ರೈಲ್ವೇ ನೇಮಕಾತಿ ಎಕ್ಸಾಂ; ಜನಿವಾರ ಬ್ಯಾನ್

ರಾಜ್ಯ ಸರಕಾರ ವ್ಯವಸ್ಥೆಗೊಳಿಸಿದ ಪರೀಕ್ಷೆಗಳಲ್ಲಿ ಜನಿವಾರ ತೆಗೆಸಿದರೆ ಆಕಾಶವೇ ತಲೆಯ ಮೇಲೆ ಬಿದ್ದಂತೆ, ಭಾವನೆಗಳಿಗೆ ಬಾಧೆಯಾದಂತೆ ಆಕ್ರೋಶ ವ್ಯಕ್ತಪಡಿಸುವ ವೈದಿಕರಿಗೆ ಬಿಜೆಪಿ ಸರಕಾರದ ಇಲಾಖೆಯ ಪರೀಕ್ಷೆಯಲ್ಲಿ ಮಂಗಳಸೂತ್ರ ಜನಿವಾರ ಬ್ಯಾನ್ ಮಾಡಿದಾಗ ಭಾವನೆಗಳಿಗೆ ನೋವಾಗುವುದಿಲ್ಲವೇ? –ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.

ಒಂದೆರಡು ಸಿಇಟಿ ಪರೀಕ್ಷಾ ಕೇಂದ್ರಗಳಲ್ಲಿ ಒಂದಿಬ್ಬರು ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಜನಿವಾರ ತೆಗೆದಿರಿಸಿದ ಪ್ರಕರಣ ಬ್ರಾಹ್ಮಣ ಸಮಾಜದವರನ್ನು ಕೆರಳಿಸಿತ್ತು. “ಧಾರ್ಮಿಕ ಹಕ್ಕುಗಳಿಗೆ ದಕ್ಕೆ ಮಾಡಲಾಗುತ್ತಿದೆ, ಬ್ರಾಹ್ಮಣರ ಭಾವನೆಗಳಿಗೆ ಅಪಮಾನ ಎಸಗಲಾಗುತ್ತಿದೆ, ಜನಿವಾರ ಹರಣದ ಮೂಲಕ ಬ್ರಾಹ್ಮಣರನ್ನು ಟಾರ್ಗೆಟ್ ಮಾಡಲಾಗುತ್ತಿದೆ” ಎಂದೆಲ್ಲಾ ಆಪಾದಿಸಿದ ಬ್ರಾಹ್ಮಣ ಸಂಘಗಳ ಆಕ್ರೋಶಕ್ಕೆ ಹೆದರಿದ ಪುಕ್ಕಲು ಕಾಂಗ್ರೆಸ್ ಸರಕಾರ ಈ ಕೃತ್ಯಕ್ಕೆ ಕಾರಣರಾದವರನ್ನು ಕೆಲಸದಿಂದಲೇ ಅಮಾನತ್ತು ಮಾಡಿಸಿತ್ತು. ಕೃಪಾನಿಧಿ ಕಾಲೇಜಿನಲ್ಲಿ  ಇನ್ಮುಂದೆ ಯಾವುದೇ ಕಾಂಪಿಟೇಟಿವ್ ಪರೀಕ್ಷೆ ನಡೆಸದಂತೆ ನಿರ್ಬಂಧ ವಿಧಿಸಿತ್ತು. ಇಂತಹ ಅವಕಾಶಕ್ಕಾಗಿಯೇ ಕಾಯುತ್ತಿದ್ದ ಬಿಜೆಪಿ ಪಕ್ಷದ ನಾಯಕರು “ಇದು ಸರಕಾರದ ಹಿಂದೂ ವಿರೋಧಿ ಕೃತ್ಯ” ಎಂದು ತಮ್ಮ ಕೋಮು ಪ್ರಚೋದನಾ ಕಾರ್ಯ ಮುಂದುವರೆಸಿದರು.

ಇದಾಗಿ ಎರಡು ದಿನ ಕಳೆದಿಲ್ಲ, ಜನಿವಾರಿಗರಿಗೆ ಮತ್ತೊಂದು ಆಘಾತದ ಸುದ್ದಿ ಅಪ್ಪಳಿಸಿತು. ಕೇಂದ್ರ ಸರಕಾರದ ರೈಲ್ವೇ ಇಲಾಖೆಯ ನರ್ಸಿಂಗ್ ಸುಪರಿಟೆಂಡೆಂಟ್ ನೇಮಕಾತಿ ಪರೀಕ್ಷೆಗಳು ಎ.29 ರಂದು ದೇಶಾದ್ಯಂತ ನಡೆಯುತ್ತಿದ್ದು “ಪರೀಕ್ಷಾ ಹಾಲ್ ನಲ್ಲಿ ಮಂಗಳಸೂತ್ರ, ಜನಿವಾರ ಸೇರಿದಂತೆ ಯಾವುದೇ ಧಾರ್ಮಿಕ ಸಂಕೇತಗಳಿಗೆ ಅವಕಾಶವಿಲ್ಲ” ಎಂದು ಪರೀಕ್ಷಾ ಪ್ರವೇಶಪತ್ರದ ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿತ್ತು. ಇದರಿಂದ ಬೇರೆ ಯಾರಿಗೂ ಆಕ್ಷೇಪಣೆ ಇಲ್ಲದೇ ಹೋದರೂ ಈ ಆದೇಶ ವೈದಿಕರಿಗೆ ನುಂಗಲಾರದ ತುತ್ತಾಗಿದೆ. ಜನಿವಾರಿಗರ ಜೀವವೇ ಹಾರಿಹೋದಂತಾಗಿತ್ತು.

“ವರ್ಣವ್ಯವಸ್ಥೆಯ  ಜಾತಿಸೂಚಕ ಸಂಕೇತವಾದ ಜನಿವಾರದ ಮೇಲೆ ನಿಷೇಧ ಹೇರುವುದು ಅಂದರೆ ಬ್ರಾಹ್ಮಣರ ಶ್ರೇಷ್ಠತೆಯ ಭಾವನೆಗಳ ಮೇಲೆ ದಾಳಿ ಮಾಡಿದಂತೆ” ಎಂದು ಪರಿಭಾವಿಸುವ ಬ್ರಾಹ್ಮಣರು ಈಗ ಕೇಂದ್ರ ಸರಕಾರದ ವಿರುದ್ಧ ಹೋರಾಟಕ್ಕೆ ಮುಂದಾಗಲಿ. ಕೇಂದ್ರದ ಬಿಜೆಪಿ ಸರಕಾರವನ್ನು ಹಿಂದೂ ವಿರೋಧಿ ಸರಕಾರ ಎಂದು ಆರೋಪಿಸಲಿ. ರೈಲ್ವೆ ಇಲಾಖೆಯ ರಾಜ್ಯ ಸಚಿವರಾದ ವಿ.ಸೋಮಣ್ಣನವರ ಮನೆಯ ಮುಂದೆ ಧರಣಿ ಕುಳಿತುಕೊಳ್ಳಲಿ. ಕೋರ್ಟಿಗೆ ಹೋಗಿ ಮೊಕದ್ದಮೆ ದಾಖಲಿಸಲಿ.  ಸಕಲ ಬ್ರಾಹ್ಮಣ ಸಭಾ ಸಂಘಟನೆಗಳು ಕೂಡಲೇ ಬೀದಿಗಿಳಿದು ಮೋದಿ ಸರಕಾರದ ಹಿಂದೂ ವಿರೋಧಿ ನೀತಿಯ ವಿರುದ್ಧ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಿ. ಬೇಡ ಎನ್ನುವವರು ಯಾರು?

ಆದರೆ ಇಂತಹ ಯಾವುದನ್ನೂ  ಜನಿವಾರ ಪ್ರಿಯರು ಈಗ ಮಾಡುವುದಿಲ್ಲ. ಹಿಂದುತ್ವದ ಮೇಲೆ ಹಲ್ಲೆ ಎಂದು ಆರೋಪಿಸುವುದಿಲ್ಲ. ಯಾಕೆಂದರೆ ಕೇಂದ್ರದಲ್ಲಿರುವುದು ಇವರದೇ ಹಿಂದುತ್ವವಾದಿ ಸರಕಾರ. ಆ ಸರಕಾರದ ಹಿಂದಿರುವುದು ಸನಾತನವಾದಿ ಆರೆಸ್ಸೆಸ್. ಅಲ್ಲಿರುವ ನಾಯಕರೆಲ್ಲರೂ ವೈದಿಕಶಾಹಿ ಮಹನೀಯರೇ. ಅವರೆಲ್ಲರ ಉದ್ದೇಶ ಮನುವಾದಿ ರಾಷ್ಟ್ರ ನಿರ್ಮಾಣ. ಹೀಗಿರುವಾಗ ಹಿಂದೂ ಹಿಂದುತ್ವದ ಹೆಸರಲ್ಲಿ ಈ ಸನಾತನಿಗಳ ಹಿತಾಸಕ್ತಿಗಾಗಿ ಅಸ್ತಿತ್ವಕ್ಕೆ ಬಂದಿರುವ ಸಂಘದ ವಿರುದ್ಧವೇ ಹೋರಾಟ ರೂಪಿಸುವ ಧೈರ್ಯ ಹಾಗೂ ಸಾಹಸ ಈ ಜನಿವಾರಿಗರಲ್ಲಿದೆಯೇ? ಕೇಂದ್ರ ಸರಕಾರವನ್ನು ಹಿಂದೂ ವಿರೋಧಿ ಎಂದು ಆಪಾದಿಸುವ ತಾಕತ್ತು ಈ ಬ್ರಾಹ್ಮಣ ಸಂಘಗಳಿಗೆ ಇದೆಯೇ?

ರಾಜ್ಯ ಸರಕಾರ ವ್ಯವಸ್ಥೆಗೊಳಿಸಿದ ಪರೀಕ್ಷೆಗಳಲ್ಲಿ ಜನಿವಾರ ತೆಗೆಸಿದರೆ ಆಕಾಶವೇ ತಲೆಯ ಮೇಲೆ ಬಿದ್ದಂತೆ, ಭಾವನೆಗಳಿಗೆ ಬಾಧೆಯಾದಂತೆ ಆಕ್ರೋಶ ವ್ಯಕ್ತಪಡಿಸುವ ವೈದಿಕರಿಗೆ ಬಿಜೆಪಿ ಸರಕಾರದ ಇಲಾಖೆಯ ಪರೀಕ್ಷೆಯಲ್ಲಿ ಮಂಗಳಸೂತ್ರ ಜನಿವಾರ ಬ್ಯಾನ್ ಮಾಡಿದಾಗ ಭಾವನೆಗಳಿಗೆ ನೋವಾಗುವುದಿಲ್ಲವೇ?

ಯಾವುದಕ್ಕೂ ಇರಲಿ ಎಂದು ಈಗಾಗಲೇ ವಿಶ್ವ ಹಿಂದೂ ಪರಿಷತ್ ಟ್ವೀಟ್ ಮೂಲಕ ವಿರೋಧ ವ್ಯಕ್ತಪಡಿಸಿದೆ.

ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ವ್ಯಕ್ತಪಡಿಸುವುದು ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಕೊಡುವುದಕ್ಕೆ ಮಾತ್ರ ಬ್ರಾಹ್ಮಣರ ಪ್ರತಿರೋಧ ಸೀಮಿತವಾದಂತಿದೆ. ‘ಪರೀಕ್ಷೆಯ ಪ್ರವೇಶ ಪತ್ರ ರೂಪಿಸಿದವರನ್ನು, ಅದಕ್ಕೆ ಕುಮ್ಮಕ್ಕು ಕೊಟ್ಟ ಎಲ್ಲರನ್ನೂ ಕೂಡಲೇ ಅಮಾನತ್ತು ಗೊಳಿಸಿ ಬಂಧಿಸಬೇಕು ಹಾಗೂ ರೈಲ್ವೆ ಇಲಾಖೆಯ ಸಚಿವರು ಕೂಡಲೇ ರಾಜೀನಾಮೆ ಕೊಡಬೇಕು’ ಎಂದು ಕರೆಕೊಡುವ ಇಚ್ಛಾಶಕ್ತಿಯಾದರೂ ವೈದಿಕ ಸಂಘಟನೆಗಳಿಗೆ ಇದೆಯಾ? ಹೋಗಲಿ ಕಾಂಗ್ರೆಸ್ ಸರಕಾರವನ್ನು ಹಿಂದೂ ವಿರೋಧಿ ಎಂದು ಆಪಾದಿಸುವ ರಾಜ್ಯ ಬಿಜೆಪಿ ನಾಯಕರಿಗೆ ಅದೇ ಆರೋಪವನ್ನು ಕೇಂದ್ರ ಸರಕಾರದ ಮೇಲೆ ಮಾಡುವ ಧೈರ್ಯ ಇದೆಯಾ? ಹೋಗಲಿ ಕರ್ನಾಟಕದ ಯಾವನಾದರೂ ಒಬ್ಬ ಸಂಸದನಿಗೆ ಈ ಜನಿವಾರ ನಿಷೇಧ ಪ್ರಕರಣ ಕುರಿತು ಮೋದಿಯವರನ್ನು ಪ್ರಶ್ನಿಸುವ ತಾಕತ್ತು ಇದೆಯಾ? ಇದೆಲ್ಲಾ ಸಾಧ್ಯವೇ ಇಲ್ಲ.

ಈ ಧಾರ್ಮಿಕ ಸಂಕೇತಗಳನ್ನು ಮೀರಿದ್ದು ವಿದ್ಯಾರ್ಥಿಗಳ ಬದುಕಿನ ಭವಿಷ್ಯ. ಅತೀ ಹೆಚ್ಚು ಕರ್ಮಠತನ ತೋರದೇ ಪರೀಕ್ಷಾ ಸಮಯದಲ್ಲಿ ಧಾರ್ಮಿಕ ಸಂಕೇತಗಳನ್ನು ಕಳಚಿಟ್ಟು ಆ ನಂತರ ಮತ್ತೆ ಧರಿಸಿದರೆ ಸಮಸ್ಯೆಯೇ ಇರುವುದಿಲ್ಲ. ಬೇಕಾದರೆ ಶುದ್ಧೀಕರಣ ಮಾಡಿಕೊಳ್ಳಲಿ. ಆದರೆ ಸಂವಿಧಾನದ ಅಡಿಯಲ್ಲಿ ಎಲ್ಲರಿಗೂ ಸಮಾನವಾದ ನಿಯಮ ನಿಬಂಧನೆಗಳಿರಬೇಕು. ಮುಸ್ಲಿಂ ಮಹಿಳೆಯರಿಗೆ ತಮ್ಮ ಧಾರ್ಮಿಕ ಸಂಕೇತವಾದ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ಇಲ್ಲ ಎನ್ನುವುದಾದರೆ ಬೇರೆ ಯಾರ ಧಾರ್ಮಿಕ ಸಂಕೇತಗಳಿಗೂ ರಿಯಾಯಿತಿ ಕೊಡಕೂಡದು. ಸಂವಿಧಾನದಲ್ಲಿ ಧಾರ್ಮಿಕ ಆಧಾರಿತ ರಿಯಾಯತಿ ಎನ್ನುವುದಿಲ್ಲ. ಜನಿವಾರ ಎನ್ನುವುದಕ್ಕೆ ಸಂವಿಧಾನದಲ್ಲಿ ವಿಶೇಷ ಮಾನ್ಯತೆ ಇಲ್ಲ. ಈ ದೇಶ ನಡೆಯುವುದು ಸಂವಿಧಾನದ ನೀತಿ ನಿಯಮಗಳಿಂದಲೇ ಹೊರತು ಧಾರ್ಮಿಕ ಭಾವನೆಗಳಿಂದಲ್ಲ.

ಯಾವುದೇ ಪರೀಕ್ಷೆಗಳಲ್ಲಿ ಎಲ್ಲಾ ರೀತಿಯ ಧಾರ್ಮಿಕ ಸಂಕೇತಗಳನ್ನು ನಿಷೇಧಿಸುವುದು ಉತ್ತಮ. ಎಲ್ಲಾ ಆಚರಣೆಗಳು ಆಯಾ ಜಾತಿ ಧರ್ಮದವರ ಮನೆ ಮನಗಳಲ್ಲಿರಲಿ. ಎಲ್ಲ ಧರ್ಮೀಯರು ಸಂವಿಧಾನದ ಸಮಾನತೆಯ ಆಶಯಗಳಿಗೆ ಬದ್ಧವಾಗಿರಲಿ.

ಶಶಿಕಾಂತ ಯಡಹಳ್ಳಿ

ರಾಜಕೀಯ ವಿಶ್ಲೇಷಕರು

ಇದನ್ನೂ ಓದಿ –ಹಿಂದೂ ಪದದ ಹಿಂದು ಮುಂದು

More articles

Latest article

Most read