ಅಶೋಕನ ಶಿಲಾಶಾಸನಗಳ ವ್ಯಾಖ್ಯಾನ ಮತ್ತು ಬೌದ್ಧ ಧಮ್ಮ

ಬೌದ್ಧ ಧಮ್ಮದ ಮೇಲೆ ಅವರ ವಿರೋಧಿಗಳಿಗಿದ್ದ ದ್ವೇಷ ಭಾವನೆಯಿಂದ ಅಶೋಕನ ಆಡಳಿತದ ವಿರುದ್ಧ ಅಸಡ್ಡೆಯನ್ನು ತೋರಿಸಿದರು. ಅವನು ಭೌದ್ಧ ಧಮ್ಮ ಸ್ವೀಕರಿಸಿದ್ದರಿಂದ ಧಮ್ಮದ ಮೂಲಕ ಆಡಳಿತ ನಡೆಸಿದ್ದನ್ನು ಮುಂದೆ ಅಧಿಕಾರಕ್ಕೆ ಬಂದ ರಾಜ ಮನೆತನಗಳು ಮುಂದುವರೆಸದ ಕಾರಣದಿಂದಲೂ ಅಶೋಕನು ನಿರ್ಮಿಸಿದ ಇತಿಹಾಸ ಹೊರ ಬರಲು ಬ್ರಿಟಿಷರು ಭಾರತಕ್ಕೆ ಬರಬೇಕಾಯಿತು. ಅಲ್ಲಿಯವರೆಗೆ ಉದ್ದೇಶಪೂರ್ವಕವಾಗಿ ಇಲ್ಲ ಜಾಣ ಕುರುಡುತನದಿಂದ ಅವನನ್ನು ಬಚ್ಚಿಡಲಾಗಿತ್ತು ಎಂಬುದು ಈಗಿನ ಭಾರತೀಯ ಇತಿಹಾಸ ಅಧ್ಯಯನಕಾರರಿಗೆ ಸುಲಭವಾಗಿ ಅರ್ಥವಾಗುತ್ತದೆ ಡಾ. ನಾಗೇಶ್‌ ಮೌರ್ಯ, ಬೌದ್ಧ ಚಿಂತಕರು.

ಮೌರ್ಯರ ಕಾಲದಲ್ಲಿನ ಅಶೋಕನ ಶಾಸನಗಳು ಮತ್ತು ಸಾಹಿತ್ಯಿಕ ಪುರಾವೆಗಳು ಬೌದ್ಧಧರ್ಮಕ್ಕೆ ಸಂಬಂಧಿಸಿದ ಇತಿಹಾಸ ಹಾಗೂ ಬೌದ್ಧಧರ್ಮದೊಂದಿಗಿನ ಅಶೋಕನ ಸಂಬಂಧದ ಬಗ್ಗೆ ಮಾಹಿತಿಯನ್ನು ಒದಗಿಸುತ್ತವೆ. ಇವುಗಳಲ್ಲಿ, ಅಶೋಕನ ಶಾಸನಗಳು ಆಗಿನ ಸಮಕಾಲೀನ ದತ್ತಾಂಶವನ್ನು ಒದಗಿಸುತ್ತವೆ, ಆದರೆ ಸಾಹಿತ್ಯ ಮೂಲಗಳು ಅಶೋಕನ ನಂತರದ ಅವಧಿಗೆ ಸೇರಿದ ದಾಖಲೆಗಳಾಗಿವೆ. ಸಾಹಿತ್ಯಿಕ ಮೂಲಗಳನ್ನು ಎರಡು ಭಾಗಗಳಾಗಿ ವಿಂಗಡಿಸಬಹುದು. ಸ್ಥಳೀಯರು ಬರೆದದ್ದು ಮತ್ತು ವಿದೇಶಿಯರು ಬರೆದದ್ದು. ಪಾಲಿ ಮತ್ತು ಸಂಸ್ಕೃತದಂತಹ ವಿವಿಧ ಭಾಷೆಗಳಲ್ಲಿ ಅಶೋಕನ ಬಗ್ಗೆ ಮತ್ತು ಅವನ ಪೂರ್ವಜರ ಬಗ್ಗೆ ದಂತಕಥೆಗಳ ಮಾಹಿತಿಯನ್ನು ಸಹ ಇವು ಒಳಗೊಂಡಿದೆ. ಶಾಸನದಲ್ಲಿರುವ ಪಠ್ಯದ ವ್ಯಾಖ್ಯಾನಗಳು ಅಶೋಕನ ಜೀವನಕ್ಕೆ ಸಂಬಂಧಿಸಿದ ವೈವಿಧ್ಯಮಯ ಅಂಶಗಳು, ಅವನ ಧಾರ್ಮಿಕ ಚಟುವಟಿಕೆಗಳು, ಅವನ ಬೌದ್ಧಿಕ ಕಲ್ಪನೆಗಳು ಮತ್ತು ಅವನ ಆಡಳಿತ ವ್ಯವಸ್ಥೆಯ ಮೇಲೆ ಬೆಳಕು ಚೆಲ್ಲುತ್ತವೆ.

ಅಶೋಕನ ಶಾಸನಗಳಿಂದ ಹೊರಬಂದ ಸತ್ಯಗಳು

ಇದೂವರೆಗೂ ದೊರೆತಿರುವ ಅಶೋಕನ ಮೂವತ್ತನಾಲ್ಕು ಶಿಲಾಶಾಸನದ ದಾಖಲೆಗಳು, ಮತ್ತು ಬಹು ಪ್ರತಿಗಳಲ್ಲಿರುವ ಶಾಸನಗಳ ಸಾರ ಏನೆಂದರೆ “ಅಶೋಕನು ತನ್ನ ಪ್ರಜೆಗಳಲ್ಲಿ ಪ್ರಚಾರ ಮಾಡಲು ಬಯಸಿದ್ದ ಸದ್ಗುಣಗಳು, ವಿವಿಧ ಧಾರ್ಮಿಕ ಪಂಗಡಗಳ ಬಗ್ಗೆ ಅವನಿಗಿದ್ದ ಸಹಿಷ್ಣು ವರ್ತನೆ, ಬುದ್ದ ಧಮ್ಮದ ಸಂದೇಶವನ್ನು ಹರಡಲು ಬಳಸಿದ ಆಡಳಿತ ಯಂತ್ರದ ಬಗ್ಗೆ ಗಣನೀಯ ಮಾಹಿತಿಯನ್ನು ಆ ಶಾಸನಗಳು ಒದಗಿಸುತ್ತವೆ”. ಈ ಶಾಸನಗಳಲ್ಲಿರುವ ಕೆಲವು ಸಂಗತಿಗಳು ಅಶೋಕನ ಧಾರ್ಮಿಕ ಮನೋಭಾವ ಮತ್ತು ಅವನ ಪಾತ್ರವನ್ನು ಸೂಚಿಸುತ್ತವೆ. ಸಾಮ್ರಾಟ್ ಅಶೋಕನು ತನ್ನ ಪವಿತ್ರೀಕರಣವಾದ (ಪಟ್ಟಾಭಿಷೇಕ) ಹನ್ನೆರಡನೆಯ ವಾರ್ಷಿಕೋತ್ಸವದ ನಡುವೆ ಬೌದ್ಧಧರ್ಮವನ್ನು ಸ್ವೀಕರಿಸಿದ್ದನು. ಅಶೋಕನು ಬೌದ್ಧಧರ್ಮವನ್ನು ಅನುಕರಣೀಯವಾದ ಉಪಾಸನೆಯೊಂದಿಗೆ ಮತ್ತು ಸಂಪೂರ್ಣ ಬದ್ಧತೆಯೊಂದಿಗೆ ತನ್ನ ವೈಯಕ್ತಿಕ ಧರ್ಮವೆಂದು ಪ್ರತಿಪಾದಿಸಿದನು ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಇದು ಇಲ್ಲಿಯವರೆಗೂ ಕಂಡುಬಂದಿರುವ ಒಂದು ವಿಶಿಷ್ಟ ದಾಖಲೆಯಾಗಿದೆ. ಈ ಶಾಸನಗಳಲ್ಲಿ ಬೌದ್ಧ ಸಂಘದ ಕುರಿತು ಮತ್ತು ಜನಸಾಮಾನ್ಯರನ್ನು ಉದ್ದೇಶಿಸಿ ಬರೆಯಲಾಗಿದೆ. ಚಕ್ರವರ್ತಿಯು ಬುದ್ಧ, ಧಮ್ಮ ಮತ್ತು ಸಂಘಕ್ಕೆ ನೀಡಿದ ಗೌರವ ಮತ್ತು ಬುದ್ಧ ಧಮ್ಮದಲ್ಲಿ ಅವನಿಗಿದ್ದ ನಂಬಿಕೆಯು ಅವನ ಅಭಿವ್ಯಕ್ತಿಯನ್ನು ತೋರಿಸುತ್ತದೆ. ಡಿಯೋಟೆಕ್ ಶಿಲಾ ಶಾಸನವು “ಮಗಧದ ರಾಜ ಪಿಯದಸ್ಸಿ ಸಂಘವನ್ನು ವಂದಿಸಿ ಅದರ ಯೋಗಕ್ಷೇಮವನ್ನು ವಿಚಾರಿಸುತ್ತಾನೆ. ಅವನು ಬುದ್ಧ, ಧಮ್ಮ ಮತ್ತು ಸಂಘದ ಬಗ್ಗೆ ತನ್ನ ಹೆಚ್ಚಿನ ಗೌರವವನ್ನು ವ್ಯಕ್ತಪಡಿಸುತ್ತಾನೆ” ಎಂದು ಹೇಳುತ್ತದೆ.  ಇದಲ್ಲದೆ, ಬುದ್ಧನು ಬೋಧಿಸಿದ ಯಾವುದೇ ವಿಷಯವು ಚೆನ್ನಾಗಿ ಬೋಧಿಸಲ್ಪಟ್ಟಿದೆ ಎಂದು ಅಶೋಕನು ದೃಢೀಕರಿಸುತ್ತಾನೆ. ಧಮ್ಮವು ದೀರ್ಘಕಾಲ ಉಳಿಯುತ್ತದೆ ಎಂದು ಖಚಿತಪಡಿಸಿಕೊಳ್ಳುವ ಸಲುವಾಗಿ ಈ ಧಮ್ಮ ಪಠ್ಯಗಳ ಅಧ್ಯಯನವನ್ನು (ಧಮ್ಮಲಿಪಿಯನ್ನು) ಅವನು ಶಿಫಾರಸು ಮಾಡುತ್ತಾನೆ. ಬೈರತ್ ಶಾಸನದಲ್ಲಿ, ಅಶೋಕನು ಸಂಘಕ್ಕೆ ಗೌರವ ಸಲ್ಲಿಸುತ್ತ, ಸಂಘವು ಜನ ಸಾಮಾನ್ಯರಿಗೆ ಬೌದ್ಧ ಧಮ್ಮದ ಏಳು ಪಠ್ಯಗಳನ್ನು ಅಧ್ಯಯನ ಮಾಡಲು ಮತ್ತು ಅದರ ಬಗ್ಗೆ ಚಿಂತಿಸಲು ಶಿಫಾರಸು ಮಾಡುವುದಾಗಿ ಘೋಷಿಸಿದನು. ಪಠ್ಯಗಳ ಆಯ್ಕೆಯನ್ನು ನೋಡಿದರೆ ಚಕ್ರವರ್ತಿಯು ಸ್ವತಃ ಬೌದ್ಧ ಧಮ್ಮದ ಬಗ್ಗೆ ಸಂಪೂರ್ಣ ಜ್ಞಾನವನ್ನು ಹೊಂದಿದ್ದನು ಎಂಬುದಕ್ಕೆ ಅದು ಸಾಕ್ಷಿಯಾಗುತ್ತದೆ.

ಜುನಾಗಢ ದಲ್ಲಿರುವ ಅಶೋಕನ ಶಾಸನ

ಅಶೋಕನ ಶಾಸನಗಳ ಪರಿಭಾಷೆಯು ಹಲವಾರು ವರ್ಷಗಳಿಂದ ವಿದ್ವಾಂಸರಲ್ಲಿ ದೊಡ್ಡಮಟ್ಟದ ಚರ್ಚೆಯ ವಿಷಯವಾಗಿದೆ. ಪರಿಗಣನೆಯಲ್ಲಿರುವ ವಿಷಯಕ್ಕೆ ನಿರ್ಣಾಯಕವಾದ ಕೆಲವು ಪದಗಳು ಮತ್ತು ನುಡಿಗಟ್ಟುಗಳ ವ್ಯಾಖ್ಯಾನದ ಬಗ್ಗೆ ಪರಿಪೂರ್ಣ ಒಮ್ಮತವನ್ನು ತಲುಪದಿರುವುದು ವಿಷಾದದ ಸಂಗತಿಯಾಗಿದೆ, ಉದಾಹರಣೆಗೆ ಉಪಿಸಾಕ, ಉಪಾಯೈಟ್  ಈ ಪದಗಳು ಮಿನೌಕ್ ಶಾಸನಗಳ ಬ್ರಹ್ಮಗಿರಿ ಮತ್ತು ಸಿದ್ಧಾಪುರ ಆವೃತ್ತಿಗಳಲ್ಲಿ ಒಂದೇ ರೂಪದಲ್ಲಿ ಕಂಡುಬರುತ್ತದೆ ಆದರೆ ರೂಪನಾಥ್, ಮಸ್ಕಿ, ಗವಿಮಠ, ಬೈರತ್ ಮತ್ತು ಗುಜರ್ರಾ ಶಾಸನಗಳಲ್ಲಿ ಕ್ರಮವಾಗಿ ಉಪೇತೆ, ಉಪಾಗಟೆ, ಉಪೇತಿ, ಉಪಾಯೈತೆ ಮತ್ತು ಯಿಯೇತೆ ಎಂಬ ಸಮಾನಾರ್ಥಕ ಪದಗಳನ್ನು ಬಳಸಿರುವುದನ್ನು ನೋಡುತ್ತೇವೆ. ಬಹುಷಃ ಅದು ಆಯಾ ಭಾಗಗಳಲ್ಲಿ ಭೌಗೋಳಿಕವಾಗಿ ಉಚ್ಛರಿಸುವ ಉಚ್ಛರಣೆಗಳ ದೋಷವಿರಬಹುದು.

ಬಹ್ಲರ್ ಅವರ ವ್ಯಾಖ್ಯಾನದ ಪ್ರಕಾರ, ಅಶೋಕನು ವಾಸ್ತವವಾಗಿ ಸಂಘವನ್ನು ಪ್ರವೇಶಿಸಿದನು ಅಲ್ಲದೆ ಬೌದ್ಧ ಸನ್ಯಾಸಿಯಾಗಿದ್ದನು. ಇದೇ ರೀತಿಯ ಅಭಿಪ್ರಾಯವನ್ನು ಹೊಂದಿರುವ ಸ್ಮಿತ್, ಈ ಪದದ ಆಧಾರದ ಮೇಲೆ ಅಶೋಕನು ಬೌದ್ಧ ಸನ್ಯಾಸಿಯಾಗಿದ್ದನು ಅದೇ ಸಮಯದಲ್ಲಿ ರಾಜನಾಗಿದ್ದನು ಎಂದು ಹೇಳುತ್ತಾರೆ. ಮುಂದಿನ ಭಾಗವು ಮೌರ್ಯ ಚಕ್ರವರ್ತಿಯು ಸಂಘವನ್ನು ಸ್ಥಾಪನೆ ಮಾಡಿದ ಮತ್ತು ರಾಜ್ಯಕ್ಕೆ ಭೇಟಿ ನೀಡಿದ ಮಾಹಿತಿಯನ್ನು ಉಲ್ಲೇಖಿಸುತ್ತದೆ ಎಂದು ಸೆನಾರ್ಟ್ ಅಭಿಪ್ರಾಯಪಟ್ಟಿದ್ದಾನೆ, ಈ ಸಂದರ್ಭದಲ್ಲಿ ಅಶೋಕನು ತನ್ನ ಬೌದ್ಧಧರ್ಮದ ಪ್ರಚಾರವನ್ನು ಸಾರ್ವಜನಿಕವಾಗಿ ಘೋಷಿಸಿದನು ಎಂಬುದನ್ನು ಹೇಳುತ್ತಾನೆ. ಭಂಡಾರ್ಕರ್ ರವರು ಉಪಾಯೈಟ್ ಎಂಬ ಪದವನ್ನು ‘ಪ್ರವೇಶಿಸುವುದು’ ಅಥವಾ ‘ಸೇರುವುದು’ ಎಂಬುದರ ಬದಲು ‘ಸಮೀಪಿಸುವುದು’ ಅಥವಾ ‘ಸಂಬಂಧ’ ಎಂಬ ಅರ್ಥದಲ್ಲಿ ತೆಗೆದುಕೊಂಡಿದ್ದಾನೆ. ಹಾಗೆಯೆ ಅಶೋಕನು ಪೂರ್ಣ ಪ್ರಮಾಣದ ಸನ್ಯಾಸಿಯಲ್ಲ, ಆದರೆ ಭಿಕ್ಷು (ಗತಿಕ) ಎಂದು ಸೂಚಿಸಿದ್ದಾನೆ. ಅದೇ ರೀತಿ, ಈ ಪಠ್ಯವು ಚಕ್ರವರ್ತಿಯ ಶಾಶ್ವತ ಸನ್ಯಾಸತ್ವಕ್ಕಿಂತ ಹೆಚ್ಚಾಗಿ ಸಂಘಕ್ಕೆ ಅಶೋಕನು ನೀಡಿದ ಭೇಟಿಯನ್ನು ಸೂಚಿಸುತ್ತದೆ ಎಂದು ಮೂಕೇತ್ಜಿ ನಂಬುತ್ತಾನೆ. ರಾಯಚೌಧರಿ ಮತ್ತು ಬಸಕ್ ಈ ಭಾಗವನ್ನು ಅಶೋಕನು ಬೌದ್ಧ ಧಮ್ಮದ ಜೀವನಕ್ರಮವನ್ನು ಸೇರಿಕೊಂಡು ಸನ್ಯಾಸಿಯಾದನು ಎಂದು ಅರ್ಥೈಸಿದ್ದಾನೆ. ಹಲ್ಟ್ ರವರು ಉಪಾಯಿತೆ ಎಂಬ ಪದಕ್ಕೆ ಸಂಘಕ್ಕೆ ಭೇಟಿ ನೀಡಿದ್ದಾರೆಂದು ಭಾವಿಸಿದನು.  ಅಶೋಕನ ವಿವರಣೆಗೆ “ಸಂಘ ಉಪಾಯಿತೆ” ಎಂಬ ಪದದ ಅರ್ಥ ಸಂಘದೊಂದಿಗಿನ ಸಂಪರ್ಕವೆಂದು ಬಳಸಲಾಗಿದೆ ಎಂದು ರಾವ್ ಹೇಳುತ್ತಾನೆ. ರಾಜ ಅಶೋಕನು ಎಂದಿಗೂ ಸಾಮಾನ್ಯ ಅನುಯಾಯಿಗಿಂತ ಹೆಚ್ಚಿನದಾಗಿರಲಿಲ್ಲ, ಅವನು ಸಂಘವನ್ನು ಸಂಪರ್ಕಿಸಿರುವುದು ಧಾರ್ಮಿಕ ವಿಷಯಗಳಲ್ಲಿ ಸೂಚನೆಗಳನ್ನು ಪಡೆಯಲು ಅಥವಾ ಸಹಾಯಕ್ಕಾಗಿ ಆಗಿರಬಹುದು ಮತ್ತು ಅವನು ತಾತ್ಕಾಲಿಕ ಸನ್ಯಾಸಿಯಾಗಿರಲಿಲ್ಲ ಎಂದು ರೋಮಿಲಾ ಥಾಪರ್ ಹೇಳುತ್ತಾಳೆ.  1994 ರಲ್ಲಿ, ಇತಿಹಾಸಕಾರರು ಈ ಪದವನ್ನು “ಸಂಘಕ್ಕೆ ಹತ್ತಿರ” ಎಂದು ಅರ್ಥೈಸಿದರು. ಈ ಪದವನ್ನು ಸಿರ್ಕಾರ್ ಅವರು ಸಂಘಕ್ಕೆ ಲಗತ್ತಿಸಲಾದ ರಾಜ ಅಶೋಕ ಎಂದು ಅನುವಾದಿಸಿದ್ದಾನೆ. ಬೊಂಗಾರ್ಡ್ ಲೆವಿನ್, ಶರ್ಮಾ ಮತ್ತು ಮಿಶ್ರಾ ಈ ಪದವನ್ನು ‘ಸಂಘಕ್ಕೆ ಭೇಟಿ’ ಎಂದು ಅನುವಾದಿಸಿದ್ದಾರೆ! ಈ ಪದದ ಅರ್ಥ “ಸಂಘವು ನನ್ನೊಂದಿಗೆ ನಿಕಟ ಸಂಬಂಧ ಹೊಂದಿದೆ (ಸಂಘೆ ಉಪಾಯೆ)” ಎಂದು ಗುರುಗೆ ಸೂಚಿಸಿದ್ದಾನೆ.  ಗೊಂಬ್ರಿಚ್ ಅವರು ಸಂಘಕ್ಕೆ “ಹೋಗಿ” ಬಹಳಷ್ಟು ಪ್ರಗತಿ ಸಾಧಿಸಿದನು ಎಂದು ಹೇಳುತ್ತಾನೆ. ಸಂಘಕ್ಕೆ ಬೌದ್ಧ ಸಂಪ್ರದಾಯಕ್ಕೆ “ಹೋಗುವುದು” ಎಂದು ಅವರು ಹೇಳಿದರೆ? ಎಂಬುದು ನಮಗೆ ಖಚಿತವಿಲ್ಲ. ಆದರೆ ಅಶೋಕನು “ಸನ್ಯಾಸಿಗಳೊಂದಿಗೆ ಹೋಗಿ ವಾಸಿಸುವುದು” ಇದರ ಅರ್ಥವೆಂದರೆ ಉತ್ಪ್ರೇಕ್ಷೆಯಾಗಬಹುದು, ಆದರೆ ಯಾವುದೇ ಸಂದರ್ಭದಲ್ಲಿ ಅದರ ಬಗ್ಗೆ ಸ್ಪಷ್ಟವಾಗಿ ಇನ್ನಷ್ಟು ತಿಳಿದುಕೊಳ್ಳುವುದನ್ನು ಒತ್ತಿಹೇಳುತ್ತದೆ. ಈ ‘ಗಂ  ಅಥವಾ ಯʼ  ಎಂಬ ಪದದ ಮೂಲ ಅಶೋಕನು ಸಂಘಕ್ಕೆ ಭೇಟಿ ನೀಡುವುದನ್ನು ಉಲ್ಲೇಖಿಸುತ್ತದೆ ಎಂಬುದು ಸ್ಪಷ್ಟವಾಗಿದೆ. ಒಟ್ಟಾರೆಯಾಗಿ ಅಶೋಕನು ಸಂಘಕ್ಕೆ ಭೇಟಿ ನೀಡಿದ್ದು ಮತ್ತು ಉಪಾಸಕನಾಗಿ ಅವನ ಮೇಲೆ ಸಂಘದ ಪರಿಣಾಮ ಇವುಗಳ ನಡುವೆ ಸಂಬಂಧವಿದೆ ಎಂಬುದು ಇದರಿಂದ ತಿಳಿದು ಬರುತ್ತದೆ.

ಹೀಗೆ ಇತಿಹಾಸಕಾರರು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ವಿಶ್ಲೇಷಿಸಿದ್ದಾರೆ, ಇದಕ್ಕೆ ಕಾರಣ ಶಾಸನಗಳಲ್ಲಿ ಇಂತಹ ಪ್ರಶ್ನೆಗಳಿಗೆ ಗೊಂದಲಗಳಿಗೆ ನೇರ ಉತ್ತರ ದೊರೆಯುವಂತ ಮಾಹಿತಿ ಇಲ್ಲದಿರುವುದು. ಅದಕ್ಕೆ ಕಾರಣ ಆ ಕಾಲದಲ್ಲಿದ್ದ ಲಿಪಿಕಾರರ ಬೌದ್ಧಿಕ ಕ್ಷಮತೆ, ಧಮ್ಮದ ಬಗ್ಗೆ ಅವರಿಗಿದ್ದಿರಬಹುದಾದ ಜ್ಞಾನದ ಕೊರತೆ. ಇಲ್ಲವೆ ಅಶೋಕನ ಶಾಸನಗಳನ್ನು ಅರ್ಥೈಸುವಲ್ಲಿ ಇತಿಹಾಸಕಾರರು ಮಾಡಿರಬಹುದಾದ ತಪ್ಪು ಗ್ರಹಿಕೆಗಳು ಇವೆಲ್ಲಕ್ಕಿಂತ ದೊಡ್ಡ ಕಾರಣಗಳಿರಬಹುದು. ಬೌದ್ಧ ಧಮ್ಮದ ಮೇಲೆ ಅವರ ವಿರೋಧಿಗಳಿಗಿದ್ದ ದ್ವೇಷ ಭಾವನೆಯಿಂದ ಅಶೋಕನ ಆಡಳಿತದ ವಿರುದ್ಧ ಅಸಡ್ಡೆಯನ್ನು ತೋರಿಸಿದರು. ಅವನು ಭೌದ್ಧ ಧಮ್ಮ ಸ್ವೀಕರಿಸಿದ್ದರಿಂದ ಧಮ್ಮದ ಮೂಲಕ ಆಡಳಿತ ನಡೆಸಿದ್ದನ್ನು ಮುಂದೆ ಅಧಿಕಾರಕ್ಕೆ ಬಂದ ರಾಜ ಮನೆತನಗಳು ಮುಂದುವರೆಸದ ಕಾರಣದಿಂದಲೂ ಅಶೋಕನು ನಿರ್ಮಿಸಿದ ಇತಿಹಾಸ ಹೊರ ಬರಲು ಬ್ರಿಟಿಷರು ಭಾರತಕ್ಕೆ ಬರಬೇಕಾಯಿತು. ಅಲ್ಲಿಯವರೆಗೆ ಉದ್ದೇಶಪೂರ್ವಕವಾಗಿ ಇಲ್ಲ ಜಾಣ ಕುರುಡುತನದಿಂದ ಅವನನ್ನು ಬಚ್ಚಿಡಲಾಗಿತ್ತು ಎಂಬುದು ಈಗಿನ ಭಾರತೀಯ ಇತಿಹಾಸ ಅಧ್ಯಯನಕಾರರಿಗೆ ಸುಲಭವಾಗಿ ಅರ್ಥವಾಗುತ್ತದೆ.

(ಮುಂದುವರೆಯುವುದು…)

ಡಾ. ನಾಗೇಶ್ ಮೌರ್ಯ

ಬೌದ್ಧ ಚಿಂತಕರು, ಬೆಂಗಳೂರು

ಇದನ್ನೂ ಓದಿ- https://kannadaplanet.com/its-a-big-story-autobiography-series-22/ ಅದೊಂದು ದೊಡ್ಡ ಕತೆ- ಆತ್ಮಕಥನ ಸರಣಿ 22 – ಸಾಂತ್‌ ಮಾರಿಯಲ್ಲಿ ನಮ್ಮ ಸಂತೆ ವ್ಯಾಪಾರ

More articles

Latest article

Most read