ಮತಾಂಧತೆಗೆ ಮತ್ತೊಂದು ಹೆಸರೇ ಸಿ.ಟಿ.ರವಿ

ಧರ್ಮಾಂಧತೆ, ಮತಾಂಧತೆಗಳನ್ನು ಪ್ರಚೋದಿಸುವವರು ಯಾವ ಧರ್ಮೀಯರೇ ಆದರೂ ಅವರನ್ನು ವಿರೋಧಿಸಬೇಕೆ ಹೊರತು ಯಾರ ಎದೆಯಲ್ಲಿ ಎಷ್ಟು ಅಕ್ಷರಗಳಿವೆ ಎಂದಲ್ಲ. ಈ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟವರಲ್ಲಿ ಅನಕ್ಷರಸ್ಥರ ಪಾಲು ದೊಡ್ಡದಿದೆ ಎಂಬುದನ್ನು ಮರೆಯುವಂತಿಲ್ಲ. ಆಗಿನಿಂದ ಈಗಿನವರೆಗೂ  ಈ ಅಕ್ಷರಸ್ಥರು ಪ್ರತಿದಿನ ತಿನ್ನುವ ಆಹಾರವನ್ನು ಬೆಳೆದುಕೊಟ್ಟ ರೈತರು ಹಾಗೂ ಕೂಲಿ ಕಾರ್ಮಿಕರಲ್ಲಿ ಬಹುತೇಕರು ಅನಕ್ಷರಸ್ಥರು ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.

ಈ ಸಿ.ಟಿ.ರವಿ ಎನ್ನುವ ಮತಾಂಧ ಗೊತ್ತಲ್ವಾ. ದತ್ತಮಾಲೆ ಹೆಸರಲ್ಲಿ ಬಾಬಾ ಬುಡನ್ ಗಿರಿಗೆ ಕೋಮುಕಿಡಿ ಇಟ್ಟು ಚಿಕ್ಕಮಗಳೂರಿನ ಸೌಹಾರ್ದತೆಗೆ ಬೆಂಕಿ ಇಟ್ಟ ಕಲಿಪುರುಷ. “ಈಗ ನೀಟ್ ಪರೀಕ್ಷೆಗೂ ಈ ಮುಲ್ಲಾನಿಗೂ ಏನು ಸಂಬಂಧ ಅಲ್ವಾ? ಅಂತಾ ಪ್ರಶ್ನಿಸಿ ನಂಜಿನ ನಾಲಿಗೆ ಹರಿಬಿಟ್ಟಿದ್ದಾರೆ. “ಮುಲ್ಲಾನ ಎದೆ ಸೀಳಿದರೆ ಮೂರಕ್ಷರ ಇಲ್ಲ” ಎಂದು ಹೇಳುವ ಮೂಲಕ ಅನ್ಯಕೋಮಿನ ಮೇಲಿನ ದ್ವೇಷವನ್ನು ಸಾರ್ವಜನಿಕವಾಗಿ ಕಾರಿಕೊಂಡಿದ್ದಾರೆ.

ವ್ಯಕ್ತಿಯೊಬ್ಬರ ದೂರು ಆಧರಿಸಿ ಎಫ್ಐಆರ್ ಮಾಡಿದ ಪೊಲೀಸರು ವಿಚಾರಣೆಗೆ ಬರಲು ನೋಟೀಸ್ ಕೊಡಲು ಹೋದರೆ ಸಿಟಿ ರವಿ ಮತ್ತು ಅವರ ಚೇಲಾಗಳು ಹೈಡ್ರಾಮಾ ಶುರುಮಾಡಿದ್ದು ಜನಪ್ರತಿನಿಧಿಯಾದವರ ದುರ್ವರ್ತನೆ ಅಲ್ವಾ?

ಎಲ್ಲೋ ಯಾವತ್ತೋ ನಡೆದ, ಯಾರೋ ಒಬ್ಬ ಮುಸ್ಲಿಂ ಬಿಹಾರದಲ್ಲಿಯಾದ ಅಪಘಾತದ ಸಂದರ್ಭದಲ್ಲಿ ಕಾರಿನ ಟ್ಯಾಂಕಿಗೆ ಬೆಂಕಿ ಹಚ್ಚಲು ಬೆಂಕಿಕಡ್ಡಿ ಗೀರಿದ ವಿಡಿಯೋ ಒಂದನ್ನು ಪೊಲೀಸರಿಗೆ ತೋರಿಸಿ “ಇಲ್ಲಿ ನೋಡಿ, ಈ ಮುಲ್ಲಾ ಬೆಂಕಿ ಹಚ್ಚುತ್ತಿದ್ದಾನೆ. ಈ ಮುಲ್ಲಾಗೂ ನೀಟ್ ಪರೀಕ್ಷೆಗೂ ಏನು ಸಂಬಂಧ ಅಂತಾ ನಾನು ಕೇಳಿದ್ದೇನೆ ಎನ್ನುವುದು ಸಿಟಿ ರವಿ ಸಮರ್ಥನೆ. ಹೌದು ಅಸಲಿಗೆ ಅಲ್ಲೆಲ್ಲೋ ಬಿಹಾರದಲ್ಲಿ ಯಾವತ್ತೋ ನಡೆದ ಘಟನೆಗೂ ದೆಹಲಿಯಲ್ಲಿ ಯುವಜನರು ಹಮ್ಮಿಕೊಂಡಿದ್ದ ನೀಟ್ ಅಕ್ರಮದ ವಿರುದ್ಧದ ಹೋರಾಟಕ್ಕೂ ಯಾವುದೇ ರೀತಿಯ ಸಂಬಂಧ ಇರಲಿಲ್ಲ. ಆದರೆ ಹಾಗೊಂದು ಸಂಬಂಧವೇ ಇಲ್ಲದ ವಿಡಿಯೋ ಒಂದನ್ನು ತೋರಿಸುವ ಮೂಲಕ ಈ ಎಮ್ಮೆಲ್ಸಿ ತಮ್ಮ ಮುಸ್ಲಿಂ ದ್ವೇಷವನ್ನು ಬಹಿರಂಗಪಡಿಸಿ ಬೆತ್ತಲಾಗಿದ್ದಾರೆ. ಯಾವುದೋ ಒಬ್ಬ ಸಾಬಿ ಅಲ್ಲೆಲ್ಲೋ ಬೆಂಕಿ ಹಚ್ಚುವೆ ಎಂದು ಹೇಳಿದ್ದರೆ ಈ ಸಂಘಿ ಇಡೀ ಕರಾವಳಿ ಕರ್ನಾಟಕಕ್ಕೆ ಕೋಮು ಬೆಂಕಿ ಹರಡಿದ್ದನ್ನು ಇನ್ನೂ ಜನ ಮರೆತಿಲ್ಲ.

ಒಬ್ಬ ಮುಲ್ಲಾನ ಉದಾಹರಣೆ ಇಟ್ಟುಕೊಂಡು ” ಎದೆ ಸೀಳಿದರೆ ಮೂರಕ್ಷರ ಇಲ್ಲ” ಎಂದು ಮುಸ್ಲಿಂ ಸಮುದಾಯವನ್ನೇ ಅನಕ್ಷರಸ್ಥರು ಎನ್ನುವಂತೆ ಆರೋಪಿಸುವ ಈ ಸಂಘಿಯ ಎದೆ ಸೀಳಿದರೆ ಮುಸ್ಲಿಂ ದ್ವೇಷವನ್ನು ಹೊರತು ಪಡಿಸಿ ಬೇರೇನು ಇಲ್ಲ ಎನ್ನುವುದು ಹಲವು ಬಾರಿ ಸಾಬೀತಾಗಿದೆ. ತನ್ನ ಮಕ್ಕಳನ್ನು ವಿದೇಶದಲ್ಲಿ ಓದಿಸಿ ಬೇರೆಯವರ ಮಕ್ಕಳನ್ನು ಕೋಮು ಸಂಘರ್ಷಕ್ಕೆ ಪ್ರೇರೇಪಿಸುವ ಈ ಹಿಂದುತ್ವವಾದಿಯನ್ನು ಕಳೆದ ಚುನಾವಣೆಯಲ್ಲಿ ಚಿಕ್ಕಮಗಳೂರಿನ ಜನರು ಸೋಲಿಸಿ ಮುಖಕ್ಕೆ ಮಂಗಳಾರತಿ ಎತ್ತಿದ್ದರು. ಆದರೆ ಇಂತಹ ಮತಾಂಧ ಫೈರ್ ಬ್ರ್ಯಾಂಡ್ ಗೆ ಎಮ್ಮೆಲ್ಸಿ ಮಾಡಿದ ಬಿಜೆಪಿ ಮುಸ್ಲಿಂ  ದ್ವೇಷ ಮುಂದುವರೆಸಲು ಹಿಂಬಾಗಿಲಿನಿಂದ ಮೇಲ್ಮನೆಯಲ್ಲಿ ಅಧಿಕಾರ ಕೊಟ್ಟು ಈ ರೀತಿ ಸೌಹಾರ್ದತೆ ಕದಡಲು ಪರವಾನಿಗೆ ಕೊಟ್ಟರು. ಸಾಹಿತಿ ಕಲಾವಿದರು ಚಿಂತಕರು ಇರಬೇಕಾಗಿದ್ದ ಮೇಲ್ಮನೆಯಲ್ಲಿ ಇಂತಹ ಒಬ್ಬ ಕೋಮುಕ್ರಿಮಿ ಇರುವುದೇ ಪ್ರಜಾಪ್ರಭುತ್ವದ ದೌರ್ಭಾಗ್ಯ

ಸಿ ಟಿ ರವಿ

ಈ ಹಿಂದೆ 2024 ಡಿಸೆಂಬರಿನಲ್ಲಿ ಬೆಳಗಾವಿಯಲ್ಲಿ ನಡೆದ ಚಳಿಗಾಲದ ವಿಧಾನ ಪರಿಷತ್ತಿನ ಅಧಿವೇಶನದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ರವರಿಗೆ ಪ್ರಾಸ್ಟಿಟ್ಯೂಟ್ ಎನ್ನುವಂತಹ ಅಶ್ಲೀಲ ಅಪಮಾನಕಾರಿ ನಿಂದಿಸಿ ಬಂಧನಕ್ಕೊಳಗಾಗಿ ಜಾಮೀನು ಪಡೆದು ಹೊರಗೆ ಬಂದರು. ನಾನು ಹಾಗೆ ಹೇಳಿಯೇ ಇಲ್ಲಾ ಫ್ರಸ್ಟೇಟ್ ಎಂದು ಹೇಳಿದ್ದೆ ಎಂದು ರಾಗ ಬದಲಾಯಿಸಿದರು. ‌ಮಹಿಳೆಯರ ಮೇಲೆ ಇಂತಹ ಸಂಘಿಗಳಿಗೆ ಇರುವ ಭಾವನೆಗೆ ಇದು ಸಾಕ್ಷಿಯಾಗಿದೆ.

ಈಗ ಜುಲೈ 23, 2026 ರಂದು ಚಿಕ್ಕಮಗಳೂರಿನ ಅಜಾದ್ ಪಾರ್ಕ್ ವೃತ್ತದಲ್ಲಿ ಬಿಜೆಪಿ ಪ್ರತಿಭಟನಾ ಸಭೆ ಆಯೋಜಿಸಿತ್ತು. ನೀಟ್ ಪರೀಕ್ಷೆ ಅಕ್ರಮಗಳ ವಿರುದ್ಧ ಯುವಜನರ ಮೇಲೆ ಮೋದಿ ಸರಕಾರ ಪೊಲೀಸರ ಮೂಲಕ ದಬ್ಬಾಳಿಕೆ ಮಾಡಿದ್ದನ್ನು ವಿರೋಧಿಸಿ ಕಾಂಗ್ರೆಸ್ ಪಕ್ಷ ಮೋದಿಯವರ ಮನೆಯ ಮುಂದೆ ಧರಣಿ ಮಾಡಿದ್ದನ್ನು ವಿರೋಧಿಸಿ ಈ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಆಗ ತಮ್ಮ ಕೋಮು ಪ್ರಚೋದನೆಯ ಮಾತುಗಳನ್ನು ಸಿಡಿಸಿದ ಸಿ.ಟಿ.ರವಿ ಹೋರಾಟಕ್ಕೂ, ಧರಣಿಗೂ ಸಂಬಂಧವೇ ಇಲ್ಲದಿದ್ದರೂ ಮುಸ್ಲಿಂರ ವಿಷಯವನ್ನು ಅನಾವಶ್ಯಕವಾಗಿ ಎಳೆದು ತಂದು ಅಲ್ಲಿ ಸೇರಿದವರನ್ನು ಮುಲ್ಮಾನರ ವಿರುದ್ಧ ಪ್ರಚೋದಿಸಿದರು. ” ಮುಲ್ಲಾನಿಗೂ ನೀಟ್ ಗೂ ಏನು ಸಂಬಂಧ, ಎದೆ ಸೀಳಿದರು ಮೂರಕ್ಷರ ಬರಲ್ಲ. ಆತ ಬಂದು ನೀಟ್ ವಿರುದ್ಧ ಹೋರಾಟಾ ಮಾಡ್ತಾನಾ? ” ಎಂದು ಅನ್ಯ ಸಮುದಾಯದ ವ್ಯಕ್ತಿ ಬಗ್ಗೆ ಅಪಮಾನಕಾರಿಯಾಗಿ ಮಾತಾಡಿದ್ದು ವಿವಾದಕ್ಕೆ ಕಾರಣವಾಯ್ತು. ಮುಸ್ಲಿಂ ಫೆಡರೇಶನ್ ಸೇರಿದಂತೆ ಹಲವು ಸಂಘಟನೆಗಳು ಸಿ.ಟಿ.ರವಿ ಬಂಧನಕ್ಕೆ ಒತ್ತಾಯಿಸಿದವು. ಮುಸ್ಲಿಂ ಸಮುದಾಯದ ನಾಯಕ ಜಾಮಿಯಾ ಮಸೀದಿ ಅಧ್ಯಕ್ಷ ಮುದಸ್ಸಿರ್ ಪಾಷಾರವರ ದೂರಿನ ಮೇರೆಗೆ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 353 (2) ಅಡಿಯಲ್ಲಿ ಎಫ್ ಐ ಆರ್ ದಾಖಲಿಸಲಾಯ್ತು.

ಈ ನಮ್ಮ ಕೋರ್ಟುಗಳು ತೆಗೆದುಕೊಳ್ಳುವ ತೀರ್ಮಾನಗಳ ಬಗ್ಗೆ ಚೆನ್ನಾಗಿ ಅರಿವಿರುವ ಈ ಸಂಘಿಗಳು ಕಾನೂನಿನ ಭಯವಿಲ್ಲದೆ ಹೀಗೆ ನಾಲಿಗೆ ಹರಿಬಿಡುತ್ತಲೇ ಇರುತ್ತಾರೆ. ನಿರೀಕ್ಷಿಸಿದ ಹಾಗೆ ಕರ್ನಾಟಕದ ಹೈಕೋರ್ಟ್ ಜುಲೈ 27 ರಂದು ಮಧ್ಯಂತರ ರಕ್ಷಣೆ ನೀಡಿ ಮುಂದಿನ ವಿಚಾರಣೆಯವರೆಗೂ ಯಾವುದೇ ಬಲವಂತದ ಕ್ರಮ ತೆಗೆದುಕೊಳ್ಳಬಾರದು ಎಂದು ಆದೇಶಿಸಿತು. ಈ ರೀತಿಯ ನ್ಯಾಯಾಂಗದ ರಕ್ಷಣೆಗಳೇ ಇಂತಹ ಕೋಮುದ್ವೇಷಿಗಳಿಗೆ ರಕ್ಷಣಾ ಕವಚಗಳಾಗಿವೆ. ಏನೇ ಮಾಡಿ ಮಾತಾಡಿದರೂ ಏನೂ ಆಗುವುದಿಲ್ಲ ಎನ್ನುವ ಧೈರ್ಯದಿಂದ ಇಂತವರು ಮತ್ತೆ ಮತ್ತೆ ಕೋಮು ಪ್ರಚೋದನೆ ಮಾಡುತ್ತಲೇ ಇರುತ್ತಾರೆ.

ಈ ಹಿಂದೆ ಡಿಸೆಂಬರ್ 2019 ರಲ್ಲಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಕೂಡಾ ಮುಸಲ್ಮಾನರ ವಿರುದ್ಧ “ಅನಕ್ಷರಸ್ಥರು, ಪಂಚರ್‌ವಾಲಾಗಳು, ಅವರ ಎದೆ ಸೀಳಿದರೆ ಎರಡು ಪದಗಳೂ ಸಿಗುವುದಿಲ್ಲ” ಎಂದು ಠೀಕಿಸಿ ತಮ್ಮ ಮುಸ್ಲಿಂ ದ್ವೇಷ ಕಾರಿಕೊಂಡಿದ್ದರು.

ಯಾರ ಎದೆ ಬಗೆದರೆ ಎಷ್ಟು ಅಕ್ಷರಗಳು ಸಿಗುತ್ತವೆಯೊ ಗೊತ್ತಿಲ್ಲ. ಆದರೆ ಈ ವಿದ್ಯಾವಂತರೆಂದುಕೊಂಡ ಪ್ರಜಾಪ್ರತಿನಿಧಿಗಳ ಬಾಯಲ್ಲಿ ಬರುವ ಅನ್ಯ ಸಮುದಾಯದ ಕುರಿತು ದ್ವೇಷ ಭಾಷಣಗಳನ್ನು ಗಮನಿಸಿದರೆ ಈ ಸಂಘಿಗಳ ಎದೆಯಲ್ಲಿ ಕೋಮುದ್ವೇಷ ಹೊರತು ಪಡಿಸಿ ಅಕ್ಷರಗಳು ಇರಲು ಸಾಧ್ಯವೇ ಎನ್ನುವ ಅನುಮಾನ ಕಾಡುತ್ತದೆ. ನೂರಾರು ಶತಮಾನಗಳ ಕಾಲ ಬ್ರಾಹ್ಮಣರನ್ನು ಹೊರತು ಪಡಿಸಿ ಬೇರೆ ಯಾರಿಗೂ ಅಕ್ಷರ ಕಲಿಯಲು ಅವಕಾಶವನ್ನೇ ನೀಡದ ಈ ವೈದಿಕಶಾಹಿ ಸಂಘ ಪರಿವಾರದ ವಿಕ್ಷಿಪ್ತ ಅಂಗಗಳು ಈಗ ಬೇರೆ ಸಮುದಾಯದವರ ವಿದ್ಯೆಯ ಬಗ್ಗೆ ನಿಂದಿಸುತ್ತಿವೆ. ಮುಸಲ್ಮಾನರ ಶಿಕ್ಷಣ ಸಂಸ್ಥೆಗಳಿಗೆ ಬಿಜೆಪಿಯೇತರ ಸರಕಾರ ಅನುದಾನ ಕೊಟ್ಟರೆ ಮುಸ್ಲಿಂ ತುಷ್ಟೀಕರಣ ಎಂದು ಆಕ್ಷೇಪಿಸುತ್ತವೆ. ಮುಸಲ್ಮಾನ ಸಮುದಾಯದವರ ಅಭಿವೃದ್ಧಿಗೆ ಯಾವುದೇ ಯೋಜನೆಗಳನ್ನು ಹಾಕಿಕೊಂಡರೂ ಓಟ್ ರಾಜಕೀಯ ಎಂದು ನಿಂದಿಸುತ್ತವೆ. ಮುಸ್ಲಿಂ ಹೆಣ್ಣುಮಕ್ಕಳು ಅವರ ಧಾರ್ಮಿಕ ಆಚರಣೆಯಂತೆ ಹಿಜಾಬ್ ಧರಿಸಿ ಶಾಲೆ ಕಾಲೇಜಿಗೆ ಬಂದರೆ ಅದನ್ನೂ ವಿರೋಧಿಸಿ ಅದೆಷ್ಟೋ ಮುಸ್ಲಿಂ ಹುಡುಗಿಯರು ಓದನ್ನೇ ಮೊಟಕುಗೊಳಿಸುವಂತೆ ಮಾಡಿದ ಕೀರ್ತಿ ಈ ಸಂಘಿಗಳಿಗೇ ಸಲ್ಲಬೇಕು. ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಮುಸ್ಲಿಂ ಸಮುದಾಯಕ್ಕೆ ಇರುವ 4% ಮೀಸಲಾತಿಯನ್ನೂ ಸಹ ಕಿತ್ತುಕೊಂಡ ಯಶಸ್ಸು ಈ ಬಿಜೆಪಿ ಸರಕಾರಕ್ಕೆ ಸಲ್ಲಬೇಕು. ಶೈಕ್ಷಣಿಕವಾಗಿ ಮುಸ್ಲಿಂ ಸಮುದಾಯ ಹಿಂದುಳಿದಿರುವುದಕ್ಕೆ ಮೂಲ ಕಾರಣವೇ ಈ ಬಿಜೆಪಿ ಹಾಗೂ ಸಂಘ ಪರಿವಾರ. ಹೀಗಿರುವಾಗ ಮುಸಲ್ಮಾನರ ಎದೆ ಸೀಳಿ ಅಕ್ಷರ ಹುಡುಕುವ ಹೇಳಿಕೆಗಳೇ ಆಕ್ಷೇಪಾರ್ಹ.

ಜೆನ್‌ ಝೀ ಹೋರಾಟ

ಹೋಗಲಿ..ಅಕಸ್ಮಾತ್ ಈ ಮುಸಲ್ಮಾನರೊ ಅಥವಾ ಇನ್ಯಾರೊ ತಿರುಗಿಬಿದ್ದು ಬಿಜೆಪಿಯ ಅಧಿನಾಯಕ ಈ ದೇಶದ ಪ್ರಧಾನಿಗಳ ಎದೆ ಬಗೆದರೆ ಎಷ್ಟು ಅಕ್ಷರಗಳಿವೆ ಎಂದು ಕೇಳಿದರೆ ಈ ಕೋಮುಕ್ರಿಮಿಗಳು ಬೀದಿ ಬೀದಿಯಲ್ಲಿ ಬೆಂಕಿ ಹಚ್ಚುತ್ತಿದ್ದರು. ಇದುವರೆಗೂ ತನ್ನ ಶೈಕ್ಷಣಿಕ ಪ್ರಮಾಣ ಪತ್ರಗಳನ್ನೇ ತೋರಿಸದ ಅನಕ್ಷರಸ್ಥ ಪ್ರಧಾನಿಯನ್ನು ತಲೆ ಮೇಲೆ ಹೊತ್ತು ಮರೆಸುತ್ತಿರುವ ಈ ಸಂಘಿ ಸಂತಾನಗಳಿಗೆ ಬೇರೆ ಕೋಮಿನವರ ಅನಕ್ಷರಸ್ಥರ ಬಗ್ಗೆ ಮಾತಾಡಲು ಯಾವ ನೈತಿಕತೆಯೂ ಇಲ್ಲ.

ಇಷ್ಟಕ್ಕೂ ಇದೇ ಬಿಜೆಪಿ ಸರಕಾರ ಡಾ.ಎಪಿಜೆ ಅಬ್ದುಲ್ ಕಲಾಮ್ ರವರನ್ನು ಭಾರತದ ರಾಷ್ಟ್ರಪತಿಯನ್ನಾಗಿ ಯಾಕೆ ನೇಮಕ ಮಾಡಿತ್ತು. ಅವರು ವಿದ್ಯಾವಂತರಲ್ವಾ?. ಭಾರತದ ಪಕ್ಷಿಶಾಸ್ತ್ರಜ್ಞ ಎಂದೇ ಹೆಸರಾದ ಡಾ.ಸಲೀಮ್ ಕಾಸಿಮ್ ವಿದ್ಯಾವಂತರಲ್ವಾ? ಅಲಿಗಢ ವಿಶ್ವವಿದ್ಯಾಲಯ ಸ್ಥಾಪಕ ಸರ್ ಸಯ್ಯದ್ ಅಹಮದ್ ಖಾನ್, ಭಾರತದ ಮೊದಲ ಶಿಕ್ಷಣ ಮಂತ್ರಿ ಮೌಲಾನಾ ಅಬುಲ್ ಕಲಾಮ್ ಆಝಾದ್, ಭಾರತದ ರಾಷ್ಟ್ರಪತಿಯಾಗಿದ್ದ ಶಿಕ್ಷಣ ತಜ್ಞ ಡಾ.ಝಾಕೀರ್ ಹುಸೇನ್, ಅಂತರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ ಪಡೆದ ಕನ್ನಡದ ಪ್ರಸಿದ್ಧ ಕತೆಗಾರ್ತಿ ಭಾನು ಮುಷ್ತಾಕ್, ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್, ಸಿನೆಮಾ ಕಲಾವಿದರಾದ ಅಮಿರ್ ಖಾನ್, ಶಾರುಖ ಖಾನ್, ಸಲ್ಮಾನ್ ಖಾನ್, ಶಬಾನಾ ಆಜ್ಮಿ, ಭಾರತದ ಅತ್ಯುತ್ತಮ ಮಹಿಳಾ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ, ಕ್ರಿಕೆಟ್‌ ಆಟಗಾರ ಮೊಹಮ್ಮದ್ ಕೈಫ್, ಇರ್ಫಾನ್ ಪಠಾನ ಮುಂತಾದವರೆಲ್ಲಾ ಶಿಕ್ಷಣ ಕಲಿತ ಸಾಧಕರಲ್ವಾ?. ಹೀಗೆ ಹೇಳಿದರೆ ಮುಸ್ಲಿಂ ಸಾಧಕರ ದೊಡ್ಡ ಪಟ್ಟಿಯೇ ಇದೆ. ಆದರೆ ಈ ದ್ವೇಷ ಪೀಡಿತ ಕೋಮುವ್ಯಾಧಿಗಳ ಕಣ್ಣಿಗೆ ಇವುಗಳು ಕಾಣುವುದಿಲ್ಲ.

ನಮ್ಮ ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಈ ಸಂಘಿ ನಾಯಕರುಗಳು ಬ್ರಿಟೀಷರ ಪರವಾಗಿದ್ದಿದ್ದು ಬಹಿರಂಗ ಸತ್ಯ. ಯಾರೂ ಕೂಡಾ ಸ್ವಾತಂತ್ರ್ಯ ಚಳುವಳಿಗೆ ಕೊಡುಗೆ ಕೊಟ್ಟಿಲ್ಲ. ಆದರೆ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಪ್ರಾಣಕೊಟ್ಟ ಮುಸಲ್ಮಾನ ಸಮುದಾಯದವರ ಲಿಸ್ಟ್ ತುಂಬಾ ದೊಡ್ಡದಿದೆ. ಸ್ವಾತಂತ್ರ್ಯ ಸಮರದಲ್ಲಿ ದೇಶದ್ರೋಹ ಮಾಡಿದವರ, ಬ್ರಿಟೀಷರಿಗೆ ಕ್ಷಮಾದಾನ ಬರೆದು ಪಿಂಚಣಿಯಲ್ಲಿ ಬದುಕಿದವರ ಸಂತಾನಗಳಾದ ಹಾಲಿ ಸಂಘಿಗಳು ಮುಸಲ್ಮಾನರ ಮೇಲೆ ದ್ವೇಷ ಕಾರುತ್ತಲೇ ಇದ್ದಾರೆ.

ದೇವಸ್ಥಾನಗಳ ಕಾಣಿಕೆ ದರೋಡೆ ಮಾಡಿ ಹುಂಡಿ ಲೂಟಿ ಮಾಡಿದವರು ಮುಸಲ್ಮಾನರಲ್ಲ. ಇದೇ ಹಿಂದುತ್ವವಾದಿಗಳು. ದೇಶದ ರಹಸ್ಯಗಳನ್ನು ಪಾಕಿಸ್ತಾನಕ್ಕೆ ರಹಸ್ಯವಾಗಿ ಮಾರಿಕೊಂಡವರಲ್ಲಿ ಹಿಂದೂಗಳೇ ಇದ್ದಾರೆ. ಹಾಗಂತ ಮುಸ್ಲಿಮರಲ್ಲಿ ಅಪರಾಧಿಗಳು ಇಲ್ಲ ಎಂದಲ್ಲ. ಸೇಡು ಮತ್ತು ಕೇಡಿಗೆ ಜಾತಿ ಧರ್ಮದ ಹಂಗಿಲ್ಲ. ದೇಶದ್ರೋಹ ಹಾಗೂ ಕಾನೂನು ವಿರೋಧಿ ಕೃತ್ಯಗಳನ್ನು ಮಾಡುವವರನ್ನು ಕ್ರಿಮಿನಲ್ಸ್ ಗಳೆಂದು ಪರಿಗಣಿಸಬೇಕೆ ಹೊರತು ಅವರು ಹುಟ್ಟಿದ ಧರ್ಮಗಳಿಂದಲ್ಲ.

ಧರ್ಮಾಂಧತೆ, ಮತಾಂಧತೆಗಳನ್ನು ಪ್ರಚೋದಿಸುವವರು ಯಾವ ಧರ್ಮೀಯರೇ ಆದರೂ ಅವರನ್ನು ವಿರೋಧಿಸಬೇಕೆ ಹೊರತು ಯಾರ ಎದೆಯಲ್ಲಿ ಎಷ್ಟು ಅಕ್ಷರಗಳಿವೆ ಎಂದಲ್ಲ. ಈ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟವರಲ್ಲಿ ಅನಕ್ಷರಸ್ಥರ ಪಾಲು ದೊಡ್ಡದಿದೆ ಎಂಬುದನ್ನು ಮರೆಯುವಂತಿಲ್ಲ. ಆಗಿನಿಂದ ಈಗಿನವರೆಗೂ  ಈ ಅಕ್ಷರಸ್ಥರು ಪ್ರತಿದಿನ ತಿನ್ನುವ ಆಹಾರವನ್ನು ಬೆಳೆದುಕೊಟ್ಟ ರೈತರು ಹಾಗೂ ಕೂಲಿ ಕಾರ್ಮಿಕರಲ್ಲಿ ಬಹುತೇಕರು ಅನಕ್ಷರಸ್ಥರು.

ಈಗ ಈ ದೇಶದ ಸಮಸ್ತ ಪ್ರಜೆಗಳು ಈ ಕೋಮುದ್ವೇಷಿಗಳ ಪ್ರಚೋದನೆಗಳಿಂದ ಎಚ್ಚರಗೊಳ್ಳಬೇಕಿದೆ. ಹಿಂದೂ ಧರ್ಮಕ್ಕೆ ನಿಜವಾಗಿಯೂ ಅಪಾಯ ಏನಾದರೂ ಇದ್ದರೆ ಅದು ಮುಸಲ್ಮಾನರಿಂದಲ್ಲಾ, ಈ ಧರ್ಮದ್ವೇಷ ಪೀಡಿತ ಕೋಮುವಾದಿಗಳಿಂದ.

ನೀಟ್ ಪ್ರಕರಣದಲ್ಲಿ ಪ್ರಭುತ್ವದ ವಿರುದ್ಧ ಹೋರಾಟ ಮಾಡುತ್ತಿರುವವರನ್ನು ಮುಸ್ಲಿಂ ಹಿಂದೂ ಎಂದು ವಿಭಾಗಿಸುವ ಪ್ರಯತ್ನವೇ ಅಪಾಯಕಾರಿ. ನೀಟ್ ಪರೀಕ್ಷಾ ಅಕ್ರಮ ಮಾಡಿದವರು ಹಾಗೂ ಮಾಡಿಸಿದವರು ಹಿಂದೂಗಳೇ ಹೊರತು ಮುಸಲ್ಮಾನರಲ್ಲ. ಹಾಗೂ ಈ ಅಕ್ರಮದಿಂದ ಬಾಧಿತರಾದವರಲ್ಲಿ ಎಲ್ಲಾ ಧರ್ಮೀಯ ವಿದ್ಯಾರ್ಥಿಗಳೂ ಇದ್ದಾರೆ. ಯಾವುದೇ ಹೋರಾಟ ನಡೆದರೂ ಇಂತಹುದೇ ಜಾತಿ ಧರ್ಮದವರು ಮಾತ್ರ ಬೆಂಬಲಿಸಬೇಕು ಎಂದೇನಿಲ್ಲ. ಎಲ್ಲೇ ಅನ್ಯಾಯವಾದರೂ ದೇಶವಾಸಿಗಳೆಲ್ಲರೂ ಧರ್ಮಾತೀತವಾಗಿ ವಿರೋಧಿಸಬೇಕು. ಅದು ಮಾನವೀಯತೆ.

ನೀಟ್ ಅಕ್ರಮ ವಿರೋಧಿ ಹೋರಾಟದಲ್ಲಿ ಮುಸ್ಲಿಮರಿಗೇನು ಕೆಲಸ ಎಂದು ಕೇಳುವ ಸಿ.ಟಿ.ರವಿಯಂತಹ ಅಜ್ಞಾನಿಗಳಿಗೆ ಯಾರಾದರೂ ತಿಳಿಸಿ ಹೇಳಬೇಕಿದೆ ಅದು ಯಾವುದೇ ಧಾರ್ಮಿಕ ಹೋರಾಟವಲ್ಲ ಇಡೀ ದೇಶದ ವಿದ್ಯಾರ್ಥಿ ಯುವಜನರ ಹೋರಾಟ ಎಂದು. ಆ ಹೋರಾಟದಲ್ಲಿ ಎಲ್ಲಾ ಧರ್ಮೀಯರೂ ಇದ್ದಾರೆಂದು. ಆದರೆ ನರನಾಡಿಗಳಲ್ಲಿ ಮತಾಂಧತೆಯನ್ನು ತುಂಬಿಕೊಂಡು ಕೋಮುವಾದವನ್ನೇ ಉಸಿರಾಡುವ ಸಿ.ಟಿ.ರವಿಯಂತಹ ಸಂಘಿಗಳಿಗೆ ಜನರೇ ಉತ್ತರಿಸಬೇಕಿದೆ. ಚುನಾವಣೆಗಳಲ್ಲಿ ಇಂತವರನ್ನು ಹಾಗೂ ಇಂತವರ ಹಿತಕಾಯುವ ಪಕ್ಷಗಳನ್ನು ಸೋಲಿಸಬೇಕಿದೆ. ಈ ದೇಶ ಇಲ್ಲಿ ಹುಟ್ಟಿ ಬೆಳೆದ ಎಲ್ಲರಿಗೂ ಸೇರಿದ್ದು, ಹಿಂದುತ್ವ ಭಾರತವಲ್ಲ ಬಹುತ್ವ ಭಾರತ ಎನ್ನುವುದನ್ನು ಇಡೀ ದೇಶವಾಸಿಗಳು ಸಾಬೀತು ಪಡಿಸಬೇಕಿದೆ. ಮತಾಂಧತೆಯ ಮೂಲೋತ್ಪಾಟನೆ ಮಾಡಬೇಕಿದೆ.

ಶಶಿಕಾಂತ ಯಡಹಳ್ಳಿ

ಇವರು ಕನ್ನಡದ ಪ್ರಮುಖ ರಂಗಕರ್ಮಿಗಳು, ಪತ್ರಕರ್ತರು, ಅಂಕಣಕಾರರು. ಪ್ರಚಲಿತ ಸಾಮಾಜಿಕ ಹಾಗೂ ರಾಜಕೀಯ  ವಿದ್ಯಮಾನಗಳ ಬಗ್ಗೆ ತಮ್ಮ ವಿಚಾರಗಳನ್ನು ಪ್ರಖರವಾಗಿ ಮಂಡಿಸುತ್ತಾ ಬಂದಿದ್ದಾರೆ.

ಇದನ್ನೂ ಓದಿ- ಲಡ್ಡೈಟ್ ಚಳುವಳಿಯ ಹೊಸ ರೂಪ: ಜೆನ್‌ ಝೀ

More articles

Latest article

Most read