ಭೂತದ ಸಿನಿಮಾ’ ನೋಡಲು ಜನರ ಕುತೂಹಲ: ‘ವಿಡಿಯೋ’ Paid ಪ್ರೀಮಿಯರ್ ಗಳು ಸೋಲ್ಡ್ ಔಟ್

ಬೆಂಗಳೂರು ಸೆ 9: ಕನ್ನಡದ ಹಾರರ್ ಸಿನಿಮಾಗಳ ಪೈಕಿ ವಿಭಿನ್ನ ಕಥಾಹಂದರದ ಮೂಲಕ ಕುತೂಹಲ ಮೂಡಿಸಿರುವ ‘ವಿಡಿಯೋ’ ಚಿತ್ರ ಬಿಡುಗಡೆಗೂ ಮುನ್ನವೇ ಸಿನಿಪ್ರಿಯರ ಗಮನ ಸೆಳೆಯುತ್ತಿದೆ. ಸೆಪ್ಟೆಂಬರ್ 11ರಂದು ತೆರೆಗೆ ಬರಲಿರುವ ಸಿನಿಮಾದ Paid Premiere ಶೋಗಳಿಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು ಎಲ್ಲ ಶೋಗಳು ಸೋಲ್ಡ್ ಔಟ್ ಆಗಿದೆ.

‘ವಿಡಿಯೋ’ ಹಾರರ್–ಥ್ರಿಲ್ಲರ್ ಕಥಾಹಂದರ ಹೊಂದಿದ್ದು, 2 ಗಂಟೆ 2 ನಿಮಿಷಗಳ ಅವಧಿಯ ಚಿತ್ರವಾಗಿದೆ. ಸದ್ಯ 3,200ಕ್ಕೂ ಹೆಚ್ಚು ಮಂದಿ BookMyShowನಲ್ಲಿ ಸಿನಿಮಾದ ಬಗ್ಗೆ ಆಸಕ್ತಿ ದಾಖಲಿಸಿದ್ದಾರೆ.

ಸಾಮಾನ್ಯ ಹಾರರ್ ಸಿನಿಮಾಗಳಿಗಿಂತ ವಿಭಿನ್ನವಾಗಿ ‘ವಿಡಿಯೋ’ ಫೌಂಡ್-ಫುಟೇಜ್ ಶೈಲಿಯಲ್ಲಿ ಮೂಡಿಬಂದಿದೆ. ಬೆಂಗಳೂರಿನ ವ್ಲಾಗರ್‌ಗಳ ಗುಂಪೊಂದು ಭಾರತದ ಅತ್ಯಂತ ಭಯಾನಕ ಸ್ಥಳವೊಂದನ್ನು ಅನ್ವೇಷಿಸಲು ತೆರಳುತ್ತದೆ. ಬಳಿಕ ಮೂರು ತಿಂಗಳ ನಂತರ ಅವರ ಕ್ಯಾಮೆರಾಗಳು ದಂಪತಿಯ ಕೈಗೆ ಸಿಗುತ್ತವೆ. ಆ ಕ್ಯಾಮೆರಾಗಳಲ್ಲಿ ಸೆರೆಯಾಗಿರುವ ದೃಶ್ಯಗಳ ಮೂಲಕ ವ್ಲಾಗರ್‌ಗಳಿಗೆ ನಿಜವಾಗಿ ಏನಾಯಿತು ಎಂಬ ಭಯಾನಕ ರಹಸ್ಯ ಬಯಲಾಗುತ್ತದೆ.

ಕ್ಯಾಮೆರಾದಲ್ಲಿ ಸೆರೆಯಾಗಿರುವ ದೃಶ್ಯಗಳು ಎಷ್ಟು ನೈಜ? ಅದರ ಹಿಂದೆ ಅಡಗಿರುವ ರಹಸ್ಯವೇನು? ಎಂಬ ಕುತೂಹಲವೇ ಚಿತ್ರದ ಪ್ರಮುಖ ಆಕರ್ಷಣೆಯಾಗಿದೆ. ಚಿತ್ರತಂಡದ ಮಾಹಿತಿಯಂತೆ, ಸಿನಿಮಾವನ್ನು 12 ಕ್ಯಾಮೆರಾಗಳನ್ನು ಬಳಸಿ ಚಿತ್ರೀಕರಿಸಲಾಗಿದ್ದು, ಫೌಂಡ್-ಫುಟೇಜ್ ಶೈಲಿಯ ಹಾರರ್ ಅನುಭವ ನೀಡುವ ಪ್ರಯತ್ನ ಮಾಡಲಾಗಿದೆ.

‘ಬ್ಲಿಂಕ್’ ಖ್ಯಾತಿಯ ನಿರ್ದೇಶಕ ಶ್ರೀನಿಧಿ ಬೆಂಗಳೂರು ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ನಟ ದೀಕ್ಷಿತ್ ಶೆಟ್ಟಿ ತಮ್ಮ ‘ಧೀ ಸಿನಿಮಾಸ್’ ಬ್ಯಾನರ್‌ನಡಿ ಚಿತ್ರವನ್ನು ನಿರ್ಮಿಸಿದ್ದಾರೆ. ಭರತ್ ಕೆ. ತುಮಕೂರು, ಜೀವನ್ ಶಿವಕುಮಾರ್, ತೇಜಸ್ ಎಸ್.ಎಂ., ಪ್ರಿಯಾ ಜೆ. ಆಚಾರ್, ನಲ್ಮೆ ನಚಿಯಾರ್ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಸೆಪ್ಟೆಂಬರ್ 11ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿರುವ ‘ವಿಡಿಯೋ’, ಕನ್ನಡದ ಹಾರರ್ ಸಿನಿಮಾಗಳಲ್ಲಿ ಹೊಸ ರೀತಿಯ ಅನುಭವ ನೀಡುವ ನಿರೀಕ್ಷೆ ಮೂಡಿಸಿದೆ. ಬಿಡುಗಡೆಗೂ ಮುನ್ನವೇ ಚಿತ್ರದ ಕಥೆ ಮತ್ತು ವಿಭಿನ್ನ ನಿರೂಪಣಾ ಶೈಲಿ ಕುತೂಹಲ ಕೆರಳಿಸಿರುವುದು ಚಿತ್ರತಂಡಕ್ಕೆ ಪ್ಲಸ್ ಪಾಯಿಂಟ್ ಆಗಿದೆ.

More articles

Latest article

Most read