ತುಳು  ಭಾಷೆ: ಚಾರಿತ್ರಿಕ ಹಿನ್ನೆಲೆ ಮತ್ತು ಜನ ಬಳಕೆಯಲ್ಲಿ ತುಳು – ಭಾಗ-2

ಕರ್ನಾಟಕ ಸರ್ಕಾರವು ಸೆಪ್ಟೆಂಬರ್ 18, 2026 ರಂದು ತುಳು ಭಾಷೆಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ‘ಎರಡನೇ ಹೆಚ್ಚುವರಿ ಆಡಳಿತ ಭಾಷೆ’ಯ ಅಧಿಕೃತ ಸ್ಥಾನಮಾನವನ್ನು ಘೋಷಿಸಿದೆ. ತುಳು ಭಾಷೆಯ ಸಮಗ್ರ ಬೆಳವಣಿಗೆಗೆ ಇದೊಂದು ಐತಿಹಾಸಿಕ ಹೆಜ್ಜೆ. ಈ ಹಿನ್ನೆಲೆಯಲ್ಲಿ ತುಳು ಭಾಷೆಯ ಚಾರಿತ್ರಿಕ ಹಿನ್ನೆಲೆ ಹಾಗೂ  ತುಳುವಿನ ಬಳಕೆಯ  ಸುತ್ತ ಬೆಳಕು ಚೆಲ್ಲಿದ್ದಾರೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ತಾರಾನಾಥ ಗಟ್ಟಿ ಕಾಪಿಕಾಡ್‌. ಲೇಖನದ ಎರಡನೆಯ ಭಾಗ ಇಲ್ಲಿದೆ. 

ಭಾಗ -1 ಓದಿದ್ದೀರಾ? ತುಳು  ಭಾಷೆ: ಚಾರಿತ್ರಿಕ ಹಿನ್ನೆಲೆ ಮತ್ತು ಜನ ಬಳಕೆಯಲ್ಲಿ ತುಳು

ಶಿಕ್ಷಣದಲ್ಲಿ ತುಳು:

2010 ರಿಂದಲೇ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಕರ್ನಾಟಕ ಸರಕಾರದ ಅನುಮೋದನೆಯೊಂದಿಗೆ ತುಳು ಭಾಷೆಯನ್ನು ತೃತೀಯ ಭಾಷೆಯಾಗಿ ಬೋಧನೆ ಮಾಡಲಾಗುತ್ತಿದೆ. ರಾಜ್ಯ ಸರಕಾರವೇ ತುಳು ಪಠ್ಯ ಪುಸ್ತಕಗಳನ್ನು ಒದಗಿಸಿ ಪರೀಕ್ಷೆಯನ್ನು ಅಯೋಜಿಸುತ್ತಿದ್ದು ಪ್ರತಿ ವರ್ಷವು ಸರಾಸರಿಯಾಗಿ 800 ರಿಂದ 1000 ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ತುಳು ಭಾಷೆಯನ್ನು  ತೃತೀಯ ಭಾಷೆಯಾಗಿ ಆಯ್ಕೆ ಮಾಡಿ ತೇರ್ಗಡೆಯಾಗುತ್ತಿದ್ದಾರೆ. ಉಭಯ ಜಿಲ್ಲೆಯ  ಸರಕಾರಿ, ಅನುದಾನಿತ, ಖಾಸಗಿ ಶಾಲೆಗಳು ಕನ್ನಡ ಮಾಧ್ಯಮ ಹಾಗೂ ಇಂಗ್ಲೀಷ್‌ ಮಾಧ್ಯಮ ಶಾಲೆಗಳು ತಮ್ಮ ಶಾಲೆಗಳಲ್ಲಿ  ತುಳು ಪಠ್ಯವನ್ನು ತೃತೀಯ ಭಾಷೆಯಾಗಿ ಅಳವಡಿಸಿಕೊಂಡಿದ್ದಾರೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಂದಿನ ಅಧ್ಯಕ್ಷ ಡಾ.ಪಾಲ್ತಾಡಿ ರಾಮಕೃಷ್ಣ ಆಚಾರ್‌ ಅವರ ನೇತೃತ್ವದಲ್ಲಿ ನಡೆದ ಬೇಡಿಕೆಗೆ ಸ್ಪಂದಿಸಿ  ಅಂದಿನ ಸರಕಾರ ತುಳು ಪಠ್ಯಕ್ರಮವನ್ನು ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಜಾರಿಗೊಳಿಸಲು ಅನುಮೋದನೆ ನೀಡಿತ್ತು. ಶೈಕ್ಷಣಿಕ ವ್ಯಾಪ್ತಿಗೆ ತುಳು ಭಾಷೆಯನ್ನು ಪರಿಚಯಿಸುವ ನಿಟ್ಟಿನಲ್ಲಿ ಹಾಗೂ  ತುಳು ಭಾಷಾ ಸಮಗ್ರ ಬೆಳವಣಿಗೆಯ ನಿಟ್ಟಿನಲ್ಲಿ ಇದೊಂದು ಮಹತ್ವದ ಉಪಕ್ರಮವಾಗಿತ್ತು. ಸ್ವಾತಂತ್ರ್ಯಪೂರ್ವ ಕಾಲಘಟ್ಟದಲ್ಲಿ   ಮಿಷನರಿಗಳು ಮಂಗಳೂರಿನಲ್ಲಿ ಶಾಲೆಗಳನ್ನು ಆರಂಭಿಸುವ ಸಂದರ್ಭದಲ್ಲಿ ಕೆಲವು ವರ್ಷಗಳ ಕಾಲ ಪ್ರಾಥಮಿಕ ಶಾಲೆಯಲ್ಲಿ  ತುಳು ಪಠ್ಯವನ್ನು ಅಳವಡಿಸಿದ್ದರು (1891-ತುಳು ದುಂಬುದ ಪುಸ್ತಕ) ಎಂಬುದನ್ನು ನಾಡಿನ ಹಿರಿಯ ಸಂಶೋಧಕ ಡಾ. ಶ್ರೀನಿವಾಸ ಹಾವನೂರು ಅರವರು ದಾಖಲಿಸಿದ್ದಾರೆ. 

ಉನ್ನತ ಶಿಕ್ಷಣದಲ್ಲಿ ತುಳು:

2017 ರಿಂದ ಮಂಗಳೂರು ವಿಶ್ವವಿದ್ಯಾನಿಲಯವು ಪದವಿ ಶಿಕ್ಷಣದಲ್ಲಿ ತುಳು ಭಾಷೆಯನ್ನು ದ್ವಿತೀಯ ಭಾಷೆಯಾಗಿ ಜ್ಯಾರಿಗೊಳಿಸಿದೆ. 2018 ರಿಂದ ಮಂಗಳೂರು ವಿಶ್ವವಿದ್ಯಾನಿಲಯವು ತುಳು ಎಮ್.ಎ ತರಗತಿಯನ್ನು ಆರಂಭಿಸಿದೆ.  ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ  ಅಂದಿನ ಅಧ್ಯಕ್ಷರಾಗಿದ್ದ ಎ.ಸಿ. ಭಂಡಾರಿ ಅವರ ನೇತೃತ್ವದಲ್ಲಿ  ನಡೆದ ಬೇಡಿಕೆಗೆ ಸ್ಪಂದಿಸಿ  ಮಂಗಳೂರು  ವಿಶ್ವವಿದ್ಯಾನಿಲಯ ತುಳು ಭಾಷೆಯನ್ನು ಉನ್ನತ ಶಿಕ್ಷಣ ವ್ಯಾಪ್ತಿಯೊಳಗೆ ಪ್ರವೇಶಿಸಲು ಅನುವು ಮಾಡಿಕೊಟ್ಟಿತು. ಈಗಾಗಲೇ ಐದು ತುಳು ಎಂ.ಎ. ಸ್ನಾತಕೋತ್ತರ ಪದವೀಧರರ ತಂಡ ಹೊರ  ಬಂದಿವೆ.  ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪದವಿಯಲ್ಲಿ ತುಳು ಅಧ್ಯಯನ ಮಾಡಲು ಸಾಧ್ಯವಾಗಿದೆ.  ಇದಕ್ಕಿಂತಲೂ ಪೂರ್ವದಲ್ಲಿ 1980ರ ದಶಕದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವು ತನ್ನ ಕನ್ನಡ ಎಂ.ಎ. ವಿದ್ಯಾರ್ಥಿಗಳಿಗೆ ತುಳು ಭಾಷೆಗೆ ಸಂಬಂಧಿಸಿದಂತೆ ಒಂದು ಅಧ್ಯಾಯವನ್ನು ಕಲಿಯಲು ಅವಕಾಶ ಕಲ್ಪಿಸಿತ್ತು, ಅದು ಈಗಲೂ ಮುಂದುವರಿದಿದೆ. ಇತ್ತೀಚೆಗೆ ಮಂಗಳೂರು  ವಿಶ್ವವಿದ್ಯಾನಿಲಯವು  ತುಳು ಪಿ.ಎಚ್.ಡಿ ಪದವಿ ಅಧ್ಯಯನಕ್ಕೆ  ಕೂಡ ಅನುಮೋದನೆ  ನೀಡಿದೆ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಪ್ರಾಯೋಜಿತ ತುಳು ಅಧ್ಯಯನ ಪೀಠವು 90 ರ ದಶಕದಿಂದಲೇ ಕಾರ್ಯನಿರ್ವಹಿಸುತ್ತಿದೆ. 

ರಾಜ್ಯ ಹಾಗೂ ಹೊರರಾಜ್ಯದ ವಿಶ್ವವಿದ್ಯಾನಿಲಯದಲ್ಲಿ ತುಳು

ಮಂಗಳೂರು ವ್ಯಾಪ್ತಿಯ ಹೊರಗಡೆ ಕೂಡ ತುಳು ಅಧ್ಯಯನಕ್ಕೆ  ಮಹತ್ತ್ವದ ಪ್ರೋತ್ಸಾಹ ಲಭಿಸಿದೆ. ಹಂಪಿ ಕನ್ನಡ ವಿಶ್ವವಿದ್ಯಾನಿಲಯ, ಹೈದ್ರಾಬಾದ್‌ ಕುಪ್ಪಂ ವಿಶ್ವವಿದ್ಯಾನಿಲಯ, ಓಸ್ಮಾನಿಯ ವಿಶ್ವವಿದ್ಯಾನಿಲಯ  ಮುಂಬಯಿ ವಿಶ್ವವಿದ್ಯಾನಿಲಯ, ಕಾಸರಗೋಡು ಕೇಂದ್ರೀಯ ವಿಶ್ವವಿದ್ಯಾನಿಲಯ, ಕಣ್ಣೂರು ವಿಶ್ವವಿದ್ಯಾನಿಲಯ, ಪೂನಾ ವಿಶ್ವವಿದ್ಯಾನಿಲಯ ತುಳು ಅಧ್ಯಯನಕ್ಕೆ ಹಾಗೂ ತುಳು ಪ್ರಕಟಣೆಗಳಿಗೆ ವಿಶೇಷ ಅವಕಾಶ ಕಲ್ಪಿಸಿದೆ. ಹಂಪಿ ವಿಶ್ವವಿದ್ಯಾನಿಲಯವು 2007 ರಲ್ಲಿ  ಪ್ರಕಟಿಸಿರುವ ತುಳು ಸಾಹಿತ್ಯ ಚರಿತ್ರೆ ( ಸಂ. ಡಾ.ಬಿ.ಎ.ವಿವೇಕ ರೈ) ಬೃಹತ್‌ ಗ್ರಂಥವು  ತುಳು ಬದುಕು ಹಾಗೂ  ಸಾಹಿತ್ಯ ಲೋಕವನ್ನು ಅನಾವರಣ ಮಾಡುವ ಅತ್ಯಂತ ಮೌಲಿಕ ಕೃತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಖಾಸಗಿ  ವಿಶ್ವವಿದ್ಯಾನಿಲಯದಲ್ಲಿ ತುಳು :

ಪ್ರತಿಷ್ಠಿತ ಅಂತಾರಾಷ್ಟ್ರೀಯ ಖ್ಯಾತಿಯ ಮಣಿಪಾಲ ವಿಶ್ವವಿದ್ಯಾನಿಲಯದ(ಮಾಹೆ)  ‘ಸೆಂಟರ್‌ ಫಾರ್‌ ಇಂಟರ್‌ ಕಲ್ಚರಲ್‌ ಡಯಾಲಾಗ್‌ ಆಂಡ್‌ ಸ್ಟಡೀಸ್‌’  ತುಳುನಾಡಿನ  ಜಾನಪದದ ಅಧ್ಯಯನಕ್ಕೆ  ವಿಶೇಷ ಒತ್ತು ನೀಡಿ ಕಾರ್ಯನಿರ್ವಹಿಸುತ್ತಿದೆ. ಇದೇ ವಿಶ್ವವಿದ್ಯಾನಿಲಯದ ಪ್ರಾದೇಶಿಕ ಭಾಷಾ ಅಧ್ಯಯನ ಕೇಂದ್ರ ಕೂಡ ತುಳು ಭಾಷೆಯ ಅಧ್ಯಯನಕ್ಕೆ ಮಹತ್ವದ ಕೊಡುಗೆಯನ್ನು ನೀಡುತ್ತಿದೆ.

ಸುಮಾರು 175 ವರ್ಷಗಳ ಇತಿಹಾಸವಿರುವ  ಮಂಗಳೂರಿನ ಸಂತ ಅಲೋಶಿಯಸ್ ಶಿಕ್ಷಣ ಸಂಸ್ಥೆಯು   ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ. ಈ ಸಂಸ್ಥೆಯು  ಇತ್ತೀಚೆಗೆ  ಸಂತ ಅಲೋಶಿಯಸ್‌  ಪರಿಗಣಿತ ವಿಶ್ವವಿದ್ಯಾನಿಲಯ ಆಗಿ ಮಾನ್ಯತೆ ಪಡೆದಿರುವ ಸಂದರ್ಭದಲ್ಲಿ ತನ್ನ ಪದವಿ ಶಿಕ್ಷಣದಲ್ಲಿ  ತುಳು ಪಠ್ಯವನ್ನು ಜಾರಿಗೆ ತಂದಿದೆ.  ತನ್ನ ಕಲಾ ನಿಕಾಯದಲ್ಲಿ ತುಳು ವಿಭಾಗವನ್ನು ಆರಂಭಿಸಿದೆ.

ತುಳುವಿನಲ್ಲಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳು

ಮಂಗಳೂರಿನ ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯವು ತುಳು ಅಧ್ಯಯನ ವಿಭಾಗವನ್ನು ಆರಂಭಿಸಿ, ಸಂಶೋಧನಾ ಪ್ರಕಟಣೆ ಹಾಗೂ ಅಧ್ಯಯನಕ್ಕೆ ಪ್ರೋತ್ಸಾಹ ನೀಡುತ್ತಿದೆ.

ವಿದೇಶಿ ವಿಶ್ವ ವಿದ್ಯಾನಿಲಯದಲ್ಲಿ ತುಳು :

ವಿದೇಶದ ಹಲವು ವಿಶ್ವವಿದ್ಯಾನಿಲಯಗಳು ತುಳು ಅಧ್ಯಯನ ಹಾಗೂ ತುಳುವಿನ ಬಗ್ಗೆ ದಾಖಲೀಕರಣಕ್ಕೆ  ಪ್ರೋತ್ಸಾಹ ಬೆಂಬಲ ನೀಡಿವೆ. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯ, ಫಿನ್ಲೆಂಡ್‌ ನ ತುರ್ಕು ವಿಶ್ವವಿದ್ಯಾನಿಲಯ, ಜರ್ಮನಿಯ ಟ್ಯೂಬಿಂಗನ್‌ ವಿಶ್ವವಿದ್ಯಾನಿಲಯ, ಜಪಾನ್‌ ದೇಶದ ವಸೇಡಾ ವಿಶ್ವವಿದ್ಯಾನಿಲಯ ಪ್ರಮುಖವಾದುವು. ಅಮೇರಿಕದ ಜೆ.ಆರ್. ಇ ಮತ್ತು ಟಿ.ಓ.ಇ. ಎಏಫ್‌. ಎಲ್  ಪರೀಕ್ಷಾ ಅರ್ಜಿ ನಮೂನೆಯಲ್ಲಿ ನೀಡಲಾದ ಭಾಷೆಗಳ ಪಟ್ಟಿಯಲ್ಲಿ  ಭಾರತದ 17 ಭಾಷೆಗಳಿದ್ದು, ಅದರಲ್ಲಿ ತುಳು ಭಾಷೆಯೂ ಇದೆ ಅನ್ನುವುದು ಪ್ರತಿಷ್ಠೆ ಹಾಗೂ ತುಳು ಭಾಷೆಯ ವ್ಯಾಪಕತೆಗೆ ಸಂದಿರುವ ಮಾನ್ಯತೆ ಎಂದು  ಉಲ್ಲೇಖಿಸಬಹುದಾಗಿದೆ.

ಮಾಧ್ಯಮ ರಂಗದಲ್ಲಿ ತುಳು:

1921 ರಲ್ಲಿ ಉಡುಪಿಯಲ್ಲಿ ಹೊನ್ನಯ್ಯ ಶೆಟ್ರ ನೇತೃತ್ವದಲ್ಲಿ ಆರಂಭಗೊಂಡಿದ್ದ ‘ನವಯುಗ’ ಪತ್ರಿಕೆಯು 1936 ರಲ್ಲಿ   ‘ತುಳು ಪತ್ರಿಕೆ’ ಎಂಬ ತಿಂಗಳ ವಿಶೇಷ ಪುರವಣಿಯನ್ನು  ಆರಂಭಿಸಿತು. 1939 ರ ತನಕ ಮಟ್ಟಾರು ವಿಠಲ ಹೆಗ್ಡೆ (ಎಂ.ವಿ. ಹೆಗ್ಡೆ) ಅವರ ಮುತುವರ್ಜಿಯಲ್ಲಿ ಈ ತುಳು ವಿಶೇಷ ಪುರವಣಿ ಪ್ರಕಟವಾಗಿತ್ತು.  ಮುಂದೆ ತುಳು ಪತ್ರಿಕೆಗಳ ಯುಗ ಆರಂಭವಾಗುವುದು ಎಪ್ಪತ್ತರ ದಶಕದಲ್ಲಿ. ಸ್ವಾತಂತ್ರ್ಯ ಹೋರಾಟಗಾರ ಅಮ್ಮೆಂಬಳ ಬಾಳಪ್ಪ ಅವರು  ತುಳು ಸಿರಿ(1970) ಪತ್ರಿಕೆ ಆರಂಭಿಸಿ ಅನೇಕ ಬರಹಗಾರರನ್ನು ತುಳುವಿನಲ್ಲಿ ಬರೆಯಲು ಪ್ರೇರೇಪಿಸಿದರು. 1971 ರಲ್ಲಿ ತುಳು ಕೂಟ ಪತ್ರಿಕೆ ಆರಂಭಗೊಂಡಿತು. ಆನಂತರ 20ಕ್ಕೂ  ಹೆಚ್ಚು ತುಳು ಪತ್ರಿಕೆಗಳು, ನಿಯತಕಾಲಿಕಗಳು ಪ್ರಕಟಗೊಂಡವು. ಇವತ್ತಿಗೂ ನಿಯತಕಾಲಿಕಗಳಾದ ತುಳುವ, ಮದಿಪು, ಉಡಲ್‌, ಪೂವರಿ ಪ್ರಕಟವಾಗುತ್ತಿವೆ. ಟೈಮ್ಸ್ ಆಫ್ ಕುಡ್ಲ, ತುಳುನಾಡು ವಾರ್ತೆ ಆನ್ ಲೈನ್ ಪತ್ರಿಕೆ ಪ್ರಕಟವಾಗುತ್ತಿದೆ. 

ರೇಡಿಯೋ ಸಿಲೋನ್ (ಶ್ರೀಲಂಕಾ)ದಿಂದ 1970ರಿಂದಲೇ ತುಳು ಹಾಡುಗಳ ಪ್ರಸಾರ ಆರಂಭಗೊಂಡಿತ್ತು.   ಮಂಗಳೂರು ಆಕಾಶವಾಣಿ (ಎ.ಐ.ಆರ್‌ ) 1976ರಿಂದ ತುಳು ಕಾರ್ಯಕ್ರಮಗಳನ್ನು ಬಿತ್ತರಿಸುತ್ತಲಿದೆ. ಬೆಂಗಳೂರು ಮತ್ತು ದಿಲ್ಲಿ ದೂರದರ್ಶನ ಕೇಂದ್ರಗಳು ತುಳು ಕಾರ್ಯಕ್ರಮಗಳನ್ನು  ಪ್ರಸಾರ ಮಾಡುತ್ತಿವೆ. ಖಾಸಗಿ ಎಫ್. ಎಂ. ರೇಡಿಯೋ ಮಂಗಳೂರು ಕೇಂದ್ರಗಳು ತುಳು ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿವೆ. ಖಾಸಗಿ ಶಿಕ್ಷಣ ಸಂಸ್ಥೆಗಳ ಸಮುದಾಯ ರೇಡಿಯೋಗಳಾದ ರೇಡಿಯೋ ಮಣಿಪಾಲ್‌(ಮಾಹೆ), ರೇಡಿಯೋ ಸಾರಂಗ್‌ (ಅಲೋಶಿಯಸ್ ವಿ ವಿ), ರೇಡಿಯೋ ನಿನಾದ (ಎಸ್ ಡಿ ಎಂ ಕಾಲೇಜು) ಪ್ರತಿನಿತ್ಯವು ತುಳು ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತೀವೆ.

 ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಸ್ಥಳೀಯ ತುಳು ಕೇಬಲ್ ಟಿವಿ ವಾಹಿನಿಗಳು ನಿರಂತರವಾಗಿ ತುಳು ಕಾರ್ಯಕ್ರಮಗಳನ್ನು  ಬಿತ್ತರಿಸುತ್ತಿವೆ..  ಮುಖ್ಯವಾಗಿ ನಮ್ಮ ಕುಡ್ಲ ಟಿ. ವಿ ವಾಹಿನಿ, ನಮ್ಮ  ಟಿವಿ, ದೈಜಿ ವರ್ಲ್ಡ್, ವಿ ಫೋರ್‌  ನ್ಯೂಸ್ ಚಾನೆಲ್‌, ಅಭಿಮತ, ಪೊಸಕುರಲ್ ಟಿವಿ, ಅಬ್ಬಕ್ಕ ಟಿವಿ, ಉಡುಪಿ ಚಾನೆಲ್ ಮೊದಲಾದ ವಾಹಿನಿಗಳ ಕೊಡುಗೆ ತುಳು ಭಾಷೆಯ ಬೆಳವಣಿಗೆಯಲ್ಲಿ ಮಹತ್ವದ್ದಾಗಿದೆ.   

ತುಳು ಮೌಖಿಕ ಸಾಹಿತ್ಯ ಭಂಡಾರ: ಪಾಡ್ದನ

ತುಳುವಿನ ಮೌಖಿಕ ಸಾಹಿತ್ಯ ಅತ್ಯಂತ ಶ್ರೀಮಂತವಾದುದು. ತುಳು ಪಾಡ್ದನಗಳು,  ಜನಪದ ಗೀತೆಗಳು, ಗಾದೆ, ಒಗಟು ಇವೆಲ್ಲವೂ ಅಪಾರ ಮೌಖಿಕ ಸಾಹಿತ್ಯದ ಗಣಿಗಳಾಗಿವೆ. ಮಿಷನರಿಗಳು ಮೊದಲ ಪಾಡ್ದನ ಸಂಗ್ರಹ  ಪ್ರಕಟಿಸಿದರು. ಎ. ಮೆನ್ನರ್‌ ಅವರ 1886 ರಲ್ಲಿ ಪ್ರಕಟಿಸಿದ  ‘ಪಾಡ್ದನೊಳು’-  ಕೃತಿಯಲ್ಲಿ ಅವರು ಇದು ತುಳು ದೇಶದ ಪಾಡ್ದನಗಳು ಎಂದು ಉಲ್ಲೇಖಿಸುತ್ತಾರೆ. ಸ್ವಾತಂತ್ರ್ಯೋತ್ತರ ಕಾಲ ಸಂದರ್ಭದಲ್ಲಿ ಅಂದರೆ 1969ರಲ್ಲಿ ಪ್ರೊ.ಅಮೃತ ಸೋಮೇಶ್ವರ ಅವರು ದಾಖಲಿಸಿದ ಪಾಡ್ದನ ಸಂಪುಟವನ್ನು ಹಂಪಿ ವಿಶ್ವವಿದ್ಯಾನಿಲಯ ಪ್ರಕಟಿಸಿ ತುಳುವಿನ ಮೌಖಿಕ ಸಾಹಿತ್ಯದ ದಾಖಲೀಕರಣವನ್ನು ಮತ್ತೊಂದು ಮಜಲಿಗೆ ತೆರೆದುಕೊಳ್ಳಲು ವೇದಿಕೆ ಒದಗಿಸಿತು. ನಂತರದ ಕಾಲಘಟ್ಟದಲ್ಲಿ ತುಳು ಮೌಖಿಕ ಸಾಹಿತ್ಯದ ಅಧ್ಯಯನಕ್ಕಾಗಿ ದೇಶೀ ವಿದ್ವಾಂಸರಲ್ಲದೆ  ವಿದೇಶಗಳಿಂದ ಅಂದರೆ ಅಮೇರಿಕ, ಫಿನ್ಲೆಂಡ್, ಫ್ರಾನ್ಸ್, ಜಪಾನ್, ಇಂಗ್ಲೆಂಡ್ ಮತ್ತು ಇಟಲಿಗಳಿಂದ ಭಾಷಾ ಶಾಸ್ತಜ್ಞರು ಮತ್ತು ಜನಪದ ವಿದ್ವಾಂಸರು ಕರಾವಳಿ ಜಿಲ್ಲೆಗೆ ಭೇಟಿ ನೀಡುತ್ತಿದ್ದಾರೆ.  ಫಿನ್ಲೆಂಡ್ ನ  ಲಾರಿ ಹಾಂಕೋ  ಅವರು ದಾಖಲೀಕರಣ ಮಾಡಿದ ತುಳು ಸಿರಿ ಮಹಾಕಾವ್ಯ\ ಪಾಡ್ದನವು ಇಂಗ್ಲಿಷ್‌ ನಲ್ಲಿ(1998) ಹಾಗೂ ಫಿನ್ಲೆಂಡ್‌ನಲ್ಲಿ ಪ್ರಕಟಣೆಗೊಂಡಿದೆ. ಅನ್ನಾಲಿ ಹಾಂಕೋ ಮತ್ತು ಪ್ರೊ..ವಿವೇಕ ರೈ ಹಾಗೂ ಡಾ.ಚಿನ್ನಪ್ಪ ಗೌಡ ಅವರ ಸಮ್ಮುಖದಲ್ಲಿ ದಾಖಲೀಕರಣ ನಡೆಸಲು  ಉಜಿರೆಯ ಮಾಚಾರು ಗೋಪಾಲ ನಾಯ್ಕ್‌ ಅವರು ಹಾಡಿದ ಈ ಪಾಡ್ದನವು 15,683 ಸಾಲುಗಳ ಬೃಹತ್‌ ಮಹಾಕಾವ್ಯವಾಗಿದೆ. ಮಂಗಳೂರು ಕಟೀಲು ಸಮೀಪದ ಗಿಡಿಗೆರೆ ರಾಮಕ್ಕ ಮುಗೇರ್ತಿ ಅವರು ಹಾಡಿರುವ ಇನ್ನೊಂದು ಸಿರಿ ಮಹಾಕಾವ್ಯವನ್ನು ಪ್ರೊ.ಎ.ವಿ.ನಾವಡ ಅವರು ದಾಖಲಿಸಿದ್ದು, ಈ ಕಾವ್ಯವನ್ನು ಹಂಪಿ ಕನ್ನಡ ವಿಶ್ವವಿದ್ಯಾನಿಲಯವು ಪ್ರಕಟಿಸಿದೆ. ಡಾ.ವಾಮನ ನಂದಾವರ ಅವರು ಸಂಗ್ರಹಿಸಿದ ತುಳುನಾಡಿನ ಅವಳಿ ವೀರರಾದ ಕೋಟಿ ಚೆನ್ನಯರ ಪಾಡ್ದನ ಹಾಗೂ ಅಧ್ಯಯನ ಕೃತಿಯ  ಇಂಗ್ಲಿಷ್‌ ಅನುವಾದವನ್ನು 2015ರಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು ಪ್ರಕಟಿಸಿದೆ.  ಎಸ್.ಎನ್.ಡಿ.ಪೂಜಾರಿ ಅವರು ರಘು ಪರವ – ವಸಂತಿ ಪರವ ಅವರ ಮೂಲಕ  ಸಂಗ್ರಹಿಸಿದ ಕೋಟಿ ಚೆನ್ನಯರ ಪಾಡ್ದನ ಸಂಗ್ರಹವನ್ನು ಕೂಡ ತುಳು ಅಕಾಡೆಮಿ ಪ್ರಕಟಿಸಿದೆ.

ಅಧ್ಯಯನ ಕೇಂದ್ರಗಳು – ಮ್ಯೂಸಿಯಂಗಳು     

ತುಳುವರ ಸಮಗ್ರ ಸಂಸ್ಕೃತಿಯನ್ನು ಪರಿಚಯಿಸುವ ಧರ್ಮಸ್ಥಳದ ‘ಮಂಜೂಶ’ ಮ್ಯೂಸಿಯಮ್‌ , ಶ್ರೀ ಧರ್ಮಸ್ಥಳ ಸಂಸ್ಕೃತಿ ಸಂಶೋಧನಾ ಪ್ರತಿಷ್ಠಾನ, ಉಡುಪಿಯ ಗೋವಿಂದ ಪೈ ಸಂಶೋಧನ ಕೇಂದ್ರ,  ಬಂಟ್ವಾಳದ ಡಾ. ತುಕರಾಮ ಪೂಜಾರಿ ಅವರ  ‘ತುಳು ಬದುಕು ವಸ್ತುಸಂಗ್ರಹಾಲಯ’ ಮತ್ತು `ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ’, ಉಳ್ಳಾಲ ತಾಲೂಕಿನ ಮುಡಿಪುವಿನಲ್ಲಿ ಡಾ.ಮದನ್‌ ಮೋಹನ್‌ ನಾಯಕ್‌ ಅವರ ‘ತುಳುಸಿರಿ ಮ್ಯೂಸಿಯಂ’, ದಕ್ಷಿಣ ಕನ್ನಡ ಜಿಲ್ಲಾಡಳಿತದ ‘ಪಿಲಿಕುಲ ಗುತ್ತುಮನೆ’, ಬಲ್ಮಠದ  ಕರ್ನಾಟಕ ಥಿಯೋಲಾಜಿಕಲ್‌ ಕಾಲೇಜಿನ ಪತ್ರಗಾರ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಗ್ರಂಥಾಲಯ, ಬ್ರಹ್ಮ ಬೈದರ್ಕಳ ಸಾಂಸ್ಕೃತಿಕ ಪ್ರತಿಷ್ಠಾನ ಉಡುಪಿ, ಆಳ್ವಾಸ್ ತುಳು ಅಧ್ಯಯನ ಕೇಂದ್ರ, ನಿಟ್ಟೆ ತುಳು ಅಧ್ಯಯನ ಕೇಂದ್ರ ಇವುಗಳು ತುಳುನಾಡಿನ ಸಾಹಿತ್ಯ ಹಾಗೂ ಜಾನಪದ ಜಗತ್ತನ್ನು ಜನಸಾಮಾನ್ಯರಿಗೆ ಮತ್ತು ದೇಶ ವಿದೇಶಗಳ ವಿದ್ವಾಂಸರಿಗೆ ಪರಿಚಯಿಸುತ್ತಿದೆ. 

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ:

ಕರ್ನಾಟಕ ಸರಕಾರವು 1994 ರಲ್ಲಿ ಮಾನ್ಯ ಡಾ. ಎಮ್. ವೀರಪ್ಪ ಮೊಯ್ಲಿಯವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯನ್ನು ಸ್ಥಾಪಿಸಿತು. ಈ ಮೂಲಕ ತುಳು ಭಾಷೆಯ ಬೆಳವಣಿಗೆಗೆ ದೊಡ್ಡ ಮಟ್ಟದಲ್ಲಿ ಸಹಕಾರಿ ಆಯಿತು. ಕಳೆದ 30 ವರ್ಷಗಳ ಅವಧಿಯಲ್ಲಿ ತುಳು ಅಕಾಡೆಮಿಯ ಮೂಲಕ 300 ಕ್ಕೂ ಅಧಿಕ ತುಳು ಗ್ರಂಥಗಳ ಪ್ರಕಟಣೆ, 16 ಸಾಕ್ಷ್ಯ ಚಿತ್ರಗಳನ್ನು  ಹೊರತರಲು ಸಾಧ್ಯವಾಗಿದೆ. ಮಂಗಳೂರಿನ ಉರ್ವಸ್ಟೋರಿನಲ್ಲಿ 2 ಅಂತಸ್ತಿನ ತುಳುಭವನವನ್ನು ಸರಕಾರವು ನಿರ್ಮಿಸಿ ಕೊಟ್ಟು ತುಳುವರ ಸಾಹಿತ್ಯಿಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪೋಷಣೆ ಮಾಡುತ್ತಿದೆ. ಅಕಾಡೆಮಿಯ ಪ್ರಥಮ ಅಧ್ಯಕ್ಷರಾಗಿ ಪ್ರೊ.ಬಿ.ಎ.ವಿವೇಕ ರೈ, ನಂತರದ ಅವಧಿಯಲ್ಲಿ ಅ.ಬಾಲಕೃಷ್ಣ ಶೆಟ್ಟಿ ಪೊಳಲಿ, ಡಾ.ವಾಮನ ನಂದಾವರ, ಎಂ.ಕೆ.ಸೀತಾರಾಮ ಕುಲಾಲ್‌, ಡಾ.ಪಾಲ್ತಾಡಿ ರಾಮಕೃಷ್ಣ ಆಚಾರ್‌,  ಉಮಾನಾಥ ಕೋಟ್ಯಾನ್‌, ಎಮ್. ಜಾನಕಿ ಬ್ರಹ್ಮಾವರ, ಎ.ಸಿ.ಭಂಡಾರಿ, ದಯಾನಂದ ಕತ್ತಲಸಾರ್‌ ಕಾರ್ಯನಿರ್ವಹಿಸಿದ್ದಾರೆ. ಪ್ರಸ್ತುತ ತಾರಾನಾಥ ಗಟ್ಟಿ ಕಾಪಿಕಾಡ್‌ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕೇಂದ್ರ ಭಾಷಾ ಸಮ್ಮಾನ್:

ತುಳು ಭಾಷೆಯ ಸಾಹಿತ್ಯದ ಮೌಲಿಕ ಕಂಪನ್ನು ಗಮನಿಸಿರುವ ಕೇಂದ್ರ ಸರಕಾರವು ಕೇಂದ್ರ ಸಾಹಿತ್ಯ ಅಕಾಡೆಮಿ ಮೂಲಕ ಕೇಂದ್ರ ಭಾಷಾ ಸಮ್ಮಾನ್ ಪ್ರಶಸ್ತಿಯನ್ನು ತುಳು ಭಾಷೆಗೂ ಪ್ರಧಾನ ಮಾಡಲು ಆರಂಭಿಸಿದೆ. ತುಳು  ವಿದ್ವಾಂಸರಾದ ಮಂದಾರ ಕೇಶವ ಭಟ್, ಕೆದಂಬಾಡಿ ಜತ್ತಪ್ಪ ರೈ, ಪ್ರೊ ಅಮೃತ ಸೋಮೇಶ್ವರ ಇವರ ತುಳು ಸಾಹಿತ್ಯದ ಕೊಡುಗೆಗಾಗಿ ಕೇಂದ್ರ ಭಾಷಾ ಸಮ್ಮಾನ್ ಪ್ರಶಸ್ತಿ ನೀಡಿ ಗೌರವಿಸಿದೆ.
 
(ಮುಂದುವರಿಯುವುದು- ಸಂ)

ತಾರಾನಾಥ್ ಗಟ್ಟಿ ಕಾಪಿಕಾಡ್

ಇವರು ಕಳೆದ ಎರಡೂವರೆ ದಶಕಗಳಿಂದ ಮಂಗಳೂರಿನಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ವೃತ್ತಿಯಲ್ಲಿರುವವರು. ನಾಟಕ, ರಂಗಭೂಮಿ ಬಗ್ಗೆ ಆಸಕ್ತರು. ತುಳು ಸಂಘಟನೆಯಲ್ಲಿ ಸಕ್ರಿಯರು. ಪ್ರಸ್ತುತ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿದ್ದಾರೆ.

ಇದನ್ನೂ ಓದಿ- ಸಂಪಾದಕೀಯ : ಸೌಜನ್ಯ ಪ್ರಕರಣ: ಅತ್ಯಾಚಾರಿಗಳ ರಕ್ಷಕರಿಗೂ ಶಿಕ್ಷೆಯಾಗಬೇಕು

More articles

Latest article

Most read