆಗಳನ್ನು ವಿಜಯ್ ನೇತೃತ್ವದ ಟಿವಿಕೆ ಶುಕ್ರವಾರ ಪಡೆಯುವಲ್ಲಿ ಯಶಸ್ವಿಯಾಗಿದೆ.
ಮೂರನೇ ಬಾರಿಗೆ ಲೋಕಭವನಕ್ಕೆ ತೆರಳಿ ರಾಜ್ಯಪಾಲರಿಗೆ ಬೆಂಬಲದ ಪತ್ರವನ್ನು ನೀಡಿದ್ದಾರೆ. ಹೀಗಾಗಿ, ನಾಳೆ ಮುಖ್ಯಮಂತ್ರಿಯಾಗಿ ವಿಜಯ್‌ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಹೆಚ್ಚಾಗಿದೆ. ಈ ನಡುವೆ ಟಿವಿಕೆ ಕಾರ್ಯಕರ್ತರು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ.
ಸರ್ಕಾರ ರಚನೆಗೆ ರಾಜ್ಯಪಾಲರು ಹಸಿರು ನಿಶಾನೆ ತೋರಿದ್ದು, ನಾಳೆ ಚೆನ್ನೈನ ನೆಹರು ಕ್ರೀಡಾಂಗಣದಲ್ಲಿ ಪದಗ್ರಹಣ ಮಾಡಲಿದ್ದಾರೆ, ಪ್ರಮಾಣ ವಚನ ಸಮಾರಂಭಕ್ಕೆ ಮಲ್ಲಿಕಾರ್ಜುನ ಖರ್ಗೆ,

ಎಡಪಕ್ಷಗಳ ಬೆಂಬಲಕ್ಕೆ ಧನ್ಯವಾದವನ್ನು ವಿಜಯ್‌ ತಿಳಿಸಿದ್ದಾರೆ.
ಸಿಪಿಐ(ಎಂ), ಸಿಪಿಐ ಮತ್ತು ವಿಸಿಕೆ ಎಂಬ ಸಣ್ಣ ಪಕ್ಷಗಳ ಬೆಂಬಲದ ನಂತರ ಈ ಸಂಖ್ಯೆಗಳು ದೊರೆತಿವೆ. ಮೇ 4 ರಂದು ವಿಧಾನಸಭಾ ಚುನಾವಣೆಯ ಫಲಿತಾಂಶಗಳು ಪ್ರಕಟವಾದಾಗಿನಿಂದ ತಮಿಳುನಾಡು ಸರ್ಕಾರ ರಚನೆಯ ಬಗ್ಗೆ ಇದ್ದ ಅನಿಶ್ಚಿತತೆಗೆ ಇದು ಅಂತ್ಯ ಹಾಡಿದೆ. ಏತನ್ಮಧ್ಯೆ, ಟಿವಿಕೆ ಜಂಟಿ ಪ್ರಧಾನ ಕಾರ್ಯದರ್ಶಿ ಸಿಟಿಆರ್ ನಿರ್ಮಲ್ ಕುಮಾರ್ ಚೆನ್ನೈನಲ್ಲಿರುವ ಸಿಪಿಐ ಪ್ರಧಾನ ಕಚೇರಿಯಲ್ಲಿದ್ದಾರೆ. ತಮಿಳುನಾಡಿನಲ್ಲಿ ಸರ್ಕಾರ ರಚನೆಗಾಗಿ ಟಿವಿಕೆಗೆ ಭಾರತೀಯ ಕಮ್ಯುನಿಸ್ಟ್ ಪಕ್ಷವು ಬೇಷರತ್ತಾದ ಬೆಂಬಲ ನೀಡಿದೆ. 

ಮೇ 4 ರಂದು ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ನಂತರ ಅನಿಶ್ಚಿತತೆಯಲ್ಲಿದ್ದ ತಮಿಳುನಾಡು ರಾಜ್ಯದಲ್ಲಿ ಸರ್ಕಾರ ರಚನೆಗಾಗಿ ಟಿವಿಕೆ ಮುಖ್ಯಸ್ಥ ವಿಜಯ್ ಇಂದು ಸಂಜೆ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರನ್ನು ಭೇಟಿ  ಮಾಡಿದ್ದಾರೆ. ಟಿವಿಕೆ ಅತಿ ಹೆಚ್ಚು ಸ್ಥಾನಗಳನ್ನು ಪಡೆದಿದ್ದರೂ, ಅಗತ್ಯವಿರುವ 118 ಸ್ಥಾನಗಳನ್ನು ಗಳಿಸದ ಕಾರಣ ಸರ್ಕಾರ ರಚನೆಗೆ ಹಕ್ಕು ಮಂಡಿಸಲು ಸಾಧ್ಯವಾಗಿರಲಿಲ್ಲ. 

ಟಿವಿಕೆ 108 ಸ್ಥಾನಗಳನ್ನು ಪಡೆದಿದ್ದರೂ, ಕಾಂಗ್ರೆಸ್ ತನ್ನ ಐದು ಸ್ಥಾನಗಳೊಂದಿಗೆ ಮೈತ್ರಿ ಮಾಡಿಕೊಳ್ಳುವುದಾಗಿ ಘೋಷಿಸಿತು, ಮೈತ್ರಿಕೂಟದಿಂದ ಕಾಂಗ್ರೆಸ್‌ ಡಿಎಂಕೆಯ ಅಸಮಾಧಾನಕ್ಕೆ ಕಾರಣವಾಯಿತು.

ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ವಿಜಯ್ ಅವರನ್ನು ಸರ್ಕಾರ ರಚಿಸಲು ಆಹ್ವಾನಿಸದಿರುವುದನ್ನು ಆಕ್ಷೇಪಿಸಿ ಟಿವಿಕೆ ಬೆಂಬಲಿಗರು ಮತ್ತು ಕಾಂಗ್ರೆಸ್ ಕಾರ್ಯಕರ್ತರ ನೇತೃತ್ವದಲ್ಲಿ ಶುಕ್ರವಾರ ತಮಿಳುನಾಡಿನಲ್ಲಿ ಪ್ರತಿಭಟನೆಗಳನ್ನು ನಡೆಸಿದರು. 

More articles

Latest article

Most read