ಗಾಯಕ ಸೋನು ನಿಗಮ್‌ ಕಾರ್ಯಕ್ರಮ ರದ್ದು: ಬಹಿರಂಗ ಕ್ಷಮೆಯಾಚನೆಗೆ ನಾರಾಯಣಗೌಡ ಪಟ್ಟು

ಬೆಂಗಳೂರು: ಕನ್ನಡಿಗರ ಭಾಷಾಭಿಮಾನವನ್ನು ಅವಮಾನಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಗಾಯಕ ಸೋನು ನಿಗಮ್‌ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಎಚ್ಚರಿಕೆ ನೀಡಿದ ಬೆನ್ನಲ್ಲೇ, ಬೆಂಗಳೂರಿನ ಭಾರತೀಯ ಸಿಟಿ ಮಾಲ್‌ನಲ್ಲಿ ಅ 22ರಂದು ನಡೆಯಬೇಕಿದ್ದ ಸಂಗೀತ ಕಾರ್ಯಕ್ರಮ ರದ್ದಾಗಿದೆ.

ಸೋನು ನಿಗಮ್‌ ಕನ್ನಡಿಗರ ಕ್ಷಮೆಯಾಚಿಸಲೇಬೇಕು ಎಂದು ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಪಟ್ಟು ಹಿಡಿದಿದ್ದಾರೆ. ಕೇವಲ ಹೇಳಿಕೆ ನೀಡುವುದಲ್ಲ, ಕನ್ನಡದ ನೆಲಕ್ಕೆ ಬಂದು ಕನ್ನಡಿಗರ ಮುಂದೆ ಬಹಿರಂಗವಾಗಿ ಕ್ಷಮೆಯಾಚಿಸಿದ ಬಳಿಕವೇ ಕರ್ನಾಟಕಕ್ಕೆ ಕಾಲಿಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಇದೇ ವೇಳೆ, ಕಾರ್ಯಕ್ರಮ ಆಯೋಜಿಸಿದ್ದ ಭಾರತೀಯ ಸಿಟಿ ಮಾಲ್‌ ವಿರುದ್ಧವೂ ನಾರಾಯಣಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರವೇ ಎಚ್ಚರಿಕೆಯ ಬೆನ್ನಲ್ಲೇ ಕಾರ್ಯಕ್ರಮ ರದ್ದಾಗಿದ್ದು ಸೋನು ನಿಗಮ್‌ ಬಹಿರಂಗ ಕ್ಷಮೆಯಾಚಿಸುವವರೆಗೂ ತಮ್ಮ ನಿಲುವಿನಿಂದ ಹಿಂದೆ ಸರಿಯುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ನಾರಾಯಣಗೌಡ ನೀಡಿದ್ದಾರೆ.

More articles

Latest article

Most read