ವಿಶ್ವಗುರುವಿನ ಮುಖವಾಡ ಕಳಚಿದ ಗಾಯಕಿ

ವಿಶ್ವಗುರು ಎಂಬುದು ನಾನ್ಸೆನ್ಸ್ ಎಂದು ಅನುರಾಧರವರು ಟೀಕಿಸಿದ್ದು ಈಗ ದೊಡ್ಡ ಸಂಚಲನವನ್ನುಂಟು ಮಾಡಿದೆ. ವಿಶ್ವಗುರುವಿನ ಬಗ್ಗೆ ಅಪಸ್ವರ ಎತ್ತಿದರೆ ದೇಶದ್ರೋಹಿ ಪಟ್ಟ ಕಟ್ಟುವ  ಪ್ರಸ್ತುತ ಕಾಲದಲ್ಲಿ ದೊಡ್ಡ ದೊಡ್ಡ ಸ್ಟಾರ್ ನಟರು, ಕಲಾವಿದರು, ಸಾಹಿತಿಗಳೇ ಬಾಯಿಬಿಡದೇ ಮೌನವಾಗಿರುವ ಸಂದರ್ಭದಲ್ಲಿ ಪ್ರಸಿದ್ಧ ಗಾಯಕಿಯೊಬ್ಬರು ವಾಸ್ತವವನ್ನು ತೆರೆದಿಟ್ಟಿರುವುದು ವಿಸ್ಮಯದ ಸಂಗತಿ. ಯಾಕೆಂದರೆ ಪದ್ಮಶ್ರೀ ಪುರಸ್ಕೃತ ಬಾಲಿವುಡ್ ನ ಹಿರಿಯ ಗಾಯಕಿ ಅನುರಾಧರವರು ಈ ಹಿಂದೆ ಮೋದಿಯವರನ್ನು ಪ್ರಶಂಸಿಸಿದ್ದರು, ರಾಮಮಂದಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಕ್ತಿ ಗೀತೆಗಳನ್ನು ಹಾಡಿದ್ದರು. 2047 ರ ಒಳಗೆ ಭಾರತವು ವಿಶ್ವಗುರು ಆಗುತ್ತದೆ ಎನ್ನುವ ಮೋದಿಯವರ ಮಾತುಗಳನ್ನು ನಂಬಿದ್ದರು ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.

“ವಿಶ್ವಗುರು” ಎನ್ನುವ ಬಲೂನಿಗೆ ಆರೆಸ್ಸೆಸ್ ಪ್ರಾಯೋಜಿತ ಬಿಜೆಪಿ ಪಕ್ಷ ಕಳೆದ 12 ವರ್ಷಗಳಿಂದ ಆಗಾಗ ಗಾಳಿ ಹಾಕಿ ಹಾರಿಬಿಡುತ್ತಲೇ ಇದೆ. ಅಂಧಭಕ್ತರು ಅದನ್ನೇ ಆಹಾ ಓಹೋ ಎಂದು ಹೊಗಳುತ್ತಾ ಭ್ರಮೆಯಲ್ಲಿ ಸಮರ್ಥನೆ ಮಾಡಿಕೊಳ್ಳುತ್ತಲೇ ಇದ್ದಾರೆ. ಗೋದಿ ಮೀಡಿಯಾಗಳು ಅದಕ್ಕೆ ಇನ್ನಷ್ಟು ರೆಕ್ಕೆ ಪುಕ್ಕ ಕಟ್ಟಿ ಮೋದಿಯವರಿಗೆ ವಿಶ್ವಗುರು ಪಟ್ಟ ಗಟ್ಟಿಗೊಳಿಸುತ್ತಾ ಬಂದಿದ್ದಾವೆ. ಭಾರತವು ವಿಶ್ವಕ್ಕೆ ಗುರು ಆಗಿದೆ ಎಂದು ಜನಸಾಮಾನ್ಯರನ್ನು ನಂಬಿಸುವ ಬಲು ದೊಡ್ಡ ಹುನ್ನಾರ ಭಾರತದಾದ್ಯಂತ ಅವ್ಯಾಹತವಾಗಿ ನಡೆಯುತ್ತಾ ಬಂದಿದೆ.

ಈ ಗಾಳಿ ತುಂಬಿದ ಬಲೂನಿಗೆ ಈಗ ಭಕ್ತಿ ಗೀತೆಗಳ ಪ್ರಸಿದ್ಧ ಗಾಯಕಿ ಅನುರಾಧ ಪೌಡ್ವಾಲ್ ರವರು ನಿಜದ ಸೂಜಿ ಚುಚ್ಚಿ ವಾಸ್ತವದ ಅರಿವನ್ನು ಮೂಡಿಸಲು ಪ್ರಯತ್ನಿಸಿದ್ದಾರೆ.

2026 ರ ಜುಲೈನಲ್ಲಿ ಶುಭಾಶಂಕರ ಮಿಶ್ರಾರವರ ಪಾಡ್‌ಕಾಸ್ಟ್ ವಿಡಿಯೋ ಒಂದು ಈಗ ವೈರಲ್ ಆಗಿದೆ. ಅದರಲ್ಲಿ ಗಾಯಕಿ ಅನುರಾಧರವರು ವಿಶ್ವಗುರು ಕಾನ್ಸೆಪ್ಟನ್ನೇ ತೀವ್ರವಾಗಿ ಟೀಕಿಸಿದ್ದಾರೆ. ಭಾರತವು ವಿಶ್ವಗುರು ಆಗುವ ಕನಸಿನ ಬಗ್ಗೆ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ವಿಶ್ವಗುರು ಎಂದು ಹೇಳುವ ಮೂರ್ಖತನವನ್ನು ನಿಲ್ಲಿಸಿ” ಎಂದು ಕಿಡಿ ಕಾರಿದ್ದಾರೆ.

ಅನುರಾಧ ಪೌಡ್ವಾಲ್

ಕೆಲವು ವರ್ಷಗಳ ಹಿಂದೆ ನನಗೂ ನಾವು ವಿಶ್ವಗುರು ಆಗುತ್ತೇವೆ ಎನ್ನುವ ಆಸೆ ಇತ್ತು. ಆದರೆ ಈಗ ದೇಶದ ಪರಿಸ್ಥಿತಿ ನೋಡಿದ ಮೇಲೆ ವಿಶ್ವಗುರು ಎನ್ನುವುದಕ್ಕೆ ತದ್ವಿರುದ್ಧವಾದ ಘಟನೆಗಳೇ ನಡೆಯುತ್ತಿವೆ. ಮೊದಲು ಈ ನಾನ್ಸೆನ್ಸ್ ನಿಲ್ಲಿಸಿ ಹಾಗೂ ವಿಶ್ವಗುರು ಆಗಿದ್ದಕ್ಕೆ ಒಂದು ಪಟ್ಟಿಯಾದರೂ ಕೊಡಿ ಎಂದು ತಮ್ಮ ಪಾಡ್‌ಕಾಸ್ಟ್ ಸಂದರ್ಶನದಲ್ಲಿ  ಅನುರಾಧರವರು ಆಗ್ರಹಿಸಿದ್ದಾರೆ. ಹಾಗೂ ತಮ್ಮ ಆಕ್ರೋಶಕ್ಕೆ ಕೆಲವಾರು ಉದಾಹರಣೆಗಳನ್ನೂ ಕೊಟ್ಟು ಪ್ರಶ್ನೆಗಳನ್ನೂ ಕೇಳಿದ್ದಾರೆ. ಅವರು ಕೇಳಿದ ಪ್ರಶ್ನೆಗಳಲ್ಲಿ ಸತ್ಯ ಇದೆ. ಅವುಗಳನ್ನು ವಿಶ್ಲೇಷಿಸುವುದಾದರೆ..

ಶಿಕ್ಷಣ ವ್ಯವಸ್ಥೆ : ( NITI ಡಾಟಾ ಪ್ರಕಾರ) ಕಳೆದ 10 ವರ್ಷಗಳಲ್ಲಿ ದೇಶಾದ್ಯಂತ ಸುಮಾರು 94 ಸಾವಿರ ಸರಕಾರಿ ಶಾಲೆಗಳು ಮುಚ್ಚಿವೆ. ದಿನಕ್ಕೆ ಸರಾಸರಿ 25 ಶಾಲೆಗಳು ಮುಚ್ಚುತ್ತಿವೆ. ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದೆ. (ಸುಮಾರು 2.25 ಕೋಟಿಯಷ್ಟು). ಇದು ಶಿಕ್ಷಣದ ಬುನಾದಿಯನ್ನೇ ದುರ್ಬಲಗೊಳಿಸುತ್ತಿದೆ. ಒಂದು ದೇಶ ವಿಶ್ವಗುರು ಆಗಬೇಕಾದರೆ ಅಲ್ಲಿಯ ಶಿಕ್ಷಣ ವ್ಯವಸ್ಥೆ ಗಟ್ಟಿಯಾಗಿರಬೇಕು. ಓದಲು ಶಾಲೆಗಳೇ ಇಲ್ಲ ಅಂದ ಮೇಲೆ ಹೇಗೆ ವಿಶ್ವಕ್ಕೆ ಗುರುವಾಗಲು ಸಾಧ್ಯ? ಇನ್ನು ವಿಶ್ವಗುರು ಆಗುವ ಮಾತೆಲ್ಲಿ?

ರಾಮಮಂದಿರ ಕಳ್ಳತನ : ರಾಮಮಂದಿರ ಕಟ್ಟಿದ ಮೇಲೆ ನಮ್ಮ ದೇಶವನ್ನು ವಿಶ್ವಗುರು ಆಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದುಕೊಂಡಿದ್ದೆ. ಆದರೆ ಮಂದಿರದಲ್ಲೇ ಕಳ್ಳತನ ಮಾಡಿದ್ದು ಕೆನ್ನೆಗೆ ಬಾರಿಸಿದಂತಿದೆ. ರಾಮಮಂದಿರವನ್ನು ಹಣ ಸಂಪಾದನೆಗಾಗಿ ಕಟ್ಟಿದಂತಿದೆ. ಭಾರತದ ಜನರ ಶ್ರದ್ಧೆ ಹಾಗೂ ಹಣದಿಂದ ರಾಮಮಂದಿರ ನಿರ್ಮಾಣವಾಗಿದೆ. ಶ್ರದ್ಧಾ ಕೇಂದ್ರವಾದ ರಾಮಮಂದಿರ ಸ್ಥಾಪನೆಯೇ ವಿಶ್ವಗುರು ಎನ್ನುವುದಾದರೆ  ರಾಮಲಲ್ಲಾನ ಮನೆಗೆ ಕನ್ನ ಹಾಕಿದ್ದು ಶಾಕಿಂಗ್. ಇನ್ನು ನಾವು ಎಲ್ಲಿಯ ವಿಶ್ವಗುರು?.

ಸಲಹೆ : “ಒಂದು ಕಡೆ ವಿಶ್ವಗುರು ಎಂದು ಹೇಳುವುದನ್ನು ನಿಲ್ಲಿಸಿ ಅಥವಾ ಈ ಅಸಂಬದ್ದ ಹೇಳಿಕೆಗಳನ್ನು ನಿಲ್ಲಿಸಿ” ಎಂದು ಮೋದಿಯವರಿಗೆ ಪರೋಕ್ಷವಾಗಿ ಸಲಹೆಯನ್ನು ಕೊಟ್ಟಿದ್ದಾರೆ.

ಹೌದು.. ಅನುರಾಧ ಪೌಡ್ವಾಲ್ ರವರು ಹೇಳಿದ ಪ್ರತಿಯೊಂದು ಮಾತು ವಾಸ್ತವದ ಪ್ರತಿಬಿಂಬವಾಗಿವೆ.

ಕುಸಿದ ಹಸಿವಿನ ಸೂಚ್ಯಂಕ : ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತ 123 ದೇಶಗಳಲ್ಲಿ 102 ನೇ ಸ್ಥಾನದಲ್ಲಿದೆ. 80 ಕೋಟಿಗೂ ಹೆಚ್ಚು ಜನರಿಗೆ ಉಚಿತ ರೇಶನ್ ಕೊಡದಿದ್ದರೆ ಹಸಿವಿನಿಂದ ಸಾಯುವ ಪರಿಸ್ಥಿತಿ ಇದೆ. ಇಂತಹ ಪರಿಸ್ಥಿತಿಯಲ್ಲಿ ವಿಶ್ವಗುರು ಎಂದು ಹೇಳುವುದೇ ದುರಂತ.

ಸಂಕಷ್ಟದಲ್ಲಿ ಪತ್ರಿಕಾ ಸ್ವಾತಂತ್ರ್ಯ :  2026 ರ ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ 180 ದೇಶಗಳ ಪೈಕಿ 157 ನೇ ಸ್ಥಾನದಲ್ಲಿ ಭಾರತ ಇದೆ. ನೆರೆಹೊರೆಯ ದೇಶಗಳಾದ ನೇಪಾಳ (87), ಮಾಲ್ಡೀವ್ಸ್ (108), ಶ್ರೀಲಂಕಾ (134), ಭೂತಾನ್ (150), ಬಾಂಗ್ಲಾದೇಶ (162), ಪಾಕಿಸ್ಥಾನ (153) ಗಳಿಗಿಂತಲೂ ಕೆಳಗಿದೆ. ಈ ಸೂಚ್ಯಂಕವು ರಾಜಕೀಯ, ಆರ್ಥಿಕ, ಸಾಮಾಜಿಕ, ಕಾನೂನು ಹಾಗೂ ಭದ್ರತಾ ಅಂಶಗಳ ಆಧಾರದ ಮೇಲೆ ರೂಪುಗೊಳ್ಳುತ್ತದೆ. ಹೀಗಿರುವಾಗ ಭಾರತ ವಿಶ್ವಗುರು ಆಗಲು ಹೇಗೆ ಸಾಧ್ಯ?

ಅಸಮಾನ ಆರ್ಥಿಕತೆ :

ವಿಶ್ವಬ್ಯಾಂಕ್ ವರದಿ ಪ್ರಕಾರ ಭಾರತದ ಜನರ ತಲಾದಾಯ ತಿಂಗಳಿಗೆ 21 ಸಾವಿರದಷ್ಟಿದೆ. ಬೆರಳೆಣಿಕೆಯಷ್ಟು ಶ್ರೀಮಂತರ ಆದಾಯ ಕೋಟಿಗಳಲ್ಲಿ ಹೆಚ್ಚುತ್ತಿದೆ. ಬಡವರು ಇನ್ನಷ್ಟು ಬಡವರಾಗುತ್ತಿದ್ದಾರೆ. ಇಂತಹ ದುಸ್ಥಿತಿಯಲ್ಲಿ ಭಾರತವನ್ನು ವಿಶ್ವಗುರು ಎನ್ನುವುದೇ ಆಭಾಸಕಾರಿಯಾಗಿದೆ. ಶಿಕ್ಷಣ, ಆಡಳಿತ, ಸಾಮಾಜಿಕ ಸಮಸ್ಯೆಗಳು ವಿಶ್ವಗುರು ಪಟ್ಟಕ್ಕೆ ವಿರುದ್ಧವಾಗಿವೆ.‌

ಮೋದಿಯವರಿಗೆ ವಿಶ್ವಗುರು ಇಮೇಜ್ ಸೃಷ್ಟಿಸಲು ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡಲಾಗುತ್ತಿದ್ದು ಪಿಆರ್ ಟೀಮ್ ಸಕ್ರಿಯವಾಗಿದೆ. ರಾಜಕೀಯವಾಗಿ ಮೋದಿಯವರನ್ನು ಬ್ರ್ಯಾಂಡಿಂಗ್ ಮಾಡಲು ಮಾಧ್ಯಮಗಳನ್ನು ಹಾಗೂ ಸಾಫ್ಟ್‌ವೇರ್ ಗಳನ್ನು ಅವ್ಯಾಹತವಾಗಿ ಬಳಸಲಾಗುತ್ತದೆ. ಸಾಮಾಜಿಕ ಮಾಧ್ಯಮಗಳ ಮೂಲಕ ಹುಸಿ ನರೇಟಿವ್ ಗಳನ್ನು ಕಟ್ಟಿ ಹರಿಬಿಡಲೆಂದೇ ಐಟಿ ಸೆಲ್ ಅಹೋರಾತ್ರಿ ಕಾರ್ಯಗತವಾಗಿರುತ್ತದೆ. ಟೆಲಿಪ್ರಾಂಪ್ಟರ್ ಇಲ್ಲದೇ ಒಂದೇ ಒಂದು ಭಾಷಣ ಮಾಡಲಾಗದ, ಇಲ್ಲಿವರೆಗೂ ಒಂದೇ ಒಂದು ಪತ್ರಿಕಾಗೋಷ್ಠಿಯನ್ನು ಎದುರಿಸಲಾಗದ ಅಶಿಕ್ಷಿತ ಮೋದಿಯವರನ್ನು ವಿಶ್ವಗುರು ಎಂದು ಯಾವ ದೇಶವೂ ಒಪ್ಪಿಕೊಂಡಿಲ್ಲ. ಆದರೂ ಗೋದಿ ಮಾಧ್ಯಮಗಳು, ಬಿಜೆಪಿಯ ಐಟಿ ಸೆಲ್‌ಗಳು ಹಾಗೂ ಅಂಧಭಕ್ತರುಗಳು ಮೋದಿಯನ್ನು ವಿಶ್ವಗುರು ಎಂದು ಪ್ರತಿಷ್ಠಾಪಿಸಲು ಶ್ರಮಿಸುತ್ತಲೇ ಇವೆ. ಭಾರತ ದೇಶದ ಸಾಮಾಜಿಕ, ಆರ್ಥಿಕ ವಾಸ್ತವ ಪರಿಸ್ಥಿತಿಯನ್ನು ಮರೆಮಾಚಿ ವ್ಯಕ್ತಿ ವೈಭವೀಕರಣದ ಮೂಲಕ ಭ್ರಮಾಲೋಕವನ್ನು ಸೃಷ್ಟಿಸುವ ಪ್ರಯತ್ನ ನಡೆಯುತ್ತಲೇ ಇದೆ.

ಇಂತಹ ವಿಶ್ವಗುರು ಎನ್ನುವ ಭ್ರಮಾತ್ಮಕ ಸಂಕಥನವನ್ನು ಅನುರಾಧರವರು ಒಡೆದುಹಾಕಿದ್ದಾರೆ. ಅದೆಷ್ಟೋ ಜನ ಅವ್ಯಕ್ತ ಭಯದಿಂದ ಮೌನವಾಗಿರುತ್ತಾರೆ ಇಲ್ಲವೇ ಮೋದಿಯವರ ಗುಣಗಾನದಲ್ಲಿ ನಿರತರಾಗಿರುತ್ತಾರೆ. ಇಂತಹ ಆತಂಕಕಾರಿ ಪರಿಸ್ಥಿತಿಯಲ್ಲಿ ವಾಸ್ತವಕ್ಕೆ ಕನ್ನಡಿ ಹಿಡಿಯುವ ಸಾಹಸದ ಕೆಲಸವನ್ನು ಮಾಡಿದ ಗಾಯಕಿ ಅನುರಾಧ ಪೌಡ್ವಾಲ್ ರವರ ಧೈರ್ಯ ಮೆಚ್ಚುವಂತಹುದು.

ಶಶಿಕಾಂತ ಯಡಹಳ್ಳಿ

ರಾಜಕೀಯ ವಿಶ್ಲೇಷಕರು

ಇದನ್ನೂ ಓದಿ- ಬಾನು ಮುಷ್ತಾಕ್ ಕಥನಗಳಲ್ಲಿ ಅಧಿಕಾರ, ಅಸ್ಮಿತೆ ಮತ್ತು ಪ್ರತಿರೋಧ

More articles

Latest article

Most read