ಮಹಿಳೆಯ ಸಲ್ವಾರ್ ತೆಗೆಯಲು ಯತ್ನಿಸಿ, ಎದೆ ಒತ್ತಿದ್ದು ಅತ್ಯಾಚಾರಕ್ಕೆ ಯತ್ನವಲ್ಲ ಎಂದ ಪಾಟ್ನಾ ಹೈಕೋರ್ಟ್‌ : ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡ ಸುಪ್ರೀಂ ಕೋರ್ಟ್

ನವದೆಹಲಿ ಸೆ. 23: ಮಹಿಳೆಯೋರ್ವರ ಸಲ್ವಾರ್ ತೆಗೆಯಲು ಯತ್ನಿಸಿ, ಆಕೆಯ ಎದೆಯನ್ನು ಒತ್ತಿ ದೈಹಿಕವಾಗಿ ಕಿರುಕುಳ ನೀಡಿದ ಆರೋಪಗಳು ‘ಅತ್ಯಾಚಾರಕ್ಕೆ ಯತ್ನ’ ಎಂಬ ಅಪರಾಧವನ್ನು ಸಾಬೀತುಪಡಿಸುವುದಿಲ್ಲ ಎಂದು ಪಾಟ್ನಾ ಹೈಕೋರ್ಟ್ ನೀಡಿದ್ದ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದೆ.

ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಾಯ್ಮಲ್ಯ ಬಾಗ್ಚಿ ಮತ್ತು ವಿ. ಮೊಹನಾ ಅವರನ್ನೊಳಗೊಂಡ ಪೀಠ ಬುಧವಾರ ಈ ಪ್ರಕರಣವನ್ನು ಕೈಗೆತ್ತಿಕೊಂಡಿದೆ. ಪಾಟ್ನಾ ಹೈಕೋರ್ಟ್ ತೀರ್ಪಿನಲ್ಲಿರುವ ಕೆಲವು ಹೇಳಿಕೆಗಳು ಆಕ್ಷೇಪಾರ್ಹವಾಗಿವೆ ಎಂದು ಪೀಠ ಗಮನಿಸಿದೆ.

ಏನಾಗಿತ್ತು?

ಜುಲೈ 9, 2026ರಂದು ಪಾಟ್ನಾ ಹೈಕೋರ್ಟ್ ನೀಡಿದ್ದ ತೀರ್ಪಿನಲ್ಲಿ, ಆರೋಪಿಯು ಮಹಿಳೆಯನ್ನು ಕೋಣೆಯೊಳಗೆ ಬಂಧಿಸಿ, ಆಕೆಯ ಸಲ್ವಾರ್ ತೆಗೆಯಲು ಯತ್ನಿಸಿ, ಎದೆಯನ್ನು ಒತ್ತಿ ದೈಹಿಕವಾಗಿ ಕಿರುಕುಳ ನೀಡಿದ್ದ ಆರೋಪವನ್ನು ಪರಿಶೀಲಿಸಲಾಗಿತ್ತು.

ಆದರೆ, ಅತ್ಯಾಚಾರಕ್ಕೆ ಯತ್ನಿಸಿದ ಉದ್ದೇಶವನ್ನು ಸ್ಪಷ್ಟವಾಗಿ ತೋರಿಸುವಂತಹ ನೇರ ಅಥವಾ ನಿರ್ದಿಷ್ಟ ಕೃತ್ಯ ಸಾಬೀತಾಗಿಲ್ಲ ಎಂಬ ಕಾರಣಕ್ಕೆ, ಭಾರತೀಯ ದಂಡ ಸಂಹಿತೆಯ 376ರ ಜೊತೆಗೆ 511ನೇ ವಿಧಿಯಡಿ ದಾಖಲಾಗಿದ್ದ ಅತ್ಯಾಚಾರಕ್ಕೆ ಯತ್ನದ ಅಪರಾಧವನ್ನು ಹೈಕೋರ್ಟ್ ಅನ್ವಯಿಸಿರಲಿಲ್ಲ. ಬದಲಿಗೆ, ಈ ಕೃತ್ಯಗಳು ಮಹಿಳೆಯ ಮಾನಕ್ಕೆ ಧಕ್ಕೆ ಉಂಟುಮಾಡುವ ಅಪರಾಧದ ವ್ಯಾಪ್ತಿಗೆ ಬರುತ್ತವೆ ಎಂದು ಹೇಳಿ, ಸಂಬಂಧಿತ ಶಿಕ್ಷೆಯನ್ನು ರದ್ದುಗೊಳಿಸಿತ್ತು.

ಸುಪ್ರೀಂ ಕೋರ್ಟ್ ಏನು ಹೇಳಿದೆ?

ಈ ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆದಾಗ, ಪೀಠವು ಹೈಕೋರ್ಟ್‌ನ ಕೆಲವು ಹೇಳಿಕೆಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದೆ. ಪ್ರಕರಣದಲ್ಲಿ ಆರೋಪಿಯ ವಾದವನ್ನೂ ಆಲಿಸದೆ ತೀರ್ಪನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಹೇಳಿದ್ದಾರೆ. ಆರೋಪಿಗೆ ನೋಟಿಸ್ ತಲುಪುವಂತೆ ಸ್ಥಳೀಯ ಪೊಲೀಸರ ಮೂಲಕ ಕ್ರಮ ಕೈಗೊಳ್ಳುವಂತೆ ಬಿಹಾರ ಸರ್ಕಾರದ ಪರ ವಕೀಲರಿಗೆ ಸೂಚಿಸಲಾಗಿದೆ.

ಈ ಪ್ರಕರಣವು “In Re: Order Dated 09.07.2026 Passed by the High Court of Judicature at Patna in Criminal Appeal (SJ) No. 775/2013 and Ancillary Issues” ಎಂಬ ಹೆಸರಿನಲ್ಲಿ ಸ್ವಯಂಪ್ರೇರಿತ ಪ್ರಕರಣವಾಗಿ ದಾಖಲಾಗಿದೆ.

ಈ ಬೆಳವಣಿಗೆಯ ಹಿನ್ನೆಲೆಯಲ್ಲಿ, ಲೈಂಗಿಕ ಅಪರಾಧಗಳ ವಿಚಾರಣೆಯಲ್ಲಿ ನ್ಯಾಯಾಲಯಗಳು ಬಳಸುವ ಕಾನೂನು ಮಾನದಂಡಗಳು, ನ್ಯಾಯಾಂಗದ ಸೂಕ್ಷ್ಮತೆ ಮತ್ತು ತೀರ್ಪುಗಳಲ್ಲಿ ಬಳಸುವ ಭಾಷೆಯ ಬಗ್ಗೆಯೂ ಸುಪ್ರೀಂ ಕೋರ್ಟ್ ಪರಿಶೀಲನೆ ನಡೆಸುವ ಸಾಧ್ಯತೆ ಇದೆ.

More articles

Latest article

Most read