ಬಂಟ್ವಾಳದಲ್ಲಿ ಯುವತಿಯ ಹತ್ಯೆ ; ಕೋಮು ಪ್ರಚೋದನೆಗೆ ತಪ್ಪಿದ ನೆಲೆ

ಧರ್ಮದ ಆಧಾರದಲ್ಲಿ ಕೋಮುಗಲಭೆಗೆ ಪ್ರಚೋದನೆ ನೀಡುವ, ಹಾಗೂ ತಮಗನುಕೂಲವಾಗುವ ಆಯ್ದ ಪ್ರಕರಣಗಳಲ್ಲಿ ಮಾತ್ರ ಹುಯಿಲೆಬ್ಬಿಸುವ ಕೋಮುಪಡೆಗಳ ಹುನ್ನಾರವನ್ನು ಕರಾವಳಿಯ ಪ್ರಜ್ಞಾವಂತ ಜನರು ಅರಿತುಕೊಂಡು ಎಚ್ಚರಗೊಳ್ಳಬೇಕಿದೆ. ಸಮಾಜವನ್ನು ಒಡೆಯುವ ವಿಚ್ಛಿದ್ರಕಾರಿ ಶಕ್ತಿಗಳನ್ನು ತಿರಸ್ಕರಿಸಬೇಕಿದೆ- ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.

ಹಿಂಸೆ ಹಲ್ಲೆ ಹತ್ಯೆಗಳನ್ನು ಯಾವುದೇ ಧರ್ಮೀಯರು ಮಾಡಿದ್ದರೂ ಧರ್ಮಾತೀತವಾಗಿ ಎಲ್ಲರೂ ಖಂಡಿಸಬೇಕಿದೆ. ಕಾನೂನಿನಡಿಯಲ್ಲಿ  ತ್ವರಿತ ಹಾಗೂ ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಿ ಆರೋಪಿಗಳಿಗೆ ಅತ್ಯಂತ ಕಠಿಣ ಶಿಕ್ಷೆ ವಿಧಿಸಬೇಕೆಂದು ಸರಕಾರವನ್ನು ಒತ್ತಾಯಿಸಬೇಕಿದೆ.

ಪ್ರೀತಿಯ ಅತಿರೇಕಕ್ಕೆ, ಪ್ರೇಮದ ಹುಚ್ಚುತನಕ್ಕೆ ಬಿದ್ದ ಪಾಗಲ್ ಪ್ರೇಮಿಯಿಂದ ಹಾಡು ಹಗಲೇ ಬಂಟ್ವಾಳದ ಬಿ.ಸಿ.ರೋಡಿನ ಬಸ್ ನಿಲ್ದಾಣದಲ್ಲಿ ಯುವತಿ ಲಾವಣ್ಯಳ ಕೊಲೆಯಾಗಿದೆ. ಕೊಲೆ ಮಾಡಿದವನೂ ಅವಳ ದೂರದ ಸಂಬಂಧಿಯಾಗಿದ್ದು ಬೆಳ್ತಂಗಡಿ ತಾಲೂಕಿನ ಓಡಿಲ್ನಾಳ ಗ್ರಾಮದ ಚೇತನ ಎಂದು ತಿಳಿದು ಬಂದಿದ್ದು ಪೊಲೀಸರು ಬಂಧಿಸಿದ್ದಾರೆ.

ಕೊಲೆಯಾದವರು ಹಾಗೂ ಕೊಲೆಮಾಡಿದಾತ ಇಬ್ಬರೂ ಹಿಂದೂ ಸಮುದಾಯದ ಸಂಬಂಧಿಕರೇ ಆಗಿದ್ದಾರೆ.  ಇದರಿಂದಾಗಿ ಹತ್ಯಾನಂತರ ಹೊತ್ತಿ ಉರಿಯಬಹುದಾಗಿದ್ದ ಕೋಮುದಳ್ಳುರಿಯೊಂದು ತಪ್ಪಿದೆ. ಬಹುಷಃ ಮತಾಂಧ ಕೋಮುವಾದಿಗಳಿಗೆ ತುಂಬಾ ನಿರಾಸೆಯಾಗಿದೆ, ಕೋಮುದಳ್ಳುರಿ ಹುಟ್ಟಿಸುವ ಅವಕಾಶ ಒಂದು ಕೈ ತಪ್ಪಿಹೋಯಿತಲ್ಲಾ ಎಂದು ಭಾರೀ ಬೇಸರವೂ ಆಗಿದೆ.

ಅಕಸ್ಮಾತ್ ಕೊಲೆ ಮಾಡಿದಾತ ಮುಸ್ಲಿಂ ಆಗಿದ್ದರೆ ಇಷ್ಟೊತ್ತಿಗಾಗಲೇ ಕರಾವಳಿಗೆ ಬೆಂಕಿ ಬೀಳುತ್ತಿತ್ತು. ಸಂಘ ಪರಿವಾರದ ಅಂಗಗಳು ಬೀದಿಗಿಳಿಯುತ್ತಿದ್ದವು. ಸಿ.ಟಿ.ರವಿ, ಸುನಿಲ್ ಕುಮಾರ್, ಶೋಭಾ ಕರಂದ್ಲಾಜೆ ಮುಂತಾದ ಕೋಮುದ್ವೇಷ ಭಾಷಣಕೋರರೆಲ್ಲಾ ಎಲ್ಲಾ ಬಿಟ್ಟು ಬಂಟ್ವಾಳಕ್ಕೆ ಓಡಿ ಹೋಗಿ ಮುಸ್ಲಿಂ ಸಮುದಾಯದ ವಿರುದ್ದ ದ್ವೇಷ ಭಾಷಣ ಶುರುಮಾಡಿ “ಹಿಂದೂಗಳು ಅಪಾಯದಲ್ಲಿದ್ದಾರೆ” ಎಂದು ಹಿಂದೂ ಸಮುದಾಯದವರನ್ನು ಮುಸಲ್ಮಾನರ ವಿರುದ್ಧ ರೊಚ್ಚಿಗೆಬ್ಬಿಸುತ್ತಿದ್ದರು. ಬಿಜೆಪಿಯ ಆರ್.ಅಶೋಕ, ವಿಜಯೇಂದ್ರರವರು ಅಲ್ಲಿಯೇ ಬೀಡು ಬಿಟ್ಟು ಹತ್ತಿದ ಬೆಂಕಿಗೆ ಗಾಳಿ ಬೀಸಿ ತೈಲಾಭಿಷೇಕ ಮಾಡುತ್ತಿದ್ದರು. ಸದ್ಯ ಹಾಗೆ ಆಗಿಲ್ಲವಲ್ಲಾ ಎಂದು ಕರಾವಳಿಯ ಜನರು ಅದರಲ್ಲೂ ಮುಸ್ಲಿಂ ಸಮುದಾಯದವರು ನಿಟ್ಟುಸಿರು ಬಿಡುತ್ತಿದ್ದಾರೆ, ಬೆಂಕಿ ಹಚ್ಚುವ ಬಂಗಾರದಂತ ಅವಕಾಶವೊಂದು ತಪ್ಪಿ ಹೋಯ್ತಲ್ಲಾ ಎಂದು ಸಂಘಿಗಳು ಕೈಕೈ ಹಿಚುಕಿಕೊಳ್ಳುತ್ತಿದ್ದಾರೆ.

ಕೊಲೆಯಾದ ಲಾವಣ್ಯ ಮತ್ತು ಕೊಲೆ‌ ಮಾಡಿದ ಚೇತನ್

“ದಕ್ಷಿಣ ಕನ್ನಡದಲ್ಲಿ ಕೊಲೆಯಾದರೆ ಎರಡು ರೀತಿಯ ಬಂದ್ ಇರುತ್ತದೆ… ಆರೋಪಿ ಮುಸ್ಲಿಂ ಆದರೆ ‘ದಕ್ಷಿಣ ಕನ್ನಡ ಬಂದ್, ಆರೋಪಿ ಹಿಂದೂ ಆದರೆ ಬಾಯಿ ಬಂದ್!!!?” ಎನ್ನುವ ಮಾತು ಕರಾವಳಿಯಲ್ಲಿ ಜನಜನಿತ.

ಈಗಲೂ ಬಲಪಂಥೀಯ ಕೋಮುವಾದಿಗಳು ಸುಮ್ಮನೆ ಕುಳಿತಿಲ್ಲ. ಸಾಮಾಜಿಕ ಜಾಲತಾಣಗಳ ಮೂಲಕ ಈ ಘಟನೆಗೆ ಸಂಬಂಧಿಸಿದಂತೆ ಕೋಮುದ್ವೇಷ ಕೆರಳಿಸುವ ಸುದ್ದಿಗಳನ್ನು ಹರಿಬಿಡುತ್ತಿದ್ದಾರೆ. “ಹಿಂದೂ ಯುವತಿಯ ಮೇಲೆ ತಲ್ವಾರಿನಿಂದ ಹೊಡೆದು ಕೊಲೆ” ಎಂದೇ ಕೆಲ ಮತಾಂಧರು ಪೋಸ್ಟ್ ಮಾಡಿದ್ದಾರೆ. ಕೊಲೆ ಮಾಡಿದವನೂ ಹಿಂದೂ ಎನ್ನುವುದನ್ನು ಮರೆಮಾಚಿದ್ದಾರೆ.

ಅಪರಾಧಗಳನ್ನು ಅಪರಾಧವಾಗಿಯೇ ನೋಡಬೇಕೇ ಹೊರತು ಅದರಲ್ಲಿ ಜಾತಿ ಧರ್ಮ ಹುಡುಕಬಾರದು. ಹಿಂಸಾಚಾರಗಳನ್ನು ಧಾರ್ಮಿಕ ಹಾಗೂ ರಾಜಕೀಯ ಧ್ರುವೀಕರಣಕ್ಕೆ ಬಳಸಿಕೊಂಡು ಸಮಾಜದಲ್ಲಿ ದ್ವೇಷ ಹಾಗೂ ಆವೇಶವನ್ನು ಸೃಷ್ಟಿಸಿ ಸೌಹಾರ್ದತೆಯನ್ನು ಹಾಳುಮಾಡುವ ಜನಪ್ರತಿನಿಧಿಗಳು ಹಾಗೂ ಸಂಘಿ ಸಂತಾನಗಳ ಹುನ್ನಾರಗಳನ್ನು ಜನರು ಅರ್ಥಮಾಡಿಕೊಳ್ಳಬೇಕಿದೆ.

ಧರ್ಮದ ಆಧಾರದಲ್ಲಿ ಕೋಮುಗಲಭೆಗೆ ಪ್ರಚೋದನೆ ನೀಡುವ, ಹಾಗೂ ತಮಗನುಕೂಲವಾಗುವ ಆಯ್ದ ಪ್ರಕರಣಗಳಲ್ಲಿ ಮಾತ್ರ ಹುಯಿಲೆಬ್ಬಿಸುವ ಕೋಮುಪಡೆಗಳ ಹುನ್ನಾರವನ್ನು ಕರಾವಳಿಯ ಪ್ರಜ್ಞಾವಂತ ಜನರು ಅರಿತುಕೊಂಡು ಎಚ್ಚರಗೊಳ್ಳಬೇಕಿದೆ. ಸಮಾಜವನ್ನು ಒಡೆಯುವ ವಿಚ್ಛಿದ್ರಕಾರಿ ಶಕ್ತಿಗಳನ್ನು ತಿರಸ್ಕರಿಸಬೇಕಿದೆ.

ಹಿಂಸೆ ಹಲ್ಲೆ ಹತ್ಯೆಗಳನ್ನು ಯಾವುದೇ ಧರ್ಮೀಯರು ಮಾಡಿದ್ದರೂ ಧರ್ಮಾತೀತವಾಗಿ ಎಲ್ಲರೂ ಖಂಡಿಸಬೇಕಿದೆ. ಕಾನೂನಿನಡಿಯಲ್ಲಿ  ತ್ವರಿತ ಹಾಗೂ ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಿ ಆರೋಪಿಗಳಿಗೆ ಅತ್ಯಂತ ಕಠಿಣ ಶಿಕ್ಷೆ ವಿಧಿಸಬೇಕೆಂದು ಸರಕಾರವನ್ನು ಒತ್ತಾಯಿಸಬೇಕಿದೆ. ಹಿಂಸೆಗೊಳಗಾದ ಸಂತ್ರಸ್ತ ಮಹಿಳೆಯರಿಗೆ ಹಾಗೂ ಅವರ ಕುಟುಂಬದವರಿಗೆ  ಪರಿಹಾರ ಮತ್ತು ನ್ಯಾಯವನ್ನು ಒದಗಿಸುವುದು ಸರಕಾರದ ಕರ್ತವ್ಯವಾಗಿದೆ.

ಶಶಿಕಾಂತ ಯಡಹಳ್ಳಿ

ರಾಜಕೀಯ ವಿಶ್ಲೇಷಕರು

ಇದನ್ನೂ ಓದಿ- ಬಾನು ಮುಷ್ತಾಕ್ ಕಥನಗಳಲ್ಲಿ ಅಧಿಕಾರ, ಅಸ್ಮಿತೆ ಮತ್ತು ಪ್ರತಿರೋಧ

More articles

Latest article

Most read