ಧರ್ಮದ್ವೇಷಗಳಿಂದ ಮಾತ್ರವಲ್ಲ ಕೊ*ಲೆ ಅತ್ಯಾಚಾರ ಪ್ರವೃತ್ತಿಗಳಿಂದ ಹೊರ ಬರಬೇಕಾಗಿದೆ ಭಾರತ

NEET – UG ಪರೀಕ್ಷಾ  ಅಕ್ರಮದ ವಿರುದ್ಧ ಆಗ ತಾನೇ ಉದಯಿಸಿದ್ದ ಕಾಕ್ರೋಚ್ ಜನತಾ ಪಾರ್ಟಿಯ ಮೂಲಕ ಯುವಮಕ್ಕಳು ಮಾಡಿದ್ದ ಪ್ರತಿಭಟನೆ, ಸರಕಾರವನ್ನು ಅಲ್ಲಾಡಿಸಿದ್ದ ಪರಿಯನ್ನು ನಾವು ನೋಡಿದ್ದೇವೆ. ಧ್ವನಿಗಳು ಮೊಳಗಿದರೆ ಪ್ರಭುತ್ವಗಳೂ ನಡುಗುತ್ತವೆ. ಅಂತಿರುವಾಗ ಯುವಸಮುದಾಯದ ಧ್ವನಿಗಳು ಎದ್ದರೆ  ಜನಸಾಮಾನ್ಯರು ಕೊಲೆಗಳನ್ನು ಅತ್ಯಾಚಾರಗಳನ್ನು ಮಾಡಲು, ಧರ್ಮದ್ವೇಷದ ಭಾಷಣಗಳನ್ನು ಬಿಗಿಯಲು  ಹೆದರದಿರುವರೇ? ಅದಕ್ಕಾಗಿ ಮೊತ್ತ ಮೊದಲು ದೇಶದೆಲ್ಲೆಡೆ ಯುವಸಮುದಾಯ ಜಾಗೃತವಾಗಬೇಕಾಗಿದೆ – ರೋಶ್ನಿ ಅನಿಲ್‌ ರೊಸಾರಿಯೊ, ಹವ್ಯಾಸಿ ಬರಹಗಾರ್ತಿ.

ಕುಂದಾಪುರದಲ್ಲಿ ಒಬ್ಬ ಕ್ರೈಸ್ತ ಅಧರ್ಮೀಯನ ಕೊ*ಲೆಯಾಗಿದೆ. ಕೊ*ಲೆ ಮಾಡಿದವನೂ ಕ್ರಿಶ್ಚಿಯನ್ ಧರ್ಮದವನೇ. ಅವನೂ ಧರ್ಮದಲ್ಲಿರಲು ನಾಲಾಯಕ್ಕಾದ ಅಧರ್ಮೀಯನೇ.

ಅಧರ್ಮದ ಮಾರ್ಗದಲ್ಲಿ ನಡೆವ ಅಧಮರನ್ನು ಎಂದೂ ಕ್ರಿಶ್ಚಿಯನ್ ಧರ್ಮ ಸಹಿಸದು. ತಪ್ಪು ಮಾಡಿದವನ ವಿರುದ್ಧ ತಾಳ್ಮೆ ಸೈರಣೆ ಸಂಯಮ ಕಳೆದುಕೊಂಡು ಆತನ ಕೊ*ಲೆ ಮಾಡಿದವನನ್ನು ಸಮಾಜ ಎಂದಿಗೂ ಕ್ಷಮಿಸದು. ಮೊದಲ ಅಪರಾಧಿ ಸತ್ತು ಮೇಲೆ ಹೋದರೂ ಎರಡನೇ ಅಪರಾಧಿ ಜೈಲಿನಿಂದ ಹೊರಬರುವ ಅವಕಾಶವಿದ್ದು ಸುಂದರ ಜೀವನ ನಡೆಸಿದರೂ ಸಮಾಜದ ಕಣ್ಣಿನಲ್ಲಿ ಸದಾ ಆತ ಕೊಲೆಗಾರನೇ. ಕೊ*ಲೆಗೆ ಕೊ*ಲೆ ಪರಿಹಾರವಲ್ಲ.

ಮುಸಲ್ಮಾನ್ ಮತ್ತು ಹಿಂದೂಗಳಲ್ಲಿ ಮಾತ್ರ ರೌಡಿಸಮ್ ಇರುವುದು, ಕೊ*ಲೆಗಾರರು, ಅತ್ಯಾಚಾರಿಗಳು ಇರುವರು ಎಂದು ಅಂದುಕೊಳ್ಳುವ ಕ್ರಿಶ್ಚಿಯನ್ನರು, ನಮ್ಮಲ್ಲೂ ಕೆಲವೊಂದು ಪರಮದುಷ್ಟ ಕಿರಾತಕ ಮನಸ್ಥಿತಿಯ ನಾಲಾಯಕ್ಕರು ಇದ್ದಾರೆಂಬುದನ್ನು ತಿಳಿದುಕೊಳ್ಳಬೇಕಾಗಿದೆ.

ಇಲ್ಲಿ ಕೊ*ಲೆಯಾದವ ಸಣ್ಣಮಟ್ಟದ ರೌಡಿ ಮಾತ್ರವಲ್ಲ, ಸಾಂಸಾರಿಕ ಬದುಕಿನಲ್ಲೂ ಎಡವಿದವ. ಹೆಂಡತಿ ಇದ್ದೂ ಇನ್ನೊಂದು ಹೆಣ್ಣನ್ನು ಕಟ್ಟಿಕೊಂಡವ. ಕನ್ನಡ ನ್ಯೂಸ್ ಚಾನೆಲ್ ಒಂದು ಕೊ*ಲೆಯಾದ ಆತನ ಬಗ್ಗೆ ಸವಿವರ ವರದಿಯನ್ನು ವಿಡಿಯೋ ಮೂಲಕ ಪ್ರಸ್ತುತ ಪಡಿಸಿದೆ. ಆತ ರೌಡಿಶೀಟರ್ ಎಂದೇ ಅವರು ಹೆಡ್ ಲೈನ್ ಹಾಕಿದ್ದಾರೆ.

ಕೊ*ಲೆಗಳಾಗುವುದು ಹೆಚ್ಚಾಗಿ ವೈಯುಕ್ತಿಕ ದ್ವೇಷದಲ್ಲಿ. ಅಂಥವರ ಅಂತ್ಯ ಹೀಗಾದಾಗ ಒಂದು ಧರ್ಮದ ಮನಸ್ಥಿತಿಗಳಂತೆ ಬೀದಿಗಿಳಿದು ಸಮರ್ಥನೆ ಮಾಡಬಾರದು, ವೇದಿಕೆ ಹತ್ತಿ ಮೈಕ್ ಹಿಡಿದು ಹಿಂಸಾಚಾರಕ್ಕೆ ಕರೆ ನೀಡಬಾರದು. ಅತ್ಯಾಚಾರಗಳಾದರೆ, ಅಮಾಯಕರ ಕೊ*ಲೆಗಳಾದರೆ ಮಾತ್ರ ಪ್ರತಿಭಟನೆ ಮಾಡಬೇಕು. ಕೊ*ಲೆ ಮಾಡಿದವನ ಧರ್ಮದವರ ವಿರುದ್ಧವಲ್ಲ, ಅಂಥವರನ್ನು ಹಿಡಿಯದ ವ್ಯವಸ್ಥೆಯ ವಿರುದ್ಧ. ಮುಂದೆ ಯಾರೂ ಅಂಥದ್ದನ್ನು ಮಾಡಲು ಹಿಂದೇಟು ಹಾಕಬೇಕು ಹಾಗೆ ಎದೆ ನಡುಗಿಸಬೇಕು. ಆದರೆ ಶಾಂತಿಯಿಂದ.

ಯಾಕೆಂದರೆ ನಾವು  ಯೇಸುಕ್ರಿಸ್ತನಿಗೆ ಮರಣದಂಡನೆ ವಿಧಿಸಿದ ರೋಮನ್ ರಾಜ್ಯಪಾಲ ಪೋನ್ತಿಯಸ್ ಪಿಲಾತಾ, ರೋಮನ್ ಸರ್ವಾಧಿಕಾರಿ ಹೆರೋದ್ ಆಂಟಿಪಾಸ್ ನ ಮನಸ್ಥಿತಿಗಳಲ್ಲ. ಶಾಂತಿ ಪ್ರೀತಿ ದಯೆ ಕರುಣೆ ಸಹನೆ ಸಹಾನುಭೂತಿ ಅನುಕಂಪ ಅಹಿಂಸೆ ಸಾರಿದ, ಶತ್ರುಗಳನ್ನೂ ಕ್ಷಮಿಸಿ ಮಿತ್ರರಂತೆ ಪರಿಗಣಿಸಿ ಎಂದು ಕರೆ ನೀಡಿದ್ದ ಶಾಂತಿದೂತ ಯೇಸುಕ್ರಿಸ್ತನ ಅನುಯಾಯಿಗಳು. ಆತನ ಉಪದೇಶಗಳ ಸಮರ್ಥಕರು. ಶ್ರೀರಾಮನ ಆದರ್ಶದಿಂದಲೂ, ಭಗವಾನ್ ಬುದ್ಧನ ಹಿತವಚನಗಳಿಂದಲೂ, ಬಸವಣ್ಣ ಸ್ವಾಮಿ ವಿವೇಕಾನಂದ, ಕುವೆಂಪು ಅವರಂತಹ ಮನಸ್ಥಿತಿಗಳ ಮಹಾನ್ ವ್ಯಕ್ತಿಗಳ ತತ್ವಸಿದ್ಧಾಂತಗಳಿಂದಲೂ ಪ್ರೇರಿತರಾದವರು. ನಾವು ಭಾರತದ ಕ್ರೈಸ್ತರು ಅಹಿಂಸಾವಾದಿಗಳು. 

ಉಪವಾಸ ಸತ್ಯಾಗ್ರಹ, ಪಾದಯಾತ್ರೆ, ಜನಚಳುವಳಿ ಮತ್ತು ‘ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’ ಎಂದು ಸಾಮೂಹಿಕವಾಗಿ ಘೋಷಣೆಗಳನ್ನು ದೇಶದಾದ್ಯಂತ ಕೂಗಿಸಿ  ಎಂಟೆದೆ ಭಂಟರ ಎದೆ ನಡುಗಿಸಿ ಪರಮ ಶತ್ರು  ಬ್ರಿಟಿಷರ ಒಂದು ಹನಿ ರಕ್ತವನ್ನೂ ಹರಿಸದೆ ಭಾರತಕ್ಕೆ ಅಹಿಂಸೆಯ ಮೂಲಕ ಸ್ವಾತಂತ್ರ್ಯ ಗಳಿಸಿಕೊಟ್ಟು ಇಂದಿಗೂ ವಿಶ್ವದಾದ್ಯಂತ ಜನಮಾನಸದಲ್ಲಿ ನೆಲೆ ನಿಂತಿರುವ ಗಾಂಧೀಜಿಯವರ ಅಹಿಂಸಾ ತತ್ವದ ಪ್ರತಿಪಾದಕರು ನಾವು  ಗಾಂಧಿವಾದಿಗಳು.  ಗಾಂಧಿಯನ್ನು ಕೊಂದ ಗೋಡ್ಸೆ ಮನಸ್ಥಿತಿಗಳಲ್ಲ.

ಕೊ*ಲೆಗಾರರನ್ನು ಅತ್ಯಾಚಾರಿಗಳನ್ನು ಈ ದೇಶದ ಕಾನೂನು ವ್ಯವಸ್ಥೆ ಬಿಟ್ಟರೂ, ಸಮುದಾಯ ಮತ್ತು ಆತನ ಕುಟುಂಬದವರು ಎಂದಿಗೂ ಹತ್ತಿರ ಮಾಡಕೂಡದು ಎಂಬುದೇ ನನ್ನ ಮನಸ್ಥಿತಿ. ಏಕೆಂದರೆ ಕೊ*ಲೆಗಳು ಅತ್ಯಾಚಾರಗಳು ಬದುಕುವ ಜೀವದ ಮೇಲಿನ ಕ್ರೌರ್ಯಗಳು.

ನನ್ನ ಬಜ್ಪೆ ಊರಲ್ಲೂ ಇತ್ತೀಚೆಗೆ ಒಂದು ಕೊ*ಲೆಯಾಗಿತ್ತು. ಕೊ*ಲೆಯಾದಾತನನ್ನು ರೌಡಿಶೀಟರ್ ಎಂದೇ ಆ ದಿನವಿಡೀ ಕರ್ನಾಟಕದ ಮುಖ್ಯವಾಹಿನಿಗಳು ಮತ್ತು ಡಿಜಿಟಲ್ ಮಾಧ್ಯಮದವರು ಸಾರಿ ಸಾರಿ ಹೇಳಿದರು. ವೆರಿ ನೆಕ್ಸ್ಟ್ ಡೇ ಪ್ಲೇಟ್ ಚೇಂಜ್…. ಆತ ಧರ್ಮರಕ್ಷಕ.

ಕೊ*ಲೆಯಾದಾತ ಹಿಂದೆ ಸಮೀಪದ ಎಕ್ಕಾರಿನಲ್ಲಿ  ದಲಿತ ಸಮುದಾಯದ ಅದೂ ತನ್ನದೇ ಹಿಂದೂ ಧರ್ಮದ ಅಮಾಯಕ ಯುವಕನ ಮೇಲೆ ಕ್ಷುಲ್ಲಕ ಕಾರಣಕ್ಕಾಗಿ ಸಾಮೂಹಿಕವಾಗಿ ದಾಳಿ ಮಾಡಿ ಆತನ ಸಾವಿಗೆ ಕಾರಣನಾಗಿದ್ದ. ಬದುಕಬೇಕಾಗಿದ್ದ ಜೀವದ ಅಕಾಲಿಕ ಸಾವು ಅದು ಕೊ*ಲೆಗೇ ಸಮಾನ ತಾನೇ…? ಆ ದಲಿತ ಬಡವನಾಗಿದ್ದ. ಆತನ ಪರವಾಗಿ ಯಾವ ಧ್ವನಿಗಳೂ ಏಳಲಿಲ್ಲ. ಆತನ ಕೊ*ಲೆಯಾದದ್ದು ತಿಳಿದದ್ದೇ, ಆತನನ್ನು ಕೊ*ಲೆ ಮಾಡಿದವ ಇನ್ನೊಂದು ಕೊ*ಲೆ ಮಾಡಿದಾಗ.

ಅಂದು ಆ ದಲಿತನನ್ನು ಕೊಲೆ ಮಾಡಿದಾತನಿಗೆ ವ್ಯವಸ್ಥೆಯೂ ಬುದ್ಧಿ ಕಲಿಸಲಿಲ್ಲ, ಧರ್ಮವೂ ಸರಿದಾರಿಗೆ ತರಲಿಲ್ಲ. ತಂದಿದ್ರೆ… ಮುಂದೊಂದು ದಿನ ಆತ ಕೊ*ಲೆಯಾಗುತ್ತಿರಲಿಲ್ಲ. ಒಬ್ಬನ ಸಾವಿಗೆ ಕಾರಣನಾದ ಆ ವ್ಯಕ್ತಿಯನ್ನು  ಧರ್ಮದ ಸೈತಾನೀ ಶಕ್ತಿಗಳು ಮಂಡಿಯೂರಿ ಸ್ವೀಕರಿಸಿದವು. ಧರ್ಮದ್ವೇಷದ ಕಾಲಾಳುವಾಗಿ  ಬಳಸಿಕೊಳ್ಳಲು ಅವರಿಗೂ ಅಂಥವರೇ ಬೇಕಾಗಿತ್ತು.  ಆತ ತ್ಯಾಗದ, ಆಧ್ಯಾತ್ಮಿಕ ಸಂಕೇತದ ಕೇಸರಿ ಬಣ್ಣದ ಲುಂಗಿ ಧರಿಸಿದ, ತಲೆಗೆ ಕೇಸರಿ ಶಾಲು ಸುತ್ತಿದ, ವ್ಯಾಘ್ರತನವನ್ನು ಎದೆಯಲ್ಲಿ ಬಚ್ಚಿಟ್ಟು ಗೋವಿನ ಮುಖವಾಡ ಹಾಕಿದವನಾಗಿದ್ದ. ತ್ಯಾಗದ ಆಧ್ಯಾತ್ಮಿಕದ ಬಣ್ಣ ಆತನ ಕೈಯಲ್ಲಿ ಕೆಂಪು ರಕ್ತರಂಜಿತವಾಯಿತು.

ಕೆಲ ಸಮಯದ ನಂತರ ಸುರತ್ಕಲ್ ನಲ್ಲಿ ಮುಸಲ್ಮಾನ್ ಸಮುದಾಯದ ಒಬ್ಬನನ್ನು ತನ್ನಂತಹುದೇ ಮನಸ್ಥಿತಿಗಳೊಂದಿಗೆ ಸೇರಿಕೊಂಡು ಆತ ಹಾಡಹಗಲೇ ತಲ್ವಾರ್ ಝಳಪಿಸಿ ಜನನಿಬಿಡ ಸ್ಥಳದಲ್ಲಿ ಅಟ್ಟಾಡಿಸಿ ಕೊಂದ. ಕೊಂ*ದವರ ಸುಳಿವು ಲಭಿಸಿ ಸಮಾಜದ ಮುಖ್ಯವಾಹಿನಿಗಳು ನಾಲ್ಕು ಮಂದಿಯ ಆ ದಂಡಿನಲ್ಲಿ ಆತನ ಹೆಸರನ್ನೇ ಪ್ರಮುಖ ಆರೋಪಿಯಾಗಿ ಉಲ್ಲೇಖಿಸಿ ಹಲವು ಬಾರಿ ಕೊ*ಲೆಯ ಸಮಾಚಾರವನ್ನು ಪ್ರಚಾರ ಮಾಡಿದವು. ಆತ ಹಿಂದೆಯೂ ಕೊ*ಲೆ ಮಾಡಿದ್ದ ಎಂದು ಒತ್ತಿ ಒತ್ತಿ ಹೇಳಿದವು.

ಒಮ್ಮೆ ಮಾನವ ರಕ್ತದ ರುಚಿ ನೋಡಿದ ಕೈಗಳು, ಮನಸ್ಥಿತಿಗಳು  ಸುಮ್ಮನಿರಲಾರವು…. ಮಾನವ ರಕ್ತದ ರುಚಿ ಹತ್ತಿದ ಕಾಡುಮೃಗಗಳಂತೆ. ಕೊತಕೊತ ಕುದಿವ ಅಂಥವರಿಗೆ ಮುಂದೊಂದು ದಿನ  ಕುಟುಂಬದವರೇ, ಸ್ನೇಹಿತರೇ ಬಲಿಯಾದರೂ ಆಶ್ಚರ್ಯವಿಲ್ಲ.

ಅಂದು ಆತನಿಂದ ಸುರತ್ಕಲ್ ನಲ್ಲಿ ಕೊ*ಲೆಯಾಗಿದ್ದ ವ್ಯಕ್ತಿ ಜೀವಭಯದಲ್ಲಿ ಆತ್ಮರಕ್ಷಣೆಗೆ ದಿಕ್ಕುದೆಸೆ ಇಲ್ಲದೆ ಓಡಿ ಓಡಿ ಕೊ*ಲೆಯಾದಾ., ತನ್ನನ್ಯಾಕೆ ಕೊ*ಲೆ ಮಾಡಲು ತಲ್ವಾರ್ ಹಿಡಿದು ಅಟ್ಟಾಡಿಸುತ್ತಿದ್ದಾರೆ ಎಂಬ ಅರಿವೂ ಇಲ್ಲದ ಅಮಾಯಕನಾಗಿದ್ದ. ಯಾವ ಖತರ್ನಾಕ್ ಸಂಘಟನೆಗಳಲ್ಲೂ ಗುರುತಿಸಿಕೊಳ್ಳದ ಕುಟುಂಬ ಜೀವಿಯಾಗಿದ್ದ. ಅಂದು ಅಲ್ಲಿ ನಡೆದ ಕೊ*ಲೆ, ಈ ಹಿಂದೆ ತಮ್ಮ ಸಮುದಾಯದವರ ಕೊ*ಲೆಗೆ, ಆ ಕೊ*ಲೆ ಮಾಡಿದವರ ಸಮುದಾಯದವರ ಒಂದು ಕೊ*ಲೆ ಎಂಬ ಧರ್ಮದ್ವೇಷವೇ ಉದ್ದೇಶವಾಗಿತ್ತು.

ಹೌದು. ಸುರತ್ಕಲ್ ಕೊ*ಲೆಗೆ ಪ್ರೇರಣೆಯಾದದ್ದು ಅದ್ಕಕಿಂತಲೂ ಹಿಂದಿನ ಕೊ*ಲೆ. ಅದರಲ್ಲಿ ಕೊಲೆಯಾದ ಪುತ್ತೂರಿನ ವ್ಯಕ್ತಿ ಧಾರ್ಮಿಕ ಸಂಘಟನೆಗಳಲ್ಲಿದ್ದರೂ, ಯಾವುದೇ ಹಿಂಸಾಚಾರದಲ್ಲಿ ಭಾಗಿಯಾಗಿರದ ಸಚ್ಚಾರಿತ್ರ್ಯದವನಾಗಿದ್ದ. ಒಂದು ಕಗ್ಗೊಲೆಗೆ ಇನ್ನೊಂದು ಪ್ರತೀಕಾರದ ಕಗ್ಗೊಲೆ.

ಹೀಗೆ ಆ ಬಹುಸಂಖ್ಯಾತ ಹಿಂದೂ ಧರ್ಮದಲ್ಲಿ ಕೊ*ಲೆಯಾದವರಲ್ಲಿ ಪುತ್ತೂರಿನವ ಅಮಾಯಕನಾಗಿದ್ದರೆ, ಬಜ್ಪೆಯಲ್ಲಿ ಬಲಿಯಾದವ ರೌಡಿಶೀಟರ್. ಆ ಇಬ್ಬರು ಕೊ*ಲೆಯಾದಾಗ ಸಮಾಜ ದ್ವೇಷದಿಂದ ಹೊತ್ತಿ ಉರಿಯಿತು. ಕಾರಣ ಒಂದೇ ಆಗಿತ್ತು. ಕೊ*ಲೆ ಮಾಡಿದವರು ವಿರುದ್ಧ ಸಮುದಾಯದವರು. ಅಷ್ಟೇ.

ಸದ್ಯ ಆ ಸಮಯದಲ್ಲಿ ಸರ್ಕಾರ ಎಚ್ಚೆತ್ತದ್ದರಿಂದ ಪೋಲಿಸ್ ವ್ಯವಸ್ಥೆ ಬಿಗಿಯಾಯಿತು. ದಕ್ಷ ಪೊಲೀಸ್ ಅಧಿಕಾರಿಗಳು ವ್ಯವಸ್ಥೆಯನ್ನು ಬಹುಮಟ್ಟಿಗೆ ತಹಬಂದಿಗೆ ತಂದರು.

ಸಮಾಜದಲ್ಲಿ ಇಂದು ಒಂದು ವಿಚಿತ್ರ ಮನೋಧರ್ಮ ಕಾಣುತ್ತಿದೆ. ಇಲ್ಲಿ ಹಿಂದೂ ಹೆಣ್ಣುಮಕ್ಕಳ ಅತ್ಯಾಚಾರ, ಹ*ತ್ಯೆಗಳು ಮತ್ತು ಅಮಾಯಕ ಗಂಡುಮಕ್ಕಳ ಕೊ*ಲೆಗಳು ಸ್ವಧರ್ಮದವರಿಂದಲೇ ನಡೆದಾಗ ಹಿಂದೂ ಸಜ್ಜನ ಮನಗಳು ಮಿಡಿದರೂ ಸಮಾಜದಲ್ಲಿ ಸ್ಮಶಾನ ಮೌನ. ಆದರೆ ವಿರುದ್ಧ ಸಮುದಾಯದವರಿಂದ ಅತ್ಯಾಚಾರ, ಕೊ*ಲೆಗಳಾದಾಗ, ಕೊ*ಲೆಯಾದವರು ಅಮಾಯಕರಾಗಿರಲೀ, ರೌಡಿಶೀಟರ್ ಯಾ ಸಮಾಜಕಂಟಕರಾಗಿರಲೀ, ಧರ್ಮದ ಭೂತಗಳು ಧಿಗ್ಗನೆದ್ದು ನಿಲ್ಲುತ್ತವೆ. ಸೈತಾನೀ ಶಕ್ತಿಗಳು ವಿಜೃಂಭಿಸುತ್ತವೆ. ತಕಥೈ ಕುಣಿಯುತ್ತವೆ. ಸಮಾಜವನ್ನು ಹೊತ್ತಿ ಉರಿಸಲು ಪಂಜು ಹಿಡಿದು ಮೆರವಣಿಗೆ ಮಾಡುತ್ತವೆ. ವೇದಿಕೆಗಳು ಏಳುತ್ತವೆ, ದ್ವೇಷಭಾಷಣಗಾರರು ನಾ ಮುಂದು ತಾ ಮುಂದು ಎಂದು ಸಾಲುಗಟ್ಟಿ ನಿಲ್ಲುತ್ತಾರೆ. ವೇದಿಕೆ ಹತ್ತಿ ಮೈಕ್ ಹಿಡಿದು ದ್ವೇಷಭಾಷಣ ಮಾಡಲು ಉತ್ಸುಕರಾಗಿ ಸಜ್ಜಾಗುತ್ತಾರೆ. ಕಾಲ್ಪನಿಕ ಕಥೆಗಳನ್ನು ಸೃಷ್ಟಿಸಿ ಭಯದ ಲೋಕವನ್ನು ತೆರೆದಿಡುತ್ತಾರೆ. ಹಿಂದೂ ಖತ್ರೇ ಮೇ ಹೆ ಅಂತಾರೆ. ಸಮಾಜದ ಸಜ್ಜನರ ವಿವೇಕವನ್ನೂ, ಮನಸ್ಥಿತಿಯನ್ನೂ ಕೆಡಿಸುತ್ತವೆ.

ಈ ಜಾಣಮೌನ, ಉಗ್ರ ಸಂಘರ್ಷಗಳಿಗೆ  ಕಾರಣ ರಾಜಕೀಯ.

ತಮ್ಮ ಧರ್ಮದ ರೌಡಿಶೀಟರ್ ಗಳಾಗಲಿ  ಅಮಾಯಕರಾಗಲಿ ಹಿಂದೂ ಸಮುದಾಯದವರಿಂದ ಕೊ*ಲೆಯಾದಾಗ ಮುಸ್ಲಿಂ ಸಮುದಾಯದವರು ಸಮಾಜದಲ್ಲಿ ದ್ವೇಷದ ದಳ್ಳುರಿ ಉರಿಸುವುದಿಲ್ಲ, ಉರಿಸೋದೂ ಇಲ್ಲ. ಅವರಿಗೆ ತಿಳಿದಿದೆ ತಮ್ಮದು ನಡೆಯೋದೂ ಇಲ್ಲ ಅಂತ. ವಿವೇಕವನ್ನು ತಲೆಯಲ್ಲಿಟ್ಟುಕೊಳ್ಳಬೇಕೇ ಹೊರತು ಕೈಗಳಲ್ಲಿ ಅಲ್ಲ.

ಮುಸ್ಲಿಂ ಧರ್ಮದವರು ಒಂದು ವೇಳೆ ದ್ವೇಷಭಾಷಣಗಳಿಗೆ ವೇದಿಕೆ ಕಲ್ಪಿಸಿದರೆ ಅದಕ್ಕೆ ಅವರ ಸ್ವಧರ್ಮದವರೂ ಬರುವುದಿಲ್ಲ. ಆದರೆ ಹಿಂದೂ ಧರ್ಮದಲ್ಲಿ ದ್ವೇಷಭಾಷಣಗಳಿಗೆ ವಿರಾಮವಿಲ್ಲ. ಅದಕ್ಕೆ ವಿಪರೀತ ಜನಸ್ತೋಮ, ಕಿವಿಗಡಚಿಕ್ಕುವ ಚಪ್ಪಾಳೆಗಳು,  ಕೊಲ್ಲುವ ಕಡಿಯುವ ಸಾಮೂಹಿಕ ಘೋಷಣೆಗಳು.

ಇಲ್ಲಿ ಇನ್ನೊಂದು ಗಮನಿಸಬೇಕಾದ ಸಂಗತಿ…..

ಬೆರಳೆಣಿಕೆಯ ಪ್ರಮಾಣದಲ್ಲಿ ಅನ್ಯಧರ್ಮದವರಿಂದ  ಕುಕೃತ್ಯಗಳು ನಡೆದರೆ, ಹಿಂದೂ ಧರ್ಮದವರಿಂದ ಹಿಂದೂ ಧರ್ಮದವರ ಮೇಲೆ ಅಸಂಖ್ಯಾತ ವಿಕೃತಿಗಳು…. ದೇಶದಾದ್ಯಂತ ನಿತ್ಯ ಅತ್ಯಾಚಾರಗಳು ಕೊಲೆಗಳು.

ಸಮಾಜ ತಜ್ಞರ ವರದಿ ಪ್ರಕಾರ ಅತ್ಯಾಚಾರ ಕೊ*ಲೆಗಳ ವಾರ್ಷಿಕ ಅಂಕಿಅಂಶಗಳನ್ನು ದಿನದ ಸರಾಸರಿ ಲೆಕ್ಕದಲ್ಲಿ ತೆಗೆದರೆ  ಭಾರತದಲ್ಲಿ ಒಂದು ದಿನಕ್ಕೆ 85 ಅತ್ಯಾಚಾರಗಳು 90 ಕೊ*ಲೆಗಳು ನಡೆಯುತ್ತವಂತೆ. ಸಮಾಜದ ಮುನ್ನೆಲೆಗೆ ಬಾರದವು ಬೇಕಾದಷ್ಟಿದೆ ಅಂತೇಳುತ್ತದೆ ಆ ವರದಿ.

ಒಂದೇ ಒಂದು ಮಾತು ನಾನು ಹೇಳಬಯಸುತ್ತೇನೆ…. ಪ್ರತಿನಿತ್ಯ ಅಷ್ಟೊಂದು ಕೊ*ಲೆ ಅತ್ಯಾಚಾರಗಳನ್ನು ಮುಸಲ್ಮಾನರು ಮಾಡಿದ್ದರೆ, ಭಾರತದ ಈ ನೆಲದಲ್ಲಿ ಮುಸಲ್ಮಾನರಿಗೆ  ಉಳಿಗಾಲವಿರುತ್ತಿತ್ತೇ….??? ಯೋಚಿಸಿ.

ಕೊ*ಲೆಗಳನ್ನು ಎಂದೂ ಸಮರ್ಥಿಸಬಾರದು. ಆದರೆ ಸಮಾಜಕಂಟಕರನ್ನು ಈ ದೇಶದ ವ್ಯವಸ್ಥೆ ಬೆಳೆಯಬಿಡುವಾಗ, ಒಂದಲ್ಲ ಒಂದು ದಿನ ವಿರುದ್ಧ ಮನಸ್ಥಿತಿಗಳಿಂದ ಕೊಲೆಗಳೂ ನಡೆಯುತ್ತವೆ. ಒಳ್ಳೆಯವರಿಗೇ ಬದುಕು ಇಲ್ಲದ ಕಾಲವಿದು.

ಭಾರತದ ಜನರು ಬದಲಾಗಬೇಕಾಗಿದೆ. ತಪ್ಪು ಮಾಡಿದವ ಮಾಡಿದ ಅಪರಾಧ ಏನೇ ಆಗಿರಲಿ, ಆತನನ್ನು ಕೊಲ್ಲುವ ಮನೋವಿಕೃತಿಯಿಂದ ಹೊರಬರಬೇಕಾಗಿದೆ. ಅಷ್ಟೇ ಅಲ್ಲ, ಗಂಡು ಸಮಾಜ ಅತ್ಯಾಚಾರದ ಮನೋಪ್ರವೃತ್ತಿಯಿಂದ ಹೊರಬರಬೇಕಾಗಿದೆ. ಜೊತೆಗೆ ಬಹುಮುಖ್ಯವಾಗಿ ಧರ್ಮದ್ವೇಷಗಳು ನಿಲ್ಲಬೇಕಾಗಿದೆ. ಎಲ್ಲಕ್ಕೂ ಕ್ರಮ ಕೈಗೊಳ್ಳಲು ಮೊದಲು ನಮ್ಮ ವ್ಯವಸ್ಥೆ ಸರಿಯಾಗಬೇಕಾಗಿದೆ.

NEET – UG ಪರೀಕ್ಷಾ  ಅಕ್ರಮದ ವಿರುದ್ಧ ಆಗ ತಾನೇ ಉದಯಿಸಿದ್ದ ಕಾಕ್ರೋಚ್ ಜನತಾ ಪಾರ್ಟಿಯ ಮೂಲಕ ಯುವಮಕ್ಕಳು ಮಾಡಿದ್ದ ಪ್ರತಿಭಟನೆ, ಸರಕಾರವನ್ನು ಅಲ್ಲಾಡಿಸಿದ್ದ ಪರಿಯನ್ನು ನಾವು ನೋಡಿದ್ದೇವೆ. ಧ್ವನಿಗಳು ಮೊಳಗಿದರೆ ಪ್ರಭುತ್ವಗಳೂ ನಡುಗುತ್ತವೆ. ಅಂತಿರುವಾಗ ಯುವಸಮುದಾಯದ ಧ್ವನಿಗಳು ಎದ್ದರೆ  ಜನಸಾಮಾನ್ಯರು ಕೊ*ಲೆಗಳನ್ನು ಅತ್ಯಾಚಾರಗಳನ್ನು ಮಾಡಲು, ಧರ್ಮದ್ವೇಷದ ಭಾಷಣಗಳನ್ನು ಬಿಗಿಯಲು  ಹೆದರದಿರುವರೇ? ಅದಕ್ಕಾಗಿ ಮೊತ್ತಮೊದಲು ದೇಶದೆಲ್ಲೆಡೆ ಯುವಸಮುದಾಯ ಜಾಗೃತವಾಗಬೇಕಾಗಿದೆ. ಸರ್ಕಾರದ ನೀತಿಗಳ ವಿರುದ್ಧ ಮಾತ್ರವಲ್ಲ, ಧರ್ಮದ್ವೇಷಗಳ ವಿರುದ್ಧ, ರಾಜಕೀಯ ಸಾಮಾಜಿಕ ವೈಯುಕ್ತಿಕ ಕೊ*ಲೆಗಳ ವಿರುದ್ಧ ಮತ್ತು ಅತ್ಯಾಚಾರಗಳ ವಿರುದ್ಧ ತೊಡೆತಟ್ಟಬೇಕಾಗಿದೆ. ಯುವಶಕ್ತಿ ಒಗ್ಗೂಡಬೇಕಾಗಿದೆ. ಹೆಣ್ಣಾಗಲಿ ಗಂಡಾಗಲಿ, ಒಬ್ಬೊಬ್ಬ ಯುವಮಕ್ಕಳು ಕ್ಯೂಬಾದ ಕ್ರಾಂತಿವೀರ ಅರ್ನೆಸ್ಟೋ ಚೆಗುವೇರಾ ಅಂತಾಗಬೇಕಾಗಿದೆ.

ಜಗತ್ತಿನ ಯಾವುದೇ ಮೂಲೆಯಲ್ಲಿ ನಡೆಯುವ ಅನ್ಯಾಯ ದೌರ್ಜನ್ಯದ ವಿರುದ್ಧ ನೀನು ಧ್ವನಿಯೆತ್ತಿದೆಯಾದರೆ ನೀನಾಗುವೆ ನನ್ನ ಸಂಗಾತಿ ….

ಅರ್ನೆಸ್ಟೋ ಚೆಗುವೇರಾ ಅವರ ಈ ಮಾತುಗಳು ನಮ್ಮ ಯುವಸಮುದಾಯಕ್ಕೆ ಪ್ರೇರಕವಾಗಲಿ

ರೋಶ್ನಿ ಅನಿಲ್‌ ರೊಸಾರಿಯೊ

ಹವ್ಯಾಸಿ ಬರಹಗಾರ್ತಿ.

ಇದನ್ನೂ ಓದಿ- https://kannadaplanet.com/future-of-our-past-towards-a-critique-of-globalisation-and-culture-industry/ “ನಮ್ಮ ಭೂತಕಾಲದ ಭವಿಷ್ಯ: ಜಾಗತೀಕರಣ ಮತ್ತು ಸಂಸ್ಕೃತಿಯ ಉದ್ಯಮೀಕರಣ – ಒಂದು ವಿಮರ್ಶಾತ್ಮಕ ಅವಲೋಕನ”

More articles

Latest article

Most read