ಪ್ರಧಾನಿ ನರೇಂದ್ರ ಮೋದಿ ಈ ದೇಶದ ಯುವಜನಾಂಗದ ಕ್ಷಮೆ ಕೋರಲು ಸಿಎಂ ಸಿದ್ದರಾಮಯ್ಯ ಆಗ್ರಹ

ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ದೇಶದ ಯುವಕರ ಕ್ಷಮೆ ಯಾಚಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸದ್ದಾರೆ.

ಕಾಂಗ್ರೆಸ್‌ ಕಾರ್ಯಕರ್ತರು ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನಾ ಸ್ಥಳದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಸಿಇಟಿ ಮಾದರಿಯಲ್ಲಿ ಆಯಾಯ ರಾಜ್ಯಗಳಲ್ಲಿ ಪರೀಕ್ಷೆ ನಡೆಸಲು ಅವಕಾಶ ಮಾಡಿಕೊಡಬೇಕು, ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ ನೀಡುವಂತೆ ಆಗ್ರಹಿಸಿದ್ದಾರೆ.

ಕರ್ನಾಟಕದಲ್ಲಿ ಮಾತ್ರ ಅಲ್ಲ, ಬಿಜೆಪಿ ಆಡಳಿತದ ಎಲ್ಲಾ ರಾಜ್ಯಗಳಲ್ಲೂ ಈ ಸಮಸ್ಯೆ ಇದೆ. ಮೋದಿಯವರಿಗೆ ಮತ್ತು ಅವರ ನೇತೃತ್ವದ ಸರ್ಕಾರಕ್ಕೆ ಯಾವ ಮುಂದಾಲೋಚನೆಗಳೂ ಇಲ್ಲ. ಯಾವ ಸಿದ್ಧತೆಗಳೂ ಇರುವುದಿಲ್ಲ. ಕಷ್ಟ ಬಂದಾಗ ವೆಂಕಟರಮಣ ಎಂದಂತೆ ಬಿಜೆಪಿ ಯವರಿಗೆ ಬಿಕ್ಕಟ್ಟು ಬಂದಾಗ, ಪಾಕಿಸ್ತಾನ, ಮುಸ್ಲಿಂ ಎಂದು ಜಪಿಸುವುದು ಬಿಟ್ಟರೆ, ಬೇರೆ ಭಾಷೆಯೂ ಗೊತ್ತಿಲ್ಲ. ಬೇರೆ ಮಾತುಗಳೂ ಗೊತ್ತಿಲ್ಲ.

ಭಾರತದ ಆರ್ಥಿಕತೆ ಪಾತಾಳಕ್ಕೆ ಹೋಗುತ್ತಿದೆ. ವಿದೇಶಿ ನೀತಿ ಅಧ್ವಾನವಾಗಿದೆ. ನೆರೆಹೊರೆ ದೇಶಗಳೊಂದಿಗಿನ ಸಂಬಂಧಗಳು ಹಳಸಿ ಹೋಗಿವೆ. ಟ್ರಂಪ್ ಕುಣಿಸಿದಂತೆ ಕುಣಿಯುವುದು ಬಿಟ್ಟು ಬೇರೆ ಏನೂ ಗೊತ್ತಿಲ್ಲ. ದೇಶದ ಜ್ವಲಂತ ಸಮಸ್ಯೆಗಳ ಬಗ್ಗೆ ಬಿಜೆಪಿಯ ಯಾವ ಸಚಿವರಿಗೂ ಆಳವಾದ ತಿಳಿವಳಿಕೆಯಿಲ್ಲ. ದೇಶದ ಭವಿಷ್ಯದ ಕುರಿತು ಬಿಜೆಪಿ ಎಂದೂ ಗಂಭೀರವಾಗಿಲ್ಲ.

ದೇಶದ ಇತ್ತೀಚಿನ ಮಾಹಿತಿಗಳ ಪ್ರಕಾರ ನಿರುದ್ಯೋಗ ಭೀಕರ ಸ್ಥಿತಿ ತಲುಪಿದೆ. 20 ರಿಂದ 29 ವಯಸ್ಸಿನ ಯುವ ಪದವೀಧರರ ನಿರುದ್ಯೋಗದ ಪ್ರಮಾಣ ಶೇ.69 ರಷ್ಟಿದೆ. ಯಾವ ದೇಶದಲ್ಲಿ ದುಡಿಯುವ ಯುವ ಜನರ ಕೈಗೆ ಉದ್ಯೋಗ ಕೊಡಲು ಸಾಧ್ಯವಾಗುವುದಿಲ್ಲವೊ ಆ ದೇಶ ದಾರಿದ್ರಾö್ಯವಸ್ಥೆಗೆ ಕುಸಿಯುತ್ತದೆ. ಆದ್ದರಿಂದಲೇ ಮೋದಿಯವರು ಚಿನ್ನ, ಬೆಳ್ಳಿ ಖರೀದಿಸಬೇಡಿ, ಪೆಟ್ರೋಲ್, ಡೀಸೆಲ್ ಕಡಿಮೆ ಬಳಸಿ ಎಂದು ದೇಶಕ್ಕೆ ಉಪದೇಶ ಮಾಡಿ ಫಾರಿನ್ ಟೂರ್ ಹೊರಟಿದ್ದಾರೆ. ದೇಶಕ್ಕೆ ಕಷ್ಟ ಬಂದಾಗಲೆಲ್ಲ ಇವರು ಫಾರಿನ್ ಟೂರಿನಲ್ಲೇ ಇರುತ್ತಾರೆ.

ಕೇಂದ್ರ ಸರ್ಕಾರಕ್ಕೆ ಒತ್ತಾಯಗಳು
ಕೇಂದ್ರ ಶಿಕ್ಷಣ ಸಚಿವರಾದ ಧರ್ಮೇಂದ್ರ ಪ್ರಧಾನ್ ಅವರು ಹೊತ್ತುಕೊಂಡು ಈ ಕೂಡಲೇ ರಾಜೀನಾಮೆ ನೀಡಬೇಕು. ಪ್ರತಿ ಮೃತ ವಿದ್ಯಾರ್ಥಿಯ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕು. ನೀಟ್ ಪರೀಕ್ಷಾ ವ್ಯವಸ್ಥೆಯನ್ನು ಈ ಕೂಡಲೇ ರದ್ದು ಮಾಡಿ 2015 ಕ್ಕೂ ಮೊದಲೇ ಇದ್ದ ವ್ಯವಸ್ಥೆಯನ್ನು ಮರಳಿ ಜಾರಿಗೆ ತರಬೇಕು. ರಾಜ್ಯಗಳಿಗೆ ಮರಳಿ ಅಧಿಕಾರ ನೀಡಬೇಕು.

ಪ್ರಶ್ನೆ ಪತ್ರಿಕೆಗಳನ್ನು ಲೀಕ್ ಮಾಡುವ ಮೂಲಕ ಘೋರ ಕ್ರಿಮಿನಲ್ ಅಪರಾಧ ಎಸಗಿರುವ ಎಲ್ಲರನ್ನೂ ಪತ್ತೆ ಹಚ್ಚಿ, ಅವರ ಮೇಲೆ ಕೊಲೆ ಮೊಕದ್ದಮೆಯನ್ನು ಹೊರಿಸಿ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು.

ನರೇಂದ್ರ ಮೋದಿಯವರು ಕೂಡಲೇ ವಿದೇಶ ಪ್ರವಾಸವನ್ನು ಮೊಟಕುಗೊಳಿಸಿ ದೇಶದ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಸರ್ವ ಪಕ್ಷಗಳೊಂದಿಗೆ ಚರ್ಚಿಸಬೇಕು. ನೀಟ್ ಪರೀಕ್ಷೆಯಲ್ಲಿ ಆದ ಅವಾಂತರಕ್ಕೆ ದೇಶದ ಕ್ಷಮೆಯಾಚಿಸಬೇಕು. ಸಂಬAಧಪಟ್ಟ ಅಧಿಕಾರಿಗಳನ್ನು ವಜಾ ಮಾಡಬೇಕು.

More articles

Latest article

Most read