ಹಿಂದೂಗಳಿಂದ ಹಿಂದೂ ದೇವಮಂದಿರಗಳ ಲೂಟಿ

ಮುಸಲ್ಮಾನ ರಾಜರುಗಳಾದ ಘಜ್ನಿ, ಘೋರಿ, ಔರಂಗಜೇಬ್ ನಂತಹವರು ಸಂಪದ್ಭರಿತ ರಾಜ್ಯಗಳ ಮೇಲೆ ಧಾಳಿ ಮಾಡಿ ದೇವಸ್ಥಾನಗಳನ್ನು ಲೂಟಿ ಮಾಡಿದರು ಎಂಬುದು ಸನಾತನಿಗಳ ವಾದವಾಗಿದೆ. ಇಲ್ಲಿ ಲೂಟಿಕೋರರು ಹಿಂದೂ ರಾಜರಾಗಿರಲಿ ಇಲ್ಲ ಮುಸಲ್ಮಾನ ರಾಜರಾಗಿರಲಿ ಅವರ ಉದ್ದೇಶ ಸಂಪತ್ತಿನ ಲೂಟಿಯಾಗಿತ್ತು. ಅದಕ್ಕೆ ಹಿಂದೂ ಮುಸ್ಲಿಂ ಎನ್ನುವ ಭೇದವೇ ಇರಲಿಲ್ಲ. ಈಗ ಹಿಂದೂಗಳ ಶ್ರದ್ಧಾಕೇಂದ್ರವೆಂದು ಬಿಂಬಿಸಲಾದ ಅಯೋಧ್ಯೆಯ ರಾಮಮಂದಿರದಲ್ಲಿ ಭಕ್ತರು ಕೊಟ್ಟ ದೇಣಿಗೆಯನ್ನೇ ಕಳ್ಳತನ ಮಾಡಲಾಗಿದೆ. ಹುಂಡಿ ಎಣಿಸುವ ಹಿಂದೂಗಳು, ಕಾಣಿಕೆಯ ಲೆಕ್ಕ ಇಡುವ ಟ್ರಸ್ಟಿಗಳು ಸೇರಿ ರಾಮಮಂದಿರದ ಸಂಪತ್ತನ್ನು ಲೂಟಿ ಮಾಡಿದ್ದಾರೆ- ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.

ಹಿಂದೂಸ್ಥಾನದ ಮೇಲೆ ಘೋರಿ, ಘಜ್ನಿ ಮಹಮ್ಮದ್ ಗಳು ದಂಡೆತ್ತಿ ಬಂದು ಹಿಂದೂ ದೇವಸ್ಥಾನಗಳನ್ನು ಲೂಟಿ ಮಾಡಿದರು ಎಂದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಮುಸ್ಲಿಂ ಆಕ್ರಮಣಕಾರರಿಗೆ ಹಿಂದೂ ದೇವಾಲಯಗಳೇ ಟಾರ್ಗೆಟ್ ಆಗಿದ್ದವು ಎಂದು ಹೇಳುತ್ತಲೇ ಬರಲಾಗಿದೆ.

ಆದರೆ ಹಿಂದೂ ರಾಜರುಗಳೇ ಹಿಂದೂ ದೇವಾಲಯಗಳ ಮೇಲೆ ದಾಳಿ ಮಾಡಿ ಸಂಪತ್ತನ್ನು ಲೂಟಿ ಮಾಡಿದ ಉದಾಹರಣೆಗಳೂ ಬೇಕಾದಷ್ಟಿದ್ದುದನ್ನು ಇತಿಹಾಸಕಾರರು ದಾಖಲಿಸಿದ್ದಾರೆ.

* ಪಲ್ಲವ ರಾಜ ನರಸಿಂಹವರ್ಮನ್ : ಕ್ರಿಶ 642  ರಲ್ಲಿ ಚಾಲುಕ್ಯರ ರಾಜಧಾನಿ ವತಾಪಿ ( ಈಗಿನ ಬಾದಾಮಿ) ಮೇಲೆ ದಾಳಿ ಮಾಡಿ ಅಲ್ಲಿದ್ದ ಗಣೇಶ ವಿಗ್ರಹ ಹಾಗೂ ಸಂಪತ್ತನ್ನು ಲೂಟಿ ಮಾಡಿ ತನ್ನ ರಾಜ್ಯಕ್ಕೆ ತರುತ್ತಾನೆ.

* ಹತ್ತನೇ ಶತಮಾನದಲ್ಲಿ ರಾಷ್ಟ್ರಕೂಟ ರಾಜ ಇಂದ್ರ III ನು ಪ್ರತಿಹಾರರ ಪೋಷಣೆಯಲ್ಲಿದ್ದ ಕಲಪ್ರಿಯ ದೇವಾಲಯವನ್ನು ಲೂಟಿ ಮಾಡಿ ನಾಶಗೊಳಿಸುತ್ತಾನೆ.

* 11 ನೇ ಶತಮಾನದಲ್ಲಿ ಕಾಶ್ಮೀರದ ರಾಜ ಹರ್ಷನು ಮಂದಿರಗಳ ಲೂಟಿಯನ್ನು ಸಂಘಟನಾತ್ಮಕವಾಗಿ ಮಾಡಿದ್ದಕ್ಕೆ ದಾಖಲೆಗಳಿವೆ.

* 1514 ರಲ್ಲಿ ವಿಜಯನಗರದ ಅರಸು ಕೃಷ್ಣದೇವರಾಯನು ಉದಯಗಿರಿಯ ದೇವಾಲಯದ ಮೇಲೆ ದಾಳಿ ಮಾಡಿ ಬಾಲಕೃಷ್ಣ ವಿಗ್ರಹವನ್ನು ಲೂಟಿ ಮಾಡಿದ್ದನ್ನು Frontline ಮತ್ತು The hindu ಪತ್ರಿಕೆ ವರದಿ ಮಾಡಿದೆ.

* ಇತರ ರಾಜವಂಶದವರಾದ ಪಲ್ಲವರು, ಚಾಲುಕ್ಯರು, ರಾಷ್ಟ್ರಕೂಟರು, ಚೋಳರು, ಪ್ರತಿಹಾರರು, ಚಂದೇಲರು ಮುಂತಾದ  ರಾಜರುಗಳು ಎದುರಾಳಿ ರಾಜರುಗಳ ದೇವಾಲಯಗಳನ್ನು ಲೂಟಿ ಮಾಡಿದ ಉದಾಹರಣೆಗಳಿವೆ.

ಯಾಕೆಂದರೆ

* ಆಗ ಮಂದಿರಗಳು ಆರ್ಥಿಕ ಕೇಂದ್ರಗಳಾಗಿದ್ದವು.

* ಭೂಮಿ ಬಂಗಾರವನ್ನು ದೇವಸ್ಥಾನಗಳಿಗೆ ದಾನವಾಗಿ ಕೊಡಲಾಗುತ್ತಿತ್ತು.

* ದೇವಾಲಯಗಳನ್ನು ಲೂಟಿ ಮಾಡುವುದು ಶತ್ರು ರಾಜರನ್ನು ಆರ್ಥಿಕವಾಗಿ ಹಾಗೂ ಧಾರ್ಮಿಕವಾಗಿ ದುರ್ಬಲಗೊಳಿಸುವ ತಂತ್ರವಾಗಿತ್ತು.

* ಶತ್ರು ರಾಜ್ಯದ ವಿಗ್ರಹ ಮತ್ತು ಸಂಪತ್ತನ್ನು ಲೂಟಿ ಮಾಡಿ ತಮ್ಮ ರಾಜಧಾನಿಯಲ್ಲಿ ಪ್ರದರ್ಶಿಸುವುದು ರಾಜರುಗಳಿಗೆ ವಿಜಯದ ಸಂಕೇತವಾಗಿತ್ತು.

7 ನೇ ಶತಮಾನದಿಂದಲೂ ದೇವಸ್ಥಾನಗಳ ಲೂಟಿ ಅವ್ಯಾಹತವಾಗಿ ನಡೆದಿತ್ತು ಎಂದು ಇತಿಹಾಸಕಾರರಾದ ರಿಚರ್ಡ್ ಈಟನ್ ಹಾಗೂ ರಿಚರ್ಡ್ ಡೇವಿಸ್ ರವರು ವಿವರವಾಗಿ ಅಧ್ಯಯನ ಮಾಡಿದ್ದಾರೆ.

ಯಾಕೆಂದರೆ ದೇವ ಮಂದಿರಗಳು ಆರ್ಥಿಕ ಕೇಂದ್ರಗಳಾಗಿದ್ದವು. ಯುದ್ಧದಲ್ಲಿ ಎದುರಾಳಿಯ ದೇವಾಲಯಗಳನ್ನು ಲೂಟಿ ಮಾಡುವುದು ಶತ್ರುಗಳನ್ನು ಆರ್ಥಿಕವಾಗಿ ಹಾಗೂ ಧಾರ್ಮಿಕವಾಗಿ ದುರ್ಬಲಗೊಳಿಸುವ ತಂತ್ರಗಾರಿಕೆಯಾಗಿತ್ತು. ಅಷ್ಟೇ ಅಲ್ಲ, ಶತ್ರು ರಾಜ್ಯಗಳ ವಿಗ್ರಹಗಳನ್ನು ಲೂಟಿ ಮಾಡಿ ತನ್ನ ರಾಜ್ಯದಲ್ಲಿ ಪ್ರದರ್ಶಿಸುವುದು ವಿಜಯದ ಸಂಕೇತವಾಗಿತ್ತು.

ಡಾ. ರುಚಿಕಾ ಶರ್ಮಾ

ಇತಿಹಾಸಕಾರರಾದ ಡಾ. ರುಚಿಕಾ ಶರ್ಮಾ ಅವರು, ದೇವಸ್ಥಾನಗಳ ಲೂಟಿ ಎಂಬುದು ಹೊಸ ವಿಷಯವೇನಲ್ಲ ಮತ್ತು ಭಾರತದ ಹಲವು ದೇವಸ್ಥಾನಗಳನ್ನು ಸ್ವತಃ ಹಿಂದೂಗಳೇ ಲೂಟಿ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

​ಅವರು ಉಲ್ಲೇಖಿಸಿದಂತೆ, 11ನೇ ಶತಮಾನದಲ್ಲಿ ರಾಜ ಹರ್ಷನು ಭಾರಿ ಲೂಟಿ ನಡೆಸಿದ್ದನು; 9ನೇ ಶತಮಾನದಲ್ಲಿ ಶಂಕರ ವರ್ಮನು 64 ದೇವಸ್ಥಾನಗಳನ್ನು ಲೂಟಿ ಮಾಡಿದ್ದನು; 18ನೇ ಶತಮಾನದಲ್ಲಿ ಪರಶುರಾಮ ಭಾವು ಅವರು ಶೃಂಗೇರಿಯ ಶಾರದಾ ಮಂದಿರವನ್ನು ಲೂಟಿ ಮಾಡಿ 60 ಲಕ್ಷದಷ್ಟು ಸಂಪತ್ತನ್ನು ದೋಚಿದ್ದರು.

​ಅವರು ಮುಂದುವರೆದು, ಘಜ್ನಿಯ ಧಾಳಿಗೂ ಮುನ್ನವೇ ಹಿಂದೂಗಳು ಹಲವು ಬಾರಿ ಸೋಮನಾಥ ದೇವಾಲಯವನ್ನು ಲೂಟಿ ಮಾಡಿದ್ದರು ಮತ್ತು ಅನೇಕರು ವಿಗ್ರಹಗಳ ಅನಾದರ ಮಾಡುವುದರ ಜೊತೆಗೆ ದೇವಸ್ಥಾನಗಳನ್ನು ಧ್ವಂಸಗೊಳಿಸಿದ್ದರು ಎಂದು ತಿಳಿಸಿದ್ದಾರೆ.

ಆಗ ​ದೇವಸ್ಥಾನಗಳು ಯಾವಾಗಲೂ ವ್ಯವಹಾರದ ಕೇಂದ್ರಗಳಾಗಿದ್ದವು. ಸಂಪತ್ತನ್ನು ಸಂಗ್ರಹಿಸಿಡುವ   ಮಾಧ್ಯಮಗಳಾಗಿದ್ದವು. ಹೀಗಾಗಿ ದಾಳಿಕೋರ ರಾಜರುಗಳು ದೇವಸ್ಥಾನದ ಸಂಪತ್ತನ್ನು ಲೂಟಿ ಮಾಡುತ್ತಿದ್ದರು.

ಆದರೆ ಮುಸಲ್ಮಾನ ರಾಜರುಗಳಾದ ಗಜನಿ, ಘೋರಿ, ಔರಂಗಜೇಬ್ ನಂತಹವರು ಸಂಪದ್ಭರಿತ ರಾಜ್ಯಗಳ ಮೇಲೆ ಧಾಳಿ ಮಾಡಿ ದೇವಸ್ಥಾನಗಳನ್ನು ಲೂಟಿ ಮಾಡಿದರು ಎಂಬುದು ಸನಾತನಿಗಳ ವಾದವಾಗಿದೆ. ಇಲ್ಲಿ ಲೂಟಿಕೋರರು ಹಿಂದೂ ರಾಜರಾಗಿರಲಿ ಇಲ್ಲಾ ಮುಸಲ್ಮಾನ ರಾಜರಾಗಿರಲಿ ಅವರ ಉದ್ದೇಶ ಸಂಪತ್ತಿನ ಲೂಟಿಯಾಗಿತ್ತು. ಅದಕ್ಕೆ ಹಿಂದೂ ಮುಸ್ಲಿಂ ಎನ್ನುವ ಭೇದವೇ ಇರಲಿಲ್ಲ.

ಈಗ ಹಿಂದೂಗಳ ಶ್ರದ್ಧಾಕೇಂದ್ರವೆಂದು ಬಿಂಬಿಸಲಾದ ಅಯೋಧ್ಯೆಯ ರಾಮಮಂದಿರದಲ್ಲಿ ಭಕ್ತರು ಕೊಟ್ಟ ದೇಣಿಗೆಯನ್ನೇ ಕಳ್ಳತನ ಮಾಡಲಾಗಿದೆ. ಸಾವಿರಾರು ಕೆಜಿ ಚಿನ್ನ ಬೆಳ್ಳಿಯನ್ನೂ ಲೂಟಿ ಮಾಡಲಾಗಿದೆಯಂತೆ. ಇದನ್ನು ಮಾಡಿದವರೂ ಸಹ ಯಾವ ಅನ್ಯ ಧರ್ಮೀಯರಲ್ಲಾ. ಹುಂಡಿ ಎಣಿಸುವ ಹಿಂದೂಗಳು, ಕಾಣಿಕೆಯ ಲೆಕ್ಕ ಇಡುವ ಟ್ರಸ್ಟಿಗಳು ಸೇರಿ ರಾಮಮಂದಿರದ ಸಂಪತ್ತನ್ನು ಲೂಟಿ ಮಾಡಿದ್ದಾರೆ.

ಉತ್ತರ ಪ್ರದೇಶದ ಸರಕಾರ ತನಿಖೆಗೆ SIT ರಚನೆ ಮಾಡಿದೆ, 8 ಜನ ಹುಂಡಿ ಕಳ್ಳರನ್ನು ಬಂಧಿಸಿದೆ. ಒಂದಿಷ್ಟು ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಈ ಕಳ್ಳರನ್ನು ಪೋಷಿಸಿದ ಖದೀಮರನ್ನು ಕೈಬಿಟ್ಟಿದೆ. ವಿಚಾರಣೆ ಮುಂದುವರೆದಿದೆ.

ಅಯೋಧ್ಯೆಯ ರಾಮ ಮಂದಿರ

ಮುಸಲ್ಮಾನ ದೊರೆಗಳು ಹಿಂದೂ ದೇವಸ್ಥಾನಗಳನ್ನು ಲೂಟಿ ಮಾಡಿದರು ಎಂದು ದೊಡ್ಡ ಧ್ವನಿಯಲ್ಲಿ ಇತಿಹಾಸದುದ್ದಕ್ಕೂ ಹೇಳುತ್ತಲೇ ಬರಲಾಗಿದೆ. ಆದರೆ ಭಾರತದ ಇತಿಹಾಸದಾದ್ಯಂತ ಹಿಂದೂ ದೊರೆಗಳೂ ಸಹ ಅನ್ಯರಾಜ್ಯಗಳ ಮಂದಿರಗಳನ್ನು ಲೂಟಿ ಮಾಡಿದ್ದನ್ನು ಸಾಧ್ಯವಾದಷ್ಟೂ ಮರೆಮಾಚಲಾಗಿದೆ. ಆದರೆ ಕಳ್ಳತನಕ್ಕೆ, ಲೂಟಿಕೋರತನಕ್ಕೆ ಜಾತಿ ಧರ್ಮ ಭೇದವೇನಿಲ್ಲ. ಸಂಪತ್ತು ಇದ್ದಲ್ಲಿ ಧರ್ಮಾತೀತವಾಗಿ ಕಳ್ಳರು ಹುಟ್ಟಿಕೊಳ್ಳುತ್ತಾರೆ. ಭಕ್ತರು ದೇವರ ಮೇಲಿನ ಶ್ರದ್ಧೆ ಭಕ್ತಿಯಿಂದ ಕಾಣಿಕೆಗಳನ್ನು ಕೊಡುತ್ತಾರೆ. ಅದನ್ನು ಕೊಳ್ಳೆ ಹೊಡೆಯಲು ಲೂಟಿಕೋರರು ಪ್ರಯತ್ನಿಸುತ್ತಲೇ ಇರುತ್ತಾರೆ. ಇದು ಇತಿಹಾಸದುದ್ದಕ್ಕೂ ನಡೆಯುತ್ತಲೇ ಬಂದಿದೆ ಹಾಗೂ ನಡೆಯುತ್ತಲೇ ಇರುತ್ತದೆ. ಯಾರು ಏನೇ ಹೇಳಲಿ ಕಳ್ಳರಿಗೆ, ಖದೀಮರಿಗೆ ಲೂಟಿ ವಿಷಯದಲ್ಲಿ ಜಾತಿ ಭೇದ ಇಲ್ಲವಾಗಿದೆ.

ಹೊರಗಿನ ರಾಜ್ಯದ ರಾಜರುಗಳು, ದೇವಾಲಯದ ಹೊರಗಿನ ಕಳ್ಳರು ಮಂದಿರಗಳನ್ನು ಲೂಟಿ ಮಾಡುತ್ತಿರುವುದು ಸರ್ವೇಸಾಮಾನ್ಯ. ಆದರೆ ಮಂದಿರದೊಳಗೆ ಇರುವವರು ತಮ್ಮದೇ ದೇವರ ಸಂಪತ್ತಿನ ಕಳ್ಳತನಕ್ಕೆ ಇಳಿದಿರುವುದು ಖಂಡಿತಾ ಅಕ್ಷಮ್ಯ ಹಾಗೂ ಅಸಹನೀಯ.

ರಾಮ ಇದ್ದಾನೋ ಇಲ್ಲವೋ, ದೇವರು ಇದ್ದಾನೋ ಇಲ್ಲವೋ ಖಚಿತವಾಗಿ ಯಾರಿಗೂ ಗೊತ್ತಿಲ್ಲ. ಆದರೆ ದೇವರುಗಳ ಮೇಲೆ ಭಯ ಭಕ್ತಿಯಂತೂ ಬಹುತೇಕ ಆಸ್ತಿಕ ಜನರಲ್ಲಿ ಇರುವುದಂತೂ ದಿಟ. ನಗನಾಣ್ಯ ಸಂಪತ್ತೇ ಬೇಕೆನ್ನುವ ಲೂಟಿಕೋರರಿಗೆ ದೇವರುಗಳ ಮೇಲೆ ಭಯವೇ ಇಲ್ಲವೆಂಬುದೂ ಖಚಿತ. ಇಂತಹ ಸಂದರ್ಭದಲ್ಲಿಯೇ ದೇವರ ಅಸ್ತಿತ್ವದ ಮೇಲಿನ ನಂಬಿಕೆ ಸಡಿಲವಾಗುವುದು. ತನ್ನ ಸಂಪತ್ತನ್ನು ತಾನೇ ಕಾಯಲಾಗದ, ಕದ್ದವರಿಗೆ ತಕ್ಷಣ ಶಿಕ್ಷೆ ಕೊಡಲಾಗದ ದೇವರು ನಿಜಕ್ಕೂ ಇದ್ದಾನಾ ಇಲ್ಲಾ ಆ ರೀತಿಯ ಭ್ರಮೆಯನ್ನು ಪುರೋಹಿತಶಾಹಿಗಳು ಹುಟ್ಟಿಹಾಕಿದ್ದಾರಾ ಎನ್ನುವ ಸಂದೇಹ ಮೂಡದೇ ಇರದು.

ಒಟ್ಟಾರೆಯಾಗಿ ದೇವರು ಯಾವುದೇ ಇರಲಿ ಅಲ್ಲಿ ಸಂಪತ್ತು ಇದ್ದರೆ ಕಳ್ಳತನ ತಪ್ಪಿದ್ದಲ್ಲ. ಯಾವ ದೇವರೂ ಕದ್ದವರಿಗೆ ಶಿಕ್ಷೆ ಶಾಪ ಕೊಡುವುದಿಲ್ಲ. ದೇವರಿಗೆ ಮಂದಿರಕ್ಕೆ ಕಾಣಿಕೆ ಸಮರ್ಪಿಸುವವರು ಏನಾದರೊಂದು ಪ್ರಯೋಜನ ಲಾಭ ಬಯಸಿಯೇ ದಾನ ಕೊಡುವುದು. ಹೀಗಾಗಿಯೇ ಮಂದಿರಗಳ ಅಂಗಳದಲಿ ಕಳ್ಳತನ ನಡೆಯುತ್ತಲೇ ಇರುತ್ತದೆ. ದೇವಾಲಯಗಳಿಗೆ ದೊಡ್ಡ ಬೀಗಗಳನ್ನೂ ಹಾಕಲಾಗುತ್ತದೆ. ಇದೆಲ್ಲದಕ್ಕೂ ದೇವರ ಮೂರ್ತಿಗಳು ಸಾಕ್ಷಿಯಾಗಿದ್ದರೂ ಅವಕ್ಕೆ ಜೀವ ಪಂಚೇಂದ್ರಿಯಗಳೇ ಇಲ್ಲವಾಗಿರುತ್ತವೆ.

ಶಶಿಕಾಂತ ಯಡಹಳ್ಳಿ

ರಾಜಕೀಯ ವಿಶ್ಲೇಷಕರು

More articles

Latest article

Most read