ನಂಬಿಕೆ ಮತ್ತು ತುಂಬಿಕೆಗಳ ವೃತ್ತಾಂತ

ನಂಬಿಕೆಗಳ ನಗದೀಕರಣ-2

ಇವತ್ತು ಸತ್ಯ ನಾರಾಯಣ ಪೂಜೆ  ಮತ್ತದರ ಸಪಾದ ಭಕ್ಷ್ಯ ಇಲ್ಲದಿದ್ದರೆ ಅದು  ಗೃಹ ಪ್ರವೇಶವೇ  ಅಲ್ಲ, ಅದು ಅಪೂರ್ಣ ಕಾರ್ಯಕ್ರಮ ಎಂಬ ನಂಬಿಕೆ ಹಲವೆಡೆ ಇದೆ. ಆದರೆ, ಸತ್ಯನಾರಾಯಣ ಎಂಬುದೇ ಸುಳ್ಳು ಎಂಬ ವೈದಿಕ ವಿದ್ವಾನ್  ಬನ್ನಂಜೆಯವರ ವೀಡಿಯೊ ಇಂದಿಗೂ ಯೂ ಟ್ಯೂಬ್ ನಲ್ಲಿ ಲಭ್ಯವಿದೆ. ಅಂದರೆ ನಂಬಿಕೆಯೇ ಬೇರೆ ವಾಸ್ತವ ಬೇರೆ ಅಂತಾಯ್ತು ಶಂಕರ್‌ ಸೂರ್ನಳ್ಳಿ, ಲೇಖಕರು.

 ಇತ್ತಿಚೆಗೆ ಉಡುಪಿಯ ಮಠವೊಂದರಿಂದ ತಲೆ ಹೊರಹಾಕಿ ಹೊರಟಿದ್ದ ದಕ್ಷಿಣ ಅಮೇರಿಕ ಅಮೆಝಾನ್ ಕಾಡಿನ ಅನಕೊಂಡ ಸೈಜಿನ ಕಾಳಸರ್ಪವೊಂದು ಎದುರಾದ ತೀವ್ರ ಟೀಕೆಗಳ ಅಬ್ಬರಕ್ಕೆ ಯಾವ ಅಬ್ಬರವಿಲ್ಲದೆ ತಣ್ಣಗೆ ಬಿಲಸೇರಿದ್ದು ಒಂದು ಒಳ್ಳೆಯ ಬೆಳವಣಿಗೆ. ಯುಕ್ರೇನ್ ಯುದ್ಧ, ಕೋರೋನ ಮಹಾಮಾರಿ, ನೇಪಾಳ ಪ್ರವಾಹಕ್ಕೆಲ್ಲಾ ತಳಕು  ಹಾಕಿದ್ದರೂ ಯಾರೂ ಅದನ್ನು ಸೀರಿಯಸ್ಸಾಗಿ ತೆಗೆದುಕೊಳ್ಳದಿದ್ದದ್ದು ಕಾಳಸರ್ಪ ರಾಜನಿಗೆ ಸಖತ್ ಬೇಜಾರು ತಂದಿತ್ತಂತೆ. ಕೊನೆಗೆ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ  ಸಾಕ್ಷಾತ್ ದೇವರ ಮೂರ್ತಿಯನ್ನೇ ತಲೆಕೆಳಗಾಗಿ ಬೀಳಿಸಿದರೂ ಊಹುಂ ಏನೂ ಗಿಟ್ಟಲಿಲ್ಲ.  ಏನು ಕಲಿಗಾಲವಪ್ಪಾ…

’ಧರ್ಮ ಅಫೀಮಿನಂತೆ” ಇದು ಕಾರ್ಲ್ ಮಾರ್ಕ್ಸ್ ರ ಅತ್ಯಂತ ಪ್ರಸಿದ್ಧ ಮಾತು. ಧರ್ಮದೊಂದಿಗೆ ಮಿತಿ ಮೀರಿದ ನಂಬಿಕೆಗಳೂ ಕೂಡ ಇದೇ ಪ್ರಭೇದಕ್ಕೆ ಸೇರುವುದು ಸಹ ಅಷ್ಟೇ ಸತ್ಯ. ಅತಿಯಾದ ನಂಬಿಕೆಗಳ ಅಮಲನ್ನು ಸುಲಭದಲ್ಲಿ ಬಿಡಲಾಗದು. ಕೆಲ ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ ಪರೇಶ್ ರಾವಲ್, ಅಕ್ಷಯ್ ಕುಮಾರ್ ಅಭಿನಯದ  ಸಿನಿಮಾದಲ್ಲಿ (ಕನ್ನಡದಲ್ಲಿ ಉಪೇಂದ್ರ ಸುದೀಪರ ಮುಕುಂದ ಮುರಾರಿ ಸಿನಿಮಾ) ಒಂದು ಹಂತದಲ್ಲಿ ಜನರು ಈ ಸ್ವಾಮೀಜಿಗಳ ವಿರುದ್ಧವೇ ನಿಲ್ಲುವ ಪ್ರಸಂಗ ಬರುತ್ತದೆ. ಕೋರ್ಟ್ ಆವರಣದಲ್ಲಿ ಸ್ವಾಮೀಜಿ (ಮಿಥುನ್ ಚಕ್ರವರ್ತಿ) ನಾಸ್ತಿಕ  ಪರೇಶ್ ರಾವಲ್ ಗೆ ನಗುತ್ತ ಕಿವಿ ಮಾತೊಂದನ್ನು  ಹೇಳುತ್ತಾನೆ ”ಕಾಂಜಿ ಭಾಯ್, ಈ ಆಸ್ತಾ ಎನ್ನೋದು  ಅಮಲಿನಂತೆ. ಇದೇ ಜನ ಪುನಃ ನಮ್ಮ ಬಳಿಗೆ ಬರುತ್ತಾರೆ ಬೇಕಿದ್ದರೆ ಕಾದು ನೋಡು“ ಎಂದು.  ದೇವರು ಪೂಜೆ ವ್ರತ ನಂಬಿಕೆ ಇತ್ಯಾದಿಗಳೆಲ್ಲದರ ಕಥೆ ಇಷ್ಟೇ. ಈ ಕಾರಣಕ್ಕೇ ನಂಬಿಕೆಯೆನ್ನುವುದೊಂದು ಕೋಟ್ಯಂತರ ವ್ಯವಹಾರದ ಬ್ಯುಸಿನೆಸ್ ಲೆವೆಲ್ಲಿಗೆ ಬೆಳೆದು ನಿಂತಿರೋದು.

ಶೋಲೆ ಎಂಬುದು ಭಾರತೀಯ ಚಿತ್ರ ರಂಗದ ಒಂದು ಐತಿಹಾಸಿಕ ಚಲನ ಚಿತ್ರ. ಒಳ್ಳೆಯ ಚಿತ್ರ ಕಥೆ, ಉತ್ತರ ಭಾರತ ಬಿಟ್ಟು ದೂರದ ಕರ್ನಾಟಕದ  ರಾಮನಗರ ಲೊಕೇಶನ್ ಹುಡುಕಿ  ಚಿತ್ರೀಕರಣ, ಅದರಲ್ಲಿನ ಜೋಡಿಗಳು  ಬಳಿಕ ನಿಜ ಸತಿಪತಿಗಳಾದರು, ಅಮಿತಾಭ್ ರಂತಹ ಹೀರೊ ಅಮ್ಜದ್ ಖಾನ್ ರಂತಹ ಗಬ್ಬರ್ ಸಿಂಗ್ ಗೆ ಜನ್ಮ ಕೊಟ್ಟಂತಹ 1975 ರಲ್ಲಿ ಬಂದ ಸೂಪರ್ ಹಿಟ್ ಸಿನಿಮಾ ಅದು. ಅದರ ಹಾಡುಗಳು ಅದರ ಡೈಲಾಗ್ ಗಳು ಆಗಿನವರ ಬಾಯಲ್ಲಿ ನಲಿದಾಡುವಂತೆ ಮಾಡಿತ್ತು ಈ ಹಿಟ್ ಶೋಲೆ ಸಿನಿಮಾ. ಇಂತಹ ಮೈಲಿಗಲ್ಲು ಸಿನಿಮಾಕ್ಕೆ  ಲೋ ಬಜೆಟ್ ಸಿನಿಮಾವೊಂದು ಅಂದು ಟಕ್ಕರ್ ಕೊಟ್ಟಿತ್ತು.

ಒಂದು ಸರಳ ಸಾಮಾನ್ಯ  ಕಥೆಯುಳ್ಳ ಕಾಲ್ಪನಿಕ  ದೇವತಾ ಪಾತ್ರದ ಆ ಚಲನ ಚಿತ್ರ ನೋಡಲು ಹಳ್ಳಿ ಹಳ್ಳಿಗಳಿಂದ ಜನರು ಗಾಡಿ ಮಾಡಿಕೊಂಡು  ಬರುತ್ತಿದ್ದರಂತೆ,  ಥಿಯೇಟರ್ ಒಳಗೆ ಹೋಗುವಾಗ ಚಪ್ಪಲಿ ಹೊರಗಿಟ್ಟು ಚಿತ್ರ ವೀಕ್ಷಿಸುತ್ತಿದ್ದರಂತೆ. ಆ ಚಲನಚಿತ್ರವೇ ”ಜೈ ಸಂತೋಷಿ ಮಾ“. ಅಸಲಿಗೆ ನಮ್ಮ ಹದಿನೆಂಟು ಪುರಾಣಗಳಲ್ಲಾಗಲೀ ರಾಮಾಯಣ ಮಹಾಭಾರತದಲ್ಲಾಗಲೀ ಎಲ್ಲೂ ಕೂಡ ಈ ಸಂತೋಷಿ ಮಾ ದೇವಿಯ ಪ್ರಸ್ತಾಪವೇ  ಇಲ್ಲ. ಇದೊಂದು ನೂರಕ್ಕೆ ನೂರು ನಿರ್ದೇಶಕನ ತಲೆಯಲ್ಲಿ ಹುಟ್ಟಿದಂತಹ ಅಪ್ಪಟ ಕಾಲ್ಪನಿಕ ಕಥೆ. ಆ ಕಾಲ್ಪನಿಕ ಚಲನಚಿತ್ರ ಎಷ್ಟು ಜನಪ್ರಿಯವಾಯ್ತೆಂದರೆ, ದೇಶದಲ್ಲಿನ ಮುವ್ವತ್ಮೂರು ಕೋಟಿ ದೇವತೆಗಳ ಜೊತೆಗೆ ಮತ್ತೊಂದು ಹೊಸ ದೇವತೆಯ ಸೇರ್ಪಡೆಯಾಯ್ತು. ಜೈ ಜೈ ಸಂತೋಷಿ ಮಾ .. ಎನ್ನುವ  ಗೀತೆಗಳು ಜನಪ್ರಿಯವಾಗಿ  ಎಲ್ಲಾ ಆಸ್ತಿಕರ ಮನೆ ಮನಗಳನ್ನ ಶಾಶ್ವತವಾಗಿ ಸೇರಿಕೊಂಡವು.

ಇದೇನು ಅಪರೂಪದ ವಿಶೇಷ ಸಂಗತಿಯೇನಲ್ಲ. ಒಬ್ಬ ಸಜ್ಜನಿಕೆಯ ಯತಿಯಾಗಿದ್ದ  ರಾಘವೇಂದ್ರ ಸ್ವಾಮಿಗಳನ್ನು ದೈವತ್ವಕ್ಕೇರಿಸಿದ್ದು ಇದೇ  ಸಿನಿಮಾಗಳೇ ತಾನೇ. ದೆವ್ವ ಮೆಟ್ಟಿಕೊಂಡಿರುವ ಅನಂತನಾಗರನ್ನು ಬಚಾವ್ ಮಾಡುವ ಕಥೆಯುಳ್ಳ ನಾನಿನ್ನ ಬಿಡಲಾರೆ (1979) ಸೇರಿ ಡಾ ರಾಜಕುಮಾರ್, ರಜನಿ ಕಾಂತ್ ಅಭಿನಯದ ಅನೇಕ ಚಲನ ಚಿತ್ರಗಳು ರಾಘವೇಂದ್ರ ಸ್ವಾಮಿಗಳನ್ನು ಜನ ಸಾಮಾನ್ಯರಲ್ಲಿ ಭಕ್ತರ ಕಾಯುವ ಕರುಣಾ ಸಿಂಧುವನ್ನಾಗಿಸಿತ್ತು.  ಈ ಮೂಲಕ ದಕ್ಷಿಣ ಭಾರತದಲ್ಲಿ ರಾಘವೇಂದ್ರ ಸ್ಮರಣೆ /ಆರಾಧನೆಗಾಗಿ ಅಲ್ಲಲ್ಲಿ ಸಣ್ಣ ಮಂತ್ರಾಲಯಗಳು ಹುಟ್ಟಿ ಕೊಳ್ಳಲು ಪ್ರೇರಣೆಯಾದವು .

70 -80 ರ ದಶಕಗಳಲ್ಲಿ ಸೈಕಲ್ ಸರ್ಕಸ್ ಷೋ ನೀಡುವ ಸಾಹಸ ಕಲಾವಿದರು ತಾವು ಬಿತ್ತರಿಸುವ ”ಕಲ್ಲು ಕಟ್ಟಿ ಶಬರಿ ಮಲೆಟ್ಟಿ..” ಯೇ ಮೊದಲಾದ ಅಯ್ಯಪ್ಪ ಸ್ವಾಮಿ ಭಕ್ತಿ ಹಾಡುಗಳ ಮೂಲಕ ಕರಾವಳಿಯಲ್ಲಿ ಅಯ್ಯಪ್ಪ ಸ್ವಾಮಿಯನ್ನು ಮತ್ತು  ಶಬರಿಮಲೆ  ವ್ರತವನ್ನು ಜನಪ್ರಿಯಗೊಳಿಸಲು ಕಾರಣರಾದರು. ಇವತ್ತು ಸತ್ಯ ನಾರಾಯಣ ಪೂಜೆ  ಮತ್ತದರ ಸಪಾತ್ ಭಕ್ಷ್ಯ ಇಲ್ಲದಿದ್ದರೆ ಅದು  ಗೃಹ ಪ್ರವೇಶವೇ  ಅಲ್ಲ, ಅದು ಅಪೂರ್ಣ ಕಾರ್ಯಕ್ರಮ ಎಂಬ ನಂಬಿಕೆ ಹಲವೆಡೆ ಇದೆ. ಆದರೆ, ಈ ಸತ್ಯ ನಾರಾಯಣ ಎಂಬುದೇ ಸುಳ್ಳು ಎಂಬ ವೈದಿಕ ವಿದ್ವಾನ್  ಬನ್ನಂಜೆಯವರ ವೀಡಿಯೊ ಇಂದಿಗೂ ಯೂ ಟ್ಯೂಬ್ ನಲ್ಲಿ ಲಭ್ಯವಿದೆ. ಅಂದರೆ ನಂಬಿಕೆಯೇ ಬೇರೆ ವಾಸ್ತವ ಬೇರೆ ಅಂತಾಯ್ತು.

ಜನರಲ್ಲೂ ಕೂಡ ಇದೀಗ ಕಾಸು ಓಡಾಡುತ್ತಿದೆ. ಜನರ ಬಿಂದಾಸ್  ಖರ್ಚಿಗೂ ದಾರಿ. ಹಾಗೆಯೇ,  ನಂಬಿಕೆಗಳಿಗೂ ಅವು ನೆಲೆಯಾಗುವಂತ  ಹಾದಿ ಸುಗಮ. ಈ ಸತ್ಯ ನಾರಾಯಣ ಪೂಜೆ, ವರಮಹಾಲಕ್ಷ್ಮಿ ವ್ರತ  ಎಂದು ಒಂದೊಂದೇ  ಆಚರಣೆಗಳೆಲ್ಲ  ಅದು ಇಲ್ಲದಲ್ಲೆಲ್ಲ  ನಿಧಾನವಾಗಿ ಸೇರಿಕೊಳ್ಳುತ್ತಾ ಇವೆ.

ಅದೇ ರೀತಿ, ಹೊಸತಾಗಿ ಅಷ್ಟ ಮಂಗಳ ಪ್ರಶ್ನೆಗಳು, ಬ್ರಹ್ಮ ಕಲಶಗಳು  (ಸಂಬಂಧವೇ ಇಲ್ಲದ ದೈವ ಸ್ಥಾನಕ್ಕೂಕೂಡ,) ನದಿಗಳಿಗೆ ಬಾಗಿನದ ಅರ್ಪಣೆಗಳು, ಗೋಪೂಜೆಗಳು, ವಿಷ್ಣು ಸಹಸ್ರ ನಾಮ ಪಠಣಗಳು ಸಾರ್ವಜನಿಕ ಮತ್ತು ಲೋಕ ಕಲ್ಯಾಣಕ್ಕಾಗಿ ಎನ್ನುವ  ಲೇಬಲ್ಲಿನೊಂದಿಗೆ  ಚಲಾವಣೆಗಿಳಿಯತೊಡಗಿವೆ. ಆದರೆ ಕಾಳಸರ್ಪಕ್ಕೆ ಮಾತ್ರ ಆ ಸೌಭಾಗ್ಯವಿದ್ದಂತಿಲ್ಲ ಅಥವಾ ಕಾಲವೇ ಇದಕ್ಕೆ ಉತ್ತರಿಸಬೇಕು. ಯಾಕೆಂದರೆ ನಾಳೆಯ ಬಗ್ಗೆ ತಿಳಿದವರ್ಯಾರೂ ಇಲ್ಲ.

ಶಂಕರ್ ಸೂರ್ನಳ್ಳಿ

ಲೇಖಕರು

ಇದನ್ನೂ ಓದಿ- ಕಾಳಸರ್ಪ ಮತ್ತು ಮುಗ್ಧ ನಂಬಿಕೆಗಳ ನಗದೀಕರಣ

More articles

Latest article

Most read