‘ಪ್ರೇಮದ ಊರಲಿ’ ಗೆಲುವಿಗೆ ಯಶ್ ಮೆಚ್ಚುಗೆ: ಸಣ್ಣ ಸಿನಿಮಾಗಳ ಯಶಸ್ಸೇ ಕನ್ನಡ ಚಿತ್ರರಂಗದ ದೊಡ್ಡ ಶಕ್ತಿ!

ಬೆಂಗಳೂರು, ಅ.16: ಕನ್ನಡ ಚಿತ್ರರಂಗ ಬೆಳೆಯಬೇಕಾದರೆ ದೊಡ್ಡ ಬಜೆಟ್ ಸಿನಿಮಾಗಳಷ್ಟೇ ಅಲ್ಲ, ಸಣ್ಣ ಬಜೆಟ್‌ನ ಉತ್ತಮ ಚಿತ್ರಗಳೂ ಗೆಲ್ಲಬೇಕು. ಹೊಸ ಪ್ರತಿಭೆಗಳಿಗೆ ಅವಕಾಶ ಸಿಗಬೇಕು. ಕನ್ನಡ ಸಿನಿಮಾಗಳು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುವುದರ ಜೊತೆಗೆ ನಮ್ಮ ಚಿತ್ರರಂಗದ ಅಡಿಪಾಯವೂ ಗಟ್ಟಿಯಾಗಬೇಕು ಎಂದು ರಾಕಿಂಗ್ ಸ್ಟಾರ್ ಯಶ್ ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರಿನಲ್ಲಿ ಗುರುವಾರ ನಡೆದ ಬಹುನಿರೀಕ್ಷಿತ ‘ರಾಮಾಯಣ’ ಚಿತ್ರದ ಎರಡನೇ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಯಶ್, ಇತ್ತೀಚೆಗೆ ಭರ್ಜರಿ ಯಶಸ್ಸು ಕಂಡಿರುವ ಕನ್ನಡದ ‘ಪ್ರೇಮದ ಊರಲಿ’ ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ಚಿತ್ರದ ಯಶಸ್ಸು ಕನ್ನಡ ಚಿತ್ರರಂಗಕ್ಕೆ ಹೊಸ ಭರವಸೆ ಮತ್ತು ಉತ್ಸಾಹ ನೀಡಿದೆ ಎಂದು ಸಂತಸ ವ್ಯಕ್ತಪಡಿಸಿದರು.

‘ಪ್ರೇಮದ ಊರಲಿ’ ಚಿತ್ರತಂಡದ ಕಣ್ಣಲ್ಲಿ ಖುಷಿ ಕಂಡೆ!

‘ಪ್ರೇಮದ ಊರಲಿ’ ಚಿತ್ರದ ಯಶಸ್ಸನ್ನು ವಿಶೇಷವಾಗಿ ಪ್ರಸ್ತಾಪಿಸಿದ ಯಶ್, ಚಿತ್ರತಂಡದ ಸದಸ್ಯರನ್ನು ಭೇಟಿಯಾದ ಸಂದರ್ಭವನ್ನು ಹಂಚಿಕೊಂಡರು.

“ಕನ್ನಡ ಚಿತ್ರರಂಗದಲ್ಲಿ ‘ಪ್ರೇಮದ ಊರಲಿ’ ಸಿನಿಮಾ ಇಷ್ಟು ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದೆ. ನಾನು ಈಗಷ್ಟೇ ಆ ಚಿತ್ರವನ್ನು ಮಾಡಿದವರನ್ನು ಭೇಟಿಯಾದೆ. ಅವರ ಕಣ್ಣುಗಳಲ್ಲಿ ಖುಷಿಯನ್ನು ನೋಡಿದೆ. ಅದು ನನಗೆ ತುಂಬಾ ಸಂತೋಷ ನೀಡಿತು” ಎಂದು ಹೇಳಿದರು.

ಕನ್ನಡ ಪ್ರೇಕ್ಷಕರು ಸಣ್ಣ ಬಜೆಟ್‌ನ ಚಿತ್ರವೊಂದನ್ನು ದೊಡ್ಡ ಮಟ್ಟದಲ್ಲಿ ಗೆಲ್ಲಿಸಿರುವುದು ಇಡೀ ಚಿತ್ರರಂಗಕ್ಕೆ ಸ್ಫೂರ್ತಿಯಾಗಿದೆ. ಇಂತಹ ಯಶಸ್ಸುಗಳು ಮತ್ತಷ್ಟು ಉತ್ತಮ ಸಿನಿಮಾಗಳನ್ನು ನಿರ್ಮಿಸಲು ಧೈರ್ಯ ತುಂಬುತ್ತವೆ ಎಂದು ತಿಳಿಸಿದರು.

‘ಹೊರಗಿನ ಗೋಡೆಗಳನ್ನು ಒಡೆಯಬೇಕು, ನಮ್ಮ ಅಡಿಪಾಯವನ್ನೂ ಗಟ್ಟಿಗೊಳಿಸಬೇಕು’

ಕನ್ನಡ ಚಿತ್ರರಂಗದ ಭವಿಷ್ಯದ ಬಗ್ಗೆ ಮಾತನಾಡಿದ ಯಶ್, ಸಿನಿಮಾ ಉದ್ಯಮ ಬೆಳೆಯಲು ಎರಡು ಪ್ರಮುಖ ಅಂಶಗಳು ಅಗತ್ಯವೆಂದು ಪ್ರತಿಪಾದಿಸಿದರು.

“ಚಿತ್ರರಂಗಕ್ಕೆ ಎರಡೂ ಬೇಕು. ಒಂದು, ಹೊರಗಡೆ ಹೋಗಿ ಎಲ್ಲೆಲ್ಲಿ ನಮಗೆ ಬೇಲಿಗಳಿವೆಯೋ, ಗೋಡೆಗಳಿವೆಯೋ ಅವುಗಳನ್ನು ಒಡೆಯುವ ಕೆಲಸ ಮಾಡಬೇಕು. ಹಾಗಂತ ನಮ್ಮಲ್ಲಿರುವ ಅಡಿಪಾಯವನ್ನೂ ಗಟ್ಟಿಮಾಡಿಕೊಳ್ಳಬೇಕು” ಎಂದರು.

ಹೊಸ ಪ್ರತಿಭಾವಂತ ನಾಯಕರು, ನಿರ್ದೇಶಕರು ಚಿತ್ರರಂಗಕ್ಕೆ ಬರಬೇಕು. ಕಡಿಮೆ ಬಜೆಟ್‌ನಲ್ಲಿಯೂ ಉತ್ತಮ ಕಥೆ ಮತ್ತು ಗುಣಮಟ್ಟದ ಸಿನಿಮಾಗಳನ್ನು ನಿರ್ಮಿಸಿ ಯಶಸ್ಸು ಸಾಧಿಸಬೇಕು ಎಂದು ಆಶಿಸಿದರು.

“ಕನ್ನಡಿಗರು ‘ಪ್ರೇಮದ ಊರಲಿ’ ಚಿತ್ರಕ್ಕೆ ದೊಡ್ಡ ಯಶಸ್ಸು ನೀಡಿದ್ದಾರೆ. ಅದು ನಮಗೆ ಧೈರ್ಯ ನೀಡುತ್ತದೆ. ಮತ್ತಷ್ಟು ಉತ್ಸಾಹ ತುಂಬುತ್ತದೆ” ಎಂದು ಯಶ್ ಸಂತಸ ವ್ಯಕ್ತಪಡಿಸಿದರು.

‘ಭಾರತೀಯ ಸಿನಿಮಾ ಜಾಗತಿಕ ಮಟ್ಟಕ್ಕೆ ಹೋಗಬೇಕು’

‘ರಾಮಾಯಣ’ ಚಿತ್ರದ ಟ್ರೈಲರ್ ಬಿಡುಗಡೆ ಬಳಿಕ ಮಾತನಾಡಿದ ಯಶ್, ಭಾರತೀಯ ಚಿತ್ರರಂಗವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಪ್ರಯತ್ನಗಳಿಗೆ ಪ್ರೇಕ್ಷಕರ ಬೆಂಬಲ ಅಗತ್ಯವೆಂದು ಹೇಳಿದರು.

ದೊಡ್ಡ ಯೋಜನೆಗಳನ್ನು ಕೈಗೆತ್ತಿಕೊಳ್ಳುವವರ ಪರಿಶ್ರಮವನ್ನು ಗೌರವಿಸಬೇಕು. ಕೆಲವೊಮ್ಮೆ ಹೊಸ ಪ್ರಯೋಗಗಳನ್ನು ಮಾಡಲು ಗಡಿಗಳನ್ನು ದಾಟಬೇಕಾಗುತ್ತದೆ. ಅಂತಹ ಪ್ರಯತ್ನಗಳಲ್ಲಿ ಸೋಲು-ಗೆಲುವು ಎದುರಾಗಬಹುದು. ಆದರೆ, ಅವುಗಳ ಮಹತ್ವವನ್ನು ಕೇವಲ ಬಾಕ್ಸ್ ಆಫೀಸ್ ಫಲಿತಾಂಶದಿಂದ ಅಳೆಯಬಾರದು ಎಂಬ ಸಂದೇಶ ನೀಡಿದರು.

“ಕೆಲವೊಮ್ಮೆ ಗಡಿ ದಾಟಿ, ಪಣಕ್ಕಿಟ್ಟು, ಸೋಲು-ಗೆಲುವನ್ನು ಮೀರಿ ಕೆಲವು ಕೆಲಸಗಳನ್ನು ಮಾಡಬೇಕಾಗುತ್ತದೆ. ಆ ಪ್ರಯತ್ನಗಳು ಇತಿಹಾಸದಲ್ಲಿ ಮೈಲಿಗಲ್ಲಾಗುತ್ತವೆ. ಕೆಲವೊಮ್ಮೆ ಮುಂದೆ ಬರುವವರಿಗೆ ಮೆಟ್ಟಿಲಾಗುತ್ತವೆ. ಆ ಮೆಟ್ಟಿಲು ಕೆತ್ತುವ ಕೆಲಸವನ್ನು ಪ್ರತಿಯೊಬ್ಬರೂ ಮಾಡಬೇಕು” ಎಂದು ಅಭಿಪ್ರಾಯಪಟ್ಟರು.

‘ವಿಎಫ್‌ಎಕ್ಸ್ ಹೀಗಿರಬೇಕಿತ್ತು, ನಟರು ಹಾಗಿರಬೇಕಿತ್ತು ಎನ್ನುವುದು ಸುಲಭ’

ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಸಿನಿಮಾಗಳ ಕುರಿತು ವ್ಯಕ್ತವಾಗುತ್ತಿರುವ ಟೀಕೆಗಳ ಬಗ್ಗೆಯೂ ಯಶ್ ಪ್ರತಿಕ್ರಿಯಿಸಿದರು.

“ಸಾಮಾಜಿಕ ಮಾಧ್ಯಮಗಳಲ್ಲಿ ನಾನು ನೋಡುತ್ತಲೇ ಇರುತ್ತೇನೆ. ವಿಎಫ್‌ಎಕ್ಸ್ ಹಾಗಿರಬೇಕಿತ್ತು, ಆ ನಟ ಹೀಗಿರಬೇಕಿತ್ತು, ಆ ನಟಿ ಹೀಗಿರಬೇಕಿತ್ತು ಎಂದು ಹೇಳುತ್ತಿರುತ್ತಾರೆ. ಆದರೆ, ಒಂದು ಸಿನಿಮಾ ನಿರ್ಮಾಣದ ಹಿಂದೆ ಎಷ್ಟೊಂದು ಪರಿಶ್ರಮ ಇರುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು” ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ದೊಡ್ಡ ಕನಸುಗಳನ್ನು ನನಸಾಗಿಸಲು ಚಿತ್ರತಂಡಗಳು ಸಾಕಷ್ಟು ಸವಾಲುಗಳನ್ನು ಎದುರಿಸುತ್ತವೆ. ಉದ್ದೇಶ ಒಳ್ಳೆಯದಾಗಿದ್ದರೆ ಅಂತಹ ಪ್ರಯತ್ನಗಳಿಗೆ ಎಲ್ಲರೂ ಬೆಂಬಲವಾಗಿ ನಿಲ್ಲಬೇಕು ಎಂದು ಹೇಳಿದರು.

ಇದೇ ವೇಳೆ, ‘ಟಾಕ್ಸಿಕ್’ ಚಿತ್ರದ ಬಾಕ್ಸ್ ಆಫೀಸ್ ಹಿನ್ನಡೆಯ ಕುರಿತ ಟೀಕೆಗಳಿಗೆ ಯಶ್ ಪರೋಕ್ಷವಾಗಿ ಪ್ರತಿಕ್ರಿಯಿಸಿದ್ದಾರೆ ಎಂಬ ಚರ್ಚೆಯೂ ವ್ಯಕ್ತವಾಗಿದೆ.

‘ನಾನು ಜನರನ್ನು ಒಗ್ಗೂಡಿಸುವ ಕೆಲಸ ಮಾಡುತ್ತೇನೆ’

ಸಿನಿಮಾಗಳ ವಿಚಾರದಲ್ಲಿ ಅನಗತ್ಯ ಟೀಕೆ ಮತ್ತು ಭಿನ್ನಾಭಿಪ್ರಾಯಗಳಿಗೆ ಅವಕಾಶ ನೀಡಬಾರದು ಎಂದು ಯಶ್ ಮನವಿ ಮಾಡಿದರು. ಯಶ್ ಯಾವತ್ತೂ ಜನರನ್ನು ಒಟ್ಟಿಗೆ ಸೇರಿಸುವುದಕ್ಕೆ ಪ್ರಯತ್ನ ಮಾಡುತ್ತಾನೆ. ಯಾರೂ ಯಾರ ಮೇಲೂ ಬೇಸರ ಮಾಡಿಕೊಳ್ಳಬೇಡಿ. ಉದ್ದೇಶ ಸರಿಯಾಗಿದ್ದರೆ ಎಲ್ಲರೂ ಜೊತೆಯಾಗಿ ನಿಲ್ಲಬೇಕು . ‘ರಾಮಾಯಣ’ ಚಿತ್ರವನ್ನು ಇಡೀ ಕುಟುಂಬ ಒಟ್ಟಿಗೆ ಕುಳಿತು ವೀಕ್ಷಿಸಬಹುದು ಎಂದು ತಿಳಿಸಿದ ಅವರು, ಯಾವ ರೀತಿಯ ಸಿನಿಮಾವನ್ನು ಯಾವ ಪ್ರೇಕ್ಷಕರಿಗಾಗಿ ನಿರ್ಮಿಸಬೇಕು ಎಂಬ ಅರಿವು ಚಿತ್ರತಂಡಕ್ಕಿದೆ ಎಂದರು.

‘ರಾಮಾಯಣ’ ಟ್ರೈಲರ್ ಬಿಡುಗಡೆಗೆ ತಾರೆಯರ ಮೆರುಗು

ಬೆಂಗಳೂರಿನಲ್ಲಿ ನಡೆದ ‘ರಾಮಾಯಣ’ ಚಿತ್ರದ ಎರಡನೇ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಬಾಲಿವುಡ್ ನಟ ರಣಬೀರ್ ಕಪೂರ್, ನಟಿ ಸಾಯಿ ಪಲ್ಲವಿ, ನಿರ್ದೇಶಕ ನಿತೀಶ್ ತಿವಾರಿ, ಯಶ್ ಪತ್ನಿ ರಾಧಿಕಾ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

More articles

Latest article

Most read