ಮಂಗಳೂರು: ಮುಂಜಾನೆ ಸುಮಾರು 5.30ಕ್ಕೆ ಮಂಗಳೂರು ಮೀನುಗಾರಿಕಾ ಬಂದರಿಗೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭೇಟಿ ನೀಡಿದರು. ಮೀನುಗಾರರ ಸಮಸ್ಯೆಗಳನ್ನ ಆಲಿಸಲು ಬಂದಿದ್ದ ಸಿಎಂಗೆ ಸಿಕ್ಕಿದ್ದು ಮಾತ್ರ ಖಾಲಿ ಖಾಲಿ ಸ್ಥಳ. ಸೆಕ್ಯೂರಿಟಿ ನೆಪದಲ್ಲಿ ಬಂದರಿನಲ್ಲಿನ ಮೀನು ವ್ಯಾಪಾರ ಬಂದ್ ಮಾಡಿಸಿದ್ದಕ್ಕೆ ಪೊಲೀಸ್ ಇಲಾಖೆ ಹಾಗೂ ಅಧಿಕಾರಿಗಳ ವಿರುದ್ಧ ಗರಂ ಆದರು.
ಬಳಿಕ, ಬಂದರಿನ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಮೀನುಗಾರರೊಂದಿಗೆ ಮಾತುಕತೆ ನಡೆಸಿ, ಅವರ ಸಮಸ್ಯೆಗಳು ಹಾಗೂ ತುರ್ತು ಅಗತ್ಯಗಳ ಕುರಿತು ಮಾಹಿತಿ ಪಡೆದರು. ಮಂಗಳೂರಿನ ಮೀನುಗಾರಿಕೆ ಧಕ್ಕೆಗೆ ತೆರಳಿದ ಮುಖ್ಯಮಂತ್ರಿ, ಮೀನುಗಾರಿಕಾ ಬೋಟ್ಗಳನ್ನು ವೀಕ್ಷಿಸಿದರು. ಸದಾ ಪ್ರಕ್ಷುಬ್ಧವಾಗಿರುವ ಅಳಿವೆಬಾಗಿಲು ಪ್ರದೇಶದಲ್ಲಿ ಸಮುದ್ರದಿಂದ ದಡ ಸೇರುವ ಸ್ಥಳದ ಪರಿಸ್ಥಿತಿಯನ್ನು ಮುಖ್ಯಮಂತ್ರಿ ಬೋಟ್ನಲ್ಲಿ ಸಂಚರಿಸುವ ಮೂಲಕ ಅರಿತುಕೊಂಡರು.
ಮೀನುಗಾರರು ಪ್ರೀತಿಯಿಂದ ಅಂಜಲ್ ಮೀನನ್ನು ಉಡುಗೊರೆಯಾಗಿ ನೀಡಿದ್ದು ವಿಶೇಷವಾಗಿತ್ತು.
ಈ ವೇಳೆ ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರಾದ ಶ್ರೀ ಯು.ಟಿ. ಖಾದರ್ ಸೇರಿದಂತೆ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಮುಖಂಡರು ಜೊತೆಗಿದ್ದರು.

