ಬಿ ಕೆ ಹರಿಪ್ರಸಾದ್ ಮಾಜಿ ರೌಡಿಯೇ? ಭೂಮಾಲಕರ ರೌಡಿಸಂನ ಸಂತ್ರಸ್ತರೇ?

ಕರಾವಳಿ ಕರ್ನಾಟಕದ ಬಿಲ್ಲವರು, ಮೊಗವೀರರು, ದಲಿತರು ಮತ್ತು ಇತರ ಹಿಂದುಳಿದ ಸಮುದಾಯಗಳ ಅನೇಕ ಕುಟುಂಬಗಳು ಭೂಮಿ, ಶಿಕ್ಷಣ ಮತ್ತು ಸಾಮಾಜಿಕ ಗೌರವಕ್ಕಾಗಿ ದೀರ್ಘ ಹೋರಾಟ ನಡೆಸಿವೆ. ಆ ಹೋರಾಟಗಳಿಂದಲೇ ಹೊಸ ನಾಯಕತ್ವ ಹೊರಹೊಮ್ಮಿದೆ. ಹೀಗೆ ಹೊರಹೊಮ್ಮಿದ ನಾಯಕತ್ವದಲ್ಲಿ ಗಮನೀಯ ಹೆಸರು ಬಿ.ಕೆ. ಹರಿಪ್ರಸಾದ್ ಅವರದು. ಅವರ ನಾಯಕತ್ವವನ್ನು ನೋಡಲು ಭಾರತದ ಹಳ್ಳಿಗಳಲ್ಲಿನ ಸಾಮಾಜಿಕ ನ್ಯಾಯದ ರಾಜಕೀಯವನ್ನು ಅಧ್ಯಯನ ಮಾಡಬೇಕಿದೆ ನವೀನ್‌ ಸೂರಿಂಜೆ, ಪತ್ರಕರ್ತರು, ಲೇಖಕರು.

ಕರಾವಳಿಯ ಬಂಟರನ್ನು ಮತ್ತು ಬಿಲ್ಲವರನ್ನು ಮುಂಬೈನಲ್ಲಿ ‘ಗೂಂಡಾಗಳು’ ಎಂದು ಕರೆಯುತ್ತಿದ್ದ ದಿನಗಳಿದ್ದವು. ಭೂಸುಧಾರಣೆಯ ಸಮಾನ ಫಲಾನುಭವಿಗಳಾದ  ಬಂಟರು ಮತ್ತು ಬಿಲ್ಲವರು ಏಕಕಾಲದಲ್ಲಿ ‘ಅಭಿವೃದ್ಧಿ’ಗಾಗಿ ಮುಂಬೈಯತ್ತ ಹೊರಟರು. ಮುಂಬೈ ಶಿವಸೇನೆಯ ಕಾಟ ತಪ್ಪಿಸಿಕೊಳ್ಳುವ ಹೋರಾಟದಲ್ಲಿ ಬಂಟರು ‘ರೌಡಿ’ ಪಟ್ಟ ಏರಿದರೆ, ಮತ್ತೊಂದೆಡೆ ಮುಂಬೈಯಲ್ಲಿ ಬೆಳೆಯುತ್ತಿದ್ದ ಬಂಟರ ಪ್ರಾಬಲ್ಯ ಮತ್ತು ಮರಾಠಿ ದೌರ್ಜನ್ಯ ತಪ್ಪಿಸಿಕೊಳ್ಳಲು ಬಿಲ್ಲವರು ಕೂಡಾ ಮುಂಬೈಯಲ್ಲಿ ‘ಭೂಗತ ಲೋಕ’ದ ಬಣ್ಣ ಪಡೆದುಕೊಂಡರು. ಇದೊಂದು ಬದುಕಿಗಾಗಿನ ಸಂಘರ್ಷ. ಅದು ದಾವೂದ್  ಇಬ್ರಾಹಿಂ, ಮುತ್ತಪ್ಪ ರೈಯಂತಹ ಪ್ರೊಫೆಷನಲ್ ಭೂಗತ ಜಗತ್ತಿನ ರೀತಿಯಲ್ಲ. ಇದನ್ನು ಅರ್ಥ ಮಾಡಿಕೊಳ್ಳಲು ಕರಾವಳಿಯ ಸಮಾಜೋ ಆರ್ಥಿಕ ರಾಜಕಾರಣವನ್ನು ಅರ್ಥ ಮಾಡಿಕೊಳ್ಳಬೇಕು.

‘ಬಿ ಕೆ ಹರಿಪ್ರಸಾದ್ ಅವರು ತಮ್ಮ ಹಳೇ ಗೂಂಡಾಗಿರಿಯ ಮಾದರಿಯಲ್ಲಿ ಮಾತನಾಡುತ್ತಾರೆ’ ಎಂದು ವಿರೋಧ ಪಕ್ಷದ ನಾಯಕರು ಆಗಾಗ ಹೇಳುವುದುಂಟು. ಬಿ ಕೆ ಹರಿಪ್ರಸಾದ್ ಅವರ ಬದುಕಿನ ಹಿನ್ನೆಲೆ ಮತ್ತು ಅದರ ಸಮಾಜೋ ಆರ್ಥಿಕ‌ ರಾಜಕೀಯವನ್ನು ನಾವು ಅರ್ಥ ಮಾಡಿಕೊಳ್ಳಬೇಕು.‌

ಬಿ ಕೆ ಹರಿಪ್ರಸಾದ್

ಬಿ.ಕೆ. ಹರಿಪ್ರಸಾದ್ ಅವರ ಕುಟುಂಬದ ಇತಿಹಾಸವು ಕರಾವಳಿ ಕರ್ನಾಟಕದ ಭೂಸಂಬಂಧಗಳ ಇತಿಹಾಸದೊಂದಿಗೆ ಬೆಸೆದುಕೊಂಡಿದೆ. ಇಪ್ಪತ್ತನೇ ಶತಮಾನದ ಮಧ್ಯಭಾಗದಲ್ಲಿ ಕರಾವಳಿ ಕರ್ನಾಟಕದ ಅನೇಕ ಗ್ರಾಮಗಳಲ್ಲಿ ಭೂಮಾಲೀಕತ್ವದ ಅಸಮಾನತೆ, ಗೇಣಿ ಪದ್ಧತಿ ಮತ್ತು ಜಾತಿ ಆಧಾರಿತ ಸಾಮಾಜಿಕ ರಚನೆಗಳು ಅನೇಕ ಹಿಂದುಳಿದ ಕುಟುಂಬಗಳ ಬದುಕಿನ ಮೇಲೆ ಆಳವಾದ ಪರಿಣಾಮ ಬೀರಿದ್ದವು. ಇಂತಹ ಸಾಮಾಜಿಕ ಪರಿಸ್ಥಿತಿಗಳ ನಡುವೆ ತಮ್ಮ ಬದುಕಿನ ದಾರಿಯನ್ನು ಹುಡುಕಿಕೊಂಡ ಕುಟುಂಬಗಳಲ್ಲಿ ಹರಿಪ್ರಸಾದ್ ಅವರ ಕುಟುಂಬವೂ ಒಂದಾಗಿತ್ತು.

ಕರ್ನಾಟಕದ ಇತಿಹಾಸದಲ್ಲಿ ದೇವರಾಜ ಅರಸು ಜಾರಿಗೊಳಿಸಿದ ಭೂಸುಧಾರಣಾ ಕ್ರಮಗಳು ಕೇವಲ ಭೂಮಿಯ ಮಾಲೀಕತ್ವ ಬದಲಿಸಿದ ಕಾನೂನುಗಳಾಗಿರಲಿಲ್ಲ. ಅವು ಗ್ರಾಮೀಣ ಅಧಿಕಾರದ ಸಮೀಕರಣವನ್ನೇ ಬದಲಿಸಿದ ಸಾಮಾಜಿಕ ನ್ಯಾಯದ ಕ್ರಾಂತಿಯಾಗಿದ್ದವು. “ಉಳುವವನೇ ಹೊಲದೊಡೆಯ” ಎಂಬ ತತ್ವವು ಸಾವಿರಾರು ಗೇಣಿದಾರ ಕುಟುಂಬಗಳಿಗೆ ಆತ್ಮಗೌರವವನ್ನು ನೀಡಿತು.

ಭೂ ಮಾಲಕ ಪೆರುಮಾಳ ಬಲ್ಲಾಳನ ಜೊತೆ ನಡೆದ ಭೂ ಹೋರಾಟದ ಹಿನ್ನೆಲೆಯಲ್ಲಿ ಕೋಟಿ ಚೆನ್ನಯರು ಊರು ಬಿಟ್ಟು ಮತ್ತೊಂದೂರಿಗೆ ಹೋಗಬೇಕಾಯಿತು. ಹೀಗೆ ಊರು ಬಿಟ್ಟು ಬಂದ ಕೋಟಿ–ಚೆನ್ನಯರು ಆಳುವ ವರ್ಗದ ದೃಷ್ಟಿಯಲ್ಲಿ ದಂಗೆಕೋರರು ಅಥವಾ ಕಾನೂನುಭಂಗ ಮಾಡಿದವರು ಆಗಿದ್ದರು. ಆದರೆ ಜನರ ದೃಷ್ಟಿಯಲ್ಲಿ ಅವರು ನ್ಯಾಯಕ್ಕಾಗಿ ಹೋರಾಡಿದ ವೀರರು ಎಂಬುದು ಇತಿಹಾಸ ಮತ್ತು ಜನಪದ ಎರಡರಲ್ಲೂ ಸಾಬೀತಾಗುತ್ತದೆ‌. ಬಿಲ್ಲವರ ಇತಿಹಾಸವೇ ಅಂತದ್ದು. ಬಿ ಕೆ ಹರಿಪ್ರಸಾದ್ ಅವರ ಕುಟುಂಬ ಕೂಡಾ ದಕ್ಷಿಣಕನ್ನಡ ಜಿಲ್ಲೆಯ ಭೂಮಾಲಕರ ಜೊತೆಗಿನ ಸಂಘರ್ಷದಿಂದ ಕರಾವಳಿ ಬಿಟ್ಟು ಬೆಂಗಳೂರು, ದೆಹಲಿ ಸೇರಿ ರಾಷ್ಟ್ರಮಟ್ಟದ ರಾಜಕಾರಣಿ ಆದರು. ಬಿ ಕೆ ಹರಿಪ್ರಸಾದ್ ಅವರ ತಂದೆಯವರು ಬಂಟ್ವಾಳ ತಾಲೂಕಿನ ಅರಳ ಗ್ರಾಮದವರು. ಅರಳ ಗ್ರಾಮದ ಬಂಗಾರಬೆಟ್ಟುವಿನಲ್ಲಿ ನಡೆದ ಭೂ ಮಾಲಕರ ಜೊತೆಗಿನ ಸಂಘರ್ಷ ಸ್ವಾಭಿಮಾನಿಯಾಗಿದ್ದ ಅವರನ್ನು ಊರು ಬಿಡುವಂತೆ ಮಾಡಿತ್ತು. ಇದು ಬಿ ಕೆ ಹರಿಪ್ರಸಾದ್ ಕುಟುಂಬವೊಂದರ ಕತೆಯಲ್ಲ. ಕರಾವಳಿಯ ಪ್ರತೀ ಬಿಲ್ಲವ ಕುಟುಂಬದ ತಂದೆ ತಾಯಂದಿರು, ಅಜ್ಜ ಅಜ್ಜಿಯಂದಿರು ಅನುಭವಿಸಿದ ಬದುಕು. ಅದರ ಪ್ರತಿನಿಧಿಯೇ ಬಿ ಕೆ ಹರಿಪ್ರಸಾದ್. ಹಾಗಾಗಿಯೇ ಅವರ ನಡೆನುಡಿಗಳಲ್ಲಿ ಗಡಸುತನ ಬಂದಿರುವುದು.

ಬಿ ಕೆ ಹರಿಪ್ರಸಾದ್ ಅವರು ಸಕ್ರಿಯವಾಗಿದ್ದ ಎನ್ ಎಸ್ ಯುಐ ವಿದ್ಯಾರ್ಥಿ ಕಾಂಗ್ರೆಸ್, ಯುವ ಕಾಂಗ್ರೆಸ್ ಕಾಲವೇ ಅಂತದ್ದು. ಭೂಮಾಲಕರು, ಶ್ರೀಮಂತರ ವಿರುದ್ಧ ಇರುವ ಪಕ್ಷ ಎಂದು ಪರಿಗಣಿತವಾಗಿದ್ದ ಕಾಂಗ್ರೆಸ್ ನ ಯುವ ನಾಯಕತ್ವವನ್ನು ಮುನ್ನಡೆಸಬೇಕಿದ್ದರೆ ಶ್ರೀಮಂತರ ಗೂಂಡಾಗಿರಿ ವಿರುದ್ಧ ‘ರೌಡಿಸಂ ಮಾದರಿ’ಯ ರಾಜಕಾರಣ ಅನಿವಾರ್ಯವಾಗಿತ್ತು ಎಂದೆಣಿಸುತ್ತದೆ.

ಕರಾವಳಿ ಕರ್ನಾಟಕದ ಬಿಲ್ಲವರು, ಮೊಗವೀರರು, ದಲಿತರು ಮತ್ತು ಇತರ ಹಿಂದುಳಿದ ಸಮುದಾಯಗಳ ಅನೇಕ ಕುಟುಂಬಗಳು ಭೂಮಿ, ಶಿಕ್ಷಣ ಮತ್ತು ಸಾಮಾಜಿಕ ಗೌರವಕ್ಕಾಗಿ ದೀರ್ಘ ಹೋರಾಟ ನಡೆಸಿವೆ. ಆ ಹೋರಾಟಗಳಿಂದಲೇ ಹೊಸ ನಾಯಕತ್ವ ಹೊರಹೊಮ್ಮಿದೆ.

ಮಲ್ಲಿಕಾರ್ಜುನ ಖರ್ಗೆ

ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರು ಇಂತದ್ದೇ ಇತಿಹಾಸ ಹೊಂದಿದ್ದಾರೆ. 1948ರಲ್ಲಿ, ಆಗಿನ ಹೈದರಾಬಾದ್ ವ್ಯಾಪ್ತಿ ಗ್ರಾಮದಲ್ಲಿ ಖರ್ಗೆ ಕುಟುಂಬ ವಾಸವಿತ್ತು. ಆಗ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸುಮಾರು 6 ವರ್ಷ ವಯಸ್ಸಾಗಿತ್ತು. ರಜಾಕಾರರು ಅವರ ಮನೆಯ ಮೇಲೆ ದಾಳಿ ನಡೆಸಿ ಮನೆಗೆ ಬೆಂಕಿ ಹಚ್ಚಿದರು. ಆ ದಾಳಿಯಲ್ಲಿ ಅವರ ತಾಯಿ, ಸಹೋದರ, ಸಹೋದರಿ ಮತ್ತು ಚಿಕ್ಕಪ್ಪ ಮೃತಪಟ್ಟರು ಎಂದು ಖರ್ಗೆ ಸ್ವತಃ ಇತ್ತೀಚಿನ ಸಂದರ್ಶನದಲ್ಲಿ ಹೇಳಿದ್ದಾರೆ. ದಾಳಿ ನಡೆದಾಗ ಅವರ ತಂದೆ ಮಾಪಣ್ಣ ಅವರು ಹೊಲದಲ್ಲಿ ಕೆಲಸ ಮಾಡುತ್ತಿದ್ದರು. ಖರ್ಗೆ ಅವರು ಹೊಲದ ಬಳಿ ಆಟವಾಡುತ್ತಿದ್ದ ಕಾರಣ ಪಾರಾದರು. ಘಟನೆಯ ನಂತರ ತಂದೆ ಮಗನನ್ನು ಕರೆದುಕೊಂಡು ಊರು ತೊರೆದು ಕಾಡು-ಮೇಡುಗಳ ಮೂಲಕ ಸುರಕ್ಷಿತ ಸ್ಥಳಕ್ಕೆ ತೆರಳಿದರು. ಬಳಿಕ ಕುಟುಂಬ ಕಲಬುರಗಿಗೆ ವಲಸೆ ಹೋಯಿತು. ಕಲಬುರಗಿಯಲ್ಲಿ ಅವರ ತಂದೆ ಎಂಎಸ್‌ಕೆ ಮಿಲ್‌ನಲ್ಲಿ ಕಾರ್ಮಿಕರಾಗಿ ಕೆಲಸ ಮಾಡಿದರು. ಖರ್ಗೆ ಅವರು ರಾತ್ರಿ ಶಾಲೆಯಲ್ಲಿ ಓದುತ್ತಾ ವಿದ್ಯಾಭ್ಯಾಸ ಮುಂದುವರಿಸಿ ನಂತರ ವಕೀಲರಾಗಿ, ಕಾರ್ಮಿಕ ಸಂಘದ ನಾಯಕರಾಗಿ, ಶಾಸಕ, ಸಚಿವ, ಕರ್ನಾಟಕದ ವಿರೋಧ ಪಕ್ಷದ ನಾಯಕ, ಲೋಕಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಎಐಸಿಸಿ ಅಧ್ಯಕ್ಷರಾಗುವ ಮಟ್ಟಕ್ಕೆ ಬೆಳೆದರು.

ಈ ಹಿನ್ನೆಲೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಮತ್ತು ಬಿ.ಕೆ. ಹರಿಪ್ರಸಾದ್ ಅವರ ನಾಯಕತ್ವವನ್ನು ನೋಡಲು ಭಾರತದ ಹಳ್ಳಿಗಳಲ್ಲಿನ ಸಾಮಾಜಿಕ ನ್ಯಾಯದ ರಾಜಕೀಯವನ್ನು ಅಧ್ಯಯನ ಮಾಡಬೇಕಿದೆ.‌

ನವೀನ್‌ ಸೂರಿಂಜೆ

ಪತ್ರಕರ್ತ, ಲೇಖಕ ನವೀನ್ ಸೂರಿಂಜೆ ಮೂಲತಃ ದಕ್ಷಿಣ ಕನ್ನಡದವರಾಗಿದ್ದು ಕೋಮುವಾದದ ವಿರುದ್ಧದ ಒಂದು ಗಟ್ಟಿ ದನಿ. ಇವರು ಹಲವು ಪ್ರಗತಿಪರ ಚಳುವಳಿಗಳ ಭಾಗವಾಗಿದ್ದಾರೆ. ನೇತ್ರಾವತಿಯಲ್ಲಿ ನೆತ್ತರು, ಸದನದಲ್ಲಿ ಶ್ರೀರಾಮ ರೆಡ್ಡಿ, ಕುತ್ಲೂರು ಕಥನ, ನಡುಬಗ್ಗಿಸದ ಎದೆಯ ದನಿ, ಸತ್ಯೊಲು, ಕರಾವಳಿಯ ಚರಿತ್ರೆಯಲ್ಲಿ ಹೈದರ್‌ ಅಲಿ ಮತ್ತು ಟಿಪ್ಪುಸುಲ್ತಾನ್‌ ಇವರ ಪ್ರಮುಖ ಕೃತಿಗಳು.

ಇದನ್ನೂ ಓದಿ- https://kannadaplanet.com/its-a-big-story-autobiography-series-25-novelist-sadananda/ ಅದೊಂದು ದೊಡ್ಡ ಕತೆ – ಆತ್ಮಕಥನ ಸರಣಿ- 25 | ಹೊರಗೆಲ್ಲ ಖ್ಯಾತ, ಊರಲ್ಲಿ ಅಪರಿಚಿತ- ಕಾದಂಬರಿಕಾರ ʼಸದಾನಂದʼ

More articles

Latest article

Most read