ಫ್ಯಾಕ್ಟ್‌ ಚೆಕ್:‌ ಸುಳ್ಳು ಸುದ್ದಿ ಹಂಚಿಕೊಂಡ ಬಿಜೆಪಿ ನಾಯಕ ಸುರೇಶ್‌ ಕುಮಾರ್‌

ಬೆಂಗಳೂರು : ಕರ್ನಾಟಕದ ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ಎಸ್‌ ಸುರೇಶ್‌ ಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಒಂದು ವೈರಲ್‌ ಗ್ರಾಫಿಕ್‌ ಇದೀಗ ಚರ್ಚೆಗೆ ಕಾರಣವಾಗಿದೆ. “Cockroach Janta Party (CJP)” ಎಂಬ ಇನ್‌ಸ್ಟಾಗ್ರಾಂ ಪೇಜ್‌ನ ಫಾಲೋವರ್‌ಗಳಲ್ಲಿ 49% ಜನ ಪಾಕಿಸ್ತಾನದವರು ಎಂದು ಆ ಪೋಸ್ಟ್‌ನಲ್ಲಿ ಹೇಳಲಾಗಿದೆ. ಜೊತೆಗೆ ಅಮೆರಿಕ ಮತ್ತು ಬಾಂಗ್ಲಾದೇಶದಿಂದ ತಲಾ 14%, ಭಾರತದಿಂದ ಕೇವಲ 9% ಫಾಲೋವರ್‌ಗಳಿದ್ದಾರೆ ಎಂಬ ಅಂಕಿಅಂಶಗಳನ್ನೂ ಗ್ರಾಫಿಕ್‌ನಲ್ಲಿ ತೋರಿಸಲಾಗಿದೆ.

ಈ ಪೋಸ್ಟ್‌ ವೈರಲ್‌ ಆದ ಬಳಿಕ ಹಲವರು ಇದನ್ನು ನಿಜವೆಂದು ಹಂಚಿಕೊಳ್ಳುತ್ತಿದ್ದು, ಕೆಲವರು ಈ ಅಂಕಿಅಂಶಗಳ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ವೈರಲ್‌ ದಾವೆಯ ಸತ್ಯಾಸತ್ಯತೆ ಪರಿಶೀಲಿಸಿದಾಗ, “49% ಪಾಕಿಸ್ತಾನಿ ಫಾಲೋವರ್‌ಗಳು” ಎಂಬ ಹೇಳಿಕೆಗೆ ಯಾವುದೇ ಅಧಿಕೃತ ಸಾಕ್ಷ್ಯ ಲಭ್ಯವಾಗಿಲ್ಲ ಎಂಬುದು ಕಂಡುಬಂದಿದೆ.

Cockroach Janta Party ಅಧಿಕೃತ ವೆಬ್‌ಸೈಟ್‌

“Cockroach Janta Party” ಎಂಬುದು ನಿಜವಾಗಿಯೂ ಇರುವ ಒಂದು ವ್ಯಂಗ್ಯಾತ್ಮಕ ಡಿಜಿಟಲ್‌ ಅಭಿಯಾನ. ಕಳೆದ ಕೆಲವು ವಾರಗಳಲ್ಲಿ ಈ ಪೇಜ್‌ ವೇಗವಾಗಿ ಮಿಲಿಯನ್‌ಗಟ್ಟಲೆ ಫಾಲೋವರ್‌ಗಳನ್ನು ಗಳಿಸಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಕೆಲ ವರದಿಗಳ ಪ್ರಕಾರ, ಈ ಪೇಜ್‌ ಬಿಜೆಪಿಯ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯ ಫಾಲೋವರ್‌ ಸಂಖ್ಯೆಯನ್ನೂ ಮೀರಿದೆ.

ಆದರೆ ವೈರಲ್‌ ಗ್ರಾಫಿಕ್‌ನಲ್ಲಿ ತೋರಿಸಿರುವ ದೇಶವಾರು ಫಾಲೋವರ್‌ ಅಂಕಿಅಂಶಗಳಿಗೆ ಯಾವುದೇ ಅಧಿಕೃತ ದೃಢೀಕರಣ ಸಿಕ್ಕಿಲ್ಲ. Instagram Insights ಅಥವಾ Meta Analytics ಮಾಹಿತಿ ಸಾಮಾನ್ಯವಾಗಿ ಪೇಜ್‌ ನಿರ್ವಾಹಕರಿಗೆ ಮಾತ್ರ ಲಭ್ಯವಾಗುತ್ತದೆ. ಸಾರ್ವಜನಿಕವಾಗಿ ಇಂತಹ ಡೇಟಾವನ್ನು ಪರಿಶೀಲಿಸುವ ಅವಕಾಶ ಇರುವುದಿಲ್ಲ. ಕನ್ನಡ ಪ್ಲಾನೆಟ್‌ ಈ ಕುರಿತು ಹೆಚ್ಚಿನ ಪರಿಶೀಲನೆ ನಡೆಸಿದಾಗ Meta ಅಥವಾ Instagram ಯಾವುದೇ ಅಧಿಕೃತ ವರದಿ ಬಿಡುಗಡೆ ಮಾಡಿಲ್ಲ. CJP ಸಂಸ್ಥಾಪಕರು ಅಥವಾ ಪೇಜ್‌ ನಿರ್ವಾಹಕರು ಕೂಡ ಈ ದೇಶವಾರು ಅಂಕಿಅಂಶಗಳನ್ನು ಪ್ರಕಟಿಸಿರುವ ದಾಖಲೆ ಸಿಕ್ಕಿಲ್ಲ.

ವೈರಲ್‌ ಗ್ರಾಫಿಕ್‌ ಗಮನಿಸಿದರೆ ಅದು Instagram Insightsನ ಮೂಲ ವಿನ್ಯಾಸದಂತಿಲ್ಲ. ಅದರಲ್ಲಿ ಕಸ್ಟಮ್‌ ಪೈ ಚಾರ್ಟ್‌, ಡಿಸೈನ್‌ ಮಾಡಿದ ಗ್ರಾಫಿಕ್ಸ್‌, ಯಾವುದೇ ಅಧಿಕೃತ Meta ಬ್ರಾಂಡಿಂಗ್‌ ಇಲ್ಲದಿರುವುದು, ದಿನಾಂಕ ಮತ್ತು ಮೂಲದ ಮಾಹಿತಿ ಕಾಣಿಸದಿರುವುದು ಗಮನಾರ್ಹವಾಗಿದೆ. ಹೀಗಾಗಿ ಇದು ಅಧಿಕೃತ ಅನಾಲಿಟಿಕ್ಸ್‌ನ ಸ್ಕ್ರೀನ್‌ಶಾಟ್‌ ಆಗಿರುವ ಸಾಧ್ಯತೆ ಕಡಿಮೆ ಎಂದು ತೋರುತ್ತದೆ.

ಅಧಿಕೃತ ದಾಖಲೆ ಬಿಡುಗಡೆ : ಈ ಬಗ್ಗೆ ಸ್ವತಃ ಸಾಮಾಜಿಕ ಜಾಲತಾಣದಲ್ಲಿ, ಅಧಿಕೃತವಾಗಿ ಕಾಕ್ರೋಚ್​ ಜನತಾ ಪಾರ್ಟಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ತಮ್ಮ ಅಧಿಕೃತ ಇನ್‌ಸ್ಟಾ ಅಕೌಂಟ್‌ನಲ್ಲಿನ ದಾಖಲೆಯನ್ನು ಬಹಿರಂಗಪಡಿಸಿದ್ದಾರೆ. ಶೇ.94ರಷ್ಟು ಫಾಲೋವರ್ಸ್‌ ಭಾರತೀಯರೇ ಆಗಿದ್ದಾರೆ ಎಂಬುದು ಇದರಿಂದ ಬಹಿರಂಗಗೊಂಡಿದೆ.

Economic Times, NDTV ಸೇರಿದಂತೆ ಹಲವು ವಿಶ್ವಾಸಾರ್ಹ ಮಾಧ್ಯಮಗಳು CJP ಪೇಜ್‌ನ ವೈರಲ್‌ ಜನಪ್ರಿಯತೆಯ ಬಗ್ಗೆ ವರದಿ ಮಾಡಿದ್ದರೂ, “49% ಫಾಲೋವರ್‌ಗಳು ಪಾಕಿಸ್ತಾನದಿಂದ” ಎಂಬ ಅಂಕಿಅಂಶವನ್ನು ಎಲ್ಲಿಯೂ ಉಲ್ಲೇಖಿಸಿಲ್ಲ. ಅಂದರೆ ವೈರಲ್‌ ಆಗಿರುವ ಈ ದಾವೆಗೆ ಮಾಧ್ಯಮ ದೃಢೀಕರಣವೂ ಇಲ್ಲ.

ಒಟ್ಟಿನಲ್ಲಿ, “Cockroach Janta Party” ವೈರಲ್‌ ಆಗಿರುವುದು ಮತ್ತು ಮಿಲಿಯನ್‌ಗಟ್ಟಲೆ ಫಾಲೋವರ್‌ಗಳನ್ನು ಪಡೆದಿರುವುದು ಸತ್ಯ. ಆದರೆ “49% ಫಾಲೋವರ್‌ಗಳು ಪಾಕಿಸ್ತಾನದಿಂದ” ಎಂಬ ಹೇಳಿಕೆಗೆ ಯಾವುದೇ ಅಧಿಕೃತ ಸಾಕ್ಷ್ಯ ಸಿಕ್ಕಿಲ್ಲ. ಮಾಜಿ ಸಚಿವ ಎಸ್‌. ಸುರೇಶ್‌ ಕುಮಾರ್ ಹಂಚಿಕೊಂಡಿರುವ ಪೋಸ್ಟ್‌ನಲ್ಲಿನ ಈ ಅಂಕಿಅಂಶವನ್ನು ದೃಢೀಕರಿಸಲು ಸಾಧ್ಯವಾಗದ ಕಾರಣ, ಅದನ್ನು ಸುಳ್ಳು ಎಂದು ತೀರ್ಮಾನಿಸಬಹುದಾಗಿದೆ.

More articles

Latest article

Most read