ಕೋಲಾರ: ಕರ್ನಾಟಕ ಟಿಪ್ಪು ಸೆಕ್ಯುಲರ್ ಸೇನೆ ನೇತೃತ್ವದಲ್ಲಿ ಸೌಹಾರ್ಧ ಕರ್ನಾಟಕ ಕನ್ನಡ ರಾಜ್ಯೋತ್ಸವ ದ ಅಂಗವಾಗಿ ನಗರದ ಟಿ ಚೆನ್ನಯ್ಯ ಮಂದಿರದಲ್ಲಿ ನಾಳೆ ಟಿಪ್ಪು ಜಯಂತಿಯನ್ನು ಆಚರಿಸಲಾಗುತ್ತಿದ್ದು ಬಹುಭಾಷಾ ನಟ, ಹಾಗೂ ಸಾಮಾಜಿಕ ಹೋರಾಟಗಾರ ಪ್ರಕಾಶ್ ರಾಜ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟಿಪ್ಪು ಸೇನೆ ಅಧ್ಯಕ್ಷ ಸೈಯದ್ ಆಶಿಫ್ ಉಲ್ಲಾ, ದೇಶಪ್ರೇಮಿ ಟಿಪ್ಪು ಸುಲ್ತಾನರು ಇಂದಿನ ಯುವ ಜನತೆಗೆ ಎಷ್ಟು ಪ್ರಸ್ತುತ ಎಂಬ ವಿಷಯದ ಬಗ್ಗೆ “ಎದ್ದೇಳು ಕರ್ನಾಟಕ” ರಾಜ್ಯ ಸಂಚಾಲಕ ಕೆ ಎನ್ ಅಶೋಕ್, ಮತ್ತು ಪ್ರಜಾತಂತ್ರದ ಇಂದಿನ ಬಿಕ್ಕಟ್ಟು ಕನ್ನಡಿಗರ ಹೊಣೆಗಾರಿಕೆ ಎಂಬ ವಿಷಯದ ಬಗ್ಗೆ ಪ್ರಗತಿಪರ ಚಿಂತಕ ಹೋರಾಟಗಾರ ಶಿವಸುಂದರ್ ಮಾತನಾಡಲಿದ್ದಾರೆ ಎಂದು ತಿಳಿಸಿದರು.
ಅಂಜುಮನ್ ಇಸ್ಲಾಮಿಯ ಅಧ್ಯಕ್ಷ ಜಮೀರ್ ಅಹಮದ್ ರವರು ವಹಿಸಲಿರುವ ಸಮಾರಂಭದಲ್ಲಿ, ಭಾರತೀಯ ದಲಿತ ಸೇನೆ ಸಂಸ್ಥಾಪಕ ಅಧ್ಯಕ್ಷ ದಲಿತ್ ನಾರಾಯಣಸ್ವಾಮಿ,, ಎದ್ದೇಳು ಕರ್ನಾಟಕ ಸಂಘಟನೆಯ ಜಿಲ್ಲಾ ಸಮನ್ವಯಕಾರ ಕಿತ್ತಂಡೂರು ವೆಂಕಟರಾಮ್, ಸಲ್ಮಾನ್ , ಆದಿಲ್, ಇಲ್ಯಾಸ್ ಅಹಮದ್, ಸೈಯದ್ ಅಸಾದುಲ್ಲಾ ಉಪಸ್ಥಿತರಿರುವರು.

