ಬೆಂಗಳೂರು : ‘ಬಿಗ್ ಬಾಸ್ ಕನ್ನಡ 13 ‘ ರಲ್ಲಿ ಭಾಗವಹಿಸಿರುವ ನಿರ್ದೇಶಕ ಓಂ ಪ್ರಕಾಶ್ ರಾವ್, ಆರೋಗ್ಯದಲ್ಲಿನ ಹಠಾತ್ ಏರುಪೇರಿನಿಂದಾಗಿ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆದಿದ್ದಾರೆ. ಆದರೆ, ಮತ್ತೆ ಬಿಗ್ಬಾಸ್ ಮನೆಯಿಳಗೆ ಹೋಗದಿರುಲು ನಿರ್ಧರಿಸಿದ್ದಾರೆ.
ವರದಿಗಳ ಪ್ರಕಾರ, ಆರೋಗ್ಯದಲ್ಲಿ ಅಸ್ವಸ್ಥತೆ ಅಥವಾ ತೊಂದರೆ ಕಾಣಿಸಿಕೊಂಡ ತಕ್ಷಣ ‘ಬಿಗ್ ಬಾಸ್ ಕನ್ನಡ’ ನಿರ್ಮಾಣ ತಂಡವು ಓಂ ಪ್ರಕಾಶ್ ರಾವ್ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಅವರು ವಯೋಸಹಜ ಆಯಾಸ ಮತ್ತು ದೈಹಿಕ ಅಸ್ವಸ್ಥತೆ, ರಿಯಾಲಿಟಿ ಶೋನಲ್ಲಿನ ಒತ್ತಡ ಮತ್ತು ಒತ್ತಡದ ಸನ್ನಿವೇಶಗಳು ಕೂಡ ಅವರ ಆರೋಗ್ಯದ ಸ್ಥಿತಿಯ ಮೇಲೆ ಪರಿಣಾಮ ಬೀರಿದೆ ಎನ್ನಲಾಗಿದೆ.
ಮುಖ್ಯ ಮನೆಗೆ ಪ್ರವೇಶಿಸುವ ಮೊದಲು ಓಂ ಪ್ರಕಾಶ್ ರಾವ್ ಅವರು ಬಿಗ್ ಬಾಸ್ ಮನೆಯ ‘ಫ್ಲೈಟ್ ಏರಿಯಾ’ದಲ್ಲಿ (ವಿಶೇಷ ವಲಯ) ಉಳಿದುಕೊಂಡಿದ್ದರು. ‘ಕಿಚ್ಚ ಸುದೀಪ್ ಅವರೊಂದಿಗಿನ ಸೂಪರ್ ಸಂಡೇ’ ಸಂಚಿಕೆಯಲ್ಲಿ ನಾಮಿನೇಷನ್ನಿಂದ ಪಾರಾದ ನಂತರ ಅವರು ಮುಖ್ಯ ಮನೆಗೆ ಪ್ರವೇಶಿಸಿದ್ದರು.
‘ಫ್ಲೈಟ್ ಏರಿಯಾ’ದಲ್ಲಿ ಉಳಿದುಕೊಂಡಿದ್ದಾಗ ಮಲಗುವ ವ್ಯವಸ್ಥೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಿದ್ದಲ್ಲದೆ, ಅವರು ಸಾಕಷ್ಟು ದೈಹಿಕ ಅಸ್ವಸ್ಥತೆಯನ್ನು ಅನುಭವಿಸುತ್ತಿದ್ದರು ಎಂದು ವರದಿಗಳು ತಿಳಿಸುತ್ತವೆ. ಸದ್ಯ ಅವರು ಕಾಲು ನೋವಿನಿಂದ ಬಳಲುತ್ತಿದ್ದರಿಂದ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲು ಕಾರಣವಾಗಿದೆ.
ನಿರ್ಮಾಣ ತಂಡವು ಅವರನ್ನು ಬಿಗ್ ಬಾಸ್ ಮನೆಯ ಸಮೀಪವಿರುವ ಬಿಡದಿಯ ‘ಆರಾಧ್ಯ ಆಸ್ಪತ್ರೆ’ಗೆ ಸ್ಥಳಾಂತರಿಸಿದೆ. ಅವರು ಪ್ರಸ್ತುತ ವೈದ್ಯಕೀಯ ಆರೈಕೆಯನ್ನು ಪಡೆಯುತ್ತಿದ್ದು, ಅಗತ್ಯ ಪರೀಕ್ಷೆಗಳಿಗೆ ಒಳಗಾಗುತ್ತಿದ್ದಾರೆ.
ಆದರೆ, ಚಿಕಿತ್ಸೆ ನಂತರ ಅವರು ಮತ್ತೆ ಬಿಗ್ಬಾಸ್ ಮನೆಗೆ ತೆರಳಲಿದ್ದಾರೆ ಎನ್ನಲಾಗಿತ್ತು. ಆದರೆ, ಓಂ ಪ್ರಕಾಶ್, ಮತ್ತೆ ಬಿಗ್ಬಾಸ್ ಮನೆಗೆ ವಾಪಸ್ ತರಳದಿರಲು ನಿರ್ಧರಿಸಿದ್ದಾರೆ ಎನ್ನಲಾಗಿತ್ತು.

