ಶೋಭಕ್ಕ ಮತ್ತು ಸೂಚ್ಯಂಕ

ಇತ್ತೀಚೆಗೆ ರಿಪೋರ್ಟರ್ಸ್ ವಿತೌಟ್‌ ಬಾರ್ಡರ್ಸ್ (ಆರ್ ಎಸ್ ಎಫ್‌) ಅಂತಾರಾಷ್ಟ್ರೀಯ ಸಂಸ್ಥೆ ಬಿಡುಗಡೆ ಮಾಡಿದ ಜಾಗತಿಕ ಪತ್ರಿಕಾ ಸ್ವಾತಂತ್ರ್ಯಸೂಚ್ಯಂಕ ಪಟ್ಟಿಯಲ್ಲಿ ಭಾರತವು 151ನೇ ಸ್ಥಾನದಿಂದ 157ನೇ ಸ್ಥಾನಕ್ಕೆ ಕುಸಿದಿದೆ. ದೇಶದಲ್ಲಿ ನಡೆಯುವ ಪತ್ರಿಕಾ ಸ್ವಾತಂತ್ರ್ಯದ ದಮನ, ಪತ್ರಕರ್ತರ ಮೇಲಿನ ಹಲ್ಲೆ, ವೃತ್ತಿಧರ್ಮ ಮಾನದಂಡಗಳ ಅಧಃಪತನ, ಪತ್ರಿಕಾ ಪ್ರಕಟಣೆ ಅಥವಾ ವೆಬ್‌ಸೈಟ್‌ಗಳ ಮೇಲೆ ನಿರ್ಬಂಧ ಅಥವಾ ಸೆನ್ಸಾರ್‍‌ಶಿಪ್‌ ಇಂತಹ ಹಲವು ಮಾನದಂಡಗಳನ್ನು ಪರಿಗಣಿಸಿ ಈ ರ್‍ಯಾಂಕಿಂಗ್‌ ನೀಡಲಾಗುತ್ತೆ. ದುರಂತವೆಂದರೆ ನಮ್ಮ ಭಾರತವು, ಯುದ್ಧಪೀಡಿತ ಪ್ಯಾಲೆಸ್ತೀನ್‌ (156)ಗಿಂತ ಕೆಳಗಿದೆ. ಪಾಕಿಸ್ತಾನ (153) ಮತ್ತು ಬಾಂಗ್ಲಾದೇಶ (152)ಗಳ ಪತ್ರಿಕಾ ಸ್ವಾತಂತ್ರ್ಯ ನಮಗಿಂತ ಉತ್ತಮವಿದೆ! – ಮಾಚಯ್ಯ ಎಂ ಹಿಪ್ಪರಿಗಿ

ನಿನ್ನೆ ಸೋಷಿಯಲ್‌ ಮೀಡಿಯಾದಲ್ಲಿ ಒಂದು ವೀಡಿಯೊ ಸಾಕಷ್ಟು ವೈರಲ್‌ ಆಯ್ತು. ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರನ್ನ ಒಂದಷ್ಟು ಪತ್ರಕರ್ತರು, ಗ್ಯಾಸ್‌ ಸಿಲಿಂಡರ್‍‌ ಬೆಲೆಯೇರಿಕೆಯ ಬಗ್ಗೆ ಪ್ರಶ್ನೆ ಮಾಡ್ತಾರೆ. ಐದು ರಾಜ್ಯಗಳ ಚುನಾವಣೆ ಮುಗಿಯುತ್ತಿದ್ದಂತೆಯೇ ಕೇಂದ್ರ ಸರ್ಕಾರ ವಾಣಿಜ್ಯ ಸಿಲಿಂಡರ್ ಬೆಲೆ ಏರಿಸಿದೆಯಲ್ಲಾ, ಇದು ಸರೀನಾ? ಇದರ ವಿರುದ್ಧ ಕಾಂಗ್ರೆಸ್‌ ಪ್ರತಿಭಟನೆ ಮಾಡ್ತೀನಿ ಅಂತಿದೆ ನೀವೇನು ಹೇಳ್ತೀರಿ? ಇವು ಆ ಪತ್ರಕರ್ತರ ಪ್ರಶ್ನೆಯ ಸಾರಾಂಶ. ಆ ಪ್ರಶ್ನೆಗಳಿಗೆ ಹೇಗೆ ಉತ್ತರಿಸಬೇಕು ಎಂಬುದು ತಿಳಿಯದ ಶೋಭಕ್ಕ, ಯಥಾ ಪ್ರಕಾರ ಮಹಿಳಾ ಮೀಸಲಾತಿಯನ್ನು ವಿರೋಧ ಪಕ್ಷಗಳು ಸೋಲಿಸಿದವು, ಅನ್ಯಾಯ ಮಾಡಿದವು ಅಂತೆಲ್ಲಾ ಸಂಬಂಧವೇ ಇಲ್ಲದ ಉತ್ತರಗಳನ್ನು ಉದುರಿಸುತ್ತಾರೆ.

ಈ ವೀಡಿಯೊ ಕ್ಲಿಪ್‌ ಹಾಕಿ ಬಹಳ ಜನ ಶೋಭಕ್ಕನನ್ನು ಟ್ರೋಲ್‌ ಮಾಡ್ತಿದಾರೆ. ಆದ್ರೆ ಆ ಕ್ಲಿಪಿಂಗ್‌ ನೋಡಿ, ದಿಗ್ಭ್ರಮೆಯಾಗಬೇಕಾದದ್ದು ಶೋಭಕ್ಕನ ಉತ್ತರ ಕೇಳಿ ಅಲ್ಲ. ಯಾಕೆಂದ್ರೆ ಬಿಜೆಪಿಯವರು ಜನರನ್ನು ಯಾಮಾರಿಸೋದೆ ಹೀಗೆ. ಅವರಿಗೆ ಇರಿಸು ಮುರಿಸಾಗುವ ಪ್ರಶ್ನೆ ಕೇಳಿದ ಕೂಡಲೇ, ಸಂಬಂಧವೇ ಇಲ್ಲದ ಉತ್ತರ ಕೊಟ್ಟು ಪಲಾಯನ ಮಾಡ್ತಾರೆ. ಇಲ್ಲವೇ ಸತ್ತು ಸಮಾಧಿ ಸೇರಿದ ನೆಹರೂ ಅವರನ್ನು ಎಳೆದು ತರ್‍ತಾರೆ. ಒಟ್ಟಿನಲ್ಲಿ ಮೂಲ ಪ್ರಶ್ನೆಯಿಂದ ಜನರನ್ನು ದಿಕ್ಕುತಪ್ಪಿಸಲು ಏನೇನು ಮಾಡ್ಬೇಕೊ ಅದನ್ನೆಲ್ಲಾ ಮಾಡ್ತಾರೆ. ಅದನ್ನೇ ಶೋಭಕ್ಕ ಕೂಡಾ ಮಾಡಿದ್ದಾರೆ. ಅದರಲ್ಲಿ ಹೊಸದೇನೂ ಇಲ್ಲ; ಅಥವಾ ಅಚ್ಚರಿಪಡುವಂತದ್ದೂಇಲ್ಲ. ನಮ್ಮ ಸಮಾಧಾನಕ್ಕೆ ಟ್ರೋಲ್‌ ಮಾಡಿಕೊಳ್ಳಬೇಕಷ್ಟೆ.

ಶೋಭಾ ಕರಂದ್ಲಾಜೆ

ಆದರೆ ಆ ಕ್ಲಿಪ್ಪಿಂಗ್‌ ನೋಡಿದಾಗ ನಮ್ಮನ್ನು ಕಾಡಬೇಕಾದದ್ದು, ನಮ್ಮ ಮಾಧ್ಯಮಗಳ ಅಧಃಪತನ! ತಾವು ಕೇಳಿದ ಜ್ವಲಂತ ಪ್ರಶ್ನೆಗೆ ಸಂಬಂಧವೇ ಇಲ್ಲದ ಹಾರಿಕೆ ಉತ್ತರವನ್ನು ಕೊಡುತ್ತಿರುವಾಗ, ಪ್ರಶ್ನೆ ಕೇಳಿದ ಮಾಧ್ಯಮದವರು ‘ನಾವು ಕೇಳಿದ್ದು ಆ ವಿಚಾರ ಅಲ್ಲ, ಗ್ಯಾಸ್‌ ಬೆಲೆ ಏರಿಕೆ ಬಗ್ಗೆ, ಅದಕ್ಕೆ ಮೊದಲು ಉತ್ತರ ಕೊಡಿ’ ಎಂದು ತಾಕೀತು ಮಾಡಿ, ತಮ್ಮ ವೃತ್ತಿಧರ್ಮ ಎತ್ತಿಹಿಡಿಯುವ ಬದಲು, ಆಕೆ ಹೇಳಿದ್ದನ್ನು ಮೌನವಾಗಿ ಕೇಳಿಸಿಕೊಳ್ಳುತ್ತಾ ನಿಂತಿದ್ದರು. ಅರೇ, ಆ ಕೇಂದ್ರ ಸಚಿವೆ ‘ನಿಮ್ಮ ಪ್ರಶ್ನೆಗಳಿಗೆ ನಾನು ಕ್ಯಾರೇ ಅನ್ನುವುದಿಲ್ಲ, ನನಗೆ ಬೇಕಾದದ್ದನ್ನು ನಾನು ಹೇಳ್ತೀನಿ, ಬೇಕಿದ್ದರೆ ಕೇಳಿಸಿಕೊಳ್ಳಿ, ಬೇಡವಿದ್ದರೆ ಹೊರಟುಹೋಗಿ’ ಎಂಬ ದಾಢಸಿತನದಲ್ಲಿ ಅಸಂಬದ್ಧವಾಗಿ ಉತ್ತರಿಸುತ್ತಾ ಪತ್ರಿಕೋದ್ಯಮದ ಮಾನವನ್ನು ಮೂರು ಕಾಸಿಗೆ ಹರಾಜು ಹಾಕುತ್ತಿದ್ದರೂ ಪತ್ರಕರ್ತರೆನಿಸಿಕೊಂಡವರು ತುಟಿಪಿಟಿಕ್‌ ಎನ್ನಲಿಲ್ಲ. ಆಕೆಯ ಅಸಂಬದ್ಧ ಉತ್ತರವನ್ನು ಮಹಾಪ್ರಸಾದವೆನ್ನುವಂತೆ ಸ್ವೀಕರಿಸುತ್ತಾ ನಿಂತಿದ್ದರು.

ರಾಹುಲ್‌ ಗಾಂಧಿಯೋ, ಸಿದ್ದರಾಮಯ್ಯನೋ ಶೋಭಕ್ಕನ ಜಾಗದಲ್ಲಿ ಇದ್ದಿದ್ದರೆ ಆ ಪತ್ರಕರ್ತರ ವರ್ತನೆ ಇದೇ ರೀತಿ ಇರುತ್ತಿತ್ತೇ? ಇತ್ತೀಚಿನ ದಿನಗಳಲ್ಲಿ ಪತ್ರಿಕೋದ್ಯಮದ ಅನ್ಯಾಯಕಾರಿ ಪಕ್ಷಪಾತಿತನ ನೋಡಿದವರಿಗೆ ಈ ಪ್ರಶ್ನೆಗೆ ಸರಳ ಉತ್ತರ ಕಣ್ಮುಂದೆ ಕಾಣಿಸಿಕೊಳ್ಳುತ್ತೆ. ವಿರೋಧ ಪಕ್ಷದವರು ತಿಂದಿದ್ದು, ಕೂತಿದ್ದು, ನಿಂತಿದ್ದು, ಕೆಮ್ಮಿದ್ದು, ಸೀನಿದ್ದು, ತೊಟ್ಟಿದ್ದನ್ನೆಲ್ಲ ವಿವಾದವಾಗಿಸಲು, ರಾಷ್ಟ್ರೀಯ ಅಪಚಾರವೆಂಬಂತೆ ಬಿಂಬಿಸಲು ಹೆಣಗಾಡುವ ಪತ್ರಿಕೋದ್ಯಮ, ಅದೇ ಬಿಜೆಪಿಯವರ ಇಂತಹ ಅಸಂಬದ್ಧ ವರ್ತನೆಗಳನ್ನೂ ಮೌನವಾಗಿ ಸಹಿಸಿಕೊಂಡು ಕೃತಾರ್ಥರಾಗುತ್ತಾರೆ. ಯಾಕೆ ಹೀಗೆ?

ಇದು ಹೊಸ ವಿದ್ಯಮಾನವಲ್ಲ. ಪತ್ರಕರ್ತರೆನಿಸಿಕೊಂಡವರಲ್ಲಿ ಒಂದಷ್ಟು ಜನ ತಮ್ಮ ಸ್ವಾರ್ಥಕ್ಕಾಗಿ, ಹಣ ಮಾಡುವ ದುರಾಸೆಗಾಗಿ ಆಳುವವರ ಪರವಾಗಿ ಚಾಕರಿ ಮಾಡುತ್ತಾ ಬಂದದ್ದನ್ನು ಹಿಂದೆಯೂ ನೋಡಿದ್ದೇವೆ. ಆದರೆ ಅಂತವರ ಸಂಖ್ಯೆ ಬಹಳ ಕಡಿಮೆ ಇರುತ್ತಿತ್ತು. ಪತ್ರಿಕೋದ್ಯಮದ ನೈತಿಕತೆ, ವೃತ್ತಿಧರ್ಮಗಳು ಎಚ್ಚರವಾಗಿರುತ್ತಿದ್ದವು. ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭ ಎನ್ನುವ ಹೆಗ್ಗಳಿಕೆಯ ಹೊಣೆಯನ್ನು ನಿಭಾಯಿಸುವ ಬದ್ಧತೆ ತಕ್ಕಮಟ್ಟಿಗಾದರೂ ಇರುತ್ತಿತ್ತು. ಆದರೆ, 2014ರಿಂದೀಚೆಗೆ ಪತ್ರಿಕೋದ್ಯಮದ ಮೌಲ್ಯಗಳು ಸಂಪೂರ್ಣ ಸರ್ವನಾಶವಾಗಿವೆ. ‘ಗೋದಿ ಮೀಡಿಯಾ’ ಎನ್ನುವ ಕುಹಕ-ನಾಮ, ದೇಶದಲ್ಲಿ ಎಷ್ಟು ಜನಪ್ರಿಯವಾಗಿದೆ ಎನ್ನುವುದೇ, ಇವತ್ತಿನ ಮಾಧ್ಯಮಗಳ ಅಧೋಗತಿಯನ್ನು ಎತ್ತಿ ತೋರುತ್ತದೆ.

ಇತ್ತೀಚೆಗೆ ರಿಪೋರ್ಟರ್ಸ್ ವಿತೌಟ್‌ ಬಾರ್ಡರ್ಸ್ (ಆರ್ ಎಸ್ ಎಫ್‌) ಅಂತಾರಾಷ್ಟ್ರೀಯ ಸಂಸ್ಥೆ ಬಿಡುಗಡೆ ಮಾಡಿದ ಜಾಗತಿಕ ಪತ್ರಿಕಾ ಸ್ವಾತಂತ್ರ್ಯಸೂಚ್ಯಂಕ ಪಟ್ಟಿಯಲ್ಲಿ ಭಾರತವು 151ನೇ ಸ್ಥಾನದಿಂದ 157ನೇ ಸ್ಥಾನಕ್ಕೆ ಕುಸಿದಿದೆ. ಅಂದಹಾಗೆ, ಈ ಪಟ್ಟಿಯಲ್ಲಿ ಇರುವುದು 180 ರಾಷ್ಟ್ರಗಳ ಸೂಚ್ಯಂಕ ಮಾತ್ರ. ಅಂದರೆ, ಭಾರತ ಕೊನೆಯಿಂದ 23ನೇ ಕಳಪೆ ಸ್ಥಾನದಲ್ಲಿದೆ. ದೇಶದಲ್ಲಿ ನಡೆಯುವ ಪತ್ರಿಕಾ ಸ್ವಾತಂತ್ರ್ಯದ ದಮನ, ಪತ್ರಕರ್ತರ ಮೇಲಿನ ಹಲ್ಲೆ, ವೃತ್ತಿಧರ್ಮ ಮಾನದಂಡಗಳ ಅಧಃಪತನ, ಪತ್ರಿಕಾ ಪ್ರಕಟಣೆ ಅಥವಾ ವೆಬ್‌ಸೈಟ್‌ಗಳ ಮೇಲೆ ನಿರ್ಬಂಧ ಅಥವಾ ಸೆನ್ಸಾರ್‍‌ಶಿಪ್‌ ಇಂತಹ ಹಲವು ಮಾನದಂಡಗಳನ್ನು ಪರಿಗಣಿಸಿ ಈ ರ್‍ಯಾಂಕಿಂಗ್‌ ನೀಡಲಾಗುತ್ತೆ. ದುರಂತವೆಂದರೆ ನಮ್ಮ ಭಾರತವು, ಯುದ್ಧಪೀಡಿತ ಪ್ಯಾಲೆಸ್ತೀನ್‌ (156)ಗಿಂತ ಕೆಳಗಿದೆ. ಪಾಕಿಸ್ತಾನ (153) ಮತ್ತು ಬಾಂಗ್ಲಾದೇಶ (152)ಗಳ ಪತ್ರಿಕಾ ಸ್ವಾತಂತ್ರ್ಯ ನಮಗಿಂತ ಉತ್ತಮವಿದೆ!

ಪತ್ರಿಕಾ ಸ್ವಾತಂತ್ರ್ಯದ ನಿರ್ಬಂಧ

ಇತ್ತೀಚೆಗೆ ಖ್ಯಾತ ಪತ್ರಕರ್ತ ಪ್ರಣಯ್‌ ರಾಯ್‌ ಅವರು, ಒಂದು ಕೈಯಲ್ಲಿ ಕ್ಯಾಮೆರಾ ಮತ್ತೊಂದು ಕೈಯಲ್ಲಿ ಮೈಕ್‌ ಹಿಡಿದು, ಒಬ್ಬ ಸಾಮಾನ್ಯ ಗ್ರೌಂಡ್‌ ರಿಪೋರ್ಟರ್‍‌ ರೀತಿಯಲ್ಲಿ ಪಶ್ಚಿಮ ಬಂಗಾಳದ ಚುನಾವಣಾ ವರದಿ ಮಾಡಿದ ವೀಡಿಯೊ ವೈರಲ್‌ ಆಗಿತ್ತು. ಎನ್‌ಡಿಟಿವಿ ತರಹದ ದಿಗ್ಗಜ ಮಾಧ್ಯಮ ಸಂಸ್ಥೆಯನ್ನು ಹುಟ್ಟುಹಾಕಿ, ಸಾವಿರಾರು ಪತ್ರಕರ್ತರಿಗೆ ಕೆಲಸ ಕೊಟ್ಟಿದ್ದ ಪ್ರಣಯ್‌ ರಾಯ್‌ ಇವತ್ತು `ಡಿ-ಕೋಡರ್‍‌’ ಎಂಬ ಡಿಜಿಟಲ್‌ ಮಾಧ್ಯಮ ನಡೆಸುವ ಪರಿಸ್ಥಿತಿಗೆ ತಲುಪಿರೋದು, ಕೇವಲ ಅವರೊಬ್ಬರ ಸಂಕಷ್ಟದ ಚಿತ್ರಣವಷ್ಟೆ ಅಲ್ಲ; ಇಡೀ ದೇಶದ ಪತ್ರಿಕೋದ್ಯಮ ಅನುಭವಿಸುತ್ತಿರುವ ಸಂಕಟಕ್ಕೆ ಒಂದು ರೂಪಕವೂ ಎನ್ನಬಹುದು. ಆಳುವ ಸರ್ಕಾರಗಳನ್ನು ನಿಷ್ಠುರವಾಗಿ ವಿಮರ್ಶಿಸುತ್ತಿದ್ದ ಎನ್‌ಡಿಟಿವಿ ಚಾನೆಲ್‌ ಮೇಲೆ ಸಿಬಿಐ ಕೇಸುಗಳನ್ನು ದಾಖಲಿಸಲಾಯ್ತು, ರಾಯ್‌ ಮತ್ತು ಅವರ ಮಡದಿಯ ಮೇಲೆ ವಿದೇಶಿ ಹಣ ದುರುಪಯೋಗದ ಕೇಸು ಹೂಡಿ ಕಿರುಕುಳ ನೀಡಲಾಯ್ತು. ಕೊನೆಗೆ, ಮೋದಿಯವರ ಪರಮ ಮಿತ್ರ, ಉದ್ಯಮಿ ಅದಾನಿ ಒಡೆತನದ ಎ ಎಂ ಜಿ ಮೀಡಿಯಾ ನೆಟ್‌ವರ್ಕ್‌ ಮೂಲಕ ಎನ್‌ಡಿಟಿವಿಯ ಶೇರ್‍‌ಗಳನ್ನು ಖರೀದಿಸಿ ರಾಯ್‌ ಅವರನ್ನು ಹೊರದಬ್ಬಲಾಯ್ತು. ಈ ನಿಯಂತ್ರಣ ಷಡ್ಯಂತ್ರಕ್ಕೆ ಬೇಸತ್ತ, ಮ್ಯಾಗ್ಸೆಸ್ಸೆ ಪ್ರಶಸ್ತಿ ವಿಜೇತ ಪತ್ರಕರ್ತ ರವೀಶ್‌ ಕುಮಾರ್‍‌ ಕೂಡಾ ಎನ್‌ಡಿಟಿವಿಯಿಂದ ಹೊರಬಂದು ತಮ್ಮದೇ ಸ್ವಂತ ಯೂಟ್ಯೂಬ್‌ ಚಾನೆಲ್‌ ನಡೆಸಲು ಮುಂದಾದರು. ಕೊನೆಗೆ ಸುಪ್ರೀಂ ಕೋರ್ಟ್‌ನಲ್ಲಿ ನಡೆದ ವಿಚಾರಣೆಯಲ್ಲಿ ರಾಯ್‌ ಅವರ ಮೇಲೆ ಹೂಡಿದ್ದ ಅಷ್ಟೂ ಕೇಸುಗಳು, ಆರೋಪಗಳು ನಿರಾಧಾರ ಎಂದು ತಳ್ಳಿಹಾಕಲಾಯ್ತು. ಅಂದರೆ, ಎನ್‌ಡಿಟಿವಿಯ ಸದ್ದಡಗಿಸುವುದಕ್ಕಾಗಿಯೇ ಅಧಿಕಾರ ದುರ್ಬಳಕೆ ಮಾಡಿಕೊಂಡದ್ದು ಸಾಬೀತಾಗುತ್ತದೆ.

ದೇಶದ ಪ್ರಖ್ಯಾತ ಸುದ್ದಿ ಸಂಸ್ಥೆಯೊಂದನ್ನು ಹೇಗೆಲ್ಲಾ ನಿಯಂತ್ರಣಕ್ಕೆ ತೆಗೆದುಕೊಳ್ಳಲಾಯ್ತು ಎಂಬುದಕ್ಕೆ ಇದು ಒಂದು ಲಿಟ್ಮಸ್‌ ನಿದರ್ಶನವಷ್ಟೆ. ಇನ್ನು ಸಣ್ಣಪುಟ್ಟ ಪತ್ರಿಕೆ, ಚಾನೆಲ್‌, ಡಿಜಿಟಲ್‌ ಫ್ಲ್ಯಾಟ್‌ಫಾರಂಗಳನ್ನು ಅಧಿಕಾರ ದುರ್ಬಳಕೆ ಮತ್ತು ಹಣದ ಮೂಲಕ ಹೇಗೆಲ್ಲಾ ನಿಯಂತ್ರಿಸಿರಬೇಡ ನೀವೇ ಯೋಚಿಸಿ.

ಅಂಬಾನಿ ಸಮೂಹದ ನೆಟ್‌ವರ್ಕ್‌ 18 ಮತ್ತು ಅದಾನಿ ಸಮೂಹದ ಎ ಎಂ ಎನ್‌ ಎಲ್‌ ಸಂಸ್ಥೆಗಳು ದೇಶದ ನೂರಕ್ಕೂ ಹೆಚ್ಚು ಚಾನೆಲ್‌ಗಳ ಒಡೆತನವನ್ನು ತಮ್ಮದಾಗಿಸಿಕೊಂಡಿವೆ. ಈ ಎರಡೂ ಉದ್ಯಮ ಸಮೂಹಗಳ ಒಡೆಯರು ಪ್ರಧಾನಿ ಮೋದಿಯವರ ಆಪ್ತರು ಎನಿಸಿಕೊಂಡವರು.

ಒಂದುಕಡೆ, ಈ ರೀತಿ ಮೀಡಿಯಾ ಇನ್ವೆಸ್ಟ್‌ಮೆಂಟ್‌ ಹೆಸರಿನಲ್ಲಿ ಪತ್ರಿಕೋದ್ಯಮವನ್ನು ಬಂಡವಾಳಶಾಹಿಗಳು ನಿಯಂತ್ರಿಸುತ್ತಿದ್ದರೆ, ಮತ್ತೊಂದೆಡೆ ಜನಪರ ನಿಲುವು ತಳೆಯಬೇಕಿದ್ದ ಪತ್ರಕರ್ತರು, ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಜನವಿರೋಧಿ ಸಿದ್ಧಾಂತಗಳ ವಕ್ತಾರರಂತೆ ಬದಲಾಗಿಹೋಗಿದ್ದಾರೆ. ಸಮಾಜದಲ್ಲಿ ಅಶಾಂತಿ, ಪ್ರಕ್ಷುಬ್ಧತೆ ಉತ್ಪಾದಿಸುವುದೇ ತಮ್ಮ ವೃತ್ತಿಕಾಯಕ ಎಂಬ ಅಪಕಲ್ಪನೆಯಲ್ಲಿ ಅಬ್ಬರಿಸುತ್ತಿದ್ದಾರೆ.

ಇಂತಹ ಒಟ್ಟಾರೆ ವಾತಾವರಣದಲ್ಲಿ ಭಾರತದ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕ ಕುಸಿಯದೆ ಏನಾದೀತು? ಪತ್ರಿಕಾ ವೃತ್ತಿಧರ್ಮ ಇಷ್ಟು ದೈನೇಸಿ ಸ್ಥಿತಿಗೆ ತಲುಪಿದಾಗ ಶೋಭಕ್ಕನಂತವರು ಗ್ಯಾಸ್‌ ಬೆಲೆಯೇರಿಕೆಯ ಪ್ರಶ್ನೆಗೆ ಮಹಿಳಾ ಮೀಸಲಾತಿಯ ಉತ್ತರ ಕೊಟ್ಟರೂ ತೆಪ್ಪಗಿರಬೇಕಾಗುತ್ತದೆ, ‘ಭಾರತ್‌ ಮಾತಾ ಕಿ ಜೈ’ ಎಂಬ ಘೋಷಣೆ ಕೂಗಿ ಎದ್ದುಹೋದರೂ ಸಹಿಸಿಕೊಳ್ಳಬೇಕಾಗುತ್ತದೆ. ಯಾಕೆಂದರೆ, ಇವತ್ತು ಪತ್ರಿಕೋದ್ಯಮ ಬಹುಪಾಲು ಬಿಕರಿಯಾಗಿದೆ; ಕೇವಲ ಹಣಕ್ಕಲ್ಲ, ಜನವಿರೋಧಿ-ಕೋಮುವಾದಿ ಸಿದ್ಧಾಂತಕ್ಕೂ!!

ಮಾಚಯ್ಯ ಎಂ ಹಿಪ್ಪರಿಗಿ

ರಾಜಕೀಯ ವಿಶ್ಲೇಷಕರು

ಇದನ್ನೂ ಓದಿ- ಚುನಾವಣೋತ್ತರ ಸಮೀಕ್ಷೆ; ಬರೀ ಹುಸಿ ನಿರೀಕ್ಷೆ

More articles

Latest article

Most read