ಸ್ಮರಣೆ | ಗ್ರಾಮೋದ್ಧಾರದ ಗಾರುಡಿಗನ ಗ್ರಾಮ್ಯ ನಡೆ

ದೇಶದಾದ್ಯಂತ 140 ಕ್ಕೂ ಹೆಚ್ಚು ತೂಗುಸೇತುವೆಗಳನ್ನು ನಿರ್ಮಿಸಿ ಅಪಾರ ಖ್ಯಾತಿ ಪಡೆದ ಸುಳ್ಯದ ಪದ್ಮಶ್ರೀ ಗಿರೀಶ್‌ ಭಾರದ್ವಾಜರು‌ ತೀರಿಕೊಂಡಿದ್ದಾರೆ. ಸಮಾಜಮುಖಿ ಕೆಲಸದ ಜತೆಗೆ ಮಾನವೀಯತೆಯನ್ನು ಎತ್ತಿ ಹಿಡಿದು ಬದುಕಿದ ಗಿರೀಶ್ ಭಾರದ್ವಾಜರು ಅಜಾತಶತ್ರು. ತಾನು ಗಳಿಸಿ ಇತರರನ್ನೂ ಗಳಿಸುವಂತೆ ಪ್ರೇರೇಪಿಸಿದವರು. ರೋಟರಿ, ಗೃಹರಕ್ಷಕ ದಳದಂತಹಾ ಸಂಸ್ಥೆಯ ಜೊತೆಗಿದ್ದು ಸೇವಾಕಾರ್ಯದಲ್ಲಿ ತೊಡಗಿಕೊಂಡವರು. ಮೇಲ್ವರ್ಗದ ರೋಯಲ್ ವ್ಯವಸ್ಥೆಯಲ್ಲಿ ಗುರುತಿಸಿಕೊಂಡರೂ ತಳ ಮಟ್ಟದಲ್ಲಿ ಬದುಕಬಹುದಾದ ಸಾಧ್ಯತೆಯನ್ನು ತೋರಿಸಿಕೊಟ್ಟ ನಿಜಾರ್ಥದ ಹೀರೋ, ಸುಳ್ಯದ ತಾಂತ್ರಿಕ ಅಭಿವೃದ್ಧಿಯ ಹಿಂದಿನ ಮೂಲ ಕನಸುಗಾರ. ಹೊಸ ತಲೆಮಾರಿಗೆ ಪ್ರೇರಣೆಯಾಗಬಲ್ಲ ಗಿರೀಶ್ ಭಾರದ್ವಾಜರಿಗೆ ನುಡಿನಮನ ಸಲ್ಲಿಸಿದ್ದಾರೆ ಡಾ. ಸುಂದರ ಕೇನಾಜೆ.

ನನಗಾಗ ನಾಲ್ಕೋ ಐದೋ ವರ್ಷ, ಬರಿಯ ಒಂದಷ್ಟು ಜೀಪು, ಲಾರಿ, ಯಝಿಡಿ ಬೈಕ್ ಗಳನ್ನು ಡಾಮಾರು ಕಾಣದ ಧೂಳಿನ ಮಧ್ಯೆ ಆಗೊಮ್ಮೆ ಈಗೊಮ್ಮೆ ಕಾಣುತ್ತಿದ್ದ ನಮ್ಮ ಹಳ್ಳಿಗೆ ಅದಾಗ ಹೊಸದೊಂದು ವಾಹನ ಬಂತು. ಅದು ಉಳುಮೆಯಲ್ಲಿ ಎತ್ತು, ಕೋಣಗಳಿಗಿಂತ ಎಷ್ಟೋ ಪಟ್ಟು ಬಲಿಷ್ಠವೆಂದೂ ಅದುವರೆಗೆ ನೋಡಿದ ಟಿಲ್ಲರಿಗಿಂತ ನಾಲ್ಕೈದು ಪಟ್ಟು ದೊಡ್ಡದೆಂದೂ ಹೇಳುತ್ತಿದ್ದ ಜನ, ಬದುಗಳಲ್ಲಿ ಸಾಲಾಗಿ ನಿಂತು ಉಳುವ ದೃಶ್ಯವನ್ನು ನಿಬ್ಬೆರಗಾಗಿ ನೋಡುತ್ತಿದ್ದರು. ಉಳುಮೆಯ ಹೊರತಾಗಿ ಅದು ಎಳೆಯುತ್ತಿದ್ದ ಅಡಿಕೆ, ತೆಂಗು, ಬೈಹುಲ್ಲಿನ ಕಂತೆಗಳನ್ನು ನೋಡಿಯೂ ಬೆರಗಾಗುತ್ತಿದ್ದರು. ಅದಕ್ಕಿಂತಲೂ ಹೆಚ್ಚು ಈ ವಾಹನವನ್ನು ಪರಿಚಯಿಸಿದಲ್ಲದೇ ಸ್ವತಃ ಅದರ ಡೈವರ್ ಸೀಟಲ್ಲಿ ಕುಳಿತು ಜಾದುಗಾರನಂತೆ ಅದನ್ನು ಚಲಾಯಿಸುತ್ತಿದ್ದ ವ್ಯಕ್ತಿಯನ್ನು ನೋಡಿ ಇನ್ನೂ ಆಶ್ಚರ್ಯಪಟ್ಟಿದ್ದರು. ಇಡೀ ತಾಲೂಕಿನಲ್ಲೇ ಅಪೂರ್ವವಾಗಿದ್ದ ಇಂಜಿನಿಯರ್ ಪದವಿಧರರೋರ್ವರು ಈ ಕೆಸರು ಗದ್ದೆಯಲ್ಲಿ ಟ್ರಾಕ್ಟರ್ ಚಲಾಯಿಸುತ್ತಿದ್ದಾರೆ ಎಂದಾಗ ನಮ್ಮೂರಿನವರ ಕಣ್ಣಲ್ಲಿ ಅವರೋರ್ವ ‘ಹೀರೋ’ ಆಗಿ ಕಂಡದ್ದು ಸತ್ಯ. ಹೀಗೆ ಭಾರತದ ಹೀರೋಗಳ ಸಾಲಿನಲ್ಲಿ ಕಾಣಿಸಿಕೊಂಡ ಗಿರೀಶ್ ಭಾರದ್ವಾಜ್ ಐವತ್ತು ವರ್ಷಗಳ ಹಿಂದೆಯೇ ನಮ್ಮೂರ ಜನರ ಕಣ್ಣುಗಳಲ್ಲಿ ಹೀರೋ ಆಗಿ ಕಾಣಿಸಿಕೊಂಡಿದ್ದರು.

ಇಂಜಿನಿಯರಿಂಗ್ ಪದವಿ ಮುಗಿಸಿ ಬಂದ ಆರಂಭದಿಂದ ಸುಳ್ಯದಲ್ಲಿ ಮೊದಲ ಇಂಡಸ್ಟ್ರಿ ಸ್ಥಾಪಿಸಿದ ಭಾರದ್ವಾಜರು, ನಾನು ಗಮನಿಸಿದಂತೆ ಗ್ರಾಮೀಣ ಭಾಗದ ತಮ್ಮ ಆಪ್ತರ ಮನೆಗಳಿಗೆ ಕಾಡಿನಿಂದ ಹರಿದು ಬರುತ್ತಿದ್ದ ಯಥೇಚ್ಛ ನೀರಿಗೆ ಟರ್ಬೈನ್ (ಜಲಚಕ್ರ) ಅಳವಡಿಸಿ ಜನರೇಟರ್ ಮೂಲಕ ಕರೆಂಟ್ ಉತ್ಪಾದಿಸುವ ಕೆಲಸ ಮಾಡುತ್ತಿದ್ದರು. ಅನೇಕ ಹಳ್ಳಿಗಳ ಬೃಹತ್ ಮನೆಗಳನ್ನು ಬೆಳಗಿಸುವ, ಒಂದು ಮನೆಯಲ್ಲಿದ್ದ ಟಿ.ವಿ ಊರಿಗೇ ಆಸ್ತಿಯಾಗಿದ್ದಾಗ ಆ ಕಾಲದಲ್ಲಿ ಕೆಲವು ಕಡೆ ಈ ಕರೆಂಟಿನ ಮೂಲಕ ಊರವರಿಗೆ ಟಿ.ವಿ ನೋಡಿಸಿದ ನಿದರ್ಶನಗಳನ್ನು ಇಂದಿಗೂ ಕೆಲವು ಆಪ್ತರು ನೆನಪಿಸಿಕೊಳ್ಳುತ್ತಾರೆ. ಹೀಗೆ ಒಂದು ಭಾಗದ ಭೌತಿಕ, ಬೌದ್ಧಿಕ ಕತ್ತಲೆಯನ್ನು ಹೊಡೆದೋಡಿಸುವ ನಿಟ್ಟಿನ ತಂತ್ರಜ್ಞಾನವನ್ನು ಭಾರದ್ವಾಜರು ಐವತ್ತು ವರ್ಷಗಳ ಹಿಂದೆಯೇ ಪ್ರೇರೇಪಿಸಿ ಗ್ರಾಮೀಣ ಭಾಗದಲ್ಲಿ ಹೀರೋ ಆಗಿ ಕಾಣಿಸಿಕೊಂಡಿದ್ದರು.

ತೂಗುಸೇತುವೆಯ ಮೇಲೆ ಗಿರೀಶ್‌ ಭಾರದ್ವಾಜ್

ಪಯಸ್ವಿನಿ ನದಿಯ ಒಂದು ಬದಿಯಲ್ಲಿ ಹುಟ್ಟಿ ಬೆಳೆದ ಭಾರದ್ವಾಜರು ಇನ್ನೊಂದು ಬದಿಯ ಜನರನ್ನು ಆರು ತಿಂಗಳ ಕಾಲ ಸಂಪರ್ಕಿಸಲು ಸಾಧ್ಯವಿಲ್ಲದೇ ಇರಬೇಕಾದ ನೋವಿನ ಕಾರಣದಿಂದಲೋ ಏನೋ ಮರಗಳಿಂದ ಮರಗಳಿಗೆ ರೋಪ್ ಕಟ್ಟಿ ಆರೋಪಿಗೆ ಹಲಗೆ ಜೋಡಿಸಿ ಪರಸ್ಪರ ಸಂಪರ್ಕಿಸಬಹುದು ಎನ್ನುವ ಕಲ್ಪನೆ ಅವರಲ್ಲಿ ಮೂಡಿರಲೂ ಬಹುದು. ಆ ಕಾರಣದಿಂದಲೇ ಆರಂಭದಲ್ಲಿ ತೂಗು ಸೇತುವೆಯನ್ನು ಈ ರೀತಿಯಲ್ಲೇ ರಚಿಸಿರಬೇಕು. ಹೀಗೆ ಗ್ರಾಮೀಣ ಪ್ರದೇಶಗಳ ಕೇಂದ್ರಿತ ಕೆಲಸಗಳಿಂದ ನಿಜಾರ್ಥದ ಗ್ರಾಮೀಣಾಭಿವೃದ್ಧಿ ಅಥವಾ ಗ್ರಾಮ ಸ್ವರಾಜ್ಯದ ಕಲ್ಪನೆಯನ್ನು ಸಾಕಾರಗೊಳಿಸಲು ಕಾರಣಕರ್ತರಾಗಿದ್ದರು.

ಅವರು ಆಂಧ್ರದ ವಾರಂಗಲ್ ನಲ್ಲಿ ನಕ್ಸಲರ ಮನಪರಿವರ್ತಿಸಿದ ಕಥೆಯೊಂದನ್ನು ಕೇಳಿದ್ದೆ. ವಾರಂಗಲ್ ನ ಕಾಡೊಂದರ ಊರಿಗೆ ಸೇತುವ ಕಟ್ಟುಲು ಹೋದಾಗ ಅದನ್ನು ವಿರೋಧಿಸಿದ ನಕ್ಸಲರ ಜತೆಗೆ ಸಾವಧಾನದಿಂದಲೇ ಇದ್ದು, ದಿನನಿತ್ಯ ತನ್ನ ಕಾರ್ಯ ಚಟುವಟಿಕೆಯನ್ನು ಗಮನಿಸುವಂತೆ ಮಾಡಿ, ಕೊನೆಗೆ ಊರಿಗೆ ಊರೇ ಗೌರವಿಸುತ್ತಿದ್ದಂತೆಯೂ ನಕ್ಸಲ್ ತಂಡವೂ ಕಾಲಿಗೆರಗುವಂತೆ ವರ್ತಿಸಿದ ಸಿನಿಮೀಯ ಕಥೆಯ ಹೀರೋನ ರೀತಿಯ ಕಥೆಯಿದು. ಹೀಗೆ ಎಲ್ಲರನ್ನು ಆಪ್ತವಾಗಿ ಸೆಳೆಯುವ ಭಾರದ್ವಾಜರ ಈ ಗುಣದ ಅನುಭವವನ್ನು ಸುಳ್ಯದ ಬಹುತೇಕರು ಅನುಭವಿಸಿರುತ್ತಾರೆ.

ನನಗೆ ಗೊತ್ತಿರುವ ಅನೇಕರು ಭಾರದ್ವಾಜರ ಇಂಡಸ್ಟ್ರಿಯಲ್ಲಿ ತಾಂತ್ರಿಕತೆಯ ಪ್ರಾಥಮಿಕ ಜ್ಞಾನವೂ ಇಲ್ಲದೇ ಕೆಲಸಕ್ಕೆ ಸೇರಿದ್ದನ್ನು ಗಮನಿಸಿದ್ದೇನೆ. ಒಂದಷ್ಟು ವರ್ಷ ಕೆಲಸ ಕಲಿತು ಬಲಿತ ನಂತರ ಭಿನ್ನಾಭಿಪ್ರಾಯದಿಂದಲೋ, ಸ್ವಯಂ ಮಾಡುವ ಉತ್ಸಾಹದಿಂದಲೋ ಸಂಸ್ಥೆಯಿಂದ ಹೊರ ಬಂದ ಊದಾಹರಣೆಗಳೂ ಅನೇಕ ಇವೆ. ತಾವೇ ಬಂಡವಾಳ ಹಾಕಿ ಸ್ವಯಂ ಸಂಸ್ಥೆ ಸ್ಥಾಪಿಸುತ್ತೇವೆಂಬ ಹುಮ್ಮಸ್ಸಿನಲ್ಲಿ ಹೊರ ಬಂದ ತನ್ನ ಪ್ರತಿಸ್ಪರ್ಧಿ ಶಿಷ್ಯನ ಸಂಸ್ಥೆಯನ್ನು ಉದ್ಘಾಟಿಸಿ ಕೊಟ್ಟ, ಅವರಿಗೆ ಒಂದಷ್ಟು ಸಹಾಯಧನ ಮಾಡಿ ಶುಭ ಹಾರೈಸಿದ ಹಲವು ಉದಾಹರಣೆಗಳನ್ನು ಭಾರದ್ವಾಜರ ಬದುಕಿನಿಂದ ಕೇಳಿದ್ದೇನೆ. ಇಂತಹಾ ಮನಸ್ಥಿತಿಯ ಭಾರದ್ವಾಜರನ್ನು ಹೀರೋ ಎಂದಲ್ಲದೇ ಇನ್ನೇನೆಂದು ಕರೆಯಲು ಸಾಧ್ಯ?

ಕೇರಳದ ಗಡಿ ಪಂಜಿಕಲ್ಲು ಎಂಬಲ್ಲಿ ಪಯಸ್ವಿನಿ ಹೊಳೆಗೆ ತೂಗುಸೇತುವೆಯೊಂದರ ಅಗತ್ಯ ಇತ್ತು. ನಾವು ಒಂದಷ್ಟು ಜನ ಅದರ ಹಿಂದೆ ಓಡಾಡುತ್ತಿದ್ದಾಗ ಅನುದಾನದ ಅನಿಶ್ಚಿತತೆಯ ಮಧ್ಯೆ ಭಾರದ್ವಾಜರು ಕೆಲಸ ಆರಂಭಿಸಿಯೇ ಬಿಟ್ಟರು. ಹಣ ಬರಲಿ ಬರದೇ ಇರಲಿ ಕೆಲಸ ಮುಗಿಸಿ ಉದ್ಘಾಟನೆ ಮಾಡಿಸಿಯೂ ಬಿಟ್ಟರು. ಭಾರದ್ವಾಜರ ಈ ದಿಟ್ಟತನ, ಬದ್ಧತೆ ಮತ್ತು ಮನುಷ್ಯರ ಮೇಲಿನ ವಿಶ್ವಾಸ ಕಂಡಾಗಲೂ ಇವರೋರ್ವ ಹೀರೋ ಆಗಿ ನಮಗೆ ಕಾಣಿಸುವುದು ಸಹಜ.

ಇಂಜಿನಿಯರ್ ಗಳೇ ಇಲ್ಲದ ಊರಲ್ಲಿ ಇಂಜಿನಿಯರ್ ಅಂದರೆ ಹೀಗೆ ಎಂದೂ , ಸಾಧಕರೇ ಇಲ್ಲದಿದ್ದಲ್ಲಿ ಸಾಧನೆಯ ದಾರಿ ಇದೆಂದು ಐವತ್ತು ವರ್ಷಗಳ ಹಿಂದೆಯೇ ಬಿತ್ತುತ್ತಾ ಬಂದ ಗಿರೀಶ್ ಭಾರದ್ವಾಜರು ಕೂಲಿಯವರ ಜತೆಗೆ ಕೂಲಿಯವರಾಗಿ, ಸಾಧಕರ ಜತೆಗೆ ಸಹೃದಯರಾಗಿ ಕಾಣಿಸಿಕೊಂಡವರು. ಎಲ್ಲವನ್ನು ಹಿತವಾಗಿಯೂ ಮಿತವಾಗಿಯೂ ಸ್ವೀಕಾರಾರ್ಹವಾಗಿ ಈ ಸಮಾಜಕ್ಕೆ ನೀಡುತ್ತಾ ಬಂದವರು. ಇದು ನಾಯಕನೋರ್ವನ ಲಕ್ಷಣವೂ ಹೌದು.

ಪದ್ಮಶ್ರೀ ಸ್ವೀಕರಿಸುತ್ತಿರುವ ಭಾರದ್ವಾಜ್

ಭಾರದ್ವಾಜರದ್ದು ತುಂಬು ಕುಟುಂಬ. ಸಾಧನೆಯ ಜತೆಗೆ ಅಂತಃಕರಣವನ್ನು ಮಾನವ ಸಹಜ ಪ್ರೀತಿಯನ್ನೂ ಒಳಗೊಂಡ ಕುಟುಂಬ. ಕಾಸರಗೋಡಿನ ಬಲಿಕ್ಕಳ ಭಾಗದಿಂದ ವಲಸೆ ಬಂದು ಸುಳ್ಯದ ಪಯಸ್ವಿನಿ ತಟದಲ್ಲಿ ಇವರ ತಂದೆ (ಬಿ.ಕೃಷ್ಣ ಭಟ್) ಹಾಗೂ ಮಂಡೆಕೋಲಿನ ಎರ್ಕಲ್ಪಾಡಿಯಲ್ಲಿ ಇವರ ದೊಡ್ಡಪ್ಪ(ಬಿ.ವೆಂಕಟ್ರಮಣ ಭಟ್) ನೆಲೆಸಿ ಎರಡೂ ಕಡೆ ಕೃಷಿ ಭೂಮಿಯನ್ನು ಸ್ವಪರಿಶ್ರಮದಿಂದ ಹಸನುಗೊಳಿಸಿದ್ದು ಮಾತ್ರವಲ್ಲ, ತಮ್ಮ ತುಂಬು ಕುಟುಂಬದ ಮಕ್ಕಳನ್ನು ಆ ಕಾಲದಲ್ಲೇ ಡಾಕ್ಟ್ರು, ಇಂಜಿನಿಯರ್ ಗಳನ್ನಾಗಿ ರೂಪಿಸಿ ಸಮಾಜಕ್ಕೆ ನೀಡಿದ ಕೀರ್ತಿಗೆ ಪಾತ್ರರಾದವರು.

ಸಮಾಜಮುಖಿ ಕೆಲಸದ ಜತೆಗೆ ಮಾನವೀಯತೆಯನ್ನು ಎತ್ತಿ ಹಿಡಿದು ಬದುಕಿದ ಗಿರೀಶ್ ಭಾರದ್ವಾಜರು ಅಜಾತಶತ್ರು. ತಾನು ಗಳಿಸಿ ಇತರರನ್ನೂ ಗಳಿಸುವಂತೆ ಪ್ರೇರೇಪಿಸಿದವರು. ರೋಟರಿ, ಗೃಹರಕ್ಷಕ ದಳದಂತಹಾ ಸಂಸ್ಥೆಯ ಜೊತೆಗಿದ್ದು ಸೇವಾಕಾರ್ಯದಲ್ಲಿ ತೊಡಗಿಕೊಂಡವರು. ಸುಳ್ಯದ ಒಂದೆರಡು ಪತ್ರಕರ್ತರು ಬಿಟ್ಟರೆ ಭಾರದ್ವಾಜರ ಸಮಗ್ರ ಬದುಕಿನ ಸಾಹಸ ಮತ್ತು ಅವರ ಮಾನವತಾ ಬದುಕಿನ ಸಹಜತೆಯನ್ನು ದಾಖಲಿಸಿದ್ದು ಬಹಳ ಕಡಿಮೆ. ಅವರಿಗೆ ಪದ್ಮಶ್ರೀ ಬಂದ ನಂತರ ಒಂದಷ್ಟು ಜನ ಅವರ ಹಿಂದಿದ್ದರೇ ಹೊರತು ಅವರ ನಿಜ ಕಾಳಜಿಯನ್ನು ಅರ್ಥೈಸಿಕೊಂಡವರು ಕಡಿಮೆ ಎಂದೇ ಹೇಳಬಹುದು. ಮೇಲ್ವರ್ಗದ ರೋಯಲ್ ವ್ಯವಸ್ಥೆಯಲ್ಲಿ ಗುರುತಿಸಿಕೊಂಡರೂ ತಳ ಮಟ್ಟದಲ್ಲಿ ಬದುಕಬಹುದಾದ ಸಾಧ್ಯತೆಯನ್ನು ತೋರಿಸಿಕೊಟ್ಟ ನಿಜಾರ್ಥದ ಹೀರೋ, ಸುಳ್ಯದ ತಾಂತ್ರಿಕ ಅಭಿವೃದ್ಧಿಯ ಹಿಂದಿನ ಮೂಲ ಕನಸುಗಾರ. ಹೊಸ ತಲೆಮಾರಿಗೆ ಪ್ರೇರಣೆಯಾಗಬಲ್ಲ ಗಿರೀಶ್ ಭಾರದ್ವಾಜರಿಗೆ ಹೀಗೊಂದು ನುಡಿನಮನ ಸಲ್ಲಿಸುತ್ತಿದ್ದೇನೆ.

ಡಾ.ಸುಂದರ ಕೇನಾಜೆ

ಇವರು ಕರಾವಳಿ ಕರ್ನಾಟಕದ ಪ್ರಖ್ಯಾದ ಲೇಖಕ, ಸಂಶೋಧಕ, ಮತ್ತು ಜಾನಪದ ವಿದ್ವಾಂಸರಾಗಿದ್ದಾರೆ.

ಇದನ್ನೂ ಓದಿ- ಬಿ ಕೆ ಹರಿಪ್ರಸಾದ್ ಮಾಜಿ ರೌಡಿಯೇ? ಭೂಮಾಲಕರ ರೌಡಿಸಂನ ಸಂತ್ರಸ್ತರೇ?

More articles

Latest article

Most read