ಉದ್ದುದ್ದ ಭಾಷಣದಿಂದ ದೇಶ ಅಭಿವೃದ್ಧಿಯಾಗುವುದಿಲ್ಲ : ನರೇಂದ್ರ ಮೋದಿ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

ಜನರ ತಟ್ಟೆಯಲ್ಲಿರುವ ಆಹಾರ ಮತ್ತು ಜೇಬಿನಲ್ಲಿರುವ ಹಣವೇ ದೇಶದ ಪ್ರಗತಿಯ ಮಾನದಂಡ: ಕಾಂಗ್ರೆಸ್ ಅಧ್ಯಕ್ಷ

ನವದೆಹಲಿ, ನ.18 : ದೇಶದಲ್ಲಿ ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದು, ಸಾಮಾನ್ಯ ಜನರ ಬದುಕು ಸಂಕಷ್ಟಕ್ಕೆ ಸಿಲುಕಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೇಂದ್ರದ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

2014ರಲ್ಲಿ ಅಧಿಕಾರಕ್ಕೆ ಬಂದಾಗ ಬೆಲೆ ಏರಿಕೆ ನಿಯಂತ್ರಿಸುವುದಾಗಿ ಭರವಸೆ ನೀಡಿದ್ದ ಸರ್ಕಾರ, ಕಳೆದ 12 ವರ್ಷಗಳಲ್ಲಿ ಜನಸಾಮಾನ್ಯರ ಮೇಲಿನ ಆರ್ಥಿಕ ಹೊರೆಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಅವರು ಟೀಕಿಸಿದ್ದಾರೆ.

ಈ ಕುರಿತು ಬುಧವಾರ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಿಂದಿಯಲ್ಲಿ ಪೋಸ್ಟ್ ಮಾಡಿರುವ ಖರ್ಗೆ, “ಮೋದಿ ಜಿ ಅವರು ಹಣದುಬ್ಬರ ಕಡಿಮೆ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ಇಂದು ಸಾಮಾನ್ಯ ಜನರ ಊಟದ ತಟ್ಟೆ ಚಿಕ್ಕದಾಗುತ್ತಿದೆ, ಜೇಬು ಖಾಲಿಯಾಗುತ್ತಿದೆ. ಜೀವನ ನಿರ್ವಹಣೆ ದಿನದಿಂದ ದಿನಕ್ಕೆ ಕಷ್ಟವಾಗುತ್ತಿದೆ” ಎಂದು ಹೇಳಿದ್ದಾರೆ.

“ದೇಶದ ಪ್ರಗತಿಯನ್ನು ಪ್ರಧಾನಿ ಅವರ ಭಾಷಣಗಳ ಉದ್ದದಿಂದ ಅಳೆಯಲು ಸಾಧ್ಯವಿಲ್ಲ. ಸಾಮಾನ್ಯ ಜನರ ತಟ್ಟೆಯಲ್ಲಿ ಎಷ್ಟು ಆಹಾರವಿದೆ, ಅವರ ಜೇಬಿನಲ್ಲಿ ಎಷ್ಟು ಹಣ ಉಳಿದಿದೆ ಎಂಬುದೇ ನಿಜವಾದ ಪ್ರಗತಿಯ ಮಾನದಂಡ. ನಿಮ್ಮ ಆರ್ಥಿಕ ನಿರ್ವಹಣೆಯ ವೈಫಲ್ಯಕ್ಕೆ ಜನರು ಇನ್ನೆಷ್ಟು ದಿನ ಬೆಲೆ ತೆರಬೇಕು?” ಎಂದು ಖರ್ಗೆ ಪ್ರಶ್ನಿಸಿದ್ದಾರೆ.

ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಉಲ್ಲೇಖಿಸಿರುವ ಅವರು, 2014ರಿಂದ 2026ರವರೆಗೆ ಹಲವು ದಿನಬಳಕೆಯ ವಸ್ತುಗಳ ಬೆಲೆ ಗಣನೀಯವಾಗಿ ಹೆಚ್ಚಾಗಿದೆ ಎಂದು ಹೇಳಿದ್ದಾರೆ. ಗೋಧಿ ಹಿಟ್ಟು ಕೆ.ಜಿ.ಗೆ 21 ರೂ. ಇದ್ದದ್ದು 69 ರೂ., ತೊಗರಿ ಬೇಳೆ 75 ರೂ.ನಿಂದ 180 ರೂ., ಸಾಸಿವೆ ಎಣ್ಣೆ ಲೀಟರ್‌ಗೆ 102 ರೂ.ನಿಂದ 263 ರೂ. ಹಾಗೂ ಹಾಲಿನ ಬೆಲೆ ಲೀಟರ್‌ಗೆ 36 ರೂ.ನಿಂದ 85 ರೂ.ಗೆ ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ. ಅಕ್ಕಿಯ ಬೆಲೆ ಕೆ.ಜಿ.ಗೆ 29 ರೂ.ನಿಂದ 71 ರೂ.ಗೆ ಹೆಚ್ಚಾಗಿದೆ ಎಂದು ಅವರು ಉಲ್ಲೇಖಿಸಿದ್ದಾರೆ.

ಅಕ್ಟೋಬರ್‌ನಲ್ಲಿ ಆಹಾರ ಹಣದುಬ್ಬರ ಶೇ.8.94ಕ್ಕೆ ಹಾಗೂ ಸಗಟು ಹಣದುಬ್ಬರ ಶೇ.12.29ಕ್ಕೆ ತಲುಪಿದೆ ಎಂದು ಖರ್ಗೆ ಹೇಳಿದ್ದಾರೆ. ಸಮೀಕ್ಷೆಯೊಂದರ ಪ್ರಕಾರ, ಶೇ.61ರಷ್ಟು ಕುಟುಂಬಗಳ ಮಾಸಿಕ ಅಗತ್ಯ ವಸ್ತುಗಳ ಖರ್ಚು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.20ಕ್ಕಿಂತ ಹೆಚ್ಚಾಗಿದೆ. ಅಲ್ಲದೆ, ಶೇ.74ರಷ್ಟು ಜನರು ಅನಿವಾರ್ಯವಲ್ಲದ ಖರ್ಚುಗಳನ್ನು ಕಡಿತಗೊಳಿಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಕಳೆದ 12 ವರ್ಷಗಳ ಮೋದಿ ಆಡಳಿತದಲ್ಲಿ ಬೆಲೆ ಏರಿಕೆಯ ಹೊರೆ ಜನರನ್ನು ಕಂಗೆಡಿಸಿದ್ದು, ಜನಸಾಮಾನ್ಯರು ಅಸಹಾಯಕ ಸ್ಥಿತಿಗೆ ತಲುಪಿದ್ದಾರೆ ಎಂದು ಖರ್ಗೆ ಆರೋಪಿಸಿದ್ದಾರೆ.

More articles

Latest article

Most read