ಉಜ್ವಲ ಯೋಜನೆ ಸಬ್ಸಿಡಿ ಸಿಲಿಂಡರ್ ಕಡಿತಕ್ಕೆ ಸುರ್ಜೆವಾಲ ಆಕ್ರೋಶ, ಮಹಿಳೆಯರ ಮೇಲೆ ವರ್ಷಕ್ಕೆ 900 ಕೋಟಿ ರೂ. ಹೊರೆ

ಬೆಂಗಳೂರು :  ಪ್ರಧಾನಿ ನರೇಂದ್ರ ಮೋದಿ  ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರದ ಆಡಳಿತದಲ್ಲಿ ಪ್ರತಿನಿತ್ಯ ಜನಸಾಮಾನ್ಯರ ಜೇಬಿನ ಮೇಲೆ ದಾಳಿ ಮಾಡಲಾಗುತ್ತಿದೆ. ನಮ್ಮ ತಾಯಂದಿರು ಹಾಗೂ ಸಹೋದರಿಯರ ಪ್ರತಿ ತಿಂಗಳ ಖರ್ಚಿನ ಮೇಲೆ  ಹಾಗೂ  ಉಜ್ವಲ ಯೋಜನೆ ಫಲಾನುಭವಿ ಮಹಿಳೆಯರ ಮೇಲೆ ದಾಳಿ ಮಾಡಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ‌ ಆರೋಪಿಸಿದ್ದಾರೆ.

ದೇಶದಲ್ಲಿ ಒಟ್ಟು 10.33 ಕೋಟಿ ಉಜ್ವಲ ಯೋಜನೆ ಫಲಾನುಭವಿಗಳಿದ್ದಾರೆ. ಈ ಯೋಜನೆ ಜಾರಿಗೆ ಬಂದಾಗ ಫಲಾನುಭವಿಗಳಿಗೆ ಪ್ರತಿ ಸಿಲಿಂಡರ್ ಗೆ 300 ರೂ.ನಂತೆ ವರ್ಷಕ್ಕೆ 12 ಸಿಲಿಂಡರ್ ಗಳಿಗೆ ಸಬ್ಸಿಡಿ ನಿಗದಿ ಮಾಡಲಾಗಿತ್ತು. ಈ ಹಿಂದೆ ಮೋದಿ ಅವರು ಮೊದಲು ಈ ಸಬ್ಸಿಡಿ ಸಿಲಿಂಡರ್ ಗಳ ಸಂಖ್ಯೆಯನ್ನು 9 ಸಿಲಿಂಡರ್ ಗಳಿಗೆ ಇಳಿಸಿದ್ದರು. ಆದರೆ   ಉಜ್ವಲ ಸಬ್ಸಿಡಿ ಸಿಲಿಂಡರ್ ಗಳನ್ನು ವರ್ಷಕ್ಕೆ 4ಕ್ಕೆ ಇಳಿಸಿದೆ ಎಂದರು. 

ಅದರೊಂದಿಗೆ ಕೇಂದ್ರ ಸರ್ಕಾರ ಈಗ ಪ್ರತಿ ವರ್ಷ 8 ಸಬ್ಸಿಡಿ ಸಿಲಿಂಡರ್ ಗಳನ್ನು ಕಸಿದುಕೊಂಡಿದೆ. ಇದರಿಂದಾಗಿ ದೇಶದ ಬಡ ಮಹಿಳೆಯರು 2400 ರೂ. ಕಳೆದುಕೊಳ್ಳುತ್ತಾರೆ. ಕೇಂದ್ರ ಸರ್ಕಾರದ ಈ ಜನ ವಿರೋಧಿ ನೀತಿಯಿಂದಾಗಿ ನಮ್ಮ ದೇಶದ ಮಹಿಳೆಯರ ಮೇಲೆ 24,792 ಕೋಟಿ ರೂ. ಹೆಚ್ಚಿನ ಹೊರೆ ಬೀಳಲಿದೆ. ಮಹಿಳೆಯರು ಇದನ್ನು ಭರಿಸಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು. 

 ಕೇಂದ್ರ ಸರ್ಕಾರದ ನಿರ್ಧಾರದಿಂದಾಗಿ ಮಹಿಳೆಯರು ಮತ್ತೆ ಸೌದೆ ಒಲೆಯತ್ತ ಮುಖ ಮಾಡುವಂತಾಗಿದೆ. ಇಷ್ಟೇ ಅಲ್ಲ, ಕರ್ನಾಟಕದಲ್ಲಿ ಉಜ್ವಲ ಯೋಜನೆಯಲ್ಲಿ 37.50 ಲಕ್ಷ ಫಲಾನುಭವಿಗಳಿದ್ದು, ರಾಜ್ಯದ ಮಹಿಳೆಯರ ಮೇಲೆ ಪ್ರತಿ ವರ್ಷ 900 ಕೋಟಿ ರೂ. ಆರ್ಥಿಕ ಹೊರೆ ಬೀಳಲಿದೆ. ಉಜ್ವಲ ಫಲಾನುಭವಿಗಳ ಮೇಲಿನ ಈ ದಾಳಿಗೆ ಕಾರಣವೇನು ಎಂಬುದನ್ನು ಮೋದಿ ಹಾಗೂ ಬಿಜೆಪಿ ಸರ್ಕಾರ ತಿಳಿಸುವುದೇ? 2014ರಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ಸಿಲಿಂಡರ್ ಬೆಲೆ 400 ಇತ್ತು. ಇಂದು ಗೃಹಬಳಕೆ ಸಿಲಿಂಡರ್ 1000 ಗಡಿ ತಲುಪುತ್ತಿದೆ ಎಂದು ಎಚ್ಚರಿಸಿದರು. 

ಕೇಂದ್ರ ಸರ್ಕಾರ ಗೃಹಬಳಕೆ ಸಿಲಿಂಡರ್ ಬೆಲೆಯನ್ನು ಮಾರ್ಚ್ 7ರಂದು 60 ಹಾಗೂ ಜೂನ್ 7ರಂದು 29 ರಷ್ಟು ಏರಿಕೆ ಮಾಡಿದೆ. 3 ತಿಂಗಳ ಒಳಗೆ ಸುಮಾರು 90 ನಷ್ಟು ಏರಿಕೆಯಾಗಿದ್ದು, ಈ ಪ್ರಮಾಣದ ಬೆಲೆ ಏರಿಕೆ ಮಧ್ಯೆ ಜನ ಹೇಗೆ ಬದುಕಬೇಕು? ಇನ್ನು ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆ ಕೂಡ ಜನರ ಬದುಕಿನ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಜನವರಿ 1ರಿಂದ ಮೇ 31ರ ವರೆಗೆ 1,432ರಷ್ಟು ಏರಿಕೆಯಾಗಿದೆ. ಜೂನ್ 1ರಂದು 42 ಏರಿಕೆ ಮಾಡಲಾಗಿದೆ. ಇದರಿಂದಾಗಿ ಸಣ್ಣ ಹೊಟೇಲ್, ವ್ಯಾಪಾರ ಮಾಡುವವರ ಮೇಲೆ ಹೊರೆ ಹೆಚ್ಚಿಸಲಾಗಿದೆ ಎಂದರು. 

ಈ ನಿರಂತರ ಬೆಲೆ ಏರಿಕೆಗೆ ಕಾರಣವೇನು ಎಂದು ಪ್ರಧಾನಿ ಮೋದಿ, ಕರ್ನಾಟಕ ಬಿಜೆಪಿ ನಾಯಕರಾದ ಆರ್. ಅಶೋಕ್, ವಿಜಯೇಂದ್ರ ಅವರು ಉತ್ತರಿಸುವರೇ? ಉಜ್ವಲ ಯೋಜನೆ ಫಲಾನುಭವಿಗಳು, ಜನಸಾಮಾನ್ಯರ ಮೇಲೆ ಬಿಜೆಪಿ ದಾಳಿ ಮಾಡುತ್ತಿದ್ದು, ಕರ್ನಾಟಕದ ಮಹಿಳೆಯರ ಮೇಲೆ ಈ ಹೆಚ್ಚುವರಿ ₹900 ಕೋಟಿ ಹಾಗೂ ದೇಶದ ಮಹಿಳೆಯರ ಮೇಲೆ ಸುಮಾರು 25,000 ಕೋಟಿ ರೂ. ಆರ್ಥಿಕ ಹೊರೆಗೆ ಹೊಣೆ ಯಾರು? ಎಂದು ಪ್ರಶ್ನಿಸಿದರು. 

ದೇಶದ ಜನರು ಹಾಗೂ ಕರ್ನಾಟಕದ ಸಹೋದರರು ಹಾಗೂ ಸಹೋದರಿಯರು ಇದಕ್ಕೆ ಉತ್ತರ ಬಯಸುತ್ತಿದ್ದಾರೆ. ಬಿಜೆಪಿ ಇದಕ್ಕೆ ಉತ್ತರ ನೀಡಲಿ ಎಂದರು. 

More articles

Latest article

Most read