ಜೆನ್ ಝೀ ಗಾಯಕ್ಕೆ ಭಾಗವತರ ಮುಲಾಮು

ಭಾಗವತರ ತುರ್ತು ಶಮನಕಾರಿ ಮಾತುಗಳಿಗೆ ವಿದ್ಯಾರ್ಥಿ ಯುವಜನರು ಹಾಗೂ ಅವರ ಪೋಷಕರುಗಳು ಮರುಳಾಗದೇ ಸಂವಿಧಾನದ ಸಮಾನತೆಯ ಆಶಯಗಳಿಗಾಗಿ ಹಾಗೂ ಜನರ ಹಕ್ಕುಗಳಿಗಾಗಿ ಧ್ವನಿ ಎತ್ತುತ್ತಲೇ ಇರಬೇಕಾಗಿದೆ. ಬಿಜೆಪಿಯ ಜನವಿರೋಧಿ ನೀತಿಗಳನ್ನು ವಿರೋಧಿಸಬೇಕಿದೆ. ಆರೆಸ್ಸೆಸ್ ಸಂಘದ ಮತೀಯ ಸಿದ್ಧಾಂತದ ವಿರುದ್ಧ ಪ್ರತಿಭಟಿಸುತ್ತಲೇ ಇರಬೇಕಿದೆ. ಆಗ ಮಾತ್ರ ಬಹುತ್ವ ಭಾರತವನ್ನು ಕಟ್ಟಬಹುದು, ಸಮಾನತೆ ಸಾರುವ ಸಂವಿಧಾನವನ್ನು ಉಳಿಸಿಕೊಳ್ಳಬಹುದು – ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.

ದ್ವೇಷವನ್ನು ಮೆದುಳಲ್ಲಿ ಬಿತ್ತಿ ಬೆಳೆದು ಪೋಷಿಸುತ್ತಲೇ ಬಂದ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಈಗ ಬೇರೆಯದೇ ರಾಗ ಹಾಡುತ್ತಿದ್ದಾರೆ. ಅವರದೇ ಪಕ್ಷ ಬಿಜೆಪಿಯ ಮೋದಿ ಶಾದ್ವಯರು ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನಾ ನಿರತ ವಿದ್ಯಾರ್ಥಿ ಯುವಜನರ ಮೇಲೆ ಪೊಲೀಸರ ಮೂಲಕ ಲಾಠಿ ಚಾರ್ಜ್ ಮಾಡಿ ರಕ್ತ ಹರಿಸಿದರು, ಅಶ್ರುವಾಯು ಸಿಡಿಸಿದರು, ಪ್ಯಾಲೆಟ್ ಗುಂಡು ಹಾರಿಸಿದರು. ಬಿಜೆಪಿ ಆರೆಸ್ಸೆಸ್ ಗೂಂಡಾಗಳು ದೌರ್ಜನ್ಯ ಎಸಗಿದರು.

ಆದರೆ ಈಗ ಮೋಹನ್ ಭಾಗವತರು “ಜೆನ್ ಝೀಗಳ ಆತಂಕಗಳು ನ್ಯಾಯಸಮ್ಮತವಾಗಿದ್ದವು. ಅವರ ಪ್ರಾಮಾಣಿಕತೆಯನ್ನು ತಾನು ನಂಬುತ್ತೇನೆ, ಪ್ರತಿಭಟನಾ ನಿರತ ಯುವಜನರನ್ನು ದೇಶವಿರೋಧಿಗಳು ಎಂದು ಕರೆಯಬಾರದು ಮತ್ತು ಅವರ ಸಮಸ್ಯೆಗಳು ನಿಜವಾದವುಗಳು” ಎಂದು ‘ಸಂಘಿ ಜೆನ್ ಝೀ’ ಸಮಾವೇಶ (ಶಿವಸೇನಾ (ಯುಬಿಟಿ) ಪಕ್ಷವು ವ್ಯಂಗ್ಯವಾಗಿ ಹೇಳಿರುವುದು )ದಲ್ಲಿ ಹೇಳುವ ಮೂಲಕ ಗಾಯಕ್ಕೆ ಮಾತಿನ ಮುಲಾಮು ಹಚ್ಚುವ ಪ್ರಯತ್ನ ಮಾಡಿದರು.

ಇಂತಹ ಹೇಳಿಕೆಯನ್ನು ಯುವಜನರ ಆಂದೋಲನದ ಸಮಯದಲ್ಲಿ ಕೊಟ್ಟಿದ್ದರೆ ಒಂಚೂರು ಸೂಕ್ತ ಎನ್ನಿಸುತ್ತಿತ್ತು. ಕೇಂದ್ರ ಸರಕಾರ ಪ್ರತಿಭಟನಾ ನಿರತರ ಮೇಲೆ ದೌರ್ಜನ್ಯವೆಸಗಿದಾಗ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಜೆನ್ ಝೀ ಗಳನ್ನು ವೈರಸ್ ಎಂದು ಕರೆದಾಗ, ಶಿಕ್ಷಣ ಸಚಿವರಾಗಿದ್ದ ಧರ್ಮೇಂದ್ರ ಪ್ರಧಾನ್ ಜೆನ್ ಝೀಗಳನ್ನು ಭಯೋತ್ಪಾದಕರ ಬಿ ಟೀಂ ಎಂದು ಆರೋಪಿಸಿದಾಗ, ಕಂಗನಾ ಎನ್ನುವ ಸಂಸದೆ  ಪ್ರತಿಭಟನೆಯಲ್ಲಿ ಪಾಲ್ಗೊಂಡ ಯುವತಿಯರ ಬಗ್ಗೆ ನಿಂದಿಸಿದಾಗ… ಈ ಬಿಜೆಪಿ ಗಾಡ್ ಫಾದರ್ ಭಾಗವತರು ಎಲ್ಲಿ ಭಜನೆ ಮಾಡುತ್ತಾ ಕೂತಿದ್ದರು?.

ಎಲ್ಲ ಮುಗಿದಾದ ಮೇಲೆ. ಯುವಕರ ಆಂದೋಲನಕ್ಕೆ ಮೋದಿ ಸರಕಾರವೇ ಮಂಡಿಯೂರಿದ ಮೇಲೆ, ಪ್ರತಿಭಟನಕಾರರ ಎಲ್ಲ ಬೇಡಿಕೆಗಳನ್ನೂ ಈಡೇರಿಸಲಾಗುವುದು ಎಂದು ಲಿಖಿತವಾಗಿ ಬರೆದುಕೊಟ್ಟಾದ ಮೇಲೆ.. ಈಗ ಭಾಗವತರ ಬಾಯಿಂದ ಜೆನ್ ಝೀ ಪರವಾದ  ಹೇಳಿಕೆ ಹೊರಬಿದ್ದಿದ್ದು ಅರೆಸ್ಸೆಸ್ ಬಗ್ಗೆ ಜೆನ್ ಝೀ ಯುವಕರಲ್ಲಿರುವ ಆಕ್ರೋಶವನ್ನು ಕಡಿಮೆ ಮಾಡುವ ತಂತ್ರಗಾರಿಕೆಯಾಗಿದೆ.

ಮೋಹನ್‌ ಭಾಗವತ್

ಯಾಕೆಂದರೆ ಪ್ರತಿಭಟನಾಕಾರರ ಮೇಲೆ ಪೊಲೀಸರ ಜೊತೆ ಸೇರಿ ಅಮಾನುಷವಾಗಿ ಲಾಠಿ ಚಾರ್ಜ್ ಮಾಡಿದವರಲ್ಲಿ ಆರೆಸ್ಸೆಸ್ ಗೂಂಡಾಗಳು ಇರುವುದು ಗೊತ್ತಾಗಿದೆ. ವಿದ್ಯಾರ್ಥಿ ನಾಯಕಿ ನೇಹಾ ಬೋರಾ ರವರ ಮೇಲೆ ಮಸಿ ಎರಚಿದಾತ ಆರೆಸ್ಸೆಸ್ ಸದಸ್ಯ ಎಂಬುದೂ ತಿಳಿದು ಬಂದಿದೆ. ವಿದ್ಯಾರ್ಥಿ ಚಳುವಳಿಯನ್ನು ಹತ್ತಿಕ್ಕುವಲ್ಲಿ ಬಿಜೆಪಿ ಜೊತೆ ಆರೆಸ್ಸೆಸ್ ಕೂಡಾ ಭಾಗಿಯಾಗಿದೆ ಎಂಬುದು ಜಗಜ್ಜಾಹೀರಾಗಿದೆ.

ಇದರಿಂದಾಗಿ ದೇಶದ ಯುವಜನರು ಕೆರಳಿದ್ದಾರೆ. ಮೋದಿ ಶಾ ವಿರುದ್ಧ ತಿರುಗಿ ಬಿದ್ದಿದ್ದಾರೆ. ಬಿಜೆಪಿ ಆರೆಸ್ಸೆಸ್ ವಿರುದ್ಧ ಘೋಷಣೆ ಕೂಗುತ್ತಿದ್ದಾರೆ. ಇದು ಹೀಗೆಯೇ ಮುಂದುವರೆದರೆ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಸರಕಾರ ಅಸ್ತಿತ್ವ ಕಳೆದುಕೊಳ್ಳಲಿದೆ ಹಾಗೂ ಆರೆಸ್ಸೆಸ್ ಸಂಘಟನೆ ಖಳನಾಯಕ ಸ್ಥಾನದಲ್ಲಿ ನಿಲ್ಲಲಿದೆ ಎನ್ನುವ ಸತ್ಯ ಗೊತ್ತಾದ ತಕ್ಷಣ ಸಂಘ ಆತಂಕದಿಂದ ಎಚ್ಚರಗೊಂಡಿದೆ. ಆರೆಸ್ಸೆಸ್ ಅಧಿನಾಯಕ ಮೋಹನ್ ಭಾಗವತರ ಬಾಯಲ್ಲಿ ಜೆನ್ ಝೀ ಹೋರಾಟದ ಬಗ್ಗೆ ಸಕಾರಾತ್ಮಕ ಮಾತುಗಳನ್ನಾಡಿಸಿ ಯುವಜನರ ಕೋಪ ಶಮನ ಮಾಡುವ ತಂತ್ರಗಾರಿಕೆಯನ್ನು ಮಾಡಲಾಗಿದೆ. ಇಷ್ಟೇ ಅಲ್ಲ “ಧರ್ಮಗಳ ನಡುವೆ ದ್ವೇಷ ಬಿತ್ತುವ RSS ಮುಖ್ಯಸ್ಥ ಮೋಹನ್ ಭಾಗವತ್‌ ಗೆ ಪ್ರವೇಶ ನಿರಾಕರಿಸಿ” ಎಂದು 40ಕ್ಕೂ ಅಧಿಕ ಸಂಘಟನೆಗಳಿಂದ ಕೆನಡಾ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಇದೂ ಸಹ ಭಾಗವತರ ತಾತ್ಕಾಲಿಕ ಬದಲಾವಣೆಗೆ ಕಾರಣ ಎನ್ನಲಾಗಿದೆ.

ಭಾಗವತರ ಬಾಯಿ ಶಂಖದಿಂದ ತೀರ್ಥ ಬಂದಿದ್ದೇ ತಡ ಜೆನ್ ಝೀ ಗಳನ್ನು ‘ಗಟಾರ್ ಜನರೇಶನ್’ ಎಂದು ಮೂದಲಿಸಿ ತಮ್ಮ ಚರಿತ್ರೆ ಬಯಲು ಮಾಡಿಕೊಂಡಿದ್ದ ಕಂಗನಾ ರಣಾವತ್ ಎನ್ನುವ ಮಾಜಿ ನಟಿ ಹಾಲಿ ಸಂಸದೆ ಸಹ ಇದ್ದಕ್ಕಿದ್ದಂತೆ ಊಸರವಳ್ಳಿಯಂತೆ ಬಣ್ಣ ಬದಲಾಯಿಸಿ “ಜೆನ್ ಝೀ ಗಳು ದೇಶದ ಸಂಪತ್ತು” ಎಂದು ಯೂಟರ್ನ್ ತೆಗೆದುಕೊಂಡಿದ್ದು ಈಗ ಚರ್ಚೆಗೆ ಗ್ರಾಸವಾಗಿದೆ.

ಆದರೆ.. ಮೋಹನ್ ಭಾಗವತರಂತವರು ಏನೇ ಹೇಳಲಿ ಆರೆಸ್ಸೆಸ್ ಎಂಬ ಸನಾತನ ಸಂಘಟನೆ ಹಿಂದುತ್ವದ ಹೆಸರಲ್ಲಿ ಕಳೆದ ನೂರು ವರ್ಷಗಳಲ್ಲಿ ಮತಾಂಧತೆಯ ದ್ವೇಷವನ್ನು ತನ್ನ ಶಾಖೆಗಳ ಮೂಲಕ ಬಿತ್ತುತ್ತಲೇ ಬಂದಿದೆ. ಹಾಗೆ ಬಿತ್ತಿದ ದ್ವೇಷದ ಬೀಜ ಈಗ ಅನೇಕ ಸಂಘಿಗಳ ಮೆದುಳಲ್ಲಿ ಆಳವಾಗಿ ಬೇರುಬಿಟ್ಟಿದೆ. ಈಗಲೂ  ಬಿಜೆಪಿ ಐಟಿ ಸೆಲ್‌ಗಳು, ಸಂಘಿ ಸಮರ್ಥಕ ಟ್ರೋಲರ್ ಗಳು ದಿನನಿತ್ಯ  ಪ್ರಶ್ನಿಸುವವರ ಮೇಲೆ ನಿರಂತರವಾಗಿ ದ್ವೇಷ ಕಾರುತ್ತಲೇ ಇದ್ದಾರೆ.  ಬಿಜೆಪಿಯ ಜನವಿರೋಧಿತನದ ವಿರುದ್ಧ ಧ್ವನಿ ಎತ್ತಿದ ಮಹಿಳೆಯರ ತೇಜೋವಧೆ ಮಾಡುತ್ತಾ ವಿಕೃತಾನಂದ ಅನುಭವಿಸುತ್ತಿದ್ದಾರೆ.

ಈಗ ಸಂಘದ ಸುಪ್ರೀಂ ಭಾಗವತರಂತವರು ಏನೇ ಹೇಳಿದರೂ ಕೇಳುವ ಪರಿಸ್ಥಿತಿಯಲ್ಲಿ ಯಾವ ಸಂಘಿಗಳೂ ಇಲ್ಲ. ಸ್ವತಃ ಆ ಶ್ರೀರಾಮ ದೇವರೇ ಬಂದು ಅಹಿಂಸೆಯ ಪ್ರವಚನ ಮಾಡಿದರೂ ಧಿಕ್ಕರಿಸಿ ಹಿಂಸೆಗಿಳಿಯುವ  ತಲೆಮಾರನ್ನು ಈ ಆರೆಸ್ಸೆಸ್ ಮತ್ತು ಬಿಜೆಪಿ ಸೃಷ್ಟಿಸಿಯಾಗಿದೆ. ಗಾಂಧಿಯವರ ಅಹಿಂಸಾವಾದಿ ಹೇರಾಮ್ ಬದಲಾಗಿ ಹಿಂಸಾವಾದಿ ಜೈಶ್ರೀರಾಂನನ್ನು ಸಂಘಿಗಳ ತಲೆಯಲ್ಲಿ ತುಂಬಿದ್ದರ ದುಷ್ಪರಿಣಾಮವನ್ನು ಆರೆಸ್ಸೆಸ್ ಹಾಗೂ ಬಿಜೆಪಿ ಮುಂಬರುವ ದಿನಗಳಲ್ಲಿ ಎದುರಿಸಬೇಕಿದೆ.

ಏನೇ ಇರಲಿ ಸಿಂಹವೋ ಹುಲಿಯೋ ಎರಡು ಹೆಜ್ಜೆ ಹಿಂದಿಟ್ಟಿದೆ ಎಂದರೆ ಮುಂದೆ ಜಿಗಿದು ಬಲಿ ಹಾಕುವುದು ನಿಶ್ಚಿತ. ಸನಾತನ ಹಿಂದೂ ರಾಷ್ಟ್ರ ನಿರ್ಮಾಣದ ಗುರಿ ತಲುಪಲು ಶತಮಾನದಿಂದ ಪ್ರಯತ್ನಿಸುತ್ತಿರುವ ಆರೆಸ್ಸೆಸ್ ಗೆ ಈ ಯುವ ತಲೆಮಾರಿನ ಸಿಟ್ಟು ತಡೆಯಾಗುತ್ತದೊ ಎಂಬ ಆತಂಕದಲ್ಲಿ ಭಾಗವತರು ತಮ್ಮ ಸಿದ್ಧಾಂತದಲ್ಲಿ ಎರಡು ಹೆಜ್ಜೆ ಹಿಂದಡಿ ಇಟ್ಟಿದ್ದಾರೆ. ಜೆನ್ ಝೀ ಗಳ ಆತಂಕ ನ್ಯಾಯಸಮ್ಮತ ಎಂದು ಹೇಳುತ್ತಿದ್ದಾರೆ. ವಿದ್ಯಾರ್ಥಿ ಯುವಜನರ ಅಸಮಾಧಾನ ಕೊನೆಯಾದ ಮೇಲೆ ಮತ್ತೆ ಮೀಸಲಾತಿಯನ್ನೋ, ಕಾಶಿ ಮಥುರಾ ಸಮಸ್ಯೆಯನ್ನೋ ಉಲ್ಬಣಗೊಳಿಸಿಯೋ ಇಲ್ಲವೇ ದೇಶರಕ್ಷಣೆ ಹಾಗೂ ಹಿಂದೂಧರ್ಮ ರಕ್ಷಣೆಯ ಹೆಸರಲ್ಲಿ ಯುವಜನರ ಭಾವನೆಗಳನ್ನು ಪ್ರಚೋದಿಸುವ ಕೆಲಸವನ್ನೂ ತಮ್ಮ ಸಹಸ್ರಾರು ಅಂಗ ಸಂಸ್ಥೆಗಳ ಮೂಲಕ ಮಾಡಿಸುತ್ತಾರೆ.

ಹೀಗಾಗಿ ಭಾಗವತರ ತುರ್ತು ಶಮನಕಾರಿ ಮಾತುಗಳಿಗೆ ವಿದ್ಯಾರ್ಥಿ ಯುವಜನರು ಹಾಗೂ ಅವರ ಪೋಷಕರುಗಳು ಮರುಳಾಗದೇ ಸಂವಿಧಾನದ ಸಮಾನತೆಯ ಆಶಯಗಳಿಗಾಗಿ ಹಾಗೂ ಜನರ ಹಕ್ಕುಗಳಿಗಾಗಿ ಧ್ವನಿ ಎತ್ತುತ್ತಲೇ ಇರಬೇಕಾಗಿದೆ. ಬಿಜೆಪಿಯ ಜನವಿರೋಧಿ ನೀತಿಗಳನ್ನು ವಿರೋಧಿಸಬೇಕಿದೆ. ಆರೆಸ್ಸೆಸ್ ಸಂಘದ ಮತೀಯ ಸಿದ್ಧಾಂತದ ವಿರುದ್ಧ ಪ್ರತಿಭಟಿಸುತ್ತಲೇ ಇರಬೇಕಿದೆ. ಆಗ ಮಾತ್ರ ಬಹುತ್ವ ಭಾರತವನ್ನು ಕಟ್ಟಬಹುದು, ಸಮಾನತೆ ಸಾರುವ ಸಂವಿಧಾನವನ್ನು ಉಳಿಸಿಕೊಳ್ಳಬಹುದು.

ಶಶಿಕಾಂತ ಯಡಹಳ್ಳಿ

ರಾಜಕೀಯ ವಿಶ್ಲೇಷಕರು

More articles

Latest article

Most read