ಲಾಲ್‍ಬಾಗ್‍ನಲ್ಲಿ 220 ನೇ ಫಲಪುಷ್ಪ ಪ್ರದರ್ಶನ : ಹೂಗಳಲ್ಲಿ ಅರಳಿದ ‘ಗಂಗ ಸಾಮ್ರಾಜ್ಯ’ ವೈಭವ

ಬೆಂಗಳೂರು : ತೋಟಗಾರಿಕೆ ಇಲಾಖೆಯ ವತಿಯಿಂದ ಲಾಲ್‍ಬಾಗ್‍ನಲ್ಲಿ 220 ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಫಲಪುಷ್ಪ ಪ್ರದರ್ಶನವನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಉದ್ಘಾಟಿಸಿದರು.

ಫಲಪುಷ್ಪ ಪ್ರದರ್ಶನವು ಇಂದಿನಿಂದ ಆ. 17 ರವರೆಗೆ ಒಟ್ಟು 12 ದಿನಗಳ ಕಾಲ ನಡೆಯಲಿದೆ. ಪ್ರತಿದಿನ ಬೆಳಿಗ್ಗೆ 9.00 ಗಂಟೆಯಿಂದ ಸಂಜೆ 6.30 ಗಂಟೆಯ ವರೆಗೆ ಸಾರ್ವಜನಿಕರ ವೀಕ್ಷಣೆಗೆ ಅವಕಾಶವಿರುತ್ತದೆ.

ಈ ಬಾರಿಯ ಮುಖ್ಯ ಕಲ್ಪನೆ ‘ಗಂಗ ಸಾಮ್ರಾಜ್ಯ ವೈಭವ’ ಆಗಿದೆ. ಸುಮಾರು 7 ಶತಮಾನಗಳ ಕಾಲ (ಕ್ರಿ.ಶ. 325 ರಿಂದ 1004 ರವರೆಗೆ) ಆಡಳಿತ ನಡೆಸಿದ ಗಂಗ ರಾಜವಂಶದ ಇತಿಹಾಸ ಮತ್ತು ಕೊಡುಗೆಯನ್ನು ಸಾರ್ವಜನಿಕರಿಗೆ ತಲುಪಿಸುವುದು ಪ್ರಮುಖ ಉದ್ದೇಶವಾಗಿದೆ .

ವಿಶೇಷ ಆಕರ್ಷಣೆಗಳು:

ಬೇಗೂರಿನ ಪ್ರಸಿದ್ಧ ದೇವಾಲಯದ ಮಾದರಿಯನ್ನು ವಿವಿಧ ಹೂವುಗಳಿಂದ ಅಲಂಕರಿಸಲಾಗುತ್ತಿದೆ. ಶ್ರವಣಬೆಳಗೊಳದಲ್ಲಿ ಬಾಹುಬಲಿ ಮೂರ್ತಿಯನ್ನು ನಿರ್ಮಿಸಿದ ಗಂಗರ ಮಂತ್ರಿ ಶ್ರವಣಬೆಳಗೊಳದ ‘ಚಾವುಂಡರಾಯ ಬಸದಿ’ಯ ಮಾದರಿಯನ್ನು ಸಹ ಈ ಬಾರಿ ನಿರ್ಮಿಸಲಾಗಿದೆ.

ಬಾಹುಬಲಿ ಮೂರ್ತಿಯ ‘ವರ್ಟಿಕಲ್ ಗಾರ್ಡನ್’ ಮಾದರಿ ಹಾಗೂ ಗಂಗ ದೊರೆಗಳ ಪ್ರತಿಮೆಗಳನ್ನು ಪ್ರದರ್ಶಿಸಲಾಗುತ್ತದೆ. ಸುಮಾರು 4 ದೇಶಗಳ 7 ಬಗೆಯ ಅಪರೂಪದ ಹಾಗೂ ದೇಶೀಯ-ವಿದೇಶಿ ಹೂವುಗಳನ್ನು ಪ್ರದರ್ಶನಕ್ಕೆ ಬಳಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

2026ನೇ ಆಗಸ್ಟ್ 6 ರಂದು ಬೆಳಿಗ್ಗೆ 11.00 ಗಂಟೆಗೆ ರಾಜ್ಯದ ಮುಖ್ಯಮಂತ್ರಿಗಳು ಈ ಫಲಪುಷ್ಪ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ. ಉದ್ಘಾಟನೆಯ ನಂತರ ಸಾರ್ವಜನಿಕರಿಗೆ ಫಲಪುಷ್ಪ ಪ್ರದರ್ಶನ ವೀಕ್ಷಿಸಲು ಅನುಮತಿಸಲಾಗುವುದು.

ಪ್ರವೇಶ ದರ ಮತ್ತು ಟಿಕೆಟ್ ವಿವರ:

ಸಾಮಾನ್ಯ ದಿನಗಳಲ್ಲಿ (ಸೋಮ-ಶುಕ್ರ): ಹಿರಿಯರಿಗೆ ರೂ. 80/- ವಾರಾಂತ್ಯಗಳಲ್ಲಿ (ಶನಿ-ಭಾನುವಾರ): ಹಿರಿಯರಿಗೆ ರೂ. 100 – 14 ವರ್ಷದ ಒಳಗಿನ ಮಕ್ಕಳಿಗೆ: ರೂ. 30/- ಸಮವಸ್ತ್ರ ಧರಿಸಿ ಬರುವ ಶಾಲಾ ಮಕ್ಕಳಿಗೆ (ರಜಾ ದಿನಗಳನ್ನು ಹೊರತುಪಡಿಸಿ) ಉಚಿತ ಪ್ರವೇಶವಿರುತ್ತದೆ.

ಆನ್‍ಲೈನ್ ಟಿಕೆಟ್:

ಸಾರ್ವಜನಿಕರ ಅನುಕೂಲಕ್ಕಾಗಿ hasiru.karnataka.gov.in ವೆಬ್‍ಸೈಟ್‍ನಲ್ಲಿ ಆನ್‍ಲೈನ್ ಟಿಕೆಟ್ ಬುಕಿಂಗ್ ಹಾಗೂ ಕೌಂಟರ್‍ಗಳಲ್ಲಿ ‘ಆಟೋಮೇಟೆಡ್ ಕಿಯೋಸ್ಕ್’ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಸಂಚಾರ ಮತ್ತು ಪಾರ್ಕಿಂಗ್ : ಸಂಚಾರ ದಟ್ಟಣೆ ತಪ್ಪಿಸಲು ಸಾರ್ವಜನಿಕರು ಮೆಟ್ರೋ ಸೌಲಭ್ಯವನ್ನು ಬಳಸುವುದು ಉತ್ತಮ. ವಾಹನ ಪಾಕಿರ್ಂಗ್‍ಗಾಗಿ ಶಾಂತಿನಗರ ಬಿಎಂಟಿಸಿ ಬಸ್ ನಿಲ್ದಾಣ, ಅಲ್-ಅಮೀನ್ ಕಾಲೇಜು, ಹಾಪ್‍ಕಾಮ್ಸ್ ಆವರಣ ಹಾಗೂ ಜೆ.ಸಿ. ರಸ್ತೆಯ ಮಲ್ಟಿ-ಲೆವೆಲ್ ಕಾರ್ ಪಾಕಿರ್ಂಗ್‍ನಲ್ಲಿ ವ್ಯವಸ್ಥೆ ಮಾಡಲಾಗಿದೆ.

ಭದ್ರತೆ: ಭದ್ರತೆ ಹಾಗೂ ಕಾನೂನು ಸುವ್ಯವಸ್ಥೆಗಾಗಿ ಡಿಎಸ್ಪಿ, ಎಸಿಪಿ ಮತ್ತು ಪೊಲೀಸ್ ಇನ್ಸ್‍ಪೆಕ್ಟರ್‍ಗಳ ನೇತೃತ್ವದಲ್ಲಿ ಸುಮಾರು 350ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

More articles

Latest article

Most read