ದೆಹಲಿ ಹೈಕೋರ್ಟ್‌ನಲ್ಲಿ ಅಶ್ಲೀಲ ವಿಡಿಯೋ: ಆಗಿದ್ದೇನು ಗೊತ್ತೇ?

ದೆಹಲಿ, ಏ.29: ದೇಶದ ರಾಜಧಾನಿಯ ಹೈಕೋರ್ಟ್‌ನಲ್ಲಿ ನಡೆಯುತ್ತಿದ್ದ ವರ್ಚುವಲ್ ವಿಚಾರಣೆಯ ವೇಳೆ ಅಶ್ಲೀಲ ಮತ್ತು ಕಾಮೋದ್ರೇಕದ ಧ್ವನಿ ಪದೇ ಪದೇ ಪ್ಲೇ ಆಗಿ ದೊಡ್ಡ ಗೊಂದಲ ಸೃಷ್ಟಿಯಾಗಿದೆ. ಇದರಿಂದಾಗಿ ಭಾರಿ ಮುಜುಗರಕ್ಕೆ ಒಳಗಾದ ಮುಖ್ಯ ನ್ಯಾಯಮೂರ್ತಿಗಳ ಪೀಠ ಎಲ್ಲ ವಿಚಾರಣೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿತು.

ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ತೇಜಸ್ ಕಾರಿಯಾ ಅವರ ವಿಭಾಗೀಯ ಪೀಠ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ(ಪಿಐಎಲ್) ವಿಚಾರಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಈ ಆಘಾತಕಾರಿ ಘಟನಾವಳಿಗಳು ಜರುಗಿವೆ. ಮಧ್ಯಾಹ್ನ 12:56ಕ್ಕೆ ಆಕಸ್ಮಿಕವಾಗಿ ತೆರೆಯ ಮೇಲೆ ಅಪ್ರಸ್ತುತ ದೃಶ್ಯಗಳು ಕಾಣಿಸಿಕೊಂಡವು. ಕೋರ್ಟ್ ಸಿಬ್ಬಂದಿ ತಕ್ಷಣ ವೀಡಿಯೋ ಕಾನ್ಫರೆನ್ಸ್ ಅನ್ನು ಆಫ್ ಮಾಡಿದರು.

ಆದರೆ ಕೆಲವು ನಿಮಿಷಗಳ ನಂತರ ವಿಚಾರಣೆ ಪುನರಾರಂಭಿಸಿದಾಗ ಮತ್ತೆ ಅದೇ ಸಮಸ್ಯೆ ಎದುರಾಯಿತು. “ಶ**ಜಿತ್ ಸಿಂಗ್” ಎಂಬ ಹೆಸರಿನಲ್ಲಿ ಲಾಗಿನ್ ಆಗಿದ್ದ ಒಬ್ಬರು ಅಶ್ಲೀಲ ವಿಡಿಯೋ ಪ್ಲೇ ಮಾಡಿದ್ದರು. ಮೂರನೇ ಬಾರಿಯೂ ಇದೇ ಘಟನೆ ನಡೆದಿದ್ದರಿಂದ ಕೊನೆಗೆ ವಿಚಾರಣೆಯನ್ನು ಸಂಪೂರ್ಣವಾಗಿ ನಿಲ್ಲಿಸಲಾಯಿತು.

ಪಾರ್ನ್‌ ವಿಡಿಯೋ ಪ್ಲೇ ಮಾಡುತ್ತಿದ್ದ ಖಾತೆಯಿಂದ “You’ve been hacked” ಎಂಬ ಸ್ವಯಂಚಾಲಿತ ಧ್ವನಿ ಪದೇ ಪದೇ ಕೇಳಿಬಂದಿದೆ. ಇದು ಸೈಬರ್ ದಾಳಿಯಾಗಿರಬಹುದು ಎಂಬ ಆತಂಕ ಹುಟ್ಟಿಸಿದೆ.

ಹೈಕೋರ್ಟ್ ಆಡಳಿತ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ದೆಹಲಿ ಪೊಲೀಸ್‌ನ ಇಂಟೆಲಿಜೆನ್ಸ್ ಫ್ಯೂಷನ್ ಅಂಡ್ ಸ್ಟ್ರಾಟೆಜಿಕ್ ಆಪರೇಷನ್ಸ್ (IFSO) ಘಟಕಕ್ಕೆ ದೂರು ನೀಡಿದೆ. ಪ್ರಾಥಮಿಕ ತನಿಖೆ ಪ್ರಾರಂಭವಾಗಿದೆ. ಯಾರು ಈ ಕೃತ್ಯ ಮಾಡಿದ್ದಾರೆ ಎಂಬುದನ್ನು ಗುರುತಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.

ಬುಧವಾರಗಳಂದು ಮುಖ್ಯ ನ್ಯಾಯಮೂರ್ತಿಗಳ ಕೋರ್ಟ್‌ನಲ್ಲಿ ಸುಮಾರು 100 ಪ್ರಕರಣಗಳ ವಿಚಾರಣೆಗೆ ದಿನ ನಿಗದಿಯಾಗಿರುತ್ತದೆ. ಈ ಘಟನೆಯಿಂದ ವಕೀಲರು ಮತ್ತು ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಿದೆ.

ಈ ಘಟನೆ ದೇಶದ ರಾಜಧಾನಿ ದೆಹಲಿ ಹೈಕೋರ್ಟ್‌ನ ವರ್ಚುವಲ್ ವ್ಯವಸ್ಥೆಯ ಸುರಕ್ಷತೆ ಬಗ್ಗೆ ದೊಡ್ಡ ಪ್ರಶ್ನೆಯನ್ನು ಎತ್ತಿದೆ.

More articles

Latest article

Most read