ಹಿಂದೂ ಪದದ ಹಿಂದು ಮುಂದು

ಹಿಂದೂ ಎಂಬುದು ಮೂಲತ: ಶಾಸ್ತ್ರೀಯವಾಗಿ ಗುರುತಿಸಲ್ಪಟ್ಟ ಪದವಾಗಿರದೇ ಯಾರೋ ನೀಡಲ್ಪಟ್ಟ ಹೆಸರೆಂಬ ಅಸಮಾಧಾನ ಹಲವರಿಗಿದೆ. ಇದೇ ಕಾರಣಕ್ಕೆ ಇತ್ತೀಚಿಗಿನ ದಿನಗಳಲ್ಲಿ ಹಿಂದೂ ಬದಲಿಗೆ ಸನಾತನ ಎಂಬ ಪದವನ್ನೇ ಹೆಚ್ಚು ಬಳಕೆಗೆ ಬರುವಂತೆ ನೋಡಿಕೊಳ್ಳಲಾಗುತ್ತಿದೆ. ಆದರೆ ಪ್ರಾಚೀನವಾದದ್ದು ಎಂಬ ಅರ್ಥ ಕೊಡುವ ಈ ಸನಾತನ ಪದ ಗುಪ್ತರ ಕಾಲದ ಬಳಿಕ ರಚನೆಗೊಂಡ ಹಿಂದೂ ಧಾರ್ಮಿಕ ಸಾಹಿತ್ಯಗಳಿಗೂ ಮುನ್ನ ಮೂಲತ: ಕಾಣಿಸಿಕೊಳ್ಳುವುದು ಜೈನ ಮತ್ತು ಭೌದ್ಧ ಧಾರ್ಮಿಕ ಗ್ರಂಥಗಳಲ್ಲಿ ಎಂಬುದು ಅಷ್ಟೇ ಸತ್ಯ ಮತ್ತು ಸನಾತನವಾದುದು –ಶಂಕರ್‌ ಸೂರ್ನಳ್ಳಿ, ಲೇಖಕರು.

ಇತ್ತೀಚೆಗೆ ಜೀವಪರ ಚಿಂತಕ ಹರ್ಷಕುಮಾರ್ ಕುಗ್ವೆಯವರ ಬರಹವೊಂದಕ್ಕೆ ಪ್ರತಿಯಾಗಿ ಜಾಲತಾಣದಲ್ಲಿ ಹಿಂದೂ ಪದದ ಕುರಿತಂತೆ ಸಾಕಷ್ಟು  ಚರ್ಚೆಗಳು ನಡೆಯುತ್ತಿವೆ. ಈ ಕುರಿತಂತೆ ಕೆಲ ತೋರಿಕೆಯ ದೇಶಭಕ್ತರ ವರಾತಗಳನ್ನೆಲ್ಲ ನೋಡಿದಾಗ ಇದೊಂತರ ಪ್ರೊಪಗಂಡವಾದಿ (ಸತ್ಯಕ್ಕೆ ದೂರವಾಗಿರುವ ಸಂಗತಿಗಳನ್ನು ಅದೇ ಸತ್ಯವೆಂದು ಸ್ಥಾಪಿಸಹೋಗುವ ಪ್ರಕ್ರಿಯೆ) ಗಳ ಮಾಮೂಲಿ ಹಾರಾಟ ಕೂಗಾಟದಂತೆ ಕಾಣಿಸುತ್ತಿದೇ ವಿನಹ ಹೊಸತೇನೂ ಇದ್ದಂತಿಲ್ಲ.

ಬಳಕೆಯಲ್ಲಿರುವ ಹಿಂದೂ ಪದದ ಕುರಿತಂತೆ ವೈದಿಕ ಧರ್ಮದ ದೊಡ್ಡ ದೊಡ್ಡ ಪಂಡಿತ ವಿದ್ವಾಂಸರುಗಳೇ ಸಾಕಷ್ಟು ಭಾರಿ  ಈ ಹಿಂದೂ ಪದ ಬಳಕೆಯ ಮೂಲ ನೆಲಗಟ್ಟಿನ ಬಗ್ಗೆ ತಕರಾರು ತೆಗೆದದ್ದನ್ನು ಅಲ್ಲಲ್ಲಿ ನೋಡಿರುತ್ತೇವೆ. ಶ್ರೀಯುತ ಬನ್ನಂಜೆ ಗೋವಿಂದಾಚಾರ್ಯರಂತಹ ಶಾಸ್ತ್ರಗಳನ್ನು ಅರೆದು ಕುಡಿದಂತಹ ಹಿರಿಯರೇ ಹಿಂದೂ ಧರ್ಮ ಎಂಬ ಪದ ಬಳಕೆಯೇ ಸರಿಯಲ್ಲ ಹಿಂದೂ ಎನ್ನುವ ಧರ್ಮವೇ ಅಸಲಿಗೆ ಇಲ್ಲ ಎಂಬಂತಹ ಮಾತನಾಡಿದ್ದರು. ಇನ್ನು ಪೇಜಾವರರಂತಹ ಮಹನೀಯರು ಅಷ್ಟೇ ಏಕೆ ನಮ್ಮ ಘನ ಪ್ರಧಾನಿಗಳಾದ ಮೋದೀಜಿಯವರೂ ಕೂಡ ಸಂದರ್ಶನವೊಂದರಲ್ಲಿ (ಇದು ಜಾಲತಾಣದಲ್ಲಿ ಇವತ್ತಿಗೂ ಲಭ್ಯವಿದೆ) ಇಂತಹುದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.

ಭಾರತ ಉಪಖಂಡದ  ಪ್ರಮುಖ ನದಿಗಳಲ್ಲಿ ಸಿಂಧೂ ನದಿಯೂ ಒಂದು. ಅಲ್ಲಿನ  ಸ್ಥಳೀಯ ಪ್ರಾಚೀನ ವಾಡಿಕೆಗಳಲ್ಲಿ ಸಿಂಧೂ ಎಂದರೆ ನದಿ ಅಥವ ಸಮುದ್ರ ಎಂಬರ್ಥವೂ ಇದೆ. (ಕಾಲಕ್ರಮೇಣ ಸಂಸ್ಕೃತ ಅದನ್ನು ತನ್ನದಾಗಿಸಿಕೊಂಡಿತು) ಇದು ನದಿಯಾಗಿರುವ ಜೊತೆಗೆ ತನ್ನ ವಿಶಾಲತೆಯಿಂದ  ಮತ್ತು ಐದು ಮಹಾಕವಲುಗಳ ಕಾರಣಕ್ಕೆ ಒಂದು ಬಗೆಯಲ್ಲಿ ಸಿಹಿನೀರಿನ ಸಮುದ್ರ (ಸಿಂಧು)ವೇ ಎಂದೆನ್ನಿಸಿದ್ದರಲ್ಲಿ ವಿಶೇಷವೇನೂ ಇಲ್ಲ. ನಮ್ಮಲ್ಲಿ ಸಣ್ಣ ನೀರಿನಾಶ್ರಯಗಳಿಗೇ ಕೃಷ್ಣ ರಾಜ ಸಾಗರ, ಹುಸೇನ್ ಸಾಗರ, ಪೊನ್ನ ಸಮುದ್ರ,-ಕಾರ್ಕಳದ ಬಳಿಯ ರಾಮ ಸಮುದ್ರ ಎಂದು ಸಮುದ್ರ, ಸಾಗರಗಳ ಹೆಸರಿಟ್ಟು ಕರೆಯುವುದಿಲ್ಲವೇ. ಇನ್ನು ಈ ವಿಶಾಲ ನದಿ ಪಾತ್ರಕ್ಕೆ ಸಮುದ್ರದ ಹೆಸರಿಟ್ಟು ಸಿಂಧು ಎಂದು ಕರೆದುದರಲ್ಲಿ ವಿಶೇಷವೇನೂ ಇಲ್ಲ.

ಅಷ್ಟೇ ಅಲ್ಲದೇ ಖಂಡಾಂತರ ಚಲನೆಗಳ ಕಾರಣಕ್ಕೆ ಏಶಿಯಾದ ದಕ್ಷಿಣ ಭಾಗಕ್ಕೆ ನಿಧಾನವಾಗಿ ಒತ್ತರಿಸಿ ಹಿಮಾಲಯ ಪರ್ವತ ಶ್ರೇಣಿಗಳ ಸೃಷ್ಟಿಗೆ ಕಾರಣವಾದ ಭಾರತ ಉಪಖಂಡದ ತುಣುಕಿನ ಒತ್ತರಿಸುವಿಕೆಗೂ ಮುನ್ನ ಈಗಿನ ಸಿಂಧೂ ನದಿ ಹರಿವಿನ ಭೂ ಭಾಗದಲ್ಲಿ ಸಮುದ್ರವೇ ಅಸ್ತಿತ್ವದಲ್ಲಿತ್ತು. (ಈಗಲೂ ಹಿಮಾಲಯದ ಗಂಡಕೀ ನದಿಯಲ್ಲಿ ಲಕ್ಷಾಂತರ ವರ್ಷಗಳ ಹಿಂದಿನ ಸಾಲಿಗ್ರಾಮಗಳೆಂದು ಪೂಜಿಸಲ್ಪಡುವ ಸಮುದ್ರ ಚಿಪ್ಪು ಜೀವಿಗಳ ಪಳೆಯುಳಿಕೆಗಳು ದೊರೆಯುತ್ತವೆ.)

ಸಿಂಧೂ ನದಿ

ಕೆಲವೊಂದು ಹೆಸರುಗಳು ಯಾವುದೋ ರೀತಿಯಲ್ಲಿ ಬಳಕೆಗೆ ಬಂದು ಯಾವುದೋ ರೀತಿಯಲ್ಲಿ ಸ್ಥಿರವಾಗಿ ಜನಮಾನಸದಲ್ಲಿ ಉಳಿದು ಬಿಡುತ್ತವೆ. ಸಾಂಬಾರು ಪದಾರ್ಥಕ್ಕಾಗಿ ಭಾರತಕ್ಕೆ ಹೊರಟ ಯೂರೋಪಿಯನ್ನರು ದಾರಿ ತಪ್ಪಿ ಅಮೆರಿಕಾ ತಲುಪಿ ಅಲ್ಲಿನ ಮೂಲನಿವಾಸಿಗಳನ್ನೇ ತಪ್ಪು ಗ್ರಹಿಕೆಯಿಂದ ಇಂಡಿಯನ್ನರೆಂದು ಕರೆದ ಕಾರಣ  ಇಂಡಿಯಾಕ್ಕೆ ಸಂಬಂಧವೇ ಇರದಿದ್ದರೂ ರೆಡ್ ಇಂಡಿಯನ್ನರಿಗೆ ಆ ಹೆಸರೇ ಉಳಿದು ಬಿಟ್ಟಿತು. ಅಸಲಿಗೆ ಆಫ್ರಿಕಾದಲ್ಲಿ ಸಹರಾ ಎಂಬ ಹೆಸರಿನ ಮರುಭೂಮಿಯೇ ಇಲ್ಲ. ಯಾಕೆಂದರೆ, ಅರಬ್ ಭಾಷೆಯಲ್ಲಿ ಸಹರಾ ಎಂದರೇನೇ ಮರುಭೂಮಿ ಹೈಸ್ಕೂಲ್ ಶಾಲೆ, ಟಾಪ್ ಮೇಲೆ ತರಹ ಸಹರಾ ಮರುಭೂಮಿ ಹೆಸರಲ್ಲದಿದ್ದರೂ ಹೆಸರಾಗಿ ಜನಪ್ರಿಯಗೊಂಡಿದೆ. 

ಇದೇ ರೀತಿ ಸಿಂಧೂ ಅರ್ಥಾತ್ ಸಾಗರದಂತಿರುವ ಈ ವಿಶಾಲ ನದಿತಟದಲ್ಲಿ ಬೆಳೆದು ಬಂದ ಆ ಕಾಲದ ಮತ್ತು ನಂತರದ ಸಿಂಧೂ ನಾಗರೀಕತೆ ಆ ದಿನಗಳಲ್ಲಿ ದೂರದೂರಕ್ಕೂ ಹೆಸರಾಗಿದ್ದರೆ ಅದು ಸಹಜವೇ ಹೊರತು ವಿಶೇಷವೇನೂ ಇಲ್ಲ.. ಎಲ್ಲೋ ಶಾಸನದಲ್ಲಿ ಕೆತ್ತಲಾದ ಸಾವಿರ ವರ್ಷದ ಹಿಂದಿನ ಸಿಂಧೂ ಹೆಸರಿನ ಲಿಖಿತ ದಾಖಲೆ ಅದು.  ಅಲ್ಲಿನ ಜನಸಮುದಾಯದ ಪ್ರಾದೇಶಿಕ ಗುರುತಿಸುವಿಕೆಯೇ ಹೊರತು ಧಾರ್ಮಿಕ ರುಜುವಾತು ಎಂದೆನ್ನಲು ಬಾರದು. 

ಹಿಂದೂ ಹೆಸರು ಧಾರ್ಮಿಕ ಗ್ರಂಥಗಳಲ್ಲಿ ಎಲ್ಲೂ ಸಿಗದೇ ಇದ್ದರೂ ಮಹಾಭಾರತದಲ್ಲಿ ಈ ಹೆಸರು ಪ್ರಮುಖವಾಗಿ ಚಾಲ್ತಿಯಲ್ಲಿದ್ದದ್ದೂ ಹೌದು. ಅದು ನೂರು ಅಣ್ಣಂದಿರುಳ್ಳ ಕೌರವರ ಏಕೈಕ ತಂಗಿ  ದುಶ್ಶಲೆಯ ಪತಿ ಜಯದ್ರಥ. ಸಿಂಧೂ ದೇಶ(ಭಾಗ)ದ ರಾಜನಾದ ಅವನಿಗೆ ಈ ಕಾರಣಕ್ಕೆ ಸೈಂಧವ(ಅಥವಾ ಹೈಂದವ) ನೆಂಬ ಹೆಸರೂ ಇತ್ತು. ಕೌರವರಲ್ಲಿ ದುರ್ಯೊಧನನ ನಂತರದ ಖಳಪಾತ್ರ ಈತನದ್ದೇ. ವನವಾಸದಲ್ಲಿದ್ದ ದ್ರೌಪದಿಯ ಅಪಹರಣಕ್ಕೆ ಕೈ ಹಾಕಿ ಪಾಂಡವರಿಂದ ಶಿಕ್ಷೆಗೊಳಗಾಗಿದ್ದ ಹಿಂದವನೀತ.

ನಂತರ ಇತಿಹಾಸ ಕಾಲದಲ್ಲಿ ಸಿಂಧೂ ಅರ್ಥಾತ್ ಅದರದ್ದೇ ಪರಿವರ್ತಿತ ರೂಪವಾದ ಹಿಂದೂ ಪದವನ್ನು ಮತ್ತಷ್ಟು ಗಟ್ಟಿಗೊಳಿಸಿದವರು ಮೊಗಲರು. ಅವರು ಒಟ್ಟಾರೆ ಈ ದೇಶವನ್ನೇ ಹಿಂದೂಸ್ಥಾನ್ ಎಂದು ಕರೆದರು. ಶತಮಾನಗಳ ಬಳಿಕ ಬಂದ ಬ್ರಿಟಿಷರು ತಮ್ಮ ಆಡಳಿತ ಅನುಕೂಲತೆಗೋಸ್ಕರ ಹಿಂದೂ ಪದವನ್ನು ಸಾಮುದಾಯಿಕವಾಗಿ ಒಂದು ಧಾರ್ಮಿಕ ಚೌಕಟ್ಟಿನೊಳಗೆ ಅಧಿಕೃತವಾಗಿ ಗುರುತಿಸಿ ನೋಡುವ ಪ್ರಕ್ರಿಯೆಗೆ ಒತ್ತುನೀಡಿದರು. ಅದೇ ನಾವಿವತ್ತು ಕಾಣುತ್ತಿರುವ ಕೆಲವರಿಗೆ ಸಂತೋಷದಾಯಕ ಮತ್ತೆ ಹಲವರಿಗೆ ಅಪಥ್ಯಕಾರಕವಾದ ಧಾರ್ಮಿಕ ವರ್ಗೀಕರಣದ ಮೂಲ. 

ನಮ್ಮದು ವೈದಿಕ ಧರ್ಮ, ನಮ್ಮದು ಬ್ರಾಹ್ಮಣ ಧರ್ಮ ಎಂದು ಎಷ್ಟೋ ಬ್ರಾಹ್ಮಣರು ಇಂದಿಗೂ ಬಹಿರಂಗವಾಗಿ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಸ್ವತಹ ಪೇಜಾವರ ಶ್ರೀಗಳೇ ತಮ್ಮ ವಿಶೇಷವಾದ ಬ್ರಾಹ್ಮಣ ಧರ್ಮದ ಬಗ್ಗೆ ಮಾತನಾಡಿದ್ದುಂಟು. ಕೇವಲ ಕೆಲ ಅನುಕೂಲದ ಕಾರಣಕ್ಕೆ ಹಿಂದೂ ಧರ್ಮವನ್ನು ಇಂತವರು ಬೆಂಬಲಿಸುತ್ತಾರೆಯೇ ಹೊರತು ಸದಾ ಶ್ರೇಷ್ಠತೆ ಬಯಸುವ ಇವರ ಧಾರ್ಮಿಕ ನಂಬಿಕೆಯೇ ಮೂಲತ: ಬೇರೆಯೇ.

ಸಾಮಾಜಿಕವಾಗಿ ಸಾಮುದಾಯಿಕವಾಗಿ ಬೆಲೆ ಉಳಿಸಿಕೊಳ್ಳಲು ಸಂಖ್ಯಾಬಲವೆಂಬುದು ಅತಿ ಅಗತ್ಯ. ಹಲವು ಆಸೆ ಆಮಿಷಗಳನ್ನು ಒಡ್ಡಿ ದಕ್ಷಿಣಕ್ಕೆ ಕರೆತರಲಾದ ಬ್ರಾಹ್ಮಣರು ಇಲ್ಲಿ ತೀರಾ ಅಲ್ಪಸಂಖ್ಯಾತರಾಗಿದ್ದದ್ದನ್ನ ನೋಡಿ ಸ್ಥಳಿಯ ಕೆಲ ಶೂದ್ರ ಸಮುದಾಯದಲ್ಲೇ ವಾದಿರಾಜರು, ರಾಮಾನುಜಾಚಾರ್ಯರಂತವರು  ದೀಕ್ಷೆ ಕೊಟ್ಟು ಶ್ರೀ ವೈಷ್ಣವ ಮೊದಲಾದ ಬ್ರಾಹ್ಮಣ ವರ್ಗವನ್ನಾಗಿಸಿದ ಉದಾಹರಣೆಗಳಿವೆ. ಹಿಂದೂ ರಾಷ್ಟ್ರದ ಕನಸು ಹೊತ್ತು ಕೇವಲ ಒಂದಂಕಿ ಶೇಕಡಾವಾರಿನ ಸಮುದಾಯದ ಈ ಮಂದಿ ವೈದಿಕ ಧರ್ಮದ ಹೆಸರಲ್ಲಿ ಅಲ್ಪಸಂಖ್ಯಾತರಾಗಿ ಮುಂದೆ ಹೋಗುದಕ್ಕಿಂತ ಬಹುಸಂಖ್ಯಾತ ಶೂದ್ರ ಸಮುದಾಯವನ್ನೂ ಹಿಂದೂ  ಹೆಸರಲ್ಲಿ ’ಅನ್ಯ” ರ ಮುಂದೆ ಛೂ ಬಿಟ್ಟು ಹೋಗುವುದರಲ್ಲೇ ಗೆಲುವಿನ ಹಾಗು ಗುರಿಸಾಧನೆಯ ಅವಕಾಶ ಹೆಚ್ಚೆಂಬುದು ಅವರಿಗೂ ಚೆನ್ನಾಗಿ ಗೊತ್ತು.

ಹಿಂದೂ ಎಂಬುದು ಮೂಲತ: ಶಾಸ್ತ್ರೀಯವಾಗಿ ಗುರುತಿಸಲ್ಪಟ್ಟ ಪದವಾಗಿರದೇ ಯಾರೋ ನೀಡಲ್ಪಟ್ಟ ಹೆಸರೆಂಬ ಅಸಮಾಧಾನ ಹಲವರಿಗಿದೆ. ಇದೇ ಕಾರಣಕ್ಕೆ ಇತ್ತೀಚಿಗಿನ ದಿನಗಳಲ್ಲಿ ಹಿಂದೂ ಬದಲಿಗೆ ಸನಾತನ ಎಂಬ ಪದವನ್ನೇ ಹೆಚ್ಚು ಬಳಕೆಗೆ ಬರುವಂತೆ ನೋಡಿಕೊಳ್ಳಲಾಗುತ್ತಿದೆ. ಆದರೆ ಪ್ರಾಚೀನವಾದದ್ದು ಎಂಬ ಅರ್ಥ ಕೊಡುವ ಈ ಸನಾತನ ಪದ ಗುಪ್ತರ ಕಾಲದ ಬಳಿಕ ರಚನೆಗೊಂಡ ಹಿಂದೂ ಧಾರ್ಮಿಕ ಸಾಹಿತ್ಯಗಳಿಗೂ ಮುನ್ನ ಮೂಲತ: ಕಾಣಿಸಿಕೊಳ್ಳುವುದು ಜೈನ ಮತ್ತು ಭೌದ್ಧ ಧಾರ್ಮಿಕ ಗ್ರಂಥಗಳಲ್ಲಿ ಎಂಬುದು ಅಷ್ಟೇ ಸತ್ಯ ಮತ್ತು ಸನಾತನವಾದದು.

ಶಂಕರ್ ಸೂರ್ನಳ್ಳಿ

ಲೇಖಕರು

More articles

Latest article

Most read