ಕೋಲಾರ ಜಿಲ್ಲೆಯಲ್ಲೂ “ಪ್ರೇಮದ ಊರಲಿ” ಚಿತ್ರದ್ದೇ ಸದ್ದು

ಇತ್ತೀಚೆಗೆ ಬಿಡುಗಡೆಯಾದ ಪ್ರೇಮದ ಊರಲಿ ಚಲನಚಿತ್ರದ ಕ್ರೇಜ್ ಕೋಲಾರ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಜಿಲ್ಲೆಯಲ್ಲಿ ಬಿಡುಗಡೆಯಾದ ಅಷ್ಟೂ ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ.

ಆಂಧ್ರಪ್ರದೇಶದ ಹಾಗೂ ತಮಿಳುನಾಡಿಗೆ ಹೊಂದಿಕೊಂಡಿರುವ ಗಡಿ ಜಿಲ್ಲೆ ಕೋಲಾರದಲ್ಲಿ ಮೊದಲಿನಿಂದಲೂ ತೆಲುಗು ಸಿನಿಮಾಗಳದ್ದೇ ಪ್ರಾಬಲ್ಯ. ಜಿಲ್ಲಾ ಕೇಂದ್ರ ಕೋಲಾರದಲ್ಲಿ ಮಾತ್ರ ಕನ್ನಡ ಚಿತ್ರಗಳು ಬಿಡುಗಡೆ ಆಗುತ್ತಿದ್ದವು, ಕನ್ನಡದ ಸ್ಟಾರ್ ನಟರ ಬಹು ನಿರೀಕ್ಷೆಯ ಸಿನಿಮಾಗಳು ಮಾತ್ರ ಕೋಲಾರ ಜಿಲ್ಲೆಯ, ತಾಲ್ಲೂಕು ಕೇಂದ್ರಗಳ ಚಿತ್ರಮಂದಿರಗಳಲ್ಲಿ ಬಿಡುಗಡೆ ಆದರೂ, ಐದಾರು ದಿನಗಳಲ್ಲಿ ಎತ್ತಂಗಡಿಯಾಗುತ್ತಿದ್ಜವು.

ತೆಲುಗು ಸಿನಿಮಾಗಳದ್ದೇ ಪ್ರಾಬಲ್ಯವಿರುವ ಕೋಲಾರ ಜಿಲ್ಲೆಯ ಮುಳಬಾಗಿಲು, ಬಂಗಾರಪೇಟೆ ತಾಲೂಕುಗಳಲ್ಲೂ “ಪ್ರೇಮದ ಊರಲಿ” ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ, ಮುಳಬಾಗಿಲಿನ ರಾಧಿಕಾ ಚಿತ್ರಮಂದಿರ, ಬಂಗಾರಪೇಟೆಯ ವಿಜಯ ಚಿತ್ರಮಂದಿರಗಳ ಭಾನುವಾರದ ಎಲ್ಲಾ ಪ್ರದರ್ಶನಗಳೂ ಹೌಸ್ ಫುಲ್ ಆಗಿದ್ದು, ತೆಲುಗು, ಹಿಂದಿ ಸಿನಿಮಾಗಳು ಪ್ರದರ್ಶನಗೊಳ್ಳುತ್ತಿರುವ ಇತರೆ ಚಿತ್ರಮಂದಿರಗಳಲ್ಲಿ ಬೆರಳೆಣಿಕೆಯಷ್ಟು ಪ್ರೇಕ್ಷಕರಿರುವುದು ಕಂಡು ಬರುತ್ತಿತ್ತು

More articles

Latest article

Most read