ಮಸಿ ಎರಚಿ ಮನೋಸ್ಥೈರ್ಯ ಕುಗ್ಗಿಸಲಾಗದು

ಮಹಿಳೆಯರು ತಮ್ಮ ಈಗಿನ ಹಾಗೂ ಮುಂದಿನ ತಲೆಮಾರಿನ ಸ್ತ್ರೀಯರ ಆತ್ಮಸನ್ಮಾನ, ಸಮಾನತೆ ಹಾಗೂ ಸ್ವಾತಂತ್ರ್ಯಕ್ಕಾಗಿ ಸಂಘಿ ಮನಸ್ಥಿತಿಯ ವಿರುದ್ಧ ಹೋರಾಡಲೇ ಬೇಕಿದೆ. ಪುರುಷ ಶ್ರೇಷ್ಠತೆಯ ವ್ಯಸನ ಪೀಡಿತರ ದಮನದ ವಿರುದ್ಧ ಸಿಡಿದೇಳಲೇಬೇಕಿದೆ. ಪ್ರತಿ ಮನೆಯಲ್ಲೂ ನೇಹಾ ಬೋರಾಳಂತಹ ಧೈರ್ಯಸ್ಥ ಯುವತಿಯರು ಹೋರಾಟದ ಹಾದಿಯಲ್ಲಿ ಮುನ್ನಡೆಯಬೇಕಿದೆ – ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.

“ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಾಃ” ಎಂದು ಸನಾತನಿಗಳ ಪೂಜನೀಯ ಗ್ರಂಥ ಮನುಸ್ಮೃತಿಯಲ್ಲಿ ಹೇಳಲಾಗಿದೆ. ಆದರೆ ಈ ಸನಾತನಿ ಸಂಘಿಗಳು ಮಹಿಳೆಯರಿಗೆ ಅಪಮಾನ ಮಾಡುವುದನ್ನೇ ಧರ್ಮ ಎಂದುಕೊಂಡಿದ್ದಾರೆ. ಅದೇ ಮನುಸ್ಮೃತಿಯಲ್ಲಿ ಹೇಳಲಾದ “ನ ಸ್ತ್ರೀ ಸ್ವಾತಂತ್ರ್ಯಂ ಅರ್ಹತಿ” ಎನ್ನುವ ವಾಕ್ಯವನ್ನು ಶಿರಸಾವಹಿಸಿ ಮನಸಾ ಪಾಲಿಸುತ್ತಾರೆ.

ಅದಕ್ಕೆ ಇತ್ತೀಚಿನ ಲೇಟೆಸ್ಟ್ ಉದಾಹರಣೆ ಎಂದರೆ ಹೋರಾಟಗಾರ್ತಿ ವಿದ್ಯಾರ್ಥಿ ನಾಯಕಿ ನೇಹಾ ಬೋರಾ ಮತ್ತು ಇತರ ಮಹಿಳೆಯರ ಮೇಲೆ ಈ ಸಂಘಿಗಳು ಎರಚಿದ ಮಸಿ. ನೇಹಾ ಬೋರಾ ಎಂಬ ಯುವತಿ ಜಂತರ್ ಮಂತರಿನಲ್ಲಿ ನಡೆದ ಜೆನ್ ಝೀ ಹೋರಾಟದಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದ ಪ್ರಮುಖ ಯುವ ನಾಯಕಿ. ಆಲ್ ಇಂಡಿಯಾ ಸ್ಟೂಡೆಂಟ್ ಅಸೋಸಿಯೇಶನ್ (AISA) ಅಧ್ಯಕ್ಷೆಯಾಗಿರುವ ನೇಹಾ ವಿದ್ಯಾರ್ಥಿ ಯುವಜನರನ್ನು ಬೆಂಬಲಿಸಿ 23 ದಿನಗಳ ಕಾಲ ಉಪವಾಸ ಸತ್ಯಾಗ್ರಹ ಮಾಡಿದ ಧೀಮಂತೆ. ಜಂತರ್ ಮಂತರಿನಲ್ಲಿ ಯಶಸ್ವಿ ಹೋರಾಟ ಮಾಡಿ ಶಿಕ್ಷಣ ಸಚಿವರ ರಾಜೀನಾಮೆ ಪಡೆದ ನಂತರ ವಿಶ್ರಮಿಸದೆ ನೇಹಾ ಬೋರಾ ಜಾರ್ಖಂಡಿನ ರಾಂಚಿಯಲ್ಲಿ ನಡೆಯುತ್ತಿರುವ ನೇಮಕಾತಿ ಪರೀಕ್ಷಾ ಅಕ್ರಮದ ವಿರುದ್ಧ ಪ್ರತಿಭಟಿಸುತ್ತಿರುವ ವಿದ್ಯಾರ್ಥಿ ಚಳುವಳಿಯ ವಿಧಾನಸಭಾ ಚಲೋ ಮೆರವಣಿಗೆಯಲ್ಲಿ ಮುಂಚೂಣಿಯಲ್ಲಿದ್ದರು.‌

ನೇಹಾ ಬೋರಾ

ಜೆನ್ ಝೀ ಹೋರಾಟದ ಯಶಸ್ಸಿನಿಂದಾಗಿ ತೀವ್ರ ಹತಾಶೆಗೆ ಬಿದ್ದ ಅಮರನಾಥ ಪಾಂಡೆ ಎಂಬ ಕೋಮು ಕ್ರಿಮಿಯೊಬ್ಬ ಮೆರವಣಿಗೆಯಲ್ಲಿ ಘೋಷಣೆ ಕೂಗುತ್ತಾ ಸಾಗಿದ್ದ ನೇಹಾರವರ ಮೇಲೆ ಮಸಿ ಎರಚಿ ತನ್ನ ಹೇಡಿತನ ಪ್ರದರ್ಶಿಸಿದ್ದಾನೆ. ಆತ ಮಸಿ ಎರಚುವಾಗ ಹೇಳಿದ್ದು ಜೈಶ್ರೀರಾಂ ಎಂದು. ದೇವರ ಹೆಸರನ್ನು ದುಷ್ಕೃತ್ಯಕ್ಕೆ ಬಳಕೆ ಮಾಡುವುದೂ ಸಹ ಸನಾತನ ಸಂಘಿ ಸಿದ್ಧಾಂತದ ಟೂಲ್ ಆಗಿದೆ.

ಈ ಮನುವಾದಿ ಪ್ರಣೀತ ಸಂಘಿಗಳಿಗೆ ಮಹಿಳೆಯರ ಮೇಲಿರುವ ಅಗೌರವ ಭಾವನೆ ಕಾಲಕಾಲಕ್ಕೆ ಅನಾವರಣಗೊಳ್ಳುತ್ತಲೇ ಬಂದಿದೆ. ಜೆನ್ ಝೀ ಹೋರಾಟದಲ್ಲಿ ಪ್ರಧಾನಿಗಳನ್ನು ನಿಂದಿಸಿದರು ಎಂದು 15 ವರ್ಷದ ಬಾಲಕಿಯ ಮೇಲೆ ಅಶ್ಲೀಲ ನಿಂದನಾಸ್ತ್ರವನ್ನು ಸಂಘಿಗಳು ಪ್ರಯೋಗಿಸಿದ್ದರು. ವಿದ್ಯಾರ್ಥಿ ಯುವಜನರ ಚಳುವಳಿಯಲ್ಲಿ ಭಾಗವಹಿಸಿದ್ದ ಹೆಣ್ಣುಮಕ್ಕಳ ಶೀಲವನ್ನೇ ಶಂಕಿಸಿ ಕೆಟ್ಟದಾಗಿ ಕಮೆಂಟ್ ಮಾಡಿದ್ದರು. ಕಂಗನಾ ರಣಾವತ್ ಎನ್ನುವ ಸಂಸದೆ ತಾನೂ ಒಬ್ಬ ಹೆಣ್ಣು ಎನ್ನುವುದನ್ನು ಮರೆತು ಜಂತರ್ ಮಂತರ್ ಪ್ರತಿಭಟನೆಯಲ್ಲಿ ಭಾಗವಹಿಸಿದ ಯುವತಿಯರನ್ನು ಕೆಟ್ಟದಾಗಿ ನಿಂದಿಸಿದ್ದರು. ಹೀಗೆ ಈ ಸನಾತನ ಮನಸ್ಥಿತಿಯ ಮತಿಗೆಟ್ಟವರು ಮೊದಲು ಟಾರ್ಗೆಟ್ ಮಾಡುವುದೇ ಮಹಿಳೆಯರನ್ನು. ನಿಂದಿಸಿ, ಮಾನಹಾನಿ ಮಾಡಿ, ಅಶ್ಲೀಲವಾಗಿ ಹೀಯಾಳಿಸಿ ಮಹಿಳೆಯರ ತೇಜೋವಧೆ ಮಾಡುವ ಮೂಲಕ ಅವರ ಮನೋಸ್ಥೈರ್ಯವನ್ನು ಕುಂದಿಸುವ ನೀಚತನವನ್ನು ಸಂಘಿ ಟ್ರೋಲಿಗರು ನಿರಂತರವಾಗಿ ಮಾಡುತ್ತಲೇ ಬಂದಿದ್ದಾರೆ.

ಅದರ ಭಾಗವಾಗಿಯೇ ಈಗ ಹೋರಾಟ ನಿರತ ನೇಹಾ ಬೋರಾ ಹಾಗೂ ಇತರ ಮಹಿಳೆಯರ ಮೇಲೆ ಶಾಯಿ ದಾಳಿ ಮಾಡಲಾಗಿದೆ. “ಶಾಯಿ ಎರಚಿದ ಘಟನೆಯು ನಾಟಕೀಯವೆನಿಸುತ್ತಿದೆ” ಎಂದು ಈ ನೀಚ ಕೃತ್ಯವನ್ನು ಬಿಜೆಪಿ ಸಮರ್ಥಿಸಿಕೊಂಡಿದೆ.

“ನನ್ನ ಮತ್ತು ನನ್ನಂತೆಯೇ ಇನ್ನೂ ಇಪ್ಪತ್ತು ಹೆಣ್ಣುಮಕ್ಕಳ ಮುಖಕ್ಕೆ ಮಸಿ ಎರಚಿ ಅವಮಾನ ಮಾಡಲು ಪ್ರಯತ್ನಿಸಿರುವ ಆರ್‌ಎಸ್‌ಎಸ್‌ ಮತ್ತು ಬಿಜೆಪಿ ಗೂಂಡಾಗಳಿಗೆ, ಮಸಿ ಎನ್ನುವುದು ಅವಮಾನಿಸಲು ಬೇಕಾದ ಸಾಧನವಾಗಿರಬಹುದು. ಆದರೆ, ನಮಗೆ ಅದೇ ಮಸಿಯಿಂದ ಭವಿಷ್ಯವನ್ನು ಬರೆಯುವ ಶಕ್ತಿ ಇದೆ” ಎಂದು ವಿದ್ಯಾರ್ಥಿ ನಾಯಕಿ ನೇಹಾ ಬೋರಾ ದಿಟ್ಟವಾಗಿ ಸಂಘಿಗಳಿಗೆ ಉತ್ತರಿಸಿದ್ದಾರೆ.

ಹೀಗೆಲ್ಲಾ ಅಶ್ಲೀಲವಾಗಿ ನಿಂದಿಸುವ ಮೂಲಕ, ಪ್ರತಿಭಟನಾ ನಿರತ ಹೆಣ್ಣುಮಕ್ಕಳಿಗೆ ರೇಟ್ ಫಿಕ್ಸ್ ಮಾಡುವ ಮೂಲಕ, ಕೆಟ್ಟ ಕಮೆಂಟ್  ಹಾಕಿ ಅಪಮಾನ ಮಾಡುವ ಮೂಲಕ, ಮಸಿ ಎರಚುವ ಮೂಲಕ ಮಹಿಳೆಯರನ್ನು ಹೋರಾಟದ ಹಾದಿಯಿಂದ ಹಿಂದೆ ಸರಿಯುವಂತೆ ಮಾಡಬಹುದು ಎಂಬ ಭ್ರಮೆಯಲ್ಲಿ ಸಂಘಿಗಳು ಇವೆ. ತಾರ್ಕಿಕವಾಗಿ ಎದುರಿಸುವ ಧೈರ್ಯ ಇಲ್ಲದ ಈ ಮುಖೇಡಿಗಳು ತೇಜೋವಧೆ ಮಾಡುವುದನ್ನೇ ಅಸ್ತ್ರ ಮಾಡಿಕೊಂಡಿದ್ದಾರೆ. ಆದರೆ ಹೀಗೆ ದಮನ ಮಾಡಿದಷ್ಟೂ ಪ್ರತಿಭಟನೆ ತೀವ್ರವಾಗುತ್ತಾ ಸಾಗುತ್ತದೆ. ನೇಹಾ ಬೋರಾನಂತಹ ಅನೇಕ ಯುವತಿಯರು ಇನ್ನಷ್ಟು ಗಟ್ಟಿಯಾಗಿ ನಿಂತು ದಿಟ್ಟವಾಗಿ ಉತ್ತರಿಸುತ್ತಾರೆ.

ನೇಹಾ ಬೋರಾ

ಮಾತೆತ್ತಿದರೆ ಈ ಸಂಘಿಗಳು ಹಿಂದೂ ಸಂಸ್ಕೃತಿ ಎಂದು ಬೊಬ್ಬೆ ಹಾಕುತ್ತಾ ಇರುತ್ತಾರೆ. ಇದೇನಾ ಹಿಂದೂ ಸಂಸ್ಕೃತಿ? ಮಹಿಳೆಯರನ್ನು ಅಪಮಾನಿಸುವುದು, ಹೀನಾಯವಾಗಿ ನಿಂದಿಸುವುದೇ ಹಿಂದೂ ಸಂಸ್ಕೃತಿ ಎನ್ನುವುದಾದರೆ ಅಂತಹ ಹೀನ ಸಂಸ್ಕೃತಿ ಬೇಕಾಗಿಲ್ಲ. ಅನ್ಯಾಯದ ವಿರುದ್ಧ ಪ್ರತಿಭಟಿಸುವುದು ಪ್ರತಿಯೊಬ್ಬ ಮಹಿಳೆಯರ ಸಾಂವಿಧಾನಿಕ ಹಕ್ಕು. ಆದರೆ ಮಹಿಳೆಯರಿಗೆ ಸ್ವಾತಂತ್ರ್ಯವೇ ಇರಬಾರದು ಎನ್ನುವ ಮನುಸ್ಮೃತಿ ಆರಾಧಕರಿಗೆ ಇದು ಅಪಥ್ಯ. ಈ ಹಿಂದುತ್ವವಾದಿ ತಾಲಿಬಾನಿಗಳ ಕೈಗೆ ಈ ದೇಶ ಆಳುವ ಸರ್ವಾಧಿಕಾರ ಏನಾದರೂ ಸಿಕ್ಕರೆ ಹಿಂದೂ ತಾಲಿಬಾನ್ ಆಡಳಿತ ಬರುವುದರಲ್ಲಿ ಸಂದೇಹವೇ ಇಲ್ಲ. ಈ ಮನುವಾದಿಗಳ ಹಿಂದೂ ರಾಷ್ಟ್ರ ಸ್ಥಾಪನೆಯ ಕಲ್ಪನೆಯ ಹಿಂದೆ ಇರುವುದೂ ಸಹ ಮಹಿಳಾ ಸ್ವಾತಂತ್ರ್ಯ ಹರಣದ ಶಡ್ಯಂತ್ರಗಳೇ.

ಹೀಗಾಗಿ ಮಹಿಳೆಯರು ತಮ್ಮ ಈಗಿನ ಹಾಗೂ ಮುಂದಿನ ತಲೆಮಾರಿನ ಸ್ತ್ರೀಯರ ಆತ್ಮಸನ್ಮಾನ, ಸಮಾನತೆ ಹಾಗೂ ಸ್ವಾತಂತ್ರ್ಯಕ್ಕಾಗಿ ಈ ಸಂಘಿ ಮನಸ್ಥಿತಿಯ ವಿರುದ್ಧ ಹೋರಾಡಲೇ ಬೇಕಿದೆ. ಪುರುಷ ಶ್ರೇಷ್ಠತೆಯ ವ್ಯಸನ ಪೀಡಿತರ ದಮನದ ವಿರುದ್ಧ ಸಿಡಿದೇಳಲೇಬೇಕಿದೆ. ಪ್ರತಿ ಮನೆಯಲ್ಲೂ ನೇಹಾ ಬೋರಾಳಂತಹ ಧೈರ್ಯಸ್ಥ ಯುವತಿಯರು ಹೋರಾಟದ ಹಾದಿಯಲ್ಲಿ ಮುನ್ನಡೆಯಬೇಕಿದೆ.

ಶಶಿಕಾಂತ ಯಡಹಳ್ಳಿ

ರಾಜಕೀಯ ವಿಶ್ಲೇಷಕ

ಇದನ್ನೂ ಓದಿ- ಮೀಮ್‌ಗಳೇ ಮುಳುವಾದಾಗ: ಚರಿತ್ರೆಯ ಪಾಠಗಳು ಏನು ಹೇಳುತ್ತವೆ?

More articles

Latest article

Most read