ಕರ್ನಾಟಕದ ಸಮಾಜವಾದೀ ಚಳುವಳಿಯ ಕೊನೆಯ ನಾಯಕ ಶ್ರೀ ಸಿದ್ದರಾಮಯ್ಯ

ಶ್ರೀ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಪದವಿಗೆ ರಾಜೀನಾಮೆ ಕೊಟ್ಟು ಶ್ರೀ ಡಿ ಕೆ ಶಿವಕುಮಾರ್‌ ಅವರಿಗೆ ಅಧಿಕಾರ ಬಿಟ್ಟುಕೊಟ್ಟದ್ದನ್ನು ಕೇವಲ ಅಧಿಕಾರ ಹಸ್ತಾಂತರ ಪ್ರಕ್ರಿಯೆಯಾಗಿ ನೋಡಬಾರದು. ಅದು ಕಳೆದ 50 ವರ್ಷಗಳ ಕರ್ನಾಟಕದ ರಾಜಕಾರಣವು ತನ್ನ ಸಮಾಜವಾದೀ ಸಿದ್ಧಾಂತವನ್ನು ಬಿಟ್ಟುಕೊಟ್ಟು ಬಂಡವಾಳಶಾಹೀ ರಾಜಕಾರಣದತ್ತ ತಿರುಗಿಕೊಂಡದ್ದರ ಸಂಕೇತ. ದೆಹಲಿಯಲ್ಲಿ ಅದು ನರೇಂದ್ರ ಮೋದಿಯವರು ಪ್ರಧಾನ ಮಂತ್ರಿ ಆದಲ್ಲಿಂದ (2014) ಸುರು ಆದರೆ, ಕರ್ನಾಟಕದಲ್ಲಿ ಅದು  ಸ್ವಲ್ಪ ನಿಧಾನವಾಗಿ 2026ರಿಂದ  ಆರಂಭವಾಯಿತು – ಡಾ. ಪುರುಷೋತ್ತಮ ಬಿಳಿಮಲೆ, ಅಧ್ಯಕ್ಷರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಸರಕಾರ.

ಶ್ರೀ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಪದವಿಗೆ ರಾಜೀನಾಮೆ ಕೊಟ್ಟು ಶ್ರೀ ಡಿ ಕೆ ಶಿವಕುಮಾರ್‌ ಅವರಿಗೆ ಅಧಿಕಾರ ಬಿಟ್ಟುಕೊಟ್ಟದ್ದನ್ನು ಕೇವಲ ಅಧಿಕಾರ ಹಸ್ತಾಂತರ ಪ್ರಕ್ರಿಯೆಯಾಗಿ ನೋಡಬಾರದು. ಅದು ಕಳೆದ 50 ವರ್ಷಗಳ ಕರ್ನಾಟಕದ ರಾಜಕಾರಣವು ತನ್ನ ಸಮಾಜವಾದೀ ಸಿದ್ಧಾಂತವನ್ನು ಬಿಟ್ಟುಕೊಟ್ಟು ಬಂಡವಾಳಶಾಹೀ ರಾಜಕಾರಣದತ್ತ ತಿರುಗಿಕೊಂಡದ್ದರ ಸಂಕೇತ. ದೆಹಲಿಯಲ್ಲಿ ಅದು ನರೇಂದ್ರ ಮೋದಿಯವರು ಪ್ರಧಾನ ಮಂತ್ರಿ ಆದಲ್ಲಿಂದ ( 2014) ಸುರು ಆದರೆ, ಕರ್ನಾಟಕದಲ್ಲಿ ಅದು  ಸ್ವಲ್ಪ ನಿಧಾನವಾಗಿ 2026ರಿಂದ  ಆರಂಭವಾಯಿತು. ವಿಶ್ವದ ಎಲ್ಲ ಕಡೆಗಳ ಬಹುರಾಷ್ಟ್ರೀಯ ಕಂಪೆನಿಗಳು ಕರ್ನಾಟಕದಲ್ಲಿ ಬಂಡವಾಳ ಹೂಡುತಿದ್ದು ಲಾಭವನ್ನೇ ಸಿದ್ಧಾಂತ ಮಾಡಿಕೊಂಡು ಕ್ರಿಯಾಶೀಲವಾಗಿರುವಾಗ ಅದರ ವಿರುದ್ಧ ಸಮಾಜವಾದವನ್ನು ನಿಲ್ಲಿಸುವುದು ಸುಲಭವಲ್ಲ. ಈ ಹಂತದಲ್ಲಿ ಸಾಮಾಜಿಕ ನ್ಯಾಯ ಎಂಬ ಪದವೇ ಅಪ್ರಸ್ತುತವಾಗುತ್ತದೆ. ಭಾರತದಲ್ಲಿ ಈ ಬೆಳವಣಿಗೆಗಳ ಜೊತೆಗೆ ಧಾರ್ಮಿಕ ಮುಖವಾಡ ಹೊತ್ತ ಹಿಂದುತ್ವವೂ ಸೇರಿಕೊಂಡು ಪರಿಸ್ಥಿತಿಯನ್ನು ಇನ್ನಷ್ಟು ಜಟಿಲಗೊಳಿಸಿದೆ.  ಇಂಥ ಕ್ಲಿಷ್ಟಕರ ಸಂದರ್ಭದಲ್ಲಿ ಕೆಲಸ ಮಾಡಿದ ಶ್ರೀ ಸಿದ್ದರಾಮಯ್ಯನವರು ಕಳೆದ ಸುಮಾರು 45 ವರ್ಷಗಳಿಂದ ಈ ಬಗೆಯ ಅಂತಾರಾಷ್ಟ್ರೀಯ ಬೆಳವಣಿಗೆಗಳ ವಿರುದ್ಧ ಧ್ವನಿ ಎತ್ತುತ್ತಲೇ ಇದ್ದರು. ಅಹಿಂದದ ಮೂಲಕ ಜನ ಸಂಘಟನೆ ಮಾಡಿದರು. ಕಾಂಗ್ರೆಸ್‌ ಪಕ್ಷ ಸೇರಿ ಅಧಿಕಾರ ಹಿಡಿದು ಜನವಿರೋಧೀ ಶಕ್ತಿಗಳ ವಿರುದ್ಧ ಗುಡುಗಿದರು. ಅಂಬೇಡ್ಕರ್‌, ಬಸವಣ್ಣ, ಗಾಂಧೀಜಿ ಮತ್ತು ಕುವೆಂಪು ಅವರು ನಮ್ಮ ನೆನಪಿನಿಂದ ಜಾರಿ ಹೋಗದಂತೆ ಆಗಾಗ ಅವರ ಚಿಂತೆನಗಳ ಬಗ್ಗೆ ಮಾತಾಡುತ್ತಲೇ ಇದ್ದರು. ಇಂಥ ಹಲವು ಕಾರಣಗಳಿಂದ ಕರ್ನಾಟಕವು ಕೋಮುವಾದಿಗಳ ತೆಕ್ಕೆಗೆ ಪೂರ್ತಿಯಾಗಿ ಬೀಳಲಿಲ್ಲ. ಈಗ ಸಿದ್ದರಾಮಯ್ಯನವರ ನಿರ್ಗಮನದಿಂದ ಮುಂದೇನಾಗುವುದೋ ಹೇಳುವುದು ಕಷ್ಟ. ಅವರ ಕೊನೆಯ ಭಾಷಣದಲ್ಲಿ ʼನಾನು ಕೋಮುವಾದೀ ಶಕ್ತಿಗಳ ವಿರುದ್ಧ ಹೋರಾಡುತ್ತಲೇ ಇರುತ್ತೇನೆʼ ಎಂಬ ಮಾತನ್ನು ಹೇಳಲು ಅವರು ಮರೆಯಲಿಲ್ಲ.

ನಿರ್ಗಮಿತ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರು

ಸಿದ್ದರಾಮಯ್ಯನವರ ಸೈದ್ಧಾಂತಿಕ ನೆಲೆಗಳು ಆದರ್ಶಕ್ಕಿಂತ ಹೆಚ್ಚು ಪ್ರಾಯೋಗಿಕವಾಗಿದ್ದವು. ಪ್ರಜಾಪ್ರಭುತ್ವದ ಚೌಕಟ್ಟಿನೊಳಗೆ ಎಷ್ಟು ಮಾಡಲು ಸಾಧ್ಯವೋ ಅಷ್ಟನ್ನು ಮಾಡುವುದು ಅವರ ಉದ್ದೇಶವಾಗಿತ್ತು. ಭಾರತದ ಪ್ರಧಾನ ಸಮಸ್ಯೆಯು ಅದರ ಜಾತಿ ಪದ್ಧತಿಯಲ್ಲಿದೆ. ಶ್ರೇಣೀಕರಣಕ್ಕೆ ಒಳಪಟ್ಟ ಜಾತಿ ಪದ್ಧತಿಯನ್ನು ಸಮರ್ಥಿಸಲು ಈ ದೇಶದಲ್ಲಿ ಅನೇಕ ಧರ್ಮಗ್ರಂಥಗಳೇ ಹುಟ್ಟಿಕೊಂಡಿವೆ. ಹೀಗಾಗಿ ಇಲ್ಲಿನ ಧರ್ಮವೂ ಮಲಿನಗೊಂಡಿದೆ. ಈ ಅಸಮಾನತೆಗೆ ಮಹಿಳೆಯನ್ನೂ ಜೋಡಿಸಿದ್ದರಿಂದ ಸಮಸ್ಯೆ ಇನ್ನೂ ಜಟಿಲವಾಗಿದೆ. ಸಿದ್ದರಾಮಯ್ಯನವರು ತಮ್ಮ ರಾಜಕೀಯ ಜೀವನದುದ್ದಕ್ಕೂ ಜಾತಿಯ ಅಸಮಾನತೆಗಳ ವಿರುದ್ಧ ಸದಾ ಧ್ವನಿಯೆತ್ತುತ್ತಲೇ ಬಂದಿದ್ದಾರೆ. ತಮ್ಮ ಮಾತುಗಳಿಗೆ ಪೂರಕವಾಗಿ ಬಸವಣ್ಣ ಮತ್ತು ಅಂಬೇಡ್ಕರ್‌ ಅವರು ಹೇಳಿದ ಮಾತುಗಳನ್ನು ಸ್ಮರಿಸಿಕೊಂಡಿದ್ದಾರೆ.  ಅನೇಕ ಅಡ್ಡಿ ಆತಂಕಗಳ ನಡುವೆ ನಿರೀಕ್ಷಿಸಿದ ಸಾಧನೆ ಆಗಿಲ್ಲವಾದರೂ ಅದರ ಪರವಾದ ಒಂದು ಧ್ವನಿಯನ್ನು ಅವರು ಎಂದೂ ಬಿಟ್ಟುಕೊಟ್ಟಿಲ್ಲ. ಜನರು ಸಾಮಾನ್ಯವಾಗಿ ಮಾತಾಡಲು ಹೆದರಿಕೊಂಡ ವಿಷಯಗಳನ್ನು ಸಿದ್ದರಾಮಯ್ಯನವರು ವೇದಿಕೆಯಿಂದಲೇ ಹೇಳುತ್ತಿದ್ದರು, ವಿಧಾನ ಸಭೆಯ ಚರ್ಚೆಗಳಲ್ಲೂ ಉಲ್ಲೇಖಿಸುತ್ತಿದ್ದರು.

ಕಳೆದ ಕೆಲವು ವರ್ಷಗಳಿಂದ ಕರ್ನಾಟಕ ರಾಜ್ಯವನ್ನು ಕೋಮುವಾದೀ ನೆಲೆಗಳಿಗೆ ಕೊಂಡೊಯ್ಯುವ  ಪ್ರಯತ್ನಗಳು ನಡೆಯುತ್ತಿರುವಾಗ, ಹೇಗೆ ಕರ್ನಾಟಕವು ಎಂದೂ ಕೋಮುವಾದಿಯಾಗಿರಲಿಲ್ಲ ಎಂಬುದನ್ನು ಅವರು ಅದ್ಭುತವಾಗಿ ವಿವರಿಸುತ್ತಿದ್ದರು. ಅನ್ಯ ಪ್ರಭಾವಗಳನ್ನು ಅರಗಿಸಿಕೊಂಡು, ಅವನ್ನು ಪುನರ್ ಸೃಸ್ಟಿಸಿಕೊಂಡು ಕರ್ನಾಟಕ ಬೆಳೆದಿದ್ದು ಅದನ್ನು ಅರ್ಥಮಾಡಿಕೊಂಡು, ಕೋಮುವಾದವನ್ನು ತಿರಸ್ಕರಿಸಿ, ಪ್ರಗತಿಯತ್ತ ರಾಜ್ಯ ಮುನ್ನಡಿ ಇಡುವ ಹಾಗೆ ಮಾಡಿದ ಕೆಲವೇ ಕೆಲವು ನಾಯಕರಲ್ಲಿ ಶ್ರೀ ಸಿದ್ದರಾಮಯ್ಯ ಅವರು ಪ್ರಮುಖರು.

ಕರ್ನಾಟಕಕ್ಕಿರುವ ಸುದೀರ್ಘ ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಮುಂದುವರೆಸಲು ಹೋರಾಡಿದ ದೊಡ್ಡ ಜನನಾಯಕ ಅವರು. ಸಾಮಾಜಿಕ ನ್ಯಾಯದ ಕೂಗಿಗೆ ಭದ್ರವಾದ ತಳಹದಿಯನ್ನು 12 ನೇ ಶತಮಾನದಷ್ಟು ಹಿಂದೆಯೇ ಹಾಕಿಕೊಟ್ಟ ವಚನ ಚಳುವಳಿಯ ಬಗ್ಗೆ ಅವರಿಗೆ ಆಳವಾದ ತಿಳುವಳಿಕೆಯಿತ್ತು. ಜಾತಿಯ ವಿಷಮತೆ, ಲಿಂಗಾಧರಿತ ಸಮಾಜದ ಅಮಾನುಷತೆ ಮತ್ತು ಧಾರ್ಮಿಕ ಡಾಂಭಿಕತೆಗಳ ವಿರುದ್ಧ ವಚನಕಾರರು ಎತ್ತಿದ ಪ್ರಶ್ನೆಗಳನ್ನು ಸಿದ್ದರಾಮಯ್ಯ ಅವರು  ತಮ್ಮ ಆಡಳಿತಾವಧಿಯಲ್ಲಿ ಪ್ರಸ್ತುತಗೊಳಿಸುತ್ತಲೇ ಹೋಗಿದ್ದಾರೆ.  ತಮ್ಮ ಭಾಷಣಗಳಲ್ಲಿ ಅವರು ಬಳ್ಳಾರಿಯ ಪಾಳೇಗಾರರ ಹೋರಾಟ, ಸುಳ್ಯದ ಕಲ್ಯಾಣಪ್ಪನ ಹೋರಾಟ, ಸಂಗೊಳ್ಳಿ ರಾಯಣ್ಣ, ಹಲಗಲಿಯ ಬೇಡರು, ಅಂಕೋಲದ ಉಪ್ಪಿನ ಸತ್ಯಾಗ್ರಹ, ಕಾಗೋಡು ಸತ್ಯಾಗ್ರಹ, ಸಂಡೂರು ಚಳುವಳಿ, ನರಗುಂದ ರೈತ ಹೋರಾಟ, ಕರ್ನಾಟಕ ರಾಜ್ಯ ರೈತ ಸಂಘ ನಡೆಸಿದ ಚಳುವಳಿ –ಇತ್ಯಾದಿಗಳನ್ನು ನೆನಪಿಸಿಕೊಳ್ಳುತ್ತಾ ಕರ್ನಾಟಕದ ಸಾಮಾಜಿಕ ಬದ್ಧತೆಯನ್ನು ದೇಶಕ್ಕೆ ಹಾಗೂ ವಿಶ್ವಕ್ಕೆ ಪಸರಿಸುತ್ತಲೇ ಇದ್ದರು.   

ಮೈಸೂರು ಅರಸರ ಆಳ್ವಿಕೆಯ ಕಾಲದಲ್ಲಿ 1851ರಷ್ಟು ಹಿಂದೆ ಆರಂಭವಾದ ಹಿಂದುಳಿದ ವರ್ಗದವರ ಚಳುವಳಿ ಬೇರೆ ಬೇರೆ ಅವಸ್ಥಾಂತರಗಳನ್ನು ಹೊಂದುತ್ತಾ ಅಹಿಂದ ಚಳುವಳಿವರೆಗೆ ನಡೆದು ಬಂದಿದೆ. ಸಿದ್ದರಾಮಯ್ಯ ಅವರು ಅಹಿಂದ ಚಳುವಳಿಗೆ ನಾಯಕತ್ವ ನೀಡಿದರು. 

19ನೇ ಶತಮಾನದ ಉತ್ತರಾರ್ಧದಲ್ಲಿ ಕಾಣಿಸಿಕೊಂಡು, 20ನೇ ಶತಮಾನದಾದ್ಯಂತ ವಿಸ್ತರಿಸಿಕೊಂಡ ಕರ್ನಾಟಕ ಏಕೀಕರಣ ಚಳುವಳಿಯು ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಬಹುದೊಡ್ಡ ಕಾಣಿಕೆ ನೀಡಿದೆ. ಕರಾವಳಿಯನ್ನು ಹೊರತು ಪಡಿಸಿದರೆ ಬಹುತೇಕ ಕರ್ನಾಟಕವನ್ನು ಒಂದುಗೂಡಿಸಿದ ಇನ್ನೊಂದು ಚಳುವಳಿಯೆಂದರೆ ಗೋಕಾಕ ಚಳುವಳಿ. ಸರೋಜಿನಿ ಮಹಿಷಿ ವರದಿಯಿಂದ ಬರಗೂರು ರಾಮಚಂದ್ರಪ್ಪ ವರದಿವರೆಗೆ ಅನೇಕ ವರದಿಗಳು ಕನ್ನಡವನ್ನು ಬಲಗೊಳಿಸಲು ಅನೇಕ ಶಿಫಾರಸುಗಳನ್ನು ಸರಕಾರಕ್ಕೆ ತಲುಪಿಸಿವೆ. ಶ್ರೀ ಸಿದ್ದರಾಮಯ್ಯನವರು ಕರ್ನಾಟಕಕ್ಕೆ ಒಂದು ಬಾವುಟವನ್ನು ರೂಪಿಸುವುದರೊಂದಿಗೆ ಕನ್ನಡದ ಅಸ್ಮಿತೆಯನ್ನು ಎತ್ತಿ ಹಿಡಿದರು. ಅವರ ಅವಧಿಯಲ್ಲಿ ನವದೆಹಲಿಯ ಜೆ ಎನ್ ಯು ವಿನಲ್ಲಿ ಒಂದು ಕನ್ನಡ ಪೀಠವೂ ಹುಟ್ಟಿಕೊಂಡಿತು. ರಾಜ್ಯ ಶಿಕ್ಷಣನೀತಿಯೂ ರೂಪುಗೊಂಡಿತು.

ಹೋರಾಟದಿಂದ ಪಡೆದ ರಾಜ್ಯಾಧಿಕಾರವನ್ನು ಜನರ ಕಲ್ಯಾಣಕ್ಕೆ ಬಳಸಿದ ಬಹುಶಃ  ಕೊನೆಯ ಸಮಾಜವಾದಿ  ನಾಯಕ ಶ್ರೀ ಸಿದ್ಧರಾಮಯ್ಯನವರೆಂದು ತೋರುತ್ತದೆ. ಅವರಿಗೆ ಸಮಾಜವಾದೀ ಚಳುವಳಿಯ ಹಿನ್ನೆಲೆಯಿತ್ತು. ಕನ್ನಡ ಭಾಷೆಯಂತ ಪ್ರಾದೇಶಿಕ ಭಾಷೆಗಳ ಬಗ್ಗೆ ಒಲವಿತ್ತು. ಹಿಂದುಳಿದ ವರ್ಗಗಳ ಬಗ್ಗೆ ಅನುಭವಾಧರಿತ ಮತ್ತು ಅಧ್ಯಯನಾಧರಿತ ತಿಳುವಳಿಕೆಯಿತ್ತು. ಕೃತಕ ನಯನಾಜೂಕಿನ ಅನೇಕರಿಗಿಂತ ಅವರ ಒರಟುತನ ನಮಗೆಲ್ಲ ಹೆಚ್ಚು ಇಷ್ಟವಾಗಿದೆ. 

ಕಲ್ಯಾಣ ರಾಜ್ಯ ಪರಿಕಲ್ಪನೆಯ ಐದು ಗ್ಯಾರಂಟಿಗಳು :

ಸಿದ್ದರಾಮಯ್ಯನವರ ನೇತೃತ್ವದ ಕರ್ನಾಟಕ ಸರಕಾರವು ಜ್ಯಾರಿಗೆ ತಂದ ಗ್ಯಾರಂಟೀ ಯೋಜನೆಗಳನ್ನು ಈಗ ಬಹುತೇಕ ಎಲ್ಲ ರಾಜ್ಯಗಳೂ ಜ್ಯಾರಿಗೆ ತರುತ್ತಿವೆ.  ಗೃಹ ಜ್ಯೋತಿ ಯೋಜನೆ, ಗೃಹ ಲಕ್ಷ್ಮಿ ಯೋಜನೆ, ಯುವ ನಿಧಿ ಯೋಜನೆ, ಅನ್ನ ಭಾಗ್ಯ ಯೋಜನೆ ಮತ್ತು ಶಕ್ತಿ ಯೋಜನೆಗಳು ಕೋಟ್ಯಂತರ ಜನರ ಬದುಕನ್ನು ಹಸನುಗೊಳಿಸಿವೆ. ಸಿದ್ದರಾಮಯ್ಯ ಅವರು ಈ ಯೋಜನೆಗಳನ್ನು ಯಾವುದೇ ಜಾತಿ ಅಥವಾ ಧರ್ಮದ ತಾರತಮ್ಯವಿಲ್ಲದೆ ಜಾರಿಗೊಳಿಸಿದ್ದಾರೆ. ೧೭ ಬಜೆಟ್ ಗಳನ್ನು ಮಂಡಿಸಿದ ಸಿದ್ದರಾಮಯ್ಯನವರಿಗೆ ಇವನ್ನೆಲ್ಲ ಹೇಗೆ ಮಾಡಬೇಕೆಂಬ ಬಗ್ಗೆ ಸ್ಪಷ್ಟವಾದ ತಿಳಿವಳಿಕೆಯಿತ್ತು. ಹೋರಾಟದಿಂದ ಪಡೆದ ರಾಜ್ಯಾಧಿಕಾರವನ್ನು ಜನರ ಕಲ್ಯಾಣಕ್ಕೆ ಬಳಸಬೇಕೆಂಬ ಅವರ ಧೋರಣೆ ಅತ್ಯಂತ ಜನಪರವಾಗಿದೆ.

ಕಳೆದ ಕೆಲವು ವರ್ಷಗಳಿಂದ ಕರ್ನಾಟಕದ  ಉದ್ದಗಲಕ್ಕೂ ಕೇಳಿಬರುತ್ತಿದ್ದ ದ್ವೇಷ ಭಾಷಣಗಳು, ಹಿಜಾಬ್‌, ಹಲಾಲ್‌, ಇತ್ಯಾದಿಗಳನ್ನು ಕೇಳಿ ಬೇಸರಗೊಂಡಿದ್ದ ಮನಸಿಗೆ ಮೇಲಿನ ಐದು ಘೋಷಣೆಗಳು ಮುದ ನೀಡಿದ್ದಂತೂ ನಿಜ. ಈ ಯೋಜನೆಗಳನ್ನು ವಿರೋಧಿಸುವವರೂ ಕೂಡಾ ಅಭಿವೃದ್ಧಿ, ಆರ್ಥಿಕತೆ ಮೊದಲಾದ ಪರಿಭಾಷೆಗಳಲ್ಲಿಯೇ ಮಾತಾಡುತ್ತಿದ್ದಾರೆ. ಈ ಯೋಜನೆಗಳ ಬಹು ದೊಡ್ಡ ಯಶಸ್ಸು ಸಾರ್ವಜನಿಕ ಭಾಷೆಯನ್ನೇ ಬದಲಾಯಿಸಿದ್ದರಲ್ಲಿದೆ.

ಮೇಲಿನ ಐದು ಯೋಜನೆಗಳಲ್ಲಿ ಶಕ್ತಿ ಯೋಜನೆಯು ನಿರ್ಣಾಯಕವಾದ ಪರಿಣಾಮ ಬೀರಿರುವುದನ್ನು ನಾವು ಈಗಾಗಲೇ ನೋಡುತ್ತಿದ್ದೇವೆ. ಹಿಂದೆಂದೂ ಇಲ್ಲದ ರೀತಿಯಲ್ಲಿ ಮಹಿಳೆಯರು ಪಯಣಿಸುತ್ತಿದ್ದಾರೆ. ನಮ್ಮ  ಬದುಕಿನ ಕಾಲಘಟ್ಟದಲ್ಲಿ ಈ ರೀತಿಯಲ್ಲಿ ಮಹಿಳೆಯರು ಪ್ರಯಾಣಿಸುವುದನ್ನು ನಾವು ಕಂಡೇ ಇಲ್ಲ. ಈ ಲೇಖನ ಬರೆಯುವ ಹೊತ್ತಿಗೆ ಕೋಟ್ಯಂತರ ಮಹಿಳೆಯರು ಈ ಯೋಜನೆಯ ಲಾಭ ಪಡೆದಿದ್ದಾರೆ. ಕಾರಣಗಳು ಏನೇ ಇರಲಿ, ಮಹಿಳೆಯರ ಈ ಚಲನೆ ಮಾತ್ರ ಐತಿಹಾಸಿಕವಾದುದು. ಇದನ್ನು ಅರ್ಥಮಾಡಿಕೊಳ್ಳುವುದಕ್ಕೆ ಹೃದಯವಂತಿಕೆ ಬೇಕು. ಮನೆಯಲ್ಲಿ ಹೆಂಗುಸರನ್ನು ಕೂಡಿಹಾಕುವವರಿಗೆ ಇದು ಅರ್ಥ ಆಗಲಾರದು. ಬಡವರ ಹಸಿವನ್ನು ತಣಿಸುವ ಅನ್ನ ಭಾಗ್ಯ ಯೋಜನೆಯನ್ನು ತಪ್ಪು ಎಂದು ಹೇಳಲು ಯಾರಿಗೂ ಅಧಿಕಾರ ಇಲ್ಲ. ಹಾಗೆ ನೋಡಿದರೆ, ಭಾರತೀಯ ಸಂವಿಧಾನವು ಬಡತನ ನಿರ್ಮೂಲನದ ಬಗ್ಗೆ ಸಾಕಷ್ಟು ಸೂಚನೆಗಳನ್ನು ನೀಡಿದೆ. ಆದರೆ ಬಡತನ ಕಡಿಮೆ ಆಗಿಲ್ಲ. ವೇಗದ ಬೆಳವಣಿಗೆ ಮತ್ತು ಸಾಕಷ್ಟು ಅಭಿವೃದ್ಧಿಯ ಹೊರತಾಗಿಯೂ, ನಮ್ಮ ಜನರು ಬಡತನದಿಂದ ಬಳಲುತ್ತಿದ್ದಾರೆ.  “ಬಡತನ, ಅಜ್ಞಾನ, ರೋಗ ಮತ್ತು ಅವಕಾಶಗಳ ಅಸಮಾನತೆಯನ್ನು ಕೊನೆಗೊಳಿಸುವ” ಅಗತ್ಯವನ್ನು ಸಂವಿಧಾನ ಸಭೆಯ ಸಭೆಗಳಲ್ಲಿ ಮತ್ತು ಭಾಷಣಗಳಲ್ಲಿ ಬಹಳ ಬಾರಿ ಹೇಳಲಾಗಿದೆ. “ಮುಕ್ತ ಭಾರತವು ಆಹಾರ, ಬಟ್ಟೆ, ವಸತಿ ಮತ್ತು ಸಾಮಾಜಿಕ ಸೇವೆಗಳ ವಿಷಯದಲ್ಲಿ ಸಾಮಾನ್ಯ ಜನರ ಹಿತಾಸಕ್ತಿಗಳನ್ನು ಕಾಪಾಡತಕ್ಕದ್ದುʼ ಎಂದೂ ಘೋಷಿಸಲಾಗಿದೆ.  ದೇಶದ ಮೊದಲ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಅವರು ಬಡತನ,  ಅಜ್ಞಾನ ಮತ್ತು ಅನಾರೋಗ್ಯವು ಮಾಯವಾಗುವಂತೆ ಪ್ರತಿಯೊಬ್ಬರೂ ಕೆಲಸ ಮಾಡಬೇಕೆಂದು ದೇಶದ ಜನತೆಯನ್ನು ಕೋರಿದ್ದರು.

ತಕ್ಕ ಮಟ್ಟಿನ ಆರ್ಥಿಕ ಭದ್ರತೆಯನ್ನು ನೀಡಿ,  ಅವರ ಕೆಲಸದ ಅವಕಾಶಗಳನ್ನು ವಿಸ್ತರಿಸಿದೆ ಮತ್ತು ಅವರ ಜೀವನಮಟ್ಟವನ್ನು ಎತ್ತರಿಸಿದೆ ಎಂದು ಭಾವಿಸಲಡ್ಡಿಯಿಲ್ಲ.

ರಾಜಕೀಯ ಮತ್ತೆ ಮುಂದರಿಯುತ್ತದೆ. ಹೊಸ ನಾಯಕರು ಆವಿರ್ಭವಿಸುತ್ತಾರೆ. ಆದರೆ ಸಿದ್ಧರಾಮಯ್ಯರಂಥ ನಾಯಕ ನಮಗೆ ಸಿಗಲು ಕರ್ನಾಟಕ ಬಹಳ ಕಾಲ  ಕಾಯಬೇಕಾದೀತು.

ಡಾ. ಪುರುಷೋತ್ತಮ ಬಿಳಿಮಲೆ

ಅಧ್ಯಕ್ಷರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಸರಕಾರ

More articles

Latest article

Most read