ಗುಜರಾತ್, ಸೆ.22: ಕನ್ನಡ ಚಿತ್ರ ಮಿಥ್ಯ ಹಾಗೂ ತುಳುವಿನ ಇಂಬು ಚಿತ್ರ ತಂಡ 72ನೇ ರಾಷ್ಟ್ರೀಯ ಚಲನ ಪ್ರಶಸ್ತಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಮಂಗಳವಾರ ಸ್ವೀಕರಿಸಿತು. ಮಿಥ್ಯ ಚಿತ್ರಕ್ಕೆ ಮೂರು ಹಾಗೂ ಇಂಬು ಚಿತ್ರಕ್ಕೆ ಒಂದು ಪ್ರಶಸ್ತಿ ಸಂದಿದೆ. ಇದರೊಂದಿಗೆ ರಾಷ್ಟ್ರದ ವಿವಿಧ ಭಾಷೆಯ 92 ಚಿತ್ರಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
2024ರ ಜನವರಿ 1ರಿಂದ ಡಿಸೆಂಬರ್ 31ರವರೆಗೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್ಸಿ) ಪ್ರಮಾಣೀಕರಿಸಿದ ಸಿನಿಮಾಗಳು ಈ ಪ್ರತಿಷ್ಠಿತ ಪ್ರಶಸ್ತಿಗಳಿಗೆ ಆಯ್ಕೆ ಆಗಿವೆ. ಫಿಲ್ಮ್ಮೇಕರ್ ಜಯರಾಜ್ ನೇತೃತ್ವದ 11 ಸದಸ್ಯರನ್ನೊಳಗೊಂಡ ತಂಡ ಭಾರತದಾದ್ಯಂತದ ಚಲನಚಿತ್ರಗಳನ್ನು ಪರಿಶೀಲಿಸಿದ ನಂತರ ಈ ವರ್ಷದ ವಿಜೇತರನ್ನು ಜುಲೈ 18ರ ಸಂಜೆ ಘೋಷಣೆ ಮಾಡಿತು.
ಕನ್ನಡ ಮಿಥ್ಯ ಸಿನಿಮಾ ನಿರ್ದೇಶಕ ಸುಮಂತ್ ಭಟ್ಮ ನಿರ್ಮಾಣ ಪರಂವಃ ಪಿಕ್ಚರ್ಸ್ ಮತ್ತು ಕೆಆರ್ಜಿ ಸ್ಟುಡಿಯೋಸ್. ಅತ್ಯುತ್ತಮ ಬಾಲ ಕಲಾವಿದ ಪ್ರಶಸ್ತಿ ಕೂಡ ಮಿಥ್ಯ ಸಿನಿಮಾಕ್ಕೆ ಬಂದಿದೆ. ಬಾಲ ಕಲಾವಿದ ಅತೀಶ್ ಎಸ್ ಶೆಟ್ಟಿ ಪಡೆದರು. ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿ ಕೂಡ ಮಿಥ್ಯ ಸಿನಿಮಾಗೆ ಸಂದಿದೆ. ಪೋಷಕ ನಟಿ ಪಾತ್ರಕ್ಕೆ ಬಣ್ಣ ಹಚ್ಚಿದ್ದ ರೂಪಶ್ರೀ ವರ್ಕಾಡಿ ಅವರು ಮತ್ತೊಬ್ಬ ಕಲಾವಿದರೊಂದಿಗೆ ಪ್ರಶಸ್ತಿ ಸ್ವೀಕರಿಸಿದರು.
ಅತ್ಯುತ್ತಮ ತುಳು ಸಿನಿಮಾ ಚಿತ್ರವಾಗಿ ಇಂಬು ಆಯ್ಕೆಯಾಗಿದ್ದ ಈ ಚಿತ್ರದ ನಿರ್ದೇಶಕ ಶಿವಧ್ವಜ್ ಶೆಟ್ಟಿ ನಿರ್ಮಾಣ ಪಿಚ್ಚರ್ ಸ್ಟುಡಿಯೋ.
ರಕ್ಷಿತ್ ಶೆಟ್ಟಿ ನಿರ್ಮಾಣದ ಮಿಥ್ಯ:
ಕನ್ನಡ ಚಿತ್ರರಂಗದ ನಟ ರಕ್ಷಿತ್ ಶೆಟ್ಟಿ ಮಾಲೀಕತ್ವದ ಪರಂವಃ ಸ್ಟುಡಿಯೋಸ್ ಮತ್ತು ಪ್ರಸಿದ್ಧ ಕೆಆರ್ಜಿ ಸ್ಟುಡಿಯೋಸ್ ಜಂಟಿಯಾಗಿ ನಿರ್ಮಾಣವಾಗಿರುವ ಚಿತ್ರ ಮಿಥ್ಯ.ಸುಮಂತ್ ಭಟ್ ಬರೆದು ಆ್ಯಕ್ಷನ್ ಕಟ್ ಹೇಳಿರುವ ಈ ಸಿನಿಮಾದಲ್ಲಿ ಅತಿಶ್ ಎಸ್ ಶೆಟ್ಟಿ, ಪ್ರಕಾಶ್ ತುಮಿನಾಡ್, ರೂಪಾ ವರ್ಕಾಡಿ ಸೇರಿ ಹಲವರು ನಟಿಸಿದ್ದಾರೆ.
ಮಿಥ್ಯ ಮುಖೇನ ಸುಮಂತ್ ಭಟ್ ಸ್ವತಂತ್ರ ನಿರ್ದೇಶಕರಾಗಿ ಪಯಣ ಪ್ರಾರಂಭಿಸಿದರು. ತಮ್ಮ ಮೊದಲ ಪ್ರಯತ್ನದಲ್ಲೇ ರಾಷ್ಟ್ರಮಟ್ಟದ ಗೌರವಕ್ಕೆ ಪಾತ್ರರಾಗಿದ್ದಾರೆ. ಪೋಷಕರ ನಿಧನದ ಬಳಿಕ, ಅವರ ನೆನಪುಗಳಿಂದ ಹೊರಬರಲಾರದ ಪುಟ್ಟ ಬಾಲಕನೊಬ್ಬ ಹೊಸ ಪ್ರಪಂಚವನ್ನು ಹುಡುಕಿಕೊಂಡು ಹೊರಡುತ್ತಾನೆ. ಹಳೆಯ ಸಂಬಂಧಗಳಲ್ಲಿ ಹೊಸತನ ಕಾಣುವ ಹಾಗೂ ಹೊಸ ಸ್ನೇಹಿತರಲ್ಲಿ ಹಳೆಯ ಗೆಳೆತನ ಹುಡುಕುವ ಪಯಣವನ್ನು ಈ ಚಿತ್ರ ಒಳಗೊಂಡಿದೆ. ಸಿನಿಮಾ ಉದಿತ್ ಖುರಾನ ಕ್ಯಾಮರಾ ವರ್ಕ್, ಮಿಥುನ್ ಮುಕುಂದನ್ ಸಂಗೀತ, ಭುವನೇಶ್ ಮಣಿವಣ್ಣನ್ ಸಂಕಲನವನ್ನೊಳಗೊಂಡಿದೆ.

