Monday, May 20, 2024

ಮದುವೆ ಫೋಟೋ ಡಿಲೀಟ್ ಆದ ಕೂಡಲೇ ದೀಪಿಕಾ-ರಣವೀರ್ ಡಿವೋರ್ಸ್ ಅಂತ ಅರ್ಥನ..?

Most read

ನಟ-ನಟಿಯರ ಸಣ್ಣ ಪುಟ್ಟ ವಿಚಾರಗಳು ಸಹ ಸದಾ ಸುದ್ದಿಯಲ್ಲಿರುತ್ತವೆ. ಅದರಲ್ಲೂ ಈಗ ಸೋಷಿಯಲ್ ಮೀಡಿಯಾ ಜಮಾನವಾಗಿರುವ ಕಾರಣ ಫೋಟೋ ಡಿಲೀಟ್ ಆದ್ರೂ, ಅನ್ ಫಾಲೋ ಮಾಡಿದರೂ ಸುದ್ದಿಗಳಾಗುತ್ತವೆ. ಜೋಡಿಗಳೇನಾದರೂ ಈ ರೀತಿ ಮಾಡಿದಾಗ ಡಿವೋರ್ಸ್ ವಿಚಾರ ಚರ್ಚೆಗೆ ಬರುತ್ತದೆ. ಈಗ ದೀಪಿಕಾ ಪಡುಕೋಣೆಯ ವಿಚಾರವೂ ಹಾಗೇ ಆಗಿದೆ.

ಬಾಲಿವುಡ್ ನ ಮೋಸ್ಟ್ ಬ್ಯೂಟಿಫುಲ್ ಕಪಲ್ಸ್ ಸಾಲಿನಲ್ಲಿ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಕೂಡ ನಿಲ್ಲುತ್ತಾರೆ‌. ಇತ್ತಿಚೆಗಷ್ಟೇ ಮಗುವಿನ ನಿರೀಕ್ಷೆಯಲ್ಲಿರುವ ವಿಚಾರವನ್ನು ಜೋಡಿ ಒಟ್ಟಾಗಿ ಘೋಷಣೆ ಮಾಡಿತ್ತು. ಆದರೆ ಸೋಷಿಯಲ್ ಮೀಡಿಯಾದ ಅಪ್ಡೇಟ್ ಅಭಿಮಾನಿಗಳನ್ನು ಆತಂಕಕ್ಕೆ ತಳ್ಳಿದೆ. ರಣವೀರ್ ಸಿಂಗ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಮದುವೆ ಫೋಟೋಗಳನ್ನು ತೆಗೆದು ಹಾಕಿದ್ದಾರೆ. ಎಲ್ಲವೂ ಸರಿ ಇದ್ದರೂ ರಣವೀರ್ ಸಿಂಗ್ ಈ ರೀತಿ ಮಾಡಿದ್ದೇಕೆ ಎಂಬ ಆತಂಕ ಅಭಿಮಾನಿಗಳನ್ನು ಕಾಡುತ್ತಿದೆ.

ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಕೆಲವು ವರ್ಷಗಳ ಕಾಲ ಡೇಟಿಂಗ್ ಮಾಡಿ, 2018ರಲ್ಲಿ ಇಟಲಿಯಲ್ಲಿ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಮದುವೆ ಆಗಿದ್ದರು. ಕೊಂಕಣಿ ಹಾಗೂ ಸಿಂಧಿ ಎರಡು ಸಮುದಾಯಗಳ ಸಂಪ್ರದಾಯದಂತೆ ಮದುವೆಯಾಗಿದ್ದರು. ಈಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ರಣವೀರ್ ಸಿಂಗ್ 2013ರಿಂದ ಹಾಕಿದ ಫೋಟೋಗಳನ್ನೆಲ್ಲಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಡಿಲೀಟ್ ಮಾಡಿದ್ದಾರೆ. ಅದರಲ್ಲಿ ಮದುವೆ ಫೋಟೊಗಳನ್ನು ಸಹ ಡಿಲೀಟ್ ಮಾಡಲಾಗಿದೆ. ಇದು ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದ್ದು, ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ ದೀಪಿಕಾ ಡಿವೋರ್ಸ್ ತೆಗೆದುಕೊಳ್ಳುತ್ತಿದ್ದಾರಾ ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿದೆ. ಆದರೆ ರಣವೀರ್ 2013ರಿಂದ ಫೋಟೋ ಡಿಲೀಟ್ ಮಾಡಿರುವಾಗ ಸಮಾಧಾನದಿಂದ ಯೋಚಿಸಬೇಕು ಅಲ್ಲವೇ.

More articles

Latest article