ಜಿರಲೆಗಳ ದಂಗೆ; ಮೋದಿ ಸರಕಾರದ ಬುಡಕ್ಕೆ ಬೆಂಕಿ

ಕೇವಲ ಒಬ್ಬ ಶಿಕ್ಷಣ ಮಂತ್ರಿಯ ರಾಜೀನಾಮೆಯಿಂದ ವ್ಯವಸ್ಥೆ ಬದಲಾಗಲು ಸಾಧ್ಯವಿಲ್ಲ. ಆದರೆ ಹಾಗೆ ರಾಜೀನಾಮೆ ಪಡೆಯುವುದರಿಂದ ಅಧಿಕಾರದ ಮದದಿಂದ ಮತ್ತೇರಿದ ಕೇಂದ್ರ ಸರಕಾರಕ್ಕೆ ಎಚ್ಚರಿಕೆ ರವಾನಿಸಬಹುದಾಗಿದೆ. ಜನವಿರೋಧಿ ಧೋರಣೆಗಳನ್ನು ಜಾರಿತಂದರೆ ಹೀಗೆಯೇ ಅಧಿಕಾರದಿಂದ ಕೆಳಗಿಳಿಯಬೇಕಾಗುತ್ತದೆ ಎನ್ನುವ ಸಂದೇಶವನ್ನು ಯುವ ಹೋರಾಟಗಾರರು ಕೊಡುತ್ತಿದ್ದಾರೆ. ಪ್ರಜಾಪ್ರಭುತ್ವ ದೇಶದಲ್ಲಿ ಸರ್ವಾಧಿಕಾರ ನಡೆಯದು ಎನ್ನುವ ಎಚ್ಚರಿಕೆಯನ್ನೂ ಈ ಜೆನ್ ಝೀ ಹೋರಾಟ ಮೋದಿ ಸರಕಾರಕ್ಕೆ ಕೊಟ್ಟಿದೆ ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.

ಹೀಗೇ ಆಗುತ್ತೆ ಅಂತಾ ಒಂದು ಅಂದಾಜಿತ್ತು. ಹಾಗೆಯೇ ಆಯ್ತು. ಭಾರತದಲ್ಲಿ ನಿಜವಾದ ಪ್ರಜಾಪ್ರಭುತ್ವದ ಸರಕಾರ ಇದ್ದಿದ್ದರೆ ಹೀಗಾಗುತ್ತಿರಲಿಲ್ಲ. ಆದರೆ ಇರುವುದು ಪ್ರಜಾಪ್ರಭುತ್ವ ಮುಖವಾಡದ ಸರ್ವಾಧಿಕಾರಿ ಪ್ರಭುತ್ವ. ಇನ್ನೇನಾಗಬೇಕಿತ್ತು.. ಯಾವುದು ಆಗಬಾರದಿತ್ತೋ ಅದೇ ಆಯ್ತು. ಅಹಿಂಸಾತ್ಮಕವಾಗಿ ಪ್ರತಿಭಟನೆ ಮಾಡುತ್ತಿದ್ದ ವಿದ್ಯಾರ್ಥಿ ಯುವಜನರ ಮೇಲೆ ಕೇಂದ್ರ ಸರಕಾರ ಪೊಲೀಸ್ ದಬ್ಬಾಳಿಕೆಗೆ ಆದೇಶಿಸಿತು. ಪೊಲೀಸರು ಹಾಗೂ ಅಂಧಭಕ್ತ ಗೂಂಡಾಪಡೆ ಅತ್ಯಂತ ಕ್ರೂರವಾಗಿ ದಮನಕಾರ್ಯ ಮಾಡಿ ಅಟ್ಟಹಾಸ ಮೆರೆಯಿತು.

ಅಲ್ಲಿ ದೆಹಲಿಯಲ್ಲಿ ಜಂತರ್ ಮಂತರನಲ್ಲಿ ವಿದ್ಯಾರ್ಥಿ ಯುವಜನರು ಕಾಕ್ರೋಚ್ ಜನತಾ ಪಾರ್ಟಿ ಹೆಸರಿನಡಿಯಲ್ಲಿ ಜೂನ್ 20 ರಿಂದ ಶಾಂತಿಯುತವಾಗಿ ಧರಣಿ ಸತ್ಯಾಗ್ರಹ ಮಾಡುತ್ತಿದ್ದಾರೆ. ಹೋರಾಟದ ಹಾಡುಗಳನ್ನು ಹಾಡುತ್ತಿದ್ದಾರೆ. ಅವರ ಬೇಡಿಕೆಗಳು ಈಡೇರಿಸಲಾಗದಷ್ಟು ಕಷ್ಟಸಾಧ್ಯವಾದದ್ದೇನೂ ಆಗಿರಲಿಲ್ಲ.  ಶಿಕ್ಷಣ ಸಚಿವ ನೈತಿಕ ಹೊಣೆಗಾರಿಕೆ ಹೊತ್ತು ರಾಜೀನಾಮೆ ನೀಡಬೇಕು, ಆತ್ಮಹತ್ಯೆ ಮಾಡಿಕೊಂಡ ನೀಟ್ ಸಂತ್ರಸ್ತ ವಿದ್ಯಾರ್ಥಿಗಳ ಕುಟುಂಬಕ್ಕೆ ತಲಾ ಒಂದು ಕೋಟಿ ಪರಿಹಾರ ಕೊಡಬೇಕು ಮತ್ತು ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ತರಬೇಕು. ಆಳುವ ಸರಕಾರ ಸರಳವಾಗಿ ಬಗೆಹರಿಸಬಹುದಾದ ಈ ಒಂದೆರಡು ಡಿಮಾಂಡ್‌ ಗಳನ್ನು ಕೇಂದ್ರ ಸರಕಾರ ನೆರವೇರಿಸಬಹುದಾಗಿತ್ತು.

ಕಳೆದ ಹತ್ತು ವರ್ಷಗಳಲ್ಲಿ ಈ ದೇಶದಲ್ಲಿ 152 ಕ್ಕೂ ಹೆಚ್ಚು ಬಾರಿ ಪರೀಕ್ಷಾ ಪತ್ರಿಕೆಗಳು ಲೀಕ್ ಆಗಿವೆ. ಈಗ ನೀಟ್ ಎಕ್ಸಾಮ್ ಪೇಪರ್ ಲೀಕ್ ಸರದಿ.  ಕಷ್ಟ ಪಟ್ಟು ಹಗಲು ರಾತ್ರಿ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಓದಿ ನೀಟ್ ಪರೀಕ್ಷೆ ಬರೆದು ಮೆಡಿಕಲ್ ಸೀಟ್ ಪಡೆದು ಡಾಕ್ಟರ್ ಆಗಬೇಕೆಂದು ಪರಿಶ್ರಮವಹಿಸಿದವರ ಸಂಖ್ಯೆ 22 ಲಕ್ಷ. ಪ್ರಶ್ನೆ ಪತ್ರಿಕೆ ತಯಾರಿಸುವವರ ಹಾಗೂ ನೀಟ್ ಎಕ್ಸಾಮ್ ಕೋಚಿಂಗ್ ಕ್ಲಾಸ್ ನಡೆಸುವವರ ದುರಾಸೆಯಿಂದಾಗಿ ಈ ಸಲವೂ ಸಹ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಆಯ್ತು. ಐದರಿಂದ ಹತ್ತು ಲಕ್ಷ ಹಣಕ್ಕೆ ಒಂದೊಂದು ಪ್ರಶ್ನೆ ಪತ್ರಿಕೆಯೂ ಬಿಕರಿಯಾಗಿತ್ತು. ಇದು ಗೊತ್ತಾಗುತ್ತಿದ್ದಂತೆ ಆಕ್ರೋಶ ಭುಗಿಲೆದ್ದಿತು. ಬೇರೆ ದಾರಿ ಕಾಣದೆ ಕೇಂದ್ರ ಸರಕಾರ ಪರೀಕ್ಷೆಯನ್ನೇ ರದ್ದು ಮಾಡಿತು. ಇದರಿಂದ ತೀವ್ರವಾಗಿ ಆಘಾತಕ್ಕೊಳಗಾಗಿ ಹತಾಶೆಗೊಳಗಾದ ಇಪ್ಪತ್ತಕ್ಕೂ ಹೆಚ್ಚು ವಿದ್ಯಾರ್ಥಿ ಯುವಜನರು ಆತ್ಮಹತ್ಯೆ ಮಾಡಿಕೊಂಡು ಪ್ರಾಣ ತೆತ್ತು ಈ ದರಿದ್ರ ದುಷ್ಟ ಶಿಕ್ಷಣ ವ್ಯವಸ್ಥೆಗೆ ತಮ್ಮ ಅಂತಿಮ ಪ್ರತಿಭಟನೆಯನ್ನು ಸಲ್ಲಿಸಿ ಬದುಕಿದವರೆದೆಯಲ್ಲಿ ಆಕ್ರೋಶವನ್ನು ಬಿತ್ತಿ ಮರೆಯಾದರು.

ಇಷ್ಟು ವರ್ಷಗಳಿಲ್ಲದೇ ಈಗ ಯಾಕೆ ಈ ವಿದ್ಯಾರ್ಥಿ ಯುವಜನರಲ್ಲಿ ಆಕ್ರೋಶ ಭುಗಿಲೆದ್ದಿತು? ಅದಕ್ಕೆ ಕಾರಣ  ಸುಪ್ರೀಂ ಕೋರ್ಟ್‌ ನ ಮುಖ್ಯ ನ್ಯಾಯಾಧೀಶರಾದ ಸೂರ್ಯಕಾಂತ ಎನ್ನುವ ಮಹಾಮಹಿಮರು. ನ್ಯಾಯಸ್ಥಾನದಲ್ಲಿ ಕುಳಿತು ಯುವಜನತೆಯನ್ನು ಜಿರಲೆ ಎಂದು ಜರಿದರು. “ಕಾಕ್ರೋಚ್‌ ಗಳಂತೆ ಪರಾವಲಂಬಿಯಾದ ನಿರುದ್ಯೋಗಿ ಯುವಕರು ಮಾಡಲು ಕೆಲಸವಿಲ್ಲದೇ ವ್ಯವಸ್ಥೆ ಮೇಲೆ ದಾಳಿ ಮಾಡುತ್ತಾರೆ” ಎಂದರು. ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಕೊಡದ, ವಿದ್ಯೆಗೆ ತಕ್ಕ ಕೆಲಸ ಕೊಡದ ಸರಕಾರವನ್ನು ಠೀಕಿಸುವುದನ್ನು ಬಿಟ್ಟು, ಆಳುವವರ ದುರಾಡಳಿತದಿಂದಾಗಿ ನಿರುದ್ಯೋಗಿಗಳಾಗಿರುವ ಯುವಜನರನ್ನು ಈ ಮುಖ್ಯ ನ್ಯಾಯಮೂರ್ತಿಗಳು ಅತ್ಯಂತ ಕೆಟ್ಟದಾಗಿ ನಿಂದಿಸಿದರು. ಆ ಕಠೋರ ಮಾತುಗಳು ಯುವಕರ ಸ್ವಾಭಿಮಾನವನ್ನು ಕೆರಳಿಸಿತು. ಅವರಿಗೆ ನಾಯಕತ್ವವೊಂದು ಬೇಕಾಗಿತ್ತು. ಆಗ ಹುಟ್ಟಿದ್ದೇ ಕಾಕ್ರೋಚ್ ಜನತಾ ಪಾರ್ಟಿ ಅಂದರೆ ಸಿಜೆಪಿ. ಯುವಕರನ್ನು ಕಾಕ್ರೋಚ್ ಎಂದು ಹಿಯಾಳಿಸಿದ್ದನ್ನೇ ಮುಖ್ಯವಾಗಿಟ್ಟುಕೊಂಡು ಈ ಪಾರ್ಟಿಯನ್ನು ಹುಟ್ಟುಹಾಕಿದ್ದು ಅಮೇರಿಕದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಅಭಿಷೇಕ್ ದೀಪ್ಕೆ ಎನ್ನುವ ಯುವಕ. ಸಾಮಾಜಿಕ ಮಾಧ್ಯಮಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ದೇಶದ ವಿದ್ಯಾರ್ಥಿ ಯುವಜನರ ಸ್ವಾಭಿಮಾನವನ್ನು ಜಾಗೃತಗೊಳಿಸಿದ ಅಭಿಷೇಕ್ ಸಿಜೆಪಿ ಪಕ್ಷದ ಮೂಲಕ ಹೊಸ ಅಲೆಯನ್ನೇ ಸೃಷ್ಟಿಸಿದ.

ಜೂನ್ 20 ಕ್ಕೆ ಜಂತರ ಮಂತರ್ ನಲ್ಲಿ ಸತ್ಯಾಗ್ರಹಕ್ಕೆ ಅಭಿಷೇಕ್ ಕರೆ ಕೊಟ್ಟಾಗ ಉಪೇಕ್ಷಿಸಿದವರೇ ಹೆಚ್ಚು. ಯಾವುದೇ ಪಕ್ಷ ಸಂಘಟನೆ ಅಥವಾ ಹೆಸರಾಂತರ ಬೆಂಬಲ ಇಲ್ಲದೇ ಶಕ್ತಿಶಾಲಿ ಮೋದಿ ಸರಕಾರದ ವಿರುದ್ಧ ಹೋರಾಡುವುದು ಕಷ್ಟಸಾಧ್ಯವೆಂದೇ ಬಹುತೇಕರು ಅಂದುಕೊಂಡಿದ್ದರು. ಹಿಟ್ ಹೊಡೆದು ಈ ಹೋರಾಟ ನಿರತ ಜಿರಲೆಗಳನ್ನು ನಾಶ ಮಾಡಬಹುದು ಎಂದು ಅಂಧಭಕ್ತರು ಲೇವಡಿ ಮಾಡಿದರು. ಯಾಕೆಂದರೆ ಆಗ ಅಲ್ಲಿ ಸೇರಿದ್ದು ನೂರಾರು ಯುವಕರು ಮಾತ್ರ.

ಯಾವಾಗ ಪರಿಸರ ತಜ್ಞರಾದ ಲಡಾಕಿನ ಸೋನಂ ವಾಂಗ್ಚುಕ್ ರವರು ಯುವಕರ ಬೇಡಿಕೆಗಳನ್ನು ಬೆಂಬಲಿಸಿ ಜೂನ್ 28 ರಿಂದ ಜಂತರ್ ಮಂತರಿನಲ್ಲಿ  ಅಮರಣಾಂತ ಉಪವಾಸ ಕೂತರೋ ಆಗ ಹೋರಾಟದ ದಿಕ್ಕೇ ಬದಲಾಯಿತು. ಯಥಾಪ್ರಕಾರ ಮೋದಿ ಶಾ ರವರು ದಿವ್ಯ ನಿರ್ಲಕ್ಷ ತಾಳಿದರು. ಬರುಬರುತ್ತಾ ಜಂತರ್‌ ಮಂತರ್‌ ನಲ್ಲಿ ಜಿರಲೆಗಳ ಸಂಖ್ಯೆ ಹೆಚ್ಚಾಗತೊಡಗಿತು. ದಿನದಿಂದ ದಿನಕ್ಕೆ ಹೋರಾಟದ ಕಿಚ್ಚು ಹೆಚ್ಚಾಗತೊಡಗಿತು. ವಿದ್ಯಾರ್ಥಿ ಯುವಜನರಲ್ಲಿದ್ದ ಆಕ್ರೋಶ ಭುಗಿಲೇಳತೊಡಗಿತ್ತು.

ಯಾವಾಗ ವಾಂಗ್ಚುಕ್ ರವರ ಉಪವಾಸ 20 ನೇ ದಿನಕ್ಕೆ ಕಾಲಿಟ್ಟು ಅವರ ಆರೋಗ್ಯ ಸ್ಥಿತಿ ಗಂಭೀರವಾಯಿತೋ ಆಗ ದೆಹಲಿಯ ಪೊಲೀಸ್ ಪಡೆ ಸಿವಿಲ್ ಡ್ರೆಸ್‌ನಲ್ಲಿ ಬಂದು ಬಿಳಿ ಪರದೆಯಲ್ಲಿ ವಾಂಗ್ಚುಕ್ ರವರನ್ನು ಬಲವಂತವಾಗಿ ಅಪಹರಿಸಿ ಆಸ್ಪತ್ರೆಗೆ ಸೇರಿಸಿತು. ಯಾಕೆಂದು ಪ್ರಶ್ನಿಸಿದವರ ಮೇಲೆ ಹಲ್ಲೆ ಮಾಡಿತು. ಆಗ ನಿರಶನ ನಿರತ ವಿದ್ಯಾರ್ಥಿಗಳ ಆಕ್ರೋಶ ಹೆಚ್ಚಾಗಿ ಜುಲೈ 20 ರಂದು ಸಂಸತ್ ಭವನಕ್ಕೆ ಮುತ್ತಿಗೆ ಹಾಕಲು ಕರೆ ಕೊಡಲಾಯ್ತು. ಅವತ್ತಿನಿಂದ ಸಂಸತ್ ಭವನದಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗುತ್ತಿತ್ತು.

ನೂರಲ್ಲಾ ಸಾವಿರವಲ್ಲ ಲಕ್ಷಾಂತರ ವಿದ್ಯಾರ್ಥಿ ಯುವಕರು ಹಾಗೂ ಅವರ ಪೋಷಕರುಗಳು ಸುನಾಮಿಯೋಪಾದಿಯಲ್ಲಿ ಜಂತರ್ ಮಂತರ್ ನತ್ತ ಹರಿದು ಬಂದು ಸಂಸತ್ ಭವನದತ್ತ ಹೊರಟರು. ಮೋದಿ ಸರಕಾರ ಇಕ್ಕಟ್ಟಿಗೆ ಸಿಲುಕಿತು. ಯುವಕರು ಒಗ್ಗಟ್ಟಾಗಿ ಮುನ್ನುಗ್ಗಿದರೆ ನೇಪಾಳ ಬಾಂಗ್ಲಾ ಶ್ರೀಲಂಕಾದಲ್ಲಿ ಆದ ಯುವಕ್ರಾಂತಿ ಜರುಗಬಹುದೆಂದು ಸರಕಾರ ಹೆದರಿತು. ಕೂಡಲೇ ಪ್ರತಿಭಟನಾಕಾರರನ್ನು ಹತ್ತಿಕ್ಕಲು ದೆಹಲಿ ಪೊಲೀಸರಿಗೆ ಆದೇಶಿಸಿತು.

ಅಷ್ಟೆ.. ಹೆಸರಿನ ಬ್ಯಾಜ್ ಇಲ್ಲದ ಪೊಲೀಸರು ಹಾಗೂ ಬೇನಾಮಿ ಗೂಂಡಾಗಳು ಸಂಸತ್ತಿನ ರಸ್ತೆಗಳನ್ನು ರಣಾಂಗಣ ಮಾಡಿದವು. ಕ್ರೂರ ಲಾಠಿ ಚಾರ್ಜ್ ನಲ್ಲಿ ಸಾವಿರಾರು ಯುವಕರ ರಕ್ತ ಹರಿಸಿದರು. ಯುವತಿಯರ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿದರು. ಅಷ್ಟು ಸಾಲದೆಂಬಂತೆ ಟಿಯರ್ ಗ್ಯಾಸ್ ಬಾಂಬ್ ಎಸೆದು ಕಣ್ಣೀರು ಹರಿಸಿದರು.

ಈ ಸರಕಾರಿ ಪ್ರಾಯೋಜಿತ ಪೊಲೀಸ್  ಕ್ರೌರ್ಯದ ವಿರುದ್ಧದ ಧ್ವನಿಗಳು ಸಂಸತ್ತಿನಲ್ಲಿ ಪ್ರತಿಧ್ವನಿಸಿದವು. ಆದರೆ ವಿರೋಧ ಪಕ್ಷಗಳು ಪೊಲೀಸ್ ದೌರ್ಜನ್ಯವನ್ನು ಪ್ರಸ್ತಾಪಿಸಿದ ತಕ್ಷಣ ಅಧಿವೇಶನವನ್ನೇ ಮೊಟಕುಗೊಳಿಸಿ ಮುಂದೂಡಲಾಯ್ತು. ರಾಹುಲ್ ಗಾಂಧಿ ನೇತೃತ್ವದಲ್ಲಿ ಪ್ರತಿಪಕ್ಷದವರು ಪ್ರಧಾನಿ ಮೋದಿಯವರ ನಿವಾಸದ ಮುಂದೆ ಧರಣಿ ಕುಳಿತರು. ಅವರೆಲ್ಲರನ್ನು ಅಮಾನುಷವಾಗಿ ಬಂಧಿಸಲಾಯ್ತು.

ಪ್ರಧಾನಿ ಮೋದಿ ಮತ್ತು ಗೃಹಸಚಿವ ಅಮಿತ್ ಶಾ ರವರ ಬುಡಕ್ಕೆ ಬೆಂಕಿ ಬಿದ್ದಿತ್ತು. ಅಂಧಭಕ್ತರನ್ನು ಹೊರತು ಪಡಿಸಿ ಇಡೀ ದೇಶವೇ ಮೋದಿ ವಿರುದ್ಧ ತಿರುಗಿ ಬಿದ್ದಿತ್ತು. ಉಗುರಲ್ಲಿ ಬಗೆಹರಿಯಬಹುದಾದ ಸಮಸ್ಯೆಗೆ ಬ್ರಹ್ಮಾಸ್ರವನ್ನು ಬಳಸಲು ಹೋಗಿ ಮೋದಿ ಜಗತ್ತಿನ ಮುಂದೆ ಬೆತ್ತಲಾಗಿದ್ದರು. ಅವರ ಕಣಕಣದಲ್ಲೂ ತುಂಬಿದ್ದ ದುರಹಂಕಾರ ಅವರನ್ನು ದಾರಿ ತಪ್ಪಿಸಿತ್ತು.

ಯಥಾ ಪ್ರಕಾರ ತಮ್ಮ ನಿಯಂತ್ರಣದ ಗೋದಿ ಮೀಡಿಯಾಗಳು, ಬಿಜೆಪಿಯ ಐಟಿ ಸೆಲ್ ಗಳು ಹಾಗೂ ಅಂಧಭಕ್ತರ ಸೋಷಿಯಲ್ ಮೀಡಿಯಾಗಳ ಮೂಲಕ ಬಿಜೆಪಿ ಹಾಗೂ ಸಂಘ ಪರಿವಾರದ ಅಂಗಗಳು ಹೋರಾಟಗಾರರನ್ನು ನಿಂದಿಸುವ ಕಾರ್ಯವನ್ನು ಮಾಡತೊಡಗಿದರು. ಪ್ರತಿಭಟನೆ ಮಾಡುವವರು ದೇಶದ್ರೋಹಿಗಳು, ದೇಶದ ಭದ್ರತೆಯನ್ನು ಹಾಳು ಮಾಡುವವರು, ಪಾಕಿಸ್ತಾನಿ ಎಜೆಂಟರುಗಳು, ವಿದೇಶಿ ಟೂಲ್ ಕಿಟ್ ಪೀಡಿತರು.. ಎಂದೆಲ್ಲಾ ಆರೋಪಿಸಿ ಪ್ರತಿಭಟನಾನಿರತರನ್ನು ಖಳನಾಯಕರನ್ನಾಗಿ, ದೇಶವಿರೋಧಿಗಳನ್ನಾಗಿ ಚಿತ್ರಿಸಲು ಇನ್ನಿಲ್ಲದಂತೆ ಪ್ರಯತ್ನಿಸತೊಡಗಿದರು. ಆದರೆ ಇವರ ಈ ಕುತಂತ್ರಗಾರಿಕೆ ಬಗ್ಗೆ ಅರಿವಿದ್ದ ಈ ದೇಶದ ಬಹುಜನರು ಯಾವುದಕ್ಕೂ ಕ್ಯಾರೆ ಎನ್ನದೇ ಯುವಜನರ ಹೋರಾಟವನ್ನು ಬೆಂಬಲಿಸಿದರು. ಜಂತರ ಮಂತರ್ ನಲ್ಲಿ ಪ್ರತಿಭಟನಾನಿರತರಿಗೆ ದೇಶದ ಜನರು ಆಹಾರದ ಪೊಟ್ಟಣಗಳನ್ನು ಪಾರ್ಸೆಲ್ ಕಳುಹಿಸತೊಡಗಿದರು. ಬೇಕಾದಷ್ಟು ಕುಡಿಯುವ ನೀರಿನ ಬಾಟಲ್ ಗಳನ್ನು ಉಚಿತವಾಗಿ ಹಂಚಲಾಯ್ತು. ಸಿಕ್ ಸಮುದಾಯದವರಂತೂ ಪ್ರತಿಯೊಬ್ಬರಿಗೂ ಆಹಾರ ಹಾಗೂ ನೀರನ್ನು ವಿತರಿಸುವ ಅಭಿಯಾನವನ್ನೇ ಕೈಗೊಂಡರು. ಪೊಲೀಸ್ ದಮನದ ವಿರುದ್ಧ ರಕ್ಷಣೆಗೆ ಹೆಲ್ಮೆಟ್ ಗಳನ್ನೂ ಹಂಚಿದರು. ಈ ರೀತಿಯ ಜನಸ್ಪಂದನೆ ಹೋರಾಟಗಾರರ ಆತ್ಮಬಲವನ್ನು ಹೆಚ್ಚಿಸಿದರೆ ಸರ್ವಾಧಿಕಾರಿಗಳ ಜಂಘಾಬಲವನ್ನೇ ಉಡುಗಿಸಿತು.

ಅಷ್ಟೊಂದು ಕ್ರೂರವಾಗಿ ಹಲ್ಲೆ ಮಾಡಿದರೂ ಎದೆಗುಂದದ ಕಾಕ್ರೋಚ್ ಹೋರಾಟಗಾರರು ಜಂತರ್ ಮಂತರ್‌ ನಲ್ಲಿ ಪ್ರತಿಭಟನೆ ಮುಂದುವರೆಸಿದರು. ಆಸ್ಪತ್ರೆಯಲ್ಲಿ ವಾಂಗ್ಚುಕ್ ರವರು ಉಪವಾಸ ನಿಲ್ಲಿಸಲಿಲ್ಲ. ವಿರೋಧ ಪಕ್ಷಗಳು ಸಂಸತ್ತಿನ ಒಳಗೂ ಹೊರಗೂ ಮೋದಿ ಸರಕಾರದ ವಿರುದ್ಧ ಪ್ರತಿಭಟನೆ ತೀವ್ರಗೊಳಿಸಿದವು. ಈಗ ಸಂಧಾನಕ್ಕೆ ಬರದೆ ಮೋದಿ ಶಾ ರವರಿಗೆ ಬೇರೆ ದಾರಿಯೇ ಇರಲಿಲ್ಲ. ಹಗಲಿನಲ್ಲಿ ಮುಖ ತೋರಿಸಲು ನಾಚಿಕೆಯಾಗಿ ಮೋದಿಯವರು ರಾತ್ರಿ ಕಾರ್ಯಾಚರಣೆಗೆ ಇಳಿದರು. ತಮ್ಮ ದಿವ್ಯ ಮೌನವನ್ನು ಮುರಿದು ಜುಲೈ 23 ರ ಮಧ್ಯರಾತ್ರಿ “ತ್ವರಿತ ನ್ಯಾಯಾಲಯ ಸ್ಥಾಪನೆ ಮತ್ತು ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು” ಎಂದು ಕೆಲವೇ ಸೆಕೆಂಡ್ ಕಾಲದ ವಿಡಿಯೋ ಮೂಲಕ ತಿಳಿಸಿದರು. “ನೀಟ್ ಹಗರಣದ ತಪ್ಪಿತಸ್ಥರಿಗೆ ಘೋರ ಶಿಕ್ಷೆ ಕೊಡುತ್ತೇವೆ” ಎಂದು ಬೀಸೊ ದೊಣ್ಣೆ ಏಟಿನಿಂದ ತಪ್ಪಿಸಿಕೊಳ್ಳಲು ಮೋದಿಯವರೇನೋ ಮಧ್ಯರಾತ್ರಿ ಘೋಷಿಸಿದ್ದಾರೆ. ಆದರೆ ಇವರನ್ನು ನಂಬುವವರು ಯಾರು?. ಯಾಕೆಂದರೆ 2024 ರ ನೀಟ್ ಪ್ರಶ್ನೆ ಪತ್ರಿಕೆ ಲೀಕ್ ಹಗರಣದ ಮಾಸ್ಟರ್ ಮೈಂಡ್ ಸಂಜೀವ್ ಮುಖಿಯಾಗೆ ಇದೇ ಮೋದಿಯವರ ಸಿಬಿಐ ಕ್ಲೀನ್ ಚಿಟ್ ನೀಡಿದ್ದನ್ನು ದೇಶ ಇನ್ನೂ ಮರೆತಿಲ್ಲ.

ತಡರಾತ್ರಿ ಆಸ್ಪತ್ರೆಗೆ ಧಾವಿಸಿದ ಕೇಂದ್ರ ಸಚಿವರಾದ ಜೆ.ಪಿ.ನಡ್ಡಾ ಮತ್ತು ಜಿತೇಂದ್ರ ಸಿಂಗ್ ಸೋನಂ ವಾಂಗ್ಚುಕ್ ರವರಿಗೆ ಲಿಖಿತ ಭರವಸೆಗಳನ್ನು ನೀಡಿ ಉಪವಾಸವನ್ನು ಅಂತ್ಯಗೊಳಿಸುವಂತೆ ಮಾಡಿದರು. ಪ್ರತಿಭಟನಾಕಾರರನ್ನು ಮಾತುಕತೆಗೂ ನಾಲ್ಕು ಬಾರಿ ಆಹ್ವಾನಿಸಿದರು.

ಆದರೆ ಮಾತುಕತೆಗೆ ಸರಕಾರವೇ ತಮ್ಮ ಬಳಿ ಬರಬೇಕೆಂದು ಕಾಕ್ರೋಚ್ ಪಾರ್ಟಿ ಪಟ್ಟು ಹಿಡಿದಿದೆ.  ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರವರ ರಾಜೀನಾಮೆ ಪಡೆದು ಮಾತುಕತೆಗೆ ಬರಬೇಕೆಂದು ಕಂಡೀಶನ್ ಹಾಕಿದೆ. ಪ್ರತಿಭಟನಾಕಾರರು ಒಪ್ಪುವ ಸಮಯದಲ್ಲಿ ಚರ್ಚೆಗೆ ಸರಕಾರ ಸಿದ್ಧವಿದೆ ಎಂದು ಆರೋಗ್ಯ ಸಚಿವ ನಡ್ಡಾ ಹೇಳಿದ್ದಾರೆ. ಜೂನ್ 24 ಕ್ಕೆ ದೇಶಾದ್ಯಂತ ಶಾಂತಿಯುತವಾದ ಪ್ರತಿಭಟನೆಗೆ ಹೋರಾಟ ನಿರತ ನಾಯಕರು ಕರೆ ಕೊಟ್ಟಿದ್ದಾರೆ.

ಇದೇ ಕ್ರಮಗಳನ್ನು ಮುಂಚೆಯೇ ಮೋದಿ ಸರಕಾರ ತೆಗೆದುಕೊಂಡಿದ್ದರೆ, ಪ್ರತಿಭಟನಾಕಾರರ ಜೊತೆಗೆ ಮಾತುಕತೆಗೆ ಮುಂದಾಗಿ ಪರಿಹಾರ ಕಂಡುಕೊಂಡಿದ್ದರೆ ಈ ಹೋರಾಟವೇ ಮುಂದುವರೆಯುತ್ತಿರಲಿಲ್ಲ. ಸಂಸತ್ತಿನ ಬೀದಿಗಳಲ್ಲಿ ರಕ್ತ ಹರಿಯುತ್ತಿರಲಿಲ್ಲ. ವಾಂಗ್ಚುಕ್ ಉಪವಾಸ ಕೂರುವ ಅಗತ್ಯವೂ ಇರುತ್ತಿರಲಿಲ್ಲ. ಆದರೆ ಸರ್ವಾಧಿಕಾರಿಗಳ ದುರಹಂಕಾರೀ ಪ್ರವೃತ್ತಿ ಅದಕ್ಕೆ ಅವಕಾಶ ಮಾಡಿಕೊಡುವುದಿಲ್ಲ. ಅಧಿಕಾರದ ಮದ ಹಾಗೂ ಅಂಧಭಕ್ತರ ಬೆಂಬಲ ಸಂಧಾನಕ್ಕೆ ಮುಂದಾಗದಂತೆ ತಡೆಯೊಡ್ಡುತ್ತವೆ. ಹೀಗಾಗಿ ತನ್ನ ದುರಹಂಕಾರದ ಪರಮಾವಧಿಯಿಂದಾಗಿ ಸ್ವಘೋಷಿತ ವಿಶ್ವಗುರು ಇಡೀ ವಿಶ್ವದ ಮುಂದೆ ಬೆತ್ತಲಾಗಿದ್ದಾರೆ.  ಜಿರಲೆಗಳು ಅವರ ಅಹಂಕಾರಕ್ಕೆ ಕೊಡಲಿ ಪೆಟ್ಟನ್ನೇ ಕೊಟ್ಟಿದ್ದಾರೆ. ಯುವಜನರ ಹೋರಾಟ ಈಗ ಜಂತರ್ ಮಂತರ್‌ ನ ಆಚೆಗೂ ವಿಸ್ತರಿಸಿ ದೇಶಾದ್ಯಂತ ವ್ಯಾಪಿಸುತ್ತಿದೆ. ಈಗ ಸರ್ವಾಧಿಕಾರಿ ಸಂಧಾನಕ್ಕೆ ಮುಂದಾಗಿದ್ದಾನೆ.

ಆದರೂ ಪ್ರತಿಭಟನಾಕಾರರ ಪ್ರಮುಖ ಬೇಡಿಕೆಯಾದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನರವರ ರಾಜೀನಾಮೆ ಪಡೆಯಲು ಮೋದಿ ಮೀನಾಮೇಷಾ ಎಣಿಸುತ್ತಿರುವುದೇಕೆ? ಯಾಕೆಂದರೆ ಈ ಧರ್ಮೇಂದ್ರ ಆರೆಸ್ಸೆಸ್ ಬೆಂಬಲಿತ ವ್ಯಕ್ತಿ. ಮೋದಿ ಸರಕಾರ ಆರೆಸ್ಸೆಸ್ ಹಿಡಿತದಲ್ಲಿದೆ. ಕಳೆದ ಸಲ ಆರೆಸ್ಸೆಸ್ ನ್ನು ಕಡೆಗಣಿಸಿ ಮೋದಿ ಶಾ ಚುನಾವಣೆಗೆ ಹೋದಾಗ ಆರೆಸ್ಸೆಸ್ ನಿರ್ಲಿಪ್ತವಾಯ್ತು. ಅದರ ಪರಿಣಾಮ ಮೋದಿ ಸರಕಾರ ಬಹುಮತ ಕಳೆದುಕೊಂಡು ಬೇರೆ ಪಕ್ಷಗಳ ಸಹಕಾರದಲ್ಲಿ ಸರಕಾರ ರಚಿಸಬೇಕಾಯ್ತು. ಆರೆಸ್ಸೆಸ್ ಬೆಂಬಲ ಇಲ್ಲದಿದ್ದರೆ ತನ್ನ ಅಸ್ತಿತ್ವ ಇಲ್ಲ ಎಂದು ಅರಿತ ಮೋದಿ ಈಗ ಆರೆಸ್ಸೆಸ್ ವ್ಯಕ್ತಿಯಿಂದ ರಾಜೀನಾಮೆ ಪಡೆಯಲು ಸಾಧ್ಯವಾಗುತ್ತಿಲ್ಲ. ರಾಜೀನಾಮೆ ಕೊಡದೇ ಈ ಜೆನ್ ಝೀ (Gen Z) ಹೋರಾಟ ನಿಲ್ಲುವುದಿಲ್ಲ.

ಇಂತಹ ದುಸ್ಥಿತಿಗೆ ಯಾರು ಕಾರಣ? ನಿರುದ್ಯೋಗ ಸೃಷ್ಟಿಗೆ ಯಾರು ಕಾರಣ? ಅವಸಾನಗೊಂಡ ಶಿಕ್ಷಣ ವ್ಯವಸ್ಥೆಗೆ ಯಾರು ಕಾರಣ? ಎಲ್ಲದಕ್ಕೂ ಮೋದಿ ಕಾರಣ ಎನ್ನುವ ಮುಂಚೆ ಈ ಮೋದಿಯವರಿಗೆ ಜೈಕಾರ ಕೂಗಿ ಮತ ಹಾಕಿ ಅಧಿಕಾರದ ಪಟ್ಟವನ್ನು ಕೊಟ್ಟ ಪೋಷಕರೂ ಹೊಣೆಗಾರರು. ಈಗ ಮೋದಿ ಜನವಿರೋಧಿ ನೀತಿಗಳ ವಿರುದ್ಧ ಪ್ರತಿಭಟಿಸುತ್ತಿರುವ ಅನೇಕ ಯುವಕರು ಹಾಗೂ ಅವರ ಪೋಷಕರು ಕಳೆದ ಚುನಾವಣೆಗಳಲ್ಲಿ ಮೋದಿಯನ್ನು ಬೆಂಬಲಿಸಿದ್ದರು. ವರ್ಷಕ್ಕೆರಡು ಕೋಟಿ ಯುವಜನರಿಗೆ ಉದ್ಯೋಗ ಕೊಡುವುದಾಗಿ ಮೋದಿ ಕೊಟ್ಟ ಭರವಸೆಯನ್ನು ನಂಬಿದ್ದರು. ದೇಶ ಅಭಿವೃದ್ಧಿ ಕಾಣುತ್ತದೆ, ವಿಶ್ವಕ್ಕೆ ಗುರು ಆಗುತ್ತದೆ ಎಂದು ಆಶ್ವಾಸನೆ ಕೊಟ್ಟ ಮಾಯಗಾರನ ಮಾತುಗಳಲ್ಲಿ ವಿಶ್ವಾಸ ಇಟ್ಟಿದ್ದರು. ಆದರೆ ಕೊಟ್ಟ ಯಾವ ಭರವಸೆಗಳೂ ಈಡೇರದೇ ಇದ್ದಾಗ ನಿರಾಸೆ ಹೊಂದಿದರು. ಇರುವ ಅವಕಾಶಗಳು ಉಳ್ಳವರ ಪಾಲಾಗುತ್ತಿರುವುದನ್ನು ಕಂಡ ಯುವಕರು ಹತಾಶೆ ಹೊಂದಿದರು. ಖಾಸಗಿ ಕೋಚಿಂಗ್ ಕೇಂದ್ರಗಳ ಲೂಟಿ ಹಾಗೂ ಪರೀಕ್ಷೆ ಪ್ರಶ್ನೆ ಪತ್ರಿಕೆಗಳ ಲೀಕ್ ಗಳ ವಿರುದ್ಧ ಯುವಜನರು ಸಿಡಿದೆದ್ದರು. ಮೋದಿ ಸರಕಾರವನ್ನು ಬೆಂಬಲಿಸಿದ್ದಕ್ಕೆ ಪಶ್ಚಾತ್ತಾಪ ಪಡತೊಡಗಿದರು. ಯಾವ ಗೋದಿ ಮಾಧ್ಯಮಗಳು ಮೋದಿ ಭಜನೆಯಲ್ಲಿ ನಿರತವಾಗಿದ್ದವೋ ಈಗ ಅದೇ ಮಾರಿಕೊಂಡ ಮಾಧ್ಯಮಗಳನ್ನು ಪ್ರತಿಭಟನಾಟಕಾರರು ನಾಯಿಯಂತೆ ಓಡಿಸುತ್ತಿದ್ದಾರೆ. ಕೆಲವು ಊಸರವಳ್ಳಿ ಚಾನೆಲ್‌ಗಳು ಸಾವಕಾಶವಾಗಿ ಮೋದಿ ಸರಕಾರದಿಂದಾದ ದಮನವನ್ನು ಪ್ರಶ್ನಿಸಿ ಯುವಕರ ಹೋರಾಟಕ್ಕೆ ಬೆಂಬಲಕೊಡುವ ನಾಟಕವಾಡುತ್ತಿವೆ.

ಕೇವಲ ಒಬ್ಬ ಶಿಕ್ಷಣ ಮಂತ್ರಿಯ ರಾಜೀನಾಮೆಯಿಂದ ವ್ಯವಸ್ಥೆ ಬದಲಾಗಲು ಸಾಧ್ಯವಿಲ್ಲ. ಆದರೆ ಹಾಗೆ ರಾಜೀನಾಮೆ ಪಡೆಯುವುದರಿಂದ ಅಧಿಕಾರದ ಮದದಿಂದ ಮತ್ತೇರಿದ ಕೇಂದ್ರ ಸರಕಾರಕ್ಕೆ ಎಚ್ಚರಿಕೆ ರವಾನಿಸಬಹುದಾಗಿದೆ. ಜನವಿರೋಧಿ ಧೋರಣೆಗಳನ್ನು ಜಾರಿತಂದರೆ ಹೀಗೆಯೇ ಅಧಿಕಾರದಿಂದ ಕೆಳಗಿಳಿಯಬೇಕಾಗುತ್ತದೆ ಎನ್ನುವ ಸಂದೇಶವನ್ನು ಯುವ ಹೋರಾಟಗಾರರು ಕೊಡುತ್ತಿದ್ದಾರೆ. ಪ್ರಜಾಪ್ರಭುತ್ವ ದೇಶದಲ್ಲಿ ಸರ್ವಾಧಿಕಾರ ನಡೆಯದು ಎನ್ನುವ ಎಚ್ಚರಿಕೆಯನ್ನೂ ಈ ಜೆನ್ ಝೀ ಹೋರಾಟ ಮೋದಿ ಸರಕಾರಕ್ಕೆ ಕೊಟ್ಟಿದೆ.

ಇಡಿ ಐಟಿ ಸಿಬಿಐ ಗಳಂತಹ ತನಿಖಾ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಂಡು ವಿರೋಧ ಪಕ್ಷಗಳನ್ನು ದುರ್ಬಲ ಗೊಳಿಸಬಹುದು, ಆದರೆ ದೇಶದ ಜನತೆ ಅದರಲ್ಲೂ ರೈತರು ಯುವಜನರು ಎಚ್ಚೆತ್ತು ಎದ್ದು ನಿಂತರೆ ಮೋದಿ ಸರಕಾರವೇ ಪತನವಾಗುತ್ತದೆ.

ಹೋಗಲಿ.. ಜನರು ಪ್ರಜಾಸತ್ತಾತ್ಮಕವಾಗಿ ಹೋರಾಟ ಮಾಡಿದ್ದನ್ನು ಸರಕಾರ ಅತ್ಯಂತ ಕ್ರೂರವಾಗಿ ದಮನಿಸಿದಾಗ ಜನರ ಪರವಾಗಿ ನಿಲ್ಲಬೇಕಾದದ್ದು ಸುಪ್ರೀಂ ಕೋರ್ಟಿನ ಕರ್ತವ್ಯವಾಗಿದೆ. ಆದರೆ ಈ ಜಿರಲೆ ಪಕ್ಷದ ಹುಟ್ಟಿಗೆ ಕಾರಣೀಕರ್ತರಾದ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳಾದ ಮಾನ್ಯ ಸೂರ್ಯಕಾಂತರವರಿಗೆ ಪೊಲೀಸ್ ದೌರ್ಜನ್ಯದ ವಿಡಿಯೋಗಳನ್ನು ನೋಡಲೂ ಸಮಯವಿಲ್ಲವಂತೆ. ಇಂತವರಿಂದ ಅಧಿಕಾರಸ್ಥರ ಕ್ರೌರ್ಯಕ್ಕೆ ಬಲಿಯಾದವರು ನ್ಯಾಯವನ್ನು ನಿರೀಕ್ಷಿಸಲು ಸಾಧ್ಯವೇ? ಇಂತಹ ಬೇಜವಾಬ್ದಾರಿ ನ್ಯಾಯಾಧೀಶರಿಂದ ಪ್ರಜಾಪ್ರಭುತ್ವದ ರಕ್ಷಣೆ ಆಗುವುದೇ? ಎಂಬುದು ಬಹುಜನರ ಪ್ರಶ್ನೆಯಾಗಿದೆ.

ಏನೇ ಆಗಲಿ. ಜಿರಲೆ ಜನತಾ ಪಕ್ಷ, ಸತ್ತಂತಿಹರನು ಬಡಿದೆಚ್ಚರಿಸುವ ಕೆಲಸ ಮಾಡಿದ್ದಕ್ಕೆ ಅಭಿನಂದನೆಗಳು. ನೀಟ್ ಪೇಪರ್ ಲೀಕ್ ವ್ಯಾಪ್ತಿಯನ್ನು ಮೀರಿ ದೇಶದ ಜನರನ್ನು ಕಿತ್ತು ತಿನ್ನುತ್ತಿರುವ ಇತರೇ ಪ್ರಮುಖ ಸಮಸ್ಯೆಗಳತ್ತಲೂ ತಮ್ಮ ಹೋರಾಟದ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿ ಆಗಾಗ ಆಳುವವರ ಬುರುಡೆಗೆ ಬಿಸಿನೀರು ಕಾಯಿಸಿ ಬುಡಕ್ಕೆ ಬೆಂಕಿ ಹಾಕುತ್ತಾ ಇರಬೇಕೆಂಬುದು ಜನರ ಬಯಕೆಯಾಗಿದೆ. ಈ ದೇಶವನ್ನು ಸರ್ವಾಧಿಕಾರಿ ವ್ಯಕ್ತಿ ಹಾಗೂ ಶಕ್ತಿಗಳಿಂದ ಮುಕ್ತವಾಗಿಸುವ ಹೊಣೆಗಾರಿಕೆ ಜನಾಂದೋಲನಗಳಿಗೆ ಮಾತ್ರ ಇದೆ. ಏನಾದರಾಗಲಿ ಪ್ರಜಾಪ್ರಭುತ್ವ ಉಳಿಯಲೇ ಬೇಕಿದೆ, ಸರ್ವಾಧಿಕಾರಿ ಮನೋಭಾವ ಅಳಿಯಲೇ ಬೇಕಿದೆ.

ಶಶಿಕಾಂತ ಯಡಹಳ್ಳಿ

ಇವರು ಕನ್ನಡದ ಪ್ರಮುಖ ರಂಗಕರ್ಮಿಗಳು, ಪತ್ರಕರ್ತರು, ಅಂಕಣಕಾರರು. ಪ್ರಚಲಿತ ಸಾಮಾಜಿಕ ಹಾಗೂ ರಾಜಕೀಯ  ವಿದ್ಯಮಾನಗಳ ಬಗ್ಗೆ ತಮ್ಮ ವಿಚಾರಗಳನ್ನು ಪ್ರಖರವಾಗಿ ಮಂಡಿಸುತ್ತಾ ಬಂದಿದ್ದಾರೆ.

ಇದನ್ನೂ ಓದಿ- ನಾಡಗೀತೆ ವಿವಾದ; ಬೌದ್ಧ ಪದ ಸೇರ್ಪಡೆಗೆ ಯಾಕೆ ಅಪಸ್ವರ?

More articles

Latest article

Most read