ವಾಯುಭಾರ ಕುಸಿದ ಜೊತೆಗೆ ಮುಂಗಾರು ಚುರುಕು : ಇಂದಿನಿಂದ 10 ಜಿಲ್ಲೆಗಳಲ್ಲಿ ಭಾರೀ ಮಳೆ ಮುನ್ಸೂಚನೆ

ಬೆಂಗಳೂರು : ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ  ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಮುಂಗಾರು ಮಳೆ ತೀವ್ರಗೊಂಡಿದೆ. ವಾಯುಭಾರ ಕುಸಿತದಿಂದ ರಾಜ್ಯದ 10ಕ್ಕೂ ಅಧಿಕ ಜಿಲ್ಲೆಗಳಲ್ಲಿ  ಇಂದಿನಿಂದ  ಜುಲೈ 31ರವರೆಗೆ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ವಾಯುಭಾರ ಕುಸಿತದಿಂದ ವಾತಾವರಣದಲ್ಲಿ  ಕಡಿಮೆ ಒತ್ತಡದ ಪ್ರದೇಶ ನಿರ್ಮಾಣವಾಗಿ  ಭಾರಿ ಮಳೆ ಹಾಗೂ ಬಿರುಗಾಳಿ ಬೀಸಲಿದೆ ಎಂದು ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಉಡುಪಿ, ಉತ್ತರ, ಕನ್ನಡ ದಕ್ಷಿಣ, ಹಾವೇರಿ, ಬಾಗಲಕೋಟೆ, ವಿಜಯಪುರ, ಧಾರವಾಡ, ಬೆಳಗಾವಿ, ಗದಗ, ಕೊಪ್ಪಳ, ವಿಜಯಪುರ, ಯಾದಗಿರಿ, ಕಲಬುರಗಿ, ಬೀದರ್ ಜಿಲ್ಲೆಗಳ ಹಲವು ಕಡೆಗಳಲ್ಲಿ  ಭಾರೀ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕರ್ನಾಟಕ ರಾಜ್ಯದ ವಿವಿಧ ಭಾಗಗಳಲ್ಲಿ ಕಳೆದೊಂದು ವಾರದಿಂದ ಉತ್ತಮ ಮಳೆ ಆಗುತ್ತಿದೆ. ಅದರಲ್ಲೂ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಅತ್ಯಧಿಕ ಮಳೆ ಸುರಿಯುತ್ತಿದೆ. ಒಳನಾಡು ಭಾಗಗಳಲ್ಲಿ ಆಗಾಗ ಸೋನೆ ಮತ್ತು ಹಗುರ ಮಳೆ ಸುರಿಯುತ್ತಿದೆ. ವಾಯು ಚಂಡಮಾರುತ ಪ್ರಸರಣದಿಂದಾಗಿ ಇನ್ನೂ ಕೆಲವು ದಿನಗಳ ಕಾಲ 10ಕ್ಕೂ ಅಧಿಕ ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರೀ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಇಂದಿನಿಂದ ಮೂರು ದಿನ ಭಾರೀ ಮಳೆ ಸುರಿಯಲಿದ್ದು ಬಳಿಕ ಕರಾವಳಿಯಲ್ಲಿ ಮಳೆ ಅಬ್ಬರ ಕಡಿಮೆಯಾಗಲಿದೆ. ಆದರೆ ಉತ್ತರ ಒಳನಾಡಿನ ಬಹುತೇಕ  ಎಲ್ಲ ಜಿಲ್ಲೆಗಳಲ್ಲಿ ಹಗುರ, ಸಾಧಾರಣ ಮತ್ತು ಭಾರೀ ಮಳೆ ಆಗಲಿದೆ. ಕಳೆದ ಸುಮಾರು ಎಂಟು-ಹತ್ತು ದಿನಗಳಿಂದ ಉತ್ತರ ಕರ್ನಾಟಕದಲ್ಲಿ ತಂಪು, ದಿನವಿಡೀ ಮಬ್ಬು ವಾತಾವರಣ ಕಂಡು ಬಂದಿದೆ. ಒಂದೆರಡು ಕಡೆಗಳಲ್ಲಿ ಜೋರು ಮಳೆ ಬಿಟ್ಟರೆ, ಉಳಿದ ಕಡೆಗಳಲ್ಲಿ ತುಂತುರು, ಜಿಟಿ ಜಿಟಿ ಮಳೆ ಆಗಬಹುದೆಂದು ಹವಾಮಾನ ಇಲಾಖೆ ತಿಳಿಸಿದೆ.
ಬೆಂಳಗೂರು ನಗರ ಜಿಲ್ಲೆ ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಬಹುತೇಕ ಜಿಲ್ಲೆಗಳಲ್ಲಿ ಮಳೆ ಕಣ್ಮರೆಯಾಗಿದೆ. ಕೆಲವೆಡೆ ಹಗುರ ಮಳೆಯ ಸುರಿಯುತ್ತಿದ್ದು, ಆಗಾಗ ಬಿಸಿಲಿನ ದರ್ಶನವಾಗುತ್ತಿದೆ. ಮುಂದಿನ ಒಂದು ವಾರ ಕಾಲ ಇದೇ ರೀತಿಯ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನಾ ವರದಿ ತಿಳಿಸಿದೆ.

ತಲೆ ಮೇಲೆ ಕೈಹೊತ್ತು ಕುಳಿತ ರೈತರು:
ಈ ಬಾರಿ ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ರಾಜ್ಯದ ಬಹುತೇಕ ರೈತರು ಇನ್ನು ಬಿತ್ತನೆ ಮಾಡಿಲ್ಲ. ಕೆಲವು ಭಾಗಗಳಲ್ಲಿ ಅಲ್ಪ ಮಳೆಗೆ ಬಿತ್ತನೆ ಮಾಡಿರುವ ರೈತರು ಮಳೆ ಇಲ್ಲದೆ ಮೊಳಕೆಗಳು ಒಣಗುತ್ತಿರುವುದರಿಂದ ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ. ಮಳೆಗಾಗಿ ಪ್ರಾರ್ಥನೆ ಮಾಡುತ್ತಿದ್ದಾರೆ.

ಹಾವೇರಿ, ಧಾರವಾಡ, ಗದಗ, ಕೊಪ್ಪಳ, ರಾಯಚೂರು ಸೇರಿದಂತೆ ಒಳನಾಡು ಜಿಲ್ಲೆಗಳಲ್ಲಿ ದಿನವಿಡೀ ಮೋಡ ಕವಿದ ವಾತಾವರಣ ಕಂಡು ಬಂದರೂ ಸಹಿತ ನಿರೀಕ್ಷಿತ ಭಾರೀ ಮಳೆ ಆಗದೇ, ಕೆವಲ ಸೋನೆ ಮಳೆ ಆಗುತ್ತಿದೆ. ಇದರಿಂದ ಎರಡು ತಿಂಗಳ ಮುಂಗಾರು ಪೈರಿಗೆ ಮಳೆ ಸಾಕಾಗುತ್ತಿಲ್ಲ. ಕೆಲವೆಡೆ ಒಣಗಿದ ಬೆಳೆ ಹಾಗೆಯೇ ಇದೆ.
ಜೂನ್‌ನಲ್ಲಿ ಬಿತ್ತಿದ ಬೆಂಡೆ ಇನ್ನಿತರ ಬೀಜಗಳು ಹೊಲದಲ್ಲಿ ಈಗ ಮೊಳಕೆ ಒಡೆದು ಸಸಿಯಾಗಿವೆ. ವಾರದಿಂದ ಮಳೆ ಸಕ್ರಿಯವಾಗಿದ್ದರೂ ನಿರೀಕ್ಷಿತ ಮಳೆ ಆಗದ ಹಿನ್ನೆಲೆಯಲ್ಲಿ ಭಾರೀ ಮಳೆ ನಿರೀಕ್ಷೆಯಲ್ಲಿದ್ದ ರೈತರಿಗೆ ನಿರಾಶೆಯಾಗಿದೆ.

ಒಡಿಶಾ, ಬಂಗಾಳ ಕೊಲ್ಲಿಯಲ್ಲಿ  ವಾಯುಭಾರ  ಕುಸಿತ
ಬಂಗಾಳಕೊಲ್ಲಿ ಹಾಗೂ ಒಡಿಶಾ ಕರಾವಳಿ ಭಾಗದ ಸಮೀಪದ ಸಮುದ್ರ ಮಟ್ಟದಲ್ಲಿ ವಾಯುಭಾರ ಕುಸಿತ ಉಂಟಾಗಿದೆ. ಇದು ಪಶ್ಚಿಮ ಬಂಗಾಳದಿಂದ ಸುಮಾರು 130 ಕಿಲೋ ಮೀಟರ್, ದಕ್ಷಿಣಕ್ಕಿ ಅಂದಾಜು 140 ಕಿ. ಮೀ. ದಕ್ಷಿಣ ಪೂರ್ವಕ್ಕೆ ವ್ಯಾಪಿಸಿದೆ. ಒಡಿಶಾದಿಂದ ಸುಮಾರು 170 ಕಿ.ಮೀ. ಪೂರ್ವದಲ್ಲಿ  ಕೇಂದ್ರೀಕತವಾಗಿದೆ. ಈ ವಾಯುಭಾರ ಕುಸಿತವು ವಾಯುವ್ಯ ದಿಕ್ಕಿನಲ್ಲಿ ಚಲಿಸುವ ಸಾಧ್ಯತೆಯಿದೆ. ಮುಂದಿನ 24 ಗಂಟೆಗಳಲ್ಲಿ ಇನ್ನಷ್ಟು ಬಲಗೊಳ್ಳುವ  ಸಾಧ್ಯತೆ ಇದೆ. 

More articles

Latest article

Most read