ಅಯ್ಯೋ.. ಇದೊಳ್ಳೆ ರಾಮಾಯಣ..!

ಮತ್ತೊಂದು ಮಗ್ಗುಲು

ಸಿನಿಮಾ ರಾಮಾಯಣದ ಕಥೆ ಇನ್ನೂ ಪೂರ್ತಿಗೊಂಡೇ ಇಲ್ಲ. ಭಾಗ 2 ಇನ್ನೂ ಬರಲು ಬಾಕಿ ಇದೆ. ಅದಾಗಲೇ ಕೆಲವರು ಜಾಲತಾಣಗಳಲ್ಲಿ ಈ ಸಿನಿಮಾ ನೋಡಬೇಡಿ ಮಕ್ಕಳಿಗಂತೂ ತೋರಿಸಲೇ ಬೇಡಿ. ತೋರಿಸಿದರೆ ಮಕ್ಕಳು ದುಷ್ಟ ರಾವಣನನ್ನೇ ಹೀರೋ ಎಂದು ಭಾವಿಸುತ್ತಾರೆ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ. ಪೂರ್ತಿ ಸಿನಿಮಾ ಬಂದ ಮೇಲಷ್ಟೇ ಇದು ಕಮ್ಯುನಿಷ್ಟೊ ಇಲ್ಲಾ ಫ್ಯಾಸಿಸ್ಟೋ ಎಂದು ತೀರ್ಮಾನಿಸಬಹುದೇ ಹೊರತು ಅದಕ್ಕೂ ಮೊದಲಲ್ಲ – ಶಂಕರ್‌ ಸೂರ್ನಳ್ಳಿ, ಬರಹಗಾರರು.

ಇದೀಗ ಎಲ್ಲೆಡೆ ರಾಮಾಯಣದ್ದೇ ಸುದ್ದಿ. ಸಾವಿರಾರು ಕೋಟಿ ಸುರಿದು ಮಾಡಿದ ಭರ್ಜರಿ ಸಿನಿಮಾ ಕುರಿತಂತೆ ಹೊಗಳಿಕೆ ತೆಗಳಿಕೆಗಳ ಮೂಟೆಯೇ ಎದುರಾಗಿದೆ. ನಮ್ಮ ಪರಂಪರೆಗೂ ರಾಮಾಯಣಕ್ಕೂ ಒಂದು ಭಾವನಾತ್ಮಕ ಸಂಬಂಧವಿದೆ. ಎಂಭತ್ತರ ದಶಕದಲ್ಲಿ ರಾಮಾನಂದ ಸಾಗರ್ ರವರ ರಾಮಾಯಣ ಧಾರಾವಾಹಿ ಆರಂಭಗೊಂಡಾಗ ಕೇವಲ ಹಿಂದೂಗಳಲ್ಲದೆ ಮುಸ್ಲಿಮ್, ಕ್ರಿಶ್ಚಿಯನ್ನರೂ ಕೂಡ  ಬೆಳಿಗ್ಗೆ 9ಕ್ಕೆ ಟೀವಿ ಮುಂದೆ ಹಾಜರಿರುತ್ತಿದ್ದರು. ಜೊತೆಗೆ ಆ ಕಾಲದಲ್ಲಿ ಟಿವಿಗಳಿಲ್ಲದ ಬಹುತೇಕ ನೆರೆಹೊರೆಯ ಮಂದಿಗೆ ಯಾವ ಪೂರ್ವಗ್ರಹಗಳನ್ನಿಟ್ಟುಕೊಳ್ಳದೆ ಧಾರಾವಾಹಿ ನೋಡಲು ಮುಕ್ತ ಅವಕಾಶ ಒದಗಿಸುತ್ತಿದ್ದರು. ಅನೇಕರು ಧಾರಾವಾಹಿ ಆರಂಭಕ್ಕೆ ಮುನ್ನ ಸ್ನಾನ ಮಾಡಿ ಟಿ.ವಿಗೆ ಪೂಜೆ ಮಾಡಿ ಆರತಿ ಬೆಳಗಿ ಕುಳಿತುಕೊಳ್ಳುತ್ತಿದ್ದರು. ಧಾರಾವಾಹಿಯ ಸಮಯದಲ್ಲಿ ತಪ್ಪಿ ಕರೆಂಟ್ ಹೋದರೆ ಕರೆಂಟ್ ನವನಿಗೆ ಬಾಯಿಗೆ ಬಂದಂತೆ  ಶಾಪ ಹಾಕುತ್ತಿದ್ದರು. ರಾಮಾಯಣದ ಪ್ರಭಾವವೇ ಅಂತಾದ್ದು.

ರಾಮಾಯಣದ ರಾಮನ ಪಾತ್ರಧಾರಿ  ಅರುಣ್ ಗೋವಿಲ್ ಕೆಲ ವರ್ಷದ ಹಿಂದೆ ಈ ಟಿವಿ ಷೋ ಒಂದರಲ್ಲಿ ಹೇಳಿಕೊಂಡಿದ್ದರು ಯಾವುದೋ  ಬೇರೆ ಸಿನಿಮಾ ಶೂಟಿಂಗ್ ಗಾಗಿ ದಕ್ಷಿಣ ಭಾರತದ ಒಂದೆಡೆ ಅವರು ಹೋಗಿದ್ದಾಗಿನ ಘಟನೆ ಅದು. ಸಿಗರೇಟ್ ಅಭ್ಯಾಸವಿದ್ದ ಅವರು ಒಳಗಡೆ ಮರೆಯಲ್ಲಿ  ಸಿಗರೇಟ್ ಸೇದುತ್ತಿದ್ದುದನ್ನ ನೋಡಿದ ವ್ಯಕ್ತಿಯೊಬ್ಬ ಕೋಪದಲ್ಲಿ ಬಾಯಿಗೆ ಬಂದಂತೆ ಬೈದಿದ್ದನಂತೆ. ಭಾಷೆ ತಿಳಿಯದ ಅವರಿಗೆ ಬೈಗುಳ ಅರ್ಥ ಆಗದಿದ್ದರೂ ಬೈಗುಳದ ಹಿಂದಿನ ಕೋಪ ಅರ್ಥವಾಗಿ ನಂತರ ಸಿಗರೇಟನ್ನೇ ಬಿಟ್ಟು ಬಿಟ್ಟರಂತೆ. ಅವರಾಗಲಿ  ಸೀತಾ ಪಾತ್ರಧಾರಿ ದೀಪಿಕಾರಾಗಲೀ  ಎದುರು ಸಿಕ್ಕಾಗ ಜನ ಕಾಲಿಗೆ ಬೀಳುವುದೆಲ್ಲ ಆ ದಿನಗಳಲ್ಲಿ ಮಾಮೂಲಿನ ವಿಚಾರವಾಗಿತ್ತು.

ಇವತ್ತು ಬಹು ನಿರೀಕ್ಷಿತ  ಹೊಸ ರಾಮಾಯಣ ಬಂದಿದೆ. ಇದಕ್ಕೂ ಮೊದಲು ಇದೇ ರೀತಿ ಆದಿ ಪುರುಷ ಹೆಸರನಲ್ಲಿ ದೊಡ್ಡ ದೊಡ್ಡ ತಾರಾ ಗಣಗಳ ರಾಮಾಯಣ ಬಂದಿದ್ದರೂ ರಾಮಾಯಣ ಎಂಬ ಹೆಸರಿನಲ್ಲೇ  ಬಂದಿರುವ ಇವತ್ತಿನ ಸಿನಿಮಾ ಅತಿ ಹೆಚ್ಚು ಸದ್ದು ಮಾಡುತ್ತಿದೆ

ರಾಮಾಯಣದ ವಿಲನ್ ರಾವಣನನ್ನು ರಾಮನಿಗಿಂತ ವೈಭವೀಕರಿಸಲಾಗಿದೆ, ರಾಕ್ಷಸ ಸ್ತ್ರೀಯರನ್ನು ಕೋರೆ ದಾಡಿಯ ಕುರೂಪಿ ರಾಕ್ಷಸರನ್ನಾಗಿ ತೋರಿಸದೆ ಸೌಂದರ್ಯದ ಖನಿಗಳನ್ನಾಗಿ ತೋರಿಸಿದೆ. ದೇವತೆ ದಾನವರ ನಡುವಿನ ಕಥೆಯನ್ನು ಶೋಷಿತರು ಮತ್ತು ಶೋಷಕರು ಎನ್ನುವ ರೀತಿಯಲ್ಲಿ ಚಿತ್ರಿಸಲಾಗಿದೆ. ಮೂಲ ವಾಲ್ಮೀಕಿ ರಾಮಾಯಣದ ಛಾಯೆಯೇ ಇಲ್ಲದ ಇದೊಂದು ಕಮ್ಯೂನಿಷ್ಟ್ ರಾಮಾಯಣ ಎಂಬುದು ಮಹಾಭಾರತ ಸೀರಿಯಲ್ ನ ಭೀಷ್ಮ ಖ್ಯಾತಿಯ ಮುಖೇಶ್ ಖನ್ನರಾದಿಯಾಗಿ ಹಲವರು ಅಲವತ್ತು ಕೊಂಡಿದ್ದಾರೆ. 

ತಿಣುಕಿದನು ಫಣಿರಾಯ ರಾಮಾಯಣದ ಕವಿಗಳ ಭಾರದಲಿ.. ಕುಮಾರ ವ್ಯಾಸನ ಗದುಗಿನ ಭಾರತದ ಪೀಠಿಕೆಯಲ್ಲಿ ಬರುವ ಮಾತಿದು. ರಾಮಾಯಣ ಮಹಾಕಾವ್ಯ ಶತಮಾನಗಳ ಕಾಲದಿಂದ ಅನೇಕ ಬೇರೆ ಬೇರೆ ಆವೃತ್ತಿಗಳಲ್ಲಿ ಪುನರ್ ರಚನೆಗೊಂಡಿದೆ. ವಿಶೇಷವೆಂದರೆ ದೇಶದಲ್ಲಿ ಇದೀಗ ಹೆಚ್ಚು ಜನಪ್ರಿಯವಿರುವ ರಾಮಾಯಣ ಕಥಾ ಪ್ರಸಂಗವು ಬಹುತೇಕ ತುಳಸಿದಾಸರ ರಾಮಚರಿತ ಮಾನಸದ  ಕಥೆಯಾಧಾರಿತವೇ ಹೊರತು ಮೂಲ  ವಾಲ್ಮೀಕಿ ರಾಮಾಯಣದ್ದಲ್ಲ.  ಇದಕ್ಕೂ ಮುನ್ನ ಜೈನ ರಾಮಾಯಣವಿದೆ, ಬೌದ್ಧ ರಾಮಾಯಣವಿದೆ, ವಿಚಿತ್ರ ವಿಚಿತ್ರ ಕಥಾ ತಿರುವುಗಳಿರುವ ಸುಮಾರು ಮುನ್ನೂರಕ್ಕೂ ಹೆಚ್ಚು ರಾಮಾಯಣದ ಅವತರಣಿಕೆಗಳು ಚಾಲ್ತಿಯಲ್ಲಿವೆ ಎನ್ನುವುದು ವಾಸ್ತವ. ಇಂದಿನ ಅಧುನಿಕ ಕಾಲದಲ್ಲಿ  ನಮ್ಮ ಕನ್ನಡದಲ್ಲೇ ಕುವೆಂಪುರವರ ರಾಮಾಯಣ ದರ್ಶನಂ ನಿಂದ ಹಿಡಿದು ವೀರಪ್ಪ ಮೊಯ್ಲಿಯವರ ಶ್ರೀ ರಾಮಾಯಣ ಮಹಾನ್ವೇಷಣಂ (ಇದನ್ನು ಬರೆಯುವಾಗ ಅವರು ಶಾಖಾಹಾರ ವೃತದಲ್ಲಿದ್ದರಂತೆ. ಅದೇ ರೀತಿ, ಮೊಯ್ಲಿಯವರ ರಾಮಾಯಣದಲ್ಲಿ ಲಕ್ಷ್ಮಣ ನಾಯಕನಂತೆ ಕುವೆಂಪುರವರ ರಾಮ ಶಂಭೂಕನನ್ನು ಕೊಲ್ಲುವುದಿಲ್ಲ) ಮತ್ತು ಇವತ್ತಿನ ಬಗೆ ಬಗೆಯ ಸಿನಿಮಾ ರಾಮಾಯಣದ ವರೆಗೆ ರೂಪಾಂತರಗಳಾಗಿವೆ. ಅದೇ ರೀತಿ ಇವತ್ತಿನ ಈ ರಾಮಾಯಣ ಸಿನಿಮಾವು ‘ಅದ್ಭುತ ರಾಮಾಯಣ ‘ ಎನ್ನುವ ಕಥೆಯಿಂದ ಪ್ರೇರಿತ ಎನ್ನುವುದು ಸಿನಿಮಾ ತಯಾರಕರ ಅಂಬೋಣ. ಅದ್ಭುತ ರಾಮಾಯಣದಲ್ಲಿ ದಶಕಂಠನ ಬಳಿಕ ಶತಕಂಠ ಸಹಸ್ರಕಂಠ ರಾವಣರ ಕತೆ ಬರುತ್ತದಲ್ಲದೆ ವಿಶೇಷವೆಂದರೆ ಇವರನ್ನು ಎದುರಿಸೋದು ನಮ್ಮ ಸೀತಾಮಾತೆ.

ಅನೇಕರು ಪ್ರಸ್ತಾಪಿಸುವಂತೆ ರಮಾನಂದ ಸಾಗರರ ರಾಮಾಯಣವನ್ನು ಈ ಸಿನಿಮಾ ರಾಮಾಯಣಕ್ಕೆ ಖಂಡಿತ ಹೋಲಿಸಲಾಗದು. ಯಾಕೆಂದರೆ, ಅದೊಂದು ಮೆಗಾ ಧಾರಾವಾಹಿ. ರಾಮಾಯಣದ ಕಥೆಗಳೆಲ್ಲವನ್ನೂ ಬೇಕಾದಂತೆ ಎಳೆದು ಆರಾಮವಾಗಿ ತುರುಕಿಸಿ ವಿವರಿಸ ಹೋಗಬಹುದಾದಂತಹ ಧಾರಾಳ ಅವಕಾಶಗಳು ಆ ಧಾರಾವಾಹಿಯಲ್ಲಿದ್ದರೆ ಸೀಮಿತ ಅವಧಿಯ ವಾಣಿಜ್ಯ ಉದ್ದೇಶದ ಈ ಸಿನಿಮಾ ಚಿತ್ರಣಕ್ಕೆ ಈ ಸಾಧ್ಯತೆ ಇರುವುದಿಲ್ಲ. ಸಿನಿಮಾ ಎರಡು ಭಾಗಗಳಲ್ಲಿ ಬರುವುದಿದ್ದರೂ ಕೂಡ ಕೇವಲ ಎರಡು ಮೂರು ಗಂಟೆಗಳಲ್ಲಿ ಪ್ರಚಲಿತವಿರುವ ಹಲವಾರು ರಾಮಾಯಣದ ಸಿಕ್ಕುಗಳನ್ನು ಬಿಡಿಸಿ ಹೊಸತಾಗಿ ಎಲ್ಲರಿಗೊಪ್ಪುವ ಕತೆ ಹೆಣೆದು ಎಲ್ಲವನ್ನೂ ವಿವರಿಸ ಹೋಗುವುದು ಕಷ್ಟಸಾಧ್ಯ . ಎಲ್ಲರನ್ನು ಮೆಚ್ಚಿಸಲು ಬರೀ ಸಮರ್ಥನೆಗಳನ್ನೇ ಕಥೆಯಲ್ಲಿ ತುರುಕುತ್ತಾ ಹೋದರೆ ನಿರ್ಮಾಪಕನ ಕಥೆ ಮತ್ತೊಂದು ರಾಮಾಯಣವಾದೀತಷ್ಟೆ!

ಇನ್ನು ಕಥೆಗೆ  ಬರುವುದಾದರೆ ಈ ಸಿನಿಮಾ ರಾಮಾಯಣದ ಕಥೆ ಇನ್ನೂ ಪೂರ್ತಿಗೊಂಡೇ ಇಲ್ಲ. ಭಾಗ 2 ಇನ್ನೂ ಬರಲು ಬಾಕಿ ಇದೆ. ಅದಾಗಲೇ ಕೆಲವರು ಜಾಲತಾಣಗಳಲ್ಲಿ ಈ ಸಿನಿಮಾ ನೋಡಬೇಡಿ ಮಕ್ಕಳಿಗಂತೂ ತೋರಿಸಲೇ ಬೇಡಿ. ತೋರಿಸಿದರೆ ಮಕ್ಕಳು ದುಷ್ಟ ರಾವಣನನ್ನೇ ಹೀರೋ ಎಂದು ಭಾವಿಸುತ್ತಾರೆ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ. ಪೂರ್ತಿ ಸಿನಿಮಾ ಬಂದ ಮೇಲಷ್ಟೇ ಇದು ಕಮ್ಯುನಿಷ್ಟೊ ಇಲ್ಲಾ ಫ್ಯಾಸಿಸ್ಟೋ ಎಂದು ತೀರ್ಮಾನಿಸಬಹುದೇ ಹೊರತು ಅದಕ್ಕೂ ಮೊದಲಲ್ಲ.

ಮೂಲ ರಾಮಾಯಣದಲ್ಲಿನ ಕಥೆಯ ಪ್ರಕಾರ ರಾವಣನು ರಾಮನಿಗಿಂತ ಸಾವಿರಾರು ವರ್ಷ ಹಿರಿಯ. ಶಿವನ ಕುರಿತಾಗಿ ಸಾವಿರಾರು ವರ್ಷ ತಪಸ್ಸು ಮಾಡಿದ್ದ ರಾವಣನ ಈ ತಪೋ ಕಾಲದಲ್ಲಿ ರಾಮನ ಜನನ ಇನ್ನೂ ಆಗಿದ್ದಿರಲಿಲ್ಲ. ಶ್ರೀ ರಾಮನ ಜನನ, ವಿಶ್ವಾಮಿತ್ರರ ಆಹ್ವಾನ, ವಿದ್ಯೆ, ರಾಮ ಲಕ್ಷ್ಮಣರ ಮೂಲಕ ಉಪಟಳ ಮಾಡುವ ರಕ್ಕಸರ ಸಂಹಾರ, ಸೀತಾ ಸ್ವಯಂವರ, ಶೂರ್ಪನಖಾ ಪ್ರಕರಣ  ಇವೆಲ್ಲ ಬಹುತೇಕ ಶ್ರೀರಾಮನ 30-35 ವರ್ಷ ಪ್ರಾಯದ ಕಾಲಘಟ್ಟದೊಳಗೆ ನಡೆದಂತ ಘಟನೆಗಳಾಗಿ ಚಿತ್ರಿತಗೊಂಡಿವೆ. ಈ ಕಾಲದಲ್ಲಿ ರಾವಣ ತನ್ನ  ಎಷ್ಟೋ ʼಸಾಹಸ’ ಗಳೆಲ್ಲ ಮುಗಿಸಿಯಾಗಿತ್ತು. ಇಂತಹ ಹಿರಿಯ ರಾವಣನ ದೊಡ್ಡ ಕಥೆಯನ್ನು ಕಥೆಯ ಆರಂಭದಲ್ಲಿ ತೋರಿಸಹೋದರೆ  ಅದು ಪ್ರಾತಿನಿಧ್ಯತೆ ಎನ್ನಿಸದು..

ರಾಮಾಯಣದಲ್ಲಿ ರಾವಣನ ಪಾತ್ರ ಒಂದು ಬಗೆಯ ಬಿಂದಾಸ್  ನಡೆಯದ್ದು. ಆತ ಆಡಿದ್ದೇ ಆಟ. ಮಾಡಿದ್ದೇ ಕೆಲಸ. ಇಂತಹ ಪಾತ್ರ ಎಲ್ಲೂ ಸಲ್ಲುವಂತಿದ್ದರೆ ರಾಮ -ಸೀತೆಯರದ್ದು ಹಾಗಲ್ಲ.  ಈವಾಗಲೇ ರಾಮನೆಂದರೆ, ಪುರುಷೋತ್ತಮ, ಅವತಾರ ಪುರುಷ,  ದೇವರು ಸಚ್ಚಾರಿತ್ಯದ  ಪ್ರತೀಕ  ಎಂದೆಲ್ಲ ಜನರ ಮನಸಲ್ಲೇ ಅಚ್ಚೊತ್ತಿರುವಾಗ ಆ ನಿರೀಕ್ಷೆಗಳ ಭಾರದ ಹೊರೆ ಹೊತ್ತುಕೊಂಡು ಎಲ್ಲಿ ಲೋಪವಾದೀತೋ ಎಂಬ ಭಯದಿಂದ ಆ ಪಾತ್ರಕ್ಕೆ ಜೀವ ತುಂಬೋದು ಸುಲಭದ ಮಾತಲ್ಲ.  ಈ ಕಾರಣಕ್ಕೇ ಹಲವರಿಗೆ ಸಿನಿಮಾದ ಸೀತಾ ರಾಮರ ಬದಲು ನಮ್ಮ ಯಶ್ ರವರ ಅಬ್ಬರವೇ ಎಲ್ಲೆಡೆ ಆವರಿಸಿರುವಂತೆ ಕಾಣಿಸುವುದು ಸತ್ಯ. ಇದಕ್ಕೆ ಪೂರಕವಾಗಿ ಅವರ ಅಭಿನಯವೂ ಕೂಡ ಅದೇ ರೀತಿ ಇತ್ತು.

ಇನ್ನು ಇದು ಯಾರ ಐಡಿಯಾವೋ ನಾ ಕಾಣೆ. ಖ್ಯಾತ ನಟಿ ಶೋಭನಾ(ಕೈಕಸಿ) (ಆಪ್ತಮಿತ್ರದ ಸೌಂದರ್ಯಾರವರ ನಟನೆ ಮೂಲತ: ಮಲಯಾಳಂ ಮಣಿಚಿತ್ರತ್ತಾಳ್ ಸಿನಿಮಾದ ಇದೇ ಶೋಭನಾರ ಅದ್ಭುತ ನಟನೆಯ ಕಾಪಿ), ಕಾಜೋಲ್ (ಮಂಡೋದರಿ), ರಕುಲ್ ಪ್ರೀತ್ ಸಿಂಗ್ (ಶೂರ್ಪನಖಿ)  ಮೊದಲಾದ ಸುಂದರ ನಟಿಯರನ್ನೆಲ್ಲ ರಾಕ್ಷಸಿ ಪಾತ್ರಗಳಿಗೆ ಆರಿಸಿದ್ದು. ಸಾಂಸ್ಕೃತಿಕವಾಗಿ ಇದೊಂದು ಕ್ರಾಂತಿಕಾರಕ ನಿರ್ಧಾರವೇ ಹೌದು.  ಈ ರಾಕ್ಷಸ ಮತ್ತು ದೇವತೆಗಳು ಮೂಲತ: ದಾಯಾದಿಗಳು. ಪುರಾಣಗಳ ಪ್ರಕಾರ  ಕಶ್ಯಪರ ಪತ್ನಿಯರಾದ  ದಿತಿ ಮತ್ತು ಅದಿತಿಯರ ಮಕ್ಕಳೇ ಈ ದೇವ -ದಾನವರು. ಕೆಟ್ಟ ಮತ್ತು ಒಳ್ಳೆಯ  ಪರಿಕಲ್ಪನೆಯ ದೃಷ್ಟಿಯಿಂದ ಪಾತ್ರಗಳನ್ನು ಕಾವ್ಯಗಳಲ್ಲಿ ಉತ್ಪ್ರೇಕ್ಷಿತವಾಗಿ ಬಿಂಬಿಸಲ್ಪಟ್ಟಿವೆಯೇ ಹೊರತು ದಾಯಾದಿಗಳಲ್ಲಿನ ವಿಪರೀತ ವೈರುಧ್ಯ ವ್ಯತ್ಯಾಸಗಳ ಕಲ್ಪನೆಯೇ ಒಪ್ಪುವಂತದ್ದಲ್ಲ. ಉದಾ – ಹಿಂದೆ ಬಾಹುಬಲಿ ಸಿನಿಮಾದಲ್ಲಿ ನಾಯಕಿ (ತಮನ್ನಾ) ಅಚ್ಯುತ (ಚ್ಯುತಿ ಇಲ್ಲದ) ಳಾಗಿದ್ದರೆ ವಿಲನ್ ಗಳನ್ನು ಗ್ಯಾರೇಜಿನ ಕಪ್ಪು ಆಯಿಲ್ ನಲ್ಲಿ ಮಿಂದೆದ್ದ ಕೊಳಕು ಹಲ್ಲಿನ  ಕ್ರಿಮಿಗಳಂತೆ ತೋರಿಸಿದ್ದರು. ಆದರೆ ಈ ರಾಮಾಯಣದ ಪಾತ್ರ ರಚನೆಯಲ್ಲಿ ಸಹಜತೆಗೆ ಒತ್ತು ನೀಡಲಾಗಿದೆ ಎನ್ನಬಹುದು

ಅಸಲಿಗೆ ರಾವಣನನ್ನು ವೈಭವೀಕರಿಸಿ ರಾಮನನ್ನು ಸಣ್ಣಗಾಗಿಸುವ ಉದ್ದೇಶವೇ ಈ ರಾಮಾಯಣ ಸಿನಿಮಾ ನಿರ್ದೇಶಕರಿಗೆ ಇದ್ದಿದ್ದರೆ ಮುಂದಿನ ಭಾಗದಲ್ಲಿ ರಾಮನನ್ನು ಕೆಟ್ಟವನಾಗಿಸುವ ಸದವಕಾಶಗಳಾದ ಸೀತೆಯ ಅಗ್ನಿಪರೀಕ್ಷೆ, ಗರ್ಭಿಣಿಯನ್ನು ಕಾಡಿಗಟ್ಟುವ ಪ್ರಸಂಗಗಳಿಗೆ ಈ ಮೊದಲ ಭಾಗದಲ್ಲೇ ಪರೋಕ್ಷವಾಗಿ ತಣ್ಣೀರೆರೆಚಿರುವುದನ್ನು ನೋಡಬಹುದು. ಅಂದರೆ ಈ ಭಾಗದಲ್ಲಿ ತೋರಿಸಲಾದ ರಾಮ ಸೀತೆಯರ ಪಾತಿವೃತ್ಯ ಧರ್ಮ (ತಲೆ ತಗ್ಗಿಸಿ ಹೇಳಿದಂತೆ ಪತಿಸೇವೆ ಮಾಡುವ) ಕ್ಕೂ ಮಿಗಿಲಾದ ಅನ್ಯೋನ್ಯತೆ, ಒಬ್ಬರನ್ನೊಬ್ಬರು ಬಿಟ್ಟುಕೊಡದಿರುವ ಹೊಂದಾಣಿಕೆ ಮೊದಲಾದವುಗಳನ್ನು ಉತ್ತಮ ಸಂಭಾಷಣೆಗಳ ಮೂಲಕ ಇಲ್ಲಿ ಮನಮುಟ್ಟುವಂತೆ ಚಿತ್ರಿಸಲಾಗಿದೆ. ಅದೇ ರೀತಿ, ಮೂಲದಲ್ಲಿರುವಂತೆ ಶೂರ್ಪನಖಿಯ ಅಂಗಾಂಗಗಳನ್ನು ಕ್ರೂರವಾಗಿ ಕತ್ತರಿಸಹೋಗದೇ ಆತುರದಲ್ಲಿ ಕೇವಲ ಮೂಗಿಗಷ್ಟೆ  ಆಕಸ್ಮಿಕ ಗಾಯವಾದಂತೆ (ಕತ್ತರಿಸಿದ್ದಲ್ಲ) ತೋರಿಸಿರುವುದೂ ಕೂಡ ರಾಮನ ಮೇಲೆ ಪೂರ್ವಗ್ರಹವಿಲ್ಲದಿರುವುದಕ್ಕೆ ಸಾಕ್ಷಿಯೆನ್ನಬಹುದು.

ಒಟ್ಟಿನಲ್ಲಿ ಎಡ ಬಲಗಳನ್ನು ಬದಿಗಿಟ್ಟು ಸಿನಿಮಾ ನೋಡೋಣ 

ಶಂಕರ್ ಸೂರ್ನಳ್ಳಿ
ಬರಹಗಾರರು

ಇದನ್ನೂ ಓದಿ- ಪ್ರೀತಿ ಸಹಜ, ಅಭಿವ್ಯಕ್ತಿ ಅಸಹಜವೇ?

More articles

Latest article

Most read