ಶಿವಮೊಗ್ಗದ ತ್ಯಾವರೆಕೊಪ್ಪ ವನ್ಯಧಾಮದಲ್ಲಿ ನಾಲ್ಕು ದಿನಗಳ ಹಿಂದೆ ಏಷ್ಯಾಟಿಕ್ ಸಿಂಹ ‘ಸಾರಾ’ ಳ ನಾಲ್ಕು ಮರಿಗಳು ಮೃತಪಟ್ಟಿರುವ, ವಿಷಯ ಶನಿವಾರ ತಡವಾಗಿ ಬೆಳಕಿಗೆ ಬಂದಿದೆ
ಕಳೆದ ವರ್ಷ ಮಧ್ಯಪ್ರದೇಶದ ಇಂದೋರ್‌ನಿಂದ, “ಶಿವ” ಮತ್ತು “ಸಾರಾ” ಎಂಬ ಏಷ್ಯಾಟಿಕ್ ಸಿಂಹಗಳನ್ನು ಮತ್ತು ಮೂರು ಹುಲಿಗಳನ್ನು ತರಲಾಗಿತ್ತು.
ಶಿವಮೊಗ್ಗದಲ್ಲಿ ಇದೇ ಮೊದಲ ಬಾರಿಗೆ, ಅಳಿವಿನಂಚಿನಲ್ಲಿರುವ ಪ್ರಭೇದಕ್ಕೆ ಸೇರಿದ ಏಷ್ಯಾಟಿಕ್ ಸಿಂಹವೊಂದು ಮರಿಗಳಿಗೆ ಜನ್ಮ ನೀಡಿತ್ತು. ಆದರೆ ಆ ಮರಿಗಳು ಬದುಕುಳಿಯಲಿಲ್ಲ. ಸಂತಾನೋತ್ಪತ್ತಿಯ ಉದ್ದೇಶಕ್ಕಾಗಿ ಇವುಗಳನ್ನು ಅಲ್ಲಿಗೆ ತರಲಾಗಿತ್ತು, ಎಂದು ಮೂಲಗಳಿಂದ ತಿಳಿದುಬಂದಿದೆ

