ಮೈಸೂರಿನ ಮಣ್ಣಲ್ಲಿ ಮಣ್ಣಾದ ಗಾನ ಕೋಗಿಲೆ ಎಸ್.ಜಾನಕಿ

ಮೊಮ್ಮಗಳು ಅಪ್ಸರಾ ವಿದ್ಯುಲಾ  ಚಿತೆಗೆ ಅಗ್ನಿಸ್ಪರ್ಶ

ಮೈಸೂರು :  ʼನನಗೂ  ಮೈಸೂರಿಗೂ ಜನುಮ ಜನುಮದ ಋಣ ಇದೆ. ಪೂರ್ವಜನ್ಮದ ಸಂಬಂಧ ಇರಬೇಕು. ಈ ಊರೆಂದರೆ ನನಗೆ ಪ್ರೀತಿ, ಇಷ್ಟ. ಇಲ್ಲೆಯೇ ಇರುತ್ತೇನೆʼ ಎಂದಿದ್ದ ಎಸ್‌. ಜಾನಕಿ ಅವರು  ಬದುಕಿದ್ದಾಗಲೇ ತಮ್ಮ ನಿಧನದ ಬಳಿಕ ತಮ್ಮ ನೆಚ್ಚಿನ ತೋಟದಲ್ಲೇ ಅಂತ್ಯಸಂಸ್ಕಾರ ನಡೆಸುವಂತೆ  ಇಚ್ಛೆ ವ್ಯಕ್ತಪಡಿಸಿದ್ದರು. ಅದರಂತೆ  ಇಂದು ಅಂತ್ಯಸಂಸ್ಕಾರ ನೆರವೇರಿಸಿದರು.
ಮೈಸೂರಿನ ಹೆಚ್.ಡಿ.ಕೋಟೆ ರಸ್ತೆಯ ಕಣಿಯನಹುಂಡಿ ಗ್ರಾಮದ ಮಾವಿನ ತೋಟದಲ್ಲಿ ಸಂಜೆ 5 ಗಂಟೆ 3 ನಿಮಿಷಕ್ಕೆ ಸರಿಯಾಗಿ ಮೊಮ್ಮಗಳು ಅಪ್ಸರಾ ವಿದ್ಯುಲಾ  ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಸಕಲ ಸರ್ಕಾರಿ ಗೌರವಗಳೊಂದಿಗೆ  ತೆಲುಗು ಬ್ರಾಹಣ ವಿಧಿವಿಧಾನಗಳ ಮೂಲಕ  ಅಂತ್ಯಕ್ರಿಯೆ  ನಡೆಯಿತು.

ಜಾನಕಿಯವರ ಪುತ್ರ ಕೆಲ ವರ್ಷಗಳ ಹಿಂದೆಯೇ ನಿಧನರಾಗಿದ್ದ ಹಿನ್ನೆಲೆಯಲ್ಲಿ ಮೊಮ್ಮಗಳಾದ ಅಪ್ಸರಾ ಅವರು ಅಂತ್ಯಸಂಸ್ಕಾರದ ವಿಧಿವಿಧಾನಗಳನ್ನು ನೆರವೇರಿಸಿದರು. ರಾಜ್ಯದ  ನಾನಾ ಭಾಗಗಳಿಂದ ಸಾವಿರಾರು ಅಭಿಮಾನಿಗಳು, ಸಂಗೀತಾಸಕ್ತರು ಹಾಗೂ ಚಿತ್ರರಂಗದ ಗಣ್ಯರು ಆಗಮಿಸಿ ಜಾನಕಿಯಮ್ಮ ಅವರಿಗೆ ಅಂತಿಮ ನಮನ ಸಲ್ಲಿಸಿದರು. 

ರಾಜ್ಯ ಸರ್ಕಾರದ ನಿರ್ದೇಶನದಂತೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು. ಪೊಲೀಸ್ ತುಕಡಿಯಿಂದ ಗೌರವ ವಂದನೆ ಸಲ್ಲಿಸಲಾಯಿತು. ಬಳಿಕ 21 ಗುಂಡಿನ ಸೆಲ್ಯೂಟ್ ಗುಂಡು ಹಾರಿಸಲಾಯಿತು.

More articles

Latest article

Most read