ಆರೆಸ್ಸೆಸ್ ಸಂವಿಧಾನಕ್ಕಿಂತಲೂ ದೊಡ್ಡದಾ?

ಗೃಹ ಸಚಿವರು ಕರ್ನಾಟಕ ಸರಕಾರದ ಪರವಾಗಿ ಮೋಹನ್ ಭಾಗವತರಿಗೆ ಪತ್ರ ಬರೆದು ಕಾನೂನಾತ್ಮಕ ದಾಖಲೆಗಳಿಗಾಗಿ ಮನವಿ ಮಾಡಿಕೊಂಡಿದ್ದಾರೆ. ಅದಕ್ಕೆ ಉತ್ತರಿಸಬೇಕಾದ ಆರೆಸ್ಸೆಸ್ ನಾಯಕರುಗಳು ಮೌನಕ್ಕೆ ಶರಣಾಗಿದ್ದಾರೆ. ಬಿಜೆಪಿ ನಾಯಕರುಗಳು ವಾಗ್ದಾಳಿ ಮಾಡುತ್ತಿದ್ದಾರೆ. ಸಂಘಿ ಅಂಧಭಕ್ತರುಗಳು ಪ್ರಶ್ನಿಸಿದವರನ್ನೇ ದೇಶದ್ರೋಹಿಗಳು ಎನ್ನುವಂತೆ ಪ್ರಚಾರ ಮಾಡುತ್ತಿದ್ದಾರೆ. ಪ್ರಿಯಾಂಕ್ ಖರ್ಗೆಯವರ ಮೌಲಿಕ ಪ್ರಶ್ನೆಗಳ ಪರವಾಗಿ ನಿಲ್ಲಬೇಕಾದ ಕಾಂಗ್ರೆಸ್ಸಿಗರು ಹಾಗೂ ಪ್ರಗತಿಪರರು ಜಾಣ ಮೌನಕ್ಕೆ ಜಾರಿದ್ದಾರೆ ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.‌

ಅದ್ಯಾವ ವ್ಯಕ್ತಿಯೇ ಆಗಿರಲಿ, ಅದೆಂತಹ ಶಕ್ತಿಯೇ ಆಗಿರಲಿ, ಸಂಘ ಸಂಸ್ಥೆ ಮತ್ತೊಂದೇ ಆಗಿರಲಿ ಯಾವುವೂ ಈ ದೇಶದ ಸಂವಿಧಾನಕ್ಕಿಂತ ದೊಡ್ಡದೇನಲ್ಲ.

ಆದರೆ.. ಬಾಬಾಸಾಹೇಬರ ಸಂವಿಧಾನವನ್ನು ಈ ದೇಶ ಒಪ್ಪಿಕೊಂಡಾಗಿನಿಂದಲೂ ಸಂವಿಧಾನವನ್ನೇ ಒಪ್ಪದೆ ಇರುವ ಏಕೈಕ ಸಂಘಟನೆ ಅಂದರೆ ಅದು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಅಂದರೆ ಆರೆಸ್ಸೆಸ್.

ಸಂವಿಧಾನಕ್ಕೆ ಆರೆಸ್ಸೆಸ್ ವಿರೋಧ

* ಸಂವಿಧಾನ ಜಾರಿಗೆ ಬಂದಾಗ “ಇದರಲ್ಲಿ ಈ ದೇಶದ ಮನುಸ್ಮೃತಿಯ ಆಶಯಗಳು ಇಲ್ಲವಾದ್ದರಿಂದ ಪಾಶ್ಚಾತ್ಯ ವಿಚಾರಧಾರೆಯ ಈ ಸಂವಿಧಾನವನ್ನು ನಾವು ಒಪ್ಪಿಕೊಳ್ಳುವುದಿಲ್ಲ” ಎಂದು ಆರೆಸ್ಸೆಸ್ ಮುಖವಾಣಿ ಆರ್ಗನೈಸರ್ ನಲ್ಲಿ ಪ್ರಕಟಿಸಲಾಗಿತ್ತು.

*  ಸಂವಿಧಾನ ಅಸ್ತಿತ್ವಕ್ಕೆ ಬಂದು ಐವತ್ತು ವರ್ಷಗಳ ವರೆಗೆ ನಾಗಪುರದ ಆರೆಸ್ಸೆಸ್ ಕಚೇರಿಯಲ್ಲಿ ರಾಷ್ಟ್ರಧ್ವಜವನ್ನೇ ಹಾರಿಸಿರಲಿಲ್ಲ. ಮೂವರು ಸಾಹಸಿ ಯುವಕರು ಆರೆಸ್ಸೆಸ್ ಕಚೇರಿಗೆ ನುಗ್ಗಿ ರಾಷ್ಟ್ರಧ್ವಜ ಹಾರಿಸಿದಾಗ ಅವರ ಮೇಲೆ ಕೇಸ್ ದಾಖಲಿಸಲಾಗಿತ್ತು.

* ರಾಷ್ಟ್ರಗೀತೆಯಾದ ಜನಮನವನ್ನು ಆರೆಸ್ಸೆಸ್ ಒಪ್ಪಿಕೊಳ್ಳದೆ ವಂದೇ ಮಾತರಂ ರಾಷ್ಟ್ರಗೀತೆ ಆಗಬೇಕೆಂದು ಪ್ರತಿಪಾದಿಸಿತ್ತು.

* ಅನಂತಕುಮಾರ ಹೆಗಡೆಯಂತಹ ಬಿಜೆಪಿ ಎಂಪಿ “ಬಿಜೆಪಿ ಬಂದಿದ್ದೇ ಸಂವಿಧಾನವನ್ನು ಬದಲಾಯಿಸಲು” ಎಂದು ಬಹಿರಂಗವಾಗಿ ಹೇಳಿದಾಗಲೂ ಆರೆಸ್ಸೆಸ್ ಮೌನಸಮ್ಮತಿ ಕೊಟ್ಟಿತ್ತು.

* ಕೆಲವು ಸಂವಿಧಾನ ದ್ರೋಹಿಗಳು ಸಂವಿಧಾನದ ಪ್ರತಿಯನ್ನು ಬೀದಿಯಲ್ಲಿ ಸುಟ್ಟಾಗಲೂ ಆರೆಸ್ಸೆಸ್ ಹಾಗೂ ಬಿಜೆಪಿ ಮೌನವಾಗಿತ್ತು.

ಸಂವಿಧಾನ ಜಾರಿಗೆ ಬಂದಾಗಿನಿಂದಲೂ ಅದನ್ನು ಒಪ್ಪಿಕೊಳ್ಳದ ಆರೆಸ್ಸೆಸ್ ತಮ್ಮ ಸಂಘಟನೆಯನ್ನು ಸಂವಿಧಾನದ ಅಡಿಯಲ್ಲಿ ನೋಂದಣಿ ಮಾಡಿಸಿಕೊಳ್ಳದೆ ತನ್ನ ಸಂವಿಧಾನ ವಿರೋಧಿತನವನ್ನು ಸಾಬೀತುಪಡಿಸುತ್ತಾ ಬಂದಿದೆ.

ಈಗ ಕರ್ನಾಟಕದ ಗೃಹ ಮಂತ್ರಿಯಾಗಿರುವ ಮಾನ್ಯ ಪ್ರಿಯಾಂಕ್ ಖರ್ಗೆಯವರು ಅಧಿಕೃತವಾಗಿ ಆರೆಸ್ಸೆಸ್ ಸಂಸ್ಥೆಯ ಸಾಂವಿಧಾನಿಕ ಬದ್ಧತೆಯನ್ನು ಪ್ರಶ್ನಿಸಿದ್ದಾರೆ. ನೋಂದಣಿ ಯಾಕಿಲ್ಲ ಎಂದು ಕೇಳಿದ್ದಾರೆ. ಆದಾಯದ ಮೂಲ ಹಾಗೂ ತೆರಿಗೆ ದಾಖಲೆಗಳನ್ನು ಕೊಡಲು ಜುಲೈ 15 ರಂದು ಆರೆಸ್ಸೆಸ್ ಅಧಿನಾಯಕರಾದ ಮೋಹನ್ ಭಾಗವತರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.

ಪ್ರಶ್ನೆ ಕೇಳಿದ್ದು ಆರೆಸ್ಸೆಸ್ ಸಂಘಟನೆಗೆ. ಆದರೆ ಪ್ರಶ್ನಿಸಿದವರ ಮೇಲೆ ವಾಗ್ದಾಳಿ ಮಾಡುತ್ತಿರುವುದು ಬಿಜೆಪಿ ಪಕ್ಷದ ನಾಯಕರು, ಹಿಂಬಾಲಕರು ಹಾಗೂ ಅಂಧಾಭಿಮಾನಿಗಳು. ಉತ್ತರಿಸಬೇಕಾದ ಮೋಹನ ಭಾಗವತರು ವಿತಂಡವಾದ ಮಂಡಿಸಿದ್ದಾರೆ. ಅದನ್ನು ಬಿಜೆಪಿಗರು ಸಮರ್ಥಿಸಿ ಕೊಳ್ಳುತ್ತಿದ್ದಾರೆ.

ಹಿಂದೂ ಧರ್ಮವೇ ರೆಜಿಸ್ಟರ್ ಆಗಿಲ್ಲ ಎನ್ನುವುದು ಭಾಗವತರ ವಾದ

ಹೌದು.. ಹಿಂದೂ ಧರ್ಮ ನೋಂದಣಿ ಆಗಿಲ್ಲ. ಆಗುವುದೂ ಇಲ್ಲ. ಯಾಕೆಂದರೆ ಜಗತ್ತಿನ ಯಾವ ಧರ್ಮಗಳೂ ನೋಂದಣಿಯಾಗಿಲ್ಲ. ಆಗುವುದೂ ಇಲ್ಲ. ಭಾರತದಲ್ಲಿ ಅಸ್ತಿತ್ವದಲ್ಲಿರುವ ಪ್ರಮುಖ ಧರ್ಮಗಳನ್ನು ಸಂವಿಧಾನ ಮಾನ್ಯತೆ ಮಾಡಿದೆ. ಯಾವುದೇ ಧರ್ಮ ಒಂದು ಸಂಘವೂ ಅಲ್ಲ ಸಂಸ್ಥೆಯೂ ಅಲ್ಲ. ಆದರೆ ಧರ್ಮದ ಹೆಸರಲ್ಲಿ ಕೆಲವು ಸಂಘಟನೆಗಳು ಧರ್ಮ ರಕ್ಷಣೆಯ ಹೆಸರಲ್ಲಿ ಕಾರ್ಯಾಚರಣೆ ಮಾಡುತ್ತಾ ಬಂದಿವೆ. ಅದರಲ್ಲಿ ಪ್ರಮುಖವಾಗಿರುವುದು ಆರೆಸ್ಸೆಸ್. ಆರೆಸ್ಸೆಸ್ ಅಂದರೆ ಸಮಗ್ರ ಹಿಂದೂ ಧರ್ಮವೇನಲ್ಲ. ಭೌಗೋಳಿಕವಾಗಿ ಹಿಂದೂ ಎನ್ನುವವರೆಲ್ಲಾ ಆರೆಸ್ಸೆಸ್ಸಿಗರೂ ಅಲ್ಲ. ಹಿಂದುತ್ವದ ಹೆಸರಲ್ಲಿ ಅಸ್ತಿತ್ವಕ್ಕೆ ಬಂದಿರುವ ಆರೆಸ್ಸೆಸ್ ಒಂದು ಸಂಘಟನೆಯೇ ಹೊರತು ಹಿಂದೂ ಧರ್ಮವಂತೂ ಅಲ್ಲವೇ ಅಲ್ಲ.

ಸರಕಾರಿ ಅನುದಾನ (ಗ್ರ್ಯಾಂಟ್) ತೆಗೆದುಕೊಳ್ಳುವವರು ಮಾತ್ರ ನೋಂದಣಿ ಮಾಡಿಸಬೇಕು

ಎನ್ನುವುದು ಮೋಹನ್ ಭಾಗವತರ ವಾದ. ಹಾಗಾದರೆ ಸರಕಾರದ ಅನುದಾನ ಪಡೆಯದೇ ಸಾರ್ವಜನಿಕರಿಂದ ಹಣ ಸಂಗ್ರಹಿಸಿ ನೋಂದಣಿರಹಿತ ಸಂಘಟನೆ ಮಾಡಬಹುದೇ? ಸಾಧ್ಯವಿಲ್ಲ. ಯಾವುದೇ ಸಂಘಟನೆ, ಅದು ಸೇವಾ ಸಂಸ್ಥೆಯೇ ಆಗಿರಲಿ ಇಲ್ಲವೇ ಸಾಂಸ್ಕೃತಿಕ ಸಂಘಟನೆಯೇ ಆಗಿರಲಿ, ಸಾರ್ವಜನಿಕರಿಂದ ಯಾವುದೇ ರೂಪದಲ್ಲಿ ಹಣ ಸಂಗ್ರಹಿಸಿದರೂ ಅದಕ್ಕೆ ಲೆಕ್ಕಪತ್ರಗಳನ್ನು ಸರಕಾರಕ್ಕೆ ಸಲ್ಲಿಸಲೇಬೇಕು. ಅಗತ್ಯ ತೆರಿಗೆ ಕಟ್ಟಲೇಬೇಕು. ಅದಕ್ಕಾಗಿ ನೋಂದಣಿ ಮಾಡಿಕೊಳ್ಳಲೇಬೇಕು. ಹಣವನ್ನು ಕಾಣಿಕೆ, ಕೊಡುಗೆ, ಗುರುದಕ್ಷಿಣೆ ಹೀಗೆ ಯಾವುದೇ ರೂಪದಲ್ಲಿ ಪಡೆದರೂ ನೋಂದಣಿ ಮಾಡಿಸಿ ಹಣಕಾಸಿನ ವ್ಯವಹಾರದ ದಾಖಲೆಗಳನ್ನು ಸರಕಾರಕ್ಕೆ ಸಲ್ಲಿಸಲೇ ಬೇಕು. ಇದು ಈ ದೇಶದ ಕಾನೂನು. ಯಾರು ಅದೆಷ್ಟೇ ದೊಡ್ಡವರಾಗಿದ್ದರೂ, ಅದೆಷ್ಟೇ ಬೃಹತ್ ಸಂಘಟನೆ ಆಗಿದ್ದರೂ ನೆಲದ ಕಾನೂನಿಗೆ ಬದ್ಧರಾಗಿರಲೇಬೇಕು.‌ ಸಂವಿಧಾನದ ಚೌಕಟ್ಟನ್ನು ಮೀರಿದ ಯಾವುದೇ ಸಂಘಟನೆ ದೇಶವಿರೋಧಿಯಾಗುತ್ತದೆ. ಈಗ ನೋಂದಣಿ ಮಾಡಿಸದೇ, ಲೆಕ್ಕಪತ್ರ ಕೊಡದೇ ಇರುವ ಆರೆಸ್ಸೆಸ್ ಆ ಸಾಲಿಗೆ ಸೇರುತ್ತದೆ.

ಸಂಘ ರಚಿಸುವುದು ನಾಗರೀಕರ ಮೂಲಭೂತ ಹಕ್ಕು

ಎನ್ನುವುದು ಸಂಘಿ ಸಮರ್ಥಕರ ವಾದ. “ಯಾರು ಯಾವ ಸಂಘವನ್ನು ಬೇಕಾದರೂ ರಚಿಸಬಹುದು. ಸೇವಾ ಕಾರ್ಯಗಳನ್ನೂ ಮಾಡಬಹುದು. ಸಂವಿಧಾನದ ಆರ್ಟಿಕಲ್ 19 (1) (c) ಅಡಿಯಲ್ಲಿ ಸಂಘಗಳನ್ನು ರಚಿಸಬಹುದಾಗಿದೆ. ಯಾವುದೇ ವ್ಯಕ್ತಿಗಳು ತಮ್ಮದೇ ಆದ ಗುಂಪು ಅಥವಾ ಸಂಘಟನೆಗಳನ್ನು ಸ್ಥಾಪಿಸಬಹುದಾಗಿದೆ. ಅದಕ್ಕೆ ನೋಂದಣಿ ಮಾನ್ಯತೆ ಬೇಕಾಗಿಲ್ಲ. ನೋಂದಣಿ ಇಲ್ಲದೆಯೂ ಸಂಘಟನೆ ನಡೆಸುವುದು ನಾಗರೀಕರ ಹಕ್ಕಾಗಿದೆ. ಇದನ್ನು ನ್ಯಾಯಾಲಯಗಳು ಎತ್ತಿ ಹಿಡಿದಿವೆ” ಎಂಬುದು ಸಂಘ ಪರಿವಾರದವರ ವಾದವಾಗಿದೆ. ಆದರೆ ಯಾವುದೇ ಸಂಘ ಆರ್ಥಿಕ ವ್ಯವಹಾರದಲ್ಲಿ ತೊಡಗಿದ್ದರೆ, ಸಾರ್ವಜನಿಕರಿಂದ ಯಾವುದೋ ರೂಪದಲ್ಲಿ ಹಣ ಸಂಗ್ರಹಿಸಿದರೆ, ಸಂಘದ ಹೆಸರಲ್ಲಿ ಆಸ್ತಿಗಳನ್ನು ಮಾಡಿಕೊಂಡರೆ, ಅವುಗಳೆಲ್ಲವೂ ಉತ್ತರದಾಯಿತ್ವವನ್ನು ಹೊಂದಿರುತ್ತವೆ. ಹೀಗಾಗಿ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ.

ಸಂಘ ಪರಿವಾರದ ಅನೇಕ ಸಂಸ್ಥೆಗಳು ನೋಂದಣಿ ಮಾಡಿಕೊಂಡಿವೆಯಲ್ಲ..

ಸಂಘ ಪರಿವಾರದ ರಾಷ್ಟ್ರೋತ್ಥಾನ ಪರಿಷತ್, ಅಖಿಲ ಭಾರತ ವಿದ್ಯಾರ್ಥಿ ಪರಿಷತ್, ವಿಶ್ವ ಹಿಂದೂ ಪರಿಷತ್, ಭಾರತೀಯ ಮಜ್ದೂರ್ ಸಂಘ, ವಿದ್ಯಾ ಭಾರತಿ ಅಖಿಲ ಭಾರತೀಯ ಶಿಕ್ಷಾ ಸಂಸ್ಥಾನ, ಸೇವಾ ಭಾರತಿ, ರಾಷ್ಟ್ರ ಸೇವಿಕಾ ಸಮಿತಿ, ಸಂಸ್ಕೃತ ಭಾರತಿ, ಸ್ವದೇಶಿ ಜಾಗರಣ ಮಂಚ್, ಸಹಕಾರ ಭಾರತಿ, ಭಾರತೀಯ ಜನತಾ ಪಕ್ಷ ಮುಂತಾದವುಗಳು ಸೊಸೈಟಿ ರೆಜಿಸ್ಟ್ರೇಶನ್ ಆಕ್ಟ್ 1860, 1882, 1960 ಗಳ ಅಡಿಯಲ್ಲಿ ನೋಂದಣಿಯಾಗಿವೆ. ಬಿಜೆಪಿ ಪ್ರಜಾಪ್ರತಿನಿಧಿಗಳ ಕಾಯ್ದೆ 1951 ರ ಅಡಿಯಲ್ಲಿ ನೋಂದಣಿಯಾಗಿದೆ. ಆರ್ಗನೈಸರ್ ನಿಂದ ಹಿಡಿದು ಹೊಸದಿಗಂತ ಪತ್ರಿಕೆಯವರೆಗೆ ಎಲ್ಲಾ ಸಂಘಿ ಪತ್ರಿಕೆಗಳೂ ನೋಂದಣಿಯಾಗಿವೆ. ಆದರೆ ಈ ಎಲ್ಲದರ ಮೂಲ ಸಂಘಟನೆ ರಾಷ್ಟ್ರೀಯ ಸ್ವಯಂ ಸೇವಕ ಸಂಸ್ಥೆ. ಇಲ್ಲಿಯವರೆಗೂ ಯಾಕೆ ನೋಂದಣಿಯಾಗಿಲ್ಲ ಎನ್ನುವುದೇ ಬಹಳ ಪ್ರಮುಖ ಪ್ರಶ್ನೆಯಾಗಿದೆ.

ಆರೆಸ್ಸೆಸ್ ವ್ಯಕ್ತಿಗಳ ಸಮೂಹ ಆಗಿರುವುದರಿಂದ ನೋಂದಣಿ ಅಗತ್ಯವಿಲ್ಲ

ಎನ್ನುವುದು ಮೋಹನ್ ಭಾಗವತರ ವಾದ. ಹಾಗಾದರೆ  ದಲಿತ, ರೈತ, ಯುವಕ, ಕನ್ನಡಪರ ಹಾಗೂ ಮಹಿಳಾ ಸಂಘಟನೆಗಳೆಲ್ಲವೂ ವ್ಯಕ್ತಿಗಳ ಸಮೂಹವೇ. ಗಣೇಶೋತ್ಸವ ಮಂಡಳಿ, ಅಣ್ಣಮ್ಮ ದೇವಿ ಉತ್ಸವಗಳನ್ನು ಆಯೋಜಿಸುವ ಸಂಘ ಸಂಸ್ಥೆಗಳೂ ಕೂಡಾ ವ್ಯಕ್ತಿಗಳ ಸಮೂಹವೇ. ಇದರಲ್ಲಿ ಬಹುತೇಕ ಸಂಸ್ಥೆಗಳು ಸರಕಾರದ ಅನುದಾನ ಪಡೆಯುವುದಿಲ್ಲ. ಹಾಗಾದರೆ ಇವುಗಳನ್ನು ನೋಂದಣಿ ಮಾಡಬೇಕೆಂದು ಯಾಕೆ ಸರಕಾರ ಹೇಳುತ್ತದೆ. ನೋಂದಣಿ, ಬೈಲಾ ಇಲ್ಲದೇ ಸಂಘದ ಹೆಸರಲ್ಲಿ ಬ್ಯಾಂಕ್ ಗಳು ಯಾಕೆ ಖಾತೆಗಳನ್ನು ತೆರೆಯಲು ಬಿಡುವುದಿಲ್ಲ? ದೇವಸ್ಥಾನಗಳೂ ಭಕ್ತರ ಕಾಣಿಕೆ ಮೇಲೆ ಕಾರ್ಯನಿರ್ವಹಿಸುತ್ತವೆ. ಆದರೂ ಅವುಗಳೇಕೆ ನೋಂದಣಿ ಮಾಡಿಕೊಳ್ಳಬೇಕು. ವಾರ್ಷಿಕ ಲೆಕ್ಕಪತ್ರಗಳನ್ನು ಸಲ್ಲಿಸಬೇಕು? ಬೇಕಾಗಿಲ್ಲ. ಸರಕಾರಿ ಅನುದಾನ ಪಡೆಯದ ಎಲ್ಲಾ ಸಂಘ ಸಂಸ್ಥೆ ಟ್ರಸ್ಟ್ ಗಳಿಗೆ ನೋಂದಣಿ ಬೇಕಾಗಿಲ್ಲ ಎಂದು ಕೇಂದ್ರದ ಸಂಘಿ ಕೃಪಾಪೋಷಿತ ಸರಕಾರ ಆದೇಶ ಮಾಡಲಿ. ಇದ್ದರೆ ಕಾನೂನು ಎಲ್ಲರಿಗೂ ಒಂದೇ ರೀತಿಯಲ್ಲಿರಬೇಕಲ್ಲವೇ? ಆರೆಸ್ಸೆಸ್ ಏನು ಈ ದೇಶದ ಕಾನೂನಿಗೆ ಅತೀತವಾಗಿದೆಯಾ?

ಚಿತ್ರ ಕೃಪೆ : ದಿ ನ್ಯೂ ಇಂಡಿಯನ್‌ ಎಕ್ಸ್‌ ಪ್ರೆಸ್

ಸರಕಾರದಿಂದ ಯಾವುದೇ ಸವಲತ್ತು ಪಡೆಯದಿರುವುದರಿಂದ ನೋಂದಣಿ ಬೇಕಿಲ್ಲ

ಎಂದು ಕೇರಳದ ತ್ರಿಶೂರ್ ನಲ್ಲಿ ಮೋಹನ್ ಭಾಗವತರು ಜೂನ್ 13 ರಂದು ಹೇಳಿದ್ದಾರೆ. ಅದನ್ನೇ ಸಂಘಿ ಭಕ್ತರು ಸಮರ್ಥಿಸಿಕೊಳ್ಳುತ್ತಿದ್ದಾರೆ. ಆದರೆ ಯಾವುದೇ ಸಾಂವಿಧಾನಿಕ ಹುದ್ದೆಯಲ್ಲಿ ಇಲ್ಲದಿದ್ದರೂ Z+ ಕಮಾಂಡೋ ಭದ್ರತೆಯನ್ನು ಪಡೆಯುತ್ತಿರುವ ಏಕೈಕ ವ್ಯಕ್ತಿ ಮಾನ್ಯ ಮೋಹನ್ ಭಾಗವತರವರು. ತಿಂಗಳಿಗೆ ಸರಾಸರಿ 30 ರಿಂದ 45 ಲಕ್ಷ ಅಂದರೆ ವರ್ಷಕ್ಕೆ 50 ಕೋಟಿಯಷ್ಟು ಹಣವನ್ನು ಸರಕಾರ ಖರ್ಚು ಮಾಡುತ್ತಿದೆ.  ಐವತ್ತು ಕಮಾಂಡೋಗಳು ದಿನದ 24 ಗಂಟೆಗಳ ಕಾಲ ವರ್ಷದ 365 ದಿನಗಳೂ CISF ಕಮಾಂಡೋ ರಕ್ಷಣೆ ಕೊಡಲಾಗುತ್ತಿದೆ. ಹಾಗಾದರೆ ಈ ಹೈಪ್ರೊಫೈಲ್ ರಕ್ಷಣೆಗೆ ಆಗುವ ಖರ್ಚು ಸರಕಾರದ್ದಲ್ಲವೇ? ಸರಕಾರಿ ಸವಲತ್ತನ್ನು ಸಂಘದ ಅಧಿನಾಯಕರಾದ ಭಾಗವತರು 2012 ರಿಂದ ಪಡೆದುಕೊಳ್ಳುತ್ತಿರುವುದರಿಂದ ಸಂಘವನ್ನು ನೋಂದಣಿ ಮಾಡಿಸಬೇಕಲ್ಲವೇ? ಇಷ್ಟಕ್ಕೂ ಸಂಘದ ಸರ್ವೋಚ್ಛ ನಾಯಕರಿಗೆ ಈ Z + ಸೆಕ್ಯುರಿಟಿಯನ್ನು ಕೊಡಲು ಆರಂಭಿಸಿದ್ದು ಕಾಂಗ್ರೆಸ್ ಪಕ್ಷ ಎನ್ನುವುದು ಅಚ್ಚರಿಯ ಸಂಗತಿ. ಆಗಲೇ ಸಂಘವನ್ನು ನೋಂದಣಿ ಮಾಡಿಕೊಂಡರೆ ಮಾತ್ರ ಸರಕಾರಿ ರಕ್ಷಣೆ ಕೊಡಲಾಗುವುದು ಎಂದು ಕಾಂಗ್ರೆಸ್ ಸರಕಾರ ಹೇಳಬೇಕಿತ್ತು. ಹೇಳಲಿಲ್ಲ. ಈಗ ಕೇಂದ್ರದಲ್ಲಿ ಸಂಘಿ ಸರಕಾರವೇ ಇರುವುದರಿಂದ ನೋಂದಣಿಗಾಗಿ ಒತ್ತಾಯಿಸಿದರೂ ಪ್ರಯೋಜನವಿಲ್ಲ.

ಸಾಂಸ್ಕೃತಿಕ ಸಂಘಟನೆಯಾದ್ದರಿಂದ ನೋಂದಣಿ ಬೇಕಾಗಿಲ್ಲ

ಹಾಗಾದರೆ ಆರೆಸ್ಸೆಸ್ ಸಾರ್ವಜನಿಕರಿಂದ ಗುರುದಕ್ಷಿಣೆ ಹೆಸರಲ್ಲಿ ಪ್ರತಿ ವರ್ಷ ಕೋಟ್ಯಂತರ ರೂಪಾಯಿ ಹಣ ಸಂಗ್ರಹಿಸುತ್ತಿಲ್ಲವೇ?. ಆ ಹಣ ಯಾವ ಅಕೌಂಟಿನಲ್ಲಿದೆ?. ಸಂಘಟನೆ ನೋಂದಣಿಯಾಗದೆ ಬ್ಯಾಂಕಲ್ಲಿ ಹೇಗೆ ಅಕೌಂಟ್ ಓಪನ್ ಮಾಡಲಾಗಿದೆ? ನೂರು ಕೋಟಿ ರೂಪಾಯಿಯ ಕೇಂದ್ರ ಕಚೇರಿಯನ್ನು ಕಟ್ಟಲು ಆರೆಸ್ಸೆಸ್ಸಿಗೆ ಹೇಗೆ ಸಾಧ್ಯವಾಯ್ತು? ಭಾರತ ಹಾಗೂ ವಿಶ್ವದಾದ್ಯಂತ ಇರುವ ಆರೆಸ್ಸೆಸ್ ಆಸ್ತಿ ಯಾವ ಹೆಸರಿಗೆ ಹೇಗೆ ರೆಜಿಸ್ಟರ್ ಮಾಡಲಾಗಿದೆ? ದೇಶಾದ್ಯಂತ ಇರುವ ಸಂಘ ಹಾಗೂ ಸಂಘಿಗಳ ನಿರ್ವಹಣೆಗೆ ಹಣ ಎಲ್ಲಿಂದ ಬರುತ್ತದೆ? ಸಂಘದ ಕಾರ್ಯಕ್ರಮಗಳಿಗೆ ಹಣಕಾಸನ್ನು ಹೇಗೆ ಕ್ರೋಢಿಕರಿಸಲಾಗುತ್ತದೆ? ಕೋಟಿ ಕೋಟಿಗಳ ಹಣದ ವ್ಯವಹಾರ ಇದ್ದರೂ ಅದರ ವಹಿವಾಟಿನ ಲೆಕ್ಕಪತ್ರಗಳನ್ನು ಯಾಕೆ ಗುಟ್ಟಾಗಿ ಇಡಲಾಗಿದೆ? ಸಂಘದ ಬೈಲಾ ಎಲ್ಲಿದೆ? ಪದಾಧಿಕಾರಿಗಳ ಆಯ್ಕೆಗೆ ಮಾನದಂಡಗಳೇನು? ಹೀಗೆ ಅನೇಕ ಪ್ರಶ್ನೆಗಳಿವೆ? ಇವುಗಳಿಗೆ ಉತ್ತರ ಕೊಡಬೇಕಾದವರು ಮೌನಕ್ಕೆ ಶರಣಾಗುತ್ತಾರೆ ಇಲ್ಲವೇ ವಿತಂಡವಾದಕ್ಕೆ ಇಳಿಯುತ್ತಾರೆ, ಅಥವಾ ಪ್ರಶ್ನಿಸಿದವರ ಮೇಲೆ ದಾಳಿ ಮಾಡುತ್ತಾರೆ. ಇದೇನಾ ದೇಶಭಕ್ತ ಸಂಘಟನೆ ಎಂದುಕೊಳ್ಳುವವರ ರಾಷ್ಟ್ರಭಕ್ತಿ. ಇದೇನಾ ರಾಷ್ಟ್ರದ ಕಾನೂನಿಗೆ ಬೆಲೆ ಕೊಡದೇ ಇರುವವರ ರಾಷ್ಟ್ರೀಯವಾದ?

ನೋಂದಣಿ ಮಾಡದಿರುವುದಕ್ಕೆ ಅಸಲಿ ಕಾರಣ

ಆರೆಸ್ಸೆಸ್ ಸಂಘಟನೆಯಲ್ಲಿ ದೇಶಾದ್ಯಂತ ಅಂದಾಜು ಎರಡೂವರೆ ಸಾವಿರದಿಂದ ಮೂರು ಸಾವಿರ ತಾಲ್ಲೂಕುಗಳಿವೆ. ಪ್ರತಿ ವರ್ಷ ಆಷಾಡ ಮಾಸದ ನಿಗದಿತ ದಿನದಂದು ಗುರುಪೂಜೆ ಅಂತ ಮಾಡಲಾಗುತ್ತದೆ. ಅಂದು ಶಾಖೆಗಳವರು, ಬೂತ್ ಮಟ್ಟದ ಕಾರ್ಯಕರ್ತರು, ಗ್ರಾಮ ಹೋಬಳಿಯ ಸಂಘಿ ಸ್ವಯಂ ಸೇವಕರು ಮುಚ್ಚಿದ ಲಕೋಟೆಯಲ್ಲಿ ಹಣವನ್ನು ಹಾಕಿ ಧ್ವಜದ ಮುಂದಿಡಲಾಗುತ್ತದೆ. ಇದಕ್ಕೆ ಗುರು ಪೂಜೆ ಅಥವಾ ಗುರುದಕ್ಷಿಣೆ ಎಂದು ಕರೆಯಲಾಗುತ್ತದೆ. ಹೀಗೆ ಸಂಗ್ರಹವಾದ ದಕ್ಷಿಣೆ ಕವರ್ ಗಳನ್ನು ಶಾಖಾ ಶಿಕ್ಷಕ ಇಲ್ಲವೇ ಮಂಡಲ ಪ್ರಮುಖರು ತಾಲ್ಲೂಕು ಸಮಿತಿಗೆ ಸಲ್ಲಿಸುತ್ತಾರೆ. ಪ್ರತಿ ವರ್ಷ ಪ್ರತಿಯೊಬ್ಬ ಸ್ವಯಂ ಸೇವಕ ಕನಿಷ್ಟ 10 % ಗುರುದಕ್ಷಿಣೆ ಹೆಚ್ಚಿಸಿ ನೀಡಬೇಕೆಂಬುದು ಅಘೋಷಿತ ನಿಯಮ. ತಾಲ್ಲೂಕು ಸಮಿತಿಗಳು ಗುರುದಕ್ಷಿಣೆ ಸಂಗ್ರಹಿಸಿ ಜಿಲ್ಲಾ ಕಾರ್ಯಾಲಯಕ್ಕೆ ನೀಡುತ್ತವೆ. ಪ್ರತಿ ಮಂಡಲಗಳಿಗೂ ವಾರ್ಷಿಕ ಹಣ ಸಂಗ್ರಹ ಗುರಿಯನ್ನು ನಿಗದಿಪಡಿಸಲಾಗುತ್ತದೆ. ಹೀಗೆ ಪ್ರತಿ ತಾಲ್ಲೂಕಿನಿಂದ ಕನಿಷ್ಟ 10 ಲಕ್ಷ ಸಂಗ್ರಹವಾದರೂ ಮೂರು ಸಾವಿರ ತಾಲ್ಲೂಕುಗಳಿಂದ ಮುನ್ನೂರು ಕೋಟಿಯಷ್ಟು ಹಣ ಸಂಗ್ರಹವಾಗುತ್ತದೆ. ಇದೆಲ್ಲವೂ ಅತೀ ಗುಟ್ಟಾಗಿ ನಡೆಯುತ್ತದೆ. ಯಾರಿಗೂ ಎಷ್ಟು ಹಣ ಸಂಗ್ರಹವಾಯ್ತು ಎನ್ನುವುದೂ ಗೊತ್ತಿರುವುದಿಲ್ಲ. ಹೀಗಿರುವಾಗ ಗುರುದಕ್ಷಿಣೆಯ ಹಣ ಎಷ್ಟು ಕಲೆಕ್ಟ್ ಆಗಿದೆ, ಎಲ್ಲಿ ಸಂಗ್ರಹಿಸಿಡಲಾಗುತ್ತದೆ, ಹೇಗೆ ಯಾವುದಕ್ಕೆಲ್ಲಾ ಹಂಚಿಕೆ ಮಾಡಲಾಗುತ್ತದೆ, ಈ ಎಲ್ಲವನ್ನೂ ಗುಟ್ಟಾಗಿ ಇಡಲಾಗುತ್ತದೆ. ಯಾವಾಗ ಜನರಿಂದ ಗುರುದಕ್ಷಿಣೆ ಹೆಸರಲ್ಲಿ ಕೋಟ್ಯಂತರ ಹಣವನ್ನು ಸಂಗ್ರಹಿಸುತ್ತಾರೋ ಅದರ ಲೆಕ್ಕವನ್ನು ಕೊಡಬೇಕಲ್ಲವೇ? ಪಾರದರ್ಶಕತೆಯನ್ನು ತೋರಿಸಬೇಕಲ್ಲವೇ? ನೋಂದಣಿ ಮಾಡಿಕೊಂಡರೆ ಈ ಎಲ್ಲಾ ವ್ಯವಹಾರವನ್ನು ಆಡಿಟ್ ಮಾಡಿಸಿ ಸರಕಾರದ ಸಕ್ಷಮ ಪ್ರಾಧಿಕಾರಕ್ಕೆ ಸಲ್ಲಿಸಬೇಕಾಗುತ್ತದೆ. ಆದ್ದರಿಂದ ನೋಂದಣಿ ಮಾಡಿಸುವುದನ್ನೇ ಆರೆಸ್ಸೆಸ್ ನಿಷೇಧಿಸಿದೆ. ಇಷ್ಟೊಂದು ಹಣಕಾಸಿನ ವ್ಯವಹಾರ ಇರುವಾಗ ಅದರ ಲೆಕ್ಕಪತ್ರದ ದಾಖಲೆಗಳನ್ನು ರಾಜ್ಯವೊಂದರ ಗೃಹ ಸಚಿವರು ಕೇಳುವುದರಲ್ಲಿ ತಪ್ಪೇನಿದೆ?. ವ್ಯಕ್ತಿಗಳ ಸಮೂಹದ ಸಾಂಸ್ಕೃತಿಕ ಸಂಘಟನೆಯ ಹೆಸರಲ್ಲಿ ಹಣಕಾಸಿನ ವ್ಯವಹಾರವನ್ನು ಯಾಕೆ ಗುಟ್ಟಾಗಿ ಇಡಲಾಗುತ್ತಿದೆ ಎಂದು ಪ್ರಶ್ನಿಸುವುದರಲ್ಲಿ ಯಾವ ಪ್ರಮಾದವಿದೆ?. ನೋಂದಣಿ ಇಲ್ಲದೆ ಕಾರ್ಯಾಚರಣೆ ಮಾಡುವುದು ಕಾನೂನಿಗೆ ವಿರೋಧ ಹಾಗೂ ಸಂವಿಧಾನದ್ರೋಹ ಎಂದು ಆರೋಪಿಸುವುದರಲ್ಲಿ ಯಾವ ಮುಲಾಜಿದೆ?.

ಎಲ್ಲಾ ಸೇವಾ ಸಂಸ್ಥೆಗಳಿಗೂ ಆರೆಸ್ಸೆಸ್ ಮಾನದಂಡ ಅನ್ವಯವಾಗಲಿ

ಕರ್ನಾಟಕದಲ್ಲಿ ಮಠ ಮಾನ್ಯಗಳು ಭಕ್ತಾದಿಗಳ ದಾನ ಕಾಣಿಕೆಗಳಿಂದ ಬಡ ಮಕ್ಕಳಿಗೆ ಊಟ ವಸತಿ ಶಿಕ್ಷಣ ಸೇವೆಯನ್ನು ಕೊಡುತ್ತಿವೆ. ಭಾರತದಲ್ಲಿ ಲಕ್ಷಾಂತರ ಖಾಸಗಿ ಅನುದಾನ ರಹಿತ ಶಾಲೆ ಕಾಲೇಜು ಶಿಕ್ಷಣ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಅವುಗಳೂ ಸಹ ಫೀಸ್ ರೂಪದಲ್ಲಿ ಗುರುದಕ್ಷಿಣೆ ಸಂಗ್ರಹಿಸುತ್ತವೆ. ಆರೆಸ್ಸೆಸ್ ಮಾನದಂಡದ ಪ್ರಕಾರ ಇಂತಹ ಶಿಕ್ಷಣ ಸಂಸ್ಥೆಗಳೂ ಸಹ ನೋಂದಣಿ ಮಾಡಿಕೊಳ್ಳುವ ಅಗತ್ಯವಿಲ್ಲ. ಲೆಕ್ಕಪತ್ರ ಕೊಡಬೇಕಾಗಿಲ್ಲ, ತೆರಿಗೆ ಕಟ್ಟಬೇಕಿಲ್ಲ. ಹೀಗೊಂದು ಆದೇಶವನ್ನು ಕೇಂದ್ರ ಸರಕಾರ ಹೊರಡಿಸಿದರೆ ಉತ್ತಮ.

ಸರಕಾರಿ ಹಣದಲ್ಲಿ ಸಂಘಿ ಅಧಿನಾಯಕನಿಗೇಕೆ ರಕ್ಷಣೆ

ಆರೆಸ್ಸೆಸ್ ಎನ್ನುವುದು ಯಾವುದೇ ಸಾಂವಿಧಾನಿಕ ಸಂಸ್ಥೆಯಲ್ಲ. ಅದರ ಅಧಿನಾಯಕರಿಗೆ ಯಾವುದೇ ಸಾಂವಿಧಾನಿಕ ಹುದ್ದೆಗಳಿಲ್ಲ. ಆದರೂ ಜನರ ತೆರಿಗೆಯ ಕೋಟ್ಯಾಂತರ ರೂಪಾಯಿಗಳನ್ನು ಖರ್ಚು ಮಾಡಿ Z+ ಭದ್ರತೆಯನ್ನು ಕೊಡುವ ಅಗತ್ಯ ಏನಿದೆ ಎಂಬ ಪ್ರಶ್ನೆ ಮೌಲಿಕವಾಗಿದೆ. “ಮೂರು ದಿನಗಳಲ್ಲಿ ದೇಶದ ರಕ್ಷಣೆಗೆ ಸಂಘಿ ಸೈನ್ಯ ಸಿದ್ಧಗೊಳಿಸುವೆ” ಎಂದು ಹೇಳುವ ಮೋಹನ್ ಭಾಗವತರಿಗೆ ಭದ್ರತಾ ಪಡೆಯ ರಕ್ಷಣೆ ಯಾಕೆ? ಅಗತ್ಯವಿದ್ದರೆ ಅವರ ಸಂಘ ಪರಿವಾರದ ಮಿಲಿಟೆಂಟ್ ಪಡೆ ರಕ್ಷಣೆ ಒದಗಿಸಲಿ. ಅದಕ್ಕೆ ಕೇಂದ್ರ ಸರಕಾರ ಯಾವ ಮಾನದಂಡದಲ್ಲಿ ಪ್ರಧಾನಿಗಳಿಗೆ, ರಕ್ಷಣಾ ಸಚಿವರಿಗೆ ಇರುವ Z+ ಸೆಕ್ಯುರಿಟಿ ಒದಗಿಸಬೇಕು?

ಭವ್ಯ ಕಛೇರಿ ನಿರ್ಮಾಣಕ್ಕೆಲ್ಲಿದೆ ಲೆಕ್ಕ..

ದೆಹಲಿಯಲ್ಲಿರುವ ಆರೆಸ್ಸೆಸ್ ‌ ನ ಹೊಸ ಕಛೇರಿ- ಕೇಶವ ಕುಂಜ

ಆರೆಸ್ಸೆಸ್ ಸಂಘಟನೆ ದೆಹಲಿಯ ಕೇಂದ್ರ ಭಾಗದ ಮೂರು ಮುಕ್ಕಾಲು ಎಕರೆ ಪ್ರದೇಶದಲ್ಲಿ 13 ಅಂತಸ್ತುಗಳ “ಕೇಶವ ಕುಂಜ” ಹೆಸರಿನ ಕಚೇರಿ ಕಟ್ಟಡವನ್ನು ನಿರ್ಮಿಸಿದೆ. ಐದು ಲಕ್ಷ ಚದರಡಿಗಳ ಈ ಕಟ್ಟಡದಲ್ಲಿ ಮುನ್ನೂರು ಕೊಠಡಿಗಳಿವೆ. 135 ಕಾರುಗಳನ್ನು ಪಾರ್ಕ್ ಮಾಡುವ ಸೌಲಭ್ಯವಿದೆ. ಇದಕ್ಕೆ ಖರ್ಚಾದ ಹಣ ಮುನ್ನೂರು ಕೋಟಿಗೂ ಹೆಚ್ಚೆಂದು ಹೇಳಲಾಗುತ್ತಿದೆ. ಕಚೇರಿಯೊಂದರ ಬೆಲೆಯೇ ಇಷ್ಟಿರುವಾಗ ಆರೆಸ್ಸೆಸ್ ಸಂಘಟನೆಯ ಆಸ್ತಿ ದೇಶಾದ್ಯಂತ ಅದೆಷ್ಟಿರಬಹುದು. ಈ ಆಸ್ತಿಗಳಿಗೆಲ್ಲಾ ಹಣದ ಮೂಲ ಯಾವುದು? ಎಲ್ಲಿ ಯಾವ ರೂಪದಲ್ಲಿ ಹಣ ಸಂಗ್ರಹಿಸಿಡಲಾಗಿದೆ? ಎನ್ನುವ ಯಾವುದೇ ವಿವರ ದಾಖಲೆಗಳನ್ನೂ ಕೊಡಲಾಗಿಲ್ಲ. ಸಂಘವನ್ನು ರೆಜಿಸ್ಟರ್ ಮಾಡಿಸಿದರೆ ಎಲ್ಲಿ ಈ ಎಲ್ಲಾ ದಾಖಲೆ ಕೊಡಬೇಕಾಗುತ್ತದೋ ಎಂದುಕೊಂಡು ನೂರು ವರ್ಷವಾದರೂ ಇಲ್ಲಿವರೆಗೂ ನೋಂದಣಿ ಮಾಡಿಸಿಲ್ಲ. ಯಾಕೆ ಮಾಡಿಸಿಲ್ಲ ಎಂದು ಪ್ರಶ್ನಿಸಿದರೆ ಹಿಂದೂ ಧರ್ಮ ನೋಂದಣಿಯಾಗಿದೆಯಾ? ಎಂದು ಅಸಂಬದ್ಧವಾಗಿ ಉತ್ತರಿಸಲಾಗುತ್ತಿದೆ. ಹಣಕಾಸಿನ ವ್ಯವಹಾರವನ್ನು ಮುಚ್ಚಿಟ್ಟು ರಹಸ್ಯವನ್ನು ಕಾಪಾಡಿಕೊಂಡು ಬಂದಿರುವುದು ದೇಶಭಕ್ತಿನಾ? ಇಲ್ಲಾ ದೇಶದ್ರೋಹಾನಾ?

ಗೃಹ ಸಚಿವರಿಗೆ ಆರೆಸ್ಸೆಸ್ ಯಾಕೆ ಟಾರ್ಗೆಟ್?

ಮಾಡಲು ಬೇಕಾದಷ್ಟು ಕೆಲಸಗಳಿರುವಾಗ ಪ್ರಿಯಾಂಕ್ ಖರ್ಗೆಯವರು ಅರೆಸ್ಸೆಸ್ ನ್ನು ಮಾತ್ರ ಟಾರ್ಗೆಟ್ ಮಾಡಿ ಪ್ರಶ್ನಿಸುತ್ತಾರೆ ಎಂಬುದು ಸಂಘಿಗಳ ಆಕ್ಷೇಪ. ಆದರೆ ಯಾಕೆ ಪ್ರಶ್ನಿಸಬಾರದು? ಯಾವುದೇ ಕಾನೂನಾತ್ಮಕ ಮಾನ್ಯತೆ ಹಾಗೂ ಅಕೌಂಟೆಬಿಲಿಟಿ ಇಲ್ಲದ ಬೇನಾಮಿ ಸಂಸ್ಥೆಯಿಂದ ಶಾಂತಿ ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆಗಳಿವೆ. ಈ ಸನಾತನಿಗಳು ಈಗಾಗಲೇ ಕರಾವಳಿ ಕರ್ನಾಟಕದಲ್ಲಿ ದ್ವೇಷೋತ್ಪಾದನೆ ಮಾಡಿ ಮತಾಂಧತೆಯನ್ನು ಬಿತ್ತಿ ಹಿಂಸೆಯನ್ನು ಪ್ರಚೋದಿಸಿವೆ. ಹೀಗಾಗಿ ಗೃಹ ಸಚಿವರಾದವರಿಗೆ ರಾಜ್ಯದಲ್ಲಿ ಶಾಂತಿ ಕಾಪಾಡಬೇಕಾಗಿರುವುದು ಕರ್ತವ್ಯವಾಗಿದೆ. ಅವರ ಕರ್ತವ್ಯವನ್ನು ಅವರು ನಿಭಾಯಿಸುತ್ತಿದ್ದಾರೆ. ಅದರ ಜೊತೆಗೆ ಬೇರೆ ರಕ್ಷಣಾತ್ಮಕ ಕೆಲಸಗಳನ್ನೂ ಪೊಲೀಸ್ ಇಲಾಖೆಯ ಮೂಲಕ ಮಾಡಿಸುತ್ತಿದ್ದಾರೆ. ರೌಡಿಗಳನ್ನು ಮಟ್ಟಹಾಕಲು ಆದೇಶಿಸಿದ್ದಾರೆ. ಅವರು ತಮ್ಮ ಕರ್ತವ್ಯದಲ್ಲಿ ವಿಫಲವಾದರೆ ವಿರೋಧಿಸುವುದು ಇದ್ದೇ ಇದೆ. ಆದರೆ ರಾಜ್ಯದಲ್ಲಿ ಸಕ್ರಿಯವಾಗಿರುವ ಬೇನಾಮಿ ಸಂಸ್ಥೆಯೊಂದರ ದಾಖಲೆಗಳನ್ನು ಕೇಳುವುದಾಗಲಿ ಇಲ್ಲವೇ ನೋಂದಣಿ ಕುರಿತು ಪ್ರಶ್ನಿಸುವುದಾಗಲಿ ತಪ್ಪೂ ಅಲ್ಲ, ಗೃಹ ಸಚಿವರ ವ್ಯಾಪ್ತಿಗೆ ಹೊರತೂ ಅಲ್ಲ.

ಹೀಗೆ ಆರೆಸ್ಸೆಸ್ ಎನ್ನುವ ನೂರು ವರ್ಷದ ಬೇನಾಮಿ ಸಂಘಟನೆಗೆ ಕೇಳಬೇಕಾದ ಪ್ರಶ್ನೆಗಳು ಬೇಕಾದಷ್ಟಿವೆ. ಗೃಹ ಸಚಿವರು ಕರ್ನಾಟಕ ಸರಕಾರದ ಪರವಾಗಿ ಮೋಹನ್ ಭಾಗವತರಿಗೆ ಪತ್ರ ಬರೆದು ಕಾನೂನಾತ್ಮಕ ದಾಖಲೆಗಳಿಗಾಗಿ ಮನವಿ ಮಾಡಿಕೊಂಡಿದ್ದಾರೆ. ಅದಕ್ಕೆ ಉತ್ತರಿಸಬೇಕಾದ ಆರೆಸ್ಸೆಸ್ ನಾಯಕರುಗಳು ಮೌನಕ್ಕೆ ಶರಣಾಗಿದ್ದಾರೆ. ಬಿಜೆಪಿ ನಾಯಕರುಗಳು ವಾಗ್ದಾಳಿ ಮಾಡುತ್ತಿದ್ದಾರೆ. ಸಂಘಿ ಅಂಧಭಕ್ತರುಗಳು ಪ್ರಶ್ನಿಸಿದವರನ್ನೇ ದೇಶದ್ರೋಹಿಗಳು ಎನ್ನುವಂತೆ ಪ್ರಚಾರ ಮಾಡುತ್ತಿದ್ದಾರೆ. ಪ್ರಿಯಾಂಕ್ ಖರ್ಗೆಯವರ ಮೌಲಿಕ ಪ್ರಶ್ನೆಗಳ ಪರವಾಗಿ ನಿಲ್ಲಬೇಕಾದ ಕಾಂಗ್ರೆಸ್ಸಿಗರು ಹಾಗೂ ಪ್ರಗತಿಪರರು ಜಾಣ ಮೌನಕ್ಕೆ ಜಾರಿದ್ದಾರೆ. ‌

ಶಶಿಕಾಂತ ಯಡಹಳ್ಳಿ

ರಾಜಕೀಯ ವಿಶ್ಲೇಷಕರು

ಇದನ್ನೂ ಓದಿ- ಜಿಗಜಿಣಗಿಯ “ದಲಿತ ಮನುಷ್ಯ” ಎಂಬ ಧ್ವನಿಯ ಸುತ್ತ….

More articles

Latest article

Most read