ಎಸ್‌ಐಆರ್‌: 1.11 ಕೋಟಿ ಜನರನ್ನು ಕರಡು ಪಟ್ಟಿಯಿಂದ ಕೈಬಿಡುವ ಸಾಧ್ಯತೆ

ವಿವಿಧ ಕಾರಣಗಳಿಂದ ದಾಖಲೆ ಸರಿ ಇಲ್ಲದವರು ಫಾರಂ 6 ಸಲ್ಲಿಸಲು ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ಮನವಿ

ಬೆಂಗಳೂರು :  ರಾಜ್ಯದಲ್ಲಿ ವಿಶೇಷ ತೀವ್ರ ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆ ಮುಕ್ತಾಯ ಹಂತ ತಲುಪಿದ್ದು 1.11 ಕೋಟಿ ಜನರ ಹೆಸರು ಮತದಾರರ ಪಟ್ಟಿಯಿಂದ ಕೈ ಬಿಡುವ ಸಾಧ್ಯತೆಯಿದೆ.

ಈ ಕುರಿತು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್, ಶೇ. 80ರಷ್ಟು ಎನ್ಯುಮರೇಷನ್ ಫಾರ್ಮ್‌ಗಳ ಡಿಜಿಟಲೀಕರಣ ಪೂರ್ಣಗೊಂಡಿದೆ. ರಾಜ್ಯದಲ್ಲಿ 1.11 ಕೋಟಿ ಮತದಾರರು ಎಎಸ್‌ಡಿಡಿಓ (ಮನೆಯಲ್ಲಿ ಇಲ್ಲದಿರುವುದು, ಮನೆ ಬದಲಾವಣೆ, ಮೃತಪಟ್ಟಿರುವುದು, ಎರಡು ಎಪಿಕ್ ಕಾರ್ಡ್‌ ಹೊಂದಿರುವುದು ಸೇರಿ ಇತರೆ ಕಾರಣಗಳು) ಪಟ್ಟಿಗೆ ಸೇರ್ಪಡೆ ಅಗಿದ್ದಾರೆ. ಅಂತವರನ್ನು ಕರಡು ಪಟ್ಟಿಯಿಂದ ಹೊರಗಿಡಲಾಗುವುದು. ಅವರು ತಮ್ಮ ಹೆಸರು ಕೈಬಿಡದಿರಲು ಮತದಾರರು ಫಾರ್ಮ್-6 ಸಲ್ಲಿಸಬೇಕೆಂದು ಮನವಿ ಮಾಡಿದ್ದಾರೆ.

ಆಗಸ್ಟ್‌ 8ರವರೆಗೆ ಮತದಾರರ ಪಟ್ಟಿ ಪರಿಷ್ಕರಣೆ ನಡೆಯಲಿದ್ದು, ರಾಜ್ಯದ 5.54 ಕೋಟಿ ಮತದಾರರ ಪೈಕಿ ಮನೆ-ಮನೆ ಪರಿಶೀಲನೆ ಮತ್ತು ಡಿಜಿಟಲೀಕರಣ ಕಾರ್ಯ ಶೇ.99.84ರಷ್ಟು ಪೂರ್ಣಗೊಂಡಿದೆ. ಸುಮಾರು 16.30 ಲಕ್ಷ ಮತದಾರರು ಪತ್ತೆಯಾಗಿಲ್ಲ ಎಂಬ ಮಾಹಿತಿ ಬೆಳಕಿಗೆ ಬಂದಿದೆ ಎಂದು ಹೇಳಿದರು.

ಆಯೋಗದ  ಪ್ರಕಾರ, 4.43 ಕೋಟಿ (ಶೇ.79.80) ಮತದಾರರ ವಿವರಗಳು ದೃಢೀಕರಿಸಲ್ಪಟ್ಟಿದ್ದು, 1.11 ಕೋಟಿ (ಶೇ.20.04) ದಾಖಲೆಗಳು ಇನ್ನೂ ಪರಿಶೀಲನಾ ಹಂತದಲ್ಲಿವೆ. ಇದೇ ವೇಳೆ 66.64 ಲಕ್ಷ ಮತದಾರರು ಶಾಶ್ವತವಾಗಿ ಸ್ಥಳಾಂತರಗೊಂಡಿರುವುದು, 16.30 ಲಕ್ಷ ಮಂದಿ ಮೃತಪಟ್ಟಿರುವ ಮಾಹಿತಿ, ಹಾಗೂ 16.30 ಲಕ್ಷ ಮತದಾರರು ಪತ್ತೆಯಾಗದ ಅಥವಾ ಗೈರುಹಾಜರಾಗಿರುವುದು ದಾಖಲಾಗಿದೆ. ಉಳಿದ 5.02 ಲಕ್ಷ ದಾಖಲೆಗಳು ‘ಇತರೆ’ ವಿಭಾಗದಲ್ಲಿ ಪರಿಶೀಲನೆಯಲ್ಲಿವೆ ಎಂದು ತಿಳಿಸಿದರು.

ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಬೆಂಗಳೂರು ನಗರ ವ್ಯಾಪ್ತಿಯಲ್ಲೇ ಎಎಸ್‌ಡಿಡಿಓ ಹೆಚ್ಚಿನ ಪ್ರಮಾಣದ ದಾಖಲೆಗಳು ಪರಿಶೀಲನಾ ಹಂತದಲ್ಲಿರುವುದು ಗಮನಾರ್ಹವಾಗಿದೆ. ಸ್ಥಳಾಂತರ, ಮರಣ ಅಥವಾ ಸಂಪರ್ಕಕ್ಕೆ ಸಿಗದ ಮತದಾರರು ಹೆಚ್ಚಿನಸಂಖ್ಯೆಲ್ಲಿದ್ದಾರೆ.

ಬೆಂಗಳೂರು ದಕ್ಷಿಣದಲ್ಲಿ 11,07,678, ಬೆಂಗಳೂರು ಉತ್ತರ 11,07,027 ಮತ್ತು ಬೆಂಗಳೂರು ಕೇಂದ್ರದಲ್ಲಿ  9,15,035 ಮತದಾರರು ಸೂಕ್ತ ಮಾಹಿತಿ ಒದಗಿಸಿಲ್ಲ. ಈ ಅಂಕಿ-ಅಂಶಗಳು ಮತದಾರರ ಹೆಸರನ್ನು ಈಗಾಗಲೇ ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂಬುದನ್ನು ಸೂಚಿಸುವುದಿಲ್ಲ. ಬದಲಾಗಿ, ಸ್ಥಳಾಂತರಗೊಂಡವರು, ಮೃತಪಟ್ಟವರು ಅಥವಾ ಮನೆ-ಮನೆ ಪರಿಶೀಲನೆ ವೇಳೆ ಸಂಪರ್ಕಕ್ಕೆ ಸಿಗದವರ ದಾಖಲೆಗಳು ಅಂತಿಮ ಪರಿಶೀಲನೆಯಲ್ಲಿವೆ ಎಂದು ಚುನಾವಣಾ ಅಧಿಕಾರಿಗಳು ಸ್ಪಷ್ಟಪಡಿಸಿದರು.

ಫಾರಂ ಸಲ್ಲಿಕೆ ಮಹತ್ವ

ರಾಜ್ಯಾದ್ಯಂತ 6.88 ಲಕ್ಷಕ್ಕೂ ಹೆಚ್ಚು ಮತದಾರರು ಆನ್‌ಲೈನ್ ಮೂಲಕವೇ ತಮ್ಮ ನಮೂನೆಗಳನ್ನು ಸಲ್ಲಿಸಿದ್ದಾರೆ. ಗ್ರೇಟರ್ ಬೆಂಗಳೂರು ಪ್ರದೇಶದಲ್ಲಿ ಸುಮಾರು 10 ಲಕ್ಷ ಎಣಿಕೆ ನಮೂನೆಗಳು ವಿತರಿಸಲಾಗಿದ್ದು, ನಿಗದಿತ ಅವಧಿಯಲ್ಲಿ ನಮೂನೆ ಹಿಂತಿರುಗಿಸಿದವರ ಹೆಸರು ಮಾತ್ರ ಅಂತಿಮ ಮತದಾರರ ಪಟ್ಟಿಯಲ್ಲಿ ಮುಂದುವರಿಯಲಿದೆ ಎಂದು ಅನ್ಬುಕುಮಾರ್ ತಿಳಿಸಿದ್ದಾರೆ.

ಫಾರಂ ಸಲ್ಲಿಸದಿದ್ದರೆ ಹೆಸರು ಕೈಬಿಡುವ ಸಾಧ್ಯತೆ ಇರುವುದರಿಂದ, ಮತದಾರರು ತಕ್ಷಣವೇ ಸಂಬಂಧಿಸಿದ ಬಿಎಲ್‌ಒ ಅಥವಾ ಆನ್‌ಲೈನ್ ಮೂಲಕ ಅಗತ್ಯ ವಿವರಗಳನ್ನು ಸಲ್ಲಿಸುವಂತೆ ಅವರು ಮನವಿ ಮಾಡಿದರು.

ಶೇ.100ರಷ್ಟು ಫಾರಂ ವಿತರಣೆ

ಹಾವೇರಿ, ಚಾಮರಾಜನಗರ, ಹಾಸನ, ಚಿಕ್ಕಬಳ್ಳಾಪುರ, ಶಿವಮೊಗ್ಗ, ಕೊಪ್ಪಳ, ವಿಜಯನಗರ, ಗದಗ, ಕೋಲಾರ, ಕೊಡಗು, ಧಾರವಾಡ, ಯಾದಗಿರಿ, ಬಳ್ಳಾರಿ, ಮೈಸೂರು, ಕಲಬುರಗಿ, ಬೆಂಗಳೂರು ಗ್ರಾಮಾಂತರ ಸೇರಿದಂತೆ ಗ್ರೇಟರ್ ಬೆಂಗಳೂರು ಉತ್ತರ, ಕೇಂದ್ರ ಹಾಗೂ ದಕ್ಷಿಣ ವಿಧಾನಸಭಾ ಕ್ಷೇತ್ರಗಳಲ್ಲಿ ಶೇ.100ರಷ್ಟು ಎಣಿಕೆ ನಮೂನೆಗಳ ವಿತರಣೆ ಪೂರ್ಣಗೊಂಡಿದೆ ಎಂದು ತಿಳಿಸಿದರು.

ಈ ಹಿನ್ನೆಲೆಯಲ್ಲಿ ನಡೆಯುತ್ತಿರುವ ಪ್ರಸ್ತುತ ಪರಿಷ್ಕರಣೆ ಪ್ರಕ್ರಿಯೆ, ಮುಂದಿನ ಚುನಾವಣೆಗಳ ಮತದಾರರ ಪಟ್ಟಿಯನ್ನು ಹೆಚ್ಚು ಪಾರದರ್ಶಕ ಹಾಗೂ ದೋಷರಹಿತವಾಗಿಸಲು ಕೈಗೊಳ್ಳಲಾಗಿರುವ ಮಹತ್ವದ ಕ್ರಮ ಎಂದು ಚುನಾವಣಾ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

12 ಲಕ್ಷ ಹೊಸ ಅರ್ಜಿ:

ಎಸ್ಐಆರ್ ಪ್ರಕ್ರಿಯೆ ನಡುವೆಯೂ ಮತದಾರರ ಪಟ್ಟಿಯಲ್ಲಿ ಹೊಸದಾಗಿ ಹೆಸರು ಸೇರ್ಪಡೆ, ವಿಳಾಸ ಬದಲಾವಣೆ, ತಿದ್ದುಪಡಿ ಮತ್ತಿತರರ 2026ರ ಜೂನ್ 16ರಿಂದ ಆಗಸ್ಟ್ 4ರವರೆಗೆ ಒಟ್ಟು12.20 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿವೆ. ಅರ್ಜಿ ನಮೂನೆ 6 ಅಗತ್ಯವಿದ್ದವರಿಗೆ ನೀಡುವಂತೆ ಬಿಎಲ್ಒಗಳಿಗೆ ಸೂಚನೆ ನೀಡಲಾಗುವುದು. ಆಗಸ್ಟ್ 16ರವೆಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿದವರ ಹೆಸರುಗಳು ಅಂತಿಮ ಮತದಾರರ ಪಟ್ಟಿಯಲ್ಲಿ ಸೇರಿಸಲಾಗುವುದು. 2026 ಅ.1ಕ್ಕೆ 18 ವರ್ಷ ತಲುಪುವ ಯುವ ಮತ್ತು ಹೊಸ ಮತದಾರರು ಸಹ ಆನ್ ಲೈನ್ ಮತ್ತು ಆಫ್ ಲೈನ್ ಮೂಲಕ ಅರ್ಜಿ ನಮೂನೆ 6 ಭರ್ತಿ ಮಾಡಿಕೊಡಬಹುದು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳು ಮಾಹಿತಿ ನೀಡಿದರು.

ಎಸ್‌ಐಆರ್‌ ಮಾಹಿತಿ

ಒಟ್ಟು ಗಣತಿ ನಮೂನೆ ಹಂಚಿಕೆ: 5,54,32,314

ಸ್ವೀಕೃತ ನಮೂನೆಗಳು: 4,43,04,632

ಎಎಸ್‌ಡಿಡಿಓ ಎಂದು ಗುರುತಿಸಲಾದ ಮತದಾರರು:1,11,04,705

ಶಾಶ್ವತವಾಗಿ ಸ್ಥಳಾಂತರಗೊಂಡವರು – 66,64,943

ಪತ್ತೆಯಾಗದವರು – 16,30,012

ಮೃತಪಟ್ಟವರು – 16,30,872

ಎರಡು ಕಡೆ ಹೆಸರು ಹೊಂದಿರುವವರು – 6,89,904

ಮಾಹಿತಿ ನೀಡಲು ನಿರಾಕರಿಸಿದವರು- 4,88,974

More articles

Latest article

Most read