ಭಾರತದ ಚಾಬಹಾರ್ ಕನಸು ಭಗ್ನ: ಟ್ರಂಪ್‌ ಒತ್ತಡಕ್ಕೆ ಮೋದಿ ಮಣಿದಿದ್ದು ಯಾಕೆ?

ದೆಹಲಿ, ಏಪ್ರಿಲ್ 29: ಭಾರತದ ದೀರ್ಘಕಾಲದ ವಿದೇಶಾಂಗ ನೀತಿ ಮತ್ತು ರಾಜತಾಂತ್ರಿಕತೆಯ ದೊಡ್ಡ ಕನಸು ಚಾಬಹಾರ್ ಬಂದರು ಯೋಜನೆ ಈಗ ಅಮೆರಿಕದ ದಿಗ್ಬಂಧನಗಳಿಂದಾಗಿ ಬಲಿಯಾಗಿ ಸಂಪೂರ್ಣ ನಾಶವಾದಂತೆ ತೋರುತ್ತಿದೆ.

ಚಾಬಹಾರ್ ಬಂದರು ಯೋಜನೆಯ ಬೀಜ ಬಿತ್ತಲಾಗಿದ್ದು 2002-2003ರಲ್ಲಿ, ಅಟಲ್ ಬಿಹಾರಿ ವಾಜಪೇಯಿ ಸರ್ಕಾರದ ಕಾಲದಲ್ಲಿ. ಈ ಕನಸಿಗೆ ಮೊದಲು ನೀರೆರೆದವರು ಯುಪಿಎ ಅವಧಿಯ ಭಾರತ ಪ್ರಧಾನಿ ಡಾ. ಮನಮೋಹನ್ ಸಿಂಗ್. ಆಗ ಸಿಂಗ್‌ ಸರ್ಕಾರ 115 ಮಿಲಿಯನ್ ಡಾಲರ್ ಹೂಡಿಕೆಗೆ ಅನುಮೋದನೆಯೂ ನೀಡಿತ್ತು. 2014ರಲ್ಲಿ ಅಧಿಕಾರಾಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ ಯೋಜನೆಯನ್ನು ಮತ್ತಷ್ಟು ಬೆಳೆಸಿದ್ದರು. 2016ರ ಮೇ 23ರಂದು ಮೋದಿ ಇರಾನ್‌ಗೆ ಭೇಟಿ ನೀಡಿ ಇರಾನ್ ಅಧ್ಯಕ್ಷ ಹಸನ್ ರೌಹಾನಿ ಅವರೊಂದಿಗೆ ಮುಖ್ಯ ಒಪ್ಪಂದಕ್ಕೆ ಸಹಿ ಹಾಕಿ 500 ಮಿಲಿಯನ್ ಡಾಲರ್ ಹೂಡಿಕೆ ಮಾಡುವುದಾಗಿ ಘೋಷಿಸಿದ್ದರು.

ಇರಾನ್‌ನ ಓಮನ್ ಕೊಲ್ಲಿಯಲ್ಲಿರುವ ಚಾಬಹಾರ್ ಬಂದರು ಭಾರತಕ್ಕೆ ತುಂಬಾ ಮುಖ್ಯವಾಗಿದೆ. ಪಾಕಿಸ್ತಾನವನ್ನು ಬೈಪಾಸ್ ಮಾಡಿ ಆಫ್ಘಾನಿಸ್ತಾನ್ ಮತ್ತು ಮಧ್ಯ ಏಷ್ಯಾ ದೇಶಗಳಿಗೆ ಸುಲಭವಾಗಿ ಸರಕು ಸಾಗಣೆ ಮಾಡುವ ಏಕೈಕ ಮಾರ್ಗ ಇದು. ಚೀನಾದ ಗ್ವಾದರ್ ಬಂದರಿಗೆ ಪ್ರತಿಕ್ರಿಯೆಯಾಗಿ ಭಾರತವು ಈ ಬಂದರನ್ನು ತನ್ನ ರಣತಂತ್ರದ ಕೇಂದ್ರಬಿಂದುವಾಗಿ ಕಟ್ಟಿಕೊಂಡಿತ್ತು. ಇದು ಅಂತರರಾಷ್ಟ್ರೀಯ ಉತ್ತರ-ದಕ್ಷಿಣ ಸಾಗಣೆ ಕಾರಿಡಾರ್ (INSTC) ಯೋಜನೆಯ ದಕ್ಷಿಣ ತುದಿಯಾಗಿದೆ.

ಭಾರತವು ಶಾಹಿದ್ ಬೆಹೆಶ್ತಿ ಟರ್ಮಿನಲ್‌ಗೆ ಕನಿಷ್ಠ 120 ಮಿಲಿಯನ್ ಡಾಲರ್ (ಸುಮಾರು 1,000 ಕೋಟಿ ರೂಪಾಯಿ) ಹೂಡಿಕೆ ಮಾಡಿದೆ. ಭಾರತ ಪೋರ್ಟ್ಸ್ ಗ್ಲೋಬಲ್ ಲಿಮಿಟೆಡ್ (IPGL) ಕಂಪನಿ ಬಂದರು ಸೇರಿದಂತೆ ಇಡೀ ಯೋಜನೆಯನ್ನು ಸಂಪೂರ್ಣವಾಗಿ ನಿರ್ವಹಿಸುತ್ತಿತ್ತು.

ಆದರೆ ಸಾವಿರಾರು ಕೋಟಿ ರುಪಾಯಿಗಳ ಕನಸಿನ ಯೋಜನೆ ಸರ್ವನಾಶವಾಗುವ ಹಾಗೆ ಕಾಣುತ್ತಿದೆ.

ಅಮೆರಿಕದ ಡೊನಾಲ್ಡ್ ಟ್ರಂಪ್ ಸರ್ಕಾರವು “ಗರಿಷ್ಠ ಒತ್ತಡ” ನೀತಿಯಡಿ ಇರಾನ್ ಮೇಲೆ ಕಠಿಣ ದಿಗ್ಬಂಧನಗಳನ್ನು ಹೇರಿದೆ. 2025ರ ಸೆಪ್ಟೆಂಬರ್‌ನಲ್ಲಿ ಎಲ್ಲ ವಿನಾಯಿತಿಗಳನ್ನು ರದ್ದುಗೊಳಿಸಲಾಗಿತ್ತಾದರೂ ಭಾರತದ ಒತ್ತಾಯದ ಮೇರೆಗೆ ಚಾಬಹಾರ್‌ಗೆ ಏಪ್ರಿಲ್ 26, 2026ರವರೆಗೆ ಮಾತ್ರ ವಿನಾಯಿತಿ ನೀಡಿತ್ತು. ಆ ವಿನಾಯಿತಿ ಮುಗಿದ ನಂತರ ಭಾರತದ IPGL ಕಂಪನಿಯ ಅಧಿಕಾರಿಗಳು ರಾಜೀನಾಮೆ ನೀಡಿದ್ದಾರೆ, ಕಂಪನಿಯ ವೆಬ್‌ಸೈಟ್ ಬಂದ್‌ ಆಗಿದೆ. 2026ರ ಬಜೆಟ್‌ನಲ್ಲಿ ಚಾಬಹಾರ್‌ಗೆ ಹಣಕಾಸು ಮಂಜೂರಾತಿಯನ್ನೂ ನೀಡಲಾಗಿಲ್ಲ.

ಕಾಂಗ್ರೆಸ್ ವಕ್ತಾರ ಪವನ್ ಖೇರಾ, ಅಮೆರಿಕದ ದಒತ್ತಡಕ್ಕೆ ಭಾರತ ಚಾಬಹಾರ್‌ನಿಂದ ಹಿಂದೆ ಸರಿಯುತ್ತಿರುವುದು ಈ ಸರ್ಕಾರದ ಕಳಪೆ ವಿದೇಶಾಂಗ ನೀತಿಗೆ ಉದಾಹರಣೆ ಎಂದಿದ್ದಾರೆ. ವಾಷಿಂಗ್ಟನ್ ಭಾರತದ ರಾಷ್ಟ್ರೀಯ ಹಿತಾಸಕ್ತಿಗಳನ್ನು ಎಷ್ಟು ದಿನ ನಿರ್ಧರಿಸುತ್ತದೆ? ಎಂದು ಪ್ರಶ್ನಿಸಿರುವ ಅವರು. ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ತಲೆಬಾಗಿ ಭಾರತದ ಹಿತಾಸಕ್ತಿಗಳನ್ನು ಬಲಿ ಕೊಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ. “ಟ್ರಂಪ್ ಮತ್ತು ನೆತನ್ಯಾಹು ಅವರನ್ನು ಸಂತೋಷಪಡಿಸುವುದು ಚಾಬಹಾರ್ ಉಳಿಸುವುದಕ್ಕಿಂತ ಹೆಚ್ಚು ಮುಖ್ಯವಾಗಿದೆಯೇ?” ಎಂದು ಪ್ರಶ್ನಿಸಲಾಗುತ್ತಿದೆ.

ವಿದೇಶಾಂಗ ಸಚಿವಾಲಯದ ವಕ್ತಾರ ರಂಧೀರ್ ಜೈಸ್ವಾಲ್ ಚಾಬಹಾರ್ ವಿಷಯವನ್ನು ಇರಾನ್ ಮತ್ತು ಅಮೆರಿಕ ಎರಡೂ ದೇಶಗಳೊಂದಿಗೆ ಚರ್ಚಿಸುತ್ತಿದ್ದೇವೆ. ಮಧ್ಯಪ್ರಾಚ್ಯದ ಸಂಘರ್ಷವು ಮಾತುಕತೆಗೆ ಅಡ್ಡಿಯಾಗಿದೆ ಎಂದು ಹೇಳುತ್ತಿದ್ದಾರೆ.

ಆದರೆ ವಸ್ತುಸ್ಥಿತಿ ಬೇರೆಯೇ ಇದೆ. ಭಾರತ ತನ್ನ ಹೂಡಿಕೆಯನ್ನು ಇರಾನಿ ಸಂಸ್ಥೆಗೆ ವರ್ಗಾಯಿಸುವ ಯೋಜನೆಯನ್ನು ಪರಿಶೀಲಿಸುತ್ತಿದೆ ಎಂದು ವರದಿಯಾಗಿದೆ.
.
ಚಾಬಹಾರ್ ಬಂದರು ಭಾರತದ ವಿದೇಶ ನೀತಿ, ಆರ್ಥಿಕತೆಗೆ ತುಂಬಾ ಮುಖ್ಯವಾಗಿದೆ. ಆದರೆ ಇದರ ಭವಿಷ್ಯ ಈಗ ಅಮೆರಿಕ-ಇರಾನ್ ಸಂಘರ್ಷದ ಮೇಲೆ ಅವಲಂಬಿತವಾಗಿದೆ. ಭಾರತ ಸರ್ಕಾರ ಚಾಬಹಾರ್‌ ಯೋಜನೆಯಿಂದ ಸಂಪೂರ್ಣ ಹಿಂದೆ ಸರಿಯುತ್ತದಾ ಅಥವಾ ಅಮೆರಿಕವನ್ನು ಒಪ್ಪಿಸಿ ಯೋಜನೆಯನ್ನು ಮುಂದುವರೆಸುತ್ತದಾ ಕಾದು ನೋಡಬೇಕಿದೆ.

More articles

Latest article

Most read