ನಾರ್ವೆಯಲ್ಲಿ ಮೋದಿ ಪಲಾಯನ

ಭಾರತದ ಯಾವ ಪ್ರಧಾನಿಗಳೂ ಪತ್ರಕರ್ತರಿಂದ ದೂರವಾಗಿರಲಿಲ್ಲ. ವಿದೇಶಕ್ಕೆ ಹೋದಾಗಲೆಲ್ಲಾ ತಮ್ಮ ವಿಮಾನದಲ್ಲಿ ಪ್ರಮುಖ ಸುದ್ದಿ ಮಾಧ್ಯಮಗಳ ಪತ್ರಕರ್ತರನ್ನು ಕರೆದುಕೊಂಡೇ ಹೋಗುತ್ತಿದ್ದರು. ನಿರ್ಭಯವಾಗಿ ಪ್ರಶ್ನೆಗಳಿಗೆ ನೇರವಾಗಿ ಉತ್ತರಿಸುತ್ತಿದ್ದರು. ವಿದೇಶದ ನೆಲದಲ್ಲಿ ನಡೆವ ಜಂಟಿ ಪತ್ರಿಕಾ ಗೋಷ್ಠಿಗಳನ್ನು ದಿಟ್ಟವಾಗಿ ಎದುರಿಸುತ್ತಿದ್ದರು. ಆದರೆ ಏನು ಮಾಡುವುದು?. ಈಗ ನಮ್ಮ ದೇಶದ ಪ್ರಧಾನಿಗಳು ಅಂತಹುದಕ್ಕೆಲ್ಲಾ ವ್ಯತಿರಿಕ್ತರಾಗಿದ್ದಾರೆ -ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.

ವಿಶ್ವಗುರು ಮೋದಿಯವರಿಗೆ ಪತ್ರಕರ್ತರನ್ನು ಕಂಡರೆ ಅಲರ್ಜಿ ಅಂತ ಜಗತ್ತಿಗೆ ಗೊತ್ತಿದೆ. ಪ್ರಧಾನಿಗಳಾಗಿ 12 ವರ್ಷಗಳಾದರೂ ಒಂದೇ ಇಂದು ಸುದ್ದಿ ಗೋಷ್ಠಿ ಕರೆದಿಲ್ಲ ಹಾಗೂ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿಲ್ಲ ಎನ್ನುವುದೂ ಗೊತ್ತಿರುವ ಸಂಗತಿ.

ವಿಷಯ ಹೀಗಿರುವಾಗ ಒತ್ತಾಯದಿಂದ ಅವರ ಬಾಯಿ ಬಿಡಿಸುವ ಹಠ ಯಾಕೆ ಅಂತಾ? ಈಗ ನೋಡಿ ಭಾರತಕ್ಕೆ ಎಷ್ಟೊಂದು ಮುಜುಗರ. ಇಷ್ಟಕ್ಕೂ ಆಗಿದ್ದಾದರೂ ಏನು?

ಭಾರತದಲ್ಲಿ ಪಂಚ ರಾಜ್ಯ ಚುನಾವಣೆಗಳು ಮುಗಿದಾಯ್ತು. ಚುನಾವಣಾ ಸಂದರ್ಭದಲ್ಲಿ ದೇಶ ಸುಭಿಕ್ಷವಾಗಿದೆ ಅಂತ ಪ್ರಧಾನಿಗಳು ಹೋದಲ್ಲೆಲ್ಲ ಹೇಳಿ ಆಯ್ತು. ಚುನಾವಣೆ ಮುಗಿದ ತಕ್ಷಣ ಅವರಿಗೆ ದೇಶದ ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟಿನಲ್ಲಿದೆ ಅಂತ ಗೊತ್ತಾಯ್ತು. ಡಾಲರ್ ಎದುರು ರುಪಾಯಿ ಮೌಲ್ಯ ಅತೀ ವೇಗದಲ್ಲಿ ಬೀಳ್ತಾ ಇದೆ ಅಂತ ತಿಳೀತು. ಇಂತಹ ಸಂಕಷ್ಟದ ಸಮಯದಲ್ಲಿ ಭಾರತೀಯರು ದೇಶಭಕ್ತಿ ತೋರಬೇಕು ಅಂತಾ ಪ್ರವಚನ ನೀಡಿದ್ರು. ಚಿನ್ನ ಖರೀದಿಸಬೇಡಿ, ವಿದೇಶ ಪ್ರವಾಸ ಮಾಡಬೇಡಿ, ರಸಗೊಬ್ಬರ ಕಡಿಮೆ ಬಳಸಿ, ಸ್ವಂತ ವಾಹನ ಬಿಟ್ಟು ಸಾರ್ವಜನಿಕ ವಾಹನ ಉಪಯೋಗಿಸಿ, ಮನೆಯಿಂದಲೇ ಕೆಲಸ ಮಾಡಿ.. ಅಂತೆಲ್ಲ ಉಪದೇಶ ಮಾಡಿದ ನಂತರ ತಮ್ಮ 8,500 ಕೋಟಿಯ ವಿಮಾನ ಹತ್ತಿ ವಿದೇಶ ಪ್ರಯಾಣಕ್ಕೆ ಹೋದರು. ಹೇಳೋದೊಂದು ಮಾಡೋದಿನ್ನೊಂದು ಅಂತಾ ಕೆಲವು ದೇಶದ್ರೋಹಿಗಳು ಸೋಷಿಯಲ್ ಮೀಡಿಯಾದಲ್ಲಿ ಗುರಾಯಿಸಿದ್ರು.

ನಾರ್ವೆಯಂಥ ಈ ಭೂಮಿಯ ಕಟ್ಟ ಕಡೆಯ ದೇಶ ಒಂದಿದೆ. ಅಲ್ಲಿಗೆ ಮೋದಿಯವರು ಹೋದರು, ಆ ದೇಶದ ಸನ್ಮಾನ ಸ್ವೀಕರಿಸಿದರು, ಮೊದಲೇ ಕರೆತಂದ ಅಂಧಭಕ್ತರ ಕೈ ಮೈ ಮುಟ್ಟಿ ಆನಂದತುಲಿತರಾದರು. ಅಷ್ಟೇ ಆಗಿದ್ದರೆ ಪರವಾಗಿಲ್ಲ ಅಂದುಕೊಳ್ಳಬಹುದಾಗಿತ್ತು.

ಪತ್ರಿಕಾ ಸ್ವಾತಂತ್ರ್ಯದಲ್ಲಿ ನಂಬರ್ ಒನ್ ದೇಶ ಅದು. ನಮ್ಮ ದೇಶವೋ ಮೋದಿ ಆಡಳಿತದಲ್ಲಿ 157 ನೇ ಸ್ಥಾನದಲ್ಲಿದೆ. ಇದು ಗೊತ್ತಿದ್ದೂ ಅಲ್ಲಿಯ ಪತ್ರಕರ್ತರು ಮೋದಿಯವರನ್ನು ಯಾಕೆ ಪ್ರಶ್ನೆ ಕೇಳಬೇಕಿತ್ತು? “ಮೋದಿಯವರು ಹೆಚ್ಚು ಓದಿದವರಲ್ಲ, ಟೆಲಿಪ್ರಾಂಪ್ಟ್ ಇಲ್ಲದೆ ಭಾಷಣ ಮಾಡುವುದಿಲ್ಲ, ಪತ್ರಕರ್ತರು ಕೇಳುವ ಯಾವುದೇ ಪ್ರಶ್ನೆಗಳಿಗೆ ಉತ್ತರಿಸುವುದಿಲ್ಲ’ ಎಂದು ಭಾರತದ ಎಂಬೆಸಿ ಅಧಿಕಾರಿಗಳು ಮೊದಲೇ ಆ ದೇಶದ ಪ್ರಭುತ್ವಕ್ಕೆ ತಿಳಿಸಬೇಕಾಗಿತ್ತು. ತಿಳಿಸಿಲ್ಲ. ಹೋಗಲಿ ಮೋದಿಯವರ ಈ ದೌರ್ಬಲ್ಯಗಳ ಬಗ್ಗೆ ಗೊತ್ತಿದ್ದ ನಾರ್ವೆಯ ಮಾಧ್ಯಮದವರು ಸುಮ್ಮನಿರಬೇಕಿತ್ತು, ಇರಲಿಲ್ಲ. ಜಂಟಿ ಪತ್ರಿಕಾ ಗೋಷ್ಠಿ ವ್ಯವಸ್ಥೆ ಮಾಡೋದು ಬೇಕಿರಲಿಲ್ಲ, ಮಾಡಿದ್ರು.

ಆಯ್ತು.. ಆ ಪತ್ರಿಕಾ ಗೋಷ್ಠಿ ಉದ್ದೇಶಿಸಿ ನಾರ್ವೆ ಪ್ರಧಾನಿಗಳು ಪ್ರಾಂಪ್ಟರ್ ಇಲ್ಲದೇ ಮಾತಾಡಿದ್ರು. ಮಾತಾಡ್ಲಿ.  ನಮ್ಮ ವಿಶ್ವಗುರುಗಳೂ as usual ಟೆಲಿಪ್ರಾಂಪ್ಟರ್ ಬಳಸಿ ಮೊದಲೇ ಯಾರೋ ಸಿದ್ಧಪಡಿಸಿದ ಭಾಷಣ ಕೊಟ್ರು.‌ ಇಷ್ಟೇ ಆಗಿದ್ರೆ ಯಾವ ವಿವಾದವೂ ಆಗ್ತಾನೇ ಇರಲಿಲ್ಲ. ಆದರೆ ಜಂಟಿ ಹೇಳಿಕೆಯ ಆನಂತರ ನಾರ್ವೆಯ ನಾರ್ವೇಜಿಯನ್ ಭಾಷೆಯ Dagsavisen ಪತ್ರಿಕೆಯ ಪತ್ರಕರ್ತೆ ಹೆಲ್ಲೆ ಲೈಂಗ್ ಎನ್ನುವವರು ” ಪ್ರಧಾನಿ ಮೋದಿ, ವಿಶ್ವದ ಅತ್ಯಂತ ಸ್ವತಂತ್ರ ಮಾಧ್ಯಮಗಳ ಪ್ರಶ್ನೆಗಳಿಗೆ ಯಾಕೆ ಉತ್ತರಿಸುತ್ತಿಲ್ಲ” ಎಂದು ಮೋದಿಯವರನ್ನು ಪ್ರಶ್ನಿಸಿದರು. ಮುಜುಗರಕ್ಕೊಳಗಾದ ವಿಶ್ವಗುರುಗಳು ಉತ್ತರಿಸದೇ ಅಲ್ಲಿಂದ ಲಗುಬಗೆಯಿಂದ ಕಳಚಿಕೊಂಡರು. ಇಷ್ಟಕ್ಕೆ ಸುಮ್ಮನಾಗದ ಆ ಲೈಂಗ್ ಅವರು “ಇದಕ್ಕೇ ಭಾರತವು ವಿಶ್ವ ಪತ್ರಿಕಾ ಸ್ವಾತಂತ್ರ್ಯದಲ್ಲಿ 157 ನೇ ಸ್ಥಾನದಲ್ಲಿರೋದು’ ಎಂದು ತಮ್ಮ X ಖಾತೆಯಲ್ಲಿ ಪೋಸ್ಟ್ ಮಾಡಿ ಲೇವಡಿ ಮಾಡಿದರು.

ನಾರ್ವೆಯ ಪತ್ರಕರ್ತೆ ಹೆಲ್ಲೆ ಲೈಂಗ್ ಮತ್ತು ಪತ್ರಿಕಾಗೋಷ್ಠಿಯಿಂದ ಹೊರನಡೆಯುತ್ತಿರುವ ಭಾರತದ ಪ್ರಧಾನಿ

ಇದು ಭಾರತಕ್ಕಾದ ಅವಮಾನ ಎಂದು ಅರಿತ ಭಾರತೀಯ ದೂತವಾಸದ ವಿದೇಶಾಂಗ ಸಚಿವಾಲಯವು ಆದಿನ ರಾತ್ರಿ ಪತ್ರಕರ್ತರನ್ನು ಪತ್ರಿಕಾ ಗೋಷ್ಠಿ ಗೆ ಆಹ್ವಾನಿಸಿ ಭಾರತ ಹೆಮ್ಮೆಯ ಪ್ರಜಾಪ್ರಭುತ್ವ ಎಂದು ಹೇಳಿ ತಿಪ್ಪೆ ಸಾರಿಸಿ ರಂಗೋಲಿ ಹಾಕಿ ಪ್ರಧಾನಿಗಳಿಂದ ಹೋದ ಮಾನವನ್ನು ಮುಚ್ಚಿಕೊಳ್ಳಲು ಪ್ರಯತ್ನಿಸಿತು.

ಎರಡು ದೇಶಗಳ ಜಂಟಿ ಪತ್ರಿಕಾ ಹೇಳಿಕೆಯ ಸಮಯದಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರಧಾನಿಗಳು ಉತ್ತರಿಸಬೇಕಾಗಿತ್ತು. ಅವರಿಂದ ಅದು ಅಸಾಧ್ಯವೆಂದು ಅರಿತ ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ಉತ್ತರಿಸಿದ್ದು ಅತ್ಯಂತ ಆಭಾಸಕಾರಿ. “ದೇಶದ ಮಾನ ಹರಾಜಾಯ್ತು, ದೇಶದ ಘನತೆಗೆ ದೊಡ್ಡ ಆಘಾತ, ಪ್ರಶ್ನೆಗೆ ಉತ್ತರಿಸಿದೇ ಓಡಿ ಹೋದ ಪ್ರಧಾನಿ…” ಅಂತೆಲ್ಲಾ ಚರ್ಚೆಗಳು ಶುರುವಾದವು.

ಯಾವ ದೇಶಕ್ಕೆ ಹೋದರೂ ಅಲ್ಲಿಯ ಆಯ್ದ ಭಾರತೀಯರನ್ನು ಆಹ್ವಾನಿಸಿ ಆರತಿ ಮಾಡಿಸಿಕೊಂಡು, ಕುಂಕಮ ಇಡಿಸಿಕೊಂಡು, ಕೈ ಮೈ ಸವರಿಕೊಂಡು, ದೇಶಾವರಿ ನಗೆ ಚಿಮ್ಮಿಕೊಂಡು, ಗುಣಗಾನ ಮಾಡಿಸಿಕೊಂಡು, ಅಲ್ಲಿನ ಅನಿವಾಸಿ ಭಾರತೀಯರ ನೃತ್ಯಗಳನ್ನು ನೋಡಿಕೊಂಡು ಆನಂದವನ್ನು ಅನುಭವಿಸಿ ರೋಮಾಂಚನಗೊಂಡು ಮುಂದಿನ ದೇಶಕ್ಕೆ ಪ್ರಯಾಣ ಬೆಳೆಸುತ್ತಿದ್ದ ವಿಶ್ವಗುರುಗಳಿಗೆ ಈ ನಾರ್ವೆ ಪತ್ರಕರ್ತೆ ಹೆಲ್ಲೆ ಲೈಂಗ್ ಇರುಸು ಮುರುಸಾಗುವಂತೆ ಪ್ರಶ್ನೆ ಕೇಳಬಾರದಿತ್ತು. ಲಿಫ್ಟ್ ವರೆಗೂ ಪ್ರಧಾನಿಯವರನ್ನು ಬೆನ್ನಟ್ಟಿ ಹೋಗಿ ಪ್ರಶ್ನೆಗಳ ಬಾಣ ಬಿಡಬಾರದಿತ್ತು.

ಭಾರತದಲ್ಲಿ ತಮ್ಮನ್ನು ಹೊಗಳುವ ಆಯ್ದ ಮಾಧ್ಯಮಗಳನ್ನು ಕರೆದು ಮೊದಲೇ ಸಿದ್ಧಪಡಿಸಿ ಕೊಟ್ಟ ಪ್ರಶ್ನೆಗಳಿಗೆ ಮಾತ್ರ ಉತ್ತರಿಸುತ್ತಿದ್ದ ಮೋದೀಜಿಯವರಿಗೆ ಪೂರ್ವಸಿದ್ಧತೆ ಇಲ್ಲದೆ ಪತ್ರಕರ್ತರಿಗೆ ಉತ್ತರಿಸುವುದು ಅಸಾಧ್ಯದ ಮಾತು. ಅದು ಅವರ ದೌರ್ಬಲ್ಯವೆಂದಾದರೂ ಕರೆಯಿರಿ ಇಲ್ಲವೇ ಅವಿದ್ಯಾವಂತ ಪ್ರಧಾನಿ ಎಂದಾದರೂ ಕಾಲೆಳೆಯಿರಿ. ಆದರೆ ತಮ್ಮ ದೌರ್ಬಲ್ಯವನ್ನು ಬಿಟ್ಟಿಕೊಡದೇ ಮಾಧ್ಯಮಗಳನ್ನೇ ದೂರ ಇಟ್ಟಿರುವುದು ಮೋದಿಯವರ ಸ್ಮಾರ್ಟ್ ನಡೆಯಾಗಿದೆ. ಇದು ಗೊತ್ತಿಲ್ಲದ ನಾರ್ವೆ ಪತ್ರಕರ್ತೆ ಹೆಲ್ಲೆ ಲೈಂಗ್ ವಿಶ್ವಗುರುಗಳ ವೀಕ್‌ನೆಸ್‌ ನ್ನು ಬಟಾಬಯಲು ಮಾಡಿದರು.

ಆದರೂ ನಮ್ಮ ಅಂಧಭಕ್ತರು ತಮ್ಮ ದೇವಮಾನವನನ್ನು ಬಿಟ್ಟು ಕೊಡುವ ಮಾತೇ ಇಲ್ಲ. ಭಾರತೀಯ ರಾಯಭಾರ ಕಚೇರಿ ಹಾಗೂ ಬಿಜೆಪಿಯ ಐಟಿ ಸೆಲ್ ನವರೆಲ್ಲಾ ಈಗ ಪ್ರಶ್ನೆ ಕೇಳಿದ ಆ ದಿಟ್ಟ ಪತ್ರಕರ್ತೆಯನ್ನು ವಿದೇಶಿ ಏಜೆಂಟ್ ಎಂದು ನಿಂದಿಸಲು ಶುರು ಮಾಡಿದ್ದಾರೆ. ಆ ಪತ್ರಕರ್ತೆಯ ಚಾರಿತ್ರ್ಯಹರಣ ಮಾಡುವ ಪ್ರಯತ್ನಗಳನ್ನೂ ಮುಂದುವರೆಸಿದ್ದಾರೆ. ಇದಕ್ಕೆ ಖಡಕ್ಕಾಗಿ ಉತ್ತರಿಸಿದ ನಾರ್ವೆ ಪತ್ರಕರ್ತೆ  ಹೆಲ್ಲೆ ಲೈಂಗ್ (Helle Lung) ರವರು “ನಾನು ಯಾವುದೇ ವಿದೇಶಿ ಬೇಹುಗಾರಿಕೆ ಸಂಸ್ಥೆಯ ಏಜೆಂಟ್ ಅಲ್ಲ. ನಾನೊಬ್ಬ ಪತ್ರಕರ್ತೆ ಹಾಗೂ ಪ್ರಶ್ನೆ ಕೇಳುವುದು ನನ್ನ ಕರ್ತವ್ಯ” ಎಂದು X ಮೂಲಕ ಉತ್ತರಿಸಿದ್ದಾರೆ.

ಹೀಗೇ ಆದರೆ ಭಾರತದ ಮರ್ಯಾದೆ ಜಾಗತಿಕವಾಗಿ ಹರಾಜಾಗುತ್ತದೆ. ಅದಕ್ಕೆ ಇನ್ನು ಮೇಲೆ ವಿಶ್ವಗುರುಗಳು ಯಾವುದೇ ದೇಶಕ್ಕೆ ವಿಶ್ವಪರ್ಯಟನೆಗೆ ಹೋದರೆ ವಿದೇಶಾಂಗ ಸಚಿವಾಲಯದ ಮೂಲಕ ಕೆಲವು ನಿಯಮಾವಳಿಗಳನ್ನು ಆ ದೇಶಕ್ಕೆ ಮೊದಲೇ ತಿಳಿಸಬೇಕು. ಅವುಗಳೇನೆಂದರೆ..

* ಜಂಟಿ ಪತ್ರಿಕಾ ಗೋಷ್ಠಿ ಮಾಡಬಾರದು.

* ಪತ್ರಕರ್ತರನ್ನು ಮೋದಿಯವರು ಇದ್ದಲ್ಲಿ ಆಹ್ವಾನಿಸಬಾರದು.

* ವಿದೇಶ ಪ್ರವಾಸ ಕೇವಲ ಈವೆಂಟ್ ರೀತಿ ಇರಬೇಕು.

* ಪ್ರಧಾನಿಗಳ ಗುಣಗಾನ, ಆ ದೇಶದ ಅತ್ಯುನ್ನತ ಪದವಿ ಪ್ರದಾನ ಹಾಗೂ ಮನೋರಂಜನೆಗೆ ಮಾತ್ರ ಸೀಮಿತವಾಗಿರಬೇಕು.

ಹೀಗೆ ಮೊದಲೇ ಕಂಡೀಶನ್ ಹಾಕುವ ಮೂಲಕವೇ ವಿಶ್ವಗುರುಗಳ ಪ್ರವಾಸ ಅರಂಭವಾಗಬೇಕು. ಆಗ ಭಾರತಕ್ಕೆ ಮುಜುಗರ ಆಗುವುದು ತಪ್ಪುತ್ತದೆ. ಭಾರತದ ಅಂಧಭಕ್ತರು ಹಾಗೂ ಗೋದಿ ಮಾಧ್ಯಮಗಳಿಗೆ ಮೋದಿಯವರನ್ನು ವಿಶ್ವಗುರುಗಳು ಎಂದು ಹಾಡಿ ಹೊಗಳಿ ದೇಶವಾಸಿಗಳನ್ನು ಮರುಳು ಮಾಡಲು ಸಾಧ್ಯವಾಗುತ್ತದೆ.

ಹೀಗೆ ಎಂದೂ ಆಗಿರಲಿಲ್ಲ. ಭಾರತದ ಯಾವ ಪ್ರಧಾನಿಗಳೂ ಪತ್ರಕರ್ತರಿಂದ ದೂರವಾಗಿರಲಿಲ್ಲ. ವಿದೇಶಕ್ಕೆ ಹೋದಾಗಲೆಲ್ಲಾ ತಮ್ಮ ವಿಮಾನದಲ್ಲಿ ಪ್ರಮುಖ ಸುದ್ದಿ ಮಾಧ್ಯಮಗಳ ಪತ್ರಕರ್ತರನ್ನು ಕರೆದುಕೊಂಡೇ ಹೋಗುತ್ತಿದ್ದರು. ನಿರ್ಭಯವಾಗಿ ಪ್ರಶ್ನೆಗಳಿಗೆ ನೇರವಾಗಿ ಉತ್ತರಿಸುತ್ತಿದ್ದರು. ವಿದೇಶದ ನೆಲದಲ್ಲಿ ನಡೆವ ಜಂಟಿ ಪತ್ರಿಕಾ ಗೋಷ್ಠಿಗಳನ್ನು ದಿಟ್ಟವಾಗಿ ಎದುರಿಸುತ್ತಿದ್ದರು. ಆದರೆ ಏನು ಮಾಡುವುದು?. ಈಗ ನಮ್ಮ ದೇಶದ ಪ್ರಧಾನಿಗಳು ಅಂತಹುದಕ್ಕೆಲ್ಲಾ ವ್ಯತಿರಿಕ್ತರಾಗಿದ್ದಾರೆ. ದೇಶದ ಒಳಗೆ ಏನಾದರೂ ಮಾಡಿಕೊಳ್ಳಲಿ. ಆದರೆ ವಿದೇಶದಲ್ಲಿ ಭಾರತದ ಮರ್ಯಾದೆ ಕಳೆಯದೇ ಇರಲಿ.

ಶಶಿಕಾಂತ ಯಡಹಳ್ಳಿ

ರಾಜಕೀಯ ವಿಶ್ಲೇಷಕರು

More articles

Latest article

Most read