ವಿಶ್ವಗುರುವಿನ ಸಪ್ತ ಆದೇಶಗಳು

( ಕಿವಿಯಲ್ಲಿ ದಾಸವಾಳ ಹೂ ಇಟ್ಟುಕೊಂಡ ಅಂಧಭಕ್ತ ಹಾಡು ಹಾಡುತ್ತಾ ಬರುತ್ತಾನೆ. ಆತನ ಗೆಳೆಯ ಎದುರಿಗೆ ಬರುತ್ತಾನೆ)

ಅಂಧಭಕ್ತ : (ಹಾಡು)

ಗುರುವೆ ನಿನ್ನಾಟ ಬಲ್ಲವರ್ಯಾರೋ..

ವಿಶ್ವಗುರುವೆ ನಿನ್ನಾಟ ಬಲ್ಲವರ್ಯಾರ್ಯಾರೋ

ಗೆಳೆಯ : ಏನಲೇ ಖುಷಿಯಾಗಿ ಹಾಡು ಹೇಳ್ಕೊಂಡು ಹೋಗ್ತಿದ್ದೀಯಾ? ಏನ್ ಸಮಾಚಾರಾ..

ಅಂಧಭಕ್ತ : ಹೋ ನೀನಾ.. ನೋಡಯ್ಯಾ ನಾನು ವಿದೇಶಿ ಪ್ರವಾಸ ಮಾಡಬಾರದು ಅಂತಾ ಡಿಸೈಡ್ ಮಾಡಿದ್ದೀನಿ. ವಿದೇಶಕ್ಕೆ ಹೋಗಬಾರದು ಅಂತಾ ನಮ್ಮ ವಿಶ್ವಗುರುಗಳು ಅಪ್ಪಣೆ ಮಾಡಿದ್ದಾರೆ ಗೊತ್ತಲ್ವಾ.

ಗೆಳೆಯ : (ವ್ಯಂಗ್ಯವಾಗಿ) ನೀನು… ವಿದೇಶಿ ಪ್ರವಾಸ.. ಯಾವ ದೇಶಕ್ಕೆ ಹೋಗಬೇಕು ಅಂತಾ ಮಾಡಿದ್ದೆ..

ಅಂಧಭಕ್ತ : ಅಮೇರಿಕಾನೋ ಯುರೋಪೋ ಹೊಗೋಣಾ ಅಂತಾ ಇದ್ದೆ ಕಣಯ್ಯಾ. ಆದರೆ..

ಗೆಳೆಯ : ಹೌದೇನೋ.. ಹೋಗಬಹುದಾಗಿತ್ತೇನೋ. ಆದರೆ ನಿನ್ನ ಬಳಿ ಪಾಸ್ ಪೋರ್ಟೇ ಇಲ್ಲವಲ್ಲೋ ಹೆಂಗ್ ಹೋಗ್ತೀಯಾ, ಸಮುದ್ರಾ ಈಜ್ಕೊಂಡಾ ಇಲ್ಲಾ ನಿನ್ನ ಗುರುವಿಗೇ ಗುರುವಾದ ಸಾವರ್ಕರ್ ಹಾಗೆ ಬುಲ್ ಬುಲ್ ಹಕ್ಕಿ ಮೇಲೆ ಕೂತ್ಕೊಂಡಾ.

ಅಂಧಭಕ್ತ : ಹೋ ಹೌದಲ್ವಾ.. ಪಾಸ್‌ಪೋರ್ಟ್ ಬೇಕಲ್ವಾ? ಇದು ನನಗೆ ಹೊಳೀಲೇ ಇಲ್ವಲ್ಲಾ. ಹೋಗಲಿ ವಿಶ್ವಗುರುಗಳು ಹೇಳಿದ್ದಾರೆ ಚಿನ್ನಖರೀದಿ ಮಾಡಬಾರದು ಅಂತಾ. ನಾನಂತೂ ಬಂಗಾರದಂಗಡಿ ಸುತ್ತಾ ಮುತ್ತಾನೂ ಸುಳಿಯೋದಿಲ್ಲಪ್ಪಾ..

ಗೆಳೆಯ : ಹೌದಲೇ ಮಂಗ್ಯಾನ ಮಗನss. ಚಿನ್ನದ ಬೆಲೆ ಎಷ್ಟು  ಆಗೈತಿ ಅಂತಾ ನಿನಗೇನಾದ್ರೂ ಗೊತ್ತೈತಾ? ಹತ್ತು ಗ್ರಾಮಿಗೆ ಒಂದು ಲಕ್ಷದಾ ಅರವತ್ತು ಸಾವಿರ.‌ ಜೊತೆಗೆ ಮೋದಿಯವರು ಏರಿಸಿದ 15% ಎಕ್ಟ್ರಾ ಟ್ಯಾಕ್ಸ್ ಬೇರೆ. ಚಿತ್ರಾನ್ನಕ್ಕೆ ಕಾಸಿಲ್ಲದ ನೀನು ಚಿನ್ನಾ ತಗೋತಿ ಏನಲೇ.

ಅಂಧಭಕ್ತ : ನೋಡು ತಮಾಶೆ ಮಾಡಬ್ಯಾಡಾ. ಏನೋ ಎಲ್ಲಿಂದಾದ್ರೂ ಕಾಸು ಬಂದ್ರೆ ಬಂಗಾರ ಕೊಳ್ಳೋಣ ಅನ್ಕೊಂಡಿದ್ನಪ್ಪಾ. ಹೆಂಗೂ ಮೋದಿಯವರು ‘ಬ್ಯಾಡ್ರಪ್ಪಾ ಚಿನ್ನಾ ಗಿನ್ನಾ ಏನೂ ತಗೋಬಾರದು ದೇಶ ಸಂಕಷ್ಟದಲ್ಲಿದೆ’ ಅಂತಾ ಹೇಳಿದ್ರು, ಅದಕ್ಕೆ ಚಿನ್ನದ ಆಸೆಗೆ ಎಳ್ಳು ನೀರು ಬಿಟ್ನಪ್ಪಾ. ನನಗೆ ಈ ಹನಮಂತದೇವರ ಕರಿ ತಾಯತಾನೇ ಇರಲಿ ಬಿಡು.

ಗೆಳೆಯ : ಅಲ್ಲಯ್ಯಾ.. ನಿನ್ನ ಅಕೌಂಟಿಗೆ ಮೋದಿಯವರು 15 ಲಕ್ಷ ಹಾಕಿಲ್ಲೇನು. ಹತ್ತು ವರ್ಷದ ಹಿಂದss ಕಪ್ಪು ಹಣ ತಂದು ಎಲ್ಲಾರ ಅಕೌಂಟಿಗೆ 15 ಲಕ್ಷ ಹಾಕ್ತೀನೀ ಅಂದಿದ್ರಲ್ಲಾ, ಅದಕ್ಕss ಕೇಳಿದೆ ಅಷ್ಟೇ.

ಅಂಧಭಕ್ತ : ಹಾಕ್ತಿದ್ರು, ಆದ್ರೇನು ಮಾಡೋದು ಮೋದಿಯವರು ಬಾಳಂದ್ರ ಬಾಳ ಬ್ಯೂಜಿ ಇರ್ತಾರಲ್ವಾ, ಯಾವಾಗಲೂ ಆ ದೇಶಾ ಈ ದೇಶಾ ಅಂತಾ ವಿಶ್ವ ಪರ್ಯಟನೆ ಮಾಡ್ತಾ ಇರ್ತಾರಲ್ವಾ. ಸ್ವಿಸ್ ಬ್ಯಾಂಕಿನಿಂದ ಕಪ್ಪು ಹಣ ತರೋಕೆ ಟೈಂ ಸಿಕ್ಕಿಲ್ಲಾ. ಮುಂದೆ ಯಾವತ್ತಾದ್ರೂ ತಂದೇ ತರ್ತಾರಯ್ಯಾ, ನಮ್ಮ ಅಕೌಂಟಿಗೆ ಹಾಕೇ ಹಾಕ್ತಾರೆ.. ಕಾಯಬೇಕಪ್ಪಾ. ಆ ಮಾತು ಈಗ್ಯಾಕೆ. ಮೋದಿಯವರು ಹೇಳಿದಂಗೆ ನಾನಂತೂ ರಸಗೊಬ್ಬರ ಹಾಕಬಾರದು ಅಂತಾ ಡಿಸೈಡ್ ಮಾಡಿದ್ದೀನಯ್ಯಾ? ಇದು ಮೋದಿ ನಿಷ್ಟೆ ಅಂದ್ರೆ..

ಗೆಳೆಯ : ಹೌದಾ.. ನೀನು ರಸಗೊಬ್ಬರ ಅಂದ್ರೆ ಯೂರಿಯಾ ಕೊಳ್ಳಬಾರದು ಅಂತಾ ಡಿಸೈಡ್ ಆಗಿದ್ದೀಯಾ? ಅಲ್ಲಯ್ಯಾ ಅಂಧಭಕ್ತ ಶಿಖಾಮಣಿ.. ನಿನಗೆ ಯಾವ ಜಮೀನೂ ಇಲ್ಲಾ, ಹೊಲಾನೇ ಇಲ್ಲಾ ಅಂದ್ಮೇಲೆ ರಸಗೊಬ್ಬರ ಇದ್ರೂ ಎಲ್ಲಯ್ಯಾ ಹಾಕ್ತೀಯಾ?

ಅಂಧಭಕ್ತ : ಹೌದಲ್ವಾ.. ಮರತೇ ಬಿಟ್ಟಿದ್ದೆ. ಜಮೀನು ಇಲ್ದೇ ಇದ್ದದ್ದೇ ಒಳ್ಳೇದಾಯ್ತು ನೋಡು. ರಸಗೊಬ್ಬರ ಹಾಕೋ ಅಗತ್ಯಾನೇ ಬರಾಕಿಲ್ಲಾ. ಮೋದಿಯವರ ಆದೇಶ ಪಾಲಿಸಿದಂಗೂ ಆಯ್ತು, ವಿದೇಶಿ ವಿನಿಮಯ ಉಳಿತಾಯಕ್ಕೆ ಕೊಡುಗೆ ಕೊಟ್ಟಂಗೂ ಆಯ್ತು. ಹೋಗಲಿ ಬಿಡು ಪೆಟ್ರೋಲು ಡೀಸಲ್ಲು ಬಳಸದೇ ಉಳಿಸಿ ಅಂತಾ ಮೋದಿ ಸಾಹೇಬ್ರು ಹೇಳವ್ರೆ, ನಾನಂತೂ ಬೈಕು ಕಾರಿಗೆ ಈ ಇಂಧನಗಳನ್ನ ಹಾಕ್ಸೋದೇ ಬ್ಯಾಡಾ ಅಂತಾ ಗಟ್ಟಿ ನಿರ್ಧಾರ ಮಾಡಿದ್ದೀನಯ್ಯಾ.

ಗೆಳೆಯ : ಹೌದೇನೋ.. ಶಹಬ್ಬಾಸ್. ಅಲ್ಲಲೇ ನಿನ್ನತ್ರ ಕಾರು ಎಲೈತಲಾ, ಇರೋ ಒಂದು ಪೋರ್ತ್ ಹ್ಯಾಂಡ್ ಗುಜರಿ ಬೈಕ್ ರಿಪೇರಿ ಮಾಡ್ಸೋಕೆ ಕಾಸಿಲ್ದೆ ಮನೇ ಮೂಲೇಲಿ ಇಟ್ಟಿದ್ದೀಯಾ?

ಅಂಧಭಕ್ತ : ನನಗ್ಗೊತ್ತಿತ್ತು.. ಇಂತಾ ಪರಿಸ್ಥಿತಿ ಬರುತ್ತೆ ಅಂತಾ ಗೊತ್ತಿತ್ತು. ಅದಕ್ಕೆ ಬೈಕ್ ರಿಪೇರಿ ಮಾಡ್ಸೋಕೆ ಹೋಗ್ಲೆ ಇಲ್ಲಾ. ರಿಪೇರಿ ಆಗಿದ್ರೆ ಓಡಿಸ್ಬೇಕಾಗಿತ್ತು, ಓಡಿಸ್ಬೇಕು ಅಂದ್ರೆ ಪೆಟ್ರೋಲ್ ಹಾಕಿಸ್ಬೇಕಾಗಿತ್ತು. ಪೆಟ್ರೋಲ್ ಹಾಕ್ಸಿದ್ರೆ ಈ ದೇಶದ ವಿದೇಶಿ ವಿನಿಮಯಕ್ಕೆ ತೊಂದರೆ ಆಗ್ತಿತ್ತು. ಅದಕ್ಕೆ ನೋ ರಿಪೇರಿ.  ಹೇಗೂ ದೇವರು ಎರಡು ಕಾಲು ಕೊಟ್ಟವ್ನೆ ನಡಕೊಂಡೇ ಹೋಗ್ತೀನಿ. ಪೆಟ್ರೋಲ್ ಬಳಸದೇ ದೇಶಭಕ್ತಿ ತೋರಿಸ್ತೀನಿ. ಇಷ್ಟಕ್ಕೂ ಮನೆಯಿಂದಾ ಹೊರಗೆ ಹೊಗಬ್ಯಾಡಿ, ವರ್ಕ್ ಫ್ರಂ ಹೋಂ ಮಾಡಿ ಅಂತಾ ವಿಶ್ವಗುರುಗಳು ಆದೇಶ ಮಾಡಿದ್ದಾರಲ್ವಾ..

ಗೆಳೆಯ : ಆಯ್ತು.. ಮಾಡಿದ್ದಾರೆ.. ಆದರೆ ನೀನೇನು ಐಟಿ ಬಿಟಿ ಕಂಪನೀಯಲ್ಲಾ ಕೆಲಸಾ ಮಾಡೋದು. ಮಾಡೋಕೆ ನೆಟ್ಟಗೆ ಒಂದು ಕೆಲಸಾ ಇಲ್ಲಾ, ವರ್ಕ್ ಫ್ರಂ ಹೋಂ ಮಾಡ್ತಾನಂತೆ.. ನಾನ್ಸೆನ್ಸ್.

ಅಂಧಭಕ್ತ : ಏನಯ್ಯಾ ಹಿಂಗೇಳ್ತಿಯಾ. ಮನೇಲಿ ಎಷ್ಟೊಂದು ಕೆಲ್ಸಾ ಇರ್ತಾವೆ. ಕಸ ಗುಡ್ಸಬೇಕು, ಪಾತ್ರೆ ತೊಳೀಬೇಕು, ಬಟ್ಟೆ ಒಗೀಬೇಕು, ಇವೆಲ್ಲಾ ವರ್ಕ್ ಫ್ರಂ ಹೋಂ ಅಲ್ವಾ. ಅವನ್ನೇ ಮಾಡ್ತೀನಪ್ಪಾ. ಯಾರೂ ಉದ್ಯೋಗ ಕೊಡದೇ ಇದ್ರೆ ನಾನೇನು ಮಾಡ್ಲಿ ಹೇಳು.

ಗೆಳೆಯ : ಯಾರು ಯಾಕಯ್ಯಾ ನಿನಗೆ ಉದ್ಯೋಗ ಕೊಡಬೇಕು. ನಿಮ್ಮ ದೇವರು ಆ ಮೋದೀಜಿ 12 ವರ್ಷದ ಹಿಂದೇನೇ ಪ್ರಾಮೀಸ್ ಮಾಡಿದ್ರಲ್ವಾ, ಪ್ರತಿ ವರ್ಷ ಎರಡು ಕೋಟಿ ಜನರಿಗೆ ಉದ್ಯೋಗ ಕೊಡ್ತೀನಿ ಅಂತಾ. ಆ ಲೆಕ್ಕದಲ್ಲಿ ಈಗ 24 ಕೋಟಿ ನಿರುದ್ಯೋಗಿಗಳಿಗೆ ಉದ್ಯೋಗ ಸಿಕ್ಕಿರಬೇಕಲ್ವಾ, ಅದರೊಳಗೆ ನೀನೂ ಒಬ್ಬ ಆಗಿರಬೇಕಲ್ವಾ?

ಅಂಧಭಕ್ತ : ಕೊಡಬೇಕಾಗಿತ್ತು ಕೊಡಲಿಲ್ಲ. ಎಲ್ಲಾದಕ್ಕೂ ಆ ನೆಹರು ಕಾರಣಾ ಕಣಯ್ಯಾ. ದೇಶಕ್ಕಾಗಿ ಏನೂ ಮಾಡಲಿಲ್ಲಾ. ಆ ಕಾಂಗ್ರೆಸ್ಸೂ ಕಾರಣ ಗೊತ್ತೇನಯ್ಯಾ? ಅರವತ್ತೈದು ವರ್ಷ ಈ ದೇಶಾ ಆಳಿದ್ರೂ ಏನೂ ಮಾಡೇ ಇಲ್ಲಾ. ಅವ್ರು ಮಾಡಿದ ಪಾಪಗಳನ್ನ ತೊಳಿಯೋಕೆ ಪಾಪ ನಮ್ಮ ಮೋದಿಯವ್ರು ದಿನದ 24 ಗಂಟೇನೂ ಪ್ರಯತ್ನ ಪಡ್ತಾನೇ ಇದ್ದಾರೆ.. ಯಾವತ್ತೋ ಒಂದಿನ ನನಗೂ ನೌಕರಿ ಕೊಟ್ಟೇ ಕೊಡ್ತಾರೆ. ಯಾವುದಕ್ಕೂ ಆಶಾಭಾವನೆ ಇರಬೇಕಲ್ವಾ..

ಗೆಳೆಯ : ಹೌದೌದು.. ಹೋಪ್ ಅನ್ನೋದು ಇರಬೇಕು, ಆದರೆ ನಿನ್ನಂತಾ ಅಂಧಭಕ್ತರಿಗೆ ಇರುವಷ್ಟು ಇರಬಾರದು. ಮಾಡೋಕೆ ಕೆಲಸಾ ಇಲ್ಲಾ ಕಾರ್ಯಾ ಇಲ್ಲಾ..

ಅಂಧಭಕ್ತ : ಏಯ್.. ಯಾರಯ್ಯಾ ಹೇಳಿದ್ರು ಅಂಧಭಕ್ತರಿಗೆ ಮಾಡೋಕೆ ಕೆಲಸಾ ಕಾರ್ಯಾ ಇಲ್ಲಾಂತ. ನಮ್ಮದೇನಿದ್ರೂ ಸೋಷಿಯಲ್ ಮೀಡಿಯಾ ವರ್ಕ್. ಯಾರಾದ್ರೂ ಮೋದಿಯವರ ವಿರುದ್ಧ, ಬಿಜೆಪಿ ವಿರುದ್ಧ, ಸಂಘದ ವಿರುದ್ದ ಕಮೆಂಟ್ ಹಾಕ್ಲಿ ನೋಡೋಣ, ಅಂತವರ ಜನ್ಮಾ ಜಾಲಾಡ್ಸಿ ಬಿಡ್ತೀವಿ. ಅಮ್ಮನ್ನ ಅಕ್ಕನ್ನ, ಸೂ…ಮಗಾ, ಬೋ..ಮಗಾ ಅಂತೆಲ್ಲಾ ಉಗ್ದು ಉಪ್ಪಿನಕಾಯಿ ಹಾಕಿ ಬಿಡ್ತೀವಿ. ಅದಕ್ಕಾಗೇ ಫೇಕ್ ಅಕೌಂಟ್ ಓಪನ್ ಮಾಡ್ಕೊಂಡಿರ್ತೀವಿ. ಇದೆಲ್ಲಾ ವರ್ಕ್ ಫ್ರಂ ಹೋಂ ಅಲ್ವಾ. ಅಂಧಭಕ್ತರ ದೇವರಾದ ಮೋದಿಯವರಿಗೆ ಯಾರಾದ್ರೂ ಏನಾದ್ರೂ ಅಂದ್ರೆ ನಾವು ಸುಮ್ಕಿರ್ತೀವಾ?

ಗೆಳೆಯ: ಅದೆಲ್ಲಾ ನನಗೂ ಗೊತ್ತೈತಿ ಮಾರಾಯಾ.  ಹೋಗಲೀ ಅಡುಗೆ ಮಾಡ್ಕೊಂಡು ಊಟಾನಾದ್ರೂ ಮಾಡಿದ್ಯಾ?

ಅಂಧಭಕ್ತ : ಮೋದೀಜಿಯವರು ಹೇಳಿದ್ದಾರಲ್ಲವಾ, ದೇಶದ ಆರ್ಥಿಕತೆ ಬಿಕ್ಕಟ್ಟಿನಲ್ಲಿದೆ ಅಡುಗೆ ಎಣ್ಣೆ ಹೆಚ್ಚು ಬಳಸಬ್ಯಾಡಿ ಅಂತಾ. ಅದಕ್ಕೆ ಅಡುಗೆ ಎಣ್ಣೆ ಬಳಸೋದನ್ನೇ ಬಿಟ್ಟಿದ್ದೀನಯ್ಯಾ. ಈಗೇನಿದ್ರು ರೇಶನ್ ಅಕ್ಕಿ ಅನ್ನಾ, ಹಸಿ ಮೆನಸಿನಕಾಯಿ ಚಟ್ನಿ ಅಷ್ಟೇಯಾ. ಊಟಾ ಮುಖ್ಯ ಅಲ್ಲಪ್ಪಾ ದೇಶಪ್ರೇಮ ಮುಖ್ಯ. ದೇಶಭಕ್ತಿ ಬಹಳಾ ಮುಖ್ಯ.  ನನ್ನಂತಾ ಕೋಟ್ಯಾಂತರ ಅಂಧಭಕ್ತರ ಬಳಿ ಪಾಸ್‌ಪೋರ್ಟ್  ಇರದೇ ಇರಬೋದು, ಬೈಕು ಕಾರು ಇಲ್ಲದೇ ಇರಬೋದು, ಜಮೀನು ಉದ್ಯೋಗ ಇಲ್ಲದೇ ಇರಬೋದು, ಆದರೆ ನಮ್ಮ ಜೊತೆ ದೇವಮಾನವ ಅವತಾರ ಪುರುಷ ಮೋದಿ ಇದ್ದಾರಲ್ಲಾ ಅಷ್ಟೇ ಸಾಕು. ಮೋದೀಜಿಯವರು ಪ್ರಾಣ ಕೊಡು ಅಂದ್ರೂ ಕೊಟ್ಟ ಬಿಡ್ತೀವಿ..

ಗೆಳೆಯ : ಶಹಬ್ಬಾಶ್.. ಅಂಧಭಕ್ತಿ ಅಂದ್ರೆ ಇದು. ನಿನ್ನ ಪ್ರಾಣಾ ತಗೊಂಡು ಮೋದಿ ಏನಯ್ಯಾ ಮಾಡ್ತಾರೆ. ಇಷ್ಟಕ್ಕೂ ನಿನ್ನಂತಾ ನಿರುದ್ಯೋಗಿಗಳು ಜಿರಲೆ ಇದ್ದಂಗೆ ಅನ್ನೋದಾದ್ರೂ ನಿನಗೆ ಗೊತ್ತಾ.

ಅಂಧಭಕ್ತ : ಯಾಕ್ಲೆ ಹೆಂಗೈತೆ ಮೈಗೆ. ನನ್ನನ್ನ ಜಿರಲೆ ಅಂತೀಯಾ ತರಲೆ ನನ್ಮಗನೇ..

ಗೆಳೆಯ : ಅಯ್ಯೋ ನಾನಲ್ಲಯ್ಯಾ ಹೇಳಿದ್ದು. ಈ ದೇಶದ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶರಾದ ಜಸ್ಟಿಸ್ ಸೂರ್ಯಕಾಂತರವರು ಹೇಳಿದ್ದಾರಪ್ಪಾ. ನಿರುದ್ಯೋಗಿಗಳೆಲ್ಲಾ ಪರಾವಲಂಬಿ ಜಿರಲೆಗಳು ಅಂತಾ.

ಅಂಧಭಕ್ತ : ಹೌದಾ.. ಹಂಗೇಳಿದ್ರಾ. ಹಂಗಾದ್ರೆ ನನ್ನಂತವ್ರು ಜಿರಲೆಗಳೇ ಇರಬೇಕು ಬಿಡಯ್ಯಾ. ಇವತ್ತಿಲ್ಲಾ ನಾಳೆ ನಮ್ಮ ಅವತಾರ ಪುರುಷ ಮೋದಿಯವರು ಮಾತು ಕೊಟ್ಟಂಗೆ ಉದ್ಯೋಗ ಕೊಟ್ಟೇ ಕೊಡ್ತಾರೆ. ಆಗ ನಾವು ಜಿರಲೆಗಳಲ್ಲಾ ಮನುಷ್ಯರು ಅಂತಾ ಗರ್ವದಿಂದ ಗರ್ಜಿಸ್ತೀವಿ. ಈಗ ಅದೆಲ್ಲಾ ಬೇಕಾಗಿಲ್ಲಾ ನಾನು ಹೇಳಿದಂಗೆ ಹೇಳು

ಮಹಾಮಾನವ ಮೋದೀಜೀಕಿ ಜೈ

ವಿಶ್ವಗುರು ಮೋದಿ ಮಹರಾಜಕೀ ಜೈ

(ಅಂಧಭಕ್ತನ ಭಜನೆ)

ಗುರುವೆ ನಿನ್ನಾಟ ಬಲ್ಲವರ್ಯಾರೋ..

ವಿಶ್ವಗುರುವೆ ನಿನ್ನಾಟ ಬಲ್ಲವರ್ಯಾರ್ಯಾರೋ

ಶಶಿಕಾಂತ ಯಡಹಳ್ಳಿ

ರಂಗಕರ್ಮಿ

ಇದನ್ನೂ ಓದಿ- ಸತೀಶನ್ ರಾಜಕೀಯ ಪರ್ವ- ಮುಂದೇನು?

More articles

Latest article

Most read